ಸನ್ಮಾನ್ಯ ಸಭಾಪತಿಯವರೇ
ಇಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿ ಅನಂತರ, ಈ ದಿನ ತಾವು ಹೊಸ ಕಾರ್ಯ ಕ್ಷೇತ್ರವೊಂದರ ಕಡೆಗೆ ಪ್ರಯಾಣ ಮಾಡುತ್ತಿದ್ದೀರೆಂದು ನನ್ನ ವಿಶ್ವಾಸ; ಏಕೆಂದರೆ ತಾವು ತಮ್ಮ ದೈಹಿಕ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡಿದ್ದೀರಿ.ಸಾರ್ವಜನಿಕ ಜೀವನದಲ್ಲಿ ಸುಮಾರು ನೂರು ವರ್ಷಗಳ ಇತಿಹಾಸವಿರುವಂತಹ ಕುಟುಂಬ ತಮ್ಮದು; ತಮ್ಮ ಅಜ್ಜ, ತಮ್ಮ ತಾತ ಮುಂತಾದವರು ಕೆಲವೊಮ್ಮೆ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದರು, ಒಂದುಕಾಲದಲ್ಲಿ ಸಂವಿಧಾನ ಸಭೆಯಲ್ಲಿ ಸದಸ್ಯರಾಗಿದ್ದರು, ತಮ್ಮ ಪೂರ್ವಜರು ಸಾರ್ವಜನಿಕ ಜೀವನದಲ್ಲಿ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿದ್ದರು; ಹಿಂದೆ ಖಿಲಾಫತ್ ಚಳುವಳಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನೀವು ಇಂತಹ ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದೀರಿ.
ತಮಗೆ ತಮ್ಮ ಜೀವನವೂ ರಾಜತಾಂತ್ರಿಕ ವೃತ್ತಿಯದಾಗಿತ್ತು (Career Diplomat ). Career Diplomat ಎಂದರೇನೆಂಬುದು ಪ್ರಧಾನ ಮಂತ್ರಿಯಾದ ಮೇಲೆಯೇ ನನಗೆಗೊತ್ತಾಯಿತು – ಅವರ ನಗುವಿಗೆ ಏನು ಅರ್ಥವಿರುತ್ತದೆ, ಹಸ್ತಲಾಘವದ ರೀತಿಗೆ ಏನು ಅರ್ಥವಿರುತ್ತದೆ ಇವೆಲ್ಲ ಕೂಡಲೇ ತಿಳಿಯಲು ನಮಗೆ ಸಾಧ್ಯವಾಗುವುದಿಲ್ಲ. [ತರಬೇತಿ ಇದ್ದವರಿಗೆ ಸಾಧ್ಯವಾಗುತ್ತದೆ]. ಏಕೆಂದರೆ ಅವರ ತರಬೇತಿಯೇ ಆ ರೀತಿ ಇರುತ್ತದೆ. ಆದರೆ ಇಂತಹ ಕೌಶಲ್ಯಗಳ ಉಪಯೋಗ ಈ ಹತ್ತು ವರ್ಷಗಳಲ್ಲಿ ಖಂಡಿತವಾಗಿ ತಮ್ಮಿಂದ ಆಗಿರುತ್ತದೆ. ಇವರನ್ನೆಲ್ಲ ನಿಭಾಯಿಸುವಲ್ಲಿ ಈ ಕೌಶಲದ ಉಪಯೋಗ ಅನೇಕಪ್ರಕಾರಗಳಲ್ಲಿ ಈ ಸದನಕ್ಕೆ ಆಗಿರಬಹುದು. ತಮ್ಮ ವೃತ್ತಿ ಜೀವನದ ಬಹುಪಾಲು, ರಾಜತಾಂತ್ರಿಕರಾಗಿ, West Asia (ಪಶ್ಚಿಮ ಏಶಿಯಾ)ದ ಜೊತೆ ತಳುಕು ಹಾಕಿಕೊಂಡಿದೆ.
ಇದೇ ವ್ಯಾಪ್ತಿಯಲ್ಲಿ ತಮ್ಮ ಜೀವನದ ಬಹುಭಾಗವನ್ನು ಕಳೆದಿರಿ; ಅದೇ ವಾತಾವರಣದಲ್ಲಿ, ಅದೇ ಚಿಂತನನೆಯಲ್ಲಿ, ಅದೇ ಚರ್ಚೆಗಳಲ್ಲಿ, ಅದೇ ತರಹದ ಜನಗಳ ಮಧ್ಯೆ ತಾವು ಇದ್ದಿರಿ.ಅಲ್ಲಿಂದ ನಿವೃತ್ತ ರಾದ ಮೇಲೂ ತಮ್ಮ ಹೆಚ್ಚಿನ ಕಾರ್ಯಗಳು ಅದೇ ರೀತಿಯಲ್ಲಿ ಇದ್ದವು.Minority Commission ಇರಲಿ ಅಥವ Aligarh University ಇವುಗಳ ವ್ಯಾಪ್ತಿ ಕೂಡ ಅದೇ ರೀತಿಯದಾಗಿ ಇತ್ತು. ಆದರೆ ಈ ಹತ್ತು ವರ್ಷಗಳ ಕಾಲ ಭಿನ್ನ ರೀತಿಯ ಜವಾಬ್ದಾರಿ ತಮ್ಮದಾಯಿತು. ಇಲ್ಲಿ ಪ್ರತಿ ಕ್ಷಣದಲ್ಲಿ ಸಂವಿಧಾನ ಸಂವಿಧಾನ ಸಂವಿಧಾನ ಎಂಬಂತೆ ಸಂಪೂರ್ಣವಾಗಿ ಸಂವಿಧಾನಕ್ಕೆ ಅರ್ಪಿತರಾಗಿ ಸಭೆ ನಡೆಸ ಬೇಕಾಗಿತ್ತು. ತಾವು ಈ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುವ ಸಂಪೂರ್ಣ ಪ್ರಯತ್ನವನ್ನು ಮಾಡಿದಿರಿ.
ತಮ್ಮೊಳಗೆ ಕೂಡ ಕೆಲವು ಸಲ ನಿರಾಶಾಮಯ ಸಂಘರ್ಷ ಉಂಟಾಗಿರಬಹುದು. ಆದರೆ ಇಂದಿನಿಂದ ಮುಂದೆ ನಿಮಗೆ ಅಂತಹ ಸಂಕಟ ಇರುವುದಿಲ್ಲ ಇದರಿಂದ ನೀವು ಮುಕ್ತರಾದ ಆನಂದವನ್ನು ಅನುಭವಿಸುತ್ತಿರುತ್ತೀರಿ. ತಮ್ಮ ಮೂಲಭೂತ ಚಿಂತನೆಗಳು ಹಾಗೆಯೇ ಉಳಿದಿದ್ದು ಅದಕ್ಕನುಸಾರವಾಗಿ ಕೆಲಸ ಮಾಡುವ ಯೋಚಿಸುವ ಆ ಬಗ್ಗೆ ಮಾತನಾಡುವ ಅವಕಾಶಗಳು ಲಭಿಸುತ್ತವೆ.
ನನ್ನ ಜೊತೆ ತಮ್ಮ ಪರಿಚಯ ಹೆಚ್ಚು ಆಗಿರುವುದಿಲ್ಲ, ಆದರೂ ತಮ್ಮೊಡನೆ ಭೇಟಿಯಾದಾಗಲೆಲ್ಲ ತಮ್ಮಿಂದ ತಿಳಿಯಲು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತಿತ್ತು. ನಾನು ವಿದೇಶೀ ಯಾತ್ರೆಗೆ ಹೊರಡುವ ಮುಂಚೆ, ಮತ್ತು ಅಲ್ಲಿಂದ ಬಂದ ಅನಂತರ ತಮ್ಮೊಡನೆ ಮಾತನಾಡುವ ಅವಕಾಶ ಸಿಕ್ಕಾಗ ನಿಮ್ಮ ಒಳನೋಟಗಳ ಅನುಭವ ಖಂಡಿತವಾಗಿ ನನಗಾಗುತ್ತಿತ್ತು; ಅದು ನನಗೆ ವಿಷಯಗಳನ್ನು ಹೊಸ ಬೆಳಕಿನಲ್ಲಿ ತೋರಿಸುತ್ತಿತ್ತು; ಇದರ ಹೊರತಾಗಿ ಏನಾಗಲು ಸಾಧ್ಯವಿತ್ತು ಎಂಬುದನ್ನು ತಿಳಿಯುವ ಒಂದು ಅವಕಾಶ ಸಿಗುತ್ತಿತ್ತು; ಆದ್ದರಿಂದ ನಾನು ನಿಮಗೆ ಹೃದಯ ತುಂಬಿ ಆಭಾರುಯಾಗಿದ್ದೇನೆ, ನನ್ನ ಕಡೆಯಿಂದ ನಿಮಗೆ ಹಾರ್ದಿಕ ಶುಭಾಶಯಗಳು.
ರಾಷ್ಟ್ರದ ಉಪರಾಷ್ಟ್ರಪತಿಯಾಗಿ ತಮ್ಮ ಸೇವೇಗಾಗಿ [ಪಾರ್ಲಿಮೆಂಟಿನ] ಎರಡೂ ಸದನಗಳ ಪರವಾಗಿ, ದೇಶವಾಸಿಳ ಪರವಾಗಿಯೂ ತಮಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ; ಮತ್ತು ತಮ್ಮ ಈ ಕರ್ತೃತ್ವ ಈ ಅನುಭವ - ಇವು ನಿವೃತ್ತರಾದ ಮೇಲೆಯೂ ತಮ್ಮಷ್ಟಕ್ಕೆ ತಾವು ದೀರ್ಘಕಾಲದವರೆಗೆ ತಮ್ಮ ಸಾಮಾಜಿಕ ಜೀವನದಲ್ಲಿ ಒಂದು ಘನತೆಯನ್ನು ತಂದುಕೊಡುತ್ತವೆ. ರಾಷ್ಟ್ರದ ಸಂವಿಧಾನದ ಗೌರವವನ್ನು ಕಾಪಾಡುತ್ತಾ ದೇಶಕ್ಕೆ ಮಾರ್ಗ ದರ್ಶನ ನೀಡುವಲ್ಲಿ ತಮ್ಮ ಸಮಯ ಮತ್ತು ಸಾಮರ್ಥ್ಯ ಕೆಲಸಕ್ಕೆ ಬರಲಿದವೆ. ಹಾಗಾಲೆಂದು ನನ್ನ ಶುಭ ಹಾರೈಕೆಗಳು.
ಎಲ್ಲರಿಗೂ ಅನಂತಾನಂತ ಧನ್ಯವಾದಗಳು.