ದಾದಾ ವಾಸ್ವಾನಿಯವರು ಪ್ರಧಾನಿಯವರಿಗೆ ಧನ್ಯವಾದಗಳನ್ನು ಅರ್ಪಿಸಿ, ಮೋದಿಯವರು ವಿಶ್ವದ ಅತ್ಯಂತ ದೊಡ್ಡ ನಾಯಕ ಎಂದು ಬಣ್ಣಿಸಿದರು. ಪ್ರಧಾನಿಯವರು ಕೈಗೊಂಡ ಯೋಜನೆಗಳಾದ ಜನಧನ್ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಚಭಾರತ ಮೊದಲಾದ ಕಾರ್ಯಕ್ರಮಗಳು ಗೋಚರ ಪರಿಣಾಮಗಳನ್ನು ಉಂಟುಮಾಡಿವೆ ಎಂದು ಅವರು ಬಣ್ಣಿಸಿದರು. ಭಾರತ ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹವಾಗಿ ಬದಲಾವಣೆ ಕಂಡಿದೆ ಎಂದು ವಾಸ್ವಾನಿ ಅವರು ಹೇಳಿದರು. ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೇಶ ಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ರಾಜಕೀಯದಿಂದಲ್ಲ ಎಂದು ದಾದಾ ವಾಸ್ವಾನಿಯವರು ಹೇಳಿದರು. eಎಲ್ಲ ಭಾರತೀಯರು ಹೆಮ್ಮೆ ಪಡುವಂತಹ ರಾಷ್ಟ್ರವೊಂದನ್ನು ನಿರ್ಮಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.
ಶ್ರೀ ನರೇಂದ್ರ ಮೋದಿ ಅವರಂತ ನಾಯಕನನ್ನು ಭಾರತದ ಪ್ರಧಾನ ಮಂತ್ರಿಯಾಗಿ ಪಡೆಯಲು ನಾವು ಅದೃಷ್ಟಶಾಲಿಯಾಗಿದ್ದೇವೆ . ಕಳೆದ ಮೂರು ವರ್ಷಗಳಲ್ಲಿ ಭಾರತವು ಬಹಳ ಅಭಿವೃದ್ಧಿಯಾಗಿದೆ .ಜನ್ ಧನ್ ಯೋಜನೆ, ಸ್ವಚ್ ಭಾರತ್ ಅಭಿಯಾನ್, ಮೇಕ್ ಇನ್ ಇಂಡಿಯಾ , ದೇಶವನ್ನು ಪರಿವರ್ತಿಸುತ್ತಿದೆ . ಜನರ ಕಡೆಯಿಂದ ನಾನು ಪ್ರಧಾನ ಮಂತ್ರಿಯನ್ನು ಅಭಿನಂದಿಸುತ್ತೇನೆ