ಶ್ರೀಲಂಕಾದ ಅಧ್ಯಕ್ಷ ಶ್ರೀ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು.ಶ್ರೀಲಂಕಾದ ಅಧ್ಯಕ್ಷ ಮತ್ತು ಮಾಜಿ ರಕ್ಷಣಾ ಕಾಯದರ್ಶಿ ಅವರ ಹತ್ಯೆಯ ಸಂಚು ನಡೆದಿದೆಯೆಂದು ಹೇಳಲಾಗುತ್ತಿರುವ ಆರೋಪದಲ್ಲಿ, ಕೆಲವು ಮಾದ್ಯಮಗಳು ವರದಿ ಮಾಡಿರುವ ಭಾರತದ ಪಾಲ್ಗೊಳ್ಳುವಿಕೆಯ ಶಂಕೆಯನ್ನು ಶ್ರೀಲಂಕಾದ ಅಧ್ಯಕ್ಷ ಶ್ರೀ ಮೈತ್ರಿಪಾಲ ಸಿರಿಸೇನಾ ಅವರು ಸ್ಪಷ್ಟವಾಗಿ ತಳ್ಳಿಹಾಕಿದರು.
ಈ ಕಿಡಿಗೇಡಿತನದ ಮತ್ತು ದುರುದ್ಧೇಶಪೂರಿತ ವರದಿಗಳು ಸಂಪೂರ್ಣವಾಗಿ ಆಧಾರ ರಹಿತ ಮತ್ತು ಸುಳ್ಳು ಸುದ್ದಿಗಳಾಗಿವೆ, ಅಲ್ಲದೆ ಎರಡೂ ನಾಯಕರ ನಡುವೆ ಪರಸ್ಪರ ತಪ್ಪುಭಾವನೆ ಹುಟ್ಟಿಸುವ ಉದ್ಧೇಶ ಹೊಂದಿವೆ.ಇದು ಎರಡೂ ಮಿತ್ರ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧಗಳನ್ನು ಹಾನಿಮಾಡುವ ಪ್ರಯತ್ನವಾಗಿದೆ ಎಂದು ಶ್ರೀಲಂಕಾದ ಅಧ್ಯಕ್ಷರು ಹೇಳಿದರು.
ಪ್ರಕರಣದ ಕುರಿತು ಪ್ರಧಾನಮಂತ್ರಿ ಅವರು ವಯಕ್ತಿಕವಾಗಿ ಕೈಗೊಂಡ ಕ್ಷಿಪ್ರ ಕ್ರಮಗಳು ಮತ್ತು ಶ್ರೀಲಂಕಾ ಸರಕಾರ ಈ ವರದಿಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಿದ ರೀತಿಯನ್ನು ಶ್ರೀಲಂಕಾದ ಅಧ್ಯಕ್ಷರು ಪ್ರಶಂಸಿಸಿದರು. ಈ ಕುರಿತಾಗಿ ಇಂದು ಮುಂಜಾನೆ, ಭಾರತದ ಶ್ರೀಲಂಕಾ ಹೈಕಮಿಷನರ್ ಜತೆ ಮಾತುಕತೆ ನಡೆಸಿದ್ದನ್ನೂ ಶ್ರೀಲಂಕಾದ ಅಧ್ಯಕ್ಷರು ನೆನಪಿಸಿಕೊಂಡರು.
“ಪ್ರಧಾನಮಂತ್ರಿ ಅವರು ಶ್ರೀಲಂಕಾದ ನಿಜವಾದ ಸ್ನೇಹಿತರಾಗಿದ್ದಾರೆ ಮತ್ತು ವಯುಕ್ತಿಕವಾಗಿ ನನ್ನ ಆಪ್ತ ಗೆಳೆಯರಾಗಿದ್ದಾರೆ” ಎಂದು ಶ್ರೀಲಂಕಾದ ಅಧ್ಯಕ್ಷರು ಹೇಳಿದರು. “ಭಾರತ ಮತ್ತು ಶ್ರೀಲಂಕಾ ನಡುವೆ ಪರಸ್ಪರ ಪ್ರಯೋಜನಕಾರಿ ಸಂಬಂಧಗಳಿಗೆ ನಾನು ಬಹಳಷ್ಟು ಮಹತ್ವ ನೀಡುತ್ತೇನೆ ಮತ್ತು ಇವುಗಳನ್ನು ಇನ್ನೂ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ಸ್ಥಿರವಾಗಿ ಕೆಲಸ ಮಾಡುತ್ತೇನೆ” ಎಂದು ಶ್ರೀಲಂಕಾದ ಅಧ್ಯಕ್ಷರು ಹೇಳಿದರು.
ಸಕಾಲಿಕ ಕ್ರಮ ಕೈಗೊಳ್ಳುವ ಮೂಲಕ ದುರುದ್ಧೇಶಪೂರಕ ದ್ವೇಷಪೂರ್ಣ ವರದಿಗಳನ್ನು ಶ್ರೀಲಂಕಾದ ಅಧ್ಯಕ್ಷರು ಮತ್ತು ಅವರ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ, ಅಲ್ಲದೆ, ಸಾರ್ವಜನಿಕವಾಗಿ ಈ ವಿಷಯದ ಕುರಿತಾಗಿ ಸ್ಪಷ್ಟೀಕರಣ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ, ಭಾರತ ತನ್ನ “ನೆರೆಹೊರೆಯವರು ಮೊದಲು” ನೀತಿಗೆ ಸದಾ ಪ್ರಾಧಾನ್ಯತೆ ನೀಡುತ್ತದೆ ಹಾಗೂ ಇದು ಭಾರತ ಸರಕಾರದ ಪ್ರಾಶಸ್ತ್ಯ ಕೂಡಾ ಆಗಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಸದೃಢವಾದ ಸರ್ವತೋಮುಖ ಸಹಕಾರವನ್ನು ವೃದ್ಧಿಸುವ ವಯುಕ್ತಿಕ ನಿಲುವನ್ನು ತಾವು ಹೊಂದಿರುವುದಾಗಿ ಪ್ರಧಾನಮಂತ್ರಿ ಹೇಳಿದರು.