ಜನೌಷಧಿ ಫಲಾನುಭವಿಯೊಂದಿಗೆ ಸಂವಾದ ನಡೆಸುವ ವೇಳೆ ಪ್ರಧಾನಮಂತ್ರಿ ಅವರು ಭಾವೋದ್ವೇಗಕ್ಕೆ ಒಳಗಾದರು. 2011ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದ ಡೆಹ್ರಾಡೂನ್ ನ ಮಹಿಳಾ ಫಲಾನುಭವಿ ದೀಪಾ ಷಾ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸುವಾಗ ಪ್ರಧಾನಿ ಅವರಲ್ಲಿ ತಾವು ದೇವರನ್ನು ಕಂಡಿದ್ದೇನೆ ಎಂದು ಹೇಳಿದರು. ಜನೌಷಧಿ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ ಅವರು “ನಾನು ದೇವರನ್ನು ನೋಡಿಲ್ಲ, ಆದರೆ ನಿಮ್ಮಲ್ಲಿ ದೇವರನ್ನು ಕಂಡೆ’ಎಂದರು.
ಅಮಿತತೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ ಅವರು “ನಿಮ್ಮ ಧ್ವನಿ ಕೇಳಿದೆ ಮತ್ತು ನಿಮ್ಮ ಆಶೀರ್ವಾದದಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ಮಾತನಾಡುವ ಶಕ್ತಿ ಬಂದಿದೆ’’ಎಂದರು. ಅಲ್ಲದೆ, ಅವರು ತಾವು ಚೇತರಿಸಿಕೊಳ್ಳಲು ಸಹಕಾರ ನೀಡಿದ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಜನೌಷಧಿ ಯೋಜನೆಯ ಪ್ರಯೋಜನ ಪಡೆಯಲು ಆರಂಭಿಸಿದ ನಂತರ ಪ್ರತಿ ತಿಂಗಳು ಸುಮಾರು 3,500 ರೂ. ಉಳಿತಾಯ ಮಾಡಲು ಆರಂಭಿಸಿದ್ದೇನೆ ಎಂದು ಆಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದರು.
ಆಕೆಯ ಧೈರ್ಯವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಅವರು “ನೀವು ನಿಮ್ಮ ಇಚ್ಛಾಶಕ್ತಿಯಿಂದ ಕಾಯಿಲೆಯನ್ನು ಸೋಲಿಸಿದ್ದೀರಿ. ನಿಮ್ಮ ಛಲವೇ ನಿಮ್ಮ ದೇವರು, ಅಂತಹ ದೊಡ್ಡ ಬಿಕ್ಕಟ್ಟಿನಿಂದ ಹೊರಬರಲು ಅದೇ ನಿಮಗೆ ಶಕ್ತಿ ನೀಡಿದೆ. ನೀವು ಆ ವಿಶ್ವಾಸವನ್ನು ನಿಮ್ಮೊಂದಿಗೆ ಮುಂದುವರಿಸಿಕೊಂಡು ಹೋಗಿ’’ಎಂದರು.