ಸಮರ್ಪಿತ ಜೀವನ

Published By : Admin | May 23, 2014 | 15:09 IST

ಸಾಮಾನ್ಯವಾಗಿ 17ರ ಹರೆಯದ ಯುವ ಜನರು, ತಮ್ಮ ಭವಿಷ್ಯದ ಬಗ್ಗೆ ಆಶಯ ಜೊತೆ ಸಂತೋಷದ ಕ್ಷಣಗಳಲ್ಲಿ ಬಾಲ್ಯ ಕಳೆಯಲು ಬಯಸುತ್ತಾರೆ. ಆದರೆ ಇವರು ವಿಭಿನ್ನ ಹಾಧಿ ಹಿಡಿದರು. ಇವರು ಮನೆ ಬಿಟ್ಟು ದೇಶ ಸುತ್ತಲು ಅಖಂಡ ಭಾರತ ಪರ್ಯಟನೆಗಾಗಿ ಹೊಸ ಅಪರಿಚಿತ ಸವಾಲಿನ ಹೆಜ್ಜೆ ಇಟ್ಟರು.

ಇವರ ಮನೆಯವರಿಗೆ ದಿಗ್ಭ್ರಮೆಯಾಯಿತು. ಆದರೆ ಅವರ ಆಶಯದ ನಿರ್ಧಾರವನ್ನು ಮನೆಯವರೆಲ್ಲ ಸಂತಸದಿಂದ ಸ್ವೀಕರಿಸಿದರು. ಮನೆ ಬಿಡುವ ದಿನ ತಾಯಿ ಸಿಹಿ ತಿಂಡಿ ಮಾಡಿದರು, ಹಣೆಗೆ ತಿಲಕ ವಿತ್ತರು

ಹಿಮಾಲಯ ಪಯಣದಲ್ಲಿ, ಗರುಡಚಟ್ಟಿಯಲ್ಲಿ ವಾಸವಾದರು, ಪಶ್ಚಿಮ ಬಂಗಾಳ ಮತ್ತೂ ಇನ್ನೂ ಈಶಾನ್ಯ ರಾಜ್ಯಗಳಲ್ಲಿ ರಾಮಕೃಷ್ಣ ಆಶ್ರಮದಲ್ಲಿದ್ದರು. ದೇಶದ ಉದ್ದಗಲ ಸುತ್ತಿದರು. ಇವರಲ್ಲಿ ಸ್ವಾಮಿ ವಿವೇಕಾಂದರು ಬಹಳಷ್ಟು ಪರಿಣಾಮ ಬೀರಿದರು.

The Activist

ಶ್ರೀ ನರೇಂದ್ರ ಮೋದಿ ತನ್ನ ಬಾಲ್ಯ ಕಾಲದಲ್ಲಿ

ಆರ್.ಎಸ್.ಎಸ್. ಕರೆಗೆ ಓಗೊಟ್ಟರು

ಎರಡು ವರ್ಷಗಳ ನಂತರ ಶ್ರೀ ನರೇಂದ್ರ ಮೋದಿ ಅವರು ಪುನಃ ಹಿಂತುರುಗಿ ಹುಟ್ಟೂರಿಗೆ ಬಂದರು. ಕೇವಲ ಎರಡು ವಾರ ಕಾಲ ಮಾತ್ರ ಇದ್ದರು. ಅಹಮ್ಮದಾಬಾದ್ ನಲ್ಲಿ ಆರ್.ಎಸ್.ಎಸ್. ಜೊತೆ ಕೆಲಸ ಮಾಡಲು ಹೊರಟೇ ಬಿಟ್ಟರು.  1925ರಲ್ಲಿ ಸ್ಥಾಪಿತವಾದ ಆರ್.ಎಸ್.ಎಸ್.  ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಗೈಯುವ ಬಹುದೊಡ್ಡ ಸಂಘಟನೆಯಾಗಿದೆ.            

The Activist

ಇವರಿಗೆ ಆರ್.ಎಸ್.ಎಸ್. ಜೊತೆ 8 ನೇ ವಯಸ್ಸಿರುವಾಗಲೇ ನಂಟು ಬೆಳೆದಿತ್ತು. ತನ್ನ ಚಹಾ ಅಂಗಡಿಯ ದಿನದ ಕೆಲಸ ಮುಗಿದ ಮೇಲೆ ಸಂಜೆ ಅವರು ಪಕ್ಕದ ಆರ್.ಎಸ್.ಎಸ್.  ಶಾಖೆಯ ಸಭೆಗಳಲ್ಲಿ ಚಟುವಟಿಕೆಗಳನ್ನು ಗಮನಿಸಿ ಅವುಗಳಲ್ಲಿ ಪಾಲ್ಗೊಳ್ಳುವುದಕ್ಕೆ ಮೀಸಲಿಡುತ್ತಿದ್ದರು. ಇದು ರಾಜಕೀಯೇತರ ಸಭೆಯಾಗಿತ್ತು. ಅಲ್ಲಿ ವಕೀಲ್ ಸಹೆಬ್ ಎಂದೇ ಗೌರವಿಸಲ್ಪಡುತ್ತಿದ್ದ ಲಕ್ಷ್ಮಣರಾವ್ ಇನಾಂದಾರ್ ಇವರಲ್ಲಿ ಬಹಳಷ್ಟು ಪರಿಣಾಮ ಬೀರಿದರು.

The Activist

                                                                                        ಶ್ರೀ ನರೇಂದ್ರ ಮೋದಿ ಅವರ ಆರ್.ಎಸ್.ಎಸ್. ದಿನಗಳು

 

ಅಹಮ್ಮದಾಬಾದ್ ಹಾದಿ ಮತ್ತು ಅಲ್ಲಿಂದ ಮುಂದಕ್ಕೆ.

ಇಂತಹ ಅನುಭವ ಹಿನ್ನಲೆಯಲ್ಲಿ ಇಪ್ಪತ್ತು ವರ್ಷ ಪ್ರಾಯದ ಶ್ರೀ ಮೋದಿ ಗುಜರಾತಿ ಬಹುದೊಡ್ಡ ನಗರ ಅಹಮ್ಮದಾಬಾದ್  ಸೇರಿದರು. ಆರ್.ಎಸ್.ಎಸ್. ಸಂಘಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. 1972ರಲ್ಲಿ ಸಂಪೂರ್ಣ ಅವಧಿ ಮೀಸಲಿಟ್ಟು ಪ್ರಚಾರಕರಾದರು. ಇತರ ಪ್ರಚಾರಕರ ಜೊತೆ ವಸತಿ ಹಂಚಿಕೊಂಡರು. ಮುಂಜಾನೆ 5:00 ಗಂಟೆಗೆ ದಿನ ಪ್ರಾರಂಭವಾಗುತ್ತಿತ್ತು, ಹಾಗೂ ಮಧ್ಯರಾತ್ರಿ ತನಕ ಸತತ ವಿವಿಧ ಕಾರ್ಯಕ್ರಮ ಇರುತ್ತಿತ್ತು.

ಪ್ರಚಾರಕರಾಗಿ ಗುಜರಾತ್ ಸುತ್ತಿದರು.  1972-73ರ ಅವಧಿಯಲ್ಲಿ ಖೇಡ್ ಜಿಲ್ಲೆಯ  ನಾಡಿಯಾದ್ ನಲ್ಲಿ ಸಂತ್ರಮ್ ಮಂದಿರ್ ನಲ್ಲಿ ವಾಸವಾದರು.. 1973ರಲ್ಲಿ ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಯಿತು.

The Activist

ಗುಜರಾತ್ ರಾಜ್ಯ ಮಾತ್ರವಲ್ಲದೆ ಮತ್ತು ದೇಶದ ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಅಸ್ಥಿರವಾಗಿತ್ತು. ವಿವಿಧಡೆ ಕೋಮು ಜಗಳ ದಂಗೆ ಮುಗಿಲೆದ್ದಿತು. 1967ರಲ್ಲಿ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸ್ ಇಬ್ಬಾಗವಾಯಿತು. ಮೊರಾರ್ಜಿ ದೇಸಾಯಿ ಇನ್ನೊಂದು ಪಂಗಡದ ನಾಯಕರಾಗಿದ್ದರು. 1971ರಲ್ಲಿ ಗಾಂಧಿ ಪುನಃ ಲೋಕಸಭೆಯಲ್ಲಿ 352 ಸ್ಥಾನ ಪಡೆದು ಅಧಿಕಾರ ಪಡೆದರು. ಗುಜರಾತ್ ನಲ್ಲೂ 50%ರಷ್ಟು ಮತಗಳಿಸಿ, ವಿಧಾನಸಭಾ 140 ಸ್ಥಾನ ಪಡೆದು ಅವರ ಪಕ್ಷ ಆಡಳಿತ ಪಡೆಯಿತು.

 

The Activist

Narendra Modi – a Pracharak

ಇಂದುಲಾಲ್ ಯಾಜ್ಞಿಕ್, ಜಿವರಾಜ್ ಮೆಹ್ತಾ ಮತ್ತು ಬಲ್ವಂತ್ರಾಜ್ ಮೆಹ್ತಾ ಮುಂತಾದವರ ಬಲಿದಾನ , ಮುಂದಿನ ಜನನಾಯಕರ ಹಣದಾಸೆಯ ಅಧಿಕಾರದ ರಾಜಕೀಯದಲ್ಲಿ ಬೆಲೆಕಳೆದುಕೊಂಡಿತು. 1960ರ ಕೊನೆಗೆ ಮತ್ತು 1970 ಅವಧಿಯಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ದುರಾಡಳಿತ ಗುಜರಾತ್ ರಾಜ್ಯದಲ್ಲಿ ಅತ್ಯಧಿಕವಾಯಿತು. 1971ರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು, ಮತ್ತು ಕಾಂಗ್ರೇಸ್ ಸರಕಾರ ಬಡತನದಿಂದ ಜನಸಾಮಾನ್ಯರನ್ನು ಮೇಲೆತ್ತುವ ಭರವಸೆ ನೀಡಿತು. ಕಾಂಗ್ರೆಸ್ ಸರಕಾರ ಬಡತನ ಹೊಡೆದೋಡಿಸಿ (ಗರೀಬಿ ಹಠಾವೋ) ಬದಲಾಗಿ ಬಡವರನ್ನು ಹೊಡೆದೋಡಿಸಿ (ಗರೀಬ್ ಹಠಾವೋ) ಎಂದು ತನ್ನ ನಿಲುವು ಬದಲಾಯಿಸಿತು. ಗುಜರಾತಿ ಜನತೆಯ , ಅದರಲ್ಲೂ ಬಡಜನಸಾಮಾನ್ಯರ ಜೀವನ ಆವಶ್ಯಕ ವಸ್ತುಗಳ ಖರೀದಿ ಕೂಡಾ ಸಾಧ್ಯವಾಗದೆ, ಬೆಲೆ ಏರಿಕೆಯಿಂದ ತತ್ತರವಾಯಿತು.

ನವನಿರ್ಮಾಣ ಆಂದೋಲನ : ಯುವಶಕ್ತಿ

ಹದಕೆಟ್ಟ ಪರಿಸ್ಥಿತಿಗೆ ಮಹತ್ವ ನೀಡಿ ಉತ್ತಮ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆಂತರಿಕ ಗೊಂದಲ, ಜಗಳದಲ್ಲಿ ರಾಜಕಾರಣ ಮಾಡುತ್ತಾ ಗುಜರಾತನ್ನು ಅವ್ಯವಸ್ಥೆಯ ಅಧೋಗತಿಗೊಯಿದರು. ಘನಶ್ಯಾಮ ಓಝಾ ಅವರ ಸರಕಾರವನ್ನು  ಬದಲಾಯಿಸಿ ಚಿಮನ್ ಭಾಯಿ ಪಟೇಲ್ ಅವರ ಸರಕಾರ ಆಡಳಿತ ಹಿಡಿಯಿತು. ಆದರೂ ಅತ್ಯಂತ ಕಳಪೆ ಆಡಳಿತದಲ್ಲಿ ಸುಧಾರಣೆಯ ಗಾಳಿ ಗುಜರಾತಿನಿಂದ ದೂರ ಸಾಗಿತು.  1973 ಡಿಸೆಂಬರ್ ನಲ್ಲಿ ಅಸಮಾಧಾನ ಮುಗಿಲು ಮುಟ್ಟಿತು., ಮೋರ್ಬಿ ಎಂಜಿನೀಯರಿಂಗ್ ಕಾಲೇಜು ಕೆಲವು ವಿದ್ಯಾರ್ಥಿಗಳು ಅವರ ಆಹಾರದ ಶುಲ್ಕ ಮಿತಿಮೀರಿದ್ದನ್ನು ಪ್ರತಿಭಟಿಸಿದರು.

ನವನಿರ್ಮಾಣ ಆಂದೋಲನ ಅತ್ಯಂತ ಯಶಸ್ವೀ ಸಾಮೂಹಿಕವಾಗಿ, ಜನಸಾಮಾನ್ಯರ ಇತರ ಎಲ್ಲ ಸಮಸ್ಯೆಗಳತ್ತ ಗಮನಹರಿಸಿ, ಅವರುಗಳ ಧ್ವನಿಯಾಯಿತು. ಭ್ರಷ್ಟಾಚಾರ ವಿರೋಧ ಆಂದೋಲನದ ದ ಲೋಕ ನಾಯಕ ಜಯಪ್ರಕಾಶ್ ನಾರಯಾಣ ಅವರ ಬೆಂಬಲ ದೊರಕಿತು. ಅವರನ್ನು ಅಹಮ್ಮದಾಬಾದ್ ಭೇಟಿ ಸಮಯದಲ್ಲಿ ಅತ್ಯಂತ ಸನಿಹದಿಂದ ಭೇಟಿಯಾಗಿ ಅರಿಯುವ , ಒಡನಾಟ ಬೆಳೆಸುವ ಅವಕಾಶ ಸಿಕ್ಕಿತು.

 

The Activist

The historic Navnirman Movement

ವಿದ್ಯಾರ್ಥಿಗಳ ಯುವ ಶಕ್ತಿ ಗೆಲುವು ಸಾಧಿಸಿತು.  ಮುಖ್ಯಮಂತ್ರಿ ರಾಜೀನಾಮೆ ನೀಡಿದರು. 25ನೇ ಜೂನ್, 1975ಕ್ಕೆ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿ ದೇಶವನ್ನೇ ಕತ್ತಲೆಯಲ್ಲಿ ಚಟುವಟಿಕೆರಹಿತ ಸ್ಥಗಿತಗೊಳಿಸಿದರು.

ತುರ್ತು ಪರಿಸ್ಥಿತಿಯ ಕತ್ತಲೆ ದಿನಗಳು

ಶ್ರೀಮತಿ ಗಾಂಧಿ ಸೋಲಿನ ಭಯದಲ್ಲಿದ್ದರು. ನ್ಯಾಯಾಲಯದ ತೀರ್ಪಿನ ಹೆದರಿಕೆ ಅವರಲ್ಲಿತ್ತು. ಜನತೆಯ ವಾಕ್ ಸ್ವಾತಂತ್ರ್ಯ ತಡೆ ಹಿಡಿಯಲಾಗಿತ್ತು. ವಿರೋಧ ಪಕ್ಷ ನಾಯಕರಾದ  ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಎಲ್. ಕೆ. ಅಡ್ವಾಣಿ. ಶ್ರೀ ಜಾರ್ಜ್ ಫೆರ್ನಾಂಡೀಸ್ ಸೆರೆಮನೆಯಲ್ಲಿ ಬಂಧಿತರಾಗಿದ್ದರು.

 

The Activist

Narendra Modi during Emergency

ತುರ್ತುಪರಿಸ್ಥಿತಿ ವಿರುದ್ದ ಗುಜರಾತ್ ಲೋಕ್ ಸಂಘರ್ಷ ಸಮಿತಿ ರೂಪಿತವಾಯಿತು. ಮೋದಿ ಇದರ ಪ್ರಧಾನ ಕಾರ್ಯದರ್ಶಿಯಾದರು. ಇವರ ಚಳವಳಿ ತೀವ್ರಗತಿ ಹಿಡಿಯಿತು.

ತುರ್ತುಪರಿಸ್ಥಿತಿಯಲ್ಲಿ  ನಾಯಕ ನಾನಾಜಿ ದೇಶ್ ಮುಖ್ ಬಂಧಿತರಾದಾಗ ಇತರ ನಾಯಕರನ್ನು ಸಂರಕ್ಷಸಿ ಸುರಕ್ಷಿತ ತಾಣಗಳಲ್ಲಿ ಅಡಗಿಸಿಡುವ ಕಾರ್ಯ ಮೋದಿ ಮಾಡಿದರು.ತುರ್ತುಪರಿಸ್ಥಿತಿ ವಿರೋಧಿಗಳನ್ನು ಒಂದು ಕಡೆಯಿಂದ ಇನ್ನೊಂದಡೆಗೆ ಸಾಗಿಸುವ ವ್ಯವಸ್ಥೆ ಇವರದ್ದಗಿತ್ತು. ಉತ್ತಮ ಸಂಘಟಕರಾಗಿದ್ದ ಇವರಲ್ಲಿ  ದಿನದಿಂದ ದಿನಕ್ಕೆ ಜವಾಬ್ದಾರಿಗಳು ಹೆಚ್ಚುತ್ತಲೇ ಹೋದವು. ತುರ್ತುಪರಿಸ್ಥಿತಿ ಬಗ್ಗೆ 2013ರಲ್ಲಿ ಒಂದು ಬ್ಲಾಗ್ ಹೀಗೆ ಬರೆದರು.

 

The Activist

ಯುವಕನಾಗಿದ್ದ ನನ್ನಂತಹ ಜನರಿಗೆ ತುರ್ತು ಪರಿಸ್ಥಿತಿ ನಮ್ಮ ಕಠಿಣ ಪರಿಸ್ಥಿತಿ ಎದುರಿಸುವ ಶಕ್ತಿ ಹೆಚ್ಚಿಸುವ ಅವಕಾಶವಾಗಿದೆ. ಹಿರಿಯ ದಿಗ್ಗಜ ನಾಯಕರನ್ನು ಭೇಟಿಮಾಡುವ ಸುಸಂದರ್ಭವಾಗಿದೆ. ವಿವಿಧ ಪಕ್ಷಗಳ ಜನನಾಯಕರ ಪರಿಚಯತಾಣವಾಗಿದೆ. ಕಾಂಗ್ರೆಸ್ಸನ ಏಕಪತ್ಯ ಸರ್ವಾಧಿಕಾರಿ ಧೋರಣೆಯ ವಿರುದ್ದ ಜಾತಿ ಮತ ಪಕ್ಷ ಬೇಧಬಾವ ಇಲ್ಲದೆ ಎಲ್ಲರೂ ಜೊತೆಯಾಗಿ ಬೆರೆದರು.”


ಇವರು ತನ್ನ ಅನುಭವವನ್ನು ಆಪತ್ಕಾಲ್ ಮೆ ಗುಜರಾತ್ ( ತುರ್ತುಪರಿಸ್ಥಿತಿಯಲ್ಲಿ ಗುಜರಾತ್) ಎಂಬ ಪುಸ್ತಕ ಬರೆದು ಪ್ರಕಟಿಸಿದರು.

 

ತುರ್ತುಪರಿಸ್ಥಿಯ ಎಲ್ಲೆಮೀರಿ

ನವನಿರ್ಮಾಣ ಆಂದೋಲನ ದ ಯಶಸ್ಸಿನ ನಂತರ 1977ರ ಸಾರ್ವಜನಿಕ ಚುನಾವಣೆಯಲ್ಲಿ ಶ್ರೀಮತಿ ಇಂದಿರಾಗಾಂಧಿ  ಹೀನಾಯವಾಗಿ ಸೋತರು, ಜನತಾ ಸರಕಾರ ಆಡಳಿತಕ್ಕೆ ಬಂತು. ಜನಸಂಘ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮುಂತಾದವರು ಪ್ರಮುಖ ಕ್ಯಾಬಿನೆಟ್ ಸಚಿವರಾದರು

ಅದೇ ಸಂದರ್ಭದಲ್ಲಿ ಶ್ರೀ ನರೇಂದ್ರ ಮೋದಿ ಅವರನ್ನು ಸಂಭಾಗ್ ಪ್ರಚಾರಕ್ ( ಪ್ರಾಂತೀಯ ಮುಖ್ಯಸ್ಥ) ಹುದ್ದೆಗೆ ನೇಮಿಸಲಾಯಿತು ಅವರು ದಕ್ಷಿಣ ಮತ್ತು ಕೇಂದ್ರ ಗುಜರಾತ್ ಸಂಘಟನಾ ಜವಾಬ್ದಾರಿ ಹೊತ್ತರು. ತುರ್ತು ಪರಿಸ್ಥಿತಿ ಅವಧಿಯಲ್ಲಿ ಅವರನ್ನು ದೆಹಲಿಗೆ ಕರೆಸಿ ಆರ್.ಎಸ್.ಎಸ್  ಲೆಕ್ಕ ಪರಿಶೇಧಕರಾಗಿ ನೇಮಿಸಲಾಯಿತು. ಆಮೂಲಕ ರಾಜ್ಯ ಮತ್ತು ಕೇಂದ್ರಗಳ ವಿವಿಧ ಜವಾಬ್ದಾರಿಗಳನ್ನು ಇವರ ಹೆಗಲ ಮೇಲ ಹೊರಿಸಲಾಯಿತು

 

The Activist

Narendra Modi in a village of Gujarat

1980ರ ಅವಧಿಯಲ್ಲಿ, ಗುಜರಾತಿ ಉದ್ದಗಲಕ್ಕೂ ಸಂಚರಿಸಿ ಜನಸಾಮಾನ್ಯರ ಜೊತೆ ಬೆರೆತು ಅವರುಗಳ ಕಷ್ಟಸುಖಗಳ ವಿನಿಮಯದಲ್ಲಿ ವಿಶೇಷ ಅನುಭವ ಪಡೆದರು. ಉತ್ತಮ ಸಂಘಟಕರಾಗಿ ತಮ್ಮನ್ನು ತಾವೇ ಬೆಳೆಸಿಕೊಂಡರು. ಕಠಣ ಪರಿಶ್ರಮ, ಅಹರ್ನಿಶಿ ಪ್ರಯತ್ನಗಳು ಮುಖ್ಯ ಮಂತ್ರಿಯಾಗಿ ಅವರಿಗೆ ಪ್ರಕೃತಿ ವಿಕೋಪಗಳಾದ ನೆರೆ ಬರ ಹಾಗೂ ದಂಗೆ - ಗಲಭೆಗಳಂತಹ ಪ್ರತಿಕೂಲ ವ್ಯವಸ್ಥೆಗಳ ಪರಿಹಾರ ಕಾರ್ಯತಂತ್ರಗಳಿಗೆ ಬಹಳಷ್ಟು ಅನುಕೂಲ ಮಾಡಿತು.

ಶ್ರೀ ನರೇಂದ್ರ ಮೋದಿ ಅರ್.ಎಸ್.ಎಸ್. ಮತ್ತು ಬಿ.ಜೆ.ಪಿ ಯಲ್ಲಿ ತಮ್ಮನ್ನು ಮುಳುಗಿಸಿಕೊಂಡಿದ್ದಾರೆ. ಅಲ್ಲದೆ, 1987ರಲ್ಲಿ ಇವರ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.

ವಡ್ಗರ್ ಹುಡುಗ, ತನ್ನ ಹುಟ್ಟೂರನ್ನು ದೇಶಸೇವೆಗಾಗಿ ಬಿಟ್ಟು ಹೊರಟಾಗ, ಒಂದು ದೊಡ್ಡಹೆಜ್ಜೆ ಇಡಬೇಕೆಂದಷ್ಟೇ ಬಯಸಿದ್ದ.  ಇದುಕೇವಲ ದೇಶದ ಜನಸಾಮಾನ್ಯನ ಮತ್ತು ಮಹಿಳೆಯರ ಮುಖದಲ್ಲಿ ನಗು ತರಿಸುವ ತನಕ ತಲುಪಬಹುದೆಂದು ಯಾರೊಬ್ಬ ಕೂಡಾ ಊಹಿಸಿರಲಿಲ್ಲ. ಶ್ರೀ ಮೋದಿ ಅವರ ಕೈಲಾಸ ಮಾನಸ ಸರೋವರ ಯಾತ್ರೆ ಅವರನ್ನು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯನ್ನಾಗಿಸಿತು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.