ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಈ ತಿಂಗಳ 21 ನೇ ತಾರೀಖಿನಂದು ದೇಶಕ್ಕೆ ಬಹಳ ಶೋಕದಾಯಕ ಸುದ್ದಿಯೊಂದು ತಿಳಿಯಿತು. ಕರ್ನಾಟಕದ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ನಮ್ಮನ್ನಗಲಿದರು. ಶಿವಕುಮಾರ ಸ್ವಾಮೀಜಿಯವರು ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿದ್ದರು. ಶರಣರಾದ ಅಣ್ಣ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ –ಅಂದರೆ ಕಠಿಣ ಪರಿಶ್ರಮದ ಜೊತೆ ಜೊತೆಗೆ ನಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಗುವುದು ಭಗವಾನ್ ಶಿವನ ನಿವಾಸ ಸ್ಥಾನವಾದ ಕೈಲಾಸದಲ್ಲಿ ನೆಲೆಸಿರುವುದಕ್ಕೆ ಸಮ ಎಂದರ್ಥ. ಶಿವಕುಮಾರ ಸ್ವಾಮೀಜಿಯವರು ಇದೇ ಉಕ್ತಿಯ ಅನುಯಾಯಿಗಳಾಗಿದ್ದರು. ಅವರು ತಮ್ಮ 111 ವರ್ಷಗಳ ಸುದೀರ್ಘ ಜೀವಿತಾವಧಿಯಲ್ಲಿ ಸಾವಿರಾರು ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕೆಲಸ ಮಾಡಿದರು. ಇಂಗ್ಲೀಷ್, ಸಂಸ್ಕೃತಮತ್ತು ಕನ್ನಡ ಭಾಷೆಗಳಲ್ಲಿ ಅದ್ಭುತ ಪಾಂಡಿತ್ಯವನ್ನು ಹೊಂದಿದ ವಿದ್ವಾಂಸರ ಅಗ್ರಪಂಕ್ತಿಯಲ್ಲಿ ಅವರ ಹೆಸರನ್ನು ಎಣಿಸುವಂಥ ಕೀರ್ತಿ ಅವರದ್ದಾಗಿತ್ತು. ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಜನರಿಗೆ ಅನ್ನ, ಆಶ್ರಯ, ಶಿಕ್ಷಣ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಒದಗಿಸುವುದಕ್ಕೇ ತಮ್ಮ ಸಂಪೂರ್ಣ ಜೀವನವನ್ನು ಅವರು ಮುಡಿಪಾಗಿಟ್ಟಿದ್ದರು. ಸರ್ವ ರೀತಿಯಲ್ಲೂ ರೈತರ ಕಲ್ಯಾಣಾಭಿವೃದ್ಧಿ ವಿಷಯ ಸ್ವಾಮೀಜಿ ಅವರ ಜೀವನದಲ್ಲಿ ಪ್ರಾಧಾನ್ಯತೆ ಪಡೆದಿತ್ತು. ಸಿದ್ಧಗಂಗಾ ಮಠ ನಿಯತಕಾಲಿಕವಾಗಿ ರಾಸುಗಳು ಮತ್ತು ಕೃಷಿ ಮೇಳಗಳನ್ನು ಆಯೋಜಿಸುತ್ತಾ ಬಂದಿದೆ. ನನಗೆ ಅದೆಷ್ಟೋ ಬಾರಿ ಸ್ವಾಮೀಜಿಯವರ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ.2007 ರಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ನಮ್ಮ ಅಂದಿನ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ತುಮಕೂರಿಗೆ ಹೋಗಿದ್ದರು. ಕಲಾಂ ಅವರು ಆ ಸಂದರ್ಭದಲ್ಲಿ ಸ್ವಾಮೀಜಿ ಅವರ ಬಗ್ಗೆ ಒಂದು ಕವಿತೆಯನ್ನು ಹೇಳಿದ್ದರು. ಅವರು ಹೇಳುತ್ತಾರೆ:
ಓ ನನ್ನ ದೇಶಬಾಂಧವರೇ,ಕೊಡುವುದರಲ್ಲಿ ನೀವು ಸಂತಸ ಪಡೆಯುವಿರಿ,
ತನು ಮನಗಳಲ್ಲಿ ಕೊಡುವುದೆಲ್ಲವೂ ಇದೆ.
ನಿಮ್ಮಲ್ಲಿ ಜ್ಞಾನವಿದೆಯಾದರೆ – ಹಂಚಿಕೊಳ್ಳಿ
ನಿಮ್ಮಲ್ಲಿ ಸಂಪನ್ಮೂಲವಿದ್ದರೆ –ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳಿ
ನೀವು, ನಿಮ್ಮ ಮನಸ್ಸು ಮತ್ತು ಹೃದಯ
ಬಾಧೆಯಲ್ಲಿರುವವರ ನೋವನ್ನು ನಿವಾರಿಸಲಿ
ದುಖಃತಪ್ತ ಮನಸ್ಸುಗಳನ್ನು ಉಲ್ಲಸಿತಗೊಳಿಸಲಿ,
ಕೊಡುವುದರಲ್ಲಿ ನೀವು ಸಂತೋಷ ಪಡೆಯುವಿರಿ.
ಅಂಥ ನಿಮ್ಮೆಲ್ಲ ಕಾರ್ಯಗಳಿಗೆ ದೇವರು ಆಶೀರ್ವದಿಸುತ್ತಾನೆ
ಡಾ. ಕಲಾಂ ಸಾಹೇಬರ ಈ ಕವಿತೆಯಲ್ಲಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ಮತ್ತು ಸಿದ್ಧಗಂಗಾ ಮಠದ ಧ್ಯೇಯದ ಕುರಿತು ಸುಂದರವಾಗಿ ವರ್ಣಿಸಲಾಗಿದೆ. ಮತ್ತೊಮ್ಮೆ ನಾನು ಇಂಥ ಮಹಾಪುರುಷರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ.
ನನ್ನ ಪ್ರಿಯ ದೇಶಬಾಂಧವರೇ, 1950 ರ ಜನವರಿ 26 ರಂದು ನಮ್ಮ ದೇಶದ ಸಂವಿಧಾನ ಜಾರಿಗೆ ಬಂತು. ಅಂದು ನಮ್ಮ ದೇಶ ಗಣರಾಜ್ಯವಾಯಿತು. ನಿನ್ನೆಯಷ್ಟೇ ನಾವು ಅದ್ದೂರಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಿದೆವು. ಆದರೆ, ಇಂದು ನಾನು ಮತ್ತೊಂದು ವಿಷಯ ಪ್ರಸ್ತಾಪ ಮಾಡಲು ಇಚ್ಛಿಸುತ್ತೇನೆ. ನಮ್ಮ ದೇಶದಲ್ಲಿ ಒಂದು ಮಹತ್ವವಾದ ಸಂಸ್ಥೆಯಿದೆ, ಇದು ನಮ್ಮ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಗಣರಾಜ್ಯಕ್ಕಿಂತಲೂ ಹಳೆಯದು – ನಾನು ಭಾರತದ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದೇನೆ. ಜನವರಿ 25ಚುನಾವಣಾ ಆಯೋಗದ ಸ್ಥಾಪನಾ ದಿನ. ಇದನ್ನು ರಾಷ್ಟ್ರೀಯ ಮತದಾರರ ದಿನ – ‘ನ್ಯಾಶನಲ್ ವೋಟರ್ಸ್ ಡೇ’ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಯಾವ ಮಟ್ಟದಲ್ಲಿ ಚುನಾವಣೆ ಸಿದ್ಧತೆ ನಡೆಯುತ್ತದೆ ಎಂದರೆ ವಿಶ್ವವೇ ಇದನ್ನು ಕಂಡು ನಿಬ್ಬೆರಗಾಗುತ್ತದೆ. ನಮ್ಮ ಚುನಾವಣಾ ಆಯೋಗ ಎಷ್ಟು ಸಮರ್ಥವಾಗಿ ಆಯೋಜಿಸುತ್ತದೆ ಎಂದರೆ ಇದನ್ನು ಕಂಡ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೂ ಚುನಾವಣಾ ಆಯೋಗದ ಬಗ್ಗೆ ಹೆಮ್ಮೆ ಪಡುವುದು ಸಹಜವಾಗಿದೆ. ನಮ್ಮ ದೇಶದಲ್ಲಿ ಮತದಾರನಾಗಿ ನೊಂದಾಯಿತರಾಗಿರುವ ಪ್ರತಿಯೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡಲು ಸರ್ವ ಪ್ರಯತ್ನ ಮಾಡುತ್ತಿದೆ.
ಸಮುದ್ರ ಮಟ್ಟದಿಂದ 15 ಸಾವಿರ ಅಡಿ ಎತ್ತರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ನಾವು ಕೇಳಿದಾಗ, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದ ದೂರದ ಪ್ರದೇಶದಲ್ಲೂ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿದಾಗ ಹಾಗೂ ನಮ್ಮಗುಜರಾತಿನ ಗಿರ್ ಅರಣ್ಯದ ವಿಷಯವನ್ನಂತೂ ನೀವು ಕೇಳೇ ಇರುತ್ತೀರಿ. ಅಂಥ ದೂರದ ಪ್ರದೇಶದಲ್ಲ್ಲೂ ಕೇವಲ ಓರ್ವ ಮತದಾರನಿಗೋಸ್ಕರ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಯೋಚಿಸಿ… .. ಕೇವಲ ಓರ್ವ ಮತದಾರನಿಗೋಸ್ಸರ ಎಂದರೆ ನೀವೇ ಊಹಿಸಿಕೊಳ್ಳಿ. ಇಂಥ ವಿಷಯಗಳನ್ನು ಕೇಳಿದಾಗ ಚುನಾವಣಾ ಆಯೋಗದ ಕುರಿತು ಹೆಮ್ಮೆಯೆನಿಸುವುದು ಸಹಜ. ಒಬ್ಬ ಮತದಾರನನ್ನ ಗಮನದಲ್ಲಿಟ್ಟುಕೊಂಡು ಅವನು ತನ್ನ ಮತಚಲಾಯಿಸುವ ಹಕ್ಕಿನಿಂದ ವಂಚಿತನಾಗಬಾರದೆಂದು ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಆ ದೂರದ ಪ್ರದೇಶಕ್ಕೆ ತೆರಳಿ ಮತದಾನದ ವ್ಯವಸ್ಥೆ ಮಾಡುತ್ತದೆ. ಇದೇ ನಮ್ಮ ಗಣರಾಜ್ಯದ ವೈಶಿಷ್ಟ್ಯತೆಯಾಗಿದೆ.
ನಮ್ಮ ಗಣರಾಜ್ಯವನ್ನು ಬಲಿಷ್ಠಗೊಳಿಸಲು ಚುನಾವಣಾ ಆಯೋಗ ಮಾಡುತ್ತಿರುವ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ. ಎಲ್ಲ ರಾಜ್ಯಗಳ ಚುನಾವಣಾ ಆಯೋಗ,ರಕ್ಷಣಾ ಪಡೆ ಮತ್ತು ಇತರ ಎಲ್ಲ ಉದ್ಯೋಗಿಗಳನ್ನೂ ನಾನು ಶ್ಲಾಘಿಸುತ್ತೇನೆ. ಇವರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಲ್ಲದೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುವಂತೆ ಖಾತರಿಪಡಿಸುತ್ತಾರೆ.
ಈ ವರ್ಷ ನಮ್ಮ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ. 21 ನೇ ಶತಮಾನದಲ್ಲಿ ಜನಿಸಿದ ಎಲ್ಲ ಯುವಕರು ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶವನ್ನು ಪ್ರಥಮ ಬಾರಿಗೆ ಪಡೆಯಲಿದ್ದಾರೆ. ಅವರು ದೇಶದ ಜವಾಬ್ದಾರಿಯನ್ನು ಹೊರುವಂಥ ಸಮಯ ಬಂದಿದೆ. ಈಗ ಅವರು ದೇಶದ ನಿರ್ಣಯ ಪ್ರಕ್ರಿಯೆಗಳಲ್ಲಿ ಭಾಗಿಯಾಗಲಿದ್ದಾರೆ. ತಮ್ಮ ಕನಸುಗಳನ್ನು ದೇಶದ ಕನಸುಗಳೊಂದಿಗೆ ಬೆರೆಸುವ ಸಮಯ ಸನ್ನಿಹಿತವಾಗಿದೆ. ತಾವು ಮತದಾನದ ವಯಸ್ಸನ್ನು ತಲುಪಿದ್ದಲ್ಲಿ ಖಂಡಿತ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಯುವಜನತೆಗೆ ನಾನು ಕರೆ ನೀಡುತ್ತಿದ್ದೇನೆ. ದೇಶದಲ್ಲಿ ಮತದಾರನಾಗುವುದು, ಮತದಾನದ ಅಧಿಕಾರ ಪಡೆಯುವುದು ಜೀವನದ ಮಹತ್ವಪೂರ್ಣ ಅಂಶಗಳಲ್ಲಿ ಹಾಗೂ ಮಹತ್ವಪೂರ್ಣ ಹಂತಗಳಲ್ಲಿ ಒಂದಾಗಿದೆ ಎಂಬುದರ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಜೊತೆಗೆ ಮತದಾನ ಮಾಡುವುದು ನನ್ನ ಕರ್ತವ್ಯ – ಎಂಬ ಭಾವನೆ ನಮ್ಮ ಅಂತರಾಳದಲ್ಲಿ ಮಿಡಿಯಬೇಕು. ಜೀವನದಲ್ಲಿ ಯಾವುದೇ ಕಾರಣದಿಂದ ಮತಚಲಾಯಿಸಲು ಆಗದಿದ್ದಲ್ಲಿ ಅದರ ಬಾಧೆ ನಮಗಿರಬೇಕು. ದೇಶದಲ್ಲಿ ಎಂದಿಗೇ ಆಗಲಿ ಎಲ್ಲಿಯೇ ಆಗಲಿ ತಪ್ಪು ನಡೆಯುತ್ತಿದೆ ಎಂದು ತಿಳಿದಲ್ಲಿ ನಮಗೆ ನೋವಾಗಬೇಕು. ಹೌದು ನಾನು ಮತದಾನ ಮಾಡಿರಲಿಲ್ಲ,ಅಂದು ನಾನು ಮತ ಚಲಾಯಿಸಲು ಹೋಗಲಿಲ್ಲ, ಅದರ ಪರಿಣಾಮ ಇಂದು ನನ್ನ ದೇಶ ಅನುಭವಿಸುತ್ತಿದೆ. ಇಂಥ ಜವಾಬ್ದಾರಿಯ ಅನುಭವ ನಮಗಾಗಬೇಕು. ಇದು ನಮ್ಮ ವೃತ್ತಿ ಮತ್ತು ಪ್ರವೃತ್ತಿಯೂ ಆಗಬೇಕು. ಇದು ನಮ್ಮ ನಡವಳಿಕೆಯಾಗಬೇಕು. ನಾವೆಲ್ಲರೂ ಸೇರಿ ವೋಟರ್ ರೆಜಿಸ್ಟ್ರೇಶನ್ ಆಗಲಿ, ಮತದಾನದ ದಿನ ಮತಚಲಾಯಿಸುವುದಾಗಲಿ ಇದೆಲ್ಲದರ ಕುರಿತು ಪ್ರಚಾರ ಕಾರ್ಯ ಕೈಗೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸೋಣ ಎಂದು ನಮ್ಮ ದೇಶದ ಖ್ಯಾತನಾಮರಲ್ಲಿ ನಾನು ಕೇಳಿಕೊಳ್ಳುತ್ತೇನೆ. ಯುವಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುತ್ತಾರೆ ಎಂದು ನಾನು ನಂಬಿದ್ದೇನೆ. ತಮ್ಮ ಸಹಭಾಗಿತ್ವದೊಂದಿಗೆ ನಮ್ಮ ಗಣರಾಜ್ಯಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಾರೆ ಎಂಬ ನಂಬಿಕೆಯಿದೆ.
ನನ್ನ ಪ್ರಿಯ ದೇಶವಾಸಿಗಳೇ,ಭಾರತದ ಈ ಪುಣ್ಯ ಭೂಮಿ ಸಾಕಷ್ಟು ಮಹಾಪುರುಷರಿಗೆ ಜನ್ಮ ನೀಡಿದೆ. ಆ ಮಹಾಪುರುಷರು ಮಾನವೀಯತೆಗಾಗಿ ಅದ್ಭುತವಾದ ಮತ್ತು ಮರೆಯಲಾಗದಂತಹ ಕೆಲಸಗಳನ್ನು ಮಾಡಿದ್ದಾರೆ. ನಮ್ಮ ದೇಶ ಬಹುರತ್ನ ವಸುಂಧರೆ. ಇಂಥ ಮಹಾಪುರುಷರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕೂಡಾ ಒಬ್ಬರು. ಜನವರಿ 23 ಕ್ಕೆ ಇಡೀ ದೇಶವೇ ವಿಶೇಷವಾಗಿ ಇವರ ಜನ್ಮದಿನವನ್ನು ಆಚರಿಸಿತು. ನೇತಾಜಿ ಜನ್ಮಜಯಂತಿಯ ಅಂಗವಾಗಿ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮ ಬಲಿದಾನ ನೀಡಿದ ವೀರ ಪುರುಷರಿಗೆ ಸಮರ್ಪಿತವಾದ ಒಂದು ಸಂಗ್ರಹಾಲಯವನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆಯಿತು. ಸ್ವಾತಂತ್ರ್ಯದ ನಂತರದಿಂದ ಇಲ್ಲಿವರೆಗೆ ಕೆಂಪು ಕೋಟೆಯ ಹಲವಾರು ಕೊಠಡಿಗಳು ಉಪಯೋಗಿಸದೇ ಖಾಲಿಯಾಗಿದ್ದವು ಎಂಬುದು ನಿಮಗೆ ಗೊತ್ತು. ಹೀಗೆ ಖಾಲಿಯಿದ್ದ ಆ ಕೊಠಡಿಗಳನ್ನು ಸುಂದರ ಸಂಗ್ರಹಾಲಯಗಳಾಗಿ ಮಾರ್ಪಡಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಭಾರತೀಯ ಸೇನೆಗೆ ಸಮರ್ಪಿತವಾದ ಸಂಗ್ರಹಾಲಯ: ಯಾದ್ ಎ ಜಲಿಯಾ ಮತ್ತು 1857ರ ಪ್ರಥಮ ಭಾರತೀಯ ಸ್ವತಂತ್ರ ಸಂಗ್ರಾಮದ ನೆನಪುಗಳಿಗೆ ಸಮರ್ಪಿಸಿದ ಸಂಗ್ರಹಾಲಯ. ಈ ಎಲ್ಲ ಸಂಗ್ರಹಾಲಯಗಳ ಪ್ರಾಂಗಣಕ್ಕೆ ‘ಕ್ರಾಂತಿ ಮಂದಿರ’ಎಂದು ಹೆಸರಿಸಿ ದೇಶಕ್ಕೆ ಸಮರ್ಪಿಸಲಾಗಿದೆ. ಈ ಸಂಗ್ರಹಾಲಯದ ಒಂದೊಂದು ಇಟ್ಟಿಗೆಯಲ್ಲೂ ನಮ್ಮ ದೇಶದ ಇತಿಹಾಸದ ಸುಗಂಧ ತುಂಬಿದೆ. ಸಂಗ್ರಹಾಲಯದ ಮೂಲೆ ಮೂಲೆಯಲ್ಲೂ ನಮ್ಮ ದೇಶದ ಸ್ವತಂತ್ರ ಸಂಗ್ರಾಮದಲ್ಲಿ ಹೋರಾಡಿದ ವೀರರ ಕಥೆಯನ್ನು ಹೇಳುವ ವಿಷಯಗಳು ಇತಿಹಾಸದ ಆಳಕ್ಕೆ ತೆರಳುವಂತೆ ನಮ್ಮನ್ನು ಪ್ರೇರೆಪಿಸುತ್ತವೆ. ಇದೇ ಸ್ಥಳದಲ್ಲಿಯೇ ಭಾರತಾಂಬೆಯ ವೀರಪುತ್ರರಾದಂತಹ ಕರ್ನಲ್ ಪ್ರೇಮ್ ಸೆಹೆಗಲ್, ಕರ್ನಲ್ ಗುರುಭಕ್ಷ ಸಿಂಗ್ ದಿಲ್ಲೋನ್ ಮತ್ತು ಮೇಜರ್ ಜನರಲ್ ಶಾ ನವಾಜ್ ಖಾನ್ ಅವರ ಮೇಲೆ ಬ್ರಿಟಿಷ್ ಸರ್ಕಾರ ಮೊಕದ್ದಮೆ ನಡೆಸಿತ್ತು. ನಾನು ಕೆಂಪು ಕೋಟೆಯ ಕ್ರಾಂತಿ ಮಂದಿರ್ನಭಲ್ಲಿ ನೇತಾಜಿಯವರ ನೆನಪುಗಳ ದರ್ಶನಗೈಯ್ಯುತ್ತಿದ್ದಾಗ ನೇತಾಜಿ ಕುಟುಂಬದವರು ಒಂದು ವಿಶೇಷ ಟೋಪಿಯನ್ನು ನನಗೆ ಕೊಡುಗೆಯಾಗಿ ನೀಡಿದರು. ನೇತಾಜಿಯವರು ಆ ಟೋಪಿಯನ್ನು ಯಾವಾಗಲೂ ಧರಿಸುತ್ತಿದ್ದರು. ಅಲ್ಲಿಗೆ ಬರುವ ಜನರೆಲ್ಲರೂ ಆ ಟೋಪಿಯನ್ನು ನೋಡಲಿ ಮತ್ತು ದೇಶಭಕ್ತಿಯ ಪ್ರೇರಣೆ ಪಡೆಯಲಿ ಎಂಬ ಉದ್ದೇಶದಿಂದ ನಾನು ಆ ಟೋಪಿಯನ್ನು ಸಂಗ್ರಹಾಲಯದಲ್ಲೇ ಇರಿಸಿದೆ. ನಮ್ಮ ಯುವ ಜನಾಂಗಕ್ಕೆ ನಮ್ಮ ದೇಶದ ನಾಯಕರ ಶೌರ್ಯ ಮತ್ತು ದೇಶಭಕ್ತಿಯ ಕುರಿತು ಬೇರೆ ಬೇರೆ ರೂಪದಲ್ಲಿ ಮತ್ತೆ ಮತ್ತೆ ಮಾಹಿತಿ ಒದಗಿಸುವ ಅವಶ್ಯಕತೆಯಿದೆ. ಇದೀಗ ಒಂದು ತಿಂಗಳ ಹಿಂದೆ ಡಿಸೆಂಬರ್ 30 ರಂದು ನಾನು ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೋಗಿದ್ದೆ. 75 ವರ್ಷಗಳ ಹಿಂದೆ ನೇತಾಜಿ ಸುಭಾಷ್ ಬೋಸ್ ತ್ರಿವರ್ಣ ಧ್ವಜಾರೋಹಣ ಮಾಡಿದ ಸ್ಥಳದಲ್ಲೇ ಒಂದು ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಲಾಯಿತು. ಇದೇ ರೀತಿ ಸ್ವತಂತ್ರ ಭಾರತದ ಸರ್ಕಾರ ರಚನೆಯ 75 ವರ್ಷ ಪೂರೈಸಿದ ಸಂದರ್ಭದಲ್ಲಿ ಅಕ್ಟೋಬರ್ 2018 ರಲ್ಲಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು ಏಕೆಂದರೆ ಅಗಸ್ಟ್ 15 ಕ್ಕೆ ಅಲ್ಲಿ ಧ್ವಜಾರೋಹಣ ಮಾಡುವ ಸಂಪ್ರದಾಯವಿತ್ತು.
ಸುಭಾಷ್ ಅವರನ್ನು ಒಬ್ಬ ವೀರ ಸೈನಿಕನಾಗಿ ಮತ್ತು ಕುಶಲ ಸಂಘಟನಾಕಾರನ ರೂಪದಲ್ಲಿ ಎಂದಿಗೂ ಸ್ಮರಿಸಲಾಗುವುದು. ಸ್ವಾತಂತ್ರ ಸಂಗ್ರಾಮದಲ್ಲಿ ಮಹತ್ವದ ಪಾತ್ರ ವಹಿಸಿದ ಸೈನಿಕ ಅವರಾಗಿದ್ದರು. “ದಿಲ್ಲಿ ಚಲೋ” , ‘ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುವೆ’ ದಂತಹ ಪುಳಕಿತಗೊಳ್ಳುವ ಘೋಷಣೆಗಳಿಂದ ನೇತಾಜಿ ಎಲ್ಲ ಭಾರತೀಯರ ಮನದಲ್ಲಿ ಮನೆ ಮಾಡಿದ್ದಾರೆ. ನೇತಾಜಿಯವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಬೇಕು ಎಂಬ ಬೇಡಿಕೆ ಬಹಳ ವರ್ಷಗಳಿಂದ ಇತ್ತು. ನಾವು ಈ ಕೆಲಸ ಮಾಡಿ ತೋರಿಸಿದ್ದೇವೆ ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ನೇತಾಜಿಯವರ ಪೂರ್ಣ ಪರಿವಾರ ಪ್ರಧಾನಮಂತ್ರಿ ನಿವಾಸಕ್ಕೆ ಬಂದ ಆ ದಿನ ನನಗೆ ಇಂದಿಗೂ ನೆನಪಿದೆ. ನಾವೆಲ್ಲ ಸೇರಿ ನೇತಾಜಿಯವರ ಕುರಿತು ಹಲವಾರು ವಿಷಯಗಳನ್ನು ಚರ್ಚಿಸಿದೆವು ಮತ್ತು ಅವರಿಗೆ ಶೃದ್ಧಾಂಜಲಿ ಅರ್ಪಿಸಿದೆವು.
ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಸಂಬಂಧಿಸಿದ 26, ಅಲಿಪುರ್ ರಸ್ತೆಯಾಗಿರಬಹುದು, ಸರ್ದಾರ್ ಪಟೇಲ್ ಸಂಗ್ರಹವಾಗಿರಬಹುದು ಅಥವಾ ಕ್ರಾಂತಿ ಮಂದಿರವಾಗಿರಬಹುದು – ಹೀಗೆ ಭಾರತದ ಮಹಾನ್ ನಾಯಕರಿಗೆ ಸಂಬಂಧಿಸಿದ ಹಲವಾರು ಸ್ಥಳಗಳನ್ನು ದಿಲ್ಲಿಯಲ್ಲಿ ಸ್ಥಾಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವೆನಿಸುತ್ತದೆ. ನೀವು ದೆಹಲಿಗೆ ಬಂದರೆ ಖಂಡಿತ ಈ ಸ್ಥಳಗಳಿಗೆ ಭೇಟಿ ನೀಡಿ.
ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾವು ಮನದ ಮಾತಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಚರ್ಚಿಸುತ್ತಿರುವ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನಕ್ಕೆ ಸಂಬಂಧಿಸಿದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಿದ್ದೇನೆ. ರೇಡಿಯೋವನ್ನು ಜನರೊಂದಿಗೆ ಸಂಪರ್ಕ ಹೊಂದುವ ಮಹತ್ವಪೂರ್ಣ ಮಾಧ್ಯಮ ಎಂದು ನಾನು ಭಾವಿಸಿದ್ದೇನೆ. ಇದೇ ರೀತಿ ನೇತಾಜಿಯವರಿಗೂರೇಡಿಯೋದೊಂದಿಗೆ ಬಹಳ ಗಹನವಾದ ಸಂಬಂಧವಿತ್ತು. ಅವರು ಕೂಡಾ ದೇಶದ ಜನತೆಯೊಂದಿಗೆ ಮಾತನಾಡಲು ರೇಡಿಯೋವನ್ನೇ ಆಯ್ಕೆ ಮಾಡಿಕೊಂಡಿದ್ದರು.
1942 ರಲ್ಲಿ ಸುಭಾಷ್ ಅವರು ಆಜಾದ್ ಹಿಂದ್ ರೇಡಿಯೋವನ್ನು ಆರಂಭಿಸಿದ್ದರು. ರೇಡಿಯೋ ಮಾಧ್ಯಮದ ಮೂಲಕ “ಆಜಾದ್ ಹಿಂದ್ ಸೇನೆ” ಸೈನಿಕರು ಮತ್ತು ದೇಶದ ನಾಗರಿಕರೊಂದಿಗೆ ಮಾತನಾಡುತ್ತಿದ್ದರು. ಸುಭಾಷ್ ಅವರು ರೇಡಿಯೋದಲ್ಲಿ ಮಾತು ಆರಂಭಿಸುವ ರೀತಿ ವಿಶಿಷ್ಟವಾಗಿತ್ತು. ಅವರು ಸಂವಾದ ಆರಂಭಿಸಿದಾಗ ಎಲ್ಲಕ್ಕಿಂತ ಮೊದಲು ಹೇಳುತ್ತಿದ್ದುದು– ‘ದಿಸ್ ಈಸ್ ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಪೀಕಿಂಗ್ ಟು ಯು ಓವರ್ ದಿ ಆಜಾದ್ ಹಿಂದ್ ರೇಡಿಯೋ’. ಇದನ್ನು ಕೇಳುತ್ತಿದ್ದಂತೆ ಶ್ರೋತೃಗಳ ಮನದಲ್ಲಿ ಹೊಸ ಹುಮ್ಮಸ್ಸು ಹೊಸ ಸ್ಪೂರ್ತಿಯ ಸಂಚಲನವಾಗುತ್ತಿತ್ತ್ತು.
ರೇಡಿಯೋ ಸ್ಟೇಶನ್ ಆಂಗ್ಲ, ಹಿಂದಿ,ತಮಿಳು, ಬಂಗಾಲಿ, ಮರಾಠಿ,ಪಂಜಾಬಿ, ಪಶ್ತೊ ಮತ್ತು ಉರ್ದು ಭಾಷೆಗಳಲ್ಲಿ ಸಾಪ್ತಾಹಿಕ ವಾರ್ತಾ ಸಂಚಿಕೆಯನ್ನು ಪ್ರಸಾರ ಮಾಡುತ್ತಿತ್ತು ಎಂದು ನನಗೆ ತಿಳಿಸಲಾಗಿದೆ. ಈ ರೇಡಿಯೋ ಸ್ಟೇಶನ್ ಅನ್ನು ನಿಯಂತ್ರಿಸುವಲ್ಲಿ ಗುಜರಾತ್ ನ ಎಂ. ಆರ್. ವ್ಯಾಸ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಆಜಾದ್ ಹಿಂದ್ ರೇಡಿಯೋದಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳು ಸಾಕಷ್ಟು ಜನಪ್ರಿಯತೆಗಳಿಸಿದ್ದವು. ಈ ಕಾರ್ಯಕ್ರಮಗಳಿಂದ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಯೋಧರಿಗೂ ಬಹಳ ಪ್ರೇರಣೆ ಲಭಿಸುತ್ತಿತ್ತು.
ಇದೇ ಕ್ರಾಂತಿ ಮಂದಿರದಲ್ಲಿ ಒಂದು ದೃಶ್ಯಕಲಾ ಸಂಗ್ರಹಾಲಯವನ್ನೂ ಸ್ಥಾಪಿಸಲಾಗಿದೆ. ಇಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಬಹಳ ಆಕರ್ಷಕವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಸಂಗ್ರಹಾಲಯದಲ್ಲಿ ನಾಲ್ಕು ಐತಿಹಾಸಿಕ ಪ್ರದರ್ಶನಗಳಿವೆ ಮತ್ತು ಅವು 3 ಶತಮಾನಗಳ ಹಳೆಯದಾದ 450 ಕ್ಕೂ ಹೆಚ್ಚು ವರ್ಣಚಿತ್ರ ಮತ್ತು ಕಲಾಕೃತಿಗಳನ್ನು ಹೊಂದಿವೆ. ಸಂಗ್ರಹಾಲಯದಲ್ಲಿ ಅಮೃತಾ ಶೇರ್ಗಿಲ್, ರಾಜಾ ರವಿವರ್ಮಾ, ಅವನೀಂದ್ರ ನಾಥ್ ಠಾಗೋರ್, ಗಗನೇಂದ್ರ ನಾಥ್ ಠಾಗೋರ್, ನಂದಲಾಲ್ ಬೋಸ್,ಜಾಮಿನಿ ರಾಯ್ ಮತ್ತು ಸೈಲೋಜ್ ಮುಖರ್ಜಿಯವರಂತಹ ಮಹಾನ್ ಕಲಾವಿದರ ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ನೀವೆಲ್ಲರೂ ಅಲ್ಲಿಗೆ ಹೋಗಿ ಮತ್ತು ಗುರುದೇವ್ ರವಿಂದ್ರ ನಾಥ್ ಟ್ಯಾಗೋರ್ ಅವರ ಕಲಾಕೃತಿಗಳನ್ನು ತಪ್ಪದೇ ವೀಕ್ಷಿಸಿ ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ.
ಇಲ್ಲಿ ಕಲೆಗಳ ಬಗ್ಗೆ ಮಾತನಾಡುತ್ತಿದ್ದರೆ, ನಾನು ನಿಮಗೆ ಗುರುದೇವ ಠಾಗೋರ್ ಅತ್ಯುತ್ತಮ ಕೆಲಸಗಳನ್ನು ತಿಳಿದುಕೊಳ್ಳುವ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಈಗ ಯೋಚಿಸುತ್ತಿರಬಹುದು. ಇದುವರೆಗೂ ನೀವು ಗುರುದೇವ ರವೀಂದ್ರನಾಥ ಠಾಗೋರ್ ಅವರನ್ನು ಒಬ್ಬ ಲೇಖಕ ಮತ್ತು ಸಂಗೀತಕಾರರ ರೂಪದಲ್ಲಿ ತಿಳಿದಿರಬಹುದು. ಆದರೆ ಗುರುದೇವ ಅವರು ಒಬ್ಬ ಚಿತ್ರಕಾರರು ಸಹ ಆಗಿದ್ದರು ಎಂಬುದನ್ನು ನಾನು ಹೇಳಬಯಸುತ್ತೇನೆ. ಅವರು ಬಹಳಷ್ಟು ವಿಷಯಗಳಿಗೆ ಸಂಬಂಧಿಸಿದಂತೆ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಅವರು ಪಶು ಪಕ್ಷಿಗಳ ಚಿತ್ರಗಳನ್ನು ಕೂಡ ರಚಿಸಿದ್ದಾರೆ;ಬಹಳಷ್ಟು ಸುಂದರ ದೃಶ್ಯಾವಳಿಗಳ ಚಿತ್ರಗಳನ್ನೂ ಬಿಡಿಸಿದ್ದಾರೆ. ಮತ್ತು ಅದಷ್ಟೇ ಅಲ್ಲದೆ ಅವರು ವ್ಯಕ್ತಿಗಳ ಪಾತ್ರಗಳನ್ನೂ ಸಹ ಕಲೆಯ ಮಾಧ್ಯಮದಲ್ಲಿ ಕ್ಯಾನ್ವಾಸಿನ ಮೇಲೆ ಮೂಡಿಸುವ ಕೆಲಸ ಮಾಡಿದ್ದಾರೆ. ಬಹಳ ಮುಖ್ಯವಾದ ವಿಷಯವೇನೆಂದರೆ ಗುರುದೇವ ಠಾಗೋರ್ ಅವರು ತಮ್ಮ ಬಹಳಷ್ಟು ಕಲಾಕೃತಿಗಳಿಗೆ ಯಾವುದೇ ಹೆಸರನ್ನೂ ಹಾಕಿಕೊಂಡಿಲ್ಲ. ಚಿತ್ರಕಲೆಯನ್ನು ನೋಡುವವರು ಸ್ವತಃ ಆ ಕಲಾಕೃತಿಯನ್ನು ತಿಳಿದುಕೊಳ್ಳಬೇಕು,ಕಲಾಕೃತಿಯ ಮುಖಾಂತರ ಅವರಿಂದ ಕೊಡಲ್ಪಟ್ಟ ಸಂದೇಶವನ್ನು ತಮ್ಮ ದೃಷ್ಟಿಯಲ್ಲಿ ಅರ್ಥಮಾಡಿಕೊಳ್ಳಬೇಕು ಎನ್ನುವುದು ಅವರ ನಿಲುವಾಗಿತ್ತು. ಅವರ ಕಲಾಕೃತಿಗಳನ್ನು ಯುರೋಪ್ ದೇಶಗಳಲ್ಲಿ, ರಶಿಯಾ ಮತ್ತು ಅಮೇರಿಕಾಗಳಲ್ಲಿ ಸಹ ಪ್ರದರ್ಶಿಸಲಾಗಿದೆ.
ಅವರ ಕಲಾಕೃತಿಗಳನ್ನು ನೋಡಲು ನೀವು ಖಂಡಿತವಾಗಿ ಕ್ರಾಂತಿ ಮಂದಿರಕ್ಕೆ ಹೋಗುತ್ತೀರಿ ಎನ್ನುವ ನಂಬಿಕೆ ನನಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತವು ಸಂತರ ಭೂಮಿಯಾಗಿದೆ. ನಮ್ಮ ಸಂತರು ತಮ್ಮ ವಿಚಾರಗಳು ಹಾಗೂ ಕೆಲಸಗಳ ಮುಖಾಂತರ ಸದ್ಭಾವ, ಸಮಾನತೆ ಮತ್ತು ಸಾಮಾಜಿಕ ಸಬಲೀಕರಣದ ಸಂದೇಶ ನೀಡಿದ್ದಾರೆ. ಸಂತ ರವಿದಾಸರು ಅಂತಹ ಒಬ್ಬ ಸಂತ. ಫೆಬ್ರವರಿ 19 ರಂದು ರವಿದಾಸರ ಜಯಂತಿಯಾಗಿದೆ. ಸಂತ ರವಿದಾಸರ ದ್ವಿಪದಿಗಳು ಬಹಳ ಪ್ರಸಿದ್ಧಿಯಾಗಿವೆ. ಸಂತ ರವಿದಾಸರು ಕೆಲವೇ ಸಾಲುಗಳ ಮುಖಾಂತರ ದೊಡ್ಡ ದೊಡ್ಡ ಸಂದೇಶಗಳನ್ನು ನೀಡುತ್ತಿದ್ದರು.
“ಜಾತಿ ಜನಾಂಗದಲ್ಲಿ ಮುಂದುವರೆಯುತ್ತದೆ,
ಅದುವೇ ಅದರ ಹೆಗ್ಗುರುತು
ರಯಿದಾಸ್, ಮನುಷ್ಯರನ್ನು ಬೆಸೆಯಲು ಸಾಧ್ಯವಾಗದು
ಜಾತಿ ದೂರವಾಗದ ಹೊರತು”
ಎಂದು ಅವರು ಹೇಳಿದ್ದರು.
ಬಾಳೆಯ ದಿಂಡನ್ನು ಸುಲಿದರೆ ಯಾವ ರೀತಿ ಸಿಪ್ಪೆಯ ಕೆಳಗೆ ಸಿಪ್ಪೆ,ಮತ್ತೆ ಸಿಪ್ಪೆಯ ಕೆಳಗೆ ಸಿಪ್ಪೆ ಸಿಗುತ್ತಾ ಹೋಗಿ ಕೊನೆಗೆ ಏನೂ ಸಿಗುವುದಿಲ್ಲವೋ ಅದೇ ರೀತಿಯಾಗಿ ಮನುಷ್ಯರನ್ನೂ ಸಹ ಜಾತಿಗಳಲ್ಲಿ ಹರಿದು ಹಂಚಿ ಮಾನವ ಎನ್ನುವವನು ಇಲ್ಲವೇ ಇಲ್ಲ ಎನ್ನುವಂತೆ ಮಾಡಲಾಗಿದೆ. ಒಂದುವೇಳೆ ನಿಜವಾಗಿಯೂ ಭಗವಂತ ಪ್ರತೀ ಮನುಷ್ಯನಲ್ಲೂ ಇದ್ದಾನಾದರೆ ಅವನನ್ನು ಜಾತಿ,ಪಂಥ ಮತ್ತು ಇತರ ಸಾಮಾಜಿಕ ಬೇಧಗಳ ಅನುಸಾರವಾಗಿ ವಿಂಗಡಿಸುವುದು ಸರಿಯಲ್ಲ ಎಂದು ಅವರು ಹೇಳುತ್ತಿದ್ದರು.
ಪವಿತ್ರ ಭೂಮಿ ವಾರಣಾಸಿಯಲ್ಲಿ ಗುರು ರವಿದಾಸರ ಜನ್ಮವಾಯಿತು. ಸಂತ ರವಿದಾಸರು ತಮ್ಮ ಪೂರ್ತಿ ಜೀವಿತಾವಧಿಯಲ್ಲಿ ತಮ್ಮ ಸಂದೇಶಗಳ ಮೂಲಕ ಶ್ರಮ ಮತ್ತು ಶ್ರಮಿಕರ ಪ್ರಾಮುಖ್ಯತೆಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದರು. ಶ್ರಮದ ಹೆಮ್ಮೆಯ ವಾಸ್ತವಿಕ ಅರ್ಥವನ್ನು ಅವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರೆ ಅದು ತಪ್ಪಾಗಲಾರದು.
“ಮನಸು ಸರಿಯಾಗಿದ್ದರೆ ಹೃದಯದಲ್ಲಿ ಗಂಗೆ ಇರುತ್ತದೆ” ಎಂದು ಅವರು ಹೇಳುತ್ತಿದ್ದರು.
ಇದರ ಅರ್ಥ “ಒಂದುವೇಳೆ ನಿಮ್ಮ ಮನಸ್ಸು ಮತ್ತು ಹೃದಯ ಪಾವಿತ್ರ್ಯತೆಯಿಂದ ಕೂಡಿದ್ದರೆ,ಸಾಕ್ಷಾತ್ ಪರಮೇಶ್ವರನು ನಿಮ್ಮ ಹೃದಯದಲ್ಲಿ ನೆಲೆಸುತ್ತಾನೆ” ಎಂದು. ಸಂತ ರವಿದಾಸರ ಸಂದೇಶಗಳು ಎಲ್ಲಾ ಭಾಗದ, ಎಲ್ಲಾ ವರ್ಗದ ಜನರನ್ನು ಪ್ರಭಾವಿತಗೊಳಿಸಿದೆ. ಚಿತ್ತೋರ್ನವ ಮಹಾರಾಜ ಮತ್ತು ಮಹಾರಾಣಿ, ಮೀರಾಬಾಯಿ ಇವರೆಲ್ಲ ಅವರ ಅನುಯಾಯಿಗಳಾಗಿದ್ದರು.
ನಾನು ಮತ್ತೊಮ್ಮೆ ಸಂತ ರವಿದಾಸರಿಗೆ ನಮಸ್ಕರಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,ನಾನು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಅದರ ಭವಿಷ್ಯದ ಜೊತೆಗೆ ಬೆಸೆದುಕೊಂಡಿರುವ ವಿಷಯಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಕಿರಣ್ ಸಿದರ್ ಅವರು ಮೈಗೌ (mygov.gov.in) ನಲ್ಲಿ ಬರೆದಿದ್ದಾರೆ. ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅಭಿರುಚಿ ಇಟ್ಟುಕೊಂಡು ಸ್ವಲ್ಪ ವಿಭಿನ್ನವಾಗಿ, ಆಕಾಶಕ್ಕಿಂತ ಎತ್ತರಕ್ಕೆ ಹೋಗಿ ಯೋಚಿಸಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ನಾನು ಆಗ್ರಹಿಸಬೇಕು ಎಂದು ಸಹ ಇವರು ನನ್ನಿಂದ ಬಯಸುತ್ತಿದ್ದಾರೆ. ಕಿರಣ್ ಅವರೇ, ನಾನು ತಮ್ಮ ಈ ವಿಚಾರಕ್ಕೆ ಮತ್ತು ವಿಶೇಷವಾಗಿ ನಮ್ಮ ಮಕ್ಕಳಿಗಾಗಿ ಕೊಟ್ಟಿರುವ ಸಂದೇಶಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದೇನೆ.
ಕೆಲವು ದಿನಗಳ ಹಿಂದೆ ನಾನು ಅಹಮದಾಬಾದ್ ಗೆ ಹೋಗಿದ್ದೆ. ನನಗೆ ಅಲ್ಲಿ ಡಾ. ವಿಕ್ರಂ ಸಾರಾಭಾಯಿಯವರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯ ದೊರಕಿತ್ತು. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಡಾ. ವಿಕ್ರಂ ಸಾರಾಭಾಯಿಯವರ ಒಂದು ಮಹತ್ವಪೂರ್ಣವಾದ ಕೊಡುಗೆ ಇದೆ;ದೇಶದ ಅಸಂಖ್ಯಾತ ಯುವ ವಿಜ್ಞಾನಿಗಳ ಕೊಡುಗೆ ಇದೆ. ಇಂದು ನಮ್ಮ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಪಡಿಸಲ್ಪಟ್ಟ ಉಪಗ್ರಹಗಳು ಮತ್ತು ಶಬ್ದ ಸಂವೇದಿ ರಾಕೆಟ್ ಗಳು ಬಾಹ್ಯಾಕಾಶದವರೆಗೆ ತಲುಪುತ್ತಿವೆ. ಇದೇ 24 ರಂದು ನಮ್ಮ ವಿದ್ಯಾರ್ಥಿಗಳಿಂದ ನಿರ್ಮಿಸಲ್ಪಟ್ಟ ‘ಕಲಾಮ್ ಸ್ಯಾಟ್’ ಅನ್ನು ಹಾರಿ ಬಿಡಲಾಗಿದೆ. ಒರಿಸ್ಸಾದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಶಬ್ದ ಸಂವೇದಿ ರಾಕೆಟ್ ಗಳು ಕೂಡ ಹಲವಾರು ದಾಖಲೆಗಳನ್ನು ಮಾಡಿವೆ. ದೇಶವು ಸ್ವತಂತ್ರವಾದಾಗಿನಿಂದ 2014ರವರೆಗೆ ಎಷ್ಟು ಬಾಹ್ಯಾಕಾಶ ಯೋಜನೆಗಳು ಆಗಿವೆಯೋ ಹೆಚ್ಚು ಕಮ್ಮಿ ಅಷ್ಟೇ ಬಾಹ್ಯಾಕಾಶ ಯೋಜನೆಗಳ ಪ್ರಾರಂಭ ಕಳೆದ ನಾಲ್ಕು ವರ್ಷಗಳಲ್ಲಿ ಆಗಿವೆ. ನಾವು ಒಂದೇ ಒಂದು ಬಾಹ್ಯಾಕಾಶ ಯಾನದಲ್ಲಿ ಒಟ್ಟಿಗೆ 104ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವ ದಾಖಲೆ ಮಾಡಿದ್ದೇವೆ. ಸಧ್ಯದಲ್ಲೇ ಚಂದ್ರಯಾನ-2ಅಭಿಯಾನದ ಮೂಲಕ ನಾವು ಚಂದ್ರನ ಮೇಲೆ ಭಾರತದ ಹಾಜರಿಯನ್ನೂ ಹಾಕಲಿದ್ದೇವೆ.
ನಮ್ಮ ದೇಶವು ಬಾಹ್ಯಾಕಾಶ ತಂತ್ರಜ್ಞಾನವನ್ನು ದೇಶದ ರಕ್ಷಣೆಗಾಗಿ ಸಹ ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದೆ. ಚಂಡಮಾರುತವಾಗಿರಲಿ, ರೈಲ್ವೆ ಮತ್ತು ರಸ್ತೆ ಸುರಕ್ಷತೆಯಾಗಿರಲಿ,ಇವೆಲ್ಲವುಗಳಲ್ಲಿಯೂ ಬಾಹ್ಯಾಕಾಶ ತಂತ್ರಜ್ಞಾನದಿಂದ ಸಾಕಷ್ಟು ಸಹಾಯ ಸಿಗುತ್ತಿದೆ. ನಮ್ಮ ಮೀನುಗಾರ ಸೋದರರಿಗೆ ನಾವಿಕ್ ಡಿವೈಸಸ್ (navic devices) ಹಂಚಲಾಗಿದೆ. ಇದು ಅವರ ಸುರಕ್ಷತೆಯ ಜೊತೆ ಜೊತೆಗೆ ಆರ್ಥಿಕ ಉನ್ನತಿ ಸಾಧಿಸುವುದರಲ್ಲಿಯೂ ಸಹಾಯಕವಾಗಿದೆ. ಸರ್ಕಾರಿ ಸೇವೆಗಳ ಬಟವಾಡೆ ಮತ್ತು ಹೊಣೆಗಾರಿಕೆಯನ್ನು ಮತ್ತಷ್ಟು ಉತ್ತಮವಾಗಿಸಲು ನಾವು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದೇವೆ. ಹೌಸಿಂಗ್ ಫೊರ್ ಆಲ್ (housing for all)ಅಂದರೆ “ಎಲ್ಲರಿಗೂ ಮನೆ” ಎನ್ನುವ ಯೋಜನೆಯ ಅಡಿಯಲ್ಲಿ 23ರಾಜ್ಯಗಳ ಸುಮಾರು 40 ಲಕ್ಷ ಮನೆಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಇದರ ಜೊತೆಗೇಮನ್ರೇಗಾ MNREGA ದ ಮೂಲಕ ಮೂರೂವರೆ ಕೋಟಿ ಆಸ್ತಿಗಳಿಗೆ ಸಹ ಜಿಯೋ ಟ್ಯಾಗ್ ಮಾಡಲಾಯಿತು. ಇಂದು ನಮ್ಮ ಉಪಗ್ರಹಗಳು ದೇಶದ ಹೆಚ್ಚುತ್ತಿರುವ ಶಕ್ತಿಯ ಪ್ರತೀಕವಾಗಿವೆ. ವಿಶ್ವದ ಬಹಳಷ್ಟು ದೇಶಗಳ ಜೊತೆ ನಮ್ಮ ಸಂಬಂಧ ಉತ್ತಮಗೊಳಿಸುವಲ್ಲಿ ಇವುಗಳ ಕೊಡುಗೆ ಬಹು ದೊಡ್ಡದು. ದಕ್ಷಿಣ ಏಷ್ಯಾದ ಉಪಗ್ರಹಗಳು ತಮ್ಮ ನೆರೆಯ ಮಿತ್ರ ರಾಷ್ಟ್ರಗಳಿಗೆ ಕೂಡ ವಿಕಾಸದ ಕೊಡುಗೆ ನೀಡುವಲ್ಲಿ ಅನನ್ಯ ರೀತಿಯ ಮಾನ್ಯತೆ ಪಡೆದಿವೆ. ಅತ್ಯಂತ ಸ್ಪರ್ಧಾತ್ಮಕ ಉಡಾವಣಾ ಸೇವೆಗಳ ಮೂಲಕ ಭಾರತವು ಇಂದು ಬರೀ ಅಭಿವೃದ್ಧಿಶೀಲ ರಾಷ್ಟ್ರಗಳಷ್ಟೇ ಅಲ್ಲದೆ, ಅಭಿವೃದ್ಧಿ ಹೊಂದಿದ ದೇಶಗಳ ಉಪಗ್ರಹಗಳನ್ನೂ ಸಹ ಉಡಾವಣೆ ಮಾಡುತ್ತಿದೆ. ಮಕ್ಕಳಿಗೆ ಯಾವಾಗಲೂ ಆಕಾಶ ಮತ್ತು ನಕ್ಷತ್ರ ಬಹಳ ಆಕರ್ಷಣೀಯವಾಗಿರುತ್ತದೆ. ನಮ್ಮ ಬಾಹ್ಯಾಕಾಶ ಯೋಜನೆಗಳು ಮಕ್ಕಳಿಗೆ ದೊಡ್ಡದಾಗಿ ಯೋಚಿಸುವ ಮತ್ತು ಅವರ ಪರಿಧಿಯ ಆಚೆಗೆ ಮುಂದುವರೆಯುವ ಅವಕಾಶ ಒದಗಿಸಿಕೊಡುತ್ತದೆ. ಇದನ್ನು ಇದುವರೆಗೂ ಅಸಂಭವ ಎಂದು ಪರಿಗಣಿಸಲಾಗಿತ್ತು. ನಕ್ಷತ್ರಗಳನ್ನು ವೀಕ್ಷಿಸುವ ಜೊತೆ ಜೊತೆಗೆ ಹೊಸ ಹೊಸ ನಕ್ಷತ್ರಗಳನ್ನು ಶೋಧಿಸುವ ನಿಟ್ಟಿನಲ್ಲಿ ಇದು ನಮ್ಮ ಮಕ್ಕಳಿಗೆ ಪ್ರೇರಣೆ ನೀಡುವ ಒಂದು ದೃಷ್ಟಿಕೋನವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ,ಯಾರು ಆಡುತ್ತಾರೆಯೋ ಅವರು ಅರಳುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಬಾರಿ ಖೇಲೋ ಇಂಡಿಯಾ ದ ಮುಖೇನ ಬಹಳಷ್ಟು ತರುಣ ಮತ್ತು ಯುವ ಆಟಗಾರರು ಅರಳಿ,ನಮ್ಮೆದುರಿಗೆ ಮೂಡಿದರು. ಜನವರಿ ತಿಂಗಳಲ್ಲಿ ಪೂನಾದಲ್ಲಿ ಖೇಲೋ ಇಂಡಿಯಾ ಯೂಥ್ ಗೇಮ್ಸ್ ನಲ್ಲಿ18 ಆಟೋಟಗಳಲ್ಲಿ ಸುಮಾರು 6ಸಾವಿರ ಆಟಗಾರರು ಭಾಗವಹಿಸಿದ್ದರು. ಯಾವಾಗ ನಮ್ಮ ಆಟೋಟಗಳ ಪ್ರಾದೇಶಿಕ ಪರಿಸರ ಗಟ್ಟಿಯಾಗುತ್ತದೆಯೋ ಆಗ ನಮ್ಮ ತಳಹದಿ ಗಟ್ಟಿಯಾಗುತ್ತದೆ,ಹಾಗಾದಾಗ ಮಾತ್ರ ನಮ್ಮ ಯುವಕರು ದೇಶ ಮತ್ತು ವಿಶ್ವದೆಲ್ಲೆಡೆ ತಮ್ಮ ಕಾರ್ಯಕ್ಷಮತೆಯ ಅತ್ಯುತ್ತಮ ಪ್ರದರ್ಶನ ನೀಡಬಲ್ಲರು. ಪ್ರಾದೇಶಿಕ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಸಹ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಈ ಬಾರಿ ಖೇಲೋ ಇಂಡಿಯಾ ದಲ್ಲಿ ಪ್ರತಿ ರಾಜ್ಯದ ಆಟಗಾರರು ತಮ್ಮ ಶಕ್ತ್ಯಾನುಸಾರ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಪದಕ ಗೆದ್ದಂತಹ ಬಹಳಷ್ಟು ಆಟಗಾರರ ಜೀವನವು ಪ್ರಭಾವಶಾಲಿ ಪ್ರೇರಣೆ ನೀಡುವಂತಹುದ್ದಾಗಿದೆ.
ಬಾಕ್ಸಿಂಗಿನ ಯುವ ಆಟಗಾರ ಆಕಾಶ್ ಗೋರ್ಖಾ ಬೆಳ್ಳಿಯ ಪದಕ ಗೆದ್ದರು. ಆಕಾಶ್ ಅವರ ತಂದೆ ರಮೇಶ್ ಅವರು ಪೂನಾದಲ್ಲಿ ಒಂದು ಕಾಂಪ್ಲೆಕ್ಸ್ ನಲ್ಲಿ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆ ಎಂದು ನಾನು ಓದಿದ್ದೆ. ತಮ್ಮ ಪರಿವಾರದವರೊಡನೆ ಅವರು ಒಂದು ಪಾಕಿರ್ಂಗ್ ಶೆಡ್ ನಲ್ಲಿ ವಾಸವಾಗಿದ್ದಾರೆ. ಅದೇ ಮಹಾರಾಷ್ಟ್ರದ ಸತಾರಾದಲ್ಲಿ 21 ರ ವಯೋಮಾನದ ಒಳಗಿನ ಮಹಿಳಾ ಕಬಡ್ಡಿ ಟೀಮಿನಲ್ಲಿ ಕ್ಯಾಪ್ಟನ್ ಸೋನಾಲಿ ಹೆಳವಿ ಇದ್ದಾರೆ. ಅವರು ಅತಿ ಕಡಿಮೆ ವಯಸ್ಸಿನಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡರು, ಅವರ ಸೋದರ ಮತ್ತು ತಾಯಿ ಸೋನಾಲಿ ಅವರ ಕೌಶಲ್ಯತೆಯನ್ನು ಪೋಷಿಸಿದರು. ಕಬಡ್ಡಿಯಂತಹ ಆಟದಲ್ಲಿ ಹೆಣ್ಣುಮಕ್ಕಳಿಗೆ ಅಷ್ಟೊಂದು ಉತ್ತೇಜನ ಸಿಗುವುದಿಲ್ಲ ಎನ್ನುವುದನ್ನು ಹೆಚ್ಚಾಗಿ ಗಮನಿಸಿರುತ್ತೇವೆ. ಹಾಗಿದ್ದರೂ ಸಹ ಸೋನಾಲಿ ಅವರು ಕಬಡ್ಡಿಯನ್ನು ಆರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದರು. ಆಸನ್ಸೋ ಲ್ ನ 10 ವರ್ಷದ ಅಭಿನವ್ ಶಾ ಖೇಲೋ ಇಂಡಿಯಾ ಯೂಥ್ ಗೇಮ್ಸ್ ನ್ನು ಪದಕ ವಿಜೇತರಲ್ಲಿ ಅತ್ಯಂತ ಕಿರಿಯ ವಯಸ್ಸಿನವರು. ಕರ್ನಾಟಕದ ಒಬ್ಬ ರೈತನ ಮಗಳು ಅಕ್ಷತಾ ಬಾಸವಾಣಿ ಕಮತಿ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಅವರು ತಮ್ಮ ಗೆಲುವಿನ ಶ್ರೇಯಸ್ಸನ್ನು ತಮ್ಮ ತಂದೆಗೆ ಅರ್ಪಿಸಿದರು. ಅವರ ತಂದೆ ಬೆಳಗಾವಿಯಲ್ಲಿ ಒಬ್ಬ ರೈತನಾಗಿದ್ದಾರೆ. ಯಾವಾಗ ನಾವು ಭಾರತದ ನಿರ್ಮಾಣದ ಮಾತನಾಡುತ್ತಿದ್ದೇವೆಯೋ ಅದು ಯುವಶಕ್ತಿಯ ಸಂಕಲ್ಪದ ನವಭಾರತವಾಗಿದೆ. ನವ ಭಾರತದ ನಿರ್ಮಾಣದಲ್ಲಿ ಬರೀ ದೊಡ್ಡ ಪಟ್ಟಣಗಳ ಜನರ ಕೊಡುಗೆ ಮಾತ್ರವಲ್ಲ; ಸಣ್ಣ ಪಟ್ಟಣಗಳು,ಹಳ್ಳಿಗಳು, ಹೋಬಳಿಗಳಿಂದ ಬಂದ ಯುವಕರು, ಮಕ್ಕಳು, ಯುವ ಕ್ರೀಡಾ ಪ್ರತಿಭೆಗಳು – ಇವರುಗಳ ಕೊಡುಗೆಯೂ ಬಹಳ ದೊಡ್ಡದಾಗಿದೆ ಎಂದು ಖೇಲೋ ಇಂಡಿಯಾದ ಈ ಕಥೆಗಳು ಹೇಳುತ್ತಿವೆ.
ನನ್ನ ಪ್ರೀತಿಯ ದೇಶವಾಸಿಗಳೇ,ನೀವು ಬಹಳಷ್ಟು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿರಬಹುದು. ಆದರೆ ನೀವು ಶೌಚಾಲಯವನ್ನು ಹೊಳೆಯುವಂತೆ ಮಾಡುವ ಸ್ಪರ್ಧೆಯ ಬಗ್ಗೆ ಕೇಳಿದ್ದೀರಾ? ಅರೇ,, ಸುಮಾರು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಈ ವಿಭಿನ್ನ ಸ್ಪರ್ಧೆಯಲ್ಲಿ 50 ಲಕ್ಷಕ್ಕಿಂತಲೂ ಅಧಿಕ ಶೌಚಾಲಯಗಳು ಭಾಗವಹಿಸುತ್ತಿವೆ ಕೂಡ. ಈ ವಿಭಿನ್ನ ಸ್ಪರ್ಧೆಯ ಹೆಸರು “ಸ್ವಚ್ಚ ಸುಂದರ ಶೌಚಾಲಯ”. ಜನರು ತಮ್ಮ ಶೌಚಾಲಯಗಳನ್ನು ಸ್ವಚ್ಚವಾಗಿರಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಸುಣ್ಣ ಬಣ್ಣ ಬಳಿದು ಕೆಲವು ಪೈಂಟಿಂಗ್ ಗಳನ್ನು ಹಾಕಿ ಸುಂದರವಾಗಿ ಕಾಣುವಂತೆಯೂ ಸಹ ಮಾಡುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್ನಿಂ ದ ಕಾಮರೂಪದವರೆಗಿನ “ಸ್ವಚ್ಚ ಸುಂದರ ಶೌಚಾಲಯಗಳ” ಬಹಳಷ್ಟು ಫೋಟೋಗಳು ನಿಮಗೆ ಸಾಮಾಜಿಕ ಮಾಧ್ಯಮದಲ್ಲಿ ಸಹ ನೋಡಲು ಸಿಗುತ್ತಿವೆ. ನಾನು ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಮತ್ತು ಮುಖ್ಯಸ್ಥರನ್ನು ತಮ್ಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನದ ನೇತೃತ್ವವನ್ನು ವಹಿಸಿಕೊಳ್ಳಲು ಆಹ್ವಾನಿಸುತ್ತಿದ್ದೇನೆ. ನೀವು “ಸ್ವಚ್ಚ ಸುಂದರ ಶೌಚಾಲಯ”ದ ಫೋಟೋಗಳನ್ನು #MylzzatGhar ನ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವಶ್ಯವಾಗಿ ಹಂಚಿಕೊಳ್ಳಿ.
ಸ್ನೇಹಿತರೇ, ಅಕ್ಟೋಬರ್ 2, 2014ರಂದು ನಾವು ನಮ್ಮ ದೇಶವನ್ನು ಸ್ವಚ್ಚಗೊಳಿಸುವ ಮತ್ತು ಬಯಲು ಶೌಚದಿಂದ ಮುಕ್ತಗೊಳಿಸುವ ಸಲುವಾಗಿ, ಒಟ್ಟಿಗೆ ಸೇರಿ ಒಂದು ಅವಿಸ್ಮರಣೀಯ ಯಾತ್ರೆಯನ್ನು ಪ್ರಾರಂಭಿಸಿದ್ದೆವು. ಪ್ರತಿಯೊಬ್ಬ ಪ್ರಜೆಯ ಸಹಯೋಗದಿಂದ ಇಂದು ಅಕ್ಟೋಬರ್ 2, 2019 ಕ್ಕೆ ಸಾಕಷ್ಟು ಮುಂಚಿತವಾಗಿಯೇ ಭಾರತವು ಬಯಲು ಶೌಚ ಮುಕ್ತವಾಗುವತ್ತ ಮಂಚೂಣಿಯಲ್ಲಿದೆ, ಇದರಿಂದ ಬಾಪೂರವರಿಗೆ ಅವರ 150 ನೇ ಜನ್ಮದಿನದಂದು ನಿಜವಾದ ಶ್ರದ್ಧಾಂಜಲಿ ಸಲ್ಲಿಸಬಹುದು.
ಸ್ವಚ್ಚ ಭಾರತದ ಈ ಅವಿಸ್ಮರಣೀಯ ಯಾತ್ರೆಯಲ್ಲಿ ಮನದ ಮಾತು ಕಾರ್ಯಕ್ರಮದ ಕೇಳುಗರ ಕೊಡುಗೆ ಸಹ ಸಾಕಷ್ಟಿದೆ. ಆದ್ದರಿಂದ, 5 ಲಕ್ಷ50 ಸಾವಿರಕ್ಕೂ ಅಧಿಕ ಹಳ್ಳಿಗಳು ಮತ್ತು 600 ಜಿಲ್ಲೆಗಳು ಸ್ವಯಂ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ; ಗ್ರಾಮೀಣ ಭಾರತದಲ್ಲಿ ಸ್ವಚ್ಚತೆಯ ವ್ಯಾಪ್ತಿ ಶೇಕಡಾ 98 ನ್ನು ಮೀರಿದೆ ಮತ್ತು ಸುಮಾರು 9 ಕೋಟಿ ಪರಿವಾರಗಳಿಗೆ ಶೌಚಾಲಯದ ಅನುಕೂಲ ದೊರೆಯುವಂತೆ ಮಾಡಲಾಗಿದೆ ಎನ್ನುವ ಮಾತನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
ನನ್ನ ಪುಟಾಣಿ ಸ್ನೇಹಿತರೇ,ಪರೀಕ್ಷೆಯ ದಿನಗಳು ಬರುತ್ತಿವೆ. ನಾನು ಪರೀಕ್ಷೆಗಳು ಮತ್ತು ಎಕ್ಸಾಮ್ ವಾರಿಯರ್ಸ್ ಇವುಗಳ ಬಗ್ಗೆ ಮಾತನಾಡಬೇಕು ಎಂದು ಹಿಮಾಚಲ ಪ್ರದೇಶದ ನಿವಾಸಿ ಅನ್ಶುಲ್ ಶರ್ಮ ಅವರು ಮೈಗೌ (mygov.gov.in) ನಲ್ಲಿ ಬರೆದಿದ್ದಾರೆ. ಅನ್ಶುಲ್ ಅವರೇ, ಈ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ ನಿಮಗೆ ಧನ್ಯವಾದ. ಹೌದು,ಬಹಳಷ್ಟು ಪರಿವಾರಗಳಿಗೆ ವರ್ಷದ ಮೊದಲಾರ್ಧ ಪರೀಕ್ಷಾ ಸಮಯ ಆಗಿರುತ್ತದೆ. ವಿದ್ಯಾರ್ಥಿ, ಅವರ ತಂದೆ ತಾಯಿಯರಿಂದ ಶಿಕ್ಷಕರವರೆಗೆ ಎಲ್ಲಾ ಜನರೂ ಪರೀಕ್ಷೆಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು, ಅವರ ತಂದೆ ತಾಯಂದಿರು ಮತ್ತು ಶಿಕ್ಷಕರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತಿದ್ದೇನೆ. ಈ ವಿಷಯದ ಬಗ್ಗೆ ಇಂದು ಮನದ ಮಾತಿನ ಈ ಕಾರ್ಯಕ್ರಮದಲ್ಲಿ ಚರ್ಚಿಸಲು ಖಂಡಿತವಾಗಿಯೂ ಇಚ್ಚಿಸಿದ್ದೆ, ಆದರೆ ಕೇವಲ 2 ದಿನಗಳ ನಂತರ ಜನವರಿ29 ರಂದು ಬೆಳಗ್ಗೆ 11 ಘಂಟೆಗೆ“ಪರೀಕ್ಷಾ ಪೆ ಚರ್ಚಾ” ಎನ್ನುವ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ವಿದ್ಯಾರ್ಥಿಗಳ ಜೊತೆ ನಾನು ಮಾತುಕತೆ ನಡೆಸಲಿದ್ದೇನೆ ಎನ್ನುವುದನ್ನು ತಿಳಿದು ನಿಮಗೆ ಸಂತೋಷವಾಗಬಹುದು. ಈ ಬಾರಿ ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು ಹಾಗೂ ಶಿಕ್ಷಕರು ಸಹ ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಮತ್ತು ಈ ಬಾರಿ ಬೇರೆ ದೇಶದ ಬಹಳಷ್ಟು ವಿದ್ಯಾರ್ಥಿಗಳೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಪರೀಕ್ಷೆಯ ಬಗೆಗಿನ ಚರ್ಚೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ಎಲ್ಲ ವಿಷಯಗಳೂ,ವಿಶೇಷವಾಗಿ ಒತ್ತಡ ರಹಿತ ಪರೀಕ್ಷೆಯ ಬಗ್ಗೆ ನಮ್ಮ ಯುವ ಸ್ನೇಹಿತರೊಂದಿಗೆ ಬಹಳಷ್ಟು ಮಾತನಾಡುತ್ತೇನೆ.
ಇದಕ್ಕಾಗಿಯೇ ನಾನು ಜನರನ್ನು ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಳುಹಿಸಲು ಕೋರಿಕೊಂಡಿದ್ದೆ. ಮೈಗೌ (mygov.gov.in) ನಲ್ಲಿ ಇದರ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಲು ನನಗೆ ಬಹಳ ಸಂತೋಷವಾಗುತ್ತಿದೆ. ಅವುಗಳಲ್ಲಿ ಕೆಲವು ವಿಚಾರಗಳು ಮತ್ತು ಸಲಹೆಗಳನ್ನು ನಾನು ಅವಶ್ಯಕವಾಗಿ ಟೌನ್ ಹಾಲ್ ಕಾರ್ಯಕ್ರಮದಲ್ಲಿ ನಿಮ್ಮ ಮುಂದೆ ಇಡುತ್ತೇನೆ. ತಪ್ಪದೆ ನೀವು ನಿಮ್ಮನ್ನು ಈ ಕಾರ್ಯಕ್ರಮದ ಭಾಗವಾಗಿಸಿಕೊಳ್ಳಿ. ಸಾಮಾಜಿಕ ಮಾಧ್ಯಮಗಳು ಮತ್ತು ನಮೋ ಆಪ್ ಮೂಲಕ ನೀವು ಇದರ ನೇರ ಪ್ರಸಾರವನ್ನು ಸಹ ನೋಡಬಹುದು.
ನನ್ನ ಪ್ರೀತಿಯ ದೇಶವಾಸಿಗಳೇ,ಜನವರಿ 30ರಂದು ಪೂಜ್ಯ ಬಾಪೂರವರ ಪುಣ್ಯತಿಥಿ. 11ಘಂಟೆಗೆ ಇಡೀ ದೇಶವು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತದೆ. ನಾವೂ ಸಹ ಎಲ್ಲಿಯೇ ಇದ್ದರೂ 2 ನಿಮಿಷ ಹುತಾತ್ಮರಿಗೆ ಅವಶ್ಯವಾಗಿ ಶ್ರದ್ಧಾಂಜಲಿ ಸಲ್ಲಿಸೋಣ, ಪೂಜ್ಯ ಬಾಪೂರವರ ಪುಣ್ಯಸ್ಮರಣೆಯನ್ನು ಮಾಡೋಣ. ಪೂಜ್ಯ ಬಾಪೂರವರ ಕನಸುಗಳನ್ನು ನನಸು ಮಾಡುವುದು, ನವ ಭಾರತದ ನಿರ್ಮಾಣ ಮಾಡುವುದು,ನಾಗರೀಕರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸುವುದು – ಈ ಸಂಕಲ್ಪದೊಂದಿಗೆ ಬನ್ನಿ, ನಾವು ಮುಂದೆ ನಡೆಯೋಣ. 2019 ರ ಈ ಪಯಣವನ್ನು ಸಫಲತಾಪೂರ್ವಕವಾಗಿ ಮುಂದುವರೆಸೋಣ.
ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು, ಅನಂತಾನಂತ ಧನ್ಯವಾದಗಳು.
शिवकुमार स्वामी जी ने अपना सम्पूर्ण जीवन समाज-सेवा में समर्पित कर दिया: PM pic.twitter.com/U0byU9M5TS
— PMO India (@PMOIndia) January 27, 2019
हमारे देश में एक बहुत ही महत्वपूर्ण संस्था है, जो हमारे लोकतंत्र का तो अभिन्न अंग है ही और हमारे गणतंत्र से भी पुरानी है: PM pic.twitter.com/SlcdL30vJR
— PMO India (@PMOIndia) January 27, 2019
इस साल हमारे देश में लोकसभा के चुनाव होंगे, यह पहला अवसर होगा जहाँ 21वीं सदी में जन्मे युवा लोकसभा चुनावों में अपने मत का उपयोग करेंगे : PM#MannKiBaat pic.twitter.com/H7At3eVcf7
— PMO India (@PMOIndia) January 27, 2019
भारत की इस महान धरती ने कई सारे महापुरुषों को जन्म दिया है और उन महापुरुषों ने मानवता के लिए कुछ अद्भुत, अविस्मरणीय कार्य किये हैं: PM#MannKiBaat pic.twitter.com/wNP8vynuGi
— PMO India (@PMOIndia) January 27, 2019
मुझे नेताजी के परिवार के सदस्यों ने एक बहुत ही ख़ास कैप, टोपी भेंट की |
— PMO India (@PMOIndia) January 27, 2019
कभी नेताजी उसी टोपी को पहना करते थे: PM#MannKiBaat pic.twitter.com/cohsMuafMZ
अक्टूबर 2018 में लाल किले पर जब तिरंगा फहराया गया तो सबको आश्चर्य हुआ: PM#MannKiBaat pic.twitter.com/lkumZ4xbDG
— PMO India (@PMOIndia) January 27, 2019
मैंने हमेशा से रेडियो को लोगों के साथ जुड़ने का एक महत्वपूर्ण माध्यम माना है उसी तरह नेताजी का भी रेडियो के साथ काफी गहरा नाता था और उन्होंने भी देशवासियों से संवाद करने के लिए रेडियो को चुना था : PM#MannKiBaat pic.twitter.com/9GcIHqksZW
— PMO India (@PMOIndia) January 27, 2019
आपने अभी तक गुरुदेव रबीन्द्रनाथ टैगोर को एक लेखक और एक संगीतकार के रूप में जाना होगा | लेकिन मैं बताना चाहूँगा कि गुरुदेव एक चित्रकार भी थे: PM#MannKiBaat pic.twitter.com/dK4D9O6JsJ
— PMO India (@PMOIndia) January 27, 2019
हमारे संतों ने अपने विचारों और कार्यों के माध्यम से सद्भाव, समानता और सामाजिक सशक्तिकरण का सन्देश दिया है | ऐसे ही एक संत थे - संत रविदास: PM#MannKiBaat pic.twitter.com/lkBgxavdQm
— PMO India (@PMOIndia) January 27, 2019
कुछ दिन पहले, मैं अहमदाबाद में था, जहाँ मुझे डॉक्टर विक्रम साराभाई की प्रतिमा के अनावरण का सौभाग्य मिला: PM#MannKiBaat pic.twitter.com/g2SIF7Oa0Q
— PMO India (@PMOIndia) January 27, 2019
देश आज़ाद होने से लेकर 2014 तक जितने Space Mission हुए हैं, लगभग उतने ही Space Mission की शुरुआत बीते चार वर्षों में हुई हैं: PM#MannKiBaat pic.twitter.com/Jr0FrYFGQc
— PMO India (@PMOIndia) January 27, 2019
बच्चों के लिए आसमान और सितारे हमेशा बड़े आकर्षक होते हैं |
— PMO India (@PMOIndia) January 27, 2019
हमारा Space Programme बच्चों को बड़ा सोचने और उन सीमाओं से आगे बढ़ने का अवसर देता है, जो अब तक असंभव माने जाते थे: PM#MannKiBaat pic.twitter.com/wbBW863tbs
जब हमारा sports का local ecosystem मजबूत होगा यानी जब हमारा base मजबूत होगा तब ही हमारे युवा देश और दुनिया भर में अपनी क्षमता का सर्वोत्तम प्रदर्शन कर पाएंगे: PM#MannKiBaat pic.twitter.com/jeYRGWXWa6
— PMO India (@PMOIndia) January 27, 2019
आपने कई सारे प्रतिष्ठित ब्यूटी contest के बारे में सुना होगा | पर क्या आपने toilet चमकाने के कॉन्टेस्ट के बारे में सुना है ?: PM#MannKiBaat pic.twitter.com/KJWo1a2erx
— PMO India (@PMOIndia) January 27, 2019