ಮೋದಿ ಏಕೆ?

Published By : Admin | May 15, 2014 | 15:17 IST

ಶ್ರೀ ನರೇಂದ್ರ ಮೋದಿ ಅವರಲ್ಲಿ ವ್ಯತ್ಯಾಸವೇನು?

ಇದು ಸಹಜ ಎಲ್ಲರೂ ಕೇಳುತ್ತಿದ್ದಾರೆ ನರೇಂದ್ರ ಮೋದಿಅವರೇ ಏಕೆ ಬೇಕೂ? ಅನ್ಯರಿಲ್ಲವೇ? ಇಂತಹ ಕುತೂಹಲ ಹಲವರಲ್ಲಿದೆ. ಹಲವು ಕಾರಣಗಳಿಗಾಗಿ ಇವರಲ್ಲಿ ಭಿನ್ನತೆ, ವೈವಿಧ್ಯತೆ ಕಾಣಬಹುದು. ಸ್ವತಂತ್ರ ಭಾರತದ ಹಲವಾರು ಘಟನಾವಳಿಗಳು ಮತ್ತು ಅವಕಾಶಗಳನ್ನು ನಾವು ನೋಡುವಾಗ, ನಮಗೆ ವ್ಯತ್ಯಾಸ ಇರುವ ಹಾಗೂ ಅಧಿಕಾರ ಮತ್ತು ಆಸಕ್ತಿ ಇರುವ ಜನನಾಯಕ ಬೇಕು ಅನ್ನಿಸುತ್ತದೆ. ಶ್ರೀ ನರೇಂದ್ರ ಮೋದಿ ಅವರಲ್ಲಿದನ್ನು ನಾವು ಗುರುತಿಸಬಹುದು.

ಒಬ್ಬ ಸಾಮೂಹಿಕ ನಾಯಕ:

ಅವರು ಕೇವಲ ಬೆರಳೆಣಿಕೆ ರಾಜಕಾರಣಿಗಳು ಏರಬಲ್ಲ ರೀತಿಯಲ್ಲಿ ಅಷ್ಟು ಎತ್ತರ ಏರಿದರು. ಇದು ರಾಜಕಾರಣದ ನಂಟಿಗಿಂತ ಜನಸಾಮಾನ್ಯರ ಜೊತೆಗಿನ ಒಡನಾಟದಿಂದ ಸಾಧ್ಯ ಅನ್ನಬಹುದು.ಭಾರತದ ಜನತೆ ದೇಶದ ಒಳಗಿರಲಿ ಅಥವಾ ಹೊರಗಿರಲಿ, ಆದರೆ ತಮ್ಮ ಜನ ನಾಯಕನಾಗಿ ವಿಶೇಷ ವ್ಯಕ್ತಿತ್ವದವರನ್ನೇ ಗುರುತಿಸ ಬಯಸುತ್ತಾರೆ.

What makes Narendra Modi different?

ಅಭಿವೃದ್ದಿಯ ಗೀಳು:

ಶ್ರೀ ನರೇಂದ್ರ ಮೋದಿ ಅವರ ಮನದಲ್ಲಿ ಸಾಶ್ವತವಾಗಿದ್ದ  ವಿಷಯವೆಂದರೆ ಅದು ಅಭಿವೃದ್ದಿ. ಗುಜರಾತು ಚುನಾವಣೆಗೆ ಸ್ವಲ್ಪದಿನಗಳ ಮೊದಲು ಅವರು ಸ್ವಿಜರ್ಲ್ಯಾಂಡ್ ಭೇಟಿ ಮಾಡಿ ಬಂಡವಾಳ ಹೂಡಿಕೆ ಆಹ್ವಾನ ನೀಡಿದ್ದರು. 2012ರಲ್ಲಿಜಪಾನ್ ಭೇಟಿ, ಅದೂ ಆರ್ಥಿಕ ಮತ್ತು ಸಾಂಸ್ಕೃತಿಕ ಸಹಕಾರಕ್ಕಾಗಿ. ಇವರಿಗೆ ರಾಜಕೀಯಕ್ಕಿಂತ ರಾಜ್ಯದ ಅಭಿವೃದ್ದ ಮುಖ್ಯ

why-namo-in2

ಸಮಸ್ಯೆ ಪರಿಹಾರಕ್ಕೆ ವೈಜ್ಞಾನಿಕ ಪ್ರಯತ್ನ:

ಸಮಸ್ಯೆಗಳತ್ತ ಗಮನ ಹರಿಸುವ ಶ್ರೀ ನರೇಂದ್ರ ಮೋದಿ ಅವರ ಕಾಳಜಿಯೇ ನವ ಗುಜರಾತಿನ ಯಶಸ್ಸು. ಸಮಸ್ಯೆಗಳನ್ನು ಮೊದಲು ನೋಡಬೇಕು, ಅದರ ಪ್ರತ್ಯೇಕ ಹಾನಿಯಿಂದಲ್ಲ. ಸಮಸ್ಯೆ ಅರ್ಥಮಾಡಿಕೊಳ್ಳಲ್ಲು ಧೀರ್ಘಾವಧಿ ತೆಗೆದುಕೊಳ್ಳಿ ಆದರೆ ಅದನ್ನು ಮೊದಲು ಅರ್ಥಮಾಡಿಕೊಳ್ಳಿ ಇದು ಅವರ ಚಿಂತನೆಯಾಗಿತ್ತು.ಅವರು ಅದರ ಸಮರ್ಪಕ ಪರಿಹಾರ ಕಾಣುತ್ತಿದ್ದರು. ದೀರ್ಘಾವಧಿ ಪರಿಹಾರ ಬಯಸುತ್ತಿದ್ದರು. ಅದನ್ನುಅನುಷ್ಠಾನಕ್ಕಾಗಿ ಸನ್ನದ್ಧರಾಗುತ್ತಿದ್ದರು.

ಸರಿಯಾದ ವಿಧಾನದಲ್ಲಿ ಮಾಡಲು ಸರಿಯಾದ ಕೆಲಸಕ್ಕೆ ಸರಿಯಾದ ಜನರನ್ನು ನಿಯೋಜಿಸುತ್ತಿದ್ದರು. ಕೆಲವೊಮ್ಮೆ ಮೆನೆಜ್ ಮೆಂಟ್ ಕಾಲೇಜು ತಜ್ಞರೂ ಇವರ ಆಡಳಿತ ವೈಖರಿಗೆ ವಿಸ್ಮಯರಾಗಿದ್ದ ಸಂದರ್ಭವೂ ಇದೆ.

ಸಾಮೂಹಿಕ ಸಮಗ್ರ ಪರಿಣಾಮದ ಯೋಜನೆಗಳು:

ಇವರೊಬ್ಬ ಉತ್ತಮ ಯೋಜನೆಗಳ ಸರದಾರ. ಇವರ ಯೋಜನೆಗಳು ಸದಾ ಸಾಮೂಹಿಕವಾಗಿ ಪರಿಣಾಮ ಬೀರುತ್ತವೆ. ಹತ್ತಾರು ನದಿಗಳ ಜೋಡಿಸಿದರು. ನದಿಗಳು ಬರಿದಾಗುವುದನ್ನು ತಡೆದರು. ಕೇವಲ ಮೂರುವರ್ಷ ಅವಧಿಯಲ್ಲಿ 300ಕಿಮಿ ಕಣಿವೆ ನಿರ್ಮಾಣ ಮಾಡಿದರು. 18000 ಹಳ್ಳಿಗಳಿಗೆ 56599 ಕಿಮಿ ವಿದ್ಯುತ್ ಲೈನ್ ಸಾಗಿಸಿ ಜ್ಯೋತಿಗ್ರಾಮ್ ಯೋಜನೆ ಮೂಲಕ ಬೆಳಕು ನೀಡಿದರು. ಇ-ಗ್ರಾಮ್ ವಿಶ್ವಗ್ರಾಮ್ ಇವರ ಇತರ ಜನಪ್ರಿಯ ಯೋಜನೆಗಳು

why-namo-in3

ಹಿರಿದು ಮತ್ತು ಕಿರಿದು , ಎರಡೂ ಸುಂದರ:

ಗ್ರಾಮೀಣ ಆವಶ್ಯಕತೆಗಳಿಗೆ ಸ್ಥಳೀಯ ತಂತ್ರಜ್ಞಾನದಲ್ಲಿ ಸಣ್ಣಮಟ್ಟದ ತಂತ್ರಜ್ಞಾನ ಅನುಷ್ಠಾನ ಇವರ ದ್ದೇಶ. ವಿಜ್ಞಾನ ಜಾಗತಿಕ, ತಂತ್ರಜ್ಞಾನ ಸ್ಥಳೀಯ. ವೈಬ್ರಾಂಟ್ ಗುಜರಾತ್ ಮಾಡಿದಾಗಲೂ ಸ್ಥಳೀಯ ತಂತ್ರಜ್ಙಾನಕ್ಕೆ ಒತ್ತು ಕೊಟ್ಟರು. ದಿನಾ ಸಾವಿರಾರು ಇ-ಮೇಲ್ ಗಳು, ಸಂದೇಶಗಳು, ಅಭಿಪ್ರಾಯಗಳನ್ನು ಜನತೆ ಇವರಿಗೆ ಕಳುಹಿಸುತ್ತಾರೆ.

ಆಡಳಿತವನ್ನು ರಾಜಕೀಯದಿಂದ ಬೇರ್ಪಡಿಸಿದರು:      

ಇವರಲ್ಲಿ ವಿಭಿನ್ನ ಯೋಚನೆಗಳಿವೆ. ರಾಜಕೀಯ ಬೇರೆ. ಆಡಳಿತ ಬೇರೆ ಅದೇ ರೀತಿಯಲ್ಲಿ ಅಭಿವೃದ್ದಿ ಕೂಡಾ ಬೇರೆ. ಇವರು ಯಾವತ್ತೂ ಜಾಗತಿಕ ವರ್ಗದಲ್ಲಿರಬೇಕು ಎಂದು ಹಂಬಲಿಸುವ ಆಡಳಿತಾಧಿಕಾರಿ. ರಾಜಕೀಯವನ್ನು ಆಡಳಿತದಿಂದ ಬೇರ್ಪಡಿಸುವ ಮೊದಲ ಕಾರ್ಯ, ಸ್ವಂತವಾಗಿ ನೆಲೆನಿಲ್ಲಲು ಸಮರ್ಥವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಸರಕಾರಿ ಸಂಸ್ಥೆಗಳಿಗೆ ಬೇಕಾಗಿಲ್ಲ , ಆದರೆ ಗುಣಮಟ್ಟ ಅಳೆಯಲು ಗುಜರಾತ್ ಸರಕಾರದ ಹಲವಾರು ಸಂಸ್ಥೆಗಳು ISO  ಪ್ರಮಾಣಪತ್ರ ಪಡೆದಿವೆ.

ಜನತೆಯ ನಾಡಿಮಿಡಿತ ಅರಿತ ವ್ಯಕ್ತಿ:

ಜನತೆಯ ಮುಖ್ಯ ಸಮಸ್ಯೆ ನೀರು, ವಿದ್ಯುತ್, ಆಹಾರ ಉದ್ಯೋಗ.. ಹೀಗೆ ಸಾಗುತ್ತದೆ. ಜನನಾಯಕನಾಗಿ ಇವರು ಜನರ ನಾಡಿಮಿಡಿತ ಅರಿತು ವ್ಯವಹರಿಸುವ ಚಾಣಾಕ್ಷ ವ್ಯಕ್ತಿಯಾದರು. ಅತ್ಯುತ್ತಮ ಯೋಜನೆ ಮೂಲಕ ಅವುಗಳ ಪರಿಹಾರಕ್ಕೆ ತಕ್ಕ ತಜ್ಞರ ಸಮಾಲೋಚನೆ ಮೂಲಕ ನಿಗದಿತ ಸಮಯಾವಕಾಶದಲ್ಲಿ ಪರಿಪೂರ್ಣಗೊಳಿಸುವಂತೆ ಪೂರ್ತಿಗೊಳಿಸುತ್ತಿದ್ದರು.

why-namo-in4

ಎಲ್ಲರನ್ನೂ ಸೇರಿಸಿಕೊಂಡು ಅಭಿವೃದ್ದಿ :

ಇವರಲ್ಲಿ ವಿಭಿನ್ನ ಯೋಚನೆಗಳಿವೆ. ರಾಜಕೀಯ ಬೇರೆ. ಆಡಳಿತ ಬೇರೆ ಅದೇ ರೀತಿಯಲ್ಲಿ ಅಭಿವೃದ್ದಿ ಕೂಡಾ ಬೇರೆ. ಇವರು ಯಾವತ್ತೂ ಜಾಗತಿಕ ವರ್ಗದಲ್ಲಿರಬೇಕು ಎಂದು ಹಂಬಲಿಸುವ ಆಡಳಿತಾಧಿಕಾರಿ. ರಾಜಕೀಯವನ್ನು ಆಡಳಿತದಿಂದ ಬೇರ್ಪಡಿಸುವ ಮೊದಲ ಕಾರ್ಯ, ಸ್ವಂತವಾಗಿ ನೆಲೆನಿಲ್ಲಲು ಸಮರ್ಥವಾಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಸರಕಾರಿ ಸಂಸ್ಥೆಗಳಿಗೆ ಬೇಕಾಗಿಲ್ಲ , ಆದರೆ ಗುಣಮಟ್ಟ ಅಳೆಯಲು ಗುಜರಾತ್ ಸರಕಾರದ ಹಲವಾರು ಸಂಸ್ಥೆಗಳು ISO  ಪ್ರಮಾಣಪತ್ರ ಪಡೆದಿವೆ.

ಅವರ ಸ್ವಂತಕ್ಕೇನೂ ಇಲ್ಲ:

ಅಧಿಕಾರದಲ್ಲಿರುವ ರಾಜಕಾರಣಿ ಸಾಮಾನ್ಯವಾಗಿ ಯಾವತ್ತೂ ಸ್ವಜನಪಕ್ಷಪಾತ ಮಾಡುತ್ತಾರೆಂಬ ಆರೋಪ ಇದ್ದೇ ಇರುತ್ತದೆ. ಆದರೆ ಮೋದಿಯವರ ಸಾರ್ವಜನಿಕ ಜೀವನದಲ್ಲಿ ಇದು ಲವಲೇಷವೂ ಇಲ್ಲ.ಅತ್ಯುತ್ತಮ ಜನನಾಯಕರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ.

ಮುಖ್ಯಮಂತ್ರಿಯಾಗಿ ಶ್ರೀ ನರೇಂದ್ರ ಮೋದಿ ಅವರ ಉಡುಗೋರೆಗಳನ್ನು ಸಾಮಾನ್ಯವಾಗಿ ತೋಷಖಾನದಲ್ಲಿ ಇರಿಸಲಾಗುತ್ತದೆ. ಅವುಗಳ ಹರಾಜು ಮೂಕ ಲಭ್ಯ ಹಣ ಖಜಾನೆ ಸೇರುತ್ತದೆ.ಇವರು ಇನ್ನೂ ಮುಂದುವರಿದು, ಕನ್ಯಾಕೇಲ್ವಾನಿನಿಧಿಗೆ ಸೇರಿಸ ಬಯಸಿದರು. ಇದು ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಮರ್ಪಿತ. ಈಗ ಈ ನಿಧಿಗಾಗಿ ಜನತೆ ಚೆಕ್ ಮೂಲಕವೂ ಲಕ್ಷಾಂತರ ರೂಪಾಯಿಯ ಉಡುಗೋರೆ ಿವರಿಗೆ ನೀಡುತ್ತಾರೆ.

why-namo-in5

ಕೆಲಸಗಳನ್ನು ಭಿನ್ನ ರೂಪದಲ್ಲಿ ಮಾಡುವ ಪ್ರವೃತ್ತಿ:

ಗುಜರಾತ್ ಒಂದು ಮಾದರಿ ರಾಜ್ಯವಾಗಿ ಅಭಿವೃದ್ಧಿಗೊಳ್ಳಲು ನರೇಂದ್ರ ಮೋದಿ ಅವರ ಕಾರ್ಯಕ್ಷಮತೆ ಕಾರಣ ವಿನಃ ಯಾವುದೇ ರೀತಿಯ ತುಷ್ಟೀಕರಣವಲ್ಲ. ವಿದ್ಯುತ್ ಶುಲ್ಕದ ಮಾತು ಬಂದಾಗ, ವಿದ್ಯುತ್ ನಿಯಂತ್ರಣ ಮಂಡಳಿಯ ವೃತ್ತಿಪರರ ಸಮಾಲೋಚನೆ ನಡೆಸಿದರು. ವಿದ್ಯುತ್ ಉತ್ಪಾದನೆಗೆ ನೀರು ಮುಖ್ಯ ಆದರೆ, ಕೃಷಿಗಾಗಿ ರೈತರಿಗೆ ನೀರು ಇನ್ನೂ ಅತ್ಯಾವಶ್ಯಕ. ಕೃಷಿಕರಿಗೆ ನಿಮ್ಮ ನ್ನು ನಾನು ಅರಿತಿದ್ದೇನೆ ಎಂಬ ಭರವಸೆ ನೀಡಿದರು. ಉತ್ತಮ ಆಡಲಿತ ಕೂಡಾ ಒಂದು ಉತ್ತಮ ರಾಜಕೀಯವಾಗಿದೆ. ಸಾಂಪ್ರದಾಯಿಕ ರಾಜಕೀಯಕ್ಕೆ ಭಿನ್ನವಾದ ಅಭಿವೃದ್ದಿಶೀಲ ರಾಜಕೀಯ ಪ್ರವೃತ್ತಿ ಇವರದು.

ಇವುಗಳು ಕೆಲವು ಹೇಳಬಹುದಾದ ಇತರರಿಗಿಂತ ಭಿನ್ನವಾಗಿಸುವ ನರೇಂದ್ರ ಮೋದಿಯವರ ಗುಣಲಕ್ಷಣಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.