ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸ್ಫೂರ್ತಿ ತುಂಬುವ ಮಹಿಳೆಯರನ್ನು ಗೌರವಿಸಲು ಆರಂಭಿಸಿದ ‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನದಲ್ಲಿ ಕಾಶ್ಮೀರದ ಅರಿಫಾ ಜಾನ್, ಪ್ರಧಾನಮಂತ್ರಿಗಳ ಖಾತೆ ಮೂಲಕ ತಮ್ಮ ಜೀವನಗಾಥೆಯನ್ನು ಎಲ್ಲರೊಂದಿಗೂ ಹಂಚಿಕೊಂಡರು. ಅರಿಫಾ ಕಾಶ್ಮೀರದ ಕರಕುಶಲಕರ್ಮಿ, ಆಕೆ ನಾಮ್ದಾ ಕಲೆಯ ಪುನರುಜ್ಜೀವನಕ್ಕೆ ವ್ಯಾಪಕವಾಗಿ ಶ್ರಮಿಸಿದವರು.
ಆಕೆ ನವದೆಹಲಿಯಲ್ಲಿ ನಡೆದ ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸಿದಾಗ ತಮ್ಮ ಮೊದಲ ವಾಣಿಜ್ಯ ಚಟುವಟಿಕೆಯ ಕುರಿತು ಅನಿಸಿಕೆ ಹಂಚಿಕೊಂಡರು. ವಸ್ತು ಪ್ರದರ್ಶನದಲ್ಲಿ ಒಳ್ಳೆಯ ಗ್ರಾಹಕರು ಸಿಕ್ಕಿದರು ಮತ್ತು ಹೆಚ್ಚಿನ ವಹಿವಾಟು ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ ಅರಿಫಾ, ವೇಷಭೂಷಣ ಅಥವಾ ಧಿರಿಸು ತಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ಇದು ತನಗೆ ಕರಕುಶಲ ಕಲೆ ಉತ್ತಮಗೊಳಿಸಲು ಮತ್ತು ಕಾಶ್ಮೀರದ ಎಲ್ಲಾ ಕರಕುಶಲಕರ್ಮಿಗಳಿಗಾಗಿ ಇನ್ನಷ್ಟು ಶ್ರಮವಹಿಸಲು ಸಹಕಾರಿಯಾಗುತ್ತದೆ ಎಂದರು.
I always dreamt of reviving the traditional crafts of Kashmir because this is a means to empower local women.
— Narendra Modi (@narendramodi) March 8, 2020
I saw the condition of women artisans and so I began working to revise Namda craft.
I am Arifa from Kashmir and here is my life journey. #SheInspiresUs pic.twitter.com/hT7p7p5mhg