ಸೆನೆಟ್ ಬಹುಮತದ ನಾಯಕ ಚಾರ್ಲ್ಸ್ ಶುಮರ್ ನೇತೃತ್ವದ ಒಂಬತ್ತು ಸೆನೆಟರ್ ಗಳ ಯುಎಸ್ ಕಾಂಗ್ರೆಸ್ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು. ಈ ನಿಯೋಗದಲ್ಲಿ ಸೆನೆಟರ್ ರಾನ್ ವೈಡೆನ್, ಸೆನೆಟರ್ ಜ್ಯಾಕ್ ರೀಡ್, ಸೆನೆಟರ್ ಮಾರಿಯಾ ಕ್ಯಾಂಟ್ವೆಲ್, ಸೆನೆಟರ್ ಆಮಿ ಕ್ಲೋಬುಚಾರ್, ಸೆನೆಟರ್ ಮಾರ್ಕ್ ವಾರ್ನರ್, ಸೆನೆಟರ್ ಗ್ಯಾರಿ ಪೀಟರ್ಸ್, ಸೆನೆಟರ್ ಕ್ಯಾಥರೀನ್ ಕಾರ್ಟೆಜ್ ಮಾಸ್ಟೊ ಮತ್ತು ಸೆನೆಟರ್ ಪೀಟರ್ ವೆಲ್ಚ್ ಇದ್ದರು.
ಪ್ರಧಾನಮಂತ್ರಿಯವರು ಭಾರತಕ್ಕೆ ಆಗಮಿಸಿದ ಕಾಂಗ್ರೆಸ್ ನಿಯೋಗವನ್ನು ಸ್ವಾಗತಿಸಿದರು. ಭಾರತ ಮತ್ತು ಯುಎಸ್ ದ್ವಿಪಕ್ಷೀಯ ಸಂಬಂಧಗಳನ್ನು ಪಕ್ವಗೊಳಿಸುವ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲವನ್ನು ಶ್ಲಾಘಿಸಿದರು. ಅಧ್ಯಕ್ಷ ಜೋಸೆಫ್ ಬೈಡನ್ ಅವರೊಂದಿಗಿನ ತಮ್ಮ ಇತ್ತೀಚಿನ ದೂರವಾಣಿ ಕರೆ ಮತ್ತು ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತೀಕರಿಸುವ ಉಭಯ ನಾಯಕರ ದೃಷ್ಟಿಕೋನವನ್ನು ಪ್ರಧಾನಿ ಸ್ಮರಿಸಿದರು.
ಸಮಾನ ಪ್ರಜಾಪ್ರಭುತ್ವ ಮೌಲ್ಯಗಳು, ದೃಢವಾದ ದ್ವಿಪಕ್ಷೀಯ ಸಹಕಾರ, ಜನರ ನಡುವಿನ ಬಲವಾದ ಸಂಬಂಧ ಮತ್ತು ಯುಎಸ್ ನಲ್ಲಿರುವ ರೋಮಾಂಚಿತ ಭಾರತೀಯ ಸಮುದಾಯವನ್ನು ದ್ವಿಪಕ್ಷೀಯ ಕಾರ್ಯತಂತ್ರದ ಸಕ್ರಿಯ ಪಾಲುದಾರಿಕೆಯ ಆಧಾರಸ್ತಂಭಗಳು ಎಂದು ಪ್ರಧಾನಿ ಮತ್ತು ಯುಎಸ್ ನಿಯೋಗ ಗುರುತಿಸಿದೆ.
ನಿರ್ಣಾಯಕ ತಂತ್ರಜ್ಞಾನ, ಶುದ್ಧ ಇಂಧನ ಪರಿವರ್ತನೆ, ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆ ಹಾಗೂ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳಲ್ಲಿ ಭಾರತ-ಯುಎಸ್ ಸಂಬಂಧಗಳನ್ನು ಬಲಪಡಿಸುವ ಹೊಸ ಅವಕಾಶಗಳ ಬಗ್ಗೆ ಪ್ರಧಾನಿಯವರು ಯುಎಸ್ ನಿಯೋಗದೊಂದಿಗೆ ಚರ್ಚಿಸಿದರು.
Wonderful to interact with US Congressional delegation led by Senate Majority Leader @SenSchumer. Appreciate the strong bipartisan support from the US Congress for deepening India-US ties anchored in shared democratic values and strong people-to-people ties. pic.twitter.com/Xy3vL6JeyF
— Narendra Modi (@narendramodi) February 20, 2023