ವಿಕಸಿತ ಭಾರತ ಸಂಕಲ್ಪ ಯಾತ್ರೆ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಿದರು. ದೇಶಾದ್ಯಂತ ಸಹಸ್ರಾರು ಮಂದಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಪ್ರತಿನಿಧಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೇಘಾಲಯದ ರೀ ಭೋಯ್ ನ ಶ್ರೀಮತಿ ಸಿಲ್ಮೆ ಮರಕ್ ಅವರು ಬದುಕು ಧನಾತ್ಮಕ ತಿರುವು ಪಡೆದುಕೊಂಡಿತು. ಅವರು ಸಣ್ಣ ಅಂಗಡಿಯಿಂದ ಸ್ವಸಹಾಯ ಗುಂಪು ಎಂಬ ಪದವಿ ಪಡೆದುಕೊಂಡರು. ಅವರು ಇದೀಗ ಸ್ವಸಹಾಯ ಗುಂಪುಗಳ ಮೂಲಕ ಸ್ಥಳೀಯ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದಾರೆ ಮತ್ತು 50 ಕ್ಕೂ ಅಧಿಕ ಸ್ವಸಹಾಯ ಗುಂಪು ರಚಿಸಲು ಅವರು ನೆರವಾಗಿದ್ದಾರೆ. ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ವಿಮೆ ಮತ್ತು ಇತರೆ ಯೋಜನೆಗಳ ಫಲಾನುಭವಿಯೂ ಆಗಿದ್ದಾರೆ.
ತನ್ನ ಕೆಲಸವನ್ನು ವಿಸ್ತರಿಸಿಕೊಳ್ಳಲು ಶ್ರೀಮತಿ ಸಿಲ್ಮೆ ಸ್ಕೂಟಿಯೊಂದನ್ನು ಖರೀದಿಸಿದ್ದಾರೆ. ತನ್ನ ಬ್ಲಾಕ್ ನಲ್ಲಿ ಗ್ರಾಹಕ ಸೇವಾ ಕೇಂದ್ರವನ್ನು ಸಹ ತೆರೆದಿದ್ದಾರೆ ಮತ್ತು ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ದೊರಕಿಸಿಕೊಡಲು ನೆರವಾಗುತ್ತಿದ್ದಾರೆ. ಆಕೆಯ ಗುಂಪು ಆಹಾರ ಸಂಸ್ಕರಣೆ ಮತ್ತು ಬೇಕರಿ ಚಟುವಟಿಕೆಯಲ್ಲಿ ಸಕ್ರಿಯವಾಗಿದೆ. ಪ್ರಧಾನಮಂತ್ರಿಯವರು ಆಕೆಯ ಆತ್ಮ ವಿಶ್ವಾಸವನ್ನು ಶ್ಲಾಘಿಸಿದರು ಮತ್ತು ಚಪ್ಪಾಳೆ ತಟ್ಟಿ ಗೌರವಿಸಿದರು.
ಸರ್ಕಾರದ ಯೋಜನೆಗಳ ಕುರಿತು ಅವರ ಅನುಭವ ಮತ್ತು ಹಿಂದಿ ಭಾಷೆ ಮೇಲೆ ಅತ್ಯುತ್ತಮ ಹಿಡಿತ ಹೊಂದಿರುವುದನ್ನು ಪ್ರಧಾನಮಂತ್ರಿಯವರು ಗಮನಿಸಿದರು. “ನೀವು ತುಂಬಾ ನಿರರ್ಗಳವಾಗಿ ಮಾತನಾಡುತ್ತೀರಿ, ಬಹುಶಃ ನನಗಿಂತ ಉತ್ತಮ” ಎಂದು ಪ್ರಧಾನಮಂತ್ರಿಯವರು ಶ್ರೀಮತಿ ಸಿಲ್ಮೆ ಅವರನ್ನು ಶ್ಲಾಘಿಸಿದರು. ಅವರ ಸಾಮಾಜಿಕ ಸೇವಾ ದೃಷ್ಟಿಕೋನದ ಬಗ್ಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು “ನಿಮ್ಮಂತಹ ಜನರ ಸಮರ್ಪಣೆಯಿಂದಾಗಿ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ತಲುಪಿಸುವ ನಮ್ಮ ಸಂಕಲ್ಪದ ಶಕ್ತಿ ನೀವಾಗಿದ್ದೀರಿ. ನಿಮ್ಮಂತಹವರಿಂದ ನಮ್ಮ ಕೆಲಸ ಸುಲಭವಾಗುತ್ತಿದೆ. ನೀವು ನಮ್ಮ ಹಳ್ಳಿಯ ಮೋದಿ – ನಿಮ್ಮಂತಹ ಜನರಿಂದ ನನ್ನ ಕೆಲಸ ಸುಲಲಿತವಾಗಿದೆ. ನೀವು ನಿಮ್ಮ ಹಳ್ಳಿಯ ಮೋದಿ” ಎಂದು ಪ್ರಧಾನಮಂತ್ರಿಯವರು ಹೇಳಿದರು.