ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಸಾಗರ ಭಾರತ ಶೃಂಗಸಭೆ 2021’ನ್ನು ಮಾರ್ಚ್ 2ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
ಸಾಗರ ಭಾರತ ಶೃಂಗಸಭೆ 2021ರ ಬಗ್ಗೆ
ಸಾಗರ ಭಾರತ 2021ನ್ನು ಬಂದರು, ಹಡಗು ಮತ್ತು ಜಲ ಸಾರಿಗೆ ಸಚಿವಾಲಯವು ವರ್ಚುವಲ್ ವೇದಿಕೆ www.maritimeindiasummit.in ಮೂಲಕ ಮಾರ್ಚ್ 2ರಿಂದ ಮಾರ್ಚ್ 4ರವರೆಗೆ ಆಯೋಜಿಸಿದೆ.
ಈ ಶೃಂಗಸಭೆಯು ಮುಂದಿನ ದಶಕದಲ್ಲಿ ಭಾರತದ ಸಾಗರ ವಲಯಕ್ಕೆ ಒಂದು ಮಾರ್ಗನಕ್ಷೆಯನ್ನು ರೂಪಿಸಲಿದೆ ಮತ್ತು ಜಾಗತಿಕ ಸಾಗರ ವಲಯದಲ್ಲಿ ಭಾರತವನ್ನು ಮುಂಚೂಣಿಗೆ ತರಲು ಶ್ರಮಿಸುತ್ತದೆ. ಹಲವು ದೇಶಗಳ ಪ್ರಖ್ಯಾತ ಭಾಷಣಕಾರರು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಮತ್ತು ಭಾರತೀಯ ಸಾಗರ ತಾಣದಲ್ಲಿನ ವ್ಯಾಪಾರದ ಅವಕಾಶಗಳು ಮತ್ತು ಹೂಡಿಕೆಗಳನ್ನು ಅನ್ವೇಷಿಸಲಿದೆ. ಮೂರು ದಿನಗಳ ಶೃಂಗಸಭೆಯಲ್ಲಿ ಡೆನ್ಮಾರ್ಕ್ ಪಾಲುದಾರ ರಾಷ್ಟ್ರವಾಗಿದೆ.