"ನಮಗೆಲ್ಲರಿಗೂ ವಿಭಿನ್ನ ಪಾತ್ರಗಳು, ವಿಭಿನ್ನ ಜವಾಬ್ದಾರಿಗಳು, ವಿಭಿನ್ನ ಕಾರ್ಯವಿಧಾನಗಳು ಇರಬಹುದು, ಆದರೆ ನಮ್ಮ ನಂಬಿಕೆ, ಸ್ಫೂರ್ತಿ ಮತ್ತು ಚೈತನ್ಯದ ಮೂಲ ಒಂದೇ ಆಗಿದೆ – ಅದು ನಮ್ಮ ಸಂವಿಧಾನ"
"ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ- ಎಲ್ಲರ ಪ್ರಯತ್ನ ಸಂವಿಧಾನದ ಸ್ಫೂರ್ತಿಯ ಅತ್ಯಂತ ಶಕ್ತಿಶಾಲಿ ಅಭಿವ್ಯಕ್ತಿಯಾಗಿದೆ. ಸಂವಿಧಾನಕ್ಕೆ ಸರ್ಕಾರ ಸಮರ್ಪಿತವಾಗಿದ್ದು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ"
"ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಅವಧಿಗೂ ಮೊದಲೆ ಸಾಧಿಸುತ್ತಿರುವ ಏಕೈಕ ದೇಶ ಭಾರತವಾಗಿದೆ. ಆದರೂ, ಪರಿಸರದ ಹೆಸರಿನಲ್ಲಿ, ಭಾರತದ ಮೇಲೆ ವಿವಿಧ ಒತ್ತಡಗಳನ್ನು ಹೇರಲಾಗಿದೆ. ಇದೆಲ್ಲವೂ ವಸಾಹತುಶಾಹಿ ಮನಸ್ಥಿತಿಯ ಫಲಿಶ್ರುತಿಯಾಗಿದೆ"
"ಅಧಿಕಾರದ ವಿಭಜನೆಯ ಬಲವಾದ ಅಡಿಪಾಯದ ಮೇಲೆ, ನಾವು ಸಾಮೂಹಿಕ ಜವಾಬ್ದಾರಿಯ ಹಾದಿಯನ್ನು ಸುಗಮಗೊಳಿಸಬೇಕಾಗಿದೆ, ಮಾರ್ಗಸೂಚಿಯನ್ನು ರಚಿಸಬೇಕಿದೆ, ಗುರಿಗಳನ್ನು ನಿರ್ಧರಿಸಬೇಕಿದೆ ಮತ್ತು ದೇಶವನ್ನು ಅದರ ಗಮ್ಯಸ್ಥಾನಕ್ಕೆ ತೆಗೆದುಕೊಂಡುಬೇಕಿದೆ"

ನಮಸ್ಕಾರ!

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಜಿ, ನ್ಯಾಯಮೂರ್ತಿ ಯು.ಯು. ಲಲಿತ್ ಜಿ, ಕಾನೂನು ಸಚಿವ ಶ್ರೀ ಕಿರಣ್ ರಿಜಿಜು ಜಿ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಜಿ, ಅಟಾರ್ನಿ ಜನರಲ್ ಶ್ರೀ ಕೆ.ಕೆ. ವೇಣುಗೋಪಾಲ್ ಜಿ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ವಿಕಾಸ್ ಸಿಂಗ್ ಜಿ ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರೆ ಮತ್ತು ಮಹನೀಯರೆ !

ನಾನು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ನನ್ನ ಸಹೋದ್ಯೋಗಿಗಳೊಂದಿಗೆ ಬೆಳಿಗ್ಗೆ ಇದ್ದೆ. ಮತ್ತು ಈಗ ನಾನು ನ್ಯಾಯಾಂಗಕ್ಕೆ ಸಂಬಂಧಿಸಿದ ವಿದ್ವಾಂಸರ ಜೊತೆಯಲ್ಲಿದ್ದೇನೆ. ನಾವೆಲ್ಲರೂ ವಿಭಿನ್ನ ಪಾತ್ರಗಳು, ಜವಾಬ್ದಾರಿಗಳು ಮತ್ತು ಕೆಲಸಗಳನ್ನು ಮಾಡುವ ವಿಧಾನಗಳನ್ನು ಹೊಂದಿರಬಹುದು, ಆದರೆ ನಮ್ಮ ನಂಬಿಕೆ, ಸ್ಫೂರ್ತಿ ಮತ್ತು ಶಕ್ತಿಯ ಮೂಲ ಒಂದೇ - ನಮ್ಮ ಸಂವಿಧಾನ!  ಇಂದು ನಮ್ಮ ಸಾಂವಿಧಾನಿಕ ನಿರ್ಣಯಗಳನ್ನು ಬಲಪಡಿಸುವ ಮೂಲಕ ಸಂವಿಧಾನ ದಿನದಂದು ನಮ್ಮ ಸಾಮೂಹಿಕ ಮನೋಭಾವವನ್ನು ಈ ಕಾರ್ಯಕ್ರಮದ ರೂಪದಲ್ಲಿ ವ್ಯಕ್ತಪಡಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಜನರು ಅಭಿನಂದನೆಗೆ ಅರ್ಹರು.

ಮಹನೀಯರೇ,

ಸ್ವಾತಂತ್ರ್ಯಕ್ಕಾಗಿ ಜೀವಿಸಿದ ಮತ್ತು ಮಡಿದ ಮತ್ತು ಸಾವಿರಾರು ವರ್ಷಗಳಿಂದ ಭಾರತದ ಶ್ರೇಷ್ಠ ಸಂಪ್ರದಾಯವನ್ನು ಪಾಲಿಸಿದ ಜನರ ಕನಸಿನ ಬೆಳಕಿನಲ್ಲಿ, ನಮ್ಮ ಸಂವಿಧಾನ ನಿರ್ಮಾಪಕರು ನಮಗೆ ಸಂವಿಧಾನವನ್ನು ನೀಡಿದರು. ನೂರಾರು ವರ್ಷಗಳ ಜೀತಪದ್ಧತಿ ಭಾರತವನ್ನು ಹಲವು ಸಮಸ್ಯೆಗಳಲ್ಲಿ ಮುಳುಗಿಸಿತ್ತು. ಒಂದು ಕಾಲದಲ್ಲಿ ಗೋಲ್ಡನ್ ಬರ್ಡ್ ಎಂದು ಕರೆಯಲ್ಪಡುವ ಭಾರತವು ಬಡತನ, ಹಸಿವು ಮತ್ತು ರೋಗಗಳ ವಿರುದ್ಧ ಹೋರಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ದೇಶವನ್ನು ಮುನ್ನಡೆಸಲು ಸಂವಿಧಾನ ನಮಗೆ ಸದಾ ಸಹಕಾರಿಯಾಗಿದೆ. ಆದರೆ ಇಂದು ಭಾರತದಂತೆಯೇ ಸ್ವತಂತ್ರವಾದ ಇತರ ದೇಶಗಳಿಗೆ ಹೋಲಿಸಿದರೆ, ಅವರು ಇಂದು ನಮಗಿಂತ ಬಹಳ ಮುಂದಿದ್ದಾರೆ. ಬಹಳಷ್ಟು ಮಾಡಬೇಕಾಗಿದೆ ಮತ್ತು ನಾವು ಒಟ್ಟಿಗೆ ಗುರಿಗಳನ್ನು ತಲುಪಬೇಕು. ನಮ್ಮ ಸಂವಿಧಾನದಲ್ಲಿ ‘ಸೇರ್ಪಡೆ’ಗೆ ಎಷ್ಟು ಒತ್ತು ನೀಡಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಸ್ವಾತಂತ್ರ್ಯದ ಹಲವು ದಶಕಗಳ ನಂತರವೂ ದೇಶದ ಹೆಚ್ಚಿನ ಸಂಖ್ಯೆಯ ಜನರು 'ಹೊರಗಿಡುವಿಕೆ'ಯನ್ನು ಎದುರಿಸುತ್ತಲೇ ಇದ್ದಾರೆ ಎಂಬುದಂತೂ ಸತ್ಯ. ಮನೆಗಳಲ್ಲಿ ಶೌಚಾಲಯವೂ ಇಲ್ಲದ, ವಿದ್ಯುತ್ ಕೊರತೆಯಿಂದ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದ ಲಕ್ಷಾಂತರ ಜನರು, ತಮ್ಮ ಜೀವನದಲ್ಲಿ ಸ್ವಲ್ಪ ನೀರು ಪಡೆಯುವುದೇ ದೊಡ್ಡ ಹೋರಾಟವಾಗಿದೆ; ಅವರ ಕಷ್ಟಗಳು ಮತ್ತು ನೋವುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ  ಜೀವನವನ್ನು ಸುಲಭಗೊಳಿಸಲು ತನ್ನನ್ನು ತಾನೇ ವ್ಯಯಿಸುವುದು ಸಂವಿಧಾನಕ್ಕೆ ನಿಜವಾದ ಗೌರವ ಎಂದು ನಾನು ಭಾವಿಸುತ್ತೇನೆ. ಮತ್ತು ಸಂವಿಧಾನದ ಮೂಲ ಆಶಯಕ್ಕೆ ಅನುಗುಣವಾಗಿ ದೇಶದಲ್ಲಿ ‘ಹೊರಹಾಕುವಿಕೆ’ಯನ್ನು ‘ಸೇರ್ಪಡೆ’ಯಾಗಿ ಪರಿವರ್ತಿಸುವ ಬೃಹತ್ ಅಭಿಯಾನ ನಡೆಯುತ್ತಿದೆ ಎಂದು ನನಗೆ ತೃಪ್ತಿ ಇದೆ. ಇದರ (ಅಭಿಯಾನ) ಬಹುದೊಡ್ಡ ಲಾಭವನ್ನೂ ನಾವು ಅರ್ಥ ಮಾಡಿಕೊಳ್ಳಬೇಕು.  ಎರಡು ಕೋಟಿಗೂ ಹೆಚ್ಚು ಬಡವರಿಗೆ ಪಕ್ಕಾ ಮನೆಗಳು, ಎಂಟು ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕಗಳು, ದೊಡ್ಡ ಆಸ್ಪತ್ರೆಗಳಲ್ಲಿ 50 ಕೋಟಿಗೂ ಹೆಚ್ಚು ಬಡವರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯುವುದನ್ನು ಖಾತ್ರಿಪಡಿಸಲಾಗಿದೆ, ಇದರಿಂದಾಗಿ ಬಡವರ ಬಹಳಷ್ಟು ಚಿಂತೆಗಳು ಕಡಿಮೆಯಾಗಿವೆ.  ಕೋಟಿಗಟ್ಟಲೆ ಬಡವರಿಗೆ ಮೊದಲ ಬಾರಿಗೆ ವಿಮೆ ಮತ್ತು ಪಿಂಚಣಿಯಂತಹ ಮೂಲಭೂತ ಸೌಲಭ್ಯಗಳು ದೊರೆತಿವೆ. ಈ ಯೋಜನೆಗಳು ಅವರಿಗೆ ಅತ್ಯಂತ ಉಪಯುಕ್ತವಾಗಿವೆ. ಈ ಕೊರೊನಾ ಅವಧಿಯಲ್ಲಿ, ಕಳೆದ ಹಲವಾರು ತಿಂಗಳುಗಳಿಂದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಖಾತ್ರಿಪಡಿಸಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ 2.60 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಸರ್ಕಾರ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುತ್ತಿದೆ. ನಿನ್ನೆಯಷ್ಟೇ, ನಾವು ಈ ಯೋಜನೆಯನ್ನು ಮುಂದಿನ ವರ್ಷ ಮಾರ್ಚ್ವರೆಗೆ ವಿಸ್ತರಿಸಿದ್ದೇವೆ. ನಮ್ಮ ನಿರ್ದೇಶನ ತತ್ವಗಳು - "ನಾಗರಿಕರು, ಪುರುಷರು ಮತ್ತು ಮಹಿಳೆಯರು ಸಮಾನವಾಗಿ, ಸಾಕಷ್ಟು ಜೀವನೋಪಾಯದ ಹಕ್ಕನ್ನು ಹೊಂದಿದ್ದಾರೆ",  ಈ ಮನೋಭಾವದ ಪ್ರತಿಬಿಂಬವಾಗಿದೆ.  ದೇಶದ ಜನಸಾಮಾನ್ಯರು, ಬಡವರು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರಿದಾಗ ಮತ್ತು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಪಡೆದಾಗ, ಅವರ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಎಂಬುದನ್ನು ನೀವೆಲ್ಲರೂ ಒಪ್ಪುತ್ತೀರಿ.  ಬೀದಿ ವ್ಯಾಪಾರಿಗಳು ಬ್ಯಾಂಕ್ ಸಾಲದ ವ್ಯವಸ್ಥೆಯೊಂದಿಗೆ ಜೋಡಣೆಗೊಂಡಾಗ, ಅವರೂ ಸಹ  ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸುವ ಭಾವನೆಯನ್ನು ಪಡೆಯುತ್ತಾರೆ.  ದಿವ್ಯಾಂಗರನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಾರಿಗೆ ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಿದಾಗ, ಸ್ವಾತಂತ್ರ್ಯದ 70 ವರ್ಷಗಳ ನಂತರ ಮೊದಲ ಬಾರಿಗೆ ಸಾಮಾನ್ಯ ಸಂಕೇತ ಭಾಷೆ ಬಂದಾಗ, ಅವರು ಆತ್ಮವಿಶ್ವಾಸವನ್ನು ಅನುಭವಿಸುತ್ತಾರೆ. ತೃತೀಯಲಿಂಗಿಗಳಿಗೆ ಕಾನೂನು ರಕ್ಷಣೆ ಮತ್ತು ಪದ್ಮ ಪ್ರಶಸ್ತಿಗಳು ಬಂದಾಗ ಸಮಾಜ ಮತ್ತು ಸಂವಿಧಾನದ ಮೇಲಿನ ನಂಬಿಕೆ ಬಲಗೊಳ್ಳುತ್ತದೆ. ತ್ರಿವಳಿ ತಲಾಖ್ನ ಅನಿಷ್ಟದ ವಿರುದ್ಧ ಕಟ್ಟುನಿಟ್ಟಿನ ಕಾನೂನನ್ನು ರಚಿಸಿದಾಗ, ಆ ಹತಾಶ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸಂವಿಧಾನದಲ್ಲಿ ನಂಬಿಕೆ ಬಲಗೊಳ್ಳುತ್ತದೆ.

ಮಹನೀಯರೇ,

ಸಬ್ಕಾ ಸಾಥ್-ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್-ಸಬ್ಕಾ ಪ್ರಯಾಸ್, ಇದು ಸಂವಿಧಾನದ ಸ್ಫೂರ್ತಿಯ ಅತ್ಯಂತ ಶಕ್ತಿಯುತ ಅಭಿವ್ಯಕ್ತಿಯಾಗಿದೆ.  ಸಂವಿಧಾನಕ್ಕೆ ಬದ್ಧವಾಗಿರುವ ಸರ್ಕಾರ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದಿಲ್ಲ ಮತ್ತು ಇದನ್ನು ನಾವು ಸಾಬೀತುಪಡಿಸಿದ್ದೇವೆ. ಒಂದು ಕಾಲದಲ್ಲಿ ಸಂಪನ್ಮೂಲ ಹೊಂದಿರುವ ಜನರಿಗೆ ಮಾತ್ರ ಸೀಮಿತವಾಗಿದ್ದ ಗುಣಮಟ್ಟದ ಮೂಲಸೌಕರ್ಯಗಳನ್ನು ಇಂದು ಬಡವರಲ್ಲಿ ಬಡವರು ಪಡೆಯುತ್ತಿದ್ದಾರೆ. ಇಂದು, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್, ಈಶಾನ್ಯ ಅಭಿವೃದ್ಧಿಗೆ ದೇಶದ ಗಮನವು ದೆಹಲಿ ಮತ್ತು ಮುಂಬೈಯಂತಹ ಮೆಟ್ರೋ ನಗರಗಳಷ್ಟೇ ಇದೆ. ಆದರೆ ಇದೆಲ್ಲದರ ನಡುವೆ, ನಾನು ಇನ್ನೊಂದು ವಿಷಯದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಸರ್ಕಾರವನ್ನು ಉದಾರವಾದಿ ಎಂದು ಕರೆಯುತ್ತಾರೆ ಮತ್ತು ನಿರ್ದಿಷ್ಟ ವರ್ಗಕ್ಕಾಗಿ, ಅಂಚಿನಲ್ಲಿರುವ ವರ್ಗಕ್ಕಾಗಿ ಏನಾದರೂ ಮಾಡಿದರೆ ಅದನ್ನು ಹೊಗಳುತ್ತಾರೆ ಎಂಬುದನ್ನು  ನಿಮ್ಮ ಅನುಭವಕ್ಕೂ ಬಂದಿರಬೇಕು.  ಆದರೆ ಕೆಲವೊಮ್ಮೆ ಸರ್ಕಾರವು ರಾಜ್ಯಕ್ಕೆ ಏನಾದರೂ ಒಳ್ಳೆಯದನ್ನು ಮಾಡಿದರೆ ಅದನ್ನು ಶ್ಲಾಘಿಸುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಆದರೆ ಸರ್ಕಾರವು ಪ್ರತಿಯೊಬ್ಬರಿಗೂ, ಪ್ರತಿಯೊಬ್ಬ ನಾಗರಿಕರಿಗೂ ಮತ್ತು ಪ್ರತಿ ರಾಜ್ಯಕ್ಕೂ ಮತ್ತು ಸರ್ಕಾರದ ಯೋಜನೆಗಳು ಪ್ರತಿ ವರ್ಗ ಮತ್ತು ಪ್ರತಿ ರಾಜ್ಯಕ್ಕೆ ಸಮಾನವಾಗಿ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ಗಮನಿಸಿದಾಗ ಹೆಚ್ಚಿನ ಗಮನವನ್ನು ನೀಡಲಾಗುವುದಿಲ್ಲ. ಕಳೆದ ಏಳು ವರ್ಷಗಳಲ್ಲಿ, ನಾವು ಯಾವುದೇ ತಾರತಮ್ಯ ಮತ್ತು ಪಕ್ಷಪಾತವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೆ, ಪ್ರತಿ ವಿಭಾಗ ಮತ್ತು ದೇಶದ ಮೂಲೆ ಮೂಲೆಗೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಈ ವರ್ಷದ ಆಗಸ್ಟ್ 15 ರಂದು, ನಾನು ಬಡವರ ಕಲ್ಯಾಣ ಯೋಜನೆಗಳ ಸ್ಯಾಚುರೇಶನ್ ಬಗ್ಗೆ ಮಾತನಾಡಿದ್ದೇನೆ ಮತ್ತು ನಾವು ಈ ನಿಟ್ಟಿನಲ್ಲಿ ಮಿಷನ್ ಮೋಡ್ನಲ್ಲಿ ತೊಡಗಿದ್ದೇವೆ. ಸರ್ವಜನ ಹಿತಾಯ, ಸರ್ವಜನ ಸುಖಾಯ (ಎಲ್ಲರ ಯೋಗಕ್ಷೇಮ, ಎಲ್ಲರಿಗೂ ಸಂತೋಷ) ಎಂಬ ಮಂತ್ರದೊಂದಿಗೆ ಕೆಲಸ ಮಾಡುವುದು ನಮ್ಮ ಪ್ರಯತ್ನ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಇತ್ತೀಚಿನ ವರದಿಯು ಈ ಕ್ರಮಗಳಿಂದ ದೇಶದ ಚಿತ್ರಣ ಹೇಗೆ ಬದಲಾಗಿದೆ ಎಂಬುದನ್ನು ತೋರಿಸುತ್ತದೆ. ಸದುದ್ದೇಶದಿಂದ ಕೆಲಸವನ್ನು ಮಾಡಿದಾಗ, ಸರಿಯಾದ ದಿಕ್ಕಿನಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತದೆ ಮತ್ತು ಎಲ್ಲರನ್ನು ಸಜ್ಜುಗೊಳಿಸುವ ಮೂಲಕ ಗುರಿಯನ್ನು ಸಾಧಿಸಲು ಪ್ರಯತ್ನಿಸಿದಾಗ, ಉತ್ತಮ ಫಲಿತಾಂಶಗಳು ಖಂಡಿತವಾಗಿಯೂ ಇರುತ್ತವೆ ಎಂಬುದನ್ನು ಈ ವರದಿಯ ಅನೇಕ ಸಂಗತಿಗಳು ಸಾಬೀತುಪಡಿಸುತ್ತವೆ. ನಾವು ಲಿಂಗ ಸಮಾನತೆಯ ಬಗ್ಗೆ ಮಾತನಾಡಿದರೆ, ಪುರುಷರಿಗೆ ಹೋಲಿಸಿದರೆ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಗರ್ಭಿಣಿಯರಿಗೆ ಆಸ್ಪತ್ರೆಗಳಲ್ಲಿ ಹೆರಿಗೆಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ. ಇದರಿಂದಾಗಿ ತಾಯಂದಿರ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಒಂದು ದೇಶವಾಗಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇತರ ಹಲವು ಸೂಚಕಗಳಿವೆ. ಈ ಎಲ್ಲಾ ಸೂಚಕಗಳಲ್ಲಿನ ಪ್ರತಿ ಶೇಕಡಾವಾರು ಪಾಯಿಂಟ್ ಹೆಚ್ಚಳವು ಕೇವಲ ಅಂಕಿ ಅಂಶವಲ್ಲ. ಲಕ್ಷಾಂತರ ಭಾರತೀಯರಿಗೆ ನೀಡಲಾಗುತ್ತಿರುವ ಹಕ್ಕುಗಳಿಗೆ ಇದು ಸಾಕ್ಷಿಯಾಗಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಜನರು ಪಡೆಯುವುದು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದು ಬಹಳ ಮುಖ್ಯ. ಯಾವುದೇ ಕಾರಣದಿಂದ ಅನಗತ್ಯ ವಿಳಂಬವು ನಾಗರಿಕರಿಗೆ  ಸಿಗುವುದು ವಂಚಿತವಾಗುತ್ತದೆ. ನಾನು ಗುಜರಾತ್ನವನು ಹಾಗಾಗಿ ಸರ್ದಾರ್ ಸರೋವರ ಅಣೆಕಟ್ಟಿನ ಉದಾಹರಣೆ ನೀಡಲು ಬಯಸುತ್ತೇನೆ. ಸರ್ದಾರ್ ಪಟೇಲ್ ಅವರು ತಾಯಿ ನರ್ಮದಾ ಮೇಲೆ ಅಂತಹ ಅಣೆಕಟ್ಟಿನ ಕನಸು ಕಂಡಿದ್ದರು. ಪಂಡಿತ್ ನೆಹರೂ ಅದಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಪರಿಸರದ ಹೆಸರಿನಲ್ಲಿ ನಡೆಯುತ್ತಿರುವ ಅಪಪ್ರಚಾರ ಹಾಗೂ ಆಂದೋಲನದಿಂದಾಗಿ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ನ್ಯಾಯಾಂಗವು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕಿತು. ವಿಶ್ವಬ್ಯಾಂಕ್ ಕೂಡ ಈ ಯೋಜನೆಗೆ ಹಣ ನೀಡಲು ನಿರಾಕರಿಸಿತ್ತು. ಅದೇ ನರ್ಮದೆಯ ನೀರಿನಿಂದ ಅಲ್ಲಿ ನಡೆದ ಅಭಿವೃದ್ಧಿಯಿಂದಾಗಿ ಇಂದು ಕಛ್ ಜಿಲ್ಲೆ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಕಚ್ ಬಹುತೇಕ ಮರುಭೂಮಿಯಂತಿದೆ ಮತ್ತು ಇದು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಒಂದು ಕಾಲದಲ್ಲಿ ವಲಸೆಗೆ ಹೆಸರುವಾಸಿಯಾಗಿದ್ದ ಕಚ್ ಇಂದು ಕೃಷಿ-ರಫ್ತುಗಳಿಂದಾಗಿ ತನ್ನ ಛಾಪು ಮೂಡಿಸುತ್ತಿದೆ. ಇದಕ್ಕಿಂತ ದೊಡ್ಡ ಹಸಿರು ಪ್ರಶಸ್ತಿ ಇನ್ನೇನಿದೆ?

ಮಹನೀಯರೇ,

ಭಾರತ ಮತ್ತು ವಿಶ್ವದ ಹಲವು ದೇಶಗಳು ವಸಾಹತುಶಾಹಿಯ ಸಂಕೋಲೆಯಲ್ಲಿ ಹಲವು ತಲೆಮಾರುಗಳ ಕಾಲ ಬದುಕುವುದು ಅನಿವಾರ್ಯವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ, ವಸಾಹತುಶಾಹಿ ನಂತರದ ಅವಧಿಯು ಪ್ರಪಂಚದಾದ್ಯಂತ ಪ್ರಾರಂಭವಾಯಿತು ಮತ್ತು ಅನೇಕ ದೇಶಗಳು ಸ್ವತಂತ್ರವಾದವು. ಇಂದು ಪ್ರಪಂಚದ ಯಾವುದೇ ದೇಶವು ಮತ್ತೊಂದು ದೇಶದ ವಸಾಹತುಶಾಹಿಯಾಗಿ ಅಸ್ತಿತ್ವದಲ್ಲಿಲ್ಲ. ಆದರೆ ವಸಾಹತುಶಾಹಿ ಮನಸ್ಥಿತಿ ಅಸ್ತಿತ್ವದಲ್ಲಿಲ್ಲ ಎಂದು ಇದರ ಅರ್ಥವಲ್ಲ. ಈ ಮನಃಸ್ಥಿತಿಯು ಅನೇಕ ತಿರುಚಿದ ಕಲ್ಪನೆಗಳಿಗೆ ಜನ್ಮ ನೀಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಗತಿಗೆ ಅಡ್ಡಿಯುಂಟಾಗಿರುವುದು ಇದರ ಅತ್ಯಂತ ಸ್ಪಷ್ಟ ಉದಾಹರಣೆಯಾಗಿದೆ. ಪಾಶ್ಚಿಮಾತ್ಯ ದೇಶಗಳು ಪ್ರಸ್ತುತ ಸ್ಥಿತಿಯನ್ನು ತಲುಪಲು ಕಾರಣವಾದ ಸಂಪನ್ಮೂಲಗಳು ಮತ್ತು ಮಾರ್ಗಗಳು ಇಂದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅದೇ ಸಂಪನ್ಮೂಲಗಳು ಮತ್ತು ಅದೇ ಮಾರ್ಗವನ್ನು ನಿರ್ಬಂಧಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಕೆಲವು ದಶಕಗಳಲ್ಲಿ, ಇದಕ್ಕಾಗಿ ವಿವಿಧ ರೀತಿಯ ಪರಿಭಾಷೆಗಳ ಜಾಲವನ್ನು ರಚಿಸಲಾಗಿದೆ. ಆದರೆ ಉದ್ದೇಶವು ಒಂದೇ ಆಗಿರುತ್ತದೆ - ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಗತಿಯನ್ನು ತಡೆಯುವುದು. ಅದೇ ಉದ್ದೇಶದಿಂದ ಪರಿಸರದ ಸಮಸ್ಯೆಯನ್ನು ಹೈಜಾಕ್ ಮಾಡುವ ಪ್ರಯತ್ನಗಳು ನಡೆಯುತ್ತಿರುವುದನ್ನು ಇಂದಿನ ದಿನಗಳಲ್ಲಿ ನಾವು ನೋಡುತ್ತೇವೆ. ಕೆಲವು ವಾರಗಳ ಹಿಂದೆ COP-26 ಶೃಂಗಸಭೆಯಲ್ಲಿ ನಾವು ಅದರ ನೇರ ಉದಾಹರಣೆಯನ್ನು ನೋಡಿದ್ದೇವೆ.  ಸಂಪೂರ್ಣ ಮಾಲಿನ್ಯ ಹೊರಸೂಸುವಿಕೆಗೆ ಸಂಬಂಧಿಸಿದಂತೆ, ಅಭಿವೃದ್ಧಿ ಹೊಂದಿದ ದೇಶಗಳು ಒಟ್ಟಾಗಿ 1850 ರಿಂದ ಭಾರತಕ್ಕಿಂತ 15 ಪಟ್ಟು ಹೆಚ್ಚು ಹೊರಸೂಸುತ್ತವೆ.  ತಲಾವಾರು ವಿಷಯದಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳು ಭಾರತಕ್ಕಿಂತ 15 ಪಟ್ಟು ಹೆಚ್ಚು ಹೊರಸೂಸುತ್ತವೆ. ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್  ಒಟ್ಟಾಗಿ ಭಾರತಕ್ಕಿಂತ 11 ಪಟ್ಟು ಹೆಚ್ಚಿನ ಸಂಪೂರ್ಣ ಮಾಲಿನ್ಯ ಹೊರಸೂಸುವಿಕೆಯನ್ನು ಹೊಂದಿವೆ. ತಲಾವಾರು ಆಧಾರದ ಮೇಲೆ, ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್  ಭಾರತಕ್ಕಿಂತ 20 ಪಟ್ಟು ಹೆಚ್ಚು ಹೊರಸೂಸುತ್ತವೆ. ಕಲ್ಲುಗಳು, ಮರಗಳು ಮತ್ತು ಪ್ರಕೃತಿಯ ಪ್ರತಿಯೊಂದು ಕಣಗಳಲ್ಲಿ ಮತ್ತು ಭೂಮಿಯನ್ನು ತಾಯಿಯಂತೆ ಪೂಜಿಸುವ, ನಾಗರಿಕತೆ ಮತ್ತು ಸಂಸ್ಕೃತಿಯು ಪ್ರಕೃತಿಯೊಂದಿಗೆ ಬದುಕುವ ಪ್ರವೃತ್ತಿಯನ್ನು ಹೊಂದಿರುವ ಭಾರತಕ್ಕೆ   ಇಂದು ಪರಿಸರ ಸಂರಕ್ಷಣೆಯ ಪಾಠಗಳನ್ನು ಬೋಧಿಸುತ್ತಿವೆ. ಈ ಮೌಲ್ಯಗಳು ನಮಗೆ ಕೇವಲ ಪುಸ್ತಕವಲ್ಲ. ಇಂದು, ಸಿಂಹಗಳು, ಹುಲಿಗಳು, ಡಾಲ್ಫಿನ್ಗಳು ಇತ್ಯಾದಿಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಭಾರತದಲ್ಲಿ ವಿವಿಧ ರೀತಿಯ ಜೀವವೈವಿಧ್ಯದ ನಿಯತಾಂಕಗಳು ನಿರಂತರವಾಗಿ ಸುಧಾರಿಸುತ್ತಿವೆ. ಭಾರತದಲ್ಲಿ ಅರಣ್ಯ ಪ್ರದೇಶ ಹೆಚ್ಚುತ್ತಿದೆ. ಭಾರತದಲ್ಲಿ ಹದಗೆಟ್ಟ ಭೂಮಿ ಸುಧಾರಿಸುತ್ತಿದೆ. ನಾವು ಸ್ವಯಂಪ್ರೇರಣೆಯಿಂದ ವಾಹನಗಳ ಇಂಧನ ಗುಣಮಟ್ಟವನ್ನು ಹೆಚ್ಚಿಸಿದ್ದೇವೆ. ಎಲ್ಲಾ ರೀತಿಯ ನವೀಕರಿಸಬಹುದಾದ ಶಕ್ತಿಯಲ್ಲಿ ನಾವು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದೇವೆ. ಮತ್ತು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಮಯಕ್ಕಿಂತ ಮುಂಚಿತವಾಗಿ ಸಾಧಿಸುವತ್ತ ಪ್ರಗತಿ ಸಾಧಿಸುತ್ತಿರುವ ಏಕೈಕ ದೇಶ ಭಾರತವಾಗಿದೆ.  ಜಿ 20 ಗುಂಪಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಯಾವುದೇ ದೇಶ ಇದ್ದರೆ ಅದು ಭಾರತ ಎಂದು ಜಗತ್ತು ಒಪ್ಪಿಕೊಂಡಿದೆ, ಆದರೂ ಪರಿಸರದ ಹೆಸರಿನಲ್ಲಿ ಭಾರತದ ಮೇಲೆ ಹಲವಾರು ಒತ್ತಡಗಳನ್ನು ಹಾಕಲಾಗುತ್ತದೆ. ಇದೆಲ್ಲವೂ ವಸಾಹತುಶಾಹಿ ಮನಸ್ಥಿತಿಯ ಪರಿಣಾಮ. ಆದರೆ ದುರದೃಷ್ಟವಶಾತ್, ಇಂತಹ ಮನಸ್ಥಿತಿಯಿಂದಾಗಿ ನಮ್ಮ ದೇಶದ ಅಭಿವೃದ್ಧಿಯಲ್ಲಿ ಅಡೆತಡೆಗಳು ಸೃಷ್ಟಿಯಾಗುತ್ತವೆ, ಕೆಲವೊಮ್ಮೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅಥವಾ ಯಾವುದೋ. ನಮ್ಮ ದೇಶದ ಪರಿಸ್ಥಿತಿಗಳು, ನಮ್ಮ ಯುವಕರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ತಿಳಿಯದೆ, ಅನೇಕ ಬಾರಿ ಭಾರತವನ್ನು ಇತರ ದೇಶಗಳ ಮಾನದಂಡದ ಮೇಲೆ ತೂಗುವ ಪ್ರಯತ್ನಗಳು ಮತ್ತು ದೇಶದ ಪ್ರಗತಿಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ. ಈ ಹಾನಿ ಮಾಡುವ ಜನರು ಪರಿಣಾಮಗಳನ್ನು ಎದುರಿಸುವುದಿಲ್ಲ. ವಿದ್ಯುತ್ ಸ್ಥಾವರದ ಸ್ಥಗಿತದಿಂದ ಮಗುವಿಗೆ ಓದಲು ಸಾಧ್ಯವಾಗದ ತಾಯಿಗೆ, ರಸ್ತೆ ಯೋಜನೆಗಳು ಸ್ಥಗಿತಗೊಂಡಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಗದ ತಂದೆ ಮತ್ತು ಆಧುನಿಕ ಸೌಲಭ್ಯಗಳನ್ನು ಅನುಭವಿಸಲಾಗದ ಮಧ್ಯಮ ವರ್ಗದ ಕುಟುಂಬಕ್ಕೆ ಅವರ ಈ ಕ್ರಿಯೆಯ ಪರಿಣಾಮಗಳು ಸಂಕಟವನ್ನು ಉಂಟುಮಾಡುತ್ತವೆ. ಪರಿಸರದ ಹೆಸರಲ್ಲಿ ಇವುಗಳು ತಮ್ಮ ಸಾಮರ್ಥ್ಯ ಮೀರಿ ಹೋಗುತ್ತವೆ. ಈ ವಸಾಹತುಶಾಹಿ ಮನಸ್ಥಿತಿಯು ಭಾರತದಂತಹ ದೇಶಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೋಟ್ಯಂತರ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪುಡಿಮಾಡುತ್ತದೆ. ಈ ವಸಾಹತುಶಾಹಿ ಮನಸ್ಥಿತಿಯು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಸೃಷ್ಟಿಯಾದ ನಿರ್ಣಯದ ಶಕ್ತಿಯನ್ನು ಮತ್ತಷ್ಟು ಬಲಪಡಿಸುವಲ್ಲಿ ದೊಡ್ಡ ಅಡಚಣೆಯಾಗಿದೆ. ನಾವು ಅದನ್ನು ತೊಡೆದುಹಾಕಬೇಕು ಮತ್ತು ಇದಕ್ಕಾಗಿ ನಮ್ಮ ದೊಡ್ಡ ಶಕ್ತಿ, ನಮ್ಮ ದೊಡ್ಡ ಸ್ಫೂರ್ತಿ, ನಮ್ಮ ಸಂವಿಧಾನವಾಗಿದೆ.

ಮಹನೀಯರೇ,

ಸರ್ಕಾರ ಮತ್ತು ನ್ಯಾಯಾಂಗಗಳೆರಡೂ ಸಂವಿಧಾನದ ಗರ್ಭದಿಂದ ಹುಟ್ಟಿವೆ. ಹೀಗಾಗಿ ಇಬ್ಬರೂ ಅವಳಿ ಮಕ್ಕಳು. ಇವೆರಡೂ ಅಸ್ತಿತ್ವಕ್ಕೆ ಬಂದಿರುವುದು ಸಂವಿಧಾನದಿಂದಲೇ. ಆದ್ದರಿಂದ, ವಿಶಾಲ ದೃಷ್ಟಿಕೋನದಿಂದ, ಅವು ವಿಭಿನ್ನವಾಗಿದ್ದರೂ, ಅವು ಪರಸ್ಪರ ಪೂರಕವಾಗಿರುತ್ತವೆ.

ನಮ್ಮ ಧರ್ಮಗ್ರಂಥಗಳಲ್ಲಿ ಹೀಗೆ ಹೇಳಲಾಗಿದೆ:

ಐಕ್ಯಮ್ ಬಲಮ್ ಸಮಾಜಸ್ಯ, ತತ್ ಅಭಾವೇ ಸ ದುರ್ಬಲಃ ।

ತಸ್ಮಾತ್ ಐಕ್ಯಮ್ ಪ್ರಶಂಸನ್ತಿ, ದಂಢಮ್ ರಾಷ್ಟ್ರ ಹಿತೈಷಿಣ:॥

ಅಂದರೆ, ಒಂದು ಸಮಾಜ ಮತ್ತು ದೇಶದ ಶಕ್ತಿಯು ಅದರ ಏಕತೆ ಮತ್ತು ಒಗ್ಗಟ್ಟಿನ ಪ್ರಯತ್ನಗಳಲ್ಲಿ ಅಡಗಿದೆ. ಆದ್ದರಿಂದ, ಬಲವಾದ ರಾಷ್ಟ್ರದ ಹಿತೈಷಿಗಳು, ಅವರು ಏಕತೆಯನ್ನು ಹೊಗಳುತ್ತಾರೆ ಮತ್ತು ಅದನ್ನು ಒತ್ತಿಹೇಳುತ್ತಾರೆ. ರಾಷ್ಟ್ರದ ಹಿತಾಸಕ್ತಿಗಳನ್ನು ಮುಖ್ಯವಾಗಿಟ್ಟುಕೊಂಡು, ಈ ಏಕತೆ ದೇಶದ ಪ್ರತಿಯೊಂದು ಸಂಸ್ಥೆಗಳ ಪ್ರಯತ್ನದಲ್ಲಿರಬೇಕು. ಇಂದು, ದೇಶವು ಪುಣ್ಯಕಾಲದಲ್ಲಿ ತನಗಾಗಿ ಅಸಾಮಾನ್ಯ ಗುರಿಗಳನ್ನು ಹೊಂದಿಕೊಂಡಾಗ, ದಶಕಗಳ ಹಳೆಯ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿರುವಾಗ ಮತ್ತು ಹೊಸ ಭವಿಷ್ಯಕ್ಕಾಗಿ ಸಂಕಲ್ಪಗಳನ್ನು ತೆಗೆದುಕೊಳ್ಳುತ್ತಿರುವಾಗ, ಈ ಸಾಧನೆಯು ಸಾಮೂಹಿಕ ಪ್ರಯತ್ನದಿಂದ ಈಡೇರುತ್ತದೆ. ಅದಕ್ಕಾಗಿಯೇ ಇನ್ನೂ 25 ವರ್ಷಗಳಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿರುವ ದೇಶವು 'ಸಬ್ಕಾ ಪ್ರಯಾಸ್ ' (ಸಾಮೂಹಿಕ ಪ್ರಯತ್ನ) ಕ್ಕೆ ಕರೆ ನೀಡಿದೆ ಮತ್ತು ಅದರಲ್ಲಿ ನ್ಯಾಯಾಂಗದ ಪಾತ್ರವೂ ದೊಡ್ಡದಾಗಿದೆ.

ಮಹನೀಯರೇ,

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ಅಧಿಕಾರದ ಪ್ರತ್ಯೇಕತೆಯ ಬಗ್ಗೆ ಆಗಾಗ್ಗೆ ಮಾತನಾಡಲಾಗುತ್ತದೆ ಮತ್ತು ಬಲವಾಗಿ ಪುನರುಚ್ಚರಿಸಲಾಗುತ್ತದೆ ಮತ್ತು ಸ್ವತಃ ಬಹಳ ಮುಖ್ಯವಾಗಿದೆ. ಆದ್ದರಿಂದ, ಭಾರತದ ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಳ್ಳುವವರೆಗೆ ಸ್ವಾತಂತ್ರ್ಯದ ಈ ಪುಣ್ಯ ಅವಧಿಯ ನಡುವೆ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಈ ಸಾಮೂಹಿಕ ಸಂಕಲ್ಪವನ್ನು ತೋರಿಸುವುದು ಬಹಳ ಅವಶ್ಯಕ. ಇಂದು ದೇಶದ ಶ್ರೀಸಾಮಾನ್ಯನು ಇರುವದಕ್ಕಿಂತ ಹೆಚ್ಚು ಅರ್ಹನಾಗಿದ್ದಾನೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಶತಮಾನೋತ್ಸವ ಆಚರಿಸುವಾಗ ಅಂದಿನ ಭಾರತ ಏನಾಗಬಹುದು ಅದಕ್ಕಾಗಿ ಈಗಲೇ ಕೆಲಸ ಮಾಡಬೇಕು. ಆದ್ದರಿಂದ, ದೇಶದ ಆಶಯಗಳನ್ನು ಈಡೇರಿಸಲು ಸಾಮೂಹಿಕ ಜವಾಬ್ದಾರಿಯೊಂದಿಗೆ ನಡೆಯುವುದು ಬಹಳ ಮುಖ್ಯ. ಅಧಿಕಾರದ ಬೇರ್ಪಡುವಿಕೆಯ ಬಲವಾದ ಅಡಿಪಾಯದ ಮೇಲೆ, ನಾವು ಸಾಮೂಹಿಕ ಜವಾಬ್ದಾರಿಯ ಹಾದಿಯನ್ನು ನಿರ್ಧರಿಸಬೇಕು, ಮಾರ್ಗಸೂಚಿಯನ್ನು ರೂಪಿಸಬೇಕು, ಗುರಿಗಳನ್ನು ಹೊಂದಿಸಬೇಕು ಮತ್ತು ದೇಶವನ್ನು ಗಮ್ಯಸ್ಥಾನಕ್ಕೆ ಕೊಂಡೊಯ್ಯಬೇಕು.

ಮಹನೀಯರೇ,

ಕೊರೊನಾ ಅವಧಿಯಲ್ಲಿ ನ್ಯಾಯ ವಿತರಣೆಯಲ್ಲಿ ತಂತ್ರಜ್ಞಾನದ ಬಳಕೆಯು ಹೊಸ ಆತ್ಮವಿಶ್ವಾಸವನ್ನು ಸೃಷ್ಟಿಸಿದೆ. ಡಿಜಿಟಲ್ ಇಂಡಿಯಾದ ಮೆಗಾ ಮಿಷನ್ನಲ್ಲಿ ನ್ಯಾಯಾಂಗವು ಸಮಾನ ಪಾಲನ್ನು ಹೊಂದಿದೆ. 18,000 ಕ್ಕೂ ಹೆಚ್ಚು ನ್ಯಾಯಾಲಯಗಳ ಗಣಕೀಕರಣ, 98 ಪ್ರತಿಶತದಷ್ಟು ನ್ಯಾಯಾಲಯ ಸಂಕೀರ್ಣಗಳನ್ನು ವೈಡ್ ಏರಿಯಾ ನೆಟ್ವರ್ಕ್ನೊಂದಿಗೆ ಜೋಡಿಸುವುದು, ನೈಜ ಸಮಯದಲ್ಲಿ ನ್ಯಾಯಾಂಗ ಡೇಟಾವನ್ನು ರವಾನಿಸಲು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ ಮತ್ತು ಲಕ್ಷಾಂತರ ಜನರನ್ನು ತಲುಪಲು ಇ-ಕೋರ್ಟ್ ಪ್ಲಾಟ್ಫಾರ್ಮ್ಗಳು ತಂತ್ರಜ್ಞಾನವು ಬಹಳ ದೊಡ್ಡದಾಗಿದೆ ಎನ್ನುವುದನ್ನು ತೋರಿಸುತ್ತದೆ. ಮತ್ತು ಶೀಘ್ರದಲ್ಲೇ ನಾವು ಸುಧಾರಿತ ನ್ಯಾಯಾಂಗ ಕಾರ್ಯನಿರ್ವಹಣೆಯನ್ನು ನೋಡುತ್ತೇವೆ. ಸಮಯ ಬದಲಾಗುತ್ತಿದೆ, ಪ್ರಪಂಚವು ಬದಲಾಗುತ್ತಲೇ ಇರುತ್ತದೆ, ಆದರೆ ಈ ಬದಲಾವಣೆಗಳು ಮಾನವೀಯತೆಯ ವಿಕಾಸದ ಸಾಧನಗಳಾಗಿವೆ. ಏಕೆಂದರೆ ಮಾನವೀಯತೆಯು ಈ ಬದಲಾವಣೆಗಳನ್ನು ಒಪ್ಪಿಕೊಂಡಿತು ಮತ್ತು ಅದೇ ಸಮಯದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದೆ. ನ್ಯಾಯದ ಪರಿಕಲ್ಪನೆಯು ಈ ಮಾನವ ಮೌಲ್ಯಗಳ ಅತ್ಯಂತ ಪರಿಷ್ಕೃತ ಪ್ರತಿಬಿಂಬವಾಗಿದೆ. ಮತ್ತು, ಸಂವಿಧಾನವು ನ್ಯಾಯದ ಈ ಪರಿಕಲ್ಪನೆಯ ಅತ್ಯಾಧುನಿಕ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಕ್ರಿಯಾತ್ಮಕವಾಗಿ ಮತ್ತು ಪ್ರಗತಿಪರವಾಗಿ ಇರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಾವೆಲ್ಲರೂ ಈ ಪಾತ್ರಗಳನ್ನು ಸಂಪೂರ್ಣ ಭಕ್ತಿಯಿಂದ ನಿರ್ವಹಿಸುತ್ತೇವೆ ಮತ್ತು ಸ್ವಾತಂತ್ರ್ಯದ 100 ವರ್ಷಗಳ ಮೊದಲು ನವ ಭಾರತದ ಕನಸು ನನಸಾಗುತ್ತದೆ. ಈ ಮಂತ್ರ ಸಂಗಚ್ಛಧ್ವಂ, ಸಂವದಧ್ವಂ, ಸಮ್ ವೋ ಮನಾಂಸಿ ಜಾನತಾಮ್ (ನಾವು ಸಾಮಾನ್ಯ ಗುರಿಗಳನ್ನು ಹೊಂದಿದ್ದೇವೆ, ನಾವು ಸಾಮಾನ್ಯ ಮನಸ್ಸನ್ನು ಹೊಂದಿದ್ದೇವೆ ಮತ್ತು ಒಟ್ಟಿಗೆ ನಾವು ಆ ಗುರಿಗಳನ್ನು ಸಾಧಿಸೋಣ ) ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ. ನಾವು ಸಾಮಾನ್ಯ ಗುರಿಗಳನ್ನು ಹೊಂದೋಣ, ಸಾಮಾನ್ಯ ಮನಸ್ಸುಗಳು ಮತ್ತು ಒಟ್ಟಾಗಿ ನಾವು ಆ ಗುರಿಗಳನ್ನು ಸಾಧಿಸೋಣ! ಈ ಉತ್ಸಾಹದಿಂದ, ಸಂವಿಧಾನ ದಿನದ ಈ ಪವಿತ್ರ ವಾತಾವರಣದಲ್ಲಿ ನಿಮಗೆ ಮತ್ತು ದೇಶವಾಸಿಗಳಿಗೆ ಅನೇಕ ಶುಭಾಶಯಗಳನ್ನು ತಿಳಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಗಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು.

ತುಂಬಾ  ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."