ಜಮ್ಮು-ಕಾಶ್ಮೀರದ ಪುಲ್ವಾಮದ ಜನೌಷಧಿ ಫಲಾನುಭವಿ ಗುಲಾಂ ನಬಿ ದಾರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದರು ಮತ್ತು ಯೋಜನೆಯಿಂದ ತಮಗೆ ಭಾರೀ ಅನುಕೂಲವಾಗಿದೆ ಮತ್ತು ಜನರಿಗೆ ಕೈಗೆಟಕುವ ಬೆಲೆಯಲ್ಲಿ ಜನರಿಕ್ ಔಷಧಗಳು ಲಭ್ಯವಾಗುತ್ತಿವೆ ಎಂದರು. ಜನೌಷಧಿ ಕೇಂದ್ರಗಳಿಂದ ಔಷಧ ಖರೀದಿಸುವ ಮೂಲಕ ಸುಮಾರು 9,000 ರೂ.ಗಳನ್ನು ಉಳಿತಾಯ ಮಾಡಿರುವುದಾಗಿ ಅವರು ಹೇಳಿದರು.
ಜನೌಷಧಿ ಯೋಜನೆಯಿಂದ ಜಮ್ಮು ಮತ್ತು ಕಾಶ್ಮೀರದ ಜನರು ಪ್ರಯೋಜನ ಪಡೆಯುತ್ತಿರುವುದು ತಮಗೆ ಸಂತಸ ತಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಸರ್ಕಾರ ಈ ಯೋಜನೆಯನ್ನು ಪ್ರತಿಯೊಂದು ಗ್ರಾಮಗಳಿಗೂ ಕೊಂಡೊಯ್ಯಲಿದೆ. ಇದರಿಂದ ಎಲ್ಲ ನಾಗರಿಕರಿಗೆ ಪ್ರಯೋಜನ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಸಂವಿಧಾನದ ಕಲಂ 370 ರದ್ದುಗೊಳಿಸುವ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಅತ್ಯಂತ ಕಷ್ಟಕರವಾಗಿತ್ತು, ಆದರೆ ಇದೀಗ ಜನರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ದೊರಕುತ್ತಿವೆ. ಏಮ್ಸ್ ನಿರ್ಮಾಣ ಪ್ರಗತಿಯಲ್ಲಿದೆ. ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್’ ಅನ್ನು ಜಮ್ಮು-ಕಾಶ್ಮೀರದ ಎಲ್ಲರೂ ನೋಡಬಹುದಾಗಿದೆ” ಎಂದು ಹೇಳಿದ್ದಾರೆ.
ಫಲಾನುಭವಿ ಗುಲಾಂ ನಬಿ ದರ್ ಅವರೊಂದಿಗೆ ಸ್ನೇಹದೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಉಲ್ಲೇಖಿಸಿದರು. “ಗುಲಾಂ ನಬಿ ಸಾಹೇಬ್ ದೆಹಲಿಯಲ್ಲಿ ನಿಮ್ಮ ಹೆಸರಿನವರೇ ನನಗೊಬ್ಬರು ಗೆಳೆಯರಿದ್ದಾರೆ, ನಾನು ಮುಂದಿನ ಭಾರಿ ಗುಲಾಂ ನಬಿ ಜಿ ಅವರನ್ನು ಭೇಟಿ ಮಾಡಿದಾಗ ನಾನು ಅವರಿಗೆ ಪುಲ್ವಾಮದಲ್ಲಿ ನಿಜ ಅರ್ಥದಲ್ಲಿ ನನಗೆ ಗುಲಾಂ ನಬಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತೆಂದು ಹೇಳಲು ಬಯಸುತ್ತೇನೆ” ಎಂದರು.