Published By : Admin |
August 12, 2014 | 21:38 IST
Share
His Excellency President of India, respected Vice President, respected Speaker, Respected Manmohan Singh ji, respected Advani ji, all present respected senior gentlemen, brothers and sisters. I heartily congratulate all the three great gentlemen who are being felicitated for their excellent work. I am hopeful that this tradition being followed for the past few years will inspire all the parliamentarians. Each one will feel that in their respective roles as parliamentarians one should try and achieve high levels of conduct, depth in speech and clarity in thought as maintained by these great senior members. These kinds of thoughts would inspire all new members like us.
I agree that there are lot of intellectual talent in the house and I see people who are capable of presenting their word beautifully but the house cannot run as an ornate articulation or as a remarkable art of presentation. Till there is a seamless integration of leadership, duty and oration, just the words will fail to make an impact on the house or inspire the nation. And so those who won these awards today are the ones who have not only been good orators but are equally capable leaders and dutiful members. The country expects a lot from the Parliament of India. We give the awards within the parliament, But sometime there should be a public survey, on how the public rates the house and in a very professional way the public opinion should be presented. How does the common man view the entire house, what does he feel, maybe that may inspire us to think our way forward.
I would request the speaker to call the speakers of all Vidhan Sabhas if possible and start this tradition in the state assemblies too. I think this will be a good step that we can take. Another thing I would like to point out is that when I was in the Vidhan Sabha and now for some time when I have been in Parliament, the humour and sarcasm which was an explicit feature is now missing, something that we have heard and read so much about. It has practically vanished from our party system. One reason someone makes a remark, then how will those who are on air 24 hours interpret it and will they debate this for 24 hours. So, the ones who can speak are scared and I think we need to seriously contemplate on this.
I have heard of old incidents, of which I remember two or three episodes. Once there was a programme in the house to commemorate the 50 years of Independence. I had come to the house to hear it and some debate was going on and probably Sharad Pawar ji spoke first and then Sushma ji spoke. She joked and said “I don’t understand whether it is Sharad Pawar or Lalita Pawar”. The way I saw that scene, the way Sharad Pawar enjoyed that jibe, such a holy atmosphere prevailed. And that remark was not blown out of proportion by anyone in the print media or the electronic media. There is a casual sense of humour in our Parliament. And as our honourable Speaker and Arun Jaitely ji mentioned, sharp words can get you 24 hour footage but it can neither be effective nor inspirational.
That does not mean that everything should be done sweetly. That is not what I am saying. The need of the hour is to present the Parliament in a way that it becomes inspirational for the future generations. Every sentence uttered in the Parliament has its value, that it should not be undignified. And this is a collective responsibility. This is our collective responsibility, it is not about this political party, that political party, or about this or that specific individual but it is about our collective responsibility.
Dr. Karan Singh is a very experienced individual. He is still bound by the cultural traditions. Whatever disappointments he has shared, I am sure they will be helpful in self introspection. For a distinguished person like him who for so many years has served the nation through this Parliament, to know his pain, to understand his disappointment and then to modulate as per his hopes and expectations will usher in a new dignity in the house. I congratulate these three dignitaries once again.
I am new to the parliament. I also have to learn a lot. There are so many senior members, and by hearing them and understanding their views, I too will gain something. Sharad Ji said that once if he sits down to chat with the President he does not feel like getting up. I am telling you the truth. He gives such a lot of information with date and time and name, it is surprising. Like Sharad ji said, he wonders what kind of software does the President has in his mind. He said that what one would gain after reading an entire book, more than that one would have acquire half of the knowledge about India can be understood by having a conversation with him. Every parliamentarian should have the intention to remember dates, events, analysis of the situation and an ability to grasp things. All these can be learned from these seasoned members. And it is true that “Clarity of the Thought, Faith in Conviction and Correction in Acts” can help us take the dignity of the Parliament to a new level. I congratulate you once again.
ನನ್ನ ಪ್ರಿಯ ದೇಶವಾಸಿಗಳಿಗೆ ನಮಸ್ಕಾರ. 2025 ಇನ್ನೇನು ಬಂದೆ ಬಿಟ್ಟಿತು, ನವ ಸಂವತ್ಸರ ಬಾಗಿಲು ತಟ್ಟುತ್ತಿದೆ. 2025ರ ಜನವರಿ 26 ರಂದು ನಮ್ಮ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತವೆ. ನಮಗೆಲ್ಲರಿಗೂ ಇದು ಹೆಮ್ಮೆಯ ವಿಷಯ. ನಮ್ಮ ಸಂವಿಧಾನ ನಿರ್ಮಾತೃಗಳು ನಮಗೆ ಒಪ್ಪಿಸಿದ ಸಂವಿಧಾನವು ಎಲ್ಲಾ ಕಾಲದಲ್ಲು ಪ್ರಸ್ತುತವಾಗಿದೆ. ಸಂವಿಧಾನ ನಮಗೆ ದಿಕ್ಸೂಚಿಯಾಗಿದೆ, ಮಾರ್ಗದರ್ಶಕನಾಗಿದೆ. ಭಾರತದ ಸಂವಿಧಾನದಿಂದಾಗಿಯೇ ಇಂದು ನಾನು ಇಲ್ಲಿದ್ದೇನೆ, ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಈ ವರ್ಷ, ನವೆಂಬರ್ 26 ರ ಸಂವಿಧಾನ ದಿನದಿಂದ ಒಂದು ವರ್ಷದ ಅವಧಿಯವರೆಗೆ ಜರುಗುವ ಅನೇಕ ಚಟುವಟಿಕೆಗಳು ಪ್ರಾರಂಭವಾಗಿವೆ. ದೇಶದ ನಾಗರಿಕರನ್ನು ಸಂವಿಧಾನದ ಪರಂಪರೆಯೊಂದಿಗೆ ಜೋಡಿಸಲು, constitution75.com ಎಂಬ ವಿಶೇಷ ವೆಬ್‌ಸೈಟ್ ಅನ್ನು ಸಹ ರಚಿಸಲಾಗಿದೆ. ಇದರಲ್ಲಿ ನೀವು ಸಂವಿಧಾನದ ಪೀಠಿಕೆಯನ್ನು ಓದಿ ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಬಹುದು. ನೀವು ವಿವಿಧ ಭಾಷೆಗಳಲ್ಲಿ ಸಂವಿಧಾನವನ್ನು ಓದಬಹುದು ಮತ್ತು ಸಂವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ‘ಮನದ ಮಾತಿನ’ ಕೇಳುಗರು, ಶಾಲಾ ವಿದ್ಯಾರ್ಥಿಗಳು, ಕಾಲೇಜಿಗೆ ಹೋಗುವ ಯುವಕರು, ಈ ವೆಬ್‌ಸೈಟ್‌ಗೆ ಖಂಡಿತಾ ಭೇಟಿ ನೀಡಿ ಮತ್ತು ಇದರಲ್ಲಿ ಪಾಲ್ಗೊಳ್ಳಿ ಎಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೇ, ಮುಂದಿನ ತಿಂಗಳು 13 ರಿಂದ ಪ್ರಯಾಗರಾಜ್‌ನಲ್ಲಿ ಮಹಾಕುಂಭವೂ ನಡೆಯಲಿದೆ. ಸದ್ಯ ಸಂಗಮದ ದಡದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ನನಗೆ ನೆನಪಿದೆ, ಕೆಲವೇ ದಿನಗಳ ಹಿಂದೆ, ನಾನು ಪ್ರಯಾಗರಾಜ್‌ಗೆ ಭೇಟಿ ನೀಡಿದಾಗ, ಹೆಲಿಕಾಪ್ಟರ್‌ನಿಂದ ಇಡೀ ಕುಂಭ ಜರುಗುವ ಪ್ರದೇಶವನ್ನು ವೀಕ್ಷಿಸಿ ನನಗೆ ತುಂಬಾ ಸಂತೋಷವಾಯಿತು. ಎಷ್ಟು ಬೃಹದಾದುದು! ಎಷ್ಟು ಸುಂದರ! ಎಂತಹ ಭವ್ಯತೆ!
ಸ್ನೇಹಿತರೇ, ಮಹಾಕುಂಭದ ವಿಶೇಷತೆ ಅದರ ಅಗಾಧತೆಯಲ್ಲಿ ಮಾತ್ರ ಅಡಗಿಲ್ಲ. ಅದರ ವೈವಿಧ್ಯತೆಯೂ ಕುಂಭದ ವಿಶೇಷತೆಯಾಗಿದೆ. ಈ ಕಾರ್ಯಕ್ರಮದಲ್ಲಿ ಕೋಟಿಗಟ್ಟಲೆ ಜನ ಒಗ್ಗೂಡುತ್ತಾರೆ. ಲಕ್ಷಗಟ್ಟಲೆ ಸಂತರು, ಸಾವಿರಾರು ಸಂಪ್ರದಾಯಗಳು, ನೂರಾರು ಪಂಥಗಳು, ಹಲವು ಅಖಾಡಗಳು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಮೇಳೈಸುತ್ತಾರೆ. ಯಾವುದೇ ತಾರತಮ್ಯವಿಲ್ಲ, ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಅನೇಕತೆಯಲ್ಲಿ ಏಕತೆಯ ಇಂತಹ ದೃಶ್ಯ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ನಮ್ಮ ಕುಂಭ ಏಕತೆಯ ಮಹಾಕುಂಭವಾಗಿದೆ. ಈ ಬಾರಿಯ ಮಹಾಕುಂಭವು ಏಕತೆಯ ಮಹಾಕುಂಭದ ಮಂತ್ರಕ್ಕೆ ಪುಷ್ಟಿ ನೀಡಲಿದೆ. ನಾವು ಕುಂಭದಲ್ಲಿ ಭಾಗವಹಿಸಿದಾಗ, ಏಕತೆಯ ಸಂಕಲ್ಪದೊಂದಿಗೆ ಹಿಂತಿರುಗೋಣ ಎಂದು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಸಮಾಜದಲ್ಲಿನ ಒಡಕು ಮತ್ತು ದ್ವೇಷ ಭಾವನೆಯನ್ನು ತೊಡೆದುಹಾಕುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳೋಣ. ಕೆಲವೇ ಪದಗಳಲ್ಲಿ ಹೇಳುವುದಾದರೆ ನಾನು ಹೇಳಬಯಸುವುದು …
ಸ್ನೇಹಿತರೇ, ಈ ಬಾರಿ ದೇಶ ಮತ್ತು ಪ್ರಪಂಚದಾದ್ಯಂತದ ಭಕ್ತರು ಪ್ರಯಾಗರಾಜ್‌ನಲ್ಲಿ ಡಿಜಿಟಲ್ ಮಹಾಕುಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಡಿಜಿಟಲ್ ನ್ಯಾವಿಗೇಷನ್ ಸಹಾಯದಿಂದ, ನೀವು ವಿವಿಧ ಘಾಟ್‌ಗಳು, ದೇವಾಲಯಗಳು, ಸಾಧುಗಳ ಅಖಾಡಾಗಳನ್ನು ತಲುಪುವ ಮಾರ್ಗವು ಲಭಿಸಲಿದೆ. ಈ ನ್ಯಾವಿಗೇಷನ್ ಸಿಸ್ಟಮ್ ನಿಮಗೆ ಪಾರ್ಕಿಂಗ್ ತಲುಪಲು ಸಹಾಯ ಮಾಡುತ್ತದೆ. ಮೊದಲ ಬಾರಿಗೆ, ಮಹಾಕುಂಭ ಆಯೋಜನೆಯಲ್ಲಿ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಅನ್ನು ಬಳಸಲಾಗುವುದು. AI ಚಾಟ್‌ಬಾಟ್ ಮೂಲಕ, ಕುಂಭಕ್ಕೆ ಸಂಬಂಧಿಸಿದ ಪ್ರತಿಯೊಂದು ರೀತಿಯ ಮಾಹಿತಿಯನ್ನು 11 ಭಾರತೀಯ ಭಾಷೆಗಳಲ್ಲಿ ಪಡೆಯಬಹುದು. ಈ ಚಾಟ್‌ಬಾಟ್ ಗೆ text ಟೈಪ್ ಮಾಡುವ ಮೂಲಕ ಅಥವಾ ಧ್ವನಿ ಮೂಲಕ ಯಾವುದೇ ರೀತಿಯ ಸಹಾಯವನ್ನು ಯಾಚಿಸಬಹುದು. ಕಾರ್ಯಕ್ರಮ ನಡೆಯುವ ಸಂಪೂರ್ಣ ಪ್ರದೇಶವನ್ನು AI ಚಾಲಿತ ಕ್ಯಾಮೆರಾಗಳಿಂದ ಅವರಿಸಲಾಗಿದೆ. ಕುಂಭದಲ್ಲಿ ಯಾರಾದರೂ ತಮ್ಮ ಬಂಧು ಬಳಗದಿಂದ ಬೇರ್ಪಟ್ಟರೆ, ಅವರನ್ನು ಹುಡುಕಲು ಈ ಕ್ಯಾಮೆರಾಗಳು ಸಹಾಯ ಮಾಡುತ್ತವೆ. ಭಕ್ತರು ಡಿಜಿಟಲ್ ಲಾಸ್ಟ್ & ಫೌಂಡ್ ಸೆಂಟರ್ ಸೌಲಭ್ಯವನ್ನೂ ಪಡೆಯಲಿದ್ದಾರೆ. ಸರ್ಕಾರದಿಂದ ಅನುಮೋದಿತ ಪ್ರವಾಸ ಪ್ಯಾಕೇಜ್‌ಗಳು, ವಸತಿ ಮತ್ತು ಹೋಂಸ್ಟೇಗಳ ಬಗ್ಗೆಯೂ ಭಕ್ತರಿಗೆ ಮೊಬೈಲ್‌ನಲ್ಲಿ ಮಾಹಿತಿ ನೀಡಲಾಗುವುದು. ನೀವೂ ಸಹ ಮಹಾಕುಂಭಕ್ಕೆ ತೆರಳಿದರೆ, ಈ ಸೌಲಭ್ಯಗಳ ಪ್ರಯೋಜನವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಸೆಲ್ಫಿಯನ್ನು #EktaKaMahaKumbh ಜೊತೆಗೆ ಅಪ್‌ಲೋಡ್ ಮಾಡಿ.
ಸ್ನೇಹಿತರೇ, ‘ಮನ್ ಕಿ ಬಾತ್’ ಅಂದರೆ ಎಂಕೆಬಿಯಲ್ಲಿ ಈಗ ನಾವು ಕೆಟಿಬಿಯ ಬಗ್ಗೆ ಮಾತನಾಡೋಣ, ಹಿರಿಯರಲ್ಲಿ, ಅನೇಕರಿಗೆ ಕೆಟಿಬಿ ಬಗ್ಗೆ ತಿಳಿದಿಲ್ಲ. ಆದರೆ ಮಕ್ಕಳನ್ನು ಕೇಳಿ, ಕೆಟಿಬಿ ಅವರಲ್ಲಿ ಬಹಳ ಸೂಪರ್ಹಿಟ್ ಆಗಿದೆ. ಕೆಟಿಬಿ ಎಂದರೆ ಕ್ರಿಶ್, ತ್ರಿಶ್ ಮತ್ತು ಬಾಲ್ಟಿಬಾಯ್. ಮಕ್ಕಳ ಮೆಚ್ಚಿನ ಅನಿಮೇಷನ್ ಸರಣಿಯ ಬಗ್ಗೆ ನಿಮಗೆ ತಿಳಿದಿರಬಹುದು, ಅದರ ಹೆಸರು ಕೆಟಿಬಿ – ಭಾರತ್ ಹೈ ಹಮ್ ಮತ್ತು ಈಗ ಅದರ ಎರಡನೇ ಸೀಸನ್ ಕೂಡ ಬಂದಿದೆ. ಈ ಮೂರು ಅನಿಮೇಷನ್ ಪಾತ್ರಗಳು ಬೆಳಕಿಗೆ ಬಾರದ ಭಾರತೀಯ ಸ್ವಾತಂತ್ರ್ಯ ಹೋರಾಟದ ನಾಯಕರು ಮತ್ತು ನಾಯಕಿಯರ ಬಗ್ಗೆ ನಮಗೆ ಹೇಳುತ್ತವೆ. ಇತ್ತೀಚಿಗೆ ಗೋವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ವಿಶೇಷ ಶೈಲಿಯಲ್ಲಿ ಅದರ ಸೀಸನ್-2 ನ್ನು ಪ್ರಾರಂಭಿಸಲಾಯಿತು. ಈ ಸರಣಿಯು ಹಲವು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ವಿದೇಶಿ ಭಾಷೆಗಳಲ್ಲಿಯೂ ಪ್ರಸಾರವಾಗುತ್ತದೆ ಎಂಬುದು ಅತ್ಯಂತ ಅದ್ಭುತ ಸಂಗತಿ. ಇದನ್ನು ದೂರದರ್ಶನ ಮತ್ತು ಇತರ OTT ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡಬಹುದು.
ಸ್ನೇಹಿತರೇ, ನಮ್ಮ ಅನಿಮೇಷನ್ ಚಲನಚಿತ್ರಗಳು, ಸಾಮಾನ್ಯ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳ ಜನಪ್ರಿಯತೆಯು ಸೃಜನಶೀಲ ಉದ್ಯಮದಲ್ಲಿ ಭಾರತದ ಅದೆಷ್ಟು ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸುತ್ತದೆ. ಈ ಉದ್ಯಮವು ದೇಶದ ಪ್ರಗತಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಅಲ್ಲದೆ ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ನಮ್ಮ ಚಲನಚಿತ್ರ ಮತ್ತು ಮನರಂಜನಾ ಉದ್ಯಮವು ತುಂಬಾ ದೊಡ್ಡದಾಗಿದೆ. ದೇಶದ ಹಲವು ಭಾಷೆಗಳಲ್ಲಿ ಚಲನಚಿತ್ರಗಳನ್ನು ತಯಾರಿಸಲಾಗುತ್ತದೆ ಮತ್ತು creative content ಸಿದ್ಧಗೊಳಿಸಲಾಗುತ್ತದೆ. ನಾನು ನಮ್ಮ ಚಲನಚಿತ್ರ ಮತ್ತು ಮನರಂಜನಾ ಉದ್ಯಮವನ್ನು ಅಭಿನಂದಿಸುತ್ತೇನೆ ಏಕೆಂದರೆ ಅದು ‘ಏಕ್ ಭಾರತ್ – ಶ್ರೇಷ್ಠ ಭಾರತ’ ಎಂಬ ಭಾವನೆಗೆ ಪುಷ್ಟಿ ನೀಡುತ್ತದೆ.
ಸ್ನೇಹಿತರೇ, 2024ರಲ್ಲಿ ನಾವು ಚಿತ್ರರಂಗದ ಅನೇಕ ಮಹಾನ್ ವ್ಯಕ್ತಿಗಳ 100 ನೇ ಜನ್ಮ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ವ್ಯಕ್ತಿಗಳು ಭಾರತೀಯ ಚಿತ್ರರಂಗಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ತಂದು ಕೊಟ್ಟರು. ರಾಜ್ ಕಪೂರ್ ಅವರು ಭಾರತದ ಸಾಫ್ಟ್ ಪವರ್ ಅನ್ನು ಚಲನಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸಿದರು. ರಫಿ ಸಾಹಬ್ ಅವರ ಧ್ವನಿಯಲ್ಲಿ ಎಂಥ ಮಾಂತ್ರಿಕತೆ ಇತ್ತೆಂದರೆ, ಎಲ್ಲರ ಹೃದಯವನ್ನು ಮುಟ್ಟುತ್ತಿತ್ತು. ಅವರ ಧ್ವನಿ ಅದ್ಭುತವಾಗಿತ್ತು. ಭಕ್ತಿಗೀತೆಗಳಾಗಲಿ, ಪ್ರಣಯ ಗೀತೆಗಳಾಗಲಿ, ನೋವಿನ ಗೀತೆಗಳಾಗಲಿ, ಪ್ರತಿಯೊಂದು ಭಾವಕ್ಕೆ ತಮ್ಮ ಕಂಠದಿಂದ ಅವರು ಜೀವ ತುಂಬುತ್ತಿದ್ದರು. ಇಂದಿಗೂ ಯುವ ಪೀಳಿಗೆ ಅವರ ಹಾಡುಗಳನ್ನು ಅಷ್ಟೇ ಪ್ರೀತಿಯಿಂದ ಕೇಳುತ್ತಾರೆ ಎಂದರೆ ಈ ಮೂಲಕ ಆ ಕಲಾವಿದನ ಹಿರಿಮೆಯನ್ನು ಅಳೆಯಬಹುದಾಗಿದೆ. ಇದೆ ಅಲ್ಲವೇ ಕಾಲಾತೀತವಾದ ಕಲೆಯಾ ಗುರುತು. ಅಕ್ಕಿನೇನಿ ನಾಗೇಶ್ವರ ರಾವ್ ಅವರು ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ಚಲನಚಿತ್ರಗಳು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಚೆನ್ನಾಗಿ ಪ್ರಸ್ತುತಪಡಿವೆ. ತಪನ್ ಸಿನ್ಹಾ ಅವರ ಚಿತ್ರಗಳು ಸಮಾಜಕ್ಕೆ ಹೊಸ ದೃಷ್ಟಿಕೋನ ನೀಡಿದವು. ಅವರ ಚಲನಚಿತ್ರಗಳು ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಸಂದೇಶವನ್ನು ಒಳಗೊಂಡಿದ್ದವು. ಈ ಸೆಲೆಬ್ರಿಟಿಗಳ ಜೀವನ ನಮ್ಮ ಇಡೀ ಚಿತ್ರರಂಗಕ್ಕೆ ಸ್ಪೂರ್ತಿದಾಯಕ.
ಸ್ನೇಹಿತರೇ, ನಾನು ನಿಮಗೆ ಇನ್ನೊಂದು ಸಂತಸದಾ ಸುದ್ದಿಯನ್ನು ನೀಡಲು ಬಯಸುತ್ತೇನೆ. ಭಾರತದ ಸೃಜನಶೀಲ ಪ್ರತಿಭೆಯನ್ನು ವಿಶ್ವದೆದುರು ಪ್ರದರ್ಶಿಸಲು ಒಂದು ದೊಡ್ಡ ಅವಕಾಶ ಒದಗಿ ಬಂದಿದೆ. ಮುಂದಿನ ವರ್ಷ, ವಿಶ್ವ ಆಡಿಯೋ ವಿಷುಯಲ್ ಎಂಟರ್‌ಟೈನ್‌ಮೆಂಟ್ ಶೃಂಗಸಭೆ ಅಂದರೆ ವೇವ್ಸ್ ಶೃಂಗಸಭೆಯನ್ನು ನಮ್ಮ ದೇಶದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುವುದು. ವಿಶ್ವದ ಆರ್ಥಿಕ ಕ್ಷೇತ್ರದ ದಿಗ್ಗಜರು ಒಗ್ಗೂಡುವ ದಾವೋಸ್ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಅದೇ ರೀತಿ, ವೇವ್ಸ್ ಶೃಂಗಸಭೆಯಲ್ಲಿ, ವಿಶ್ವದ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ದಿಗ್ಗಜರು ಮತ್ತು ಸೃಜನಶೀಲ ಪ್ರಪಂಚದ ಜನರು ಭಾರತಕ್ಕೆ ಬರುತ್ತಾರೆ. ಭಾರತವನ್ನು ಜಾಗತಿಕ content creation ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಶೃಂಗಸಭೆಯು ಪ್ರಮುಖ ಹೆಜ್ಜೆಯಾಗಿದೆ. ಈ ಶೃಂಗಸಭೆಯ ತಯಾರಿಯಲ್ಲಿ ನಮ್ಮ ದೇಶದ ಯುವ creator ಗಳು ಕೂಡಾ ಸಂಪೂರ್ಣ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ. ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಸಾಗುತ್ತಿರುವಾಗ, ನಮ್ಮ creator economy ಹೊಸ ಶಕ್ತಿಯನ್ನು ತುಂಬುತ್ತಿದೆ. ನೀವು ಯುವ creators ಆಗಿರಬಹುದು ಅಥವಾ ಪ್ರಸಿದ್ಧ ಕಲಾವಿದರಾಗಿರಬಹುದು, ಬಾಲಿವುಡ್ ಅಥವಾ ಪ್ರಾದೇಶಿಕ ಸಿನಿಮಾ ಕ್ಷೇತ್ರದವರಾಗಿರಬಹುದು, ಟಿವಿ ಉದ್ಯಮದಲ್ಲಿ ವೃತ್ತಿಪರರು ಅಥವಾ ಅನಿಮೇಷನ್, ಗೇಮಿಂಗ್ ಅಥವಾ ಮನರಂಜನಾ ತಂತ್ರಜ್ಞಾನದಲ್ಲಿ ಪರಿಣಿತರಾಗಿರಬಹುದು , ನೀವೆಲ್ಲರೂ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ಎಂದು ನಾನು ಭಾರತದ ಸಂಪೂರ್ಣ ಮನರಂಜನೆ ಮತ್ತು ಸೃಜನಶೀಲ ಉದ್ಯಮವನ್ನು ಆಗ್ರಹಿಸುತ್ತೇನೆ .
ನನ್ನ ಪ್ರಿಯ ದೇಶವಾಸಿಗಳೇ, ಭಾರತೀಯ ಸಂಸ್ಕೃತಿಯ ಪ್ರಕಾಶ ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿ ಹೇಗೆ ಹರಡುತ್ತಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಜಾಗತಿಕ ವಿಸ್ತರಣೆಗೆ ಸಾಕ್ಷಿಯಾಗಿರುವ ಮೂರು ಖಂಡಗಳಿಂದ ಅಂತಹ ಪ್ರಯತ್ನಗಳ ಬಗ್ಗೆ ಇಂದು ನಾನು ನಿಮಗೆ ಹೇಳಬಯಸುತ್ತೇನೆ. ಇವೆಲ್ಲವೂ ಒಂದಕ್ಕೊಂದು ಮೈಲುಗಟ್ಟಲೆ ದೂರದಲ್ಲಿದ್ದರೂ ಭಾರತದ ಬಗ್ಗೆ ತಿಳಿದುಕೊಳ್ಳುವ ಮತ್ತು ನಮ್ಮ ಸಂಸ್ಕೃತಿಯಿಂದ ಕಲಿಯುವ ಅವರ ಬಯಕೆ ಒಂದೇ ರೀತಿಯದ್ದಾಗಿದೆ.
ಸ್ನೇಹಿತರೇ, ವರ್ಣಚಿತ್ರಗಳ ಪ್ರಪಂಚ ಎಷ್ಟು ಬಣ್ಣಗಳಿಂದ ತುಂಬಿರುತ್ತದೆಯೋ ಅಷ್ಟೇ ಸುಂದರವಾಗಿರುತ್ತದೆ. ಟಿವಿ ಮೂಲಕ ‘ಮನದ ಮಾತು’ ವೀಕ್ಷಿಸುತ್ತಿರುವ ಸ್ನೇಹಿತರು ಈಗ ಟಿವಿಯಲ್ಲಿ ಕೆಲವು ವರ್ಣಚಿತ್ರಗಳನ್ನು ವೀಕ್ಷಿಸಬಹುದು. ಈ ವರ್ಣಚಿತ್ರಗಳಲ್ಲಿ ನಮ್ಮ ದೇವ ದೇವತೆಗಳು, ನೃತ್ಯ ಕಲೆಗಳು ಮತ್ತು ಶ್ರೇಷ್ಠ ವ್ಯಕ್ತಿಗಳನ್ನು ನೋಡಿ ನಿಮಗೆ ತುಂಬಾ ಸಂತೋಷವಾಗಬಹುದು. ಇವುಗಳಲ್ಲಿ ನೀವು ಭಾರತದಲ್ಲಿ ಕಂಡುಬರುವ ಪ್ರಾಣಿ ಪಕ್ಷಿಗಳಲ್ಲದೆ ಇನ್ನು ಬಹಳಷ್ಟು ವಿಷಯಗಳನ್ನು ನೋಡಬಹುದು. ಇವುಗಳಲ್ಲಿ ತಾಜ್ ಮಹಲ್‌ನ ಭವ್ಯವಾದ ವರ್ಣಚಿತ್ರವೂ ಸೇರಿದೆ, ಇದನ್ನು 13 ವರ್ಷದ ಬಾಲಕಿ ರಚಿಸಿದ್ದಾಳೆ. ಈ ಅಂಗವಿಕಲ ಬಾಲಕಿ ತನ್ನ ಬಾಯಿಯಿಂದಲೇ ಈ ಪ್ಯಾಟಿಂಗ್ ಅನ್ನು ಸಿದ್ಧಪಡಿಸಿದ್ದಾಳೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರಗಳನ್ನು ನಿರ್ಮಿಸಿದವರು ಭಾರತದವರಲ್ಲ ಹೊರತು ಈಜಿಪ್ಟ್‌ನ ವಿದ್ಯಾರ್ಥಿಗಳು. ಕೆಲವೇ ವಾರಗಳ ಹಿಂದೆ ಈಜಿಪ್ಟ್ ನ ಸುಮಾರು 23 ಸಾವಿರ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಭಾರತದ ಸಂಸ್ಕೃತಿ ಮತ್ತು ಉಭಯ ದೇಶಗಳ ಐತಿಹಾಸಿಕ ಸಂಬಂಧಗಳನ್ನು ಬಿಂಬಿಸುವ ಚಿತ್ರಗಳನ್ನು ಬರೆಯಬೇಕಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವಕರನ್ನು ನಾನು ಅಭಿನಂದಿಸುತ್ತೇನೆ. ಅವರ ಸೃಜನಶೀಲತೆ ಬಗ್ಗೆ ಎಷ್ಟು ಹೊಗಳಿದರೂ ಸಾಲದು.
ಸ್ನೇಹಿತರೇ, ಪರಾಗ್ವೆ, ದಕ್ಷಿಣ ಅಮೆರಿಕಾದಲ್ಲಿರುವ ಒಂದು ದೇಶ. ಅಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಸಾವಿರದಷ್ಟಿರಬಹುದು. ಪರಾಗ್ವೆಯಲ್ಲಿ ಒಂದು ಅದ್ಭುತ ಪ್ರಯತ್ನ ಮಾಡಲಾಗುತ್ತಿದೆ. ಎರಿಕಾ ಹ್ಯೂಬರ್, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಉಚಿತವಾಗಿ ಆಯುರ್ವೇದ ಸಮಾಲೋಚನೆ ಕೈಗೊಳ್ಳುತ್ತಿದ್ದಾರೆ. ಆಯುರ್ವೇದ ಸಲಹೆ ಪಡೆಯಲು ಅವರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಆಗಮಿಸುತ್ತಿದ್ದಾರೆ. ಎರಿಕಾ ಹ್ಯೂಬರ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರೂ, ಅವರಿಗೆ ಆಯುರ್ವೇದದತ್ತ ಹೆಚ್ಚು ಒಲವು. ಆಯುರ್ವೇದಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಿದ್ದ ಅವರು ಕಾಲಕ್ರಮೇಣ ಅದರಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ.
ಸ್ನೇಹಿತರೇ, ಪ್ರಪಂಚದ ಅತ್ಯಂತ ಪುರಾತನ ಭಾಷೆ ತಮಿಳು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ವಿಷಯವಾಗಿದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಇದನ್ನು ಕಲಿಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕಳೆದ ತಿಂಗಳ ಕೊನೆಯಲ್ಲಿ, ಫಿಜಿಯಲ್ಲಿ ಭಾರತ ಸರ್ಕಾರದ ಸಹಾಯದಿಂದ ತಮಿಳು ಬೋಧನಾ ಕಾರ್ಯಕ್ರಮ ಪ್ರಾರಂಭವಾಯಿತು. ಕಳೆದ 80 ವರ್ಷಗಳಲ್ಲಿ ತಮಿಳು ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕರು ಫಿಜಿಯಲ್ಲಿ ಈ ಭಾಷೆಯನ್ನು ಕಲಿಸುತ್ತಿರುವುದು ಪ್ರಥಮ ಬಾರಿಯಾಗಿದೆ. ಇಂದು ಫಿಜಿಯನ್ ವಿದ್ಯಾರ್ಥಿಗಳು ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಯಲು ಉತ್ಸುಕರಾಗಿರುವುದ್ದನ್ನು ಅರಿತು ನನಗೆ ಸಂತೋಷವಾಯಿತು.
ಸ್ನೇಹಿತರೇ, ಈ ವಿಷಯಗಳು, ಈ ಘಟನೆಗಳು ಕೇವಲ ಯಶಸ್ಸಿನ ಕಥೆಗಳು ಮಾತ್ರವಲ್ಲ, ನಮ್ಮ ಸಾಂಸ್ಕೃತಿಕ ಪರಂಪರೆಯ ಗಾಥೆಗಳೂ ಆಗಿವೆ . ಈ ಉದಾಹರಣೆಗಳು ನಾವು ಹೆಮ್ಮೆ ಪಡುವಂತೆ ಮಾಡುತ್ತವೆ. ಕಲೆಯಿಂದ ಆಯುರ್ವೇದದವರೆಗೆ ಮತ್ತು ಭಾಷೆಯಿಂದ ಸಂಗೀತದವರೆಗೆ, ಭಾರತದಲ್ಲಿಯಾ ಅದೆಷ್ಟೋ ವಿಷಯಗಳು ವಿಶ್ವಾದ್ಯಂತ ಪ್ರಭಾವ ಬೀರುತ್ತಿವೆ. ಸ್ನೇಹಿತರೇ, ಚಳಿಗಾಲದ ಈ ಋತುವಿನಲ್ಲಿ ದೇಶಾದ್ಯಂತ ಕ್ರೀಡೆ ಮತ್ತು ಸದೃಢತೆ ಕುರಿತಂತೆ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಜನರು ಫಿಟ್ನೆಸ್ ಅನ್ನು ತಮ್ಮ ದಿನಚರಿಯ ಭಾಗವನ್ನಾಗಿಸಿಕೊಂಡಿರುವುದು ನನಗೆ ಸಂತಸ ತಂದಿದೆ. ಕಾಶ್ಮೀರದಲ್ಲಿ ಸ್ಕೀಯಿಂಗ್ ನಿಂದ ಹಿಡಿದು ಗುಜರಾತ್ ನಲ್ಲಿ ಗಾಳಿಪಟ ಸ್ಪರ್ಧೆಯವರೆಗೂ ಪ್ರತಿಯೊಂದು ವಿಧದ ಕ್ರೀಡೆಯಲ್ಲಿ ಉತ್ಸಾಹ ಕಂಡು ಬರುತ್ತಿದೆ. #SundayOnCycle ಮತ್ತು #CyclingTuesday ನಂತಹ ಅಭಿಯಾನಗಳಿಂದ ಸೈಕ್ಲಿಂಗ್ ಗೆ ಸಾಕಷ್ಟು ಪ್ರಚಾರ ದೊರೆಯುತ್ತಿದೆ.
ಸ್ನೇಹಿತರೇ, ನಾನು ಈಗ ನಿಮಗೆ ವಿಶೇಷವಾದ ವಿಷಯವೊಂದನ್ನು ಹೇಳಲು ಬಯಸುತ್ತೇನೆ. ಇದು ನಮ್ಮ ದೇಶದಲ್ಲಿ ಉಂಟಾಗುತ್ತಿರುವ ಬದಲಾವಣೆ ಮತ್ತು ಯುವಜನತೆಯ ಉತ್ಸಾಹದ ಸಂಕೇತವಾಗಿದೆ. ನಮ್ಮ ಬಸ್ತರ್ ನಲ್ಲಿ ಒಂದು ವಿಶಿಷ್ಠ ಒಲಿಂಪಿಕ್ ಆರಂಭವಾಗಿದೆ ಎಂಬುದು ನಿಮಗೆ ಗೊತ್ತೇ! ಹೌದು, ಮೊದಲ ಬಾರಿಗೆ ಬಸ್ತರ್ ನಲ್ಲಿ ನಡೆದಿರುವ ಒಲಿಂಪಿಕ್ ನಿಂದ ಅಲ್ಲಿ ಹೊಸ ಕ್ರಾಂತಿ ಉದಯವಾಗುತ್ತಿದೆ. ಬಸ್ತರ್ ಒಲಿಂಪಿಕ್ಸ್ ನ ಕನಸು ನನಸಾಗುತ್ತಿರುವುದು ನನಗಂತೂ ಬಹಳ ಸಂತಸದ ವಿಷಯವಾಗಿದೆ. ಒಂದು ಕಾಲದಲ್ಲಿ ಮಾವೋವಾದಿಗಳ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಈ ಪ್ರದೇಶದಲ್ಲಿ ಈಗ ಒಲಿಂಪಿಕ್ಸ್ ನಡೆದಿರುವುದು ನಿಮಗೆ ಕೂಡಾ ಸಂತಸವೆನಿಸುತ್ತದೆ. ಬಸ್ತರ್ ಒಲಿಂಪಿಕ್ಸ್ ನ ಅದೃಷ್ಟರೂಪಿ ಬೊಂಬೆ – ‘ಕಾಡೆಮ್ಮೆ’ ಮತ್ತು ‘ಗುಡ್ಡಗಾಡಿನಮೈನಾ’ ಆಗಿದೆ. ಇದರಲ್ಲಿ ಬಸ್ತರ್ ನ ಶ್ರೀಮಂತ ಸಂಸ್ಕೃತಿಯ ನೋಟ ಕಂಡುಬರುತ್ತದೆ. ಈ ಬಸ್ತರ್ ಕ್ರೀಡಾ ಮಹಾಕುಂಭದ ಘೋಷ ವಾಕ್ಯ ಇದಾಗಿದೆ–
‘ಕರಸಾಯತಾಬಸ್ತರ್ಬರಸಾಯೇತಾಬಸ್ತರ್’
ಅಂದರೆ‘ಆಡುತ್ತದೆಬಸ್ತರ್ – ಗೆಲ್ಲುತ್ತದೆಬಸ್ತರ್’ |
ಮೊದಲ ಬಾರಿಗೆ ಬಸ್ತರ್ ಒಲಿಂಪಿಕ್ ನಲ್ಲಿ 7 ಜಿಲ್ಲೆಗಳ ಒಂದು ಲಕ್ಷ 65 ಸಾವಿರ ಆಟಗಾರರು ಪಾಲ್ಗೊಂಡಿದ್ದಾರೆ. ಇದು ಕೇವಲ ಅಂಕಿ-ಅಂಶ ಮಾತ್ರವಲ್ಲ – ಇದು ನಮ್ಮ ಯುವಜನತೆಯ ಸಂಕಲ್ಪದ – ಬದ್ಧತೆಯ ಕಥೆಯಾಗಿದೆ. ಅಥ್ಲೆಟಿಕ್ಸ್, ಬಿಲ್ಲುಗಾರಿಕೆ, ಬ್ಯಾಡ್ಮಿಂಟನ್, ಫುಟ್ಬಾಲ್, ಹಾಕಿ, ವೈಟ್ ಲಿಫ್ಟಿಂಗ್, ಕರಾಟೆ, ಕಬಡ್ಡಿ, ಖೋ-ಖೋ, ಮತ್ತು ವಾಲೀಬಾಲ್ – ಹೀಗೆ ಪ್ರತಿಯೊಂದು ಆಟದಲ್ಲಿ ನಮ್ಮ ಯುವಜನತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಕಾರಿ ಕಶ್ಯಪ್ ಅವರ ಕತೆಯು ನನ್ನಲ್ಲಿ ಬಹಳ ಸ್ಫೂರ್ತಿ ತುಂಬುತ್ತದೆ. ಒಂದು ಸಣ್ಣ ಗ್ರಾಮದಿಂದ ಬಂದಿರುವ ಕಾರೀ ಅವರು ಬಿಲ್ಲುಗಾರಿಕೆಯಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಅವರು ಹೀಗೆ ಹೇಳುತ್ತಾರೆ – “ಬಸ್ತರ್ಒಲಿಂಪಿಕ್ನಮಗೆಕೇವಲಆಟದಮೈದಾನಮಾತ್ರವಲ್ಲದೇಜೀವನದಲ್ಲಿಮುಂದೆಸಾಗುವಅವಕಾಶವನ್ನೂನೀಡಿದೆ” ಸುಕ್ಮಾ ದ ಪಾಯಲ್ ಕವಾಸೀ ಅವರ ಮಾತುಗಳು ಕೂಡಾ ಬಹಳ ಸ್ಫೂರ್ತಿದಾಯಕವಾಗಿದೆ. Javelin ಎಸೆತದಲ್ಲಿ ಚಿನ್ನದ ಪದಕ ವಿಜೇತೆ ಪಾಯಲ್ ಹೀಗೆನ್ನುತ್ತಾರೆ – “ಶಿಸ್ತುಮತ್ತುಕಠಿಣಪರಿಶ್ರಮದಿಂದಯಾವುದೇಗುರಿಸಾಧನೆಅಸಂಭವವಲ್ಲ” ಸುಕ್ಮಾದ ದೋರನ್ ಪಾಲ್ ನ ಪುನೆಮ್ ಸನ್ನಾ ಅವರ ಕತೆಯಂತೂ ನವಭಾರತದ ಪ್ರೇರಣಾದಾಯಕ ಕತೆಯಾಗಿದೆ. ಒಂದೊಮ್ಮೆ ನಕ್ಸಲರ ಪ್ರಭಾವಕ್ಕೆ ಒಳಗಾಗಿದ್ದ ಪುನೇಮ್ ಅವರು ಇಂದು ಗಾಲಿಕುರ್ಚಿಯಲ್ಲಿ ಓಡಿ ಪದಕ ಗೆಲ್ಲುತ್ತಿದ್ದಾರೆ. ಅವರ ಧೈರ್ಯ ಮತ್ತು ಸಾಹಸ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಕೋಡ್ ಗಾಂವ್ ನ ಬಿಲ್ಲುಗಾರ್ತಿ ರಂಜು ಸೋರಿ ಅವರನ್ನು ಬಸ್ತರ್ ಯೂತ್ ಐಕಾನ್ ಎಂದು ಆಯ್ಕೆ ಮಾಡಲಾಯಿತು. ಬಸ್ತರ್ ಒಲಿಂಪಿಕ್ ದೂರ ದೂರದ ಪ್ರದೇಶಗಳ ಯುವಜನತೆಗೆ ರಾಷ್ಟ್ರೀಯ ವೇದಿಕೆ ತಲುಪುವ ಅವಕಾಶವನ್ನು ನೀಡುತ್ತಿದೆ ಎನ್ನುವುದು ಅವರು ಭಾವಿಸುತ್ತಾರೆ.
ಸ್ನೇಹಿತರೇ, ಒಲಿಂಪಿಕ್ ಕೇವಲ ಒಂದು ಕ್ರೀಡಾ ಆಯೋಜನೆ ಮಾತ್ರವಲ್ಲ. ಇದು ಅಭಿವೃದ್ಧಿ ಮತ್ತು ಕ್ರೀಡೆಯ ಸಂಗಮದ ವೇದಿಕೆಯಾಗಿದೆ. ಇಲ್ಲಿ ನಮ್ಮ ಯುವಜನತೆ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ ಮತ್ತು ಒಂದು ನವ ಭಾರತ ನಿರ್ಮಾಣ ಮಾಡುತ್ತಿದ್ದಾರೆ.
ನೀವಿರುವ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳಿಗೆ ಪ್ರೋತ್ಸಾಹಿಸಿ.
ಆಡುತ್ತದೆ ಭಾರತ – ಗೆಲ್ಲುತ್ತದೆ ಭಾರತದೊಂದಿಗೆ ನಿಮ್ಮ ಪ್ರದೇಶದ ಕ್ರೀಡಾ ಪ್ರತಿಭೆಗಳ ಗಾಥೆಗಳನ್ನು ಹಂಚಿಕೊಳ್ಳಿ.
ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಮುನ್ನಡೆಯುವ ಅವಕಾಶ ನೀಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ.
ನೆನಪಿಡಿ, ಕ್ರೀಡೆಗಳಿಂದ ಕೇವಲ ದೈಹಿಕ ಬೆಳವಣಿಗೆ ಮಾತ್ರವಲ್ಲದೇ, ಇದು ಕ್ರೀಡಾಕಾರ ಮನೋಭಾವದೊಂದಿಗೆ ಸಮಾಜವನ್ನು ಜೋಡಿಸುವ ಒಂದು ಪ್ರಬಲ ಮಾಧ್ಯಮವೂ ಆಗಿದೆ. ಚೆನ್ನಾಗಿ ಆಟವಾಗಿ – ಚೆನ್ನಾಗಿ ಆಟವಾಡಿ.
ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಎರಡು ದೊಡ್ಡ ಸಾಧನೆಗಳು ಇಂದು ವಿಶ್ವದ ಗಮನವನ್ನು ಸೆಳೆಯುತ್ತಿವೆ. ಇದನ್ನು ಕೇಳಿದರೆ ನೀವು ಕೂಡಾ ಹೆಮ್ಮೆ ಪಡುತ್ತೀರಿ - ಈ ಎರಡೂ ಯಶಸ್ಸುಗಳು ಸಾಧನೆಯಾಗಿರುವುದು ಆರೋಗ್ಯ ಕ್ಷೇತ್ರದಲ್ಲಿ. ಮೊದಲ ಯಶಸ್ತು ದೊರೆತಿರುವುದು ಮಲೇರಿಯಾ ವಿರುದ್ಧದ ಹೋರಾಟದಲ್ಲಿ. ಮಲೇರಿಯಾ ರೋಗವು ನಾಲ್ಕು ಸಾವಿರ ವರ್ಷಗಳಿಂದ ಮಾನವಕುಲಕ್ಕೆ ಒಂದು ದೊಡ್ಡ ಸವಾಲಾಗಿದೆ. ಸ್ವಾತಂತ್ರ್ಯದ ಸಮಯದಲ್ಲಿ ಕೂಡಾ ಇದು ನಮ್ಮ ಆರೋಗ್ಯ ಸಂಬಂಧಿತ ಸವಾಲುಗಳ ಪೈಕಿ ಒಂದೆನಿಸಿತ್ತು. ಒಂದು ತಿಂಗಳ ಶಿಶುವಿನಿಂದ ಹಿಡಿದು ಐದು ವರ್ಷ ವಯಸ್ಸಿನ ಮಕ್ಕಳ ಪ್ರಾಣ ಹರಣ ಮಾಡುವ ಎಲ್ಲಾ ಸಾಂಕ್ರಾಮಿಕ ರೋಗಗಳ ಪೈಕಿ ಮಲೇರಿಯಾ ರೋಗಕ್ಕೆ ಮೂರನೇ ಸ್ಥಾನ. ಇಂದು, ದೇಶವಾಸಿಗಳೆಲ್ಲಾ ಒಗ್ಗಟ್ಟಾಗಿ ಈ ಸವಾಲನ್ನು ಎದುರಿಸಿದ್ದಾರೆಂದು ನಾನು ಸಂತೋಷದಿಂದ ಹೇಳಬಲ್ಲೆ. ವಿಶ್ವ ಆರೋಗ್ಯ ಸಂಘಟನೆ -WHO ವರದಿ ಹೀಗೆನ್ನುತ್ತದೆ “ಭಾರತದಲ್ಲಿ 2015 ರಿಂದ 2023 ರ ಮಧ್ಯೆ ಮಲೇರಿಯಾ ರೋಗ ಮತ್ತು ಅದರಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 80 ರಷ್ಟು ಕಡಿಮೆಯಾಗಿದೆ” ಇದು ಒಂದು ಸಣ್ಣ ಸಾಧನೆಯಲ್ಲ. ಅತ್ಯಂತ ಸಂತಸದ ವಿಷಯವೆಂದರೆ, ಈ ಯಶಸ್ಸು ಜನರ ಭಾಗೀದಾರಿಯಿಂದ ದೊರೆತಿದೆ. ಭಾರತ ಮೂಲೆ ಮೂಲೆಯಿಂದ, ಪ್ರತಿ ಜಿಲ್ಲೆಯಿಂದ, ಪ್ರತಿಯೊಬ್ಬರೂ ಆ ಅಭಿಯಾನದ ಭಾಗವಾಗಿದ್ದಾರೆ. ಅಸ್ಸಾಂನಲ್ಲಿ ಜೋರ್ ಹಾಟ್ ನ ಚಹಾ ತೋಟಗಳಲ್ಲಿ ನಾಲ್ಕು ವರ್ಷಗಳ ಹಿಂದಿನವರೆಗೂ ಮಲೇರಿಯಾ ರೋಗ ಜನರ ಚಿಂತೆಯ ಬಹು ದೊಡ್ಡ ಕಾರಣವಾಗಿತ್ತು. ಆದರೆ ಅದನ್ನು ನಿರ್ಮೂಲಸಲು ಚಹಾ ತೋಟದಲ್ಲಿ ವಾಸಿಸುವ ಜನರು ಒಗ್ಗಟ್ಟಿನಿಂದ ಮುಂದೆ ಬಂದಾಗ, ಇದರಲ್ಲಿ ಸಾಕಷ್ಟು ಯಶಸ್ಸು ದೊರೆಯಲಾರಂಭಿಸಿತು. ಅವರು ತಮ್ಮ ಈ ಪ್ರಯತ್ನದಲ್ಲಿ ತಂತ್ರಜ್ಞಾನದ ಜೊತೆಗೆ ಸಾಮಾಜಿಕ ಮಾಧ್ಯಮವನ್ನು ಬಹಳಷ್ಟು ಉಪಯೋಗಿಸಿದ್ದಾರೆ. ಇದೇ ರೀತಿ ಹರಿಯಾಣಾದ ಕುರುಕ್ಷೇತ್ರ ಜಿಲ್ಲೆಯು ಮಲೇರಿಯಾ ರೋಗದ ನಿಯಂತ್ರಣಕ್ಕಾಗಿ ಉತ್ತಮ ಮಾದರಿಯನ್ನು ಪ್ರಸ್ತುತಪಡಿಸಿದೆ. ಇಲ್ಲಿ ಮಲೇರಿಯಾ ರೋಗದ ಮೇಲೆ ನಿಗಾ ಇರಿಸುವುದಕ್ಕೆ ಜನರ ಸಹಭಾಗಿತ್ವ ಸಾಕಷ್ಟು ಯಶಸ್ವಿಯಾಗಿದೆ. ಬೀದಿ ನಾಟಕಗಳು ಮತ್ತು ರೇಡಿಯೋ ಮೂಲಕ ಇಂತಹ ಸಂದೇಶಗಳಿಗೆ ಒತ್ತು ನೀಡಲಾಯಿತು. ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆ ಮಾಡುವಲ್ಲಿ ಇವು ಸಾಕಷ್ಟು ಸಹಾಯಕವಾಯಿತು. ದೇಶಾದ್ಯಂತ ಇಂತಹ ಪ್ರಯತ್ನಗಳಿಂದಲೇ ನಾವು ಮಲೇರಿಯಾ ವಿರುದ್ಧದ ಹೋರಾಟವನ್ನು ಮತ್ತಷ್ಟು ವೇಗವಾಗಿ ಮುನ್ನಡೆಸಲು ಸಾಧ್ಯವಾಯಿತು.
ಸ್ನೇಹಿತರೇ, ನಾವು ನಮ್ಮ ತಿಳುವಳಿಕೆ ಮತ್ತು ಸಂಕಲ್ಪ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಅದು ಕ್ಯಾನ್ಸರ್ ವಿರುದ್ಧದ ಹೋರಾಟ. ವಿಶ್ವದ ಪ್ರಸಿದ್ಧ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ನ ಅಧ್ಯಯನ ನಿಜಕ್ಕೂ ಬಹಳ ಭರವಸೆದಾಯಕವಾಗಿದೆ. ಈ ಪತ್ರಿಕೆಯ ಅನುಸಾರ ಈಗ ಭಾರತದಲ್ಲಿ ಸಕಾಲದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಆರಂಭಿಸುವ ಸಾಧ್ಯತೆ ಬಹಳಷ್ಟು ಹೆಚ್ಚಾಗಿದೆ. ಸಕಾಲದಲ್ಲಿ ಚಿಕಿತ್ಸೆ ಎಂದರೆ– ಕ್ಯಾನ್ಸರ್ ರೋಗಿಯ ಚಿಕಿತ್ಸೆ 30 ದಿನಗಳೊಳಗಾಗಿ ಆರಂಭವಾಗುವುದು ಎಂದರ್ಥ ಹಾಗೂ ಇದರಲ್ಲಿ ‘ಆಯುಷ್ಮಾನ್ ಭಾರತ್ ಯೋಜನೆ‘ ಬಹು ದೊಡ್ಡ ಪಾತ್ರ ನಿರ್ವಹಿಸಿದೆ. ಈ ಯೋಜನೆಯಿಂದಾಗಿ ಶೇಕಡಾ 90 ರಷ್ಟು ಕ್ಯಾನ್ಸರ್ ರೋಗಿಗಳು ಸಕಾಲದಲ್ಲಿ ತಮ್ಮ ಚಿಕಿತ್ಸೆ ಆರಂಭಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಈ ಮೊದಲು ಹಣದ ಕೊರತೆಯಿಂದಾಗಿ ಬಡ ರೋಗಿಗಳು ಕ್ಯಾನ್ಸರ್ ರೋಗಕ್ಕಾಗಿ ತಪಾಸಣೆ ಮತ್ತು ಅದರ ಚಿಕಿತ್ಸೆಗೆ ಹಿಂಜರಿಯುತ್ತಿದ್ದರು. ಈಗ ‘ಆಯುಷ್ಮಾನ್ ಭಾರತ್ ಯೋಜನೆ’ ಅವರಿಗೆ ಬಹು ದೊಡ್ಡ ಆಸರೆಯಾಗಿದೆ. ಈಗ ಅವರು ತಮ್ಮ ರೋಗಕ್ಕೆ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯು ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಉಂಟಾಗುವ ಖರ್ಚಿನ ಆತಂಕವನ್ನು ಸಾಕಷ್ಟು ಕಡಿಮೆ ಮಾಡಿದೆ. ಇಂದು ಸಕಾಲದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಕುರಿತು ಜನರು ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕರಾಗಿದ್ದಾರೆ ಎನ್ನುವುದು ಉತ್ತಮ ವಿಚಾರವಾಗಿದೆ. ಈ ಸಾಧನೆಯು ನಮ್ಮ ಆರೋಗ್ಯರಕ್ಷಣೆ ವ್ಯವಸ್ಥೆಯಷ್ಟೇ, ನಮ್ಮ ವೈದ್ಯರು, ದಾದಿಯರು ಮತ್ತು ತಾಂತ್ರಿಕ ಸಿಬ್ಬಂದಿಯದ್ದೂ ಆಗಿದೆ, ಅಷ್ಟೇ ಅಲ್ಲ ನಿಮ್ಮೆಲ್ಲರದ್ದೂ, ನನ್ನ ನಾಗರಿಕ ಸೋದರ ಸೋದರಿಯರದ್ದೂ ಆಗಿದೆ. ಎಲ್ಲರ ಪ್ರಯತ್ನದಿಂದ ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸುವ ಸಂಕಲ್ಪ ಮತ್ತಷ್ಟು ಬಲವಾಗಿದೆ. ಅರಿವು ಮೂಡಿಸಲು ಪ್ರಮುಖ ಕೊಡುಗೆ ನೀಡಿದ ಎಲ್ಲರಿಗೂ ಆ ಯಶಸ್ಸಿನ ಶ್ರೇಯ ಸಲ್ಲುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡಲು ಒಂದೇ ಒಂದು ಮಂತ್ರವಿದೆ – ಅದೆಂದರೆ ಅರಿವು, ಕ್ರಮ ಮತ್ತು ಭರವಸೆ – ಅವೇರ್ನೆಸ್, ಆಕ್ಷನ್ ಮತ್ತು ಅಶ್ಯೂರೆನ್ಸ್. ಅವೇರ್ನೆಸ್ ಎಂದರೆ ಕ್ಯಾನ್ಸರ್ ಮತ್ತು ಅದರ ಲಕ್ಷಣಗಳ ಕುರಿತ ಅರಿವು, ಆಕ್ಷನ್ ಎಂದರೆ ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ಅಶ್ಯೂರೆನ್ಸ್ ಎಂದರೆ ರೋಗಿಗೆ ಪ್ರತಿಯೊಂದು ಸಹಾಯವೂ ಲಭ್ಯವಿದೆ ಎನ್ನುವ ಭರವಸೆ. ಬನ್ನಿ, ನಾವೆಲ್ಲರೂ ಒಗ್ಗಟ್ಟಾಗಿ ಕ್ಯಾನ್ಸರ್ ವಿರುದ್ಧದ ಈ ಹೋರಾಟವನ್ನು ವೇಗದಿಂದ ಮುನ್ನಡೋಸೋಣ ಮತ್ತು ಹೆಚ್ಚು ಹೆಚ್ಚು ರೋಗಿಗಳಿಗೆ ಸಹಾಯ ಮಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಇಂದು ನಿಮಗೆ ಒಡಿಶಾದ ಕಾಲಾಹಾಂಡಿಯಲ್ಲಿ ಅತ್ಯಂತ ಕಡಿಮೆ ನೀರು ಮತ್ತು ಕಡಿಮೆ ಸಂಪನ್ಮೂಲಗಳಿದ್ದರೂ ಕೂಡಾ ಅವಿರತ ಪ್ರಯತ್ನದಿಂದ ಸಾಧಿಸಿರುವ ಯಶಸ್ಸಿನ ಕತೆಯೊಂದನ್ನು ನಿಮಗೆ ಹೇಳಲು ಬಯಸುತ್ತೇನೆ. ಇದು ಕಾಲಾಹಾಂಡಿಯ ತರಕಾರಿ ಕ್ರಾಂತಿ. ಒಂದು ಕಾಲದಲ್ಲಿ ರೈತರು ಜಾಗ ತೊರೆದು ಬೇರೆಡೆಗೆ ಹೋಗಬೇಕಾಗಿತ್ತೋ ಅದೇ ಜಾಗ ಇಂದು, ಕಾಲಾಹಾಂಡಿಯ ಗೋಲಾ ಮುಂಡಾ ಬ್ಲಾಕ್ ನ ಒಂದು ತರಕಾರಿ ಹಬ್ ಆಗಿ ಪರಿವರ್ತನೆಯಾಗಿದೆ. ಈ ಪರಿವರ್ತನೆಯಾದದ್ದು ಹೇಗೆ? ಇದು ಕೇವಲ 10 ಮಂದಿ ರೈತರ ಒಂದು ಸಣ್ಣ ಗುಂಪಿನಿಂದ ಆರಂಭವಾಯಿತು. ಈ ಗುಂಪು ಒಂದುಗೂಡಿ ಒಂದು FPO - ‘ರೈತ ಉತ್ಪನ್ನ ಸಂಘ’ ಸ್ಥಾಪಿಸಿತು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಶುರು ಮಾಡಿತು, ಮತ್ತು ಇಂದು ಅವರ ಈ FPO ಕೋಟಿಗಟ್ಟಲೆ ವಹಿವಾಟು ನಡೆಸುತ್ತಿದೆ. ಇಂದು 200 ಕ್ಕೂ ಅಧಿಕ ರೈತರು FPO ನೊಂದಿಗೆ ಜೋಡಣೆಯಾಗಿದ್ದಾರೆ, ಇದರಲ್ಲಿ 45 ಮಂದಿ ಮಹಿಳಾ ರೈತರೂ ಇದ್ದಾರೆ. ಇವರೆಲ್ಲರೂ ಸೇರಿ 200 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಕೃಷಿ ಮಾಡುತ್ತಿದ್ದಾರೆ, 150 ಎಕರೆ ಜಾಗದಲ್ಲಿ ಹಾಗಲಕಾಯಿ ಬೆಳೆಯುತ್ತಿದ್ದಾರೆ. ಈಗ ಈ FPO ದ ವಾರ್ಷಿಕ ವಹಿವಾಟು ಕೂಡಾ ಅಧಿಕವಾಗಿ, ಒಂದೂವರೆ ಕೋಟಿಗೆ ತಲುಪಿದೆ. ಇಂದು ಕಾಲಾಹಾಂಡಿಯ ತರಕಾರಿಗಳು ಕೇವಲ ಒಡಿಶಾದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ಬೇರೆ ರಾಜ್ಯಗಳಿಗೂ ತಲುಪುತ್ತಿವೆ, ಮತ್ತು ಅಲ್ಲಿನ ರೈತ ಈಗ ಆಲೂಗಡ್ಡೆ ಮತ್ತು ಈರುಳ್ಳಿಯ ಕೃಷಿಯ ಹೊಸ ತಂತ್ರಗಳನ್ನು ಕೂಡಾ ಕಲಿಯುತ್ತಿದ್ದಾನೆ.
ಸ್ನೇಹಿತರೇ, ಸಂಕಲ್ಪ ಶಕ್ತಿ ಮತ್ತು ಸಾಮೂಹಿಕ ಪ್ರಯತ್ನದಿಂದ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಕಾಲಾಹಾಂಡಿಯ ಈ ಯಶಸ್ಸು ನಮಗೆ ಕಲಿಸುತ್ತದೆ. ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುವುದೇನೆಂದರೆ :-
ನೀವಿರುವ ಪ್ರದೇಶದಲ್ಲಿ FPO ಅನ್ನು ಪ್ರೋತ್ಸಾಹಿಸಿ.
ರೈತ ಉತ್ಪನ್ನ ಸಂಘಗಳೊಂದಿಗೆ ಸೇರಿಕೊಳ್ಳಿ ಮತ್ತು ಅವುಗಳನ್ನು ಬಲಪಡಿಸಿ.
ನೆನಪಿಡಿ – ಸಣ್ಣ ಆರಂಭದಿಂದಲೇ ಭಾರೀ ಪರಿವರ್ತನೆಗಳು ಸಾಧ್ಯವಾಗುತ್ತವೆ. ಅದಕ್ಕಾಗಿ ನಮಗೆ ದೃಢ ಸಂಕಲ್ಪ ಮತ್ತು ಒಗ್ಗಟ್ಟಿನ ಭಾವನೆಯ ಅಗತ್ಯವಿರುತ್ತದೆ.
ಸ್ನೇಹಿತರೇ, ಇಂದು ‘ಮನದ ಮಾತಿನಲ್ಲಿ’ ನಮ್ಮ ಭಾರತ ವಿವಿಧತೆಯಲ್ಲಿ ಏಕತೆ ಎಂಬ ಭಾವನೆಯಿಂದ ಯಾವರೀತಿ ಮುಂದೆ ಸಾಗುತ್ತಿದೆ ಎಂಬುದನ್ನು ಆಲಿಸಿದೆವು. ಅದು ಆಟದ ಮೈದಾನವಿರಲಿ, ಅಥವಾ ವಿಜ್ಞಾನ ಕ್ಷೇತ್ರವೇ ಆಗಲಿ, ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರವೇ ಆಗಲಿ, ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ಉನ್ನತ ಶಿಖರಗಳನ್ನು ತಲುಪುತ್ತಿದೆ. ನಾವು ಒಂದು ಕುಟುಂಬದಂತೆ ಒಂದುಗೂಡಿ ಪ್ರತಿಯೊಂದು ಸವಾಲನ್ನೂ ಎದುರಿಸಿದ್ದೇವೆ ಮತ್ತು ಹೊಸ ಸಾಧನೆಗಳನ್ನು ನಮ್ಮದಾಗಿಸಿಕೊಂಡಿದ್ದೇವೆ. 2014 ರಲ್ಲಿ ಆರಂಭವಾದ ‘ಮನದ ಮಾತಿನ’ 116 ಸಂಚಿಕೆಗಳಲ್ಲಿ ‘ಮನದ ಮಾತು’ ದೇಶದ ಸಾಮೂಹಿಕ ಶಕ್ತಿಯು ಜೀವಂತ ದಾಖಲೆಯಾಗಿರುವುದನ್ನು ನಾನು ನೋಡಿದ್ದೇನೆ. ತಾವೆಲ್ಲರೂ ಈ ಕಾರ್ಯಕ್ರಮವನ್ನು ತಮ್ಮದಾಗಿಸಿಕೊಂಡಿರುವಿರಿ. ಪ್ರತಿ ತಿಂಗಳೂ ನಿಮ್ಮ ನಿಮ್ಮ ಚಿಂತನೆಗಳು ಮತ್ತು ಪ್ರಯತ್ನಗಳನ್ನು ಹಂಚಿಕೊಳ್ಳುತ್ತಿದ್ದೀರಿ. ಕೆಲವೊಮ್ಮೆ ಯುವ ಆವಿಷ್ಕಾರಕನ ಚಿಂತನೆಯಿಂದ ಪ್ರಭಾವಿತನಾದರೆ, ಮತ್ತೊಮ್ಮೆ ಹೆಣ್ಣು ಮಗಳೊಬ್ಬಳ ಸಾಧನೆ ನನಗೆ ಹೆಮ್ಮೆ ತಂದಿದೆ. ನಿಮ್ಮೆಲ್ಲರ ಸಹಭಾಗಿತ್ವವೇ ದೇಶದ ಮೂಲೆ ಮೂಲೆಯಿಂದ ಸಕಾರಾತ್ಮಕ ಶಕ್ತಿಯನ್ನು ಒಟ್ಟುಗೂಡಿಸುತ್ತದೆ. 'ಮನದ ಮಾತು' ಈ ಸಕಾರಾತ್ಮಕ ಶಕ್ತಿ ವರ್ಧನೆಯ ವೇದಿಕೆಯಾಗಿ ಮಾರ್ಪಟ್ಟಿದೆ ಮತ್ತು ಈಗ, 2025 ಬಾಗಿಲು ತಟ್ಟುತ್ತಿದೆ. ಮುಂಬರುವ ವರ್ಷದಲ್ಲಿ ‘ಮನದ ಮಾತಿನ’ ಮೂಲಕ ನಾವೆಲ್ಲರೂ ಮತ್ತಷ್ಟು ಪ್ರೇರಣಾದಾಯಕ ಪ್ರಯತ್ನಗಳನ್ನು ಹಂಚಿಕೊಳ್ಳೋಣ. ದೇಶವಾಸಿಗಳ ಸಕಾರಾತ್ಮಕ ಚಿಂತನೆ ಮತ್ತು ಆವಿಷ್ಕಾರದ ಭಾವನೆಯಿಂದ ಭಾರತ ಹೊಸ ಶಿಖರಗಳನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ. ನೀವೆಲ್ಲರೂ ನಿಮ್ಮ ಸುತ್ತಮುತ್ತಲಿನ ವಿಶಿಷ್ಠ ಪ್ರಯತ್ನಗಳ ಬಗ್ಗೆ #Mannkibaat ನಲ್ಲಿ ಹಂಚಿಕೊಳ್ಳುತ್ತಿರಿ. ಮುಂದಿನ ವರ್ಷದ ಪ್ರತಿಯೊಂದು ಮನದ ಮಾತಿನಲ್ಲಿ ನಮ್ಮಲ್ಲಿ ಪರಸ್ಪರ ಹಂಚಿಕೊಳ್ಳಲು ಬಹಳಷ್ಟು ವಿಷಯಗಳಿರುತ್ತವೆ ಎಂದು ನನಗೆ ಗೊತ್ತು. ನಿಮ್ಮೆಲ್ಲರಿಗೂ 2025 ನೂತನ ವರ್ಷಕ್ಕಾಗಿ ಅನೇಕಾನೇಕ ಶುಭಾಕಾಂಕ್ಷೆಗಳು. ಆರೋಗ್ಯದಿಂದಿರಿ, ಸಂತೋಷದಿಂದಿರಿ. Fit India Movement ನೊಂದಿಗೆ ನೀವೆಲ್ಲರೂ ಸೇರಿಕೊಳ್ಳಿ, ನೀವೆಲ್ಲರೂ ಸದೃಢರಾಗಿರಿ. ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಿರಿ. ಅನೇಕಾನೇಕ ಧನ್ಯವಾದ.
Kids' favourite KTB - Krish, Trish and Baltiboy is back with Season 2. It celebrates the unsung heroes of India's freedom struggle.#MannKiBaatpic.twitter.com/LaJNd0Zmqf