ಜಾರ್ಖಂಡ್ ನ ರಾಂಚಿಯಲ್ಲಿ ರೂಪಾಯಿ9400 ಕೋಟಿ ವೆಚ್ಚದ 21 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅನುಮೋದನೆಗಾಗಿ ಸಂಸದ ಶ್ರೀ ಸಂಜಯ್ ಸೇಠ್ ಅವರು ಟ್ವೀಟ್ ಸಂದೇಶ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಸಂಸತ್ತಿನ ಸದಸ್ಯರಾದ ಶ್ರೀ ಸಂಜಯ್ ಸೇಠ್ ಅವರು ಈ ಯೋಜನೆಯ ಕುರಿತು ಮಾಡಿದ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿ ಪ್ರಧಾನಮಂತ್ರಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ;
“ರಾಜ್ಯಗಳ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ. ಈ ರಾಷ್ಟ್ರೀಯ ಯೋಜನೆಗಳು ಜಾರ್ಖಂಡ್ ಸೇರಿದಂತೆ ಇಡೀ ದೇಶದ ಪ್ರಗತಿಗೆ ಹೊಸ ಚೈತನ್ಯವನ್ನು ನೀಡುತ್ತವೆ.
राज्यों के विकास में ही देश का विकास निहित है। इन राष्ट्रीय परियोजनाओं से झारखंड सहित पूरे देश की प्रगति को नई गति मिलेगी। https://t.co/mCpQ5B5wxy
— Narendra Modi (@narendramodi) March 25, 2023