ರಾಷ್ಟ್ರೀಯ ಜಲಮಾರ್ಗ-68 ನಿರ್ಮಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ, ಇದು ಗೋವಾದ ಪಂಜಿಮ್ ಮತ್ತು ವಾಸ್ಕೊ ನಡುವಿನ ಅಂತರವನ್ನು 9 ಕಿಲೋ ಮೀಟರ್ ಕಡಿಮೆ ಮಾಡಿದೆ. ಇದೀಗ ಪ್ರಯಾಣವನ್ನು ಕೇವಲ 20 ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು. ಮೊದಲು ಪಂಜಿಮ್ ಮತ್ತು ವಾಸ್ಕೊ ನಡುವಿನ ದೂರ ಸುಮಾರು 32 ಕಿ.ಮೀ. ಇತ್ತು. ಪ್ರಯಾಣದ ಸಮಯ ಸುಮಾರು 45 ನಿಮಿಷ ಆಗುತ್ತಿತ್ತು.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀ ಶ್ರೀಪಾದ್ ವೈ ನಾಯಕ್ ಅವರ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ, ಗೋವಾದ ಪಂಜಿಮ್ ಮತ್ತು ವಾಸ್ಕೊ ನಡುವಿನ ಈ ಸಂಪರ್ಕವು ಜನರಿಗೆ ಪರಿಹಾರ ನೀಡುವ ಜತೆಗೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಮರುಟ್ವೀಟ್ ಮಾಡಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿ ಅವರು ಟ್ವೀಟ್ ಮಾಡಿದ್ದು;
"ಗೋವಾದ ಪಂಜಿಮ್ ಮತ್ತು ವಾಸ್ಕೊ ನಡುವಿನ ಈ ಸಂಪರ್ಕವು ಜನರಿಗೆ ಪರಿಹಾರ ನೀಡುವ ಜತೆಗೆ, ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ" ಎಂದಿದ್ದಾರೆ.
पंजिम से वास्को के बीच इस कनेक्टिविटी से लोगों को राहत मिलने के साथ-साथ पर्यटन को भी बढ़ावा मिलेगा। https://t.co/poBGPk2cN8
— Narendra Modi (@narendramodi) March 5, 2023