Our freedom was not only about our country. It was a defining moment in ending colonialism in other parts of the world too: PM
The menace of corruption has adversely impacted our country's development journey: PM Modi
Poverty, lack of education and malnutrition are big challenges that our nation faces today, says PM Modi
In 1942, the clarion call was 'Karenge Ya Marenge' - today it is 'Karenge Aur Kar Ke Rahenge.'
From 2017-2022, these five years are about 'Sankalp Se Siddhi’, says PM Modi

ಗೌರವಾನ್ವಿತ ಸಭಾಪತಿಯವರೇ ಹಾಗೂ ಸದಸ್ಯರೇ, ಕ್ವಿಟ್ ಇಂಡಿಯಾ ಚಳವಳಿಯ ಸಿಂಹಾವಲೋಕನದ ಈ ಸಮಯದಲ್ಲಿ ಗೌರವಾನ್ವಿತ ಸದಸ್ಯರೆಲ್ಲರೂ ಈ ಗೌರವಪೂರ್ಣ ಸದನದಲ್ಲಿ ಸೇರಿರುವುದು ಹೆಮ್ಮೆ ಪಡುವ ದಿನವಾಗಿದೆ. ಇದಕ್ಕೆ ನನ್ನ ಕೃತಜ್ಞತೆಗಳು. ಆಗಸ್ಟ್ ಅಂದರೆ ಅದು ನಮಗೆ ಕ್ರಾಂತಿಯ ತಿಂಗಳು. ಆಗಸ್ಟ್ 9 ಅಂದರೆ ಅದು ನಾವು ಎಂದಿಗೂ ಮರೆಯಲಾಗದ ಕ್ರಾಂತಿಯ ದಿನ. ಈ ಘಟನೆಯನ್ನು ನಾವು ಕ್ರಾಂತಿಯ ತಿಂಗಳು ಎಂದೂ ಕರೆಯಬಹುದಾಗಿದೆ. ಈ ರೀತಿಯ ದೊಡ್ಡ ದೊಡ್ಡ ಕ್ರಾಂತಿಯ ಘಟನೆಗಳನ್ನು ನಾವು ನೆನಪುಮಾಡಿಕೊಳ್ಳುವ ಮೂಲಕ ನಮ್ಮ ಜೀವನಕ್ಕೆ ದೊಡ್ಡ ಶಕ್ತಿಯನ್ನು ತಂದುಕೊಂಡಂತಾಗಿದೆ. ಆ ಮೂಲಕ ಸದೃಢ ದೇಶದ ನಿರ್ಮಾಣಕ್ಕೆ ಕಾರಣವಾಗಿದೆ. ಇದೇ ದಾರಿಯನ್ನು ನಾವು ಅನುಸರಿಸುವ ಮೂಲಕ ಹೊಸ ಪೀಳಿಗೆಗೆ ಉತ್ತಮ ಸಂದೇಶವನ್ನು ನೀಡಬೇಕಿದೆ. ದೇಶದ ಅದ್ಬುತವಾದ ಇತಿಹಾಸದ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲ ಪೀಳಿಗೆಯ ಜವಾಬ್ದಾರಿಯಾಗಿದೆ. ಆ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿರುವವರನ್ನು ನೆನಪುಮಾಡಿಕೊಳ್ಳಬೇಕಿದೆ.

ಈ ಆಗಸ್ಟ್ ಕ್ರಾಂತಿಯನ್ನು 25ನೇ ವರ್ಷದ ಮತ್ತು 50 ನೇ ವರ್ಷದ ದಿನವನ್ನು ದೇಶವಾಸಿಗಳು ಸ್ಮರಿಸಿದ್ದರು. ಅದರ ಮುಂದುವರಿದ ಭಾಗವಾಗಿ 75ನೇ ವರ್ಷದ ನೆನಪನ್ನು ಇಂದು ಮಾಡಿಕೊಳ್ಳುತ್ತಿದ್ದೇವೆ. ಇದು ಹೆಮ್ಮೆಯ ವಿಚಾರ. ಇಂಥ ಸ್ಮರಣಿಯ ದಿನವನ್ನು ಸ್ಮರಿಸುತ್ತಿರುವುದಕ್ಕೆ ಅವಕಾಶ ಮಾಡಿಕೊಟ್ಟ ಸಭಾವತಿಯವರಿಗೆ ಅನಂತ ಧನ್ಯವಾದಗಳು.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳಲ್ಲಿ ಆಗಸ್ಟ್ 9 ಅವಿಸ್ಮರಣೀಯ ದಿನ. ಈ ದಿನವು ಮುಂದೊಂದು ದಿನ ದೊಡ್ಡ ಹೋರಾಟಕ್ಕೆ ನಾಂದಿಯಾಗುತ್ತದೆ ಎಂದು ಬ್ರಿಟಿಷರು ಸಹ ಅಂದುಕೊಂಡಿರಲಿಲ್ಲ. ಈ ವೇಳೆ ಮಹಾತ್ಮ ಗಾಂಧಿ ಮತ್ತು ಇತರ ಗಣ್ಯರನ್ನು ಜೈಲಿನಲ್ಲಿ ಇರಿ ಸಲಾಗಿತ್ತು. ಈ ವೇಳೆಯೇ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಮುಂಚೂಣಿಗೆ ಬಂದರು. ಲಾಲ್ ಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಹಲವು ಮಂದಿ ಯುವ ನಾಯಕರು ಈ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಕಾಣಿಕೆ ನೀಡಿದ್ದಾರೆ. ಈ ಹೋರಾಟವು ದೇಶಕ್ಕೆ ಸ್ಪೂರ್ತಿಯಾಗಿದೆ. ಅಲ್ಲದೆ ಜನರಲ್ಲಿ ಇದು ಹೊಸ ಪ್ರಯೋಗವನ್ನು ಹುಟ್ಟುಹಾಕಿತು.

ಭಾರತವು 1947ರಲ್ಲಿ ಸ್ವಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. 1857 ಹಾಗೂ 1947 ರ ನಡುವಿನ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಂದಿ ದೇಶಕ್ಕಾಗಿ ಪ್ರಾಣ ಕಳೆದು ಕೊಂಡರು. ಈ ವೇಳೆ ಹಲವು ರೀತಿಯ ಏರಿಳಿತಗಳನ್ನು ದೇಶ ಕಂಡಿತು. ಸ್ವಾತಂತ್ರ್ಯ ಭಾರತದ ಕನಸನ್ನು ಕಾಣುತ್ತಿದ್ದ ಜನರಿಗೆ 1942ರ ಹೋರಾಟವು ನಾಂದಿಯಾಯಿತು. 1942ರ ಹೋರಾಟವು ಸ್ವಾತಂತ್ರ್ಯ ಭಾರತದ ಕನಸಿಗೆ ಪೀಠಿಕೆಯಾಯಿತು. ಈ ಹಿನ್ನೆಲೆಯಲ್ಲಿ 1857ರ ಹೋರಾಟವನ್ನು ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಎಂದು ಕರೆಯಬಹುದಾಗಿದೆ. ಈ ವೇಳೆ ವಿದೇಶದಲ್ಲಿದ್ದ ಮಹಾತ್ಮ ಗಾಂಧಿಯವರು ದೇಶಕ್ಕೆ ವಾಪಸ್ ಆದರು. ಪೂರ್ಣ ಸ್ವರಾಜ್ಯವನ್ನು ಪಡೆಯಬೇಕು ಎಂದು ಲೋಕಮಾನ್ಯ ತಿಲಕ್ ಅವರು ಕರೆ ಕೊಟ್ಟರು. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂಬ ಲೋಕಮಾನ್ಯ ತಿಲಕ್ ಅವರ ಕೂಗು ಭಾರತೀಯರಲ್ಲಿ ದೇಶ ಕ್ತಿಯ ಭಾವನೆಯನ್ನು ಬಿತ್ತಿತು. ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬ ಘೋಷಣೆ ದೇಶದ ಮಹಾ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆಯಾಯಿತು. ತಿಲಕ್ ಅವರ ಈ ಹೋರಾಟವು ಮಹಾತ್ಮ ಗಾಂಧಿಯವರು 1930ರಲ್ಲಿ ನಡೆದ ದಂಡಿ ಸತ್ಯಾಗ್ರಹಕ್ಕೆ ಶಕ್ತಿ ತುಂಬಿತು. ಅಲ್ಲದೆ ಈ ವೇಳೆ ವೀರ ಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರು, ಚಂದ್ರಶೇಖರ್ ಅಜಾದ್, ಚಾಪೆಕರ್ ಬಂಧು ಸೇರಿದಂತೆ ಹಲವು ಯುವ ನಾಯಕರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕಟ್ಟಿದ್ದ ಐಎನ್‌ಎ ಸೈನ್ಯವು ಪ್ರೇರಣೆಯಾಯಿತು. ಈ ಯುವ ನಾಯಕರು ಮಾತೃೂಮಿಗಾಗಿ ಪ್ರಾಣವನ್ನೇ ನೀಡಿದರು.

ಈ ಎಲ್ಲ ಘಟನೆಗಳು ದೇಶದ ಸ್ವಾತಂತ್ರ್ಯಕ್ಕೆ ಸಾಥ್ ನೀಡಿದವು. ಈ ವೇಳೆ ಈಗ ಅಥವಾ ಇಲ್ಲವೇ ಇಲ್ಲ ಎಂಬ ಭಾವನೆಯು ಜನರಲ್ಲಿ ಮೂಡಿತ್ತು. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನು ಸ್ವಾತಂತ್ರ್ಯದ ಹೋರಾಟದಲ್ಲಿ ಬಾಗಿಯಾದರು. ಈ ಹೋರಾಟವು ದೇಶದ ಉನ್ನತ ನಾಗರಿಕರಲ್ಲಿಯೂ ಸ್ವಾತಂತ್ರ್ಯದ ಬಗ್ಗೆ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿತು. ಜತೆಗೆ 1942ರ ಹೋರಾಟವು ದೇಶದ ಮೂಲೆಮೂಲೆಗೆ ಹಾಗೂ ಸಾಮಾಜಿಕವಾಗಿ ಹರಡತೊಡಗಿತು. ಈ ವೇಳೆ ಗಾಂಧೀಜಿಯವರ ಮಾತು ದೇಶವಾಸಿಗಳಿಗೆ ವೇದವಾಕ್ಯವಾಗಿತ್ತು. ರಾಜಾಜಿ ಅವರು ಈ ವೇಳೆ ಕೈಗೆತ್ತಿಕೊಂಡ ಚಳವಳಿ ದೇಶದ ಸುಸ್ಥಿತ, ಶ್ರೀಮಂತ ಸಮಾಜದ ಜನತೆಯ ಕಣ್ ತೆರೆಸಿದ್ದು ನಿಜ. ಈ ಹೋರಾಟಕ್ಕೆ ಸಿಕ್ಕ ಹೆಸರೇ ’ಕ್ವಿಟ್ ಇಂಡಿಯಾ’ ಹೋರಾಟ. ಈ ಹೋರಾಟವು ದೇಶವಾಸಿಗಳ ತುಟಿಯಲ್ಲಿ ತೊದಲತೊಡಗಿತು. ಗಾಂಧೀಜಿಯವರ ಮೂಲ ಸಿದ್ಧಾಂತ, ಚಿಂತನೆ ಮತ್ತು ನೀತಿಗಳು ಈ ಹೋರಾಟದ ಮೂಲಕ ದೇಶವಾಸಿಗಳ ಮನಮುಟ್ಟಿತು.

ಇದು ಹೋರಾಟದಲ್ಲಿ ಸಿಕ್ಕ ಯಶ ಕೂಡ ಆಗಿತ್ತು. ಸ್ವಾತಂತ್ರ್ಯಕ್ಕೆ ಮಾಡು ಇಲ್ಲವೇ ಮಡಿ ಎಂಬ ಸಂದೇಶವು ಒಟ್ಟಾರೆ ದೇಶದ ಜನರನ್ನು ಒಗ್ಗಟ್ಟಾಗಿ ರೂಪಿಸುವಲ್ಲಿ ಪ್ರಧಾನಪಾತ್ರ ವಹಿಸಿತು. ಏನೇ ಆಗಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದು ನನ್ನ ಪ್ರಮುಖ ಕರ್ತವ್ಯ. ಇದಕ್ಕೆ ಅನುಗುಣವಾಗಿ ಪುರುಷರೇ ಆಗಲಿ ಅಥವಾ ಮಹಿಳೆಯರೇ ಆಗಲಿ ನಡೆದುಕೊಳ್ಳಬೇಕು ಎಂದು ಗಾಂಧಿಜೀಯವರು ಹೇಳಿದ್ದರು. ಅಂದು ಬಾಪೂ ಹೇಳಿದ ಮಾತುಗಳು ಹೀಗಿವೆ ನೋಡಿ ಇಂದಿನಿಂದ ದೇಶದ ಪ್ರತಿಯೊಬ್ಬ ಮಹಿಳೆ ಮತ್ತು ಪುರುಷ ಸ್ವತಂತ್ರರೆಂದು ತಿಳಿಯಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂಪೂರ್ಣ ಸ್ವರಾಜ್ಯವೇ ನನ್ನ ಧ್ಯೇಯ. ಅಲ್ಲಿಯವರೆಗೂ ನನಗೆ ಸಮಾಧಾನ ಇಲ್ಲ. ನಾವು ಮಾಡೋಣ ಇಲ್ಲವೇ ಮಡಿಯೋಣ.. ಆದರೆ ಈ ಮಾಡು ಇಲ್ಲವೇ ಮಡಿ ವಿಚಾರದಲ್ಲಿ ಗಾಂಧಿಜೀಯವರು ಎಂದಿಗೂ ಹಿಂಸೆಯ ಹಾದಿಯನ್ನು ಹಿಡಿಯಲಿಲ್ಲ. ಈ ವೇಳೆ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಬಾಪು ಅವರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ನಾಯಕತ್ವ ವಹಿಸಿದರು.

ಮಾಡು ಇಲ್ಲವೇ ಮಡಿ ಎಂಬ ಗಾಂಧಿಜೀಯವರ ಕೂಗಿಗೆ ಸಮಾಜದ ಎಲ್ಲ ವರ್ಗದ ಜನರು ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ಜತೆಯಾದರು. ಆದರೆ ಹೋರಾಟದಲ್ಲಿ ಬ್ರಿಟೀಷರ ಮಾಡಿದ ದಾಳಿಗೆ ಹಲವು ಮಂದಿ ಹೋರಾಟಗಾರರು ಹುತಾತ್ಮರಾದರು. ಹೀಗೆ ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ನೀಡಿ ಹಲವು ಮಂದಿ ಹುತಾತ್ಮರಾದರು. ಭಾರತವು ಬ್ರಿಟೀಷರ ದಾಸ್ಯದಿಂದ ಹೊರಬರುವಲ್ಲಿ ಬಾಪು ಅವರು ಇಂಥ ಒಂದು ದೊಡ್ಡ ಹೋರಾಟಕ್ಕೆ ಕೈ ಹಾಕಿದ್ದರು. ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ ಅಥವಾ ನಾಯಕನೇ ಆಗಲಿ, ಅವರಲ್ಲಿ ಯಾವುದೇ ರೀತಿಯ ಭಿನ್ನ ಭಾವನೆಗಳು ಬೇಡ, ನನಗೆ ನಂಬಿಕೆ ಇದೆ, ದೇಶವು ಒಂದಾದರೆ ಮತ್ತು ಇಲ್ಲಿನ ಜನರು ಒಗ್ಗಟ್ಟಾದರೆ ಗೆಲುವು ಸಾಧ್ಯ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಗುರಿ ನಿಗದಿಯಾಯಿತು. ಗುರಿ ಸಾಧಿಸುವತ್ತ ಜನರೂ ಮುಂದಾರು. 1942ರಿಂದ 1947ರ ಕೇವಲ 5 ವರ್ಷದ ಅವಧಿಯಲ್ಲಿ ಭಾರತವು ಸ್ವಾತಂತ್ರ ಪಡೆಯಿತು. ಈ ವೇಳೆ ರಂಬ್ರೀಕ್ಸ್ ಬೆನ್ನಿಪುರಿ ಎಂಬುವರು ಜಂಜೀರೆ ಹೌರ್ ದಿವಾರೆ ಎಂಬ ಕೃತಿಯನ್ನು ರಚಿಸಿದರು. ಈ ಪುಸ್ತಕದಲ್ಲಿ ಅವರು ಬರೆದುಕೊಂಡಿದ್ದು ಹೀಗೆ, ದೇಶದಲ್ಲಿ ಈಗ ಸ್ವಾತಂತ್ರ್ಯ ಹೋರಾಟವು ಉತ್ತಮವಾದ ಹಾದಿಯಲ್ಲಿದೆ. ಪ್ರತಿಯೊಬ್ಬ ಪ್ರಜೆಂುು ನಾಯಕನಾಗಿದ್ದಾನೆ. ಅಲ್ಲದೆ ಪ್ರತಿಯೊಂದು ಗಲ್ಲಿಯೂ ಮಾಡು ಇಲ್ಲವೆ ಮಡಿ ಹೋರಾಟದ ಕಚೇರಿಗಳಾಗಿವೆ. ದೇಶವೇ ಸ್ವಾತಂತ್ರ್ಯದ ಹೋರಾಟದ ಕ್ರಾಂತಿಗೆ ಸಿದ್ಧವಾಗಿದೆ. ಈ ಕ್ರಾಂತಿಯ ಜ್ವಾಲೆಯೂ ಹೊತ್ತಿಉರಿಯುತ್ತಿದೆ. ಈ ನಿಟ್ಟಿನಲ್ಲಿ ಬಾಂಬೆಯಲ್ಲಿ ಎಲ್ಲ ಸಂಚಾರ ಮತ್ತು ಸಾಗಣೆ ನಿಂತಿತು. ಕೋರ್ಟ್ ಕಲಾಪಗಳೂ ಸಹ ನಿಂತವು. ಇದೇ ವೇಳೆ ಭಾರತೀಯರ ವೀರ ಹೋರಾಟ ಮತ್ತು ಬ್ರಿಟೀಷರ ನಡೆದುಕೊಳ್ಳೂತ್ತಿದ್ದ ಕ್ರೂರತನ ದೇಶದೆಲ್ಲೆಡೆ ವ್ಯಾಪಿಸಿತು. ಇದಕ್ಕೆ ಗಾಂಧೀಜಿಯ ಮಾಡು ಇಲ್ಲವೆ ಮಡಿ ಎಂಬುದು ಮಂತ್ರವಾಯಿತು.

ಈ ಪುಸ್ತಕವು ಹೋರಾಟದ ವೇಳೆ ನಡೆದ ಎಲ್ಲ ರೀತಿಯ ಘಟನೆಯನ್ನು ವಿವರಿಸಿತು. ಬ್ರಿಟಿಷರ ವಸಾಹತುಶಾಹಿ ವ್ಯವಸ್ಥೆ ದೇಶದಲ್ಲಿ ಆರಂವಾಗಿದ್ದು ಮತ್ತು ದೇಶದಲ್ಲಿಯೇ ಕೊನೆಗಂಡಿದ್ದನ್ನು ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ. ಅಂದರೆ ಇದು ಕೇವಲ ಭಾರತದ ಸ್ವಾತಂತ್ರ್ಯಕ್ಕಾಗಿಯೇ ನಡೆದ ಘಟನೆಯಲ್ಲ. 1942ರ ನಂತರದಲ್ಲಿ ಬ್ರಿಟಿಷರ ವಸಾಹುಶಾಯಿ ವ್ಯವಸ್ಥೆಯ ವಿರುದ್ಧ ವಿಶ್ವದಾದ್ಯಂತ ತೀಕ್ಷ್ಣವಾಗಿ ಸ್ಪೋಟಗೊಂಡಿತು. ಇತ್ತ ಭಾರತದಲ್ಲಿ ನಡೆಯುತ್ತಿದ್ದ ಹೋರಾಟವು ಅತ್ತು ಆಫ್ರಿಕ ಮತ್ತು ಏಷ್ಯಾದಲ್ಲಿದ್ದ ವಸಾಹತುಶಾಹಿಗಳ ವಿರುದ್ಧ ಹೋರಾಟಕ್ಕೆ ಪ್ರೇರಣೆಯಾಯಿತು. ಈ ಹೋರಾಟವು ವಿಶ್ವದ ವಿವಿಧೆಡೆ ವಸಾಹತುಶಾಹಿಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿಯಾಯಿತು. ಅಲ್ಲದೆ ಈ ಹೋರಾಟಕ್ಕೆ ಭಾರತವು ವೇದಿಕೆಯಾಯಿತು. ಭಾರತವು ಈ ಹೋರಾಟದಲ್ಲಿ ಯಶ ಕಂಡರೆ ಅದು ವಿಶ್ವದ ಇತರ ವಸಾಹತುಶಾಹಿ ರಾಷ್ಟ್ರಗಳಲ್ಲಿನ ಜನರಿಗೂ ಇದು ಸ್ಪೂರ್ತಿಯಾಯಿತು. ತಾವೂ ಸಹ ಹೋರಾಟ ಮಾಡಿದರೆ ದಾಸ್ಯದಿಂದ ಮುಕ್ತಿಹೊಂದಬಹುದು ಎಂಬ ಭಾವನೆ ಜನರಲ್ಲಿ ಮೊಳಕೆಹೊಡೆಯಿತು. ಇದು ಭಾರತದ ಹೋರಾಟಕ್ಕೆ ಸಿಕ್ಕ ದೊಡ್ಡ ಯಶಸ್ಸು ಕೂಡ ಆಯಿತು. ಈ ಎಲ್ಲ ಬೆಳವಣಿಗೆಗಳ ಮೂಲಕ ನಾವು ತಿಳಿದುಕೊಳ್ಳುವುದು ಏನೆಂದರೆ ನಾವು ಯಾವುದೇ ಹೋರಾಟ ಮಾಡಲು ಮುಂದುವರೆದರೆ ಅದರಲ್ಲಿ ಯಶ ಸಿಗಲಿದೆ. ಅದರಲ್ಲಿ ದೇಶದ ಶಕ್ತಿ ಸಹ ಇದೆ. ಅಲ್ಲದೆ ಸಮಸ್ಯೆಗಳಿಂದ ದೇಶವನ್ನು ಮುಕ್ತಿಗೊಳಿಸಬಹುದಾಗಿದೆ. ಜತೆಗೆ ಇನ್ನಿತರೆ ಹೊಸ ಗುರಿಗಳ ಬಗ್ಗೆ ಜನರು ಯೋಚಿಸಬಹುದಾಗಿದೆ. ಈ ಹೋರಾಟದ ಇತಿಹಾಸವು ಎಲ್ಲಕಾಲಕ್ಕೂ ಸತ್ಯವಾಗಿದೆ.

चलपड़ेजिधरदोडग, मगमें

चलपड़ेकोटिपगउसीओर

गड़गईजिधरभीएकदृष्टि

गड़गएकोटिदृगउसीओर

ಅಂದರೆ ಗಾಂಧಿೀಜಿ ಅವರು ಯಾವ ಗುರಿ ಇಟ್ಟುಕೊಂಡು ಹೋರಾಟ ಮಾಡಿದರೊ ಅದರತ್ತ ಇಡೀ ದೇಶದ ಜನ ಕಣ್ಣು ಇಟ್ಟಿದ್ದರು. ಅವರ ಹೋರಾಟದ ಹಾದಿಯನ್ನು ಲಕ್ಷಾಂತರ ಮಂದಿ ಹಿಂಬಾಲಿಸುತ್ತಿದ್ದರು. ಅಂದು ಜನರೂ ಸಹ ಅದೇ ಗುರಿಯನ್ನು ಇಟ್ಟುಕೊಂಡಿದ್ದರು. ಆದರೆ ಇಂದೂ ಅಂದರೆ 2017ರಲ್ಲಿ ಗಾಂಧಿೀ ಇಲ್ಲದೆ ನಾವು ಇಲ್ಲ. ಅಂದು ಇದ್ದ ಹೋರಾಟದ ನಾಯಕತ್ವ ಇಂದು ಇಲ್ಲದಿರಬಹುದು. ಆದರೆ ಇಂದು ನಾವು 125 ಕೋಟಿ ಮಂದಿ ಇದ್ದೇವೆ. ನಾವೆಲ್ಲ ಇಂದು ಒಟ್ಟುಗೂಡಿದರೆ ಗಾಂಧಿೀಜಿಯ ಮತ್ತು ಸ್ವಾತಂತ್ರ್ಯ ಹೋರಾಟಗರರ ಕನಸನ್ನು ನನಸು ಮಾಡಬಹುದಾಗಿದೆ. ಅದು ಕಷ್ಟವೂ ಅಲ್ಲ. 1942ರಲ್ಲಿ ನಾವು ಒಂದಾದ ಹಾಗೆ ಇಂದು ಸಹ ನಾವೆಲ್ಲರು ಒಗ್ಗಟ್ಟಾಗಬಹುದಾಗಿದೆ. 1942 ರಲ್ಲಿ ಇದ್ದ ಸಮಸ್ಯೆಗಳು ಇಂದಿಗೂ ಸಹ ವಿಶ್ವವನ್ನುಕಾಡುತ್ತಿವೆ.

ಆದರೆ ಅಂದು ನಾವು ನಡೆಸಿದ ಹೋರಾಟ ಇಂದು ವಿಶ್ವಕ್ಕೆ ಸ್ಪೂರ್ತಿಯಾಗಿದೆ. ಇಂದು ನಮಗೆ ಆ ಹೋರಾಟದ ಪಾಠದ ಅರಿವಾಗಿದೆ. ಅದು ನಮಗೆ ಸ್ಪೂತಿಂುೂ ಆಗಿದೆ. ನಾವು ನಮ್ಮ ಹೋರಾಟದ ಇತಿಹಾಸದಿಂದ ಸ್ಪೂರ್ತಿಯನ್ನು ಪಡೆಯಬಹುದಾಗಿದೆ.ಪಕ್ಷಾತೀತವಾಗಿ ದೇಶವನ್ನು ಮುನ್ನಡೆಸಬೇಕಿದೆ. ರಾಜಕೀಯವನ್ನು ಇದರಿಂದ ಹೊರಗಿಡಬೇಕಿದೆ. ನಾವು 125 ಕೋಟಿ ಮಂದಿ ಇರುವುದರಿಂದ ಈ ರೀತಿಯ ಸಮಸ್ಯೆಗಳನ್ನು ಒಗ್ಗಟ್ಟಾಗುವುದರ ಮೂಲಕ ಪರಿಹರಿಸಬಹುದಾಗಿದೆ. ಭ್ರಷ್ಟಾಚಾರದಿಂದ ದೇಶ ಹಾಳಾಗುತ್ತಿದೆ ಎನ್ನುವುದನ್ನು ಯಾರೂ ಅಲ್ಲಗಳೆಲಾಗುವುದಿಲ್ಲ. ರಾಜಕೀಯ ಭ್ರಷ್ಟಾಚಾರ, ಸಾಮಾಜಿಕ ಭ್ರಷ್ಟಾಚಾರ, ವ್ಯಕ್ತಿಯ ಭ್ರಷ್ಟಾಚಾರವನ್ನು ನಾವು ಓಡಿಸಬೇಕಿದೆ. ಇದರಲ್ಲಿ ಯಾರೂ ಇದ್ದಾರೆ ಎನ್ನುವುದನ್ನು ನಾವು ತೋರಿಸುವ ಮೂಲಕ ಸಮಸ್ಯೆ ಸೃಷ್ಟಿಸುವುದು ಬೇಡ. ಆದರೆ ಇಂದು ನಾವು ಪ್ರಾಮಾಣಿಕತೆಯನ್ನು ಆರಾಧಿಸುವ ಮೂಲಕ ಸಂಭ್ರಮಿಸಬೇಕಿದೆ. ಆ ಮೂಲಕದೇಶವನ್ನು ಮುನ್ನಡೆಸಬೇಕಿದೆ. ಇದು ದೇಶದ ಸಾಮಾನ್ಯ ನಾಗರಿಕನ ಬೇಡಿಕೆಯಾಗಿದೆ. ಬಡತನ, ಅಪೌಷ್ಟಿಕತೆ, ಅನಕ್ಷರತೆ ತೊಲಗಿಸುವುದು ಇಂದು ನಮಗೆ ಸವಾಲಿನ ಕೆಲಸವಾಗಿದೆ. ಇದು ಸರ್ಕಾರದ ಸವಾಲಿನ ಕೆಲಸವೆಂದು ನಿರ್ಧರಿಸುವುದು ಬೇಡ. ಇದರು ದೇಶಕ್ಕೆ ಸವಾಲೊಡ್ಡಿದೆ. ಬಡವರ ಮುಂದಿರುವ ಈ ಎಲ್ಲ ಪ್ರಶ್ನೆಗಳಿಗೆ ನಾವು ಪಕ್ವವಾಗಿ ಉತ್ತರಿಸುವ ಮೂಲಕ ನಮ್ಮ ಹೋರಟಗಾರರ ಕನಸನ್ನು ನನಸು ಮಾಡಬೇಕಿದೆ. ಇದೇ ರೀತಿಯ ವಿಭಿನ್ನ ಭಾವನೆಗಳನ್ನು ನಾವು 1942ರ ಹೋರಾಟದ ದಿನಗಳಲ್ಲಿ ಕಾಣಬಹುದಾಗಿತ್ತು. ಹಿಂಸೆಯ ಮೂಲಕ ಸಾಧಿಸಲು ಇದ್ದವರನ್ನು ನಾವು ಪಕ್ಕಕ್ಕೆ ಇಡೋಣ. ಸುಭಾಸ್ ಬಾಪು ಅವರ ಚಿಂತನೆಗಳು ವಿಭಿನ್ನವಾಗಿದ್ದವು. ಆದರೆ 1942ರಲ್ಲಿ ಎಲ್ಲರದೂ ಒಂದೇ ದ್ವನಿಯಾಗಿತ್ತು. ಅದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಗಾಂಧಿಜಿಯವರು ಹಾಕಿಕೊಟ್ಟ ಹೋರಾಟದ ಹಾದಿಯಾಗಿತ್ತು.

ನಮ್ಮ ಅಭಿವೃದ್ದಿಪೂರಕ ಮತ್ತು ಚಿಂತನೆಗಳು ವಿಭಿನ್ನವಾಗಿ ಇರಬಹುದು. ಆದರೆ ದೇಶದಲ್ಲಿರುವ ಬಡತನ, ಹಸಿವು, ಅನಕ್ಷರತೆಯನ್ನು ನಾವು ಹೋಗಲಾಡಿಸಬೇಕಿದೆ. ಗಾಂಧಿೀಜಿಯವರ ಗ್ರಾಮ ಸ್ವರಾಜ್ಯದ ಕನಸು ಏಕೆ ನಮ್ಮಿಂದ ದೂರವಾಗಿದೆ? ಜನರು ಏಕೆ ಗ್ರಾಮಗಳನ್ನು ತೊರೆಯುತ್ತಿದ್ದಾರೆ ಮತ್ತು ಪಟ್ಟಣಗಳನ್ನು ಜೀವನ ಕಂಡುಕೊಳ್ಳುತ್ತಿದ್ದಾರೆ? ಹಾಗಾದರೆ ಗಾಂಧೀಜಿಯ ಕನಸನ್ನು ನಾವು ನನಸು ಮಾಡಬಹುದೇ? ಈ ಪ್ರಶ್ನೆ ಕೇವಲ ಒಬ್ಬನ ಅಥವಾ ಸಮುದಾಯದ ಪ್ರಶ್ನೆಯಲ್ಲ. ಇದು ಒಟ್ಟಾರೆ 125 ಕೋಟಿ ಜನರ ಕೆಲಸವಾಗಿದೆ. ಜನರ ಸಮಸ್ಯೆಗಳನ್ನು ಹೋಗಲಾಡಿಸಲು ಈಗ ನಮಗೆ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಳ್ಳುವ ಮೂಲಕ ಸಾಧಿಸಬೇಕಿದೆ. ನಾವು ನಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಕೆಲಸ ಮಾಡಬೇಕಾದ ಸಂಸ್ಥೆಗಳು ದುರ್ಬಳಕೆಯಾಗುತ್ತಿವೆ. ಇದು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಆಗುತ್ತಿದೆ. ಆದರೆ ಇದು ಅನಿವಾರ್ಯವಾಗಿ ನಮ್ಮ ಜೀವನದ ಒಳಹೊಕ್ಕಿದೆ. ನಾವು ಇದರಲ್ಲಿ ಬಾಗಿಯಾಗಿದ್ದೇವೆ ಎಂದು ಬೇಸರಪಟ್ಟುಕೊಳ್ಳುವುದು ಬೇಡ. ನಾವು ಈ ರೀತಿ ಕಾನೂನನ್ನು ಉಲ್ಲಂಘಿಸುತ್ತಿದ್ದೇವೆ ಎಂಬುದು ನಮಗೆ ಅರಿವಾಗುವುದಿಲ್ಲ. ನಾವು ಉಗುಳುವುದನ್ನು ರೂಢಿಸಿಕೊಂಡಿರುತ್ತೇವೆ, ಆದರೆ ಅದುತಪ್ಪು ಎಂದು ನಮಗೆ ಅನಿಸುವುದಿಲ್ಲ. ಕಾನೂನುಗಳನ್ನು ಉಲ್ಲಂಘಿಸುವುದು ನಮ್ಮ ದಿನನಿತ್ಯದ ಕೆಲಸವಾಗಿದೆ. ಸಣ್ಣ ಸಣ್ಣ ತಪ್ಪುಗಳು ಸಹ ಇಂದು ಹಿಂಸೆಗೆ ಕಾರಣವಾಗುತ್ತಿದೆ. ಉದಾಹರಣೆಗೆ ವೈದ್ಯರಿಂದ ನಡೆದ ತಪ್ಪೊ ಅಥವಾ ಅಸ್ಪತ್ರೆಯಿಂದ ಆದ ಪ್ರಮಾದವೊ ರೋಗಿಯ ಸಂಬಂಧಿಕರು ಆಸ್ಪತ್ರೆಗೆ ಬೆಂಕಿ ಹಚ್ಚುವುದನ್ನು ನಾವು ನೋಡಿದ್ದೇವೆ. ಅಲ್ಲದೆ ವೈದ್ಯರಿಗೆ ಹೊಡೆಯುತ್ತಾರೆ. ಅದೇ ರೀತಿ ಅಪಘಾತ ಆದ ವೇಳೆಕಾರನ್ನು ಸುಟ್ಟುಹಾಕುತ್ತಾರೆ ಮತ್ತು ಚಾಲಕನಿಗೆ ಥಳಿಸುತ್ತಾರೆ. ಕಾನೂನು ಇರುವುದು ಜನರಿಗಾಗಿ. ನಾವು ನಮ್ಮ ಕರ್ತವ್ಯವನ್ನು ಮರೆಯಬಾರದು. ಈ ರೀತಿಯ ಕೆಲ ಘಟನೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ನಾವು ಕಾನೂನುಗಳನ್ನು ಉಲ್ಲಂಘಿಸುವುದು ಅದನ್ನು ಸಂಬಂದಪಟ್ಟವರು ಸರಿಮಾಡಲಿ ಎಂದುಕೊಳ್ಳುವುದು ಸರಿಯಲ್ಲ. ಈ ರೀತಿಯ ಪ್ರಕರಣಗಳಿಂದ ನಾವು ಹೊರಬರಬೇಕಿದೆ. ಇದು ಸಮುದಾಯದ ಕೆಲಸ ಕೂಡ.

ಶೌಚ ಮತ್ತು ನೈರ್ಮಲ್ಯ ಕಾಪಾಡುವುದು ಕೇವಲ ಪೌರಕಾರ್ಮಿಕರ ಕೆಲಸವಲ್ಲ. ಇಂದಿಗೂ ಮಹಿಳೆಯರು ರಾತ್ರಿಯಾದ ಬಳಿಕ ಶೌಚಕ್ಕೆ ಹೋಗುವುದು ಅನಿವಾರ್ಯವಾಗಿದೆ. ಶೌಚಾಲಯಗಳನ್ನು ಬಳಸುವ ಮೂಲಕ ಈ ರೀತಿಯ ಸಮಸ್ಯೆಗಳಿಂದ ಹೊರಬರಬೇಕಿದೆ. ಇದಕ್ಕಾಗಿ ನಾವು ಅವರಿಗೆ ತಿಳಿಹೇಳಬೇಕಿದೆ. ಈ ರೀತಿಯ ಸಮಸ್ಯೆಗಳನ್ನು ನಾವು ಕಾನೂನಿನ ಬಲದಿಂದ ಹೋಗಲಾಡಿಸಲಾಗುವುದಿಲ್ಲ. ಈ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವ ನಮ್ಮ ಸಹೋದರಿಯರ ಬಗ್ಗೆ ನಾವು ಯೋಚಿಸಬೇಕಿದೆ.

ಈ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಸಮುದಾಯ ಪ್ರಯತ್ನಿಸಬೇಕಿದೆ. ಶಕ್ತಿ ನಮಗೆ ಮತ್ತಷ್ಟು ಶಕ್ತಿಯನ್ನು ತುಂಬುತ್ತದೆ. ಗಾಂಧಿೀಜಿಯವರ ಹೋರಾಟದ ದಿನಗಳಲ್ಲಿ ಇದೇ ನಮ್ಮ ತಾಯಿಯರು ಸಾಥ್ ನೀಡಿದ್ದಾರೆ. ಇಂದಿಗೂ ತಾಯಂದಿರು ದೇಶಕ್ಕಾಗಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಅವರನ್ನು ನಮ್ಮ ಜತೆ ಕರೆದೊಯ್ಯಲು ಗ್ರಾಮೀಣ ಪ್ರದೇಶದಲ್ಲಿರುವ ಅವರ ಸಮಸ್ಯೆಗಳನ್ನು ಪರಿಹರಿಸಬೇಕಿದೆ.

1857ರಿಂದ 1947ರವರೆಗೆ ನಡೆದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಈ ರೀತಿಯ ಹಲವು ಘಟ್ಟಗಳನ್ನು ನೋಡಿದ್ದೇವೆ. ಆಗ ಹಲವು ರೀತಿಯ ಏರಿಳಿತಗಳು ಇದ್ದವು. ಹೊಸ ಹೊಸ ದಾರಿಗಳು, ಹೊಸ ನಾಯಕತ್ವ, ಕೆಲವೊಮ್ಮೆ ಹಿಂಸಾತ್ಮಕ ಸನ್ನಿವೇಶಗಳು, ಅಹಿಂಸಾತ್ಮಕ ಹೋರಾಟಗಳು, ಕೆಲವೊಮ್ಮೆ ಈ ಹಿಂಸೆ ಮತ್ತು ಅಹಿಂಸೆಯ ನಡುವೆಯೇ ಹೋರಾಟಗಳು,ಕೆಲವೊಮ್ಮೆ ಈ ವಿಭಿನ್ನ ಹೋರಾಟಗಳು ಒಟ್ಟಾಗಿಯೇ ಇದ್ದದ್ದನ್ನು ನಾವು ಕಾಣಬಹುದಾಗಿದೆ. ಆದರೆ ಈ 1857ರಿಂದ 1947ರವರೆಗೆ ನಡೆದ ಹಲವು ಘಟ್ಟಗಳಿಗೆ ನಾವು ಸಾಕ್ಷಿಯೆಂಬಂತೆ ಇದ್ದೇವೆ. ನಿಧಾನವಾಗಿ ಮುಂದುವರೆಯುವುದು, ಕ್ರಮೇಣ ದೂರಸರಿಯುವುದು, ನಂತರ ನಿಧಾನವಾಗಿ ಒಗ್ಗಟ್ಟಾಗುವುದನ್ನು ನಾವು ಕಾಣಬಹುದಾಗಿದೆ. ಆದರೆ 1857ರಿಂದ 1947ರವರೆಗಿನ ಬೆಳವಣಿಗೆಯನ್ನು ಗಮನಿಸಿದಾಗ ಬದಲಾವಣೆ ಎಂಬುದು ವೇಗ ಪಡೆದುಕೊಳ್ಳಲಿಲ್ಲ. ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ನಡೆದ ಹೋರಾಟದಲ್ಲಿ 1857ರಿಂದ 1942 ರವಗೆ ಹೆಚ್ಚು ವೇಗವನ್ನು ಪಡೆದುಕೊಂಡಿರಲಿಲ್ಲ. ಆದರೆ 1942ರಿಂದ 1947ರವರೆಗೆ ನಡೆದ ಹೋರಾಟಕ್ಕೆ ಸಾಕಷ್ಟು ವೇಗ ಇತ್ತು.

ನಾವು 100ರಿಂದ 200 ವರ್ಷದ ಹಿಂದಿನ ದಿನಗಳ ಬಗ್ಗೆ ಯೋಚಿಸಿದಾಗ ಅಭಿವೃದ್ದಿ ಎಂಬುದು ವೇಗೆ ಪಡೆದುಕೊಂಡಿದೆ. ನಿಧಾನವಾಗಿ ವಿಶ್ವ ಅಭಿವೃದ್ದಿಯತ್ತ ಚಲಿಸುತ್ತಿದೆ. ವಿಶ್ವವು ತನಗೆ ತಾನೇ ಬದಲಾಗುತ್ತಿದೆ. ಆದರೆ ಕಳೆದ 30ರಿಂದ 40 ವರ್ಷಗಳಲ್ಲಿ ವಿಶ್ವವು ವೇಗವಾಗಿ ಅಭಿವೃದ್ದಿಯತ್ತ ದಾಪುಗಾಲಿಡುತ್ತಿದೆ. ವ್ಯಕ್ತಿಯ ಜೀವನದಲ್ಲಿಯೂ ಸಾಕಷ್ಟು ರೀತಿಯ ಬದಲಾವಣೆಯಾಗುತ್ತಿದೆ. ಇದರಲ್ಲಿ ತಾಂತ್ರಿಕತೆಯ ಕೊಡುಗೆ ಸಾಕಷ್ಟಿದೆ. ಕಳೆದ 30-40 ವರ್ಷದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಯಾರೊಬ್ಬರಿಗೂ ಊಹಿಸಲು ಸಾಧ್ಯವಾಗುತ್ತಿಲ್ಲ. 30-40 ವಷಗಳ ಹಿಂದೆ ಈ ರೀತಿಯ ಬದಲಾವಣೆಯಾಗುತ್ತದೆ ಎಂದು ಯಾರೂ ಎಣೆಸಿರಲಿಲ್ಲ.

ನನಗೆ ಅನಿಸುತ್ತಿದೆ 2017 ಮತ್ತು 2022 ಅವಧಿ ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ರ್ತಿಯಾಗುತ್ತದೆ. ಜತೆಗೆ ಸ್ವಾತಂತ್ರ್ಯದಿನಕ್ಕೂ 75 ವರ್ಷ ತುಂಬುತ್ತದೆ. 1942ರಿಂದ 1947ರವರೆಗಿನ ಬೆಳವಣಿಗೆಗಳ ಮುಂದುವರೆದ ಭಾಗದಂತೆ 2017ರಿಂದ 2022ರವರೆಗೆ ಕಾಣಬಹುದಾಗಿದೆ. ಅಂದರೆ ನಾವು ಸ್ವಾತಂತ್ರ್ಯದಿನದ 75ವರ್ಷವನ್ನು ಆಚರಿಸಬಹುದಾಗಿದೆ. ಈ ವೇಳೆ ನಾವು ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡಬೇಕಿದೆ. ನಮ್ಮ ಕ್ವಿಟ್ ಇಂಡಿಯಾ ಚಳವಳಿಯ ಹೋರಾಟದಿಂದ ಕೇವಲ ಭಾರತಕ್ಕೆ ಅಷ್ಟೆ ಲಾವಾಗಿದೆ ಎಂದು ಅನಿಸುವುದಿಲ್ಲ. ಬದಲಾಗಿ ವಿಶ್ವದ ಇತರೆ ದೇಶಗಳು ಸಹ ಲಾ ಪಡೆದುಕೊಂಡಿವೆ. ಆ 5 ವರ್ಷದ ಅವಧಿಯಲ್ಲಿ ಭಾರತದ ಶಕ್ತಿ ವೃದ್ಧಿಸಿತ್ತು. ಮುಂದಿನ 5 ವರ್ಷಗಳಲ್ಲಿ ಇದೇ ಅಭಿವೃದ್ದಿಯನ್ನು ನಾವು ಕಾಣಬೇಕಿದೆ. ವಿಶ್ವದ ಮುಂಚೂಣಿಯಲ್ಲಿ ಭಾರತವನ್ನು ನಿಲ್ಲಿಸಬೇಕಿದೆ. ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾದರೆ ಅದು ದೊಡ್ಡ ಕೊಡುಗೆ ನೀಡಿದಂತಾಗುತ್ತಾದೆ. ಈ ಗುರಿಯನ್ನು ತಲುಪಲು ಸಾಧ್ಯವಾಗಲಿದೆ ಎಂಬ ವಿಶ್ವಾಸ ನನಗಿದೆ.

ನಾವು ಈಗ ಜಿಎಸ್‌ಟಿ ಬಗ್ಗೆ ನೋಡೋಣ. ನಾನು ಮತ್ತೊಮ್ಮೆ ಹೇಳುತ್ತೇನೆ ಇದು ನನ್ನ ರಾಜಕೀಯ ಪ್ರೇರಿತ ಹೇಳಿಕೆಯಲ್ಲ. ಜಿಎಸ್‌ಟಿ ಯಶ ಆಗುತ್ತದೆ ಎಂದರೆ ಅದು ಸರ್ಕಾರದ ಸಾಧನೆಯಲ್ಲ. ಅಥವಾ ಪಕ್ಷದ ಸಾಧನೆಯಲ್ಲ. ಜಿಎಸ್‌ಟಿ ಯಶ ಎಂದರೆ ಅದು ಜನರ ಯಶಸ್ಸು. ಜನರು ಮನೆಯಲ್ಲಿಯೇ ಇರಲಿ, ಹೊರಗಡೆ ಎಲ್ಲಿಯಾದರೂ ಇರಲಿ, ಒಬ್ಬ ವ್ಯಾಪಾರಿಯು ದೇಶದ ಯಾವುದೇ ಮೂಲೆಗಾದರೂ ಹೋಗಲಿ. ಆ ವ್ಯಾಪಾರಿಗೆ ದೇಶದಲ್ಲೆಡೆ ಒಂದೇ ರೀತಿಯ ತೆರಿಗೆ ಅನ್ವಯವಾಗುತ್ತದೆ. ಜಿಎಸ್‌ಟಿ ಎಂಬುದು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆ. ಇದು ಯಶಸ್ವಿವಾದರೆ ಇತರೆ ಕಾರ್ಯಕ್ರಮಗಳನ್ನು ನಾವು ಸುಲವಾಗಿ ಅನುಷ್ಠಾನಗೊಳಿಸಬಹುದಾಗಿದೆ. ಗಾಂಧೀಜಿಯವರು ಮಾಡು ಇಲ್ಲವೇ ಮಡಿ ಎಂಬ ಘೋಷವಾಕ್ಯವನ್ನು ನಮಗೆ ನೀಡಿದ್ದಾರೆ. ಇದನ್ನುನಾವು ಇಂದು ಅಂದರೆ 2017ರಲ್ಲಿ ಗಣನೆಗೆ ತೆಗೆದುಕೊಂಡರೆ 2022ರಲ್ಲಿ ನಾವು ಉತ್ತಮಸ್ಥಿತಿಯಲ್ಲಿ ಇರಲಿದ್ದೇವೆ. ಅಲ್ಲದೆ ದೇಶದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಬಹುದಾಗಿದೆ. ಸ್ವ ಉದ್ಯೋಗಕ್ಕಾಗಿ ನಾವು ಯುವ ಜನರಿಗೆ ಅವಕಾಶಗಳನ್ನು ನೀಡಬಹುದಾಗಿದೆ. ದೇಶದಲ್ಲಿರುವ ಅಪೌಷ್ಟಿಕತೆಯನ್ನು ತೊಲಗಿಸಬಹುದಾಗಿದೆ. ಮಹಿಳೆಯರಿಗೆ ಇರುವ ಸಾಮಾಜಿಕ ಅಡಚಣೆಗಳನ್ನು ಪರಿಹರಿಸಬಹುದಾಗಿದೆ. ಅನಕ್ಷರತೆಯನ್ನು ಹೋಗಲಾಡಿಸಬಹುದಗಿದೆ. ನಮ್ಮಲ್ಲಿ ಇನ್ನೂ ಕೂಡ ಹಲವು ಸಮಸ್ಯೆಗಳಿವೆ. ಅದರೆ ನಾವು ಮಾಡು ಇಲ್ಲವೆ ಮಡಿ ಎಂಬ ಗುರಿಯಲ್ಲಿ ಇವುಗಳನ್ನು ಸಾಧಿಸಬೇಕಿದೆ.

ಈ ರೀತಿಯ ಗಟ್ಟಿ ನಿರ್ಧಾರಗಳು ನನ್ನ ಸರ್ಕಾರ ಅಥವಾ ಪಕ್ಷದಲ್ಲ. ಅದು ಸಮಸ್ತ ಭಾರತೀಂುರದ್ದು. ಈ ಮುಂದಿನ 5 ವರ್ಷಗಳಲ್ಲಿ ನಾವು ನಮ್ಮ ಸ್ವಾತಂತ್ರ ಹೋರಾಟಗಾರರ ಕನಸನ್ನು ನನಸು ಮಾಡಬೇಕಿದೆ. ಇಂದು ಆಗಷ್ಟ್ ಕ್ರಾಂತಿಯ ದಿನ. ಇಂದು ನಾವು ಹುತಾತ್ಮರಾದವರನ್ನು ಗೌರವಿಸೋಣ, ಅವರ ಆಶೀರ್ವಾದವನ್ನು ಪಡೆಯೋಣ. ನಾವು ಕೆಲ ನಿರ್ಧಾರಗಳಿಗೆ ಬದ್ದರಾಗುವ ಮೂಲಕ ಒಂದು ತೀರ್ಮಾನಕ್ಕೆ ಬರೋಣ. ದೇಶದಲ್ಲಿರುವ ಸಮಸ್ಯೆಗಳಿಂದ ಮುಕ್ತಿಹೊಂದೋಣ.

ಮತ್ತೊಮ್ಮೆ ನಾನು ಸಭಾಪತಿಯವರಿಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸುತ್ತೇನೆ.


 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister Narendra Modi to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.