ನಮಸ್ತೇ,
ಎಲ್ಲರೂ ಹೇಗಿದ್ದೀರಿ?
ನಾನು ವೈಯಕ್ತಿಕವಾಗಿ ಭೇಟಿಯಾಗಬೇಕಾಗಿತ್ತು. ನನಗೆ ವೈಯಕ್ತಿಕವಾಗಿ ಬರಲು ಸಾಧ್ಯವಾಗಿದ್ದಿದರೆ, ನಾನು ನಿಮ್ಮೆಲ್ಲರನ್ನೂ ಭೇಟಿಯಾಗುವುದು ಸಾಧ್ಯವಾಗುತ್ತಿತ್ತು. ಆದರೆ ಸಮಯದ ಅಭಾವದಿಂದ ಮತ್ತು ತಂತ್ರಜ್ಞಾನದ ಬಳಕೆಯಿಂದ ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ನನಗೆ ಲಭಿಸಿದೆ. ನನ್ನ ದೃಷ್ಟಿಯಲ್ಲಿ ಈ ಕಾರ್ಯಕ್ರಮವು ಬಹು ಆಯಾಮ ಮಹತ್ವದ್ದು-ಬೃಹದ್ ಸೇವಾ ಮಂದಿರ್ ಯೋಜನೆಯು ಎಲ್ಲರ ಸಹಕಾರದಿಂದ ಆಗುತ್ತಿರುವಂತಹದು.
ನಾನು ಕೆಂಪು ಕೋಟೆಯಿಂದ ಹೇಳಿದ್ದೆ, ಸಬ್ ಕಾ ಪ್ರಯಾಸ್ (ಪ್ರತಿಯೊಬ್ಬರ ಪ್ರಯತ್ನ) ಎಂಬುದಾಗಿ. ಮಾ ಉಮಿಯಾ ಧಾಮದ ಅಭಿವೃದ್ಧಿ ಕೆಲಸಕ್ಕೆ ಪ್ರತಿಯೊಬ್ಬರೂ ಮಾ ಉಮಿಯಾ ಸೇವಾ ಸಂಕುಲದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಕೈಜೋಡಿಸಬೇಕು. ಧಾರ್ಮಿಕ ಉದ್ದೇಶಕ್ಕಾಗಿ ಹೊಸ ಗುರಿಗಳನ್ನು ನಿಗದಿ ಮಾಡಿಕೊಳ್ಳಬೇಕು. ಮತ್ತು ಅದಕ್ಕಿಂತ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶವೂ ಇರಬೇಕು. ಮತ್ತು ಇದು ನಿಜವಾದ ದಾರಿ. ನಮ್ಮಲ್ಲಿ ಹೀಗೆ ಹೇಳುತ್ತಾರೆ-ನರ ಕರ್ನಿ ಕರೇತೋ ನಾರಾಯಣ್ ಹೋ ಜಾಯೆ” (ಮಾನವರು ಕರ್ಮದಿಂದ ದೈವಿಕತೆಯನ್ನು ಸಾಧಿಸಬಹುದು ಎಂಬುದು ಇದರರ್ಥ) ನಮ್ಮಲ್ಲಿ ಹೀಗೂ ಹೇಳುತ್ತಾರೆ “ ಜನ್ ಸೇವಾ ಇಜೆ ಜಗ್ ಸೇವಾ” (ಜನರಿಗೆ ಮಾಡುವ ಸೇವೆ ಎಂದರೆ ಅದು ಜಗತ್ತಿಗೆ ಸೇವೆ ಸಲ್ಲಿಸಿದಂತೆ ). ನಾವು ಪ್ರತೀ ಜೀವಿಯಲ್ಲಿಯೂ ದೇವರನ್ನು ಕಾಣುವವರು. ಮತ್ತು ಅದರಿಂದಾಗಿ ಯುವ ತಲೆಮಾರನ್ನು ತಯಾರು ಮಾಡಲು, ಭವಿಷ್ಯದ ತಲೆಮಾರನ್ನು ತಯಾರು ಮಾಡಲು ಇಲ್ಲಿ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಮತ್ತು ಅದನ್ನು ಸಮಾಜದ ಸಹಕಾರದೊಂದಿಗೆ ಮಾಡಬೇಕು. ಇದು ಶ್ಲಾಘನೀಯ ಮತ್ತು ಸ್ವಾಗತಾರ್ಹವಾದ ಕೆಲಸವಾಗುತ್ತದೆ. “ಮಾ ಉಮಿಯ ಶರಣಂ ಮಮ” (ಮಾ ಉಮಿಯಾ ದೇವರಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು) ಮಂತ್ರವನ್ನು 51 ಕೋಟಿ ಬಾರಿ ಬರೆಯುವ ಮತ್ತು ಪಠಿಸುವ ಆಂದೋಲನವನ್ನು ಆರಂಭ ಮಾಡಿರುವಿರಿ ಎಂದು ನನಗೆ ತಿಳಿಸಲಾಗಿದೆ. ಅದೇ ಒಂದು ಶಕ್ತಿಯ ಚಿಲುಮೆ. ನೀವು ಮಾ ಉಮಿಯಾ ದೇವರಿಗೆ ಶರಣಾಗುವ ಮೂಲಕ ಸಾರ್ವಜನಿಕ ಸೇವೆಯ ಪಥವನ್ನು ಆಯ್ದುಕೊಂಡಿರುವಿರಿ. ಮತ್ತು ಇಂದು ಬಹಳ ಬೃಹತ್ತಾದ ಹಲವು ಸೇವಾ ಕಾರ್ಯಗಳನ್ನು ಆರಂಭಿಸಲಾಗಿದೆ. ಮಾ ಉಮಿಯಾ ಧಾಮ ಅಭಿವೃದ್ಧಿ ಯೋಜನೆ ಬಹಳ ದೊಡ್ಡ ಸೇವಾ ಆಂದೋಲನವಾಗಿದ್ದು, ಅದು ಬರಲಿರುವ ತಲೆಮಾರುಗಳಿಗೆ ಬಹಳ ಉಪಯುಕ್ತವಾಗಲಿದೆ. ಮತ್ತು ಆದುದರಿಂದ ನೀವು ಪ್ರತಿಯೊಬ್ಬರೂ ಶ್ಲಾಘನೆಗೆ ಅರ್ಹರು.
ಆದರೆ ನೀವು ಯುವ ಜನತೆಗೆ ಬಹಳಷ್ಟು ಅವಕಾಶಗಳನ್ನು ಒದಗಿಸುವಾಗ ಮತ್ತು ಅವರಿಗಾಗಿ ಬಹಳಷ್ಟು ಸೌಲಭ್ಯಗಳನ್ನು ಸ್ಥಾಪಿಸುವಾಗ, ನಾನು ಒಂದು ಸಂಗತಿಯನ್ನು ಹೇಳಲು ಇಷ್ಟಪಡುತ್ತೇನೆ ಮತ್ತು ಅದಕ್ಕೆ ಕಾರಣ ಈಗಿನ ಕಾಲಮಾನವು ಕೌಶಲ್ಯಾಭಿವೃದ್ಧಿಯ ಮಹತ್ವವನ್ನು ಸಾಬೀತು ಮಾಡಿದೆ. ನೀವು ನಿಮ್ಮ ಸಂಸ್ಥೆಯ, ಸಂಘಟನೆಯ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ನೀವು ಕೌಶಲ್ಯಾಭಿವೃದ್ಧಿಯ ಜೊತೆ ಸಂಯೋಜಿಸಲ್ಪಟ್ಟಿರಬೇಕು. ನೀವು ಈ ಬಗ್ಗೆ ಈಗಾಗಲೇ ಚಿಂತಿಸಿರಬಹುದು. ಆದಾಗ್ಯೂ ಈ ಸಂದರ್ಭದ ಆವಶ್ಯಕತೆ ಎಂದರೆ ಕೌಶಲ್ಯಗಳ ಮಹತ್ವವನ್ನು ಹೆಚ್ಚಿಸುವುದು. ನಮ್ಮ ಹಳೆಯ ಕಾಲದಲ್ಲಿ ಕೌಟುಂಬಿಕ ವ್ಯವಸ್ಥೆಯು ಮುಂದಿನ ತಲೆಮಾರಿಗೆ ಕೌಶಲ್ಯಗಳನ್ನು ವರ್ಗಾಯಿಸುವ ರಚನೆಯನ್ನು ಒಳಗೊಂಡಿತ್ತು. ಈಗ ಸಾಮಾಜಿಕ ಸಂರಚನೆ ಬಹಳಷ್ಟು ಬದಲಾಗಿದೆ. ಆದುದರಿಂದ ನಾವು ಅದಕ್ಕಾಗಿ ವ್ಯವಸ್ಥೆಯನ್ನು ರೂಪಿಸುವ ಮೂಲಕ ಆ ಕೆಲಸವನ್ನು ಮಾಡಬೇಕಾಗಿದೆ. ಮತ್ತು ದೇಶವು “ಅಜಾದಿ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿರುವಾಗ ಮತ್ತು ಗುಜರಾತಿನಲ್ಲಿ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಲಭಿಸಿರುವಾಗ ಮತ್ತು ಈಗ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವಾಗ, ನಾನು ನಿಮಗೆ ನನ್ನ ಮಾತುಗಳ ನೆನಪು ಮಾಡಿಕೊಡಲು ಇಚ್ಛಿಸುತ್ತೇನೆ, ಮತ್ತು ಈಗ “ಅಜಾದಿ ಕಾ ಅಮೃತ ಮಹೋತ್ಸವದಲ್ಲಿ ಕೂಡಾ ನಾವು ಈ ಸ್ಥಳವನ್ನು ಬಿಡುವುದಕ್ಕೆ ಮೊದಲು ಒಂದು ಸಮಾಜವಾಗಿ ದೇಶವನ್ನು ಮತ್ತು ಸಮಾಜವನ್ನು ಕಟ್ಟಲು ನಾವು ಏನು ಕೊಡುಗೆ ನೀಡಬೇಕು ಎಂಬ ಬಗ್ಗೆ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕು. ನಾನು ನಿಮ್ಮಲ್ಲಿಗೆ ಬಂದಾಗ, ನಾವು ಬಹಳಷ್ಟು ಸಂಗತಿಗಳನ್ನು ಚರ್ಚಿಸಿದ್ದೇವೆ ಎಂಬುದು ವಾಸ್ತವದ ಸಂಗತಿ. ಹಲವಾರು ವಿಷಯಗಳಿಗೆ ಸಂಬಂಧಿಸಿ ನಾನು ನಿಮ್ಮ ಸಹಕಾರ ಮತ್ತು ಸಹಭಾಗಿತ್ವವನ್ನು ಕೋರಿದ್ದೇನೆ. ಮತ್ತು ಅದನ್ನು ನೀವು ಕೊಟ್ಟಿದ್ದೀರಿ.
ನಾನು ಸರಿಯಾಗಿ ನೆನಪಿನಲ್ಲಿಟ್ಟುಕೊಂಡಿದ್ದೇನೆ, ನಾನು “ಬೇಟಿ ಬಚಾವೋ” ಆಂದೋಲನ ನಡೆಸುತ್ತಿರುವಾಗ ನಾನೊಮ್ಮೆ ಉಂಜಾಕ್ಕೆ ಬಂದಿದ್ದೆ. ಮತ್ತು ನಾನು ಹಲವಾರು ಸಂಗತಿಗಳನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೆ. ಮಾ ಉಮಿಯಾ ಧಾಮದ ಕೇಂದ್ರವಾಗಿರುವ ಉಂಜಾದ ಬಗ್ಗೆ ಮತ್ತು ಅಲ್ಲಿ ಹೆಣ್ಣು ಮಕ್ಕಳ ಜನನ ದರದಲ್ಲಿ ಭಾರೀ ಕುಸಿತವಾಗಿರುವುದು ನಮಗೆ ಒಂದು ಕಳಂಕ ಎಂದು ಹೇಳಿದ್ದೆ. ಅದೇ ವೇಳೆ, ಈ ಪರಿಸ್ಥಿತಿಯನ್ನು ನಾವು ಸುಧಾರಿಸಬೇಕಾದ ಅಗತ್ಯದ ಬಗ್ಗೆ ಹೇಳಿ ನಿಮ್ಮಿಂದ ಭರವಸೆಯನ್ನು ಕೇಳಿದ್ದೆ. ಆ ಸವಾಲನ್ನು ಸ್ವೀಕರಿಸಿದ ನಿಮಗೆ ಧನ್ಯವಾದ ಹೇಳಲು ಇಂದು ನಾನು ಇಲ್ಲಿದ್ದೇನೆ. ಪರಿಸ್ಥಿತಿಯಲ್ಲಿ ನಿಧಾನವಾಗಿ ಸುಧಾರಣೆಯಾಗುತ್ತಿದ್ದು, ಹೆಣ್ಣು ಮಕ್ಕಳ ಸಂಖ್ಯೆ ಬಹುತೇಕ ಗಂಡು ಹುಡುಗರ ಸಂಖ್ಯೆಗೆ ಸರಿಸಮವಾಗುತ್ತಿದೆ. ಸಮಾಜದಲ್ಲಿ ಈ ಬದಲಾವಣೆಯನ್ನು ತರುವ ಅವಶ್ಯಕತೆಯನ್ನು ನೀವೂ ಮನಗಂಡಿರುವಿರಿ, ಮತ್ತು ನೀವದನ್ನು ಸರಿಯಾಗಿ ಮಾಡಿರುವಿರಿ.
ಅದೇ ರೀತಿ ನಾವು ನರ್ಮದಾ ನದಿ ನೀರು ಪೂರೈಕೆಯನ್ನು “ಸುಜಲಾಂ ಸುಫಲಾಂ” ಯೋಜನೆ ಅಡಿಯಲ್ಲಿ ಆರಂಭ ಮಾಡಿದಾಗ , ನಾನು ಉತ್ತರ ಗುಜರಾತಿನ ಮತ್ತು ಸೌರಾಷ್ಟ್ರ ವಲಯದ ರೈತರಿಗೆ ಮತ್ತು ಮಾ ಉಮಿಯ ಭಕ್ತರಿಗೆ ವಿಶೇಷ ಕೋರಿಕೆಯನ್ನು ಮಾಡಿದ್ದೆ, ಅದೆಂದರೆ ನೀರು ಬಂದರೂ ನಾವು ನೀರಿನ ಮಹತ್ವವನ್ನು ಮನಗಾಣಬೇಕು ಎಂಬುದಾಗಿ. ಉಳಿದ ಜನರಿಗೆ “ಜಲವೇ ಜೀವನ” ಎಂಬುದು ಬರೇ ಇನ್ನೊಂದು ಘೋಷಣೆಯಾಗಿರಬಹುದು. ಆದರೆ ನಮಗೆಲ್ಲರಿಗೂ ನೀರಿಲ್ಲದೆ ನಾವು ಹೇಗೆ ಹೋರಾಟ ಮಾಡುತ್ತಿದ್ದೇವೆ ಎಂಬುದು ಗೊತ್ತಿದೆ. ಮಳೆ ವಿಳಂಬವಾದರೆ ದಿನಗಳು ಮತ್ತು ಕೆಲವೊಮ್ಮೆ ವರ್ಷದ ಅವಧಿ ಕೂಡಾ ಹೇಗೆ ಅಪವ್ಯಯ ಆಗುತ್ತದೆ, ಅದರಿಂದಾಗುವ ನೋವು ಎಂತಹದು ಎಂಬುದು ನಮಗೆ ಗೊತ್ತಿತ್ತು. ಆದುದರಿಂದ ನಾವು ನೀರನ್ನು ಶೇಖರಿಸಿಡಲು, ಸಂರಕ್ಷಿಸಿಡಲು ನಿರ್ಧರಿಸಿದೆವು. ನಾನು ಉತ್ತರ ಗುಜರಾತಿನಲ್ಲಿ ತುಂತುರು ನೀರಾವರಿ ವ್ಯವಸ್ಥೆಯನ್ನು ಅನುಸರಿಸುವಂತೆ ಒತ್ತಾಯಿಸಿದೆ. ಅದನ್ನು ಸ್ವಾಗತಿಸಿ ನೀವೆಲ್ಲರೂ ಅಂಗೀಕರಿಸಿದಿರಿ. ತುಂತುರು ನೀರಾವರಿಯ ವ್ಯವಸ್ಥೆಯನ್ನು ಹಲವಾರು ಪ್ರದೇಶಗಳಲ್ಲಿ ಅನುಷ್ಟಾನಕ್ಕೆ ತರಲಾಯಿತು ಮತ್ತು ಅದರಿಂದಾಗಿ ನೀರು ಉಳಿತಾಯವಾಯಿತು ಮತ್ತು ಉತ್ತಮ ಬೆಳೆಯೂ ಲಭ್ಯವಾಯಿತು.
ಅದೇ ರೀತಿ, ನಾವು ನಮ್ಮ ತಾಯ್ನಾಡಿನ ಕುರಿತ ಕಳವಳಗಳನ್ನೂ ಚರ್ಚಿಸಿದ್ದೇವೆ. ಮಣ್ಣಿನ ಆರೋಗ್ಯ ಕಾರ್ಡ್ ವ್ಯವಸ್ಥೆಯನ್ನು ಸ್ಥಾಪಿಸಿದ ರಾಜ್ಯಗಳಲ್ಲಿ ಗುಜರಾತ್ ಮೊದಲನೆಯದ್ದು, ಇಂದು ಅದನ್ನು ಇಡೀ ದೇಶದಲ್ಲಿ ಅನುಸರಿಸಲಾಗುತ್ತಿದೆ.ಅದು ಎಲ್ಲಾ ಜೀವಜಂತುಗಳ ಜೀವಸೆಲೆಯಾಗಿರುವ ನಮ್ಮ ಭೂಮಾತೆಯ ಆರೋಗ್ಯವನ್ನು ತಪಾಸಣೆ ಮಾಡುವುದಕ್ಕಾಗಿ. ಮತ್ತು ನಾವು ಭೂಮಿಯ ಆರೋಗ್ಯವನ್ನು ಮಣ್ಣಿನ ಕಾರ್ಡ್ ವ್ಯವಸ್ಥೆಯ ಮೂಲಕ ತಪಾಸಣೆ ಮಾಡುತ್ತೇವೆ, ಇದು ಮಣ್ಣಿನ ಅನಾರೋಗ್ಯ, ಕೊರತೆಗಳು ಮತ್ತು ಅವಶ್ಯಕತೆಗಳನ್ನು ತಿಳಿಸುತ್ತದೆ. ನಾವು ಈ ಎಲ್ಲಾ ಸಂಗತಿಗಳನ್ನು ಮಾಡಿದ್ದೇವೆ. ಆದರೆ ಉತ್ಪಾದನೆಯ ಅತ್ಯಾಶೆ, ತಕ್ಷಣ ಫಲಿತಾಂಶ ಬೇಕು ಎಂಬ ಆಶಯ ಮಾನವ ಸ್ವಭಾವದ ಭಾಗ. ಮತ್ತು ಹಾಗಾಗಿ ನಾವು ವಿವಿಧ ರಾಸಾಯನಿಕಗಳನ್ನು, ರಸಗೊಬ್ಬರಗಳನ್ನು ಮತ್ತು ಔಷಧಿಗಳನ್ನು ಭೂಮಾತೆಯ ಆರೋಗ್ಯದ ಕುರಿತು ಚಿಂತಿಸದೆ ಬಳಸುತ್ತಿದ್ದೇವೆ. ಇಂದು ನಾನು ನಿಮ್ಮಲ್ಲಿಗೆ ಒಂದು ಕೋರಿಕೆಯ ಜೊತೆ ಬಂದಿದ್ದೇನೆ. ನಾವು ಮಾ ಉಮಿಯಾ ದೇವರಿಗೆ ಸೇವೆ ಮಾಡಲು ತೀರ್ಮಾನಿಸಿದಾಗ ನಾವು ಭೂಮಾತೆಯನ್ನು ಮರೆಯುವಂತಿಲ್ಲ. ಮತ್ತು ಮಾ ಉಮಿಯಾ ದೇವರ ಮಕ್ಕಳು ಭೂಮಾತೆಯನ್ನು ಮರೆಯುವ ಹಕ್ಕನ್ನು ಹೊಂದಿಲ್ಲ. ಅವರಿಬ್ಬರೂ ನಮಗೆ ಸಮಾನರು. ಭೂಮಾತೆ ನಮ್ಮ ಜೀವನ ಮತ್ತು ಮಾ ಉಮಿಯಾ ನಮ್ಮ ಆಧ್ಯಾತ್ಮಿಕ ಮಾರ್ಗದರ್ಶಿ. ಮತ್ತು ಆದುದರಿಂದ ನಾವೆಲ್ಲರೂ ಉತ್ತರ ಗುಜರಾತಿನಲ್ಲಿ ಸಾವಯವ ಕೃಷಿ ಮಾಡುವ ಸಕಾಲಿಕ ನಿರ್ಧಾರವನ್ನು ಮಾ ಉಮಿಯಾ ಎದುರು ಕೈಗೊಳ್ಳಬೇಕು ಎಂದು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ.ಸಾವಯವ ಕೃಷಿಯನ್ನು ಶೂನ್ಯ ಬಂಡವಾಳ ಕೃಷಿ ಎಂದೂ ಕರೆಯಬಹುದು. ಬಹಳಷ್ಟು ಮಂದಿ ಮೋದೀ ಜೀ ಗೆ ಕೃಷಿ ಗೊತ್ತಿಲ್ಲ, ಆದರೂ ಅವರು ಸಲಹೆ ಕೊಡುತ್ತಾರೆ ಎಂದು ಭಾವಿಸುತ್ತಾರೆ. ಸರಿ ನಿಮಗೆ ನನ್ನ ಕೋರಿಕೆ ಸೂಕ್ತ ಎಂದು ಕಂಡು ಬಾರದಿದ್ದರೆ, ನಾನು ಪರ್ಯಾಯವೊಂದನ್ನು ಸಲಹೆ ಮಾಡುತ್ತೇನೆ. ನೀವು ಎರಡು ಎಕರೆ ಕೃಷಿ ಭೂಮಿ ಹೊಂದಿದ್ದರೆ ಒಂದು ಎಕರೆ ಪ್ರದೇಶದಲ್ಲಿಯಾದರೂ ಸಾವಯವ ಕೃಷಿ ಮಾಡಲು ಪ್ರಯತ್ನಿಸಿ. ಉಳಿದ ಒಂದು ಎಕರೆಯಲ್ಲಿ ಎಂದಿನಂತೆ ಕೃಷಿ ಮಾಡಿರಿ. ಅದನ್ನೇ ಇನ್ನೊಂದು ವರ್ಷವೂ ಮಾಡಿ. ಒಂದು ವೇಳೆ ನಿಮಗಿದು ಲಾಭದಾಯಕ ಎಂದು ಕಂಡು ಬಂದರೆ ಆಗ ನೀವು ಪೂರ್ಣ ಎರಡು ಎಕರೆಗೂ ಸಾವಯವ ಕೃಷಿಯ ತೀರ್ಮಾನ ಮಾಡಿ. ಇದರಿಂದ ಖರ್ಚು ಕಡಿಮೆಯಾಗುತ್ತದೆ ಮತ್ತು ನಮ್ಮ ಭೂಮಾತೆಯ ಪುನಶ್ಚೇತನ ಸಾಧ್ಯವಾಗುತ್ತದೆ. ನಮ್ಮ ಮಣ್ಣಿಗೆ ಹೊಸ ಜೀವ ಕಳೆ ಲಭ್ಯವಾಗುತ್ತದೆ. ನೀವು ಬರಲಿರುವ ತಲೆಮಾರುಗಳಿಗೆ ಬಹಳ ದೊಡ್ಡ ಕೆಲಸಗಳನ್ನು ಮಾಡುತ್ತಿರುವಿರಿ. ಈ ಎಲ್ಲಾ ಸಂಗತಿಗಳೂ ವೈಜ್ಞಾನಿಕವಾಗಿ ಸಾಬೀತಾಗಿವೆ. ನಾನು ದಶಂಬರ 16ರಂದು ಅಮುಲ್ ಡೈರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಲಿದ್ದೇನೆ. ಅಲ್ಲಿ ನಾನು ಸಾವಯವ ಕೃಷಿಯ ಬಗ್ಗೆ ವಿವರವಾಗಿ ಚರ್ಚಿಸಲಿದ್ದೇನೆ. ನಾನು ಮತ್ತೊಮ್ಮೆ ನಿಮ್ಮಲ್ಲಿ ಕೋರಿಕೊಳ್ಳುವುದೇನೆಂದರೆ ಸಾವಯವ ಕೃಷಿ ಏನು ಎಂಬುದನ್ನು ತಿಳಿದುಕೊಳ್ಳಿ ಮತ್ತು ಅದನ್ನು ಅಳವಡಿಸಿಕೊಳ್ಳಿ ಮತ್ತು ಅದನ್ನು ಮಾ ಉಮಿಯಾ ಆಶೀರ್ವಾದದೊಂದಿಗೆ ಮುಂದುವರೆಸಿ ಎಂಬುದಾಗಿದೆ. ಮತ್ತು ನಮ್ಮ ಏಕೈಕ ಕಳವಳ ಎಂದರೆ “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಈಗ ಸಬ್ ಕಾ ಪ್ರಯಾಸ್”
ಅದೇ ರೀತಿ ನೀವು ಗಮನಿಸಿರಬಹುದು, ನಿರ್ದಿಷ್ಟವಾಗಿ ಬನಸ್ಕಾಂತವು ಬೆಳೆಗಳ ರೀತಿಯಲ್ಲಿ ಬದಲಾವಣೆಗಳನ್ನು ಸಾಕ್ಷೀಕರಿಸಿದೆ. ಹಲವು ಹೊಸ ಕೃಷಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲಾಗಿದೆ. ಕಚ್ ಜಿಲ್ಲೆಯತ್ತ ನೋಡಿ. ಕಚ್ ನೀರು ಪಡೆಯಲು ಆರಂಭಿಸಿದೆ ಮತ್ತು ತುಂತುರು ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಆರಂಭಿಸಿದೆ. ಇಂದು ಕಚ್ ನಿಂದ ಹಣ್ಣುಗಳು ವಿದೇಶಕ್ಕೆ ರಫ್ತಾಗುತ್ತಿವೆ. ಇದನ್ನು ನಾವು ಕೂಡಾ ಮಾಡಬಹುದು. ನಾವು ಆ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಆದುದರಿಂದ ನೀವಿಂದು ಮಾ ಉಮಿಯಾ ಸೇವೆಗಾಗಿ ಬಹಳಷ್ಟು ಕೆಲಸಗಳನ್ನು ಮಾಡಲು ಉಪಕ್ರಮಿಸುತ್ತಿರುವಾಗ ನಾನಿಂದು ಮತ್ತೆ ಒತ್ತಾಯ ಮಾಡುತ್ತೇನೆ, ನಾವು ಮಾ ಉಮಿಯಾ ಅವರನ್ನು ಸ್ವರ್ಗೀಯ ಸಾಮ್ರಾಜ್ಯಕ್ಕಾಗಿ ಆರಾಧಿಸುತ್ತೇವೆ, ನೀವು ಈ ವಾಸ್ತವ ಜಗತ್ತಿನ ಬಗ್ಗೆಯೂ ಕಾಳಜಿ ಹೊಂದಿರುವಿರಿ. ಆದರೆ ನನಗೆ ಖಚಿತವಿದೆ ಮಾ ಉಮಿಯಾ ಆಶೀರ್ವಾದದೊಂದಿಗೆ ಮತ್ತು ಈಗಿನ ತಲೆಮಾರನ್ನು ಸಾಮರ್ಥ್ಯಶೀಲವನ್ನಾಗಿಸುವುದಕ್ಕೆ ಹಾಗು ಅವರ ಜೀವನವನ್ನು ಶ್ರೀಮಂತಗೊಳಿಸುವುದಕ್ಕಾಗಿ ಹೊಸ ಪ್ರಯತ್ನಗಳನ್ನು ಮತ್ತು ಯೋಜನೆಗಳನ್ನು ಇಂದು ಆರಂಭಿಸಲಾಗುತ್ತಿದ್ದು, ಅವುಗಳು ಗುಜರಾತಿನ ಮತ್ತು ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಯನ್ನು ಖಂಡಿತವಾಗಿಯೂ ಕೊಡುತ್ತವೆ.
ದೇಶವು “ಅಜಾದಿ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿರುವಾಗ ಮಾ ಉಮಿಯಾ ಅವರಿಗೆ ಮಂದಿರ ಕೂಡಾ ನಿರ್ಮಾಣ ಆಗುತ್ತಿರುವಾಗ, ನಾವೆಲ್ಲರೂ ಬಹಳಷ್ಟು ಹೊಸ ನಿರ್ಧಾರಗಳೊಂದಿಗೆ ಮುನ್ನಡೆಯಬೇಕಾಗಿದೆ.
ಮತ್ತೊಮ್ಮೆ ನಿಮಗೆಲ್ಲರಿಗೂ, ಪ್ರತಿಯೊಬ್ಬರಿಗೂ ಬಹಳ ಬಹಳ ಅಭಿನಂದನೆಗಳು. ನಾವು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಎಂದಾದರೂ ದೊರೆತಾಗ ನಾವು ಕೆಲಸದ ಪ್ರಗತಿಯ ಬಗ್ಗೆ ಚರ್ಚಿಸೋಣ. ಮತ್ತೊಮ್ಮೆ ಭೇಟಿಯಾಗೋಣ
ಜೈ ಉಮಿಯಾ ಮಾ