ಪ್ರಜಾಪ್ರಭುತ್ವ ಭಾರತಕ್ಕೆ ಕೇವಲ ಒಂದು ವ್ಯವಸ್ಥೆಯಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವ ನಮ್ಮ ಸ್ವಭಾವ ಮತ್ತು ಜೀವನದ ಭಾಗವಾಗಿದೆ
ಎಲ್ಲಾ ರಾಜ್ಯಗಳ ಎಲ್ಲರ ಪ್ರಯತ್ನದ ಆಧಾರವಾಗಿದೆ ಭಾರತದ ಒಕ್ಕೂಟ ವ್ಯವಸ್ಥೆ
“ಎಲ್ಲರ ಪ್ರಯತ್ನಕ್ಕೆ” ಕೊರೋನಾ ಸಾಂಕ್ರಾಮಿಕ ವಿರುದ್ಧದ ಹೋರಾಟ ಅತ್ಯುತ್ತಮ ನಿದರ್ಶನವಾಗಿದೆ”
“ವರ್ಷದಲ್ಲಿ 3 ರಿಂದ 4 ದಿನಗಳನ್ನು ಸದನಕ್ಕಾಗಿ ಸಾರ್ವಜನಿಕ ಪ್ರತಿನಿಧಿಗಳು ಮೀಸಲಿಟ್ಟರೆ ಸಮಾಜಕ್ಕೆ ವಿಶೇಷವಾದದ್ದನ್ನು ಕೊಡಬಹುದು, ಸಾಮಾಜಿಕ ಜೀವನ ಕುರಿತು ದೇಶಕ್ಕೆ ಮಾಹಿತಿ ನೀಡಬಹುದು”
ಸದನದಲ್ಲಿ ಆರೋಗ್ಯಕರ ಚೆರ್ಚೆಗಳಿಗೆ ಆರೋಗ್ಯಕರ ದಿನ, ಆರೋಗ್ಯಕರ ಸಮಯ ನಿಗದಿ ಅಗತ್ಯ
ಸಂಸದೀಯ ವ್ಯವಸ್ಥೆಯಲ್ಲಿ ತಾಂತ್ರಿಕತೆಗೆ ಪುಷ್ಠಿ ನೀಡಲು ಹಾಗೂ ದೇಶದ ಎಲ್ಲಾ ಪ್ರಜಾಪ್ರಭುತ್ವ ಘಟಕಗಳನ್ನು ಸಂಪರ್ಕಿಸಲು “ಒಂದು ರಾಷ್ಟ್ರ, ಒಂದು ಶಾಸನ ರಚನಾ ವೇದಿಕೆ” ರೂಪಿಸುವ ಪ್ರಸ್ತಾವನೆ

ನಮಸ್ಕಾರ!

ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಹಾಜರಿರುವ ಲೋಕ ಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ರಾಜ್ಯ ಸಭೆಯ ಗೌರವಾನ್ವಿತ ಉಪ ಸಭಾಪತಿ ಶ್ರೀ ಹರಿವಂಶ ಜೀ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಂ ಠಾಕೂರ್ ಜೀ, ಹಿಮಾಚಲ ವಿಧಾನ ಸಭೆಯ ವಿಪಕ್ಷ ನಾಯಕ ಶ್ರೀ ಮುಖೇಶ್ ಅಗ್ನಿಹೋತ್ರೀ ಜೀ, ಹಿಮಾಚಲ ಪ್ರದೇಶ ವಿಧಾನ ಸಭಾ ಸ್ಪೀಕರ್ ಶ್ರೀ ವಿಪಿನ್ ಸಿಂಗ್ ಪರ್ಮಾರ್ ಜೀ, ದೇಶದ ವಿವಿಧ ಶಾಸನ ಸಭೆಗಳ ಅಧ್ಯಕ್ಷಾಧಿಕಾರಿಗಳೇ, ಮತ್ತು ಮಹಿಳೆಯರೇ ಹಾಗು ಮಹನೀಯರೇ!

ಅಧ್ಯಕ್ಷೀಯ ಅಧಿಕಾರಿಗಳ ಈ ಪ್ರಮುಖ ಸಮ್ಮೇಳನ ಪ್ರತೀ ವರ್ಷ ಕೆಲವು ಹೊಸ ಚರ್ಚೆ ಮತ್ತು ಹೊಸ ನಿರ್ಧಾರಗಳೊಂದಿಗೆ ನಡೆಯುತ್ತದೆ. ಪ್ರತೀ ವರ್ಷ ಈ ಚರ್ಚೆಯಿಂದ ಸ್ವಲ್ಪ ಮಕರಂದ ಉದ್ಭವಿಸುತ್ತದೆ.  ಇದು ನಮ್ಮ ದೇಶಕ್ಕೆ ಮತ್ತು ನಮ್ಮ ಸಂಸದೀಯ ವ್ಯವಸ್ಥೆಗೆ ಹೊಸ ವೇಗ ಮತ್ತು ಶಕ್ತಿಯನ್ನು ಕೊಡುತ್ತದೆ ಹಾಗು ಹೊಸ ನಿರ್ಧಾರಗಳಿಗೆ ಪ್ರೇರಣೆಯನ್ನು ಕೊಡುತ್ತದೆ. ಇಂತಹ ಪರಂಪರೆ ಇಂದು ನೂರು ವರ್ಷಗಳನ್ನು ಪೂರ್ಣಗೊಳಿಸುತ್ತಿರುವುದು ಒಂದು ಆಹ್ಲಾದಕರ ಸಂಗತಿ. ಇದು ನಮಗೆಲ್ಲರಿಗೂ ಉತ್ತಮ  ಅದೃಷ್ಟದ, ಭವಿಷ್ಯದ  ಸಂಗತಿ ಜೊತೆಗೆ ಭಾರತದ ಪ್ರಜಾಸತ್ತಾತ್ಮಕ ವಿಸ್ತರಣೆಯ ಸಂಕೇತ ಕೂಡಾ. ಈ ಮಹತ್ವದ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಸಂಸತ್ತಿನ ಎಲ್ಲಾ ಸದಸ್ಯರನ್ನು ಮತ್ತು ದೇಶದ ವಿಧಾನ ಸಭೆಗಳ ಸದಸ್ಯರನ್ನು ಮತ್ತು ದೇಶವಾಸಿಗಳನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಪ್ರಜಾಸತ್ತೆ ಎಂಬುದು ಭಾರತಕ್ಕೆ ಬರೇ ಒಂದು ವ್ಯವಸ್ಥೆ ಮಾತ್ರವಲ್ಲ. ಪ್ರಜಾಪ್ರಭುತ್ವವು ನಮ್ಮ ಪ್ರಕೃತಿಯಲ್ಲಿ ಮತ್ತು ಭಾರತದ ಜೀವನದಲ್ಲಿ ಮಿಳಿತವಾಗಿದೆ. ಭಾರತವು ಈಗ ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದು ನಿಮ್ಮ ಪ್ರಯಾಣ ಬಹಳ ವಿಶೇಷತೆಯನ್ನು ಒಳಗೊಂಡಿದೆ. ಈ ಕಾಕತಾಳೀಯವಾದ ಸಂದರ್ಭ ಈ ಕಾರ್ಯಕ್ರಮದ ವಿಶಿಷ್ಟತೆಯನ್ನು ಹೆಚ್ಚಿಸುವುದಲ್ಲದೆ ನಮ್ಮ ಜವಾಬ್ದಾರಿಗಳನ್ನು ಹಲವು ಪಟ್ಟು ಹೆಚ್ಚಿಸಿದೆ.

ಸ್ನೇಹಿತರೇ,

ನಾವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಬರಲಿರುವ ವರ್ಷಗಳಲ್ಲಿ ಅಸಾಮಾನ್ಯ ಗುರಿಗಳನ್ನು ಸಾಧಿಸಬೇಕಾಗಿದೆ. ಈ ದೃಢ ನಿರ್ಧಾರಗಳನ್ನು “ಸಬ್ ಕಾ ಪ್ರಯಾಸ್ (ಪ್ರತಿಯೊಬ್ಬರ ಪ್ರಯತ್ನ) ಮೂಲಕ ಈಡೇರಿಸಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ನಾವು ’ಸಬ್ ಕಾ ಪ್ರಯಾಸ್’ ಕುರಿತಂತೆ ಮಾತನಾಡುವಾಗ ಭಾರತದ ಒಕ್ಕೂಟ ವ್ಯವಸ್ಥೆ ಹಾಗು ಎಲ್ಲಾ ರಾಜ್ಯಗಳ ಪಾತ್ರವೂ ಅದಕ್ಕೆ ವಿಸ್ತಾರವಾದ ತಳಹದಿಯಂತಾಗುತ್ತದೆ. ರಾಜ್ಯಗಳ ಸಕ್ರಿಯ ಪಾಲ್ಗೊಳ್ಳುವಿಕೆ ದೇಶವು ಇಷ್ಟು ವರ್ಷಗಳಲ್ಲಿ ಸಾಧಿಸಿದ ಸಾಧನೆಯ ಹಿಂದೆ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಇದುವರೆಗೆ ದೇಶ ಸಾಧಿಸಿದ ಪ್ರಗತಿಯಲ್ಲಿ ರಾಜ್ಯಗಳ ಸಕ್ರಿಯ ಪಾಲುದಾರಿಕೆಯು ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶವು ಸಾಧಿಸಿದ ಅನೇಕ ಸಂಗತಿಗಳಲ್ಲಿ ಪ್ರತಿಯೊಬ್ಬರ ಪ್ರಯತ್ನವೂ ಅಡಗಿದೆ. ಅದು ಈಶಾನ್ಯದ ದಶಕಗಳಷ್ಟು ಹಳೆಯ ಸಮಸ್ಯೆಗಳಿರಲಿ ಅಥವಾ ದಶಕಗಳಿಂದ ಅನುಷ್ಟಾನಕ್ಕೆ ಬರದೆ ಬಾಕಿಯಾಗಿದ್ದ ದೊಡ್ಡ ಯೋಜನೆಗಳನ್ನು ಪೂರ್ಣಗೊಳಿಸುವುದಿರಲಿ ಅದರಲ್ಲಿ ಸರ್ವರ ಪಾಲೂ ಇದೆ. ಅತ್ಯಂತ ದೊಡ್ಡ ಉದಾಹರಣೆ ಎಂದರೆ ಕೊರೊನಾ, ಅದು ನಮ್ಮ ಕಣ್ಣ ಮುಂದೆಯೇ ಇದೆ. ಇಂತಹ ದೊಡ್ಡ ಯುದ್ಧದಲ್ಲಿ ಎಲ್ಲ ರಾಜ್ಯಗಳಿಂದ ವ್ಯಕ್ತವಾದ ಸಮಷ್ಟಿ ಪ್ರಜ್ಞೆ ಚಾರಿತ್ರಿಕವಾದುದು. ಇಂದು ದೇಶವು ಬಹಳ ದೊಡ್ಡ ಸಂಖ್ಯೆಯಾದ 110 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಿದ ಸಾಧನೆ ಮಾಡಿದೆ. ಒಂದು ಕಾಲದಲ್ಲಿ ಅಸಾಧ್ಯ ಎಂದು ಪರಿಗಣಿಸಲ್ಪಟ್ಟಿದ್ದ ಕೆಲಸ ಈಗ ಸಾಧ್ಯವಾಗಿದೆ. ಆದುದರಿಂದ ಭವಿಷ್ಯದ ಕನಸುಗಳು ನಮ್ಮ ಮುಂದಿವೆ, ಅವುಗಳು “ಅಮೃತದಂತಹ ನಿರ್ಧಾರಗಳು” ಅವುಗಳನ್ನು ಕೂಡಾ ಈಡೇರಿಸಬೇಕಾಗಿದೆ. ಇವುಗಳನ್ನು ಸಾಧಿಸಬೇಕಾದರೆ ದೇಶದ ಮತ್ತು ರಾಜ್ಯಗಳ ಏಕೀಕೃತ ಪ್ರಯತ್ನಗಳಿಂದ ಮಾತ್ರ ಸಾಧ್ಯ. ನಮ್ಮ ಯಶಸ್ಸನ್ನು ಬೆಂಬತ್ತಲು ಇದು ಸದವಕಾಶ. ಯಾವುದು ಕೈಬಿಟ್ಟು ಹೋಗಿದೆಯೋ ಅದನ್ನು ಪೂರ್ಣಗೊಳಿಸಬೇಕು. ಮತ್ತು ಇದೇ ಅವಧಿಯಲ್ಲಿ ನಾವು ಭವಿಷ್ಯಕ್ಕಾಗಿ ಹೊಸ ನಿಯಮಗಳನ್ನು ಮತ್ತು ನೀತಿಗಳನ್ನು ರೂಪಿಸಬೇಕು. ಮತ್ತು ಅಲ್ಲಿ ಹೊಸ ಧೋರಣೆ ಹಾಗು  ಹೊಸ ಚಿಂತನೆ ಇರಬೇಕು. ನಮ್ಮ ಶಾಸಕಾಂಗದ ಪರಂಪರೆ  ಮತ್ತು ವ್ಯವಸ್ಥೆಗಳು ಭಾರತೀಯವಾದಂತಹವಾಗಿರಬಹುದು, ನಮ್ಮ ನೀತಿಗಳು, ನಮ್ಮ ಕಾನೂನುಗಳು ಭಾರತೀಯತೆಯ ಸ್ಪೂರ್ತಿಯನ್ನು ಬಲಪಡಿಸಬೇಕು. ’ಏಕ ಭಾರತ್, ಶ್ರೇಷ್ಟ ಭಾರತ್” ದೃಢ ನಿರ್ಧಾರವನ್ನವು ಸಾಕಾರಗೊಳಿಸಬೇಕು. ಬಹಳ ಮುಖ್ಯವಾಗಿ ಅದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಬೇಕು, ನಮ್ಮ ನಡತೆ ಭಾರತೀಯ ಮೌಲ್ಯಗಳಿಗೆ ಅನುಗುಣವಾಗಿರಬೇಕು. ಈ ದಿಕ್ಕಿನಲ್ಲಿ ನಾವು ಸಾಗಬೇಕಾದಲ್ಲಿ, ಮುನ್ನಡೆಯಬೇಕಾದಲ್ಲಿ  ಇನ್ನೂ ಬಹಳ ಅವಕಾಶಗಳು ನಮಗಿವೆ.

ಸ್ನೇಹಿತರೇ,

ನಮ್ಮ ದೇಶ ವೈವಿಧ್ಯತೆಯುಳ್ಳ ದೇಶ. ಸಾವಿರಾರು ವರ್ಷಗಳ ನಮ್ಮ ಅಭಿವೃದ್ಧಿಯ ಪ್ರಯಾಣದಲ್ಲಿ ವೈವಿಧ್ಯತೆಯ ನಡುವೆಯೂ ಉನ್ನತ ಮತ್ತು ದೈವಿಕ ಏಕತೆ ಅನಿರ್ಬಂಧಿತವಾಗಿ ಹರಿದು ಬಂದಿರುವುದನ್ನು ನಾವು ಗುರುತಿಸಿದ್ದೇವೆ. ಈ ಅನಿರ್ಬಂಧಿತ ಹರಿವು ನಮ್ಮ ವೈವಿಧ್ಯತೆಯನ್ನು ಪೋಷಿಸುತ್ತ ಮತ್ತು ರಕ್ಷಿಸುತ್ತ ಬಂದಿದೆ. ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ದೇಶದ ಸಮಗ್ರತೆ ಮತ್ತು ಏಕತೆಗೆ ಸಂಬಂಧಿಸಿ ವ್ಯತಿರಿಕ್ತವಾದಂತಹ ಧ್ವನಿಯೊಂದಿದ್ದರೆ ಆಗ ಅದರ ಬಗ್ಗೆ ಜಾಗೃತರಾಗಿವುದು ನಮ್ಮ ಶಾಸಕಾಂಗದ ವಿಶೇಷ ಜವಾಬ್ದಾರಿಯಾಗಿದೆ. ವೈವಿಧ್ಯತೆಯನ್ನು ಪರಂಪರೆ ಎಂದು ಗೌರವಿಸುವಂತಾಗಲಿ, ನಾವು ನಮ್ಮ ವೈವಿಧ್ಯತೆಯನ್ನು ಆಚರಿಸುವಂತಾಗಲಿ, ಈ ಸಂದೇಶವನ್ನು ನಮ್ಮ ಶಾಸಕಾಂಗವು ಶಾಶ್ವತವಾಗಿ ತಿಳಿಸುವಂತಾಗಬೇಕು.

ಸ್ನೇಹಿತರೇ,

ಕೆಲವು ಸಾರ್ವಜನಿಕರ ಮನಸ್ಸಿನಲ್ಲಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ಇರುವ ಅಭಿಪ್ರಾಯವೆಂದರೆ ಈ ನಾಯಕರು ಸದಾ ರಾಜಕೀಯ ಕೈವಾಡಗಳಲ್ಲಿ ನಿರತರಾಗಿರುತ್ತಾರೆ ಎಂಬುದು. ಆದರೆ ನೀವು ಗಮನಿಸಿದರೆ ಪ್ರತೀ ರಾಜಕೀಯ ಪಕ್ಷದಲ್ಲಿಯೂ ಸಮಾಜದ ಅಭಿವೃದ್ಧಿಗೆ, ಜನರ ಏಳಿಗೆಗೆ ತಮ್ಮ ಸಮಯವನ್ನು ವಿನಿಯೋಗಿಸುವ ಜನ ಪ್ರತಿನಿಧಿಗಳು ಕಂಡು ಬರುತ್ತಾರೆ. ಜನ ಸೇವೆಯ ಈ ಕೆಲಸಗಳು ರಾಜಕೀಯದಲ್ಲಿ ಜನರ ನಂಬಿಕೆಯನ್ನು ಹೆಚ್ಚು ಬಲಗೊಳಿಸಿವೆ. ಇಂತಹ ಅರ್ಪಣಾಭಾವದ ಜನಪ್ರತಿನಿಧಿಗಳಿಗೆ ನನ್ನಲ್ಲಿ ಸಲಹೆಗಳಿವೆ. ಖಾಸಗಿ ವಿಧೇಯಕಗಳನ್ನು ಮಂಡಿಸುವುದು ಮತ್ತು ಅವುಗಳ ಮೇಲೆ ಸಮಯ ವಿನಿಯೋಗಿಸುವುದು ಸಹಿತ ಹಲವಾರು ಕೆಲಸಗಳನ್ನು ನಾವು ನಮ್ಮ ಶಾಸಕಾಂಗಗಳಲ್ಲಿ ಮಾಡುತ್ತೇವೆ. ಇನ್ನು ಕೆಲವರು ತಮ್ಮ ಸಮಯವನ್ನು ಶಾಸಕಾಂಗದ ಶೂನ್ಯ ವೇಳೆಯಲ್ಲಿ ಉಪಯೋಗಿಸುತ್ತಾರೆ. ಶಾಸಕಾಂಗದಲ್ಲಿ ವರ್ಷದಲ್ಲಿ 3-4 ದಿನಗಳನ್ನು ಪ್ರತ್ಯೇಕವಾಗಿರಿಸಿದರೆ ನಮ್ಮ ಜನ ಪ್ರತಿನಿಧಿಗಳು ಸಮಾಜಕ್ಕೆ ಅವರ ವಿಶೇಷ ಉಪಕ್ರಮಗಳ ಬಗ್ಗೆ ಉಳಿದವರ ಜೊತೆ ಹಂಚಿಕೊಳ್ಳುವುದಕ್ಕೆ ಅವಕಾಶವೊದಗಲಿದೆ ಮತ್ತು ಅವರ ಬದುಕಿನ ಈ ಅಂಶದ ಬಗ್ಗೆ ದೇಶಕ್ಕೆ ತಿಳಿಸಲು ಸಾಧ್ಯವಾಗದೇ? ಜನ ಪ್ರತಿನಿಧಿಗಳ ಜೊತೆಗೆ ಸಮಾಜದ ಇತರ ಜನರಿಗೂ ಇದರಿಂದ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. ರಾಜಕೀಯದ ರಚನಾತ್ಮಕ ಕೊಡುಗೆ ಕೂಡಾ ಜನರಿಗೆ ತಿಳಿದಂತಾಗುತ್ತದೆ. ರಚನಾತ್ಮಕ ಕೆಲಸದಲ್ಲಿ ತೊಡಗಿದ್ದೂ ರಾಜಕೀಯದಿಂದ ದೂರ ಉಳಿದವರಿಗೆ ಮತ್ತು ಇಂತಹ ಶ್ರೇಷ್ಟ ಕಾರ್ಯವನ್ನು ಮಾಡುತ್ತಿರುವವರಿಗೆ ರಾಜಕೀಯಕ್ಕೆ ಸೇರಲು ಅವಕಾಶವಾದಂತಾಗುತ್ತದೆ ಮತ್ತು ಆಗ ರಾಜಕೀಯವೂ ಸಮೃದ್ಧವಾಗುತ್ತದೆ.  ಇಂತಹ ಅನುಭವಗಳನ್ನು ಪರಿಶೀಲಿಸಲು ಮತ್ತು ಯಾರಿಗೆ ಅವರ ಅಭಿಮತಗಳನ್ನು ಮಂಡಿಸಲು ಅವಕಾಶ ನೀಡಬೇಕು ಎಂಬುದನ್ನು ನಿರ್ಧರಿಸಲು ಸಣ್ಣ ಸಮಿತಿಗಳನ್ನು ರಚನೆ ಮಾಡಬೇಕು ಎಂಬುದು ನನ್ನ ಚಿಂತನೆ. ಆಗ ಬಹಳಷ್ಟು ಗುಣಾತ್ಮಕ ಬದಲಾವಣೆಗಳು ಬರುವ ಸಾಧ್ಯತೆ ಇದೆ. ಅತ್ಯುತ್ತಮವಾದುದನ್ನು  ಹೇಗೆ ಶೋಧಿಸಬೇಕು ಮತ್ತು ಅದನ್ನು  ಹೇಗೆ ಜನರ ಮುಂದಿಡಬೇಕು ಎಂಬುದು ಅಧ್ಯಕ್ಷೀಯ ಅಧಿಕಾರಿಗಳಿಗೆ ಬಹಳ ಚೆನ್ನಾಗಿ ತಿಳಿದಿರುತ್ತದೆ. ಇಂತಹ ಘಟನೆಗಳು ಉಳಿದ ಸದಸ್ಯರಿಗೂ ರಾಜಕೀಯಕ್ಕಿಂತ ಭಿನ್ನವಾದುದನ್ನು ಮಾಡುವುದಕ್ಕೆ ಪ್ರೇರೇಪಣೆ ನೀಡುತ್ತವೆ ಮತ್ತು ಇದೇ ಸಮಯದಲ್ಲಿ ದೇಶಕ್ಕೂ ಇಂತಹ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ಲಭಿಸುತ್ತದೆ.

ಸ್ನೇಹಿತರೇ,

ಗುಣಮಟ್ಟದ ಚರ್ಚೆಯನ್ನು ನಡೆಸಲು ನಾವು ಸದಾ ಹೊಸತೇನನ್ನಾದರೂ ಮಾಡಬೇಕಾಗುತ್ತದೆ. ಚರ್ಚೆಗೆ ಮೌಲ್ಯಗಳನ್ನು ಸೇರಿಸುವುದು ಹೇಗೆ ಮತ್ತು ಗುಣಮಟ್ಟದ ಚರ್ಚೆಗೆ ಹೊಸ ಮಾನದಂಡಗಳನ್ನು ನಿಗದಿ ಮಾಡುವುದು ಹೇಗೆ?. ನಾವು ಗುಣಮಟ್ಟದ ಚರ್ಚೆಗಾಗಿ ಸಮಯವನ್ನು ಪ್ರತ್ಯೇಕವಾಗಿ ನಿಗದಿ ಮಾಡುವ ಬಗ್ಗೆ ಚಿಂತಿಸಬಹುದೇ?. ಘನತೆ ಮತ್ತು ಗಂಭೀರತೆ ಇರುವ ಇಂತಹ ಚರ್ಚೆ ಮತ್ತು ಅಲ್ಲಿ ರಾಜಕೀಯ ನಿಂದೆ ಇರಬಾರದು. ಈ ರೀತಿಯಲ್ಲಿ ಅದು ಶಾಸಕಾಂಗದ ಅತ್ಯಂತ ಆರೋಗ್ಯಪೂರ್ಣ ಸಮಯ ಆಗುವಂತಾಗಬೇಕು. ನಾನು ಪ್ರತಿಯೊಬ್ಬರನ್ನೂ ಕೇಳುತ್ತಿಲ್ಲ. ಅದು ಎರಡು ಗಂಟೆಗಳ ಅವಧಿ, ಅರ್ಧ ದಿನದ ಕಾಲಾವಧಿ ಅಥವಾ ದಿನದ ಅವಧಿ ಆಗಬಹುದು. ಇಂತಹ ಕೆಲವು ಸಂಗತಿಗಳ ಬಗ್ಗೆ ನಾವು ಪ್ರಯತ್ನ ಮಾಡಬಹುದಲ್ಲವೇ?. ಅದು ಆರೋಗ್ಯ ಪೂರ್ಣ ದಿನವಾಗಬೇಕು, ಆರೋಗ್ಯ ಪೂರ್ಣ ಚರ್ಚೆಯಾಗಬೇಕು. ಮತ್ತು ಗುಣಮಟ್ಟದ ಚರ್ಚೆಯಾಗಬೇಕು. ಮೌಲ್ಯವರ್ಧನೆ ಮಾಡುವ ಚರ್ಚೆಯಾಗಬೇಕು ಮತ್ತು ಅದು ದೈನಂದಿನ ರಾಜಕೀಯದಿಂದ ಸಂಪೂರ್ಣ ಮುಕ್ತವಾಗಿರಬೇಕು.

ಸ್ನೇಹಿತರೇ,

ನಿಮಗೂ ಬಹಳ ಚೆನ್ನಾಗಿ ತಿಳಿದಿದೆ, ಸಂಸತ್ತು ಅಥವಾ ದೇಶದ ಯಾವುದೇ ರಾಜ್ಯಗಳ ವಿಧಾನಸಭೆ ಹೊಸ ಅವಧಿಯನ್ನು ಆರಂಭ ಮಾಡುವಾಗ, ಅನೇಕ ಸದಸ್ಯರು ಮೊದಲ ಬಾರಿಗೆ ಆಯ್ಕೆಯಾದಂತಹವರಾಗಿರುತ್ತಾರೆ. ರಾಜಕೀಯದಲ್ಲಿ ಆಗಾಗ ಬದಲಾವಣೆಗಳಾಗುತ್ತಿರುತ್ತವೆ. ಮತ್ತು ಜನರೂ ಸತತವಾಗಿ ಹೊಸ ಶಕ್ತಿಯನ್ನು ಹೊಂದಿರುವ ಹೊಸಬರಿಗೆ ಅವಕಾಶಗಳನ್ನು ಕೊಡುತ್ತಿರುತ್ತಾರೆ. ಜನರ ಪ್ರಯತ್ನದಿಂದಾಗಿ ಶಾಸಕಾಂಗದಲ್ಲಿ ಸದಾ ತಾಜಾತನ ಇರುತ್ತದೆ ಮತ್ತು ಹೊಸ ಉತ್ಸಾಹ ಇರುತ್ತದೆ. ಈ ತಾಜಾತನವನ್ನು ನಾವು ಹೊಸ ವೈಧಾನಿಕತೆಯನ್ನಾಗಿ ಪರಿವರ್ತಿಸಬೇಕೇ ಬೇಡವೇ?. ನನಗನಿಸುತ್ತದೆ ಬದಲಾವಣೆ ಅವಶ್ಯ. ಇದಕ್ಕಾಗಿ ಹೊಸ ಸದಸ್ಯರಿಗೆ ಸದನಕ್ಕೆ ಸಂಬಂಧಿಸಿ ವ್ಯವಸ್ಥಿತವಾದ ತರಬೇತಿ ನೀಡುವುದು ಅವಶ್ಯಕ ಮತ್ತು ಅವರಿಗೆ ಸದನದ ಘನತೆಯ ಬಗ್ಗೆ ತಿಳಿಸಿಕೊಡುವುದೂ ಅಗತ್ಯ. ಪಕ್ಷಗಳ ನಡುವೆ ನಿರಂತರ ಮಾತುಕತೆ ನಡೆಸುವುದಕ್ಕೆ ನಾವು ಒತ್ತು ಕೊಡಬೇಕು. ಮತ್ತು ರಾಜಕೀಯಕ್ಕೆ ಹೊಸ ಮಾನದಂಡಗಳನ್ನು ನಿಗದಿ ಮಾಡಬೇಕು. ಇದರಲ್ಲಿ ಅಧ್ಯಕ್ಷಾಧಿಕಾರಿಗಳ ಪಾತ್ರ ಬಹಳ ಮುಖ್ಯವಾದುದು.

ಸ್ನೇಹಿತರೇ,

ಸದನದ ಉತ್ಪಾದಕತೆಯನ್ನು ಹೆಚ್ಚಿಸುವ ಆದ್ಯತೆಯೂ ನಮ್ಮ ಮುಂದಿದೆ. ಸದನದಲ್ಲಿ ಶಿಸ್ತಿನ ಜೊತೆ ಸ್ಥಾಪಿತವಾಗಿರುವಂತಹ ನಿಯಮಗಳಿಗೆ ಬದ್ಧವಾಗಿರುವುದೂ ಅಷ್ಟೇ ಅವಶ್ಯ. ನಮ್ಮಲ್ಲಿ ಕಾನೂನುಗಳು ಜನರ ಹಿತಾಸಕ್ತಿಗೆ ನೇರವಾಗಿ ಸಂಬಂಧಪಟ್ಟಿದ್ದರೆ ಮಾತ್ರ ಮೇಲುಗೈ ಸಾಧಿಸುತ್ತವೆ. ಆದುದರಿಂದ ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯುವುದು ಅವಶ್ಯ. ಸದನದಲ್ಲಿರುವ ಯುವ ಸದಸ್ಯರು, ಆಶೋತ್ತರ ಪ್ರದೇಶಗಳ ಜನ ಪ್ರತಿನಿಧಿಗಳು, ಮತ್ತು ಮಹಿಳೆಯರಿಗೆ ಗರಿಷ್ಟ ಅವಕಾಶಗಳು ದೊರೆಯಬೇಕು. ಅದೇ ರೀತಿ ನಮ್ಮ ಸಮಿತಿಗಳನ್ನು ಹೆಚ್ಚು ಪ್ರಾಯೋಗಿಕವನ್ನಾಗಿಸಬೇಕು ಮತ್ತು ಪ್ರಸ್ತುತವನ್ನಾಗಿಸಬೇಕು. ದೇಶದ ಸಮಸ್ಯೆಗಳನ್ನು ತಿಳಿಯುವುದಕ್ಕೆ ಇದರಿಂದ ಸುಲಭವಾಗುವುದು ಮಾತ್ರವಲ್ಲ, ಹೊಸ ಚಿಂತನೆಗಳೂ ಸದನವನ್ನು ತಲುಪುತ್ತವೆ.

ಸ್ನೇಹಿತರೇ,

ದೇಶವು “ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್” ನಂತಹ ಹಲವಾರು ವ್ಯವಸ್ಥೆಗಳನ್ನು ಜಾರಿಗೆ ತಂದಿರುವುದು ನಿಮಗೆಲ್ಲ ತಿಳಿದಿದೆ. ಕೆಲ ವರ್ಷಗಳಲ್ಲಿ ’ಒಂದು ರಾಷ್ಟ್ರ, ಒಂದು ಮೊಬಿಲಿಟಿ ಕಾರ್ಡ್’ ಜಾರಿಗೆ ತರಲಾಗಿದೆ. ನಮ್ಮ ಜನರೂ ಇಂತಹ ಸೌಲಭ್ಯಗಳ ಜೊತೆ ಜೋಡಿಸಲ್ಪಡುತ್ತಿದ್ದಾರೆ. ಮತ್ತು ಇಡೀ ದೇಶ ಒಟ್ಟಾಗಿ ಹೊಸ ಅನುಭವವನ್ನು ಪಡೆಯುತ್ತಿದೆ. ದೇಶವು ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಜೋಡಿಸಲ್ಪಟ್ಟಿದೆ. ನಮ್ಮೆಲ್ಲಾ ಶಾಸಕರು ಮತ್ತು ರಾಜ್ಯಗಳು ಈ ಪುಣ್ಯಕರ ಸಂದರ್ಭದಲ್ಲಿ ಇದರ ಬಗ್ಗೆ ವ್ಯಾಪಕ ಪ್ರಚಾರಾಂದೋಲನ ಕೈಗೊಳ್ಳಬೇಕು ಎಂಬುದು ನನ್ನ ಆಶಯವಾಗಿದೆ. “ಒಂದು ದೇಶ, ಒಂದು ಶಾಸಕಾಂಗ ವೇದಿಕೆ” ಎಂಬ ಚಿಂತನೆ ನನ್ನಲ್ಲಿದೆ. ಅದು ಸಾಧ್ಯವೇ?.ಇಂತಹ ಡಿಜಿಟಲ್ ವೇದಿಕೆ ನಮ್ಮ ಸಂಸತ್ ವ್ಯವಸ್ಥೆಗೆ ಅವಶ್ಯವಾದ ತಾಂತ್ರಿಕ ಬಲವನ್ನು ನೀಡುವುದು ಮಾತ್ರವಲ್ಲದೆ ದೇಶದ ಎಲ್ಲಾ ಪ್ರಜಾಸತ್ತಾತ್ಮಕ ಘಟಕಗಳನ್ನು ಜೋಡಿಸುವ ನಿಟ್ಟಿನಲ್ಲಿಯೂ ಕಾರ್ಯಾಚರಿಸುತ್ತದೆ. ನಿಮ್ಮ ಶಾಸಕಾಂಗಕ್ಕೆ ಸಂಬಂಧಿಸಿದ ಎಲ್ಲಾ ಸಂಪನ್ಮೂಲ ಈ ಪೋರ್ಟಲಿನಲ್ಲಿ ಲಭ್ಯ ಇರಬೇಕು. ಮತ್ತು ಕೇಂದ್ರ ಹಾಗು ರಾಜ್ಯ ಶಾಸಕಾಂಗಗಳು ಕಾಗದರಹಿತವಾಗಿ ಕೆಲಸ ಮಾಡುವಂತಾಗಬೇಕು. ಅಧ್ಯಕ್ಷೀಯ ಅಧಿಕಾರಿಗಳು ಈ ವ್ಯವಸ್ಥೆಯನ್ನು  ಲೋಕ ಸಭೆಯ ಗೌರವಾನ್ವಿತ ಸ್ಪೀಕರ್ ಮತ್ತು ರಾಜ್ಯ ಸಭೆಯ ಉಪ ಸಭಾಪತಿ ಅವರ ನಾಯಕತ್ವದಲ್ಲಿ ಮುಂದಕ್ಕೆ ಕೊಂಡೊಯ್ಯಬೇಕು. ನಮ್ಮ ಸಂಸತ್ತಿನ ಮತ್ತು ಎಲ್ಲಾ ಶಾಸಕಾಂಗಗಳ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡುತ್ತಿರುವ ಚಾಲ್ತಿಯಲ್ಲಿರುವ ಕಾರ್ಯ  ಮತ್ತು ಅವುಗಳು ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸವನ್ನು ತ್ವರಿತಗೊಳಿಸಬೇಕು.

ಸ್ನೇಹಿತರೇ,

ಸ್ವಾತಂತ್ರ್ಯದ ಈ ಪುಣ್ಯಕರ ಅವಧಿಯಲ್ಲಿ, ನಾವು ಸ್ವಾತಂತ್ರ್ಯದ 100 ವರ್ಷಗಳತ್ತ ತ್ವರಿತವಾಗಿ ಸಾಗುತ್ತಿದ್ದೇವೆ. 75 ವರ್ಷಗಳ ನಿಮ್ಮ ಪ್ರಯಾಣ ಹೇಗೆ ಕಾಲ ತ್ವರಿತವಾಗಿ ಬದಲಾಗುತ್ತಿದೆ ಎಂಬುದಕ್ಕೆ ಒಂದು ಸಾಕ್ಷಿ. ಮುಂದಿನ 25 ವರ್ಷಗಳು ಭಾರತಕ್ಕೆ ಬಹಳ ಮುಖ್ಯ. ಆದುದರಿಂದ ಈ ಪುಣ್ಯಕರ ಅವಧಿ, 25 ವರ್ಷಗಳು, ಬಹಳ ಮಹತ್ವದ್ದು. ನಾವು ಒಂದು ಮಂತ್ರವನ್ನು ಪೂರ್ಣ ಶಕ್ತಿ, ಅರ್ಪಣಾಭಾವ ಮತ್ತು ಜವಾಬ್ದಾರಿಯಿಂದ ಕೈಗೊಳ್ಳಬಹುದೇ?. ನನ್ನ ದೃಷ್ಟಿಯಿಂದ ಹೇಳುವುದಾದರೆ ಆ ಮಂತ್ರ ಕರ್ತವ್ಯ ಮತ್ತು ಕರ್ತವ್ಯ ಮಾತ್ರ. ಸದನದಲ್ಲಿ ಕರ್ತವ್ಯದ ಭಾವನೆ ಇರಬೇಕು. ಸದನವು ಕರ್ತವ್ಯದ ಸಂದೇಶಗಳನ್ನು ಕಳುಹಿಸಬೇಕು. ಸದಸ್ಯರ ಭಾಷಣಗಳಲ್ಲಿ ಕರ್ತವ್ಯದ ಭಾವನೆ, ಜ್ಞಾನ  ಇರಬೇಕು. ಅವರ ವರ್ತನೆಯಲ್ಲಿ ಕರ್ತವ್ಯದ ಸಂಸ್ಕೃತಿ ಇರಬೇಕು, ಅಲ್ಲಿ ಶತಮಾನಗಳ ಜೀವನ ವಿಧಾನದ ಸಂಪ್ರದಾಯ ಇರಬೇಕು. ಸದಸ್ಯರ ಗುಣ ನಡತೆಯಲ್ಲಿ ಕೂಡಾ ಕರ್ತವ್ಯ ಮೊದಲು ಎಂಬ ಪ್ರಜ್ಞೆ ಇರಬೇಕು. ಚರ್ಚೆಗಳಲ್ಲಿಯೂ ಕರ್ತವ್ಯಕ್ಕೆ ಮೊದಲ ಆದ್ಯತೆ ಇರಬೇಕು. ಪ್ರತಿಯೊಂದರಲ್ಲಿಯೂ ಕರ್ತವ್ಯ ಅಗ್ರಗಣ್ಯ, ಅಗ್ರಮಾನ್ಯವಾಗಿರಬೇಕು. ಪ್ರತಿಯೊಂದರಲ್ಲೂ ಕರ್ತವ್ಯದ ಪ್ರಜ್ಞೆ ಇರಬೇಕು. ಮುಂದಿನ 25 ವರ್ಷ ಕಾಲ ನಮ್ಮ ಕಾರ್ಯವೈಖರಿಯಲ್ಲಿ ಪ್ರತೀ ಹಂತದಲ್ಲಿಯೂ ಕರ್ತವ್ಯಕ್ಕೆ ಆದ್ಯ ಗಮನ ಕೊಡಬೇಕು. ನಮ್ಮ ಸಂವಿಧಾನ ಕೂಡಾ ನಮಗೆ ಇದನ್ನೇ ಹೇಳುತ್ತದೆ. ಸದನಗಳಿಂದ ಈ ಸಂದೇಶವನ್ನು ಪದೇ ಪದೇ ಕಳುಹಿಸಲ್ಪಟ್ಟಾಗ ಅದರಿಂದ ಇಡೀ ದೇಶದ ಮೇಲೆ ಮತ್ತು ದೇಶದ ಪ್ರತೀ ನಾಗರಿಕರ ಮೇಲೆ ಪರಿಣಾಮವುಂಟಾಗುತ್ತದೆ. ದೇಶವು ಕಳೆದ 75 ವರ್ಷಗಳಲ್ಲಿ ಸಾಧಿಸಿದ ಪ್ರಗತಿಯ ವೇಗ ನೋಡಿದಾಗ, ದೇಶವನ್ನು ಹಲವು ಪಟ್ಟು ದರದಲ್ಲಿ ಮುನ್ನಡೆ ಸಾಧಿಸುವಂತೆ ಮಾಡಲು ಇರುವ ಮಂತ್ರ ಎಂದರೆ-ಅದು ಕರ್ತವ್ಯ. 130 ಕೋಟಿ ದೇಶವಾಸಿಗಳ ದೃಢನಿರ್ಧಾರಗಳನ್ನು ಈಡೇರಿಸುವಲ್ಲಿಯೂ  ಕರ್ತವ್ಯವಿದೆ !.  ಸಂಸತ್ ವ್ಯವಸ್ಥೆಯ  ನೂರು ವರ್ಷಗಳ ಈ ಹೊಸ ಉಪಕ್ರಮಕ್ಕಾಗಿ ನಿಮಗೆ ಶುಭ ಹಾರೈಕೆಗಳು. ಈ ಶೃಂಗ ಬಹಳ ಯಶಸ್ಸನ್ನು ಸಾಧಿಸಲಿ!. 2047 ರಲ್ಲಿ ದೇಶವನ್ನು ಎಲ್ಲಿಗೆ ಕೊಂಡೊಯ್ಯಬೇಕು ಎಂಬ ಬಗ್ಗೆ ಸ್ಪಷ್ಟವಾದ ರೂಪುರೇಖೆಯನ್ನು ನೀವು ತಯಾರಿಸುವಂತಾಗಲಿ. ಮತ್ತು ಅದರಲ್ಲಿ ಶಾಸಕಾಂಗಗಳ ಪಾತ್ರ ಏನು ಎಂಬುದನ್ನು ತಿಳಿಸುವಂತಾಗಲಿ. ಇದು ದೇಶಕ್ಕೆ ಬಹಳ ಶಕ್ತಿಯನ್ನು ತಂದುಕೊಡುತ್ತದೆ. ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸುತ್ತೇನೆ ಮತ್ತು ಬಹಳ ಬಹಳ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.