ಪರೀಕ್ಷಾ ಪೆ ಚರ್ಚಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಮೋದಿ ಅವರನ್ನು ಓದಲು ಮುಂಜಾನೆ ಅಥವಾ ತಡರಾತ್ರಿ ಯಾವುದು ಉತ್ತಮ ಎಂದು ಕೇಳಿದರು. ಅವರು ಅಧ್ಯಯನಕ್ಕೆ ಯಾವುದು ಉತ್ತಮ ಕಾಲ ಎಂಬುದನ್ನು ತಿಳಿಯಲು ಬಯಸಿದ್ದರು.
ವಿದ್ಯಾರ್ಥಿಗಳ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿ ಅವರು ತಾವು ಕೇವಲ ಶೇ.50ರಷ್ಟು ಮಾತ್ರವೇ ವಿದ್ಯಾರ್ಥಿಗಳಿಗೆ ಸಲಹೆ ನೀಡಲು ಶಕ್ತನಾಗಿರುವುದಾಗಿ ತಿಳಿಸಿ, ತಾವು ಬೆಳಗ್ಗೆ ಬೇಗನೆ ಎದ್ದರೂ, ತಮ್ಮ ಕಾರ್ಯಕ್ರಮಪಟ್ಟಿ ತಮಗೆ ತಡರಾತ್ರಿಯವರೆಗೆ ಕೆಲಸ ಮಾಡುವಂತೆ ಮಾಡುತ್ತದೆ ಎಂದರು.
“ನೀವೆಲ್ಲರೂ ಬೆಳಗ್ಗೆ ಬೇಗನೇ ಎದ್ದೇಳಿ, ಮನಸ್ಸು ನಿರ್ಮಲವಾಗಿರುತ್ತದೆ ಮತ್ತು ಆಗ ನಾವು ಓದುವುದು ಮನಸ್ಸಿನಲ್ಲಿ ಉತ್ತಮವಾಗಿ ದಾಖಲಾಗುತ್ತದೆ. ಪ್ರತಿಯೊಬ್ಬರಿಗೂ ತಮ್ಮದೇ ಸ್ವಂತ ಅಭ್ಯಾಸ ಇರುತ್ತದೆ ಯಾರಿಗೆ ಯಾವುದು ಅನುಕೂಲವೋ ಅದನ್ನು ಪಾಲಿಸಬೇಕು” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಲಘು ಟಿಪ್ಪಣಿಯಲ್ಲಿ ಪ್ರಧಾನಮಂತ್ರಿಯವರು, ಕೆಲವು ಮಕ್ಕಳು ತಮ್ಮ ತಾಯಂದಿರಿಗೆ ತಾವು ಇಷ್ಟಪಡುವ ನಿರ್ದಿಷ್ಟ ಖಾದ್ಯ ಮಾಡಿಕೊಡುವಂತೆ ಅಥವಾ ಅಧ್ಯಯನಕ್ಕಾಗಿ ಬೆಳಗ್ಗೆ ಬೇಗನೆ ಏಳಿಸುವಂತೆ ಹೇಗೆ ಬೇಡಿಕೆ ಮಂಡಿಸುತ್ತಾರೆ ಎಂಬುದನ್ನು ಅವರು ಉಲ್ಲೇಖಿಸಿದರು.