ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮಟ್ಟೀಸ್ ಅವರಿಂದು ಮಧ್ಯಾಹ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ವರ್ಷ ಜೂನ್ ತಿಂಗಳಿನಲ್ಲಿ ತಾವು ಅಮೆರಿಕಾಗೆ ಭೇಟಿ ನೀಡಿದ್ದಾಗ, ಅಧ್ಯಕ್ಷ ಟ್ರಂಪ್ ಅವರೊಂದಿಗೆ ನಡೆದ ಬಿಚ್ಚು ಮನಸ್ಸಿನ ಮತ್ತು ವಿಸ್ತೃತ ಫಲಪ್ರದ ಮಾತುಕತೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಎರಡೂ ಕಡೆಯವರು ತಮ್ಮ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಪುನರುಚ್ಚರಿಸಿದರು. ರಕ್ಷಣಾ ಸಚಿವ ಮಟ್ಟೀಸ್ ಅವರು ಪ್ರಧಾನಮಂತ್ರಿಯವರಿಗೆ ದ್ವಿಪಕ್ಷೀಯ ಕಾರ್ಯಕ್ರಮಗಳ ಮುಂದುವರಿಕೆಯಲ್ಲಿನ ಪ್ರಗತಿ ಮತ್ತು ಹಿಂದಿನ ಭೇಟಿಯ ವೇಳೆ ಕೈಗೊಂಡ ನಿರ್ಧಾರಗಳ ಜಾರಿಯ ಕುರಿತು ವಿವರ ನೀಡಿದರು.
ಶಾಂತಿ, ಸ್ಥಿರತೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಹಂಚಿಕೆಯ ಆಧ್ಯತೆಯ ಮೇಲೆ ಮುಂದುವರಿಸಲು, ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಸಹಕಾರ ಹೆಚ್ಚಿಸುವ ಕುರಿತು ಅವರು ಚರ್ಚಿಸಿದರು.
ಪ್ರಧಾನಮಂತ್ರಿಯವರು ಪರಸ್ಪರ ಕಾಳಜಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳಲ್ಲಿ ಎರಡೂ ರಾಷ್ಟ್ರಗಳ ಆಪ್ತ ಕಾರ್ಯಕ್ರಮವನ್ನು ಶ್ಲಾಘಿಸಿದರು.