PM Modi, PM Bettel of Luxembourg exchange views on strengthening India-Luxembourg relationship in the post-COVID world
India-Luxembourg agree to strengthen cooperation on realizing effective multilateralism and combating global challenges like the Covid-19 pandemic, terrorism and climate change
Prime Minister welcomes Luxembourg’s announcement to join the International Solar Alliance (ISA)

ಗೌರವಾನ್ವಿತರೇ ನಮಸ್ಕಾರ !

ಎಲ್ಲಕ್ಕಿಂತ ಮೊದಲು, ನಾನು ಲುಕ್ಸೆಂಬರ್ಗ್ ನಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿರುವ ಹಾನಿಯ ಬಗ್ಗೆ ಭಾರತದ 1.3 ಬಿಲಿಯನ್ ಜನತೆಯ ಪರವಾಗಿ ತೀವ್ರವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ. ಮತ್ತು ಈ ನೋವಿನ ಸಮಯದಲ್ಲಿ ನಿಮ್ಮ ಸಮರ್ಥ ನಾಯಕತ್ವಕ್ಕಾಗಿ ಅಭಿನಂದನೆಯನ್ನೂ ಸಲ್ಲಿಸುತ್ತೇನೆ.

ಇಂದಿನ ನಮ್ಮ ವರ್ಚುವಲ್ ಶೃಂಗ ನನ್ನ ದೃಷ್ಟಿಯಲ್ಲಿ ಬಹಳ ಮಹತ್ವದ್ದು. ನಾವು ಪರಸ್ಪರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭೇಟಿಯಾಗುತ್ತಿರುವೆವಾದರೂ ,ಕಳೆದ ಎರಡು ದಶಕಗಳಲ್ಲಿ ಭಾರತ ಮತ್ತು ಲುಕ್ಸೆಂಬರ್ಗ್ ನಡುವೆ  ಇದು ಮೊದಲ ಔಪಚಾರಿಕ ಶೃಂಗ.

ಇಂದು ಜಗತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ  ಸಂಬಂಧಿತ ಆರ್ಥಿಕ ಮತ್ತು ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವಾಗ , ಭಾರತ –ಲುಕ್ಸೆಂಬರ್ಗ್ ಸಹಭಾಗಿತ್ವವು ಉಭಯ ಸವಾಲುಗಳಿಂದ  ಉಭಯ ದೇಶಗಳ ಪುನಶ್ಚೇತನಕ್ಕೆ ಸಹಕಾರಿಯಾಗಬಲ್ಲದು. ಪ್ರಜಾಪ್ರಭುತ್ವ, ಕಾನೂನು ಆಡಳಿತ ಮತ್ತು ಸ್ವಾತಂತ್ರ್ಯದಂತಹ ಹಂಚಿಕೊಂಡ ಮೌಲ್ಯಗಳು ನಮ್ಮ ಬಾಂಧವ್ಯವನ್ನು ಮತ್ತು ಪರಸ್ಪರ ಸಹಕಾರವನ್ನು ಬಲಗೊಳಿಸಿವೆ. ಭಾರತ ಮತ್ತು ಲುಕ್ಸೆಂಬರ್ಗ್ ನಡುವೆ ಅರ್ಥಿಕ ಕೊಳ್ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸಲು ಅವಕಾಶಗಳಿವೆ. ಪ್ರಸ್ತುತ, ಉಕ್ಕು, ಹಣಕಾಸು ತಂತ್ರಜ್ಞಾನ, ಡಿಜಿಟಲ್ ಡೊಮೈನ್ ಗಳಂತಹ ಕ್ಷೇತ್ರಗಳಲ್ಲಿ ನಾವು  ಉತ್ತಮ ಸಹಕಾರವನ್ನು ಹೊಂದಿದ್ದೇವೆ. ಆದರೆ ಅಲ್ಲಿ ಇದನ್ನು ಇನ್ನಷ್ಟು ಮುಂದುವರಿಸಿಕೊಂಡು ಹೋಗಲು ಅವಕಾಶಗಳಿವೆ. ಕೆಲವು ದಿನಗಳ ಹಿಂದೆ ನಮ್ಮ ಬಾಹ್ಯಾಕಾಶ ಸಂಸ್ಥೆಯು ಲುಕ್ಸೆಂಬರ್ಗ್ ನ ನಾಲ್ಕು ಉಪಗ್ರಹಗಳನ್ನು ಗಗನಕ್ಕೇರಿಸಿರುವುದು ನನಗೆ ಸಂತಸದ ಸಂಗತಿಯಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವು  ಪರಸ್ಪರ ಸಹಕಾರವನ್ನು, ವಿನಿಮಯವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. 

ಅಂತಾರಾಷ್ಟ್ರೀಯ ಸೌರ ಮಿತ್ರಕೂಟ–ಐ.ಎಸ್.ಎ.ಗೆ ಲುಕ್ಸೆಂಬರ್ಗ್ ಸೇರ್ಪಡೆಯನ್ನು ನಾವು ಸ್ವಾಗತಿಸುತ್ತೇವೆ. ಮತ್ತು ವಿಪತ್ತು ಪುನಶ್ಚೇತನ ಮೂಲಸೌಕರ್ಯಕ್ಕಾಗಿರುವ ಮಿತ್ರಕೂಟವನ್ನು ಸೇರಲು  ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. 

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ರಾಜಮನೆತನದ ಗೌರವಾನ್ವಿತ ಗ್ರ್ಯಾಂಡ್ ಡ್ಯೂಕ್ ಅವರ ಭಾರತ ಭೇಟಿ ನಿಗದಿಯಾಗಿತ್ತಾದರೂ, ಕೋವಿಡ್-19 ರಿಂದಾಗಿ ಮುಂದೂಡಲ್ಪಟ್ಟಿದೆ. ಸದ್ಯದಲ್ಲಿಯೇ ಭಾರತದಲ್ಲಿ ಅವರನ್ನು ನಾವು ಸ್ವಾಗತಿಸಲು ಇಚ್ಚಿಸುತ್ತೇವೆ. ಶೀಘ್ರದಲ್ಲಿಯೇ ತಾವು ಕೂಡಾ ಭಾರತಕ್ಕೆ ಭೇಟಿ ನೀಡಬೇಕು ಎಂಬ ಆಶಯವನ್ನು ಹೊಂದಿದ್ದೇವೆ.

ಗೌರವಾನ್ವಿತರೇ,

ಈಗ ನಾನು ನಿಮ್ಮನ್ನು ಉದ್ಘಾಟನಾ ಭಾಷಣಕ್ಕಾಗಿ ಆಹ್ವಾನಿಸುತ್ತೇನೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage