ಗೌರವಾನ್ವಿತ ಚಾನ್ಸೆಲರ್ ಸ್ಕೋಲ್ಜ್‌,

ವೈಸ್ ಚಾನ್ಸೆಲರ್‌ ಡಾ. ರಾಬರ್ಟ್ ಹ್ಯಾಬೆಕ್‌,

ಭಾರತ ಸರ್ಕಾರದ ಸಚಿವರೇ,

ಡಾ. ಬುಷ್, ಏಷ್ಯಾ-ಪೆಸಿಫಿಕ್ ಕಮಿಟಿ ಆಫ್ ಜರ್ಮನ್ ಬಿಸಿನೆಸ್ ಅಧ್ಯಕ್ಷರೇ,

ಭಾರತ, ಜರ್ಮನಿ ಮತ್ತು ಇಂಡೋ-ಪೆಸಿಫಿಕ್ ದೇಶಗಳ ಉದ್ಯಮ ನಾಯಕರೇ

ಮಹಿಳಯರೇ ಮತ್ತು ಮಹನೀಯರೇ,

ನಮಸ್ಕಾರ !

ಗುಟೇನ್ ತಗ್ !

ಇಂದು ವಿಶೇಷ ದಿನ.

ನನ್ನ ಸ್ಹೇಹಿತ ಚಾನ್ಸಲರ್‌ ಶ್ಕೋಲ್ಜ್ ಭಾರತಕ್ಕೆ ನಾಲ್ಲನೇ ಭಾರಿ ಆಗಮಿಸಿದ್ದಾರೆ.

ಮೊದಲ ಭೇಟಿಯು ಅವರು ಮೇಯರ್ ಆಗಿದ್ದಾಗ ಮತ್ತು ನಂತರದ ಮೂರು ಭೇಟಿಗಳು ಅವರು ಚಾನ್ಸೆಲರ್ ಆದ ನಂತರ. ಇದು ಭಾರತ-ಜರ್ಮನಿ ಸಂಬಂಧಗಳ ಮೇಲೆ ಅವರ ಹೆಚ್ಚಿನ ಗಮನ ಹರಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ.

 

12 ವರ್ಷಗಳ ನಂತರ ಭಾರತದಲ್ಲಿ ಜರ್ಮನ್ ವ್ಯಾಪಾರದ ಏಷ್ಯಾ-ಪೆಸಿಫಿಕ್ ಸಮ್ಮೇಳನ ನಡೆಯುತ್ತಿದೆ.

ಒಂದೆಡೆ ಸಿಇಒ ಫೋರಂ ಸಭೆ ನಡೆಯುತ್ತಿದೆ. ಮತ್ತೊಂದೆಡೆ ನಮ್ಮ ನೌಕಾಪಡೆಗಳು ಒಟ್ಟಾಗಿ ಅಭ್ಯಾಸ ಮಾಡುತ್ತಿವೆ. ಜರ್ಮನಿಯ ನೌಕಾ ಹಡಗುಗಳು ಸದ್ಯ ಗೋವಾದ ಬಂದರುಗಳಲ್ಲಿವೆ. ಹೆಚ್ಚುವರಿಯಾಗಿ, ಭಾರತ ಮತ್ತು ಜರ್ಮನಿ ನಡುವೆ 7ನೇ ಅಂತರ ಸರ್ಕಾರ ಸಮಾಲೋಚನೆಗಳು ಸಹ ಶೀಘ್ರದಲ್ಲೇ ನಡೆಯಲಿವೆ.

ಇದು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಆಯಾಮದಲ್ಲೂ ಗಾಢವಾಗುತ್ತಿರುವುದು ಸ್ಪಷ್ಟಪಡಿಸುತ್ತದೆ.

ಮಿತ್ರರೇ,

ಈ ವರ್ಷ ಭಾರತ-ಜರ್ಮನಿ ಕಾರ್ಯತಂತ್ರ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ.

ಮುಂದಿನ 25 ವರ್ಷಗಳಲ್ಲಿ ಈ ಪಾಲುದಾರಿಕೆಯು ಹೊಸ ಎತ್ತರವನ್ನು ತಲುಪುತ್ತದೆ.

ಮುಂಬರುವ 25 ವರ್ಷಗಳಲ್ಲಿ ಭಾರತದ ಅಭಿವೃದ್ಧಿಗಾಗಿ ನಾವು ನೀಲನಕ್ಷೆಯನ್ನು ರೂಪಿಸಿದ್ದೇವೆ.

ಇಂತಹ ಸಂಕೀರ್ಣ ಸಮಯದಲ್ಲಿ ಜರ್ಮನಿಯ ಸಚಿವ ಸಂಪುಟ "ಫೋಕಸ್ ಆನ್ ಇಂಡಿಯಾ" ದಾಖಲೆಯನ್ನು ಬಿಡುಗಡೆ ಮಾಡಿರುವುದು ನನಗೆ ಸಂತೋಷ ತಂದಿದೆ.

ವಿಶ್ವದ ಎರಡು ಪ್ರಬಲ ಪ್ರಜಾಪ್ರಭುತ್ವಗಳು, ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳು ಒಟ್ಟಾಗಿ, ನಾವು ಜಾಗತಿಕ ಒಳಿತಿಗಾಗಿ ಶಕ್ತಿಯಾಗಬಹುದು ಮತ್ತು ಫೋಕಸ್ ಆನ್ ಇಂಡಿಯಾ ಡಾಕ್ಯುಮೆಂಟ್ ಇದಕ್ಕೆ ನೀಲನಕ್ಷೆಯನ್ನು ಒದಗಿಸುತ್ತದೆ. ಇದರಲ್ಲಿ ಜರ್ಮನಿಯ ಸಮಗ್ರ ವಿಧಾನ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಅನುಸರಿಸುವ ಬದ್ಧತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಜರ್ಮನಿಯು ಭಾರತದ ನುರಿತ ಉದ್ಯೋಗಿಗಳ ಮೇಲೆ ವ್ಯಕ್ತಪಡಿಸಿರುವ ನಂಬಿಕೆಯನ್ನು ಗಮನಿಸಬೇಕಾದುದು ವಿಶೇಷ ಅಂಶವಾಗಿದೆ.

ಕೌಶಲ್ಯಹೊಂದಿದ ಭಾರತೀಯರ ವೀಸಾಗಳ ಸಂಖ್ಯೆಯನ್ನು ವರ್ಷಕ್ಕೆ 20,000 ರಿಂದ 90,000 ಕ್ಕೆ ಹೆಚ್ಚಿಸಲು ಜರ್ಮನಿ ನಿರ್ಧರಿಸಿದೆ.

ಇದು ಜರ್ಮನಿಯ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬ ವಿಶ್ವಾಸ ನನಗಿದೆ.

ಮಿತ್ರರೇ,

ನಮ್ಮ ದ್ವಿಪಕ್ಷೀಯ ವ್ಯಾಪಾರವು 30 ಬಿಲಿಯನ್ ಡಾಲರ್‌ಗಳ ಗಡಿ ದಾಟಿದೆ.

ಇಂದು ಜರ್ಮನಿಯ ನೂರಾರು ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಭಾರತೀಯ ಕಂಪನಿಗಳು ಜರ್ಮನಿಯಲ್ಲಿ ವೇಗವಾಗಿ ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುತ್ತಿವೆ.

ಭಾರತವು ವೈವಿಧ್ಯೀಕರಣ ಮತ್ತು ಅಪಾಯವನ್ನು ತಪ್ಪಿಸುವ ಪ್ರಮುಖ ಕೇಂದ್ರವಾಗುತ್ತಿದೆ ಮತ್ತು ಜಾಗತಿಕ ವ್ಯಾಪಾರ ಮತ್ತು ಉತ್ಪಾದನೆಯ ತಾಣವಾಗಿ ಹೊರಹೊಮ್ಮುತ್ತಿದೆ. ಈ ಸನ್ನಿವೇಶವನ್ನು ಗಮನಿಸಿದರೆ, ನೀವು ಭಾರತದಲ್ಲಿ ತಯಾರಿಸಲು ಮತ್ತು ಮೇಕ್ ಫಾರ್ ದಿ ವಲ್ಡ್‌ ಗೆ  ಇದು ಅತ್ಯಂತ ಸೂಕ್ತ ಸಮಯವಾಗಿದದೆ.

 

ಮಿತ್ರರೇ,

ಐರೋಪ್ಯ ಒಕ್ಕೂಟ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದ ನಡುವಿನ ಸಂಬಂಧಗಳನ್ನು ಬಲವರ್ಧನೆಯಲ್ಲಿ ಏಷ್ಯಾ-ಪೆಸಿಫಿಕ್ ಸಮ್ಮೇಳನವು ಪ್ರಮುಖ ಪಾತ್ರವನ್ನು ವಹಿಸಿದೆ. ಆದರೆ ನಾನು ಈ ವೇದಿಕೆಯನ್ನು ಕೇವಲ ವ್ಯಾಪಾರ ಮತ್ತು ಹೂಡಿಕೆಗೆ ಸೀಮಿತವಾಗಿ ನೋಡುವುದಿಲ್ಲ.

ನಾನು ಇದನ್ನು ಇಂಡೋ-ಪೆಸಿಫಿಕ್ ಪ್ರದೇಶದ ಪಾಲುದಾರಿಕೆ ಮತ್ತು ಜಗತ್ತಿಗೆ ಉತ್ತಮ ಭವಿಷ್ಯ ಎಂದು ನೋಡುತ್ತೇನೆ. ಜಗತ್ತಿಗೆ ಸ್ಥಿರತೆ ಮತ್ತು ಸುಸ್ಥಿರತೆ, ನಂಬಿಕೆ ಮತ್ತು ಪಾರದರ್ಶಕತೆಯ ಅಗತ್ಯವಿದೆ. ಸಮಾಜದಲ್ಲಿ ಅಥವಾ ಪೂರೈಕೆ ಸರಣಿಯಲ್ಲಿ ಈ ಮೌಲ್ಯಗಳನ್ನು ಪ್ರತಿ ವಲಯದಲ್ಲಿಯೂ ಒತ್ತಿ ಹೇಳಬೇಕು. ಅವುಗಳಿಲ್ಲದೆ, ಯಾವುದೇ ದೇಶ ಅಥವಾ ಪ್ರದೇಶವು ಉಜ್ವಲ ಭವಿಷ್ಯವನ್ನು ಕಾಣಲು ಸಾಧ್ಯವಿಲ್ಲ.

ಇಂಡೋ-ಪೆಸಿಫಿಕ್ ಪ್ರದೇಶವು ವಿಶ್ವದ ಭವಿಷ್ಯಕ್ಕಾಗಿ ಬಹಳ ಮುಖ್ಯವಾಗಿದೆ. ಜಾಗತಿಕ ಬೆಳವಣಿಗೆ, ಜನಸಂಖ್ಯೆ ಅಥವಾ ಕೌಶಲ್ಯಗಳ ವಿಷಯದಲ್ಲಿ ಈ ಪ್ರದೇಶದ ಕೊಡುಗೆ ಮತ್ತು ಸಾಮರ್ಥ್ಯವು ಅಪಾರವಾಗಿದೆ.

ಆದ್ದರಿಂದ ಈ ಸಮ್ಮೇಳನವು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ಮಿತ್ರರೇ,

ಭಾರತದ ಜನರು ಸ್ಥಿರವಾದ ರಾಜಕೀಯ ಮತ್ತು ಸಂಭಾವ್ಯ ನೀತಿ ಪೂರಕ ವ್ಯವಸ್ಥೆಯನ್ನು ಗೌರವಿಸುತ್ತಾರೆ.

ಅದಕ್ಕಾಗಿಯೇ 60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಸರ್ಕಾರ ಆಯ್ಕೆಯಾಗಿದೆ. ಸುಧಾರಣೆ, ದಕ್ಷತೆ ಮತ್ತು ಪರಿವರ್ತನಾತ್ಮಕ ಆಡಳಿತದ ಮೂಲಕ ಕಳೆದ ದಶಕದಲ್ಲಿ ಭಾರತದ ಬಗೆಗಿನ ನಂಬಿಕೆಯನ್ನು ಬಲಪಡಿಸಲಾಗಿದೆ.

ಭಾರತದ ಸಾಮಾನ್ಯ ಪ್ರಜೆಯು ಈ ರೀತಿ ಭಾವಿಸುವಾಗ, ನಿಮ್ಮಂತಹ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಬೇರೆ ಯಾವ ತಾಣ ಉತ್ತಮವಾಗಿರುತ್ತದೆ ಹೇಳಿ?

ಮಿತ್ರರೇ,

ಭಾರತವು ನಾಲ್ಕು ಸದೃಢ ಸ್ತಂಭಗಳ ಮೇಲೆ ನಿಂತಿದೆ: ಪ್ರಜಾಪ್ರಭುತ್ವ, ಜನಸಂಖ್ಯೆ, ಬೇಡಿಕೆ ಮತ್ತು ಡೇಟಾ. ಪ್ರತಿಭೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಮೂಲಸೌಕರ್ಯಗಳು ಭಾರತದ ಬೆಳವಣಿಗೆಗೆ ಸಾಧನಗಳಾಗಿವೆ. ಇಂದು, ಒಂದು ಹೆಚ್ಚುವರಿ ಮಹಾನ್ ಶಕ್ತಿ ಇವೆಲ್ಲವನ್ನೂ ಮುನ್ನಡೆಸುತ್ತಿದೆ: ಅದು ಭಾರತದ ಮಹತ್ವಾಕಾಂಕ್ಷೆಯ ಶಕ್ತಿ.

ಅಂದರೆ, ಎಐ (ಕೃತಕ ಬುದ್ಧಿಮತ್ತೆ) ಸಂಯೋಜಿತ ಶಕ್ತಿ - ಕೃತಕ ಬುದ್ಧಿಮತ್ತೆ ಮತ್ತು ಮಹತ್ವಾಕಾಂಕ್ಷೆಯ ಭಾರತ - ನಮ್ಮೊಂದಿಗಿದೆ. ನಮ್ಮ ಯುವಕರು ಮಹತ್ವಾಕಾಂಕ್ಷೆಯ ಭಾರತವನ್ನು ಮುನ್ನಡೆಸುತ್ತಿದ್ದಾರೆ.

ಕಳೆದ ಶತಮಾನದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಅಭಿವೃದ್ಧಿಗೆ ವೇಗ ನೀಡಿದವು. ಈ ಶತಮಾನದಲ್ಲಿ ಮಾನವ ಸಂಪನ್ಮೂಲಗಳು ಮತ್ತು ನಾವೀನ್ಯತೆಗಳು ಬೆಳವಣಿಗೆಯನ್ನು ಮುನ್ನಡೆಸಿಕೊಂಡು ಹೋಗುತ್ತಿವೆ. ಅದಕ್ಕಾಗಿಯೇ ಭಾರತವು ತನ್ನ ಯುವಕರಿಗೆ ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬದ್ಧವಾಗಿದೆ.

 

ಮಿತ್ರರೇ,

ಭಾರತ ಇಂದು ವಿಶ್ವದ ಭವಿಷ್ಯದ ಅಗತ್ಯತೆಗಳಿಗಾಗಿ ಕಾರ್ಯನಿರ್ವಹಿಸುತ್ತಿದೆ.

ಅದು ಮಿಷನ್ ಎಐ (ಕೃತಕ ಬುದ್ದಿಮತ್ತೆ) ಆಗಿರಬಹುದು, ನಮ್ಮ ಸೆಮಿಕಂಡಕ್ಟರ್ ಮಿಷನ್ ಆಗಿರಬಹುದು, ನಮ್ಮ ಕ್ವಾಟಂ ಮಿಷನ್ ಆಗಿರಬಹುದು, ಮಿಷನ್ ಗ್ರೀನ್ ಹೈಡ್ರೋಜನ್, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಿಷನ್ ಆಗಿರಬಹುದು ಅಥವಾ ಡಿಜಿಟಲ್ ಮಿಷನ್ ಆಗಿರಬಹುದು, ಎಲ್ಲವೂ ಜಗತ್ತಿಗೆ ಅತ್ಯುತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುವ ಗುರಿಗಳನ್ನು ಹೊಂದಿವೆ. ಅವು ನಿಮಗೆಲ್ಲಾ ವಿಫುಲ ಹೂಡಿಕೆ ಮತ್ತು ಸಹಭಾಗಿತ್ದದ ಅವಕಾಶಗಳನ್ನು ಒದಗಿಸುತ್ತವೆ.

ಮಿತ್ರರೇ,

ಪ್ರತಿ ಆವಿಷ್ಕಾರವನ್ನು ಬಲಿಷ್ಠ ವೇದಿಕೆ ಮತ್ತು ಅತ್ಯುತ್ತಮ ಮೂಲಸೌಕರ್ಯದೊಂದಿಗೆ ಒದಗಿಸಲು ಭಾರತ ಬದ್ಧವಾಗಿದೆ. ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಹೊಸ ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮ 4.0 ಗಾಗಿ ವಿಫುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಭಾರತವು ತನ್ನ ಭೌತಿಕ ಮೂಲಸೌಕರ್ಯವನ್ನು ರೈಲು, ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ದಾಖಲೆಯ ಹೂಡಿಕೆಯೊಂದಿಗೆ ಪರಿವರ್ತಿಸುತ್ತಿದೆ. ಜರ್ಮನಿ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ಕಂಪನಿಗಳಿಗೆ ಇಲ್ಲಿ ವ್ಯಾಪಕ ಅವಕಾಶಗಳಿವೆ.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ಜರ್ಮನಿ ಒಗ್ಗೂಡಿ ಕೆಲಸ ಮಾಡುತ್ತಿರುವುದು ನನಗೆ ಸಂತಸ ತಂದಿದೆ.

ಕಳೆದ ತಿಂಗಳು, ಜರ್ಮನಿಯ ಸಹಯೋಗದೊಂದಿಗೆ ಗುಜರಾತ್‌ನಲ್ಲಿ ನಾಲ್ಕನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯನ್ನು ಆಯೋಜಿಸಲಾಗಿತ್ತು.

ಜಾಗತಿಕ ಮಟ್ಟದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡಲು ಭಾರತ-ಜರ್ಮನಿ ವೇದಿಕೆಯನ್ನು ಸಹ ಆರಂಭಿಸಲಾಗಿದೆ. ಭಾರತವು ಅಭಿವೃದ್ಧಿಪಡಿಸುತ್ತಿರುವ ಹಸಿರು ಹೈಡ್ರೋಜನ್ ಪೂರಕ ವ್ಯವಸ್ಥೆಯ ಲಾಭವನ್ನು ನೀವು ಪಡೆದುಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ.

ಮಿತ್ರರೇ,

ಭಾರತದ ಯಶೋಗಾಥೆಯನ್ನು ಸೇರಲು ಇದು ಸೂಕ್ತ ಸಮಯ.

ಭಾರತದ ಚೈತನ್ಯವು ಜರ್ಮನಿಯ ನಿಖರತೆಯನ್ನು ಸೇರಿದಾಗ, ಜರ್ಮನಿಯ ಎಂಜಿನಿಯರಿಂಗ್ ಭಾರತದ ನಾವೀನ್ಯತೆಯ ಜತೆ ಒಗ್ಗೂಡಿದಾಗ, ಜರ್ಮನಿಯ ತಂತ್ರಜ್ಞಾನವು ಭಾರತದ ಪ್ರತಿಭೆಯೊಂದಿಗೆ ಸಂಯೋಜಿಸಿದಾಗ, ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಜಗತ್ತಿಗೆ ಉಜ್ವಲ ಭವಿಷ್ಯ ಒದಗುತ್ತದೆ.

ಮಿತ್ರರೇ,

ನೀವು ವಾಣಿಜ್ಯ ಜಗತ್ತಿಗೆ ಸಂಬಂಧಿಸಿದವರು, ನಿಮ್ಮ ಮಂತ್ರ “ನಾವು ಭೇಟಿ ಮಾಡಿದ್ದೇವೆಂದರೆ ಅದು ವ್ಯಾಪಾರಕ್ಕಾಗಿ’’ ಎಂಬುದಾಗಿದೆ.

ಆದರೆ ಭಾರತಕ್ಕೆ ಬರುವುದು ಕೇವಲ ವ್ಯಾಪಾರಕ್ಕಾಗಿ ಮಾತ್ರವಲ್ಲ, ನೀವು ಭಾರತದ ಸಂಸ್ಕೃತಿ, ಆಹಾರ ಮತ್ತು ಶಾಪಿಂಗ್ ಆನಂದವನ್ನು ಸವಿಯದಿದ್ದರೆ ನೀವು ಸಾಕಷ್ಟು ಕಳೆದುಕೊಳ್ಳುತ್ತೀರಿ,

ನಾನು ನಿಮಗೆ ಭರವಸೆ ನೀಡುತ್ತೇನೆ: ನೀವು ಸಂತೋಷವಾಗಿರುತ್ತೀರಿ, ಮತ್ತು ನಿಮ್ಮ ಕುಟುಂಬವು ಇನ್ನೂ ಹೆಚ್ಚು ಸಂತೋಷದಿಂದ ಇರುತ್ತದೆ.

ತುಂಬಾ ಧನ್ಯವಾದಗಳು, ಮತ್ತು ಈ ಸಮ್ಮೇಳನ ಮತ್ತು ಭಾರತದಲ್ಲಿ ನಿಮ್ಮ ವಾಸ್ತವ್ಯವು ಫಲಪ್ರದ ಮತ್ತು ಸ್ಮರಣೀಯವಾಗಿರಲಿ.

ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."