ಹೊಸ ಡ್ರೋನ್ ನಿಯಮಗಳೊಂದಿಗೆ ಭಾರತದಲ್ಲಿ ಈ ವಲಯ ಹೆಗ್ಗುರುತಿನ ಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಹೊಸ ಡ್ರೋನ್ ನಿಯಮಗಳು ನವೋದ್ಯಮಗಳಿಗೆ ಮತ್ತು ಈ ವಲಯದಲ್ಲಿ ಕೆಲಸ ಮಾಡುವ ನಮ್ಮ ಯುವಕರಿಗೆ ಭಾರಿ ಸಹಾಯ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, "ಹೊಸ ಡ್ರೋನ್ ನಿಯಮಗಳೊಂದಿಗೆ ಭಾರತದಲ್ಲಿ ಈ ವಲಯ ಒಂದು ಹೆಗ್ಗುರುತಿನ ಕ್ಷಣಕ್ಕೆ ಸಾಕ್ಷಿಯಾಗಿದೆ. ಈ ನಿಯಮಗಳು ವಿಶ್ವಾಸ ಮತ್ತು ಸ್ವಯಂ ಪ್ರಮಾಣೀಕರಣದ ಪ್ರತಿಜ್ಞೆಯನ್ನು ಆಧರಿಸಿವೆ. ಇವುಗಳ ಮೂಲಕ ಅನುಮೋದನೆಗಳು, ಅನುಸರಣಾ ಅವಶ್ಯಕತೆಗಳು ಮತ್ತು ಪ್ರವೇಶ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ.
ಹೊಸ ಡ್ರೋನ್ ನಿಯಮಗಳು ನವೋದ್ಯಮಗಳಿಗೆ ಮತ್ತು ಈ ವಲಯದಲ್ಲಿ ಕೆಲಸ ಮಾಡುವ ನಮ್ಮ ಯುವಕರಿಗೆ ಭಾರಿ ಸಹಾಯ ಮಾಡಲಿವೆ. ನಾವಿನ್ಯತೆ ಮತ್ತು ವ್ಯವಹಾರಕ್ಕೆ ಹೊಸ ಸಾಧ್ಯತೆಗಳನ್ನು ಇವು ತೆರೆಯಲಿವೆ. ಭಾರತವನ್ನು ಡ್ರೋನ್ ಕೇಂದ್ರವನ್ನಾಗಿ ಮಾಡಲು ನಾವಿನ್ಯತೆ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇದರಿಂದ ಸಹಾಯಕವಾಗಲಿದೆ." ಎಂದಿದ್ದಾರೆ.
The new Drone Rules will tremendously help start-ups and our youth working in this sector. It will open up new possibilities for innovation & business. It will help leverage India’s strengths in innovation, technology & engineering to make India a drone hub.
— Narendra Modi (@narendramodi) August 26, 2021
The new Drone Rules usher in a landmark moment for this sector in India. The rules are based on the premise of trust and self-certification. Approvals, compliance requirements and entry barriers have been significantly reduced. https://t.co/Z3OfOAuJmp
— Narendra Modi (@narendramodi) August 26, 2021