ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ನ ಸೆಪ್ಪಾದಲ್ಲಿ ಹರ್ ಘರ್ ತಿರಂಗಾ ( #HarGharTiranga ) ಯಾತ್ರೆಯ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು
ಸಂತಸ ವ್ಯಕ್ತಪಡಿಸಿದರು. ಅರುಣಾಚಲ ಪ್ರದೇಶದ ವೈವಿದ್ಯಮಯ ಸಾಂಸ್ಕೃತಿಕ ಪರಂಪರೆಯಲ್ಲಿ ದೇಶಪ್ರೇಮವು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು ಅವರ ಎಕ್ಸ್ ಖಾತೆಯ ವೀಡಿಯೊ ಸಂದೇಶದ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಸಂದೇಶ ತಿಳಿಸಿದ್ದಾರೆ:
"ಅರುಣಾಚಲ ಪ್ರದೇಶವು ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ದೇಶಪ್ರೇಮವನ್ನು ಆಳವಾಗಿ ಬೇರೂರಿರುವ ಭೂಪ್ರದೇಶವಾಗಿದೆ. ಇದು ರಾಜ್ಯದ ವೈವಿದ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಹರ್ ಘರ್ ತಿರಂಗಾ ( #HarGharTiranga ) ಬಗ್ಗೆ ಅಂತಹ ಉತ್ಸಾಹ ವಾತಾವರಣವನ್ನು ನೋಡಿ ತುಂಬಾ ಸಂತೋಷವಾಯಿತು."
Arunachal Pradesh is a land where patriotism is deeply rooted in the heart of every citizen. This clearly reflects in the state's vibrant cultural heritage. Glad to see such enthusiasm towards #HarGharTiranga. https://t.co/seqVK2Cf9H
— Narendra Modi (@narendramodi) August 13, 2024