ಟೈಮ್ಸ್ ನೌ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕಳೆದ ಎಂಟು ತಿಂಗಳಲ್ಲಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದರು. ಉತ್ತಮವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರು ಉಲ್ಲೇಖಿಸಿದ ಕಳೆದ ಎಂಟು ತಿಂಗಳಲ್ಲಿ ಸರ್ಕಾರದ ಪ್ರಮುಖ ಸಾಧನೆಗಳು ಇಲ್ಲಿವೆ:
- ಪಿಎಂ ಕಿಸಾನ್ ಯೋಜನೆ ವ್ಯಾಪ್ತಿಗೆ ಎಲ್ಲಾ ರೈತರು
- ರೈತರು, ಕಾರ್ಮಿಕರು, ವ್ಯಾಪಾರಸ್ಥರಿಗೆ ಪಿಂಚಣಿಯ ಖಾತರಿ
- ನೀರಿನಂತಹ ಪ್ರಮುಖ ವಿಷಯದಲ್ಲಿ ಉದಾಸೀನತೆಯನ್ನು ಕೊನೆಗಾಣಿಸಲು ಜಲಶಕ್ತಿ ಸಚಿವಾಲಯದ ರಚನೆ
- ಮಧ್ಯಮ ವರ್ಗದವರಿಗೆ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 25,000 ಕೋಟಿ ರೂ ವಿಶೇಷ ನಿಧಿ
- ದೆಹಲಿಯ 40 ಲಕ್ಷ ಜನರಿಗೆ ಪ್ರಯೋಜನ ಕಲ್ಪಿಸಲು ಅನಧಿಕೃತ ಕಾಲೋನಿಗಳ ಸಕ್ರಮ
- ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಕಾನೂನು
- ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಕಠಿಣ ಶಿಕ್ಷೆಗಾಗಿ ಕಾನೂನು
- ತೃತೀಯ ಲಿಂಗಿಗಳ ಸಬಲೀಕರಣಕ್ಕಾಗಿ ಕಾನೂನು
- ಚಿಟ್ ಫಂಡ್ ವಂಚನೆ ತಡೆಗಟ್ಟುವಿಕೆಗೆ ಕಾನೂನು
- ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ
- ಕಾರ್ಪೊರೇಟ್ ತೆರಿಗೆಯಲ್ಲಿ ಐತಿಹಾಸಿಕ ಕಡಿತ
- ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕಠಿಣ ಕಾನೂನು
- ರಕ್ಷಣಾ ಪಡೆಗಳ ಮುಖ್ಯಸ್ಥರ ನೇಮಕ
- ದೇಶಕ್ಕೆ ಮುಂದಿನ ತಲೆಮಾರಿನ ಯುದ್ಧ ವಿಮಾನ
- ಬೋಡೋ ಶಾಂತಿ ಒಪ್ಪಂದ
- ಬ್ರೂ-ರಿಯಾಂಗ್ಗ್ ಶಾಶ್ವತ ವಸಾಹತು
- ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚನೆ
- 370 ನೇ ವಿಧಿ ರದ್ದತಿಯ ನಿರ್ಧಾರ
- ಜಮ್ಮು, ಕಾಶ್ಮೀರ ಮತ್ತು ಲಡಾಖ್ ಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ನಿರ್ಧಾರ
- ಪೌರತ್ವ ತಿದ್ದುಪಡಿ ಕಾಯ್ದೆ