ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟೈಮ್ ಲೈನ್ ಮೂಲಕ ವೀಣಾ ದೇವಿ ತಮ್ಮ ವಿಭಿನ್ನ ಅಣಬೆ ಕೃಷಿ ತಂತ್ರಜ್ಞಾನದ ಬಗ್ಗೆ ವಿವರಿಸಿದ್ದಾರೆ. ಅದು ಆಕೆಯನ್ನು ಕೇವಲ ಸ್ವಾವಲಂಬಿಯನ್ನಾಗಿ ಮಾಡಿರುವುದಷ್ಟೇ ಅಲ್ಲದೆ, ಆಕೆಯ ನೈತಿಕ ಸ್ಥೈರ್ಯವನ್ನು ಉತ್ತೇಜಿಸಿದೆ.
ಬಿಹಾರದ ಮುಂಗೇರ್ ನ ವೀಣಾ ದೇವಿ, “ಎಲ್ಲಿ ಇಚ್ಛಾಶಕ್ತಿ ಇರುತ್ತದೋ ಅಲ್ಲಿ ಸಾಧನೆಗೆ ದಾರಿ ಇರುತ್ತದೆ. ಇಚ್ಛಾಶಕ್ತಿಯಿಂದ ಎಲ್ಲವನ್ನೂ ಸಾಧಿಸಬಹುದು” ಎಂದು ಹೇಳಿದ್ದಾರೆ.
ವೀಣಾ ದೇವಿ ತಮ್ಮ ಮನೆಯಲ್ಲಿ ಮಂಚದ ಕೆಳಗೆ ಅಣಬೆ ಬೆಳೆಯುವುದನ್ನುಆರಂಭಿಸಿದರು. “ಇಂದು ಮಹಿಳೆಯರು ಯಾವ ಕ್ಷೇತ್ರದಲ್ಲೂ ತೀರಾ ಹಿಂದುಳಿದಿಲ್ಲ, ದೇಶದ ಮಹಿಳಾ ಶಕ್ತಿ ದೃಢ ಸಂಕಲ್ಪ ಮಾಡಿದರೆ, ಅವರು ತಮ್ಮ ಪಯಣವನ್ನು ತಮ್ಮ ಮನೆಯಿಂದಲೇ ಆರಂಭಿಸುತ್ತಾರೆ. ಈ ಕೃಷಿಯಿಂದಾಗಿ ನನಗೆ ಗೌರವ ದೊರೆತಿದೆ, ನಾನು ಸರಪಂಚಳಾಗಿದ್ದೇನೆ. ಇದು ನನಗೆ ಹೆಮ್ಮೆಯ ಸಂಗತಿಯಾಗಿದ್ದು, ನನ್ನಂತಹ ಹಲವು ಮಹಿಳೆಯರಿಗೆ ಸಮಾನ ತರಬೇತಿ ಅವಕಾಶಗಳನ್ನು ನೀಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಮುಂಗೇರ್ ನ ಮಹಿಳೆಯರು ಇಂದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಆಕೆ ಹೇಳಿದ್ದಾರೆ. ಮನೆಯಲ್ಲಿಯೇ ಕೃಷಿ ಮಾಡುವುದರಿಂದ ಸ್ಥಳೀಯ ಹಾತ್ (ಬಜಾರ್ )ಗಳಲ್ಲಿ ಉತ್ಪನ್ನಗಳನ್ನು ಮಾರುವುದರಿಂದ ಹಿಡಿದು, ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಮತ್ತು ಆಕೆಯ ಜೀವನಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.
जहां चाह वहां राह… इच्छाशक्ति से सब कुछ हासिल किया जा सकता है।
— Narendra Modi (@narendramodi) March 8, 2020
मेरी वास्तविक पहचान पलंग के नीचे एक किलो मशरूम की खेती से शुरू हुई थी।
लेकिन इस खेती ने मुझे न केवल आत्मनिर्भर बनाया, बल्कि मेरे आत्मविश्वास को बढ़ाकर एक नया जीवन दिया।
वीणा देवी, मुंगेर #SheInspiresUs pic.twitter.com/MkfyZ8mnZp