ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿದ್ಯಾರ್ಥಿಗಳನ್ನು ಎಲ್ಲಾ ರೀತಿಯ ಪರೀಕ್ಷೆ ಸಂಬಂಧಿತ ಒತ್ತಡದಿಂದ ಮುಕ್ತವಾಗಿರಿಸುವುದು ಎಕ್ಸಾಮ್ ವಾರಿಯರ್ಸ್ ಕಿರುಪುಸ್ತಕದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಜಾರ್ಖಂಡ್ ನ ಕೊಡರ್ಮಾದ ಶಾಲೆಯೊಂದರ ವಿದ್ಯಾರ್ಥಿಗಳು ಎಕ್ಸಾಮ್ ವಾರಿಯರ್ಸ್ ಕಿರುಪುಸ್ತಕವನ್ನು ಓದಿದ ನಂತರ ಪರೀಕ್ಷಾ ಸಂಬಂಧಿತ ಉದ್ವೇಗದಿಂದ ಮುಕ್ತರಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಅವರು ಮಾಹಿತಿ ನೀಡಿದ ಅವರ ಟ್ವೀಟ್ ಗೆ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದು,
" ತುಂಬಾ ಒಳ್ಳೆಯದು! ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಒತ್ತಡದಿಂದ ಮುಕ್ತರಾಗಿರಬೇಕು, ಅದು ಪರೀಕ್ಷಾ ಯೋಧರ ಗುರಿಯಾಗಿದೆ…” ಎಂದು ಹೇಳಿದ್ದಾರೆ.
बहुत अच्छा! विद्यार्थी परीक्षा को लेकर हर प्रकार के तनाव से मुक्त हों, यही तो एग्जाम वॉरियर्स का उद्देश्य है… https://t.co/d9pbPrzzoS
— Narendra Modi (@narendramodi) February 25, 2023