1. ಭಾರತವು ಇಂದು ಸೆ.28 2020ರಂದು ಆಯೋಜಿಸಿರುವ ವರ್ಚುವಲ್ ಸಭೆಯಲ್ಲಿ ಭಾರತೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಪಾಲ್ಗೊಂಡರು.
2. ಭಾರತ ಮತ್ತು ಡೆನ್ಮಾರ್ಕ್‌ಗಳ ದ್ವಿಪಕ್ಷೀಯ ಸಂಬಂಧಗಳನ್ನು ಗಮನದಲ್ಲಿರಿಸಿಕೊಂಡು ಈ ಸಭೆಯಲ್ಲಿ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ನಮ್ಮ ಐತಿಹಾಸಿಕ ಬಾಂಧವ್ಯ, ಪ್ರಜಾಪ್ರಭುತ್ವದ ಸಂಫ್ರದಾಯ, ಧಾರ್ಮಿಕ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸುಸ್ಥಿರ ಶಾಂತಿಗಾಗಿ ಚರ್ಚೆ ನಡೆಯಿತು.
3. ಭಾರತ ಮತ್ತು ಡೆನ್ಮಾರ್ಕ್ ನಡುವಿನ ಸರಕು ಮತ್ತು ಸೇವೆಗಳಲ್ಲಿನ ದ್ವಿಪಕ್ಷೀಯ ವ್ಯಾಪಾರವು ಶೇ 30.49ರಷ್ಟು ಏರಿಕೆಯಾಗಿದೆ. 2016ರಲ್ಲಿ 2.82 ಕೋಟಿ , ಯುಎಸ್ ಡಾಲರ್‌ನಿಂದ 2019ರಲ್ಲಿ 3.68 ಕೋಟಿ ಡಾಲರ್‌ಗಳಿಗೆ ಏರಿಕೆಯಾಗಿದೆ. ಸುಮಾರು 200 ಡ್ಯಾನಿಷ್ ಕಂಪನಿಗಳು ಭಾರತದಲ್ಲಿ ಸಾಗಣೆ, ನವೀಕರಿಸಬಹುದಾದ ಇಂಧನ, ಪರಿಸರ, ಕೃಷಿ, ಆಹಾರ ಸಂಸ್ಕರಣೆ, ಸ್ಮಾರ್ಟ್ ನಗರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಲವಾರು ಪ್ರಮುಖ ಡ್ಯಾನಿಷ್ ಕಂಪನಿಗಳು ಸಹಭಾಗಿಯಾಗಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಹೊಸ ಉತ್ಪಾದನಾ ಕಾರ್ಖಾನೆಗಳ ನಿರ್ಮಾಣ ಆಗಿವೆ. ಮಾಹಿತಿ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸುಮಾರು 25 ಭಾರತೀಯ ಕಂಪನಿಗಳು ಡೆನ್ಮಾರ್ಕ್‌ನಲ್ಲಿವೆ.
4. ಭಾರತ ಮತ್ತು ಡೆನ್ಮಾರ್ಕ್ ನಡುವೆ ಬೌದ್ಧಿಕ ಆಸ್ತಿ ಸಹಕಾರ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಅನುಮೋದನೆಗೆ ಸೂಚಿಸಲಾಗಿ. ಡೆನ್ಮಾರ್ಕ್ ಜೊತೆಗೂಡಿ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಸೇರುವುದು ಮಹತ್ವದ ಫಲಿತಾಂಶವಾಗಿದೆ.
5 ಈ ವರ್ಚುವಲ್ ಸಭೆಯು ಎರಡೂ ದೇಶಗಳ ನಾಯಕರಿಗೆ ದ್ವಿಪಕ್ಷೀಯ ಸಂಬಂಧಗಳ ಬಗೆಗೆ ಸಮಗ್ರ ಚಿಂತನೆಗೆ ಅವಕಾಶ ನೀಡುತ್ತಿದೆ. ಕಾಲಕ್ಕೆ ತಕ್ಕಂತ ಒಪ್ಪಂದಗಳು ಎರಡೂ ರಾಷ್ಟ್ರಗಳ ನಡುವಿನ ಕೊಡುಕೊಳ್ಳುವಿಕೆ ಸಂಬಂಧಗಳ ಬಗೆಗೆ ರಾಜಕೀಯ ದಿಕ್ಕುಗಳ ಬಗೆಗೆ ಚರ್ಚಿಸುವಂತಾಯಿತು. ದ್ವಿಪಕ್ಷೀಯ ಸಂಬಂಧಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿಯೂ. ಒಗ್ಗೂಡಿ ಮುನ್ನಡೆಯವ ದಿಕ್ಕುಗಳ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು.