ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಸಾಂಕ್ರಾಮಿಕದ ಈ ಸನ್ನಿವೇಶದಲ್ಲಿ ಯೋಗದ ಪಾತ್ರ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಯೋಗವು ಮೂಲ ಶಕ್ತಿ ಮತ್ತು ಸಮತೋಲನವನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಯೋಗ ದಿನವನ್ನು ದೇಶಗಳು ಮರೆಯುವುದು ಸುಲಭ, ಏಕೆಂದರೆ ಇದು ಅವರ ಸಂಸ್ಕೃತಿಗೆ ಅಂತರ್ಗತವಾಗಿಲ್ಲ ಆದರೆ, ಜಾಗತಿಕವಾಗಿ ಯೋಗದ ಉತ್ಸಾಹ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಯೋಗದ ಪ್ರಮುಖ ಅಂಶವೆಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ನೀಡುವುದಾಗಿದೆ. ಸಾಂಕ್ರಾಮಿಕ ರೋಗ ಕಾಣಿಸಿಕೊಂಡಾಗ, ಸಾಮರ್ಥ್ಯಗಳು, ಸಂಪನ್ಮೂಲಗಳು ಅಥವಾ ಮಾನಸಿಕ ಕಠಿಣತೆಯ ದೃಷ್ಟಿಯಿಂದ ಯಾರೂ ಸಿದ್ಧರಿರಲಿಲ್ಲ. ಸಾಂಕ್ರಾಮಿಕದ ವಿರುದ್ಧ ಜಗತ್ತಿನಾದ್ಯಂತ ಹೋರಾಡಲು ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ಒಟ್ಟುಗೂಡಿಸಲು ಯೋಗವು ಜನರಿಗೆ ಸಹಾಯ ಮಾಡಿತು ಎಂದರು.
ಮುಂಚೂಣಿಯ ಕೊರೊನಾ ಯೋಧರು ಯೋಗವನ್ನು ತಮ್ಮ ರಕ್ಷಾ ಕವಚ ಮಾಡಿಕೊಂಡಿದ್ದರು ಮತ್ತು ಯೋಗದ ಮೂಲಕ ತಮ್ಮನ್ನು ಸ್ವಯಂ ಬಲಪಡಿಸಿಕೊಂಡಿರು ಮತ್ತು ಜನರು, ವೈದ್ಯರು, ದಾದಿಯರು ವೈರಾಣುವಿನ ಪ್ರಭಾವ ನಿಭಾಯಿಸಲು ಯೋಗವನ್ನು ಹೇಗೆ ತೆಗೆದುಕೊಂಡರು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು. ವೈದ್ಯರು ಮತ್ತು ದಾದಿಯರು ಆಸ್ಪತ್ರೆಯಲ್ಲಿ ಯೋಗ ನಡೆಸಿದ್ದು ಎಲ್ಲೆಡೆ ಪ್ರಕಟವಾಯಿತು ಎಂದರು. ನಮ್ಮ ಶ್ವಾಸಕೋಶದ ವ್ಯವಸ್ಥೆ ಬಲಪಡಿಸುವ, ಉಸಿರಾಟದ ವ್ಯಾಯಾಮಗಳಾದ ಪ್ರಾಣಾಯಾಮ ಮತ್ತು ಅನುಲೋಮ –ವಿಲೋಮದ ಮಹತ್ವವನ್ನು ತಜ್ಞರು ಪ್ರತಿಪಾದಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು.