ಭಾರತದ ಸಾಮಾಜಿಕ ಜೀವನದಲ್ಲಿ ಶಿಸ್ತಿನ ಭಾವನೆಯನ್ನು ಮೂಡಿಸುವಲ್ಲಿ ಎನ್ ಸಿಸಿಯಿಂದ ಪ್ರಮುಖ ಪಾತ್ರ: ಪ್ರಧಾನಮಂತ್ರಿ
ಭಾರತ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯಷ್ಟೇ ಅಲ್ಲದೆ ಪ್ರಮುಖ ಉತ್ಪಾದನಾ ತಾಣವಾಗಿ ರೂಪುಗೊಳ್ಳುತ್ತಿದೆ: ಪ್ರಧಾನಮಂತ್ರಿ
ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ನಿಗಾವಹಿಸಲು ಸೇನೆ, ವಾಯುಪಡೆ ಮತ್ತು ನೌಕಾಪಡೆಯಿಂದ ಒಂದು ಲಕ್ಷ ಕೆಡೆಟ್ ಗಳಿಗೆ ತರಬೇತಿ, ಆ ಪೈಕಿ ಮೂರನೇ ಒಂದರಷ್ಟು ಬಾಲಕಿಯರು

ದೇಶದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್, ಸೇನೆ, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರೇ, ರಕ್ಷಣಾ ಕಾರ್ಯದರ್ಶಿಗಳೇ, ಎನ್ ಸಿಸಿ ಮಹಾ ನಿರ್ದೇಶಕರೇ ಮತ್ತು ರಾಷ್ಟ್ರಭಕ್ತಿಯ ಶಕ್ತಿಯನ್ನು ತುಂಬುವ ದೇಶದ ಎಲ್ಲ ಭಾಗಗಳಿಂದ ಬಂದಿರುವ ಎನ್ ಸಿಸಿ ಕೆಡೆಟ್ ಗಳೇ. ನಿಮ್ಮಂತಹ ಯುವ ಸಹೋದ್ಯೋಗಿಗಳೊಂದಿಗೆ ಕಾಲ ಕಳೆಯುವ ಅವಕಾಶ ನನಗೆ ದೊರಕಿರುವುದು ವಿಶಿಷ್ಟ ಅನುಭವ ನೀಡುತ್ತಿದೆ. ಕೇವಲ ನನಗೆ ಮಾತ್ರವಲ್ಲ ಟಿವಿಯಲ್ಲಿ ನೋಡುತ್ತಿರುವವರೂ ಕೂಡ ಈ ಪಥಸಂಚಲನ ನೋಡಿ, ಕೆಲವು ಕೆಡೆಟ್ ಗಳ ಪ್ಯಾರಾ ಸೈಲಿಂಗ್ ಕೌಶಲ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ನೋಡಿ ಹೆಮ್ಮೆಪಡುತ್ತಿದ್ದಾರೆ. ದೇಶದ ನಾನಾ ಭಾಗಗಳಿಂದ ಬಂದಿರುವ ನೀವು ಜನವರಿ 26ರಂದು ನಡೆದ ಪಥಸಂಚಲನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇಡೀ ವಿಶ್ವ ನಿಮ್ಮ ಪ್ರದರ್ಶನವನ್ನು ನೋಡಿದೆ. ನಾವು ವಿಶ್ವದ ಹಲವು ರಾಷ್ಟ್ರಗಳನ್ನು ನೋಡಿದ್ದೇವೆ, ಎಲ್ಲೆಲ್ಲಿ ಸಾಮಾಜಿಕ ಜೀವನದಲ್ಲಿ ಶಿಸ್ತು ಇರತ್ತದೆಯೋ ಅಂತಹ ಕಡೆಗಳಲ್ಲೆಲ್ಲಾ ಎಲ್ಲಾ ವಲಯಗಳಲ್ಲೂ ಹೆಜ್ಜೆ ಗುರುತುಗಳನ್ನು ಮೂಡಿಸಿವೆ ಮತ್ತು ಎನ್ ಸಿಸಿ ಭಾರತದಲ್ಲಿ ಸಾಮಾಜಿಕ ಜೀವನದಲ್ಲಿ ಶಿಸ್ತು ಮೂಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದೆ. ಇಂತಹ ಕತೆಗಳು ನಿಮ್ಮ ಜೀವನದುದ್ದಕ್ಕೂ ಇರಬೇಕು. ನೀವು ಎನ್ ಸಿಸಿಯೊಂದಿಗಿನ ಸಂಬಂಧ ಕಡಿದುಕೊಂಡ ನಂತರವೂ ಇದೇ ಶಿಸ್ತಿನ ಸ್ಫೂರ್ತಿ ನಿಮ್ಮಲ್ಲಿ ಮುಂದುವರಿಯಬೇಕು. ಅಷ್ಟೇ ಅಲ್ಲ ನಿಮ್ಮ ಸುತ್ತಲಿನ ಜನರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಿದರೆ ಭಾರತದ ಸಮಾಜ ಸದೃಢವಾಗುತ್ತದೆ ಮತ್ತು ದೇಶವೂ ಸದೃಢವಾಗುತ್ತದೆ.

ಮಿತ್ರರೇ,

ವಿಶ್ವದ ಅತಿ ದೊಡ್ಡ ಯುವ ಸಂಘಟನೆಯಾಗಿರುವ ಎನ್ ಸಿಸಿಯ ವರ್ಚಸ್ಸು ದಿನೇ ದಿನೇ ಬಲಗೊಳ್ಳುತ್ತಿದೆ. ನಿಮ್ಮ ಪ್ರಯತ್ನಗಳನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗುತ್ತದೆ ಮತ್ತು ನನ್ನಲ್ಲಿನ ವಿಶ್ವಾಸ ಬಲವರ್ಧನೆಗೊಳ್ಳುತ್ತದೆ. ಎನ್ ಸಿಸಿ ಕೆಡೆಟ್ ಗಳನ್ನು ಭಾರತೀಯ ಶೌರ್ಯ ಮತ್ತು ಸೇವೆಯ ಪರಂಪರೆಯ ಬೆಳವಣಿಗೆಯ ಹಿಂದೆ ಕಾಣಬಹುದು. ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಎನ್ ಸಿಸಿ ಕೆಡೆಟ್ ಗಳು ಕೈಗೊಂಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ಅಥವಾ ಜಲಸಂರಕ್ಷಣೆ ಅಥವಾ ನೈರ್ಮಲೀಕರಣಕ್ಕೆ ಸಂಬಂಧಿಸಿದ ಯಾವುದೇ ಅಭಿಯಾನದಂತಹ ಉತ್ತಮ ಕೆಲಸಗಳು ನಡೆಯುತ್ತಿರುವಾಗ ಖಂಡಿತ ನಾವು ಎನ್ ಸಿಸಿ ಕೆಡೆಟ್ ಗಳನ್ನು ನೋಡುತ್ತೇವೆ. ಕೋವಿಡ್ ನಂತಹ ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೀವು ಮಾಡಿರುವ ಅದ್ಭುತ ಕೆಲಸ ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಅಂತಹ ಕೆಲಸವನ್ನು ಅಪರೂಪದ್ದಾಗಿದೆ. ಪ್ರವಾಹಗಳೇ ಇರಲಿ ಅಥವಾ ನೈಸರ್ಗಿಕ ವಿಪತ್ತುಗಳಿರಲಿ ಎನ್ ಸಿಸಿ ಕೆಡೆಟ್ ಗಳು ಸಂಕಷ್ಟದಲ್ಲಿರುವ ದೇಶವಾಸಿಗಳಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದೀರಿ. ಆಡಳಿತದೊಂದಿಗೆ ಮಿಲಿಯನ್ ಗಟ್ಟಲೆ ಕೆಡೆಟ್ ಗಳು ಜೊತೆಯಾಗಿ ಕೆಲಸ ಮಾಡಿದ್ದಾರೆ ಮತ್ತು ಕೊರೊನಾ ಸಮಯದಲ್ಲಿ ಇಡೀ ಸಮಾಜಕ್ಕೆ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯ. ಸಂವಿಧಾನದಲ್ಲಿ ಖಾತ್ರಿಪಡಿಸಲಾಗಿರುವ ನಾಗರಿಕ ಕರ್ತವ್ಯಗಳನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಮತ್ತು ಅವುಗಳನ್ನು ನಮ್ಮಿಂದ ಅಪೇಕ್ಷಿಸಲಾಗುತ್ತಿದೆ.

ನಾಗರಿಕ ಸಮಾಜ ಮತ್ತು ಸ್ಥಳೀಯ ಪ್ರಜೆಗಳು ತಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಅತ್ಯಂತ ಕಠಿಣ ಸವಾಲುಗಳನ್ನು ನಾವು ಪರಿಹರಿಸಬಹುದು ಎಂಬುದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ನಿಮಗೆಲ್ಲಾ ಚೆನ್ನಾಗಿ ತಿಳಿದಿರುವಂತೆ ಒಂದು ಕಾಲದಲ್ಲಿ ನಕ್ಸಲಿಸಂ-ಮಾವೋಯಿಸಂ ದೇಶದ ಅತಿ ದೊಡ್ಡ ಸಮಸ್ಯೆಗಳಾಗಿದ್ದವು. ದೇಶದ ನೂರಾರು ಜಿಲ್ಲೆಗಳು ಅದರಿಂದ ಬಾಧಿತವಾಗಿದ್ದವು. ಆದರೆ ಸ್ಥಳೀಯ ಪ್ರಜೆಗಳ ಕರ್ತವ್ಯಗಳು ಮತ್ತು ನಮ್ಮ ಭದ್ರತಾ ಪಡೆಗಳ ಶೌರ್ಯ ಒಂದುಗೂಡಿದ್ದರಿಂದ ನಕ್ಸಲಿಸಂನ ಬೆನ್ನೆಲುಬು ಮುರಿಯಲಾರಂಭಿಸಿತು. ಇದೀಗ ನಕ್ಸಲಿಸಂ ದೇಶದ ಕೆಲವು ಜಿಲ್ಲೆಗಳಿಗೆ ಸೀಮಿತಗೊಂಡಿದೆ. ಅಷ್ಟೇ ಅಲ್ಲ ದೇಶದಲ್ಲಿ ನಕ್ಸಲ್ ಹಿಂಸಾಚಾರ ಗಣನೀಯವಾಗಿ ತಗ್ಗಿದೆ. ಹಲವು ಯುವಕರು ಹಿಂಸೆಯನ್ನು ತೊರೆದಿದ್ದಾರೆ ಮತ್ತು ಅವರು ಅಭಿವೃದ್ಧಿಯ ಪಥವನ್ನು ಸೇರಲಾರಂಭಿಸಿದ್ದಾರೆ. ಕೊರೊನಾ ಸಮಯದಲ್ಲಿ ನಾವು ಓರ್ವ ನಾಗರಿಕರಾಗಿ ನಮ್ಮ ಕರ್ತವ್ಯಗಳಿಗೆ ಹೇಗೆ ಆದ್ಯತೆ ನೀಡಬೇಕು ಎಂಬ ಪರಿಣಾಮವನ್ನು ಗಮನಿಸಿದ್ದೇವೆ. ದೇಶದ ಜನರೆಲ್ಲಾ ಒಗ್ಗೂಡಿದರೆ ಮತ್ತು ತಮ್ಮ ಹೊಣೆಗಾರಿಕೆಗಳನ್ನು ನಿರ್ವಹಿಸಿದರೆ ದೇಶ ಕೊರೊನಾವನ್ನು ನಿಯಂತ್ರಿಸಬಹುದು.

ಮಿತ್ರರೇ,

ಈ ಸಮಯ ಅತ್ಯಂತ ಸವಾಲಿನದಾಗಿತ್ತು ಅಲ್ಲದೆ ಅದರೊಂದಿಗೆ ಸಾಕಷ್ಟು ಅವಕಾಶಗಳೂ ಸಹ ಹುಟ್ಟಿಕೊಂಡವು. ಆ ಸವಾಲುಗಳನ್ನು ಎದುರಿಸುವ ಅವಕಾಶಗಳು ಹುಟ್ಟಿದವು. ಹಾಗಾಗಿ ಗೆಲುವು ಸಾಧಿಸಲು, ದೇಶಕ್ಕಾಗಿ ಏನನ್ನಾದರು ಮಾಡಲು, ದೇಶದ ಸಾಮರ್ಥ್ಯವನ್ನು ವೃದ್ಧಿಸಲು ಸ್ವಾವಲಂಬಿಯಾಗಲು ಮತ್ತು ಸಾಮಾನ್ಯರಿಂದ ಅತಿಸಾಮಾನ್ಯ ಹಾಗೂ ಅತ್ಯುತ್ತಮವಾಗಲು ಅವಕಾಶಗಳು ಲಭ್ಯವಾದವು. ಈ ಎಲ್ಲ ಗುರಿಗಳ ಸಾಧನೆಯಲ್ಲಿ ಭಾರತೀಯ ಯುವ ಜನತೆಯ ಶಕ್ತಿಯ ಕೊಡುಗೆ ಮತ್ತು ಪಾತ್ರ ಅತ್ಯಂತ ಪ್ರಮುಖವಾದುದು. ಅವರನ್ನು ನಾವು ಬೆಂಬಲಿಗರು ಮತ್ತು ರಾಷ್ಟ್ರದ ರಕ್ಷಕರು ಎಂದು ನೋಡಬಯಸುತ್ತೇನೆ. ಆದ್ದರಿಂದ ಎನ್ ಸಿಸಿಯ ಪಾತ್ರವನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ವಿಶೇಷ ಪ್ರಯತ್ನಗಳನ್ನು ಕೈಗೊಂಡಿದೆ. ದೇಶದ ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಭದ್ರತಾ ಜಾಲವನ್ನು ಬಲವರ್ಧನೆಗೊಳಿಸಲು ಎನ್ ಸಿಸಿ ಸಹಭಾಗಿತ್ವವನ್ನು ವೃದ್ಧಿಸಲಾಗುತ್ತದೆ.

ಕಳೆದ ವರ್ಷ ಆಗಸ್ಟ್ 15ರಂದು ದೇಶದ ಕರಾವಳಿ ಮತ್ತು ಗಡಿ ಭಾಗದ 175 ಜಿಲ್ಲೆಗಳಲ್ಲಿ ಎನ್ ಸಿಸಿಗೆ ಹೊಸ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಪ್ರಕಟಿಸಿದ್ದೆ. ಸುಮಾರು ಒಂದು ಲಕ್ಷ ಎನ್ ಸಿಸಿ ಕೆಡೆಟ್ ಗಳಿಗೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ತರಬೇತಿ ನೀಡಲಾಗುವುದು. ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಕೆಡೆಟ್ ಗಳಿಗೂ ತರಬೇತಿ ನಿಡಲಾಗುವುದು. ಎಲ್ಲಾ ಶಾಲಾ – ಕಾಲೇಜುಗಳಿಗೂ ಅದು ಸರ್ಕಾರದ್ದಾಗಿರಬಹುದು ಅಥವಾ ಖಾಸಗಿಯದ್ದಾಗಿರಬಹುದು, ಕೇಂದ್ರ ಅಥವಾ ರಾಜ್ಯ ಸರ್ಕಾರದ್ದಾಗಿರಬಹುದು. ಎಲ್ಲ ಶಾಲಾ-ಕಾಲೇಜುಗಳಲ್ಲಿ ಈ ಕೆಡೆಟ್ ಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಸರ್ಕಾರ ಎನ್ ಸಿಸಿ ತರಬೇತಿ ಸಾಮರ್ಥ್ಯವನ್ನು ಕ್ಷಿಪ್ರವಾಗಿ ಹೆಚ್ಚಳ ಮಾಡುತ್ತಿದೆ. ಈವರೆಗೆ ಒಂದೇ ಒಂದು ಫೈರಿಂಗ್ ಸಿಮ್ಯುಲೇಟರ್ ಇತ್ತು. ಇದೀಗ ಅವುಗಳ ಸಂಖ್ಯೆಯನ್ನು ಬಹುತೇಕ 100ಕ್ಕೆ ಅಂದರೆ 98ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಒಂದರಿಂದ 100ಕ್ಕೆ ಹೆಚ್ಚಾಗಿದೆ. ಅದೇ ರೀತಿ ಮೈಕ್ರೋ ಲೈಟ್ ಸಿಮ್ಯುಲೇಟರ್ ಸಂಖ್ಯೆಯನ್ನು 5 ರಿಂದ 44ಕ್ಕೆ ಮತ್ತು ರೋವಿಂಗ್ ಸಿಮ್ಯುಲೇಟರ್ ಅನ್ನು 11 ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಈ ಆಧುನಿಕ ಸಿಮ್ಯುಲೇಟರ್ ಗಳು ಎನ್ ಸಿಸಿ ತರಬೇತಿಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ನೆರವಾಗಲಿದೆ.

ಮಿತ್ರರೇ,

ನಾವು ಈಗ ಇರುವ ಮೈದಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರನ್ನು ಇಡಲಾಗಿದೆ. ಅವರು ನಿಮಗೆ ಅತ್ಯಂತ ಸ್ಫೂರ್ತಿಯನ್ನು ತುಂಬುವಂತಹವರು. ಕಾರ್ಯಪ್ಪ ಜಿ ಅವರ ಜೀವನವೇ ಅನೇಕ ಶೌರ್ಯಗಳ ಕತೆಯಾಗಿದೆ. 1947ರಲ್ಲಿ ಭಾರತ ಯುದ್ಧದಲ್ಲಿ ನಿರ್ಣಾಯಕ ಮುನ್ನಡೆಗಳಿಸಲು ಅವರ ಕಾರ್ಯತಾಂತ್ರಿಕ ಕೌಶಲ್ಯವೇ ಕಾರಣ. ಇಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜಿ ಅವರ ಜನ್ಮ ವಾರ್ಷಿಕೋತ್ಸವವಿದೆ. ಎಲ್ಲ ದೇಶವಾಸಿಗಳ ಮತ್ತು ಎನ್ ಸಿಸಿ ಕೆಡೆಟ್ ಗಳ ಪರವಾಗಿ ನಾನು ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ.

ನಿಮ್ಮಲ್ಲಿ ಹಲವರು ಭಾರತೀಯ ರಕ್ಷಣಾ ಪಡೆಗಳ ಭಾಗವಾಗಬೇಕೆಂದು ಬಲವಾದ ಇಚ್ಛೆಯನ್ನು ಹೊಂದಿದ್ದೀರಿ. ನಿಮ್ಮೆಲ್ಲರಲ್ಲೂ ಆ ಸಾಮರ್ಥ್ಯವಿದೆ ಮತ್ತು ನಿಮ್ಮೆಲ್ಲರಿಗೂ ಹೆಚ್ಚಿನ ಅವಕಾಶಗಳನ್ನು ಸರ್ಕಾರ ಸೃಷ್ಟಿಸುತ್ತಿದೆ. ವಿಶೇಷವಾಗಿ ಮಹಿಳಾ ಕೆಡೆಟ್ ಗಳಿಗೆ ನಿಮಗೆ ಹೆಚ್ಚಿನ ಅವಕಾಶಗಳು ಕಾಯುತ್ತಿವೆ ಎಂದು ಹೇಳ ಬಯಸುತ್ತೇನೆ. ನಾನು ಕೂಡ ಇದೀಗ ಕಳೆದ ಕೆಲವು ವರ್ಷಗಳಿಂದೀಚೆಗೆ ಎನ್ ಸಿಸಿಯಲ್ಲಿ ಬಾಲಕಿಯರ ಕೆಡೆಟ್ ಪ್ರಮಾಣ ಶೇ.35ಕ್ಕೂ ಅಧಿಕವಾಗಿರುವುದನ್ನು ಗಮನಿಸಿದ್ದೇನೆ. ಇದೀಗ ನಮ್ಮ ಎಲ್ಲ ರಕ್ಷಣಾ ಪಡೆಗಳ ದ್ವಾರ ನಿಮಗೆ ತೆರೆದಿದೆ. ಭಾರತದ ಶೌರ್ಯವಂತ ಪುತ್ರಿಯರು ಶತೃಗಳನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ದೇಶಕ್ಕೆ ನಿಮ್ಮ ಶೌರ್ಯ ಮತ್ತು ಹೊಸ ವರ್ಚಸ್ಸು ಅಗತ್ಯವಿದೆ ಮತ್ತು ಅದಕ್ಕಾಗಿ ಕಾಯುತ್ತಿದ್ದೇವೆ. ನಾನು ನಿಮ್ಮಲ್ಲಿ ಭವಿಷ್ಯದ ಅಧಿಕಾರಿಗಳನ್ನು ಕಾಣುತ್ತಿದ್ದೇನೆ. ಎರೆಡೂವರೆ ತಿಂಗಳ ಹಿಂದೆ ನಾನು ದೀಪಾವಳಿ ಸಂದರ್ಭದಲ್ಲಿ ಜೈಸಲ್ಮೇರ್ ಲಾಂಗೇವಾಲಾ ಶಿಬಿರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನಾನು ಹಲವು ಯುವ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ. ದೇಶದ ರಕ್ಷಣೆಗಾಗಿ ಅವರ ಮುಖದ ಮೇಲಿನ ಉತ್ಸಾಹ, ಸ್ಥೈರ್ಯ ಮತ್ತು ಅದಮ್ಯ ಇಚ್ಛೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮಿತ್ರರೇ,

ಲಾಂಗೇವಾಲಾ ಪೋಸ್ಟ್ ಕೂಡ ವೈಭವದ ಇತಿಹಾಸವನ್ನು ಹೊಂದಿದೆ. 1971ರ ಯುದ್ಧದಲ್ಲಿ ನಮ್ಮ ದಿಟ್ಟ ಯೋಧರು ಲಾಂಗೇವಾಲಾದಲ್ಲಿ ನಿರ್ಣಾಯಕ ಗೆಲುವನ್ನು ಸಾಧಿಸಿದರು. ಪಾಕಿಸ್ತಾನದ ವಿರುದ್ಧ ಯುದ್ಧದ ವೇಳೆ ಭಾರತೀಯ ಸೇನೆ ಪೂರ್ವದಿಂದ ಪಶ್ಚಿಮದವರೆಗೆ ಗಡಿಯಲ್ಲಿ ಸಹಸ್ರಾರು ಕಿಲೋಮೀಟರ್ ಗಳ ದೂರದವರೆಗೆ ಶತೃ ಸೇನೆಯನ್ನು ಅಟ್ಟಿತ್ತು. ಆ ಯುದ್ಧದಲ್ಲಿ ಸಹಸ್ರಾರು ಪಾಕಿಸ್ತಾನಿ ಯೋಧರು ಭಾರತದ ಸೇನಾನಿಗಳ ಎದುರು ಶರಣಾಗತರಾದರು. 1971ರ ಯುದ್ಧ ಭಾರತದ ಮಿತ್ರ ಮತ್ತು ನಮ್ಮ ನೆರೆಯ ದೇಶ ಬಾಂಗ್ಲಾ ದೇಶದ ಸೃಷ್ಟಿಗೆ ನೆರವಾಯಿತು. ಈ ವರ್ಷ ಯುದ್ಧ ನಡೆದು 50 ವರ್ಷಗಳು ಪೂರ್ಣಗೊಳ್ಳಲಿದೆ. ದೇಶದ ಜನರು 1971ರಲ್ಲಿ ಗೆಲುವು ತಂದುಕೊಟ್ಟ ಭಾರತದ ದಿಟ್ಟ ಪುತ್ರರು ಮತ್ತು ಪುತ್ರಿಯುರ ಶೌರ್ಯ ಮತ್ತು ಸಾಹಸಕ್ಕೆ ಗೌರವ ಸಲ್ಲಿಸುತ್ತದೆ. ಇಂದು ಆ ಯುದ್ಧದಲ್ಲಿ ಹುತಾತ್ಮರಾದ ಎಲ್ಲರಿಗೆ ನಾನು ಕೂಡ ಗೌರವಗಳನ್ನು ಸಲ್ಲಿಸುತ್ತೇನೆ.

ಮಿತ್ರರೇ,

ನೀವೆಲ್ಲರೂ ದೆಹಲಿಗೆ ಬಂದಾಗ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದು ಅತ್ಯಂತ ಅವಶ್ಯಕವಾಗಿದೆ. ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಗೌರವಿಸುವುದು. ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಶೌರ್ಯ ಪ್ರಶಸ್ತಿಗಳ ನವೀಕರಿಸಲ್ಪಟ್ಟ ಪೋರ್ಟಲ್ - www.gallantryawards.gov.in ಅನ್ನು ಗಣರಾಜ್ಯೋತ್ಸವದ ದಿನ ಮತ್ತೆ ಆರಂಭಿಸಲಾಗಿದೆ. ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿರುವ ನಮ್ಮ ಯೋಧರಿಗೆ ಹಾಗೂ ಅವರ ನಾಯಕತ್ವಕ್ಕೆ ಆ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಗೌರವ ಸಲ್ಲಿಸಬೇಕಾಗಿದೆ. ನಾನು ಎಲ್ಲಾ ಹಾಲಿ ಮತ್ತು ಮಾಜಿ ಎನ್ ಸಿಸಿ ಕೆಡೆಟ್ ಗಳಿಗೆ ಈ ಪೋರ್ಟಲ್ ಗೆ ಭೇಟಿ ನೀಡಿ, ಸೇರ್ಪಡೆಯಾಗಿ ಮತ್ತು ಅದರೊಂದಿಗೆ ತೊಡಗಿಕೊಳ್ಳಿ ಎಂದು ಕರೆ ನೀಡುತ್ತೇನೆ.

ಮಿತ್ರರೇ,

20,000ಕ್ಕೂ ಅಧಿಕ ಕೆಡೆಟ್ ಗಳು ಈಗಾಗಲೇ ಎನ್ ಸಿಸಿ ಡಿಜಿಟಲ್ ವೇದಿಕೆಯನ್ನು ಸೇರ್ಪಡೆಯಾಗಿದ್ದಾರೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಈ ಕೆಡೆಟ್ ಗಳು ತಮ್ಮ ಅನುಭವ ಮತ್ತು ಚಿಂತನೆಯನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಹಾಗಾಗಿ ನನಗೆ ಖಂಡಿತ ವಿಶ್ವಾಸವಿದೆ. ಈ ವೇದಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ನೀವು ಬಳಕೆ ಮಾಡಿಕೊಳ್ಳಲಿದ್ದೀರಿ ಎಂದು.

ಮಿತ್ರರೇ,

ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಸೇವಾ ಮೌಲ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವವರಿಗೆ ಈ ವರ್ಷ ಅತ್ಯಂತ ಪ್ರಮುಖವಾದುದಾಗಿದೆ. ಈ ವರ್ಷ ಭಾರತ ಸ್ವಾತಂತ್ರ್ಯಗಳಿಸಿ 75 ವರ್ಷಗಳಾಗಲಿದೆ. ಇದೇ ವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವ ನಡೆಯಲಿದೆ. ಹಲವು ಸ್ಫೂರ್ತಿದಾಯಕ ಕಾರ್ಯಕ್ರಮಗಳು ಒಟ್ಟಿಗೆ ನಡೆಯುತ್ತಿರುವುದು ಅಪರೂಪ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ತಮ್ಮ ಶೌರ್ಯದ ಮೂಲಕ ವಿಶ್ವದ ಬಲಿಷ್ಠ ಶಕ್ತಿಯನ್ನು ಗಟ್ಟಿಗೊಳಿಸಿದರು. ನೇತಾಜಿ ಅವರ ಬಗ್ಗೆ ನೀವು ಓದಿದಷ್ಟು ನಿಮ್ಮ ನೈತಿಕ ಸ್ಥೈರ್ಯ ಕುಗ್ಗಿಸುವಂತಹ ಯಾವುದೇ ದೊಡ್ಡ ಸವಾಲು ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಿರಿ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ದಿಟ್ಟ ಪುತ್ರರು ಭಾರತದ ಕನಸುಗಳನ್ನು ಸಾಕಾರಗೊಳಿಸುವುದನ್ನು ಎದುರು ನೋಡುತ್ತಿದ್ದಾರೆ. ಹಾಗಾಗಿ ಮುಂದಿನ 25-26 ವರ್ಷಗಳು ನಿಮ್ಮ ಜೀವನದಲ್ಲಿ ಅತಿ ಮುಖ್ಯವಾದುದು. ಈ 25-26 ವರ್ಷ ಭಾರತಕ್ಕೂ ಕೂಡ ಅಷ್ಟೇ ಪ್ರಮುಖವಾದುದು.

ದೇಶಕ್ಕೆ ಸ್ವಾತಂತ್ರ್ಯ ಬಂದು 2047ಕ್ಕೆ 100 ವರ್ಷ ಪೂರ್ಣಗೊಳ್ಳಲಿದೆ. ನಿಮ್ಮ ಸದ್ಯದ ಪ್ರಯತ್ನಗಳು ಭಾರತದ ಪಯಣವನ್ನು ಗಟ್ಟಿಗೊಳಿಸಲಿದೆ, ಹಾಗಾಗಿ ಕೆಡೆಟ್ ಗಳಾಗಿ ಮತ್ತು ದೇಶದ ಪ್ರಜೆಗಳಾಗಿ ಈ ವರ್ಷ ನೀವು ಹೊಸ ಸಂಕಲ್ಪ ಮಾಡಬೇಕಿದೆ ಮತ್ತು ದೇಶದ ಕನಸುಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಕಳೆದ ವರ್ಷ ಪ್ರಮುಖ ಬಿಕ್ಕಟ್ಟನ್ನು ಎದುರಿಸಿದ ನಾವು ಒಂದು ರಾಷ್ಟ್ರವಾಗಿ ಸಾಮೂಹಿಕ ಶಕ್ತಿಯೊಂದಿಗೆ ಮತ್ತಷ್ಟು ಸಬಲೀಕರಣಗೊಳ್ಳಬೇಕಿದೆ. ಸಾಂಕ್ರಾಮಿಕದಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ನಾವು ಸಂಪೂರ್ಣವಾಗಿ ತೊಡೆದು ಹಾಕಬೇಕಿದೆ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪಗಳನ್ನು ಈಡೇರಿಸಬೇಕಿದೆ.

ಮಿತ್ರರೇ,

ಕಳೆದ ವರ್ಷ ಭಾರತ ಯಾವುದೇ ಅಥವಾ ಗಡಿ ಸವಾಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಲ್ಲಾ ಖಚಿತ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ. ಲಸಿಕೆಗಳ ಸುರಕ್ಷತಾ ಜಾಲವಾಗಿರಬಹುದು ಅಥವಾ ಭಾರತಕ್ಕೆ ಸವಾಲೊಡ್ಡುವ ಯಾವುದೇ ಆಧುನಿಕ ಕ್ಷಿಪಣಿಗಳನ್ನು ದ್ವಂಸಗೊಳಿಸುವ ಎಲ್ಲ ಸಾಮರ್ಥ್ಯವನ್ನು ಭಾರತ ಹೊಂದಿದೆ. ಇಂದು ನಾವು ಲಸಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇವೆ ಮತ್ತು ನಮ್ಮ ಸೇನೆಯನ್ನು ಆಧುನೀಕರಣಗೊಳಿಸಲು ಕ್ಷಿಪ್ರ ಪ್ರಯತ್ನಗಳನ್ನು ನಡೆಸಿದ್ದೇವೆ. ಭಾರತದ ಎಲ್ಲ ಸಶಸ್ತ್ರ ಪಡೆಗಳು ಉತ್ಕೃಷ್ಟವಾಗಿರುವುದನ್ನು ಖಾತ್ರಿಪಡಿಸಲು ಪ್ರತಿಯೊಂದು ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಭಾರತದ ಬಳಿ ವಿಶ್ವದ ಅತ್ಯುತ್ತಮ ಸಮರ ಯಂತ್ರಗಳಿವೆ. ನಿನ್ನೆಯಷ್ಟೇ ಫ್ರಾನ್ಸ್ ನಿಂದ ಮತ್ತೆ ಮೂರು ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿರುವುದನ್ನು ನೀವು ಮಾಧ್ಯಮಗಳಲ್ಲಿ ನೋಡಿರಬಹುದು. ಈ ಯುದ್ಧ ವಿಮಾನಗಳು ಆಗಸದ ಮಧ್ಯದಲ್ಲೇ ಇಂಧನ ಭರ್ತಿ ಮಾಡಿಕೊಳ್ಳುತ್ತವೆ. ಈ ಇಂಧನ ಭರ್ತಿ ಕಾರ್ಯಾಚರಣೆಯಲ್ಲಿ ಭಾರತದ ಮಿತ್ರ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ಗ್ರೀಸ್ ಹಾಗೂ ಸೌದಿ ಅರೆಬಿಯಾ ಕೊಡುಗೆ ನೀಡಿವೆ. ಇದು ಕೊಲ್ಲಿ ರಾಷ್ಟ್ರಗಳೊಂದಿಗೆ ಭಾರತ ಹೊಂದಿರುವ ಬಲಿಷ್ಠ ಸಂಬಂಧಗಳ ಪ್ರತೀಕವಾಗಿವೆ.

ಮಿತ್ರರೇ,

ಭಾರತದ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಎಲ್ಲ ನಿರ್ಧಾರಗಳನ್ನು ಕೈಗೊಂಡಿದೆ. ವಿದೇಶಗಳಿಂದ 100ಕ್ಕೂ ಅಧಿಕ ರಕ್ಷಣಾ ಸಂಬಂಧಿ ಉಪಕರಣಗಳ ಖರೀದಿಯನ್ನು ರದ್ದುಗೊಳಿಸಲಾಗಿದೆ ಮತ್ತು ಅವುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಇದೀಗ ಭಾರತದ ತೇಜಸ್ ಯುದ್ಧ ವಿಮಾನ ಸಮುದ್ರದಿಂದ ಆಕಾಶದವರೆಗೆ ವೈಭವವನ್ನು ತೋರುತ್ತಿದೆ. ಇತ್ತೀಚೆಗೆ ಭಾರತೀಯ ವಾಯುಪಡೆಗೆ 80ಕ್ಕೂ ಅಧಿಕ ತೇಜಸ್ ವಿಮಾನಗಳ ಖರೀದಿಗೆ ಬೇಡಿಕೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೆ ಕೃತಕ ಬುದ್ಧಿಮತ್ತೆ ಆಧರಿಸಿದ ತಂತ್ರಜ್ಞಾನದಲ್ಲಿ ಹಿಂದೆ ಬೀಳದಂತೆ ಖಾತ್ರಿಪಡಿಸಲು ಭಾರತ ಸಂಶೋಧನಾ ಮತ್ತು ಅಭಿವೃದ್ಧಿಯ ಪ್ರತಿಯೊಂದು ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಿದೆ. ಭಾರತ ಕೇವಲ ರಕ್ಷಣಾ ಉತ್ಪನ್ನಗಳ ದೊಡ್ಡ ಮಾರುಕಟ್ಟೆಯಲ್ಲದೆ ದೊಡ್ಡ ಉತ್ಪಾದನಾ ರಾಷ್ಟ್ರವಾಗಿ ಹೊರ ಹೊಮ್ಮುವ ದಿನಗಳು ದೂರವಿಲ್ಲ.

ಮಿತ್ರರೇ,

ನಮ್ಮ ಹಲವು ಸ್ವಾವಲಂಬನೆ ಗುರಿಗಳು ಸಾಕಾರವಾದಾಗ ಸಹಜವಾಗಿಯೇ ನಮ್ಮಲ್ಲಿ ಹೆಮ್ಮೆ ಮೂಡುವುದು ಸ್ವಾಭಾವಿಕ. ನೀವು ಇದೀಗ ನಿಮ್ಮೊಳಗೆ ಅತ್ಯುತ್ಸಾಹದ ಅನುಭವವಾಗುತ್ತಿದೆ ಮತ್ತು ಸ್ಥಳೀಯ ಉತ್ಪನ್ನಗಳ ಬಗ್ಗೆ ನಿಮ್ಮ ಮಿತ್ರರ ಬಳಿ ಆ ಬಗ್ಗೆ ಮಾತನಾಡುತ್ತಿರಿ. ಭಾರತೀಯ ಯುವ ಜನತೆ ತಮ್ಮ ಬ್ರ್ಯಾಂಡ್ ಗಳ ಆಯ್ಕೆಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಂಡಿರುವುದನ್ನು ನಾನು ಕಾಣುತ್ತಿದ್ದೇನೆ. ಉದಾಹರಣೆಗೆ ನೀವು ಖಾದಿಯನ್ನು ತೆಗೆದುಕೊಳ್ಳಿ. ಖಾದಿಯನ್ನು ಹಿಂದೆ ಕೇವಲ ನಾಯಕರ ಉಡುಪನ್ನಾಗಿ ಪರಿಗಣಿಸಲಾಗುತ್ತಿತ್ತು. ಇಂದು ಅದೇ ಖಾದಿ ನಮ್ಮ ಯುವಜನರ ಮೆಚ್ಚಿನ ಬ್ರ್ಯಾಂಡ್ ಆಗಿದೆ. ಖಾದಿ ಕುರ್ತಾ, ಜಾಕೆಟ್ ಅಥವಾ ಇನ್ನಿತರ ಉತ್ಪನ್ನಗಳು ಇಂದು ಯುವ ಜನರ ಫ್ಯಾಷನ್ ಸಂಕೇತವಾಗಿದೆ. ಅಂತೆಯೇ ಪ್ರತಿಯೊಬ್ಬ ಭಾರತೀಯರು ಸ್ಥಳೀಯ ಜವಳಿ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಫ್ಯಾಷನ್ ಮತ್ತು ಹಬ್ಬಗಳು ಅಥವಾ ಮದುವೆಗಳ ಸಂದರ್ಭದಲ್ಲಿ ನೆಚ್ಚಿನ ಬ್ರ್ಯಾಂಡ್ ಗಳಾಗಿವೆ. ಕೊರೊನಾದ ಸಂಕಷ್ಟದ ಸಮಯದಲ್ಲಿ ದೇಶದಲ್ಲಿ ದಾಖಲೆ ಸಂಖ್ಯೆಯ ನವೋದ್ಯಮಗಳು ಮತ್ತು ಯೂನಿಕಾರ್ನ್ ಗಳನ್ನು ಯುವಕರು ಸ್ಥಾಪಿಸಿದ್ದಾರೆ.

ಮಿತ್ರರೇ,

21ನೇ ಶತಮಾನದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಆತ್ಮವಿಶ್ವಾಸದ ಯುವಜನತೆ ಅತ್ಯಂತ ಪ್ರಮುಖವಾಗಿದೆ. ಈ ಆತ್ಮವಿಶ್ವಾಸ ಬೆಳೆಯುವುದು ದೈಹಿಕ ಕ್ಷಮತೆ, ಶಿಕ್ಷಣ ಮತ್ತು ಕೌಶಲ್ಯಗಳಿಂದ ಹಾಗೂ ಸೂಕ್ತ ಅವಕಾಶಗಳಿಂದ. ಇಂದು ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ದೇಶದ ಯುವಕರನ್ನು ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲು ವ್ಯವಸ್ಥೆಯಲ್ಲಿ ಎಲ್ಲ ಅಗತ್ಯ ಸುಧಾರಣೆಗಳನ್ನು ತರಲಾಗುತ್ತಿದೆ. ಸಾವಿರಾರು ಅಟಲ್ ಚಿಂತನಾ ಪ್ರಯೋಗಾಲಯಗಳಿಂದ ಹಿಡಿದು, ಬೃಹತ್ ಆಧುನಿಕ ಶೈಕ್ಷಣಿಕ ಸಂಸ್ಥೆಗಳವರೆಗೆ ಕೌಶಲ್ಯಭಾರತ ಮಿಷನ್ ನಿಂದ ಹಿಡಿದು, ಮುದ್ರಾ ಯೋಜನೆಗಳವರೆಗೆ ಪ್ರತಿಯೊಂದು ನಿಟ್ಟಿನಲ್ಲೂ ಸರ್ಕಾರ ಪ್ರಯತ್ನಗಳನ್ನು ನಡೆಸಿದೆ. ಇಂದು ಭಾರತದಲ್ಲಿ ದೈಹಿಕ ಕ್ಷಮತೆ ಮತ್ತು ಕ್ರೀಡೆಗೆ ಹಿಂದೆಂದೂ ನೀಡದಂತಹ ಆದ್ಯತೆಯನ್ನು ನೀಡಲಾಗಿದೆ. ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಅಭಿಯಾನಗಳ ಮೂಲಕ ದೇಶದ ಗ್ರಾಮಗಳಲ್ಲಿನ ಸದೃಢ ಮತ್ತು ಉತ್ತಮ ಪ್ರತಿಭೆಗಳನ್ನು ಉತ್ತೇಜಿಸಲಾಗುತ್ತಿದೆ. ಅಲ್ಲದೆ ಎನ್ ಸಿಸಿ, ಫಿಟ್ ಇಂಡಿಯಾ ಅಭಿಯಾನಗಳು ಹಾಗೂ ಯೋಗವನ್ನು ಉತ್ತೇಜಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಪ್ರೀನರ್ಸರಿಯಿಂದ ಪಿಎಚ್ ಡಿವರೆಗೆ ವಿದ್ಯಾರ್ಥಿ ಕೇಂದ್ರಿತ ವ್ಯವಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ನಮ್ಮ ಯುವ ಮಿತ್ರರು ಹಾಗೂ ಮಕ್ಕಳು ಅನಗತ್ಯ ಒತ್ತಡಕ್ಕೆ ಸಿಲುಕದಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ. ಆ ಮೂಲಕ ಅವರು ತಮ್ಮ ಆಸಕ್ತಿ ಮತ್ತು ಇಚ್ಛೆಗೆ ಅನುಗುಣವಾಗಿ ಅವಕಾಶ ಕಲ್ಪಿಸಲಾಗಿದೆ. ಕೃಷಿಯಿಂದ ಬಾಹ್ಯಾಕಾಶದವರೆಗೆ ಎಲ್ಲ ಹಂತಗಳಲ್ಲಿ ಯುವ ಉದ್ಯಮಿಗಳಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಈ ಎಲ್ಲ ಅವಕಾಶಗಳಿಂದ ನೀವು ಹೆಚ್ಚಿನ ಪ್ರಯೋಜನ ಪಡೆಯಬೇಕು. ಆಗ ದೇಶ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿಯಾಗುತ್ತದೆ. ನಾವು ಈ ವೇದ ಕರೆಯನ್ನು वयं राष्ट्र जागृयामः(ಅಂದರೆ ರಾಷ್ಟ್ರವನ್ನು ಜೀವಂತ ಮತ್ತು ಎಚ್ಚರವಾಗಿ ಇಡುತ್ತೇವೆ ಎಂದು) ಇದು 21ನೇ ಶತಮಾನದ ಯುವಶಕ್ತಿಯ ಹೇಳಿಕೆಯಾಗಿದೆ. ನಾವು ಈ ಸ್ಫೂರ್ತಿಯನ್ನು ‘इदम् राष्ट्राय इदम् न मम्’ ಅಳವಡಿಸಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ನಾವು ‘राष्ट्र हिताय राष्ट्र सुखाय च’ ಜೀವನವನ್ನು ರಾಷ್ಟ್ರಕ್ಕೆ ಸಮರ್ಪಿಸಬೇಕು. ನಾವು आत्मवत सर्वभूतेषु और सर्वभूत हितेरता ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರವನ್ನು ಪಾಲಿಸಬೇಕಿದೆ.

ಈ ಮಂತ್ರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಆತ್ಮನಿರ್ಭರ ಭಾರತ ಸಂಕಲ್ಪ ಸಾಧಿಸಲು ಹೆಚ್ಚಿನ ಸಮಯ ತೆಗೆದು ಕೊಳ್ಳುವುದಿಲ್ಲ. ಮತ್ತೊಮ್ಮೆ ಗಣರಾಜ್ಯೋತ್ಸವ ದಿನದ ಪಥಸಂಚಲನದಲ್ಲಿ ಪಾಲ್ಗೊಂಡ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರುತ್ತೇನೆ.

ತುಂಬಾ ಧನ್ಯವಾದಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.