ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು: ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಕೆ
ಪರಿಸ್ಥಿತಿ ಮೇಲೆ ಕಠಿಣ ನಿಗಾ ಇಡಬೇಕು ಮತ್ತು ಎಲ್ಲಾ ರೂಪಾಂತರವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಒತ್ತಿ ಹೇಳಿದ ಪ್ರಧಾನಮಂತ್ರಿ
ಸೂಕ್ತ ಮುನ್ನೆಚ್ಚರಿಕೆ ಇಲ್ಲದೇ ಗಿರಿಧಾಮಗಳಲ್ಲಿ ಜನಸಂದಣಿಯಾಗುತ್ತಿರುವ ಬಗ್ಗೆ ಬಲವಾದ ಎಚ್ಚರಿಕೆ ರವಾನೆ
ಮೂರನೇ ಅಲೆ ನಿಯಂತ್ರಿಸುವುದು ಹೇಗೆ ಎಂಬುದು ನಮ್ಮ ಮನಸ್ಸಿನಲ್ಲಿರುವ ಮುಖ್ಯ ಪ್ರಶ್ನೆ: ಪ್ರಧಾನಮಂತ್ರಿ
ಲಸಿಕೆ ವಿರುದ್ಧದ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳು, ಧಾರ್ಮಿಕ ಸಂಘಟನೆಗಳ ನಂಬಿಕಸ್ಥರ ನೆರವು ಪಡೆಯಿರಿ - ಪ್ರಧಾನಮಂತ್ರಿ
“ಎಲ್ಲರಿಗೂ ಲಸಿಕೆ – ಎಲ್ಲರಿಗೂ ಉಚಿತ“ ಅಭಿಯಾನಕ್ಕೆ ಈಶಾನ್ಯ ರಾಜ್ಯಗಳಿಗೆ ಪ್ರಮುಖವಾದ್ದದ್ದು: ಪ್ರಧಾನಮಂತ್ರಿ
ವೈದ್ಯಕೀಯ ಮೂಲ ಸೌಕರ್ಯ ಸುಧಾರಣೆ ಮಾಡಲು ಇತ್ತೀಚೆಗೆ 23,000 ಕೋಟಿ ರೂಪಾಯಿ ಪ್ಯಾಕೇಜ್ ಗೆ ಅನುಮೋದನೆ: ಪ್ರಧಾನಮಂತ್ರಿ
ಪಿ.ಎಂ. ಕೇರ್ಸ್ ಆಮ್ಲಜನಕ ಘಟಕಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ನಿಮಗೆಲ್ಲರಿಗೂ ನಮಸ್ಕಾರ ! 

ಮೊದಲಿಗೆ ನಾನು ಹೊಸ ಜವಾಬ್ದಾರಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪರಿಚಯಿಸುತ್ತೇನೆ, ಯಾಕೆಂದರೆ ಇದು ನಿಮಗೂ ಉತ್ತಮ. ಶ್ರೀ ಮನ್ ಸುಖ್ ಭಾಯಿ ಮಾಂಡವೀಯ, ಅವರು ಇತ್ತೀಚೆಗಷ್ಟೇ ನಮ್ಮ ಆರೋಗ್ಯ ಸಚಿವರಾಗಿದ್ದಾರೆ. ಅವರ ಜೊತೆ ಕುಳಿತುಕೊಂಡಿರುವ ಡಾ. ಭಾರತೀ ಪವಾರ್ ಜೀ ಅವರು ಎಂ.ಒ.ಎಸ್. ಆಗಿದ್ದಾರೆ. ಅವರು ನಮ್ಮ ಆರೋಗ್ಯ ಇಲಾಖೆಯಲ್ಲಿ ಎಂ.ಒ.ಎಸ್. ಆಗಿ ಕಾರ್ಯ ನಿರ್ವಹಿಸುತ್ತಾರೆ. ನಿಮ್ಮೊಂದಿಗೆ ನಿಯಮಿತವಾಗಿ ವ್ಯವಹರಿಸುವ ಇನ್ನಿಬ್ಬರು ಇಲ್ಲಿದ್ದಾರೆ. ಅವರೆಂದರೆ ಡಿ.ಒ.ಎನ್.ಇ.ಆರ್. ಸಚಿವಾಲಯದ ಹೊಸ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ ಮತ್ತು ಅವರೊಂದಿಗೆ ಕುಳಿತಿರುವ ಎಂ.ಒ.ಎಸ್. ಶ್ರೀ ಬಿ.ಎಲ್.ವರ್ಮಾ ಜೀ. ಈ ಪರಿಚಯ ನಿಮಗೂ ಅವಶ್ಯಕ.

ಸ್ನೇಹಿತರೇ,

ಈಶಾನ್ಯದಲ್ಲಿ ಕೊರೊನಾ ನಿಭಾಯಿಸಲು ಹೇಗೆ ಕಠಿಣ ಪರಿಶ್ರಮ ಹಾಕಲಾಯಿತು ಎಂಬ ಬಗ್ಗೆ ಮತ್ತು ಕೆಲವು ನವೀನ ಚಿಂತನೆಗಳು ಹಾಗು ಯೋಜನೆಗಳನ್ನು ಜಾರಿಗೆ ತರಲಾಯಿತು, ಅದರಿಂದ ಏನು ಸಾಧನೆಯಾಯಿತು ಎಂಬ ಬಗ್ಗೆ ನೀವು ವಿವರಿಸಿದ್ದೀರಿ. ನೀವು, ನಮ್ಮ ಇಡೀ ದೇಶ ಅದರಲ್ಲೂ ವಿಶೇಷವಾಗಿ ನಮ್ಮ ಆರೋಗ್ಯ ಕಾರ್ಯಕರ್ತರು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಕಳೆದ ಒಂದೂವರೆ ವರ್ಷಗಳಿಂದ ವಿಶ್ರಾಂತಿ ಇಲ್ಲದೆ ದುಡಿದಿದ್ದೀರಿ. ಈಶಾನ್ಯದ ಭೌಗೋಳಿಕ ಸವಾಲುಗಳ ನಡುವೆಯೂ ಪರೀಕ್ಷೆಯಿಂದ ಹಿಡಿದು ಚಿಕಿತ್ಸೆ, ಲಸಿಕಾ ಕಾರ್ಯಕ್ರಮದವರೆಗೆ ಮೂಲಸೌಕರ್ಯ ಒದಗಿಸುವಲ್ಲಿ ನೀವು ದುಡಿದ ಪರಿ ಅನನ್ಯ.....ನಾಲ್ಕು ರಾಜ್ಯಗಳು ಇನ್ನಷ್ಟು ಸುಧಾರಿಸಬೇಕಾಗಿದೆ. ಆದರೆ ಉಳಿದವುಗಳು ಅತ್ಯಂತ ಸೂಕ್ಷ್ಮತ್ವದೊಂದಿಗೆ ಲಸಿಕೆಗಳು ಪೋಲಾಗದಂತೆ ತಡೆದಿವೆ. ನೀವು ಪ್ರತೀ ಲಸಿಕೆಯ ಬಾಟಲಿಯನ್ನು ಗರಿಷ್ಟ ರೀತಿಯಲ್ಲಿ ಬಳಸಿಕೊಂಡಿದ್ದೀರಿ. ನಾನು ನಿಮ್ಮ ಪ್ರಯತ್ನವನ್ನು ಶ್ಲಾಘಿಸುತ್ತೇನೆ, ಅದರಲ್ಲೂ ನಮ್ಮ ವೈದ್ಯಕೀಯ ರಂಗದ ಜನರನ್ನು  ಅವರು ಲಸಿಕೆ ನೀಡಿಕೆಯನ್ನು ತಮ್ಮ ಕೌಶಲ ಬಳಸಿ ಸೂಕ್ಷ್ಮತ್ವದೊಂದಿಗೆ ನಿಭಾಯಿಸಿದ್ದಾರೆ. ಯಾಕೆಂದರೆ ಲಸಿಕೆ ಬಹಳ ಮುಖ್ಯ. ಆರೋಗ್ಯ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ನಿಮ್ಮ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಕೆಲವು  ವೈಫಲ್ಯಗಳಾಗಿರುವ ನಾಲ್ಕು ರಾಜ್ಯಗಳಲ್ಲಿ  ಇನ್ನಷ್ಟು ಉತ್ತಮವಾಗಿ ಇದನ್ನು ಮಾಡಬಹುದು ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ,

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ  ವಿವಿಧ ಸರಕಾರಗಳು ಕೈಗೊಂಡ ಸಾಮೂಹಿಕ ಪ್ರಯತ್ನಗಳ ಫಲ ಕಾಣಿಸುತ್ತಿದೆ. ಆದರೆ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂಕೇತಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜನರಿಗೆ ಕೂಡಾ ಸತತವಾಗಿ ಜಾಗರೂಕರಾಗಿರುವಂತೆ ಹೇಳಬೇಕು. ಸೋಂಕು ಹರಡುವುದನ್ನು ತಡೆಯಲು ತಳ ಮಟ್ಟದಲ್ಲಿಯೂ ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹಿಮಂತ ಜೀ ಹೇಳುತ್ತಿದ್ದಂತೆ ಅವರು ಲಾಕ್ ಡೌನ್ ದಾರಿಯನ್ನು ಅನುಸರಿಸಲಿಲ್ಲ. ಬದಲು ಕಿರು ಕಂಟೈನ್ ಮೆಂಟ್ ವಲಯಗಳ ಬಗ್ಗೆ ಗಮನ ಹರಿಸಿದರು. ಅವರು 6000 ಕ್ಕೂ ಅಧಿಕ ಕಿರು ಕಂಟೈನ್ ಮೆಂಟ್ ವಲಯಗಳನ್ನು ರಚಿಸಿದರು. ಈ ರೀತಿ ಕೂಡಾ ಜವಾಬ್ದಾರಿಯನ್ನು ನಿಗದಿ ಮಾಡಬಹುದು. ನಾವು ಆ ಕಿರು ಕಂಟೈನ್ ಮೆಂಟ್ ವಲಯದ ಮುಖ್ಯಸ್ಥರನ್ನು ಅದು ಹೇಗೆ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿತು ಅಥವಾ ಇದರಿಂದ ಏನು ಹಾನಿಯಾಯಿತು ಎಂಬ ಬಗ್ಗೆ ಕೇಳಿ ತಿಳಿದುಕೊಳ್ಳಬಹುದು. ಆದುದರಿಂದ ನಾವು ಕಿರು ಕಂಟೈನ್ ಮೆಂಟ್ ವಲಯಗಳ ಬಗ್ಗೆ ಹೆಚ್ಚು ಒತ್ತು ನೀಡಿದಂತೆ, ನಾವು ಈ ಪರಿಸ್ಥಿತಿಯಿಂದ ಬಹಳ ಬೇಗ ಹೊರ ಬರುತ್ತೇವೆ. ನಾವು ಕಳೆದ ಒಂದೂವರೆ ವರ್ಷಗಳಲ್ಲಿ ಗಳಿಸಿದ ಅನುಭವವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಮತ್ತು ನೋಡಿದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ವಿವಿಧ ರಾಜ್ಯಗಳು ನವೀನ ನವೀನ ವಿಧಾನಗಳನ್ನು ಅಳವಡಿಸಿಕೊಂಡಿವೆ. ಈ ಪರಿಸ್ಥಿತಿಯನ್ನು ಬಹಳ ನವೀನ ರೀತಿಯಲ್ಲಿ ನಿಭಾಯಿಸಿದ ಕೆಲವು ಜಿಲ್ಲೆಗಳು, ಕೆಲವು ಗ್ರಾಮಗಳು, ಕೆಲವು ಅಧಿಕಾರಿಗಳು ನಿಮ್ಮ ರಾಜ್ಯದಲ್ಲಿರಬಹುದು. ಈ ಉತ್ತಮ ಪದ್ಧತಿಗಳನ್ನು ಗುರುತಿಸಿ ಅವುಗಳನ್ನು ಪ್ರಚುರಪಡಿಸಿದರೆ ನಮಗೆ ಹೆಚ್ಚಿನ ಪ್ರಯೋಜನವಾಗುತ್ತದೆ

ಸ್ನೇಹಿತರೇ,

ಕೊರೊನಾ ವೈರಾಣುವಿನ ಪ್ರತೀ ರೂಪಾಂತರದ ಬಗ್ಗೆಯೂ ನಾವು ಕಣ್ಗಾವಲು ಇರಿಸಬೇಕು. ಯಾಕೆಂದರೆ ಇದು ಬಹುರೂಪಿ. ಅದು ತನ್ನ ರೂಪವನ್ನು ಆಗಾಗ ಬದಲಿಸುತ್ತಿರುತ್ತದೆ ಮತ್ತು ಇದರ ಪರಿಣಾಮವಾಗಿ ಹೊಸ ಸವಾಲುಗಳನ್ನು ಹಾಕುತ್ತಿದೆ ಹಾಗು ಇದರಿಂದಾಗಿ ನಾವು ಪ್ರತೀ ರೂಪಾಂತರಿತ ತಳಿಯ ಬಗ್ಗೆಯೂ ನಿಕಟ ನಿಗಾ ಇರಿಸಬೇಕಾಗುತ್ತದೆ. ರೂಪಾಂತರಿತ ತಳಿಯ ಬಳಿಕ ಅದು ಹೇಗೆ ಅಪಾಯಕಾರಿ ಎಂಬ ಬಗ್ಗೆ ತಜ್ಞರು ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇಡೀ ತಂಡ ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕನ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಡೆಯುವುದು ಮತ್ತು ಚಿಕಿತ್ಸೆ ಬಹಳ ಮುಖ್ಯ. ನಾವು ನಮ್ಮ ಇಡೀ ಶಕ್ತಿಯನ್ನು ಮತ್ತು ಗಮನವನ್ನು ಈ ಎರಡು ಕ್ರಮಗಳಲ್ಲಿ  ಹಾಕಬೇಕಾಗುತ್ತದೆ. ನಾವು ಎರಡು ಯಾರ್ಡ್ ದೂರವನ್ನು ಕಾಯ್ದುಕೊಂಡರೆ, ಮುಖಗವಸುಗಳನ್ನು ಧರಿಸಿದರೆ, ಮತ್ತು ಲಸಿಕೆ ಹಾಕಿಸಿಕೊಂಡರೆ ವೈರಾಣುವಿನ ತೀವ್ರತೆ ಕಡಿಮೆಯಾಗುತ್ತದೆ. ಮತ್ತು ನಾವಿದನ್ನು ಕಳೆದ ಒಂದೂವರೆ ವರ್ಷಗಳ ನಮ್ಮ ಅನುಭವದಲ್ಲಿ ಕಂಡುಕೊಂಡಿದ್ದೇವೆ. ನಾವು ನಮ್ಮ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ತಂತ್ರವನ್ನು ಮುಂದುವರೆಸಿಕೊಂಡು ಹೋದರೆ ಮತ್ತು ನಮ್ಮ ಮೂಲಸೌಕರ್ಯವನ್ನು ಸುಧಾರಿಸಿದರೆ ನಾವು ಇನ್ನೂ ಹೆಚ್ಚು ಜೀವಗಳನ್ನು ಉಳಿಸಬಹುದು. ಇದು ಇಡೀ ಜಗತ್ತಿನಲ್ಲಿ ಅನುಭವದಿಂದ ಸಿದ್ಧವಾಗಿದೆ ಮತ್ತು ಆದುದರಿಂದ ನಾವು ಪ್ರತಿಯೊಬ್ಬ ನಾಗರಿಕರೂ ಕೊರೊನಾ ತಡೆಗೆ ಮಾಡಿರುವ ನಿಯಮಗಳನ್ನು ಅನುಸರಿಸುವಂತೆ ಉತ್ತೇಜಿಸಬೇಕು. ನಾವು ನಾಗರಿಕ ಸಮಾಜ ಮತ್ತು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗುವಂತೆ ಪ್ರಯತ್ನಗಳನ್ನು ನಡೆಸಬೇಕು.

ಸ್ನೇಹಿತರೇ,

ಪ್ರವಾಸೋದ್ಯಮ, ವ್ಯಾಪಾರ, ಮತ್ತು ವ್ಯವಹಾರಗಳಿಗೆ ಕೊರೊನಾದಿಂದ ಹೊಡೆತ ಬಿದ್ದಿದೆ ಎಂಬುದು ಸತ್ಯ ಸಂಗತಿ. ಆದರೆ ಇಂದು ನಾನಿಲ್ಲಿ ಒತ್ತಿ ಹೇಳುತ್ತೇನೆ, ಗಿರಿಧಾಮಗಳಿಗೆ ಮತ್ತು ಮಾರುಕಟ್ಟೆಗಳಿಗೆ ತೆರಳುತ್ತಿರುವ ಜನರು ಮುಖಗವಸುಗಳಿಲ್ಲದೆ ಹೋಗುತ್ತಿರುವುದು ಮತ್ತು ಶಿಷ್ಟಾಚಾರ ಪಾಲಿಸದೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಸರಿಯಲ್ಲ. ಹಲವು ಸಂದರ್ಭಗಳಲ್ಲಿ ನಮಗೆ ಒಂದು ವಾದ ಸರಣಿ  ಕೇಳಿ ಬರುತ್ತದೆ, ಅದೆಂದರೆ ಮೂರನೇ ಅಲೆ ಅಪ್ಪಳಿಸುವುದಕ್ಕೆ ಮೊದಲು ನಾವು ಸಂತೋಷದಿಂದ ಇರುತ್ತೇವೆ ಎಂದು ಹೆಮ್ಮೆಯಿಂದ ಹೇಳುವಂತಹ ವಾದವದು. ಈ ಜನರಿಗೆ ನಾವು ವಿವರಿಸಿ ಹೇಳಬೇಕಾಗಿದೆ,  ಏನೆಂದರೆ ಮೂರನೇ ಅಲೆ ತಾನಾಗಿಯೇ ಬರುವುದಿಲ್ಲ. ಕೆಲವೊಮ್ಮೆ ಜನ ಕೇಳುತ್ತಾರೆ, ಮೂರನೇ ಅಲೆಯನ್ನು ಎದುರಿಸುವುದಕ್ಕೆ ಯಾವ ಸಿದ್ಧತೆಗಳನ್ನು ಮಾಡಲಾಗಿದೆ ಎಂಬುದಾಗಿ. ಮೂರನೇ ಅಲೆಗೆ ನೀವೇನು ಮಾಡುತ್ತೀರಿ ಎಂಬುದಾಗಿ ಅವರು ಕೇಳುತ್ತಾರೆ?. ವಾಸ್ತವವೆಂದರೆ ನಾವು ನಮ್ಮಲ್ಲಿಯೇ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ ಮೂರನೆ ಅಲೆಯನ್ನು ತಡೆಯುವುದು ಹೇಗೆ ಎಂಬುದು. ನಮ್ಮ ಶಿಷ್ಟಾಚಾರಗಳನ್ನು ಸಮರ್ಪಕವಾಗಿ ಜಾರಿಗೆ ತರುವುದು ಹೇಗೆ ಎಂಬುದು? ಮತ್ತು ಕೊರೊನಾ ಎಂಬುದು ತಾನಾಗಿಯೇ ಬರುವಂತಹದಲ್ಲ. ಅದನ್ನು ಜನತೆಯೇ ತರುವುದು ಅಥವಾ ತಂದುಕೊಳ್ಳುವುದು. ಆದುದರಿಂದ ನಾವು ಈ ವಿಷಯಗಳ ಬಗ್ಗೆ ಸಮಾನ ಮುನ್ನೆಚ್ಚರಿಕೆ ವಹಿಸಿದರೆ, ಆಗ ನಾವು ಮೂರನೇ ಅಲೆಯನ್ನು ತಡೆಯಲು ಸಫಲರಾಗಬಹುದು. ಮೂರನೇ ಅಲೆ ಬಂದರೆ ನಾವು ಏನು ಮಾಡಬೇಕು ಎಂಬುದು ಪ್ರತ್ಯೇಕ ವಿಷಯ. ಮುಖ್ಯ ವಿಷಯ ಎಂದರೆ ಅದನ್ನು ಹೇಗೆ ತಡೆಯಬೇಕು ಎಂಬುದು. ಆದುದರಿಂದ ನಮ್ಮ ನಾಗರಿಕರು ಜಾಗ್ರತೆಯ ವಿಷಯದಲ್ಲ್ಲಿ ರಾಜಿ ಮಾಡಿಕೊಳ್ಳಬಾರದು. ಎಚ್ಚರಿಕೆ ವಹಿಸುವಲ್ಲಿ , ಮತ್ತು ಕೋವಿಡ್ ಸಮುಚಿತ ಶಿಷ್ಟಾಚಾರದ ಅನುಸರಣೆಯಲ್ಲಿ ಹಿಂದುಳಿಯಬಾರದು.ಅಜಾಗ್ರತೆಯಿಂದ, ನಿರ್ಲಕ್ಷ್ಯದಿಂದ ಮತ್ತು ವಿಪರೀತ ಜನಜಂಗುಳಿಯಿಂದ ಕೊರೊನಾ ಸೋಂಕಿನಲ್ಲಿ ಭಾರೀ ಹೆಚ್ಚಳವಾಗಬಹುದು ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಆದುದರಿಂದ ಪ್ರತಿಯೊಂದು ಹಂತದಲ್ಲಿಯೂ ಅವಶ್ಯ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವುದು ಅತ್ಯವಶ್ಯಕ. ಆದುದರಿಂದ ನಾವು ಜನಜಾತ್ರೆ ಸೇರುವ ಕಾರ್ಯಕ್ರಮಗಳನ್ನು ತಡೆಯಲು ಪ್ರಯತ್ನಿಸಬೇಕು.

ಸ್ನೇಹಿತರೇ,

ಕೇಂದ್ರ ಸರಕಾರ ನಡೆಸುತ್ತಿರುವ ’ಎಲ್ಲರಿಗೂ ಉಚಿತ ಲಸಿಕೆ” ಆಂದೋಲನ ಈಶಾನ್ಯದಲ್ಲಿಯೂ ಪ್ರಾಮುಖ್ಯವನ್ನು ಪಡೆದಿದೆ. ಮೂರನೇ ಅಲೆಯನ್ನು ನಿಭಾಯಿಸಲು ನಾವು ಲಸಿಕೆ ನೀಡಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ನಾವು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಜನರನ್ನು , ಮತ್ತು ಸೆಲೆಬ್ರಿಟಿಗಳನ್ನು ಲಸಿಕಾಕರಣ ಕುರಿತ ಕಟ್ಟು ಕತೆಗಳನ್ನು ತಳ್ಳಿ ಹಾಕುವುದಕ್ಕಾಗಿ ಬಳಸಿಕೊಳ್ಳಬೇಕು.  ಕೊನೆಯ ಹಂತದವರೆಗೂ ಅವರಿಂದ ಇದನ್ನು ಪ್ರಚುರಪಡಿಸಬೇಕು ಮತ್ತು ಜನರನ್ನೂ ಒಗ್ಗೂಡಿಸಬೇಕು. ನಾನು ಆರಂಭದಲ್ಲಿ ಹೇಳಿದಂತೆ ಈಶಾನ್ಯದ ಕೆಲವು ರಾಜ್ಯಗಳು ಲಸಿಕಾಕರಣಕ್ಕೆ ಸಂಬಂಧಿಸಿ ಉತ್ತಮ ಕಾರ್ಯವನ್ನು ಮಾಡಿವೆ. ಕೊರೊನಾ ಸೋಂಕು ಹಬ್ಬುವ ಅಪಾಯ ಇರುವ ಸ್ಥಳಗಳಲ್ಲಿ ಲಸಿಕೆ ನೀಡುವಿಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು.

ಸ್ನೇಹಿತರೇ,

ನಾವು ಪರೀಕ್ಷೆಗೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಣೆಯ ನಿಟ್ಟಿನಲ್ಲಿ ಮುಂದಡಿ ಇಡಬೇಕು. ಈ ನಿಟ್ಟಿನಲ್ಲಿ ಸಂಪುಟವು ಇತ್ತೀಚೆಗೆ 23,000 ಕೋ.ರೂ.ಗಳ ಹೊಸ ಪ್ಯಾಕೇಜಿಗೆ ಅಂಗೀಕಾರ ನೀಡಿದೆ. ಈ ಪ್ಯಾಕೇಜ್ ಈಶಾನ್ಯ ರಾಜ್ಯಗಳ ಪ್ರತೀ ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡಲಿದೆ. ಈ ಪ್ಯಾಕೇಜ್ ಈಶಾನ್ಯದಲ್ಲಿ ಪರೀಕ್ಷೆ, ರೋಗ ಪತ್ತೆ ಮತ್ತು ತಳಿ ಅನುಕ್ರಮಣಿಕೆಗೆ  ಹೆಚ್ಚಿನ ಒತ್ತು ನೀಡಲಿದೆ. ಇದು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸ್ಥಳಗಳಲ್ಲಿ ತಕ್ಷಣವೇ ಐ.ಸಿ.ಯು. ಹಾಸಿಗೆಗಳ ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯ ಮಾಡಲಿದೆ.ನಿರ್ದಿಷ್ಟವಾಗಿ ಹೇಳುವುದಾದರೆ ನಾವು ಆಮ್ಲಜನಕ ಮತ್ತು ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಪಿ.ಎಂ. ಕೇರ್ಸ್ ಅಡಿಯಲ್ಲಿ ದೇಶಾದ್ಯಂತ ನೂರಾರು ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಈ ನಿಟ್ಟಿನಲ್ಲಿ ಆಗುತ್ತಿರುವ ಕ್ಷಿಪ್ರ ಗತಿಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿರುವುದು ನನಗೆ ಸಂತೋಷ ತಂದಿದೆ. ಈಶಾನ್ಯಕ್ಕೆ ಸುಮಾರು 150 ಸ್ಥಾವರಗಳನ್ನು ಮಂಜೂರು ಮಾಡಲಾಗಿದೆ. ಇವುಗಳು ಆದಷ್ಟು ಬೇಗ ಪೂರ್ಣಗೊಳ್ಳಬೇಕು ಮತ್ತು ಅಲ್ಲಿ ಯಾವುದೇ ಅಡೆ ತಡೆಗಳು ಎದುರಾಗಬಾರದು ಎಂಬುದಾಗಿ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಇದರ ಮೇಲೆ ಕಣ್ಗಾವಲು ಇಡಿ  ಮತ್ತು ಸೂಕ್ತ  ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಏಕಕಾಲಕ್ಕೆ ತಯಾರಾಗಿಡಬೇಕು. ಹಾಗಾದಾಗ ನಿಮಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಈಶಾನ್ಯದ ಭೌಗೋಳಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಆಸ್ಪತ್ರೆಗಳನು ಕಟ್ಟುವುದು ಕೂಡಾ ಬಹಳ ಮುಖ್ಯ. ಆರಂಭದಲ್ಲಿ ನಾನು ಪ್ರಸ್ತಾಪಿಸಿದಂತೆ ಅಲ್ಲಿ ಇನ್ನೊಂದು ಮುಖ್ಯ ವಿಷಯವೂ ಇದೆ, ಮತ್ತು ಅದು ತರಬೇತಿ ಪಡೆದ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದುದಾಗಿದೆ. ಸ್ಥಾಪನೆಯಾಗುತ್ತಿರುವ ಆಮ್ಲಜನಕ ಸ್ಥಾವರಗಳನ್ನು ನಡೆಸಲು. ನಿರ್ಮಾಣ ಮಾಡಲಾಗುತ್ತಿರುವ ಐ.ಸಿ.ಯು. ಹಾಸಿಗೆಗಳನ್ನು ನಿರ್ವಹಿಸಲು, ಬ್ಲಾಕ್ ಮಟ್ಟದ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿರುವ ಯಂತ್ರಗಳನ್ನು ನಿರ್ವಹಣೆ ಮಾಡಲು ನುರಿತ ಮಾನವ ಸಂಪನ್ಮೂಲ ಅವಶ್ಯಕ. ಈ ನಿಟ್ಟಿನಲ್ಲಿ ನಿಮಗೇನು ಸಹಾಯ ಬೇಕೋ ಅದನ್ನು ಕೇಂದ್ರ ಸರಕಾರ ಒದಗಿಸಲಿದೆ.

ಸ್ನೇಹಿತರೇ,

ಇಂದು ನಾವು ದೇಶದಲ್ಲಿ ದೈನಿಕ 20 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ತಲುಪಿದ್ದೇವೆ. ಪರೀಕ್ಷಾ ಮೂಲಸೌಕರ್ಯವನ್ನು ಈಶಾನ್ಯದ ಪ್ರತೀ ಜಿಲ್ಲೆಗಳಲ್ಲಿಯೂ ಆದ್ಯತೆಯ ಮೇಲೆ ವಿಸ್ತರಿಸಬೇಕಾಗಿದೆ. ಅದರಲ್ಲೂ ವಿಶೇಷವಾಗಿ ತೀವ್ರವಾಗಿ ಬಾಧೆಗೆ ಒಳಗಾಗಿರುವ ಜಿಲ್ಲೆಗಳಲ್ಲಿ ಇದಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಇದು ಮಾತ್ರವಲ್ಲ, ಪರೀಕ್ಷೆಯ ಜೊತೆ ಬ್ಲಾಕ್ ಗಳ ಗುಚ್ಛಗಳಲ್ಲಿ ನಾವು ಪರೀಕ್ಷೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು. ನಾವು ನಮ್ಮ ಸಾಮೂಹಿಕ ಪ್ರಯತ್ನಗಳಿಂದ ಮತ್ತು ದೇಶದ ಜನತೆಯ ಸಹಕಾರದಿಂದ ಕೊರೊನಾ ಸೋಂಕನ್ನು ನಿಯಂತ್ರಣದಲ್ಲಿಡಲು ಸಮರ್ಥರಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಇಂದು ನಾವು ಈಶಾನ್ಯದ ನಿರ್ದಿಷ್ಟ ವಿಷಯಗಳ ಬಗ್ಗೆ ವಿವರವಾದ ಚರ್ಚೆ ಮಾಡಿದ್ದೇವೆ.ನನಗೆ ಭರವಸೆ ಇದೆ, ನಮ್ಮ ಇಡೀ ತಂಡ ಈಶಾನ್ಯದಲ್ಲಿ ಬರಲಿರುವ ದಿನಗಳಲ್ಲಿ ಕೊರೊನಾದ ಬೆಳವಣಿಗೆಯನ್ನು ತಡೆಯಲು ಕಾರ್ಯನಿರತವಾಗುತ್ತದೆ ಎಂಬುದಾಗಿ.ಮತ್ತು ನಮಗೆ ಯಶಸ್ಸು ದೊರೆಯುತ್ತದೆ ಎಂಬುದಾಗಿ. ನಿಮಗೆಲ್ಲರಿಗೂ ಮತ್ತೊಮ್ಮೆ ಬಹಳ ಬಹಳ ಧನ್ಯವಾದಗಳು!. ನಾನು ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಮತ್ತು ನನ್ನ ಈಶಾನ್ಯದ ಸಹೋದರರು ಹಾಗು ಸಹೋದರಿಯರು ಕೊರೊನಾದಿಂದ ಶೀಘ್ರವೇ ಮುಕ್ತರಾಗುತ್ತಾರೆ ಎಂದು ಆಶಿಸುತ್ತೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage