Quoteಭಾರತ-ಯು.ಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಕಳೆದ ನಾಲ್ಕು ವರ್ಷಗಳ ಪ್ರಗತಿಯನ್ನು ಅವರು ಚರ್ಚಿಸಿದರು
Quoteಅಧ್ಯಕ್ಷರಾದ ಶ್ರೀ ಬಿಡೆನ್ ಅವರೊಂದಿಗಿನ ವಿವಿಧ ಸಭೆಗಳನ್ನು, ಸಂವಾದಗಳನ್ನು ಮತ್ತು ಭೇಟಿಗಳನ್ನು ಪ್ರಧಾನಮಂತ್ರಿಯವರು
Quoteನೆನಪಿಸಿಕೊಂಡರು ಮತ್ತು ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆಗಳನ್ನು ಶ್ಲಾಘಿಸಿದರು
Quoteಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಹಸ್ತಾಂತರಿಸಿದ ಅಧ್ಯಕ್ಷರಾದ ಶ್ರೀ ಬಿಡೆನ್ ಅವರ ಪತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು
Quoteವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಹಕಾರವನ್ನು ಇನ್ನಷ್ಟು ಉತ್ತಮಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು

ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 

ಕಳೆದ ನಾಲ್ಕು ವರ್ಷಗಳಲ್ಲಿ, ವಿಶೇಷವಾಗಿ ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ಶುದ್ಧ ಶಕ್ತಿ, ಅರೆವಾಹಕಗಳು ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯು.ಎಸ್. ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಇದು ಬಹಳಷ್ಟು ಸಕಾರಾತ್ಮಕ ಹಾಗೂ ಧನಾತ್ಮಕವಾಗಿದೆ ಎಂದು ಇಬ್ಬರೂ ನಾಯಕರು ಪರಸ್ಪರ ಒಪ್ಪಿಕೊಂಡರು. 

 

|

ಕ್ವಾಡ್ ಲೀಡರ್ಸ್ ಶೃಂಗಸಭೆಗಾಗಿ ಸೆಪ್ಟೆಂಬರ್ 2024ರಲ್ಲಿ ಯು.ಎಸ್. ಗೆ ನೀಡಿರುವ ಭೇಟಿ ಸೇರಿದಂತೆ ಅಧ್ಯಕ್ಷ ಶ್ರೀ ಬಿಡೆನ್ ಅವರೊಂದಿಗಿನ ವಿವಿಧ ಸಭೆಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಭಾರತ-ಯು.ಎಸ್. ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಅಧ್ಯಕ್ಷ ಶ್ರೀ ಬಿಡೆನ್ ಅವರ ಕೊಡುಗೆಗಳನ್ನು ಶ್ಲಾಘಿಸಿದರು.

ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್.ಎಸ್.ಎ) ಶ್ರೀ ಜೇಕ್ ಸುಲ್ಲಿವಾನ್ ಅವರು ಹಸ್ತಾಂತರಿಸಿದ ಅಧ್ಯಕ್ಷರಾದ ಶ್ರೀ ಬಿಡೆನ್ ಅವರ ಪತ್ರವನ್ನು ಪ್ರಧಾನಮಂತ್ರಿ ಬಹಳಷ್ಟು ಶ್ಲಾಘಿಸಿದರು.

ಉಭಯ ದೇಶಗಳ ಜನರ ಅನುಕೂಲಕ್ಕಾಗಿ ಮತ್ತು ಜಾಗತಿಕ ಒಳಿತಿಗಾಗಿ ಎರಡು ಪ್ರಜಾಪ್ರಭುತ್ವಗಳ ನಡುವೆ ನಿಕಟ ಸಹಕಾರವನ್ನು ಆಳವಾಗಿ ಮುಂದುವರಿಸುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಅಧ್ಯಕ್ಷರಾದ ಶ್ರೀ ಬಿಡೆನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬಿಡೆನ್ ಅವರಿಗೆ ಶುಭ ಹಾರೈಕೆಯನ್ನು ಕೋರಿದರು.

 

  • Prasanth reddi March 21, 2025

    జై బీజేపీ జై మోడీజీ 🪷🪷🙏
  • Preetam Gupta Raja March 19, 2025

    जय श्री राम
  • கார்த்திக் March 13, 2025

    Jai Shree Ram🚩Jai Shree Ram🚩Jai Shree Ram🙏🏼Jai Shree Ram🚩Jai Shree Ram🚩Jai Shree Ram🚩Jai Shree Ram🚩Jai Shree Ram🚩Jai Shree Ram🚩Jai Shree Ram🚩Jai Shree Ram🚩Jai Shree Ram🚩
  • kranthi modi February 22, 2025

    jai sri ram 🚩
  • Vivek Kumar Gupta February 15, 2025

    नमो ..🙏🙏🙏🙏🙏
  • Vivek Kumar Gupta February 15, 2025

    जय जयश्रीराम ..............🙏🙏🙏🙏🙏
  • Bhushan Vilasrao Dandade February 10, 2025

    जय हिंद
  • Dr Mukesh Ludanan February 08, 2025

    Jai ho
  • Dr Swapna Verma February 06, 2025

    jay shree Ram
  • Bikranta mahakur February 05, 2025

    🪿
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
70 million farmers now have digital IDs linked to land records

Media Coverage

70 million farmers now have digital IDs linked to land records
NM on the go

Nm on the go

Always be the first to hear from the PM. Get the App Now!
...
Madhya Pradesh Chief Minister meets PM Modi
August 18, 2025