ಧೈರ್ಯದಿಂದ ಆಡಳಿತ ನಡೆಸಲು ನಮಗೆ ಪ್ರೇರಣೆ ನೀಡುವಂತಹ ಗುರಿ ಮತ್ತು ಶಕ್ತಿಯನ್ನು ನಾವು ಹೊಂದಿರಬೇಕು ಎಂಬ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೇಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ.

ಆತ್ಮ ನಿರ್ಭರ್ ಭಾರತದಲ್ಲಿ ನಮಗೆ ಅಂತಹ ಗುರಿ ಮತ್ತು ಶಕ್ತಿ ಇದೆ ಎಂದು ಹೇಳಿದ್ದಾರೆ.

ಸ್ವಾವಲಂಬಿ ಭಾರತವನ್ನು ನಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿ ಮತ್ತು ದೃಢ ನಿಶ್ಚಯದಿಂದ ಸಾಧಿಸುತ್ತೇವೆ ಎಂದಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ನಮ್ಮ ರಕ್ತ ಮತ್ತು ಬೆವರಿನಿಂದ ದೇಶಕ್ಕೆ ಕೊಡುಗೆ ನೀಡುವ ಏಕೈಕ ಗುರಿಯನ್ನು ನಾವು ಹೊಂದಿರಬೇಕು ಮತ್ತು ನಮ್ಮ ಕಠಿಣ ಪರಿಶ್ರಮ ಹಾಗೂ ನಾವಿನ್ಯತೆಯಿಂದ ಭಾರತವನ್ನು ಸ್ವಾವಲಂಬಿ ಮಾಡಬೇಕು ಎಂದಿದ್ದಾರೆ.

ಕೊಲ್ಕತ್ತಾದ ವಿಕ್ಟೋರಿಯ ಮೆಮೋರಿಯಲ್ ನಲ್ಲಿ ಆಯೋಜಿಸಿದ್ದ “ ಪರಾಕ್ರಮ ದಿವಸ್” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಧೈರ್ಯವಾಗಿ ಪಾರಾಗುವ ಮುನ್ನ ತಮ್ಮ ಸೋದರಳಿಯ ಸಿಸಿರ್ ಬೋಸ್ ಅವರನ್ನು ಕೇಳಿದ ಕಟುವಾದ ಪ್ರಶ್ನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು,” ಇಂದು ಪ್ರತಿಯೊಬ್ಬ ಭಾರತೀಯ ತನ್ನ ಹೃದಯದ ಮೇಲೆ ನೇತಾಜಿಯ ಉಪಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹೀಗಿರುವಾಗ ನೇತಾಜಿ ಕೂಡ ಇದೇ ಪ್ರಶ್ನೆಕೇಳುತ್ತಿದ್ದಾರೆ. ನೀವು ನನಗಾಗಿ ಏನನ್ನಾದರೂ ಮಾಡಬಲ್ಲಿರ?. ಈ ಕೆಲಸ, ಈ ಕಾರ್ಯ, ಈ ಗುರಿ ಇಂದು ಭಾರತವನ್ನು ಸ್ವಾವಲಂಬಿ ಮಾಡಲಿದೆ. ದೇಶದ ಪ್ರತಿಯೊಬ್ಬರು, ದೇಶದ ಪ್ರತಿಯೊಂದು ಭಾಗದ ಮತ್ತು ದೇಶದ ಪ್ರತಿಯೊಬ್ಬ ವ್ಯಕ್ತಿ ಈ ಸ್ಪೂರ್ತಿಯ ಭಾಗವಾಗಿದ್ದಾರೆ ಎಂದರು.

ದೇಶದಲ್ಲಿ ಶೂನ್ಯ ದೋಷ ಮತ್ತು ಶೂನ್ಯ ಪರಿಣಾಮ ಹೊಂದಿರುವ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕು. ಜಗತ್ತಿನಲ್ಲಿ ಅತ್ಯುತ್ತಮ ಉತ್ಪನ್ನಗಳನ್ನು ಉತ್ಪಾದಿಸಲು ಮುಂದಾಗಬೇಕು. ನೇತಾಜಿ ಹೇಳಿದಂತೆ ಸ್ವಾತಂತ್ರ್ಯ ಭಾರತದ ಕನಸಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಭಾರತವನ್ನು ಅಲುಗಾಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ದೇಶದ 130 ಕೋಟಿ ಜನ ಸ್ವಾವಲಂಬಿಗಳಾಗುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು, ಬಡತನ, ಅನಕ್ಷರತೆ, ರೋಗಗಳು ದೇಶದ ಬಹುದೊಡ್ಡ ಸಮಸ್ಯೆಗಳನ್ನು ಎಂದು ಪಟ್ಟಿಮಾಡಿದ್ದರು. ಬಡತನ, ಅನಕ್ಷತೆ, ರೋಗಗಳು ಮತ್ತು ವೈಜ್ಞಾನಿಕ ಕ್ಷೇತ್ರದ ಕೊರತೆ ನಮ್ಮ ದೊಡ್ಡ ಸಮಸ್ಯೆಗಳು ಎಂದು ಹೇಳಿದ್ದನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ಈ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಸಮಾಜ ಒಟ್ಟಾಗಬೇಕು. ಇವುಗಳ ನಿವಾರಣೆಗೆ ನಾವೆಲ್ಲರೂ ಒಟ್ಟಿಗೆ ಪ್ರಯತ್ನಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅವಕಾಶ ವಂಚಿತ, ಶೋಷಿತ ವರ್ಗಗಳು, ನಮ್ಮ ರೈತರು, ಮಹಿಳೆಯರ ಸಬಲೀಕರಣಕ್ಕೆ ದೇಶ ಅವಿರತವಾಗಿ ಶ್ರಮಿಸುತ್ತಿದೆ. ಇಂದು ದೇಶದ ಪ್ರತಿಯೊಬ್ಬ ಬಡವ ಉಚಿತ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾನೆ. ರೈತರು ಬೀಜದಿಂದ ಹಿಡಿದು ಮಾರುಕಟ್ಟೆವರೆಗೆ ಇಂದು ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತಿದ್ದಾನೆ. ಶಿಕ್ಷಣದ ಮೂಲ ಸೌಕರ್ಯ ಆಧುನೀಕರಣಗೊಂಡಿದೆ. ಯುವ ಸಮೂಹಕ್ಕೆ ಗುಣಮಟ್ಟದ ಮತ್ತು ಆಧುನಿಕ ಶಿಕ್ಷಣ ದೊರೆಯುತ್ತಿದೆ. ಹೊಸ ಐಐಟಿ, ಐಐಎಮ್ ಮತ್ತು ಏಮ್ಸ್ ನಂತಹ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಳ್ಳುತ್ತಿವೆ. 21 ನೇ ಶತಮಾನದ ಅಗತ್ಯಗಳನ್ನು ಪೂರೈಸಲು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೇಳಿದರು.

ನವ ಭಾರತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಹೆಮ್ಮಪಡುವಂತೆ ಸಕಾರಾತ್ಮಕ ಬದಲಾವಣೆ ತರಲಾಗುತ್ತಿದೆ. ದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಜಾಗತಿಕ ಮಟ್ಟದ ಕಂಪೆನಿಗಳ ಮೂಲಕ ಭಾರತೀಯರು ಪ್ರಭುತ್ವ ಸಾಧಿಸುತ್ತಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಅಮೋಘ ಸಾಧನೆಯಿಂದಾಗಿ ದೇಶ ಸ್ವಾವಲಂಬಿಯಾಗುತ್ತಿದೆ. ಭಾರತೀಯ ರಕ್ಷಣಾ ಪಡೆಗೆ ರಫೆಲ್ ನಂತಹ ಯುದ್ಧ ವಿಮಾನಗಳು, ದೇಶೀಯವಾಗಿ ನಿರ್ಮಿಸುತ್ತಿರುವ ತೇಜಸ್ ಯುದ್ಧ ವಿಮಾನಗಳು ಸೇರ್ಪಡೆಯಾಗುತ್ತಿದ್ದು, ಇದರಲ್ಲಿ ನೇತಾಜಿ ಅವರ ಆಶಿರ್ವಾದವಾಗಿವೆ. ನಮ್ಮ ರಕ್ಷಣಾ ಪಡೆಗಳ ಶಕ್ತಿ ಅನನ್ಯ. ಕೋವಿಡ್ ಸಾಂಕ್ರಾಮಿಕವನ್ನು ದೇಶದ ಎದುರಿಸಿದ ಬಗೆ, ದೇಶೀಯವಾಗಿ ಲಸಿಕೆ ಉತ್ಪಾದಿಸಿ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಂಡ ವಿಧಾನ, ಲಸಿಕೆ ವಿಚಾರದಲ್ಲಿ ಇತರೆ ದೇಶಗಳಿಗೂ ಸಹ ನೆರವು ನೀಡುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ದೇಶ ಎಲ್.ಎ.ಸಿ ನಿಂದ ಎಲ್.ಒ.ಸಿವರೆಗಿನ ಕನಸುಗಳಿಗೆ ಸಾಕ್ಷಿಯಾಗುತ್ತಿದೆ. ದೇಶದ ಸಾರ್ವಭೌಮತೆಗೆ ಎದುರಾದ ಸವಾಲುಗಳಿಗೆ ಭಾರತ ತಕ್ಕ ಉತ್ತರ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕನಸು ಸಹ ಸ್ವಾವಲಂಬಿ ಭಾರತ್ ನಿರ್ಮಾಣ ಮಾಡುವುದಾಗಿತ್ತು. ಸೊನರ್ ಬಾಂಗ್ಲಾದ ಅತಿ ದೊಡ್ಡ ಸ್ಪೂರ್ತಿಯೂ ಸಹ ಇದೇ ಆಗಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಹಿಸಿದ ಪಾತ್ರದಂತೆ ಪಶ್ಚಿಮ ಬಂಗಾಳದ ಸ್ವಾವಲಂಬನೆಯ ಅನ್ವೇಷಣೆಯಲ್ಲಿಯೂ ಸಹ ಇದೇ ಪಾತ್ರ ವಹಿಸಬೇಕಾಗಿದೆ. ಆತ್ಮನಿರ್ಬರ್ ಭಾರತ ಎಂದರೆ ಆತ್ಮನಿರ್ಬರ್ ಬಂಗಾಳ ಮತ್ತು ಸೋನಾರ್ ಬಂಗ್ಲಾ ಸಹ ಆಗಿದೆ. ಈ ಉದ್ದೇಶದ ಸಕಾರಕ್ಕೆ ನೇತೃತ್ವ ವಹಿಸಬೇಕಾಗಿದೆ. ಬಂಗಾಳವು ಸಹ ಈ ನಿಟ್ಟಿನಲ್ಲಿ ಸಾಗಬೇಕು ಮತ್ತು ತನಗೂ ದೇಶಕ್ಕೂ ವೈಭವ ತರಬೇಕು ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Operation Sindoor Reflects PM Modi’s Firm Determination, Precise Intelligence: Amit Shah

Media Coverage

Operation Sindoor Reflects PM Modi’s Firm Determination, Precise Intelligence: Amit Shah
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಮೇ 2025
May 16, 2025

Appreciation for PM Modi’s Vision for a Stronger, Sustainable and Inclusive India