ಓಮನ್ ವಿದೇಶಾಂಗ ವ್ಯವಹಾರಗಳ ಜವಾಬ್ದಾರಿಹೊತ್ತ ಸಚಿವ ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು.
ಪ್ರಧಾನಮಂತ್ರಿ ಮತ್ತು ಶ್ರೀ. ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾ ಅವರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವ ಭಾರತ ಮತ್ತು ಓಮನ್ ನಡುವಿನ ಆಪ್ತ ಸಂಬಂಧ ಕುರಿತ ವಿಷಯಗಳ ವಿನಿಮಯ ಮಾಡಿಕೊಂಡರು.
ಶ್ರೀ. ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾ ಅವರು ತಮ್ಮ ಘನತೆವೆತ್ತ ಸುಲ್ತಾನ್ ಖ್ವಾಬಾಸ್ ಬಿನ್ ಸಯದ್ ಅಲ್ ಸಯದ್ ಅವರ ಶುಭಾಶಯಗಳನ್ನು ತಲುಪಿಸಿದರು, ಇದಕ್ಕೆ ಪ್ರತಿಯಾಗಿ ಪ್ರಧಾನಮಂತ್ರಿಯವರು, ಘನತೆವೆತ್ತ ಮಹಾಪ್ರಭುವಿಗೆ ಗೌರವದ ಶುಭಾಶಯ ತಲುಪಿಸುವಂತೆ ತಿಳಿಸಿದರು.