3000 ತಾಂಡಾ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಮಾರ್ಪಟ್ಟಿರುವುದಕ್ಕೆ ಬಂಜಾರ ಸಮುದಾಯಕ್ಕೆ ಅಭಿನಂದನೆ
"ಭಗವಾನ್ ಬಸವೇಶ್ವರರ ಆದರ್ಶಗಳಿಂದ ಪ್ರೇರಿತರಾಗಿ, ನಾವು ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ"
"ದಲಿತರು, ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ದಿವ್ಯಾಂಗರು, ಮಕ್ಕಳು, ಮಹಿಳೆಯರು ಮೊದಲ ಬಾರಿಗೆ ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ. ಅವರು ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಮತ್ತು ಅವುಗಳನ್ನು ತ್ವರಿತವಾಗಿ ಪಡೆಯುತ್ತಿದ್ದಾರೆ.
"ನಾವು ಜನರನ್ನು ಸಬಲೀಕರಣಗೊಳಿಸಲು ಸ್ಪಷ್ಟ ಕಾರ್ಯತಂತ್ರದೊಂದಿಗೆ ಶ್ರಮಿಸುತ್ತಿದ್ದೇವೆ".
"ಮೂಲಭೂತ ಅಗತ್ಯಗಳನ್ನು ಪೂರೈಸಿದಾಗ ಮತ್ತು ಘನತೆಯನ್ನು ಮರುಸ್ಥಾಪಿಸಿದಾಗ, ಜನರು ದೈನಂದಿನ ಅನಿಶ್ಚಿತತೆಗಳನ್ನು ಮೀರಿ ಜೀವನ ಮಟ್ಟವನ್ನು ಹೆಚ್ಚಿಸಲು ಶ್ರಮಿಸುವುದರಿಂದ ಹೊಸ ಆಕಾಂಕ್ಷೆಗಳು ಹುಟ್ಟುತ್ತವೆ".
"ಜನ್ ಧನ್ ಯೋಜನೆ ಹಣಪೂರಣದಲ್ಲಿ ಕ್ರಾಂತಿಯನ್ನುಂಟು ಮಾಡಿದೆ".
"ಡಬಲ್ ಎಂಜಿನ್ ಸರ್ಕಾರವು ಭಾರತದಲ್ಲಿ ವಾಸಿಸುವ ಪ್ರತಿಯೊಂದು ಸಮಾಜದ ಸಂಪ್ರದಾಯ, ಸಂಸ್ಕೃತಿ, ಆಹಾರ ಮತ್ತು ಉಡುಪನ್ನು ನಮ್ಮ ಶಕ್ತಿ ಎಂದು ಪರಿಗಣಿಸುತ್ತದೆ".

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

कर्नाटका तांडेर, मार गोर बंजारा बाई-भिया, नायक, डाव, कारबारी, तमनोन हाथ जोड़ी राम-रामी!
जय सेवालाल महाराज! जय सेवालाल महाराज! जय सेवालाल महाराज! कलबुर्गी-या, श्री शरण बसवेश्वर, मत्तू, गाणगापुरादा गुरु दत्तात्रेयरिगे, नन्ना नमस्कारगड़ू! प्रख्याता, राष्ट्रकूटा साम्राज्यदा राजधानी-गे मत्तू, कन्नडा नाडिना समस्त जनते-गे नन्ना नमस्कारगड़ू!

ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಜೀ ಗೆಹ್ಲೋಟ್, ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಭಗವಂತ ಖೂಬಾ ಜೀ, ಕರ್ನಾಟಕ ಸರ್ಕಾರದ ಮಂತ್ರಿಗಳು, ಸಂಸತ್ ಸದಸ್ಯರು ಮತ್ತು ಶಾಸಕರೇ ಹಾಗು  ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು  ಸಹೋದರಿಯರೇ!

2023ನೇ ಇಸವಿ ಈಗಷ್ಟೇ ಆರಂಭವಾಗಿದೆ. ಇದು ಜನವರಿ ತಿಂಗಳು ಮತ್ತು ಜನವರಿ ತಿಂಗಳು ಸ್ವತಃ ಬಹಳ ವಿಶೇಷವಾಗಿದೆ. ನಮ್ಮ ದೇಶದ ಸಂವಿಧಾನವು ಜನವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಸ್ವತಂತ್ರ ಭಾರತದಲ್ಲಿ ದೇಶವಾಸಿಗಳಿಗೆ ಅವರ ಹಕ್ಕುಗಳ ಬಗ್ಗೆ ಭರವಸೆ ನೀಡಲಾಯಿತು. ಇಂತಹ ಪವಿತ್ರ ತಿಂಗಳಲ್ಲಿ, ಇಂದು ಕರ್ನಾಟಕ ಸರ್ಕಾರವು ಸಾಮಾಜಿಕ ನ್ಯಾಯಕ್ಕಾಗಿ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ಕರ್ನಾಟಕದ ಲಕ್ಷಾಂತರ ಬಂಜಾರ ಮಿತ್ರರಿಗೆ ಇಂದು ಮಹತ್ವದ ದಿನ. ಇದೇ ಮೊದಲ ಬಾರಿಗೆ 50,000 ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಸ್ವಂತ ಮನೆಯ ಹಕ್ಕು ಪತ್ರವನ್ನು ಪಡೆದುಕೊಂಡಿವೆ. ಇದು ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ತಾಂಡಾ ಜನವಸತಿ ಪ್ರದೇಶಗಳಲ್ಲಿ  ವಾಸಿಸುವ ಅಲೆಮಾರಿ ಕುಟುಂಬಗಳ ಸಾವಿರಾರು ಸ್ನೇಹಿತರು, ಪುತ್ರರು ಮತ್ತು ಹೆಣ್ಣುಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುತ್ತದೆ. ಕರ್ನಾಟಕ ಸರ್ಕಾರವು 3000 ಕ್ಕೂ ಹೆಚ್ಚು ತಾಂಡಾ ಜನವಸತಿಗಳಿಗೆ  ಕಂದಾಯ ಗ್ರಾಮ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಶ್ಲಾಘನೀಯ ಹೆಜ್ಜೆಗಾಗಿ ನಾನು ಶ್ರೀ ಬೊಮ್ಮಾಯಿ ಜೀ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ಸಹೋದರರೇ ಮತ್ತು  ಸಹೋದರಿಯರೇ,

ಈ ಪ್ರದೇಶ ಮತ್ತು ಬಂಜಾರ ಸಮಾಜ ನನಗೆ ಹೊಸದೇನಲ್ಲ, ಏಕೆಂದರೆ ರಾಜಸ್ಥಾನದಿಂದ ಪಶ್ಚಿಮ ಭಾರತದವರೆಗಿನ ನಮ್ಮ ಬಂಜಾರ ಸಮುದಾಯದ ಸಹೋದರ ಸಹೋದರಿಯರು ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮತ್ತು ಬಹಳ ಹಿಂದಿನಿಂದಲೂ ಅವರೊಂದಿಗಿನ  ಸಹವಾಸದ ಸಂತೋಷವನ್ನು ನಾನು ಪಡೆದಿದ್ದೇನೆ.  1994 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಮೆರವಣಿಗೆಗಾಗಿ  ನನ್ನನ್ನು ಕರೆಯಲಾಯಿತು ಎಂಬುದು ನನಗೆ ಸ್ಪಷ್ಟವಾಗಿ ನೆನಪಿದೆ. ಆ ಮೆರವಣಿಗೆಯಲ್ಲಿ  ನಮ್ಮ ಲಕ್ಷಾಂತರ ಬಂಜಾರ ಸಹೋದರ ಸಹೋದರಿಯರನ್ನು ನೋಡಿದ ಆ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಲಕ್ಷಾಂತರ ಬಂಜಾರ ಮಾತೆಯರು  ಮತ್ತು ಸಹೋದರಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ನನ್ನನ್ನು ಆಶೀರ್ವದಿಸಲು ಬಂದಿದ್ದರು. ಇಂದು, ನಿಮ್ಮೆಲ್ಲರಿಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ನಡೆದಿರುವ  ಈ ಪ್ರಯತ್ನವನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಶತಮಾನಗಳ ಹಿಂದೆ ಬಸವಣ್ಣನವರು ದೇಶಕ್ಕೆ ಮತ್ತು ಜಗತ್ತಿಗೆ ನೀಡಿದ ಉತ್ತಮ ಆಡಳಿತ ಮತ್ತು ಸಾಮರಸ್ಯದ ಮಾರ್ಗವನ್ನು ಡಬಲ್ ಇಂಜಿನ್ ಸರ್ಕಾರ ಆರಿಸಿಕೊಂಡಿದೆ. ಬಸವಣ್ಣನವರು ಅನುಭವ ಮಂಟಪದಂತಹ ವೇದಿಕೆಗಳ ಮೂಲಕ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾದರಿಯನ್ನು ವಿಶ್ವದ ಮುಂದೆ ಪ್ರಸ್ತುತಪಡಿಸಿದ್ದರು. ಅವರು ಸಮಾಜದಲ್ಲಿನ ತಾರತಮ್ಯದಿಂದ ಮುಕ್ತರಾಗುವ  ಮೂಲಕ ಎಲ್ಲರ ಸಬಲೀಕರಣದ ಮಾರ್ಗವನ್ನು ನಮಗೆ ತೋರಿಸಿದರು. 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಮಂತ್ರವು ಬಸವೇಶ್ವರರು ನಮಗೆ ನೀಡಿದ ಅದೇ ಸ್ಫೂರ್ತಿಯನ್ನು ಹೊಂದಿದೆ. ಇಂದು ಕಲಬುರಗಿಯಲ್ಲಿ ಈ ಉತ್ಸಾಹದ ವಿಸ್ತರಣೆಯನ್ನು ನಾವು ನೋಡಬಹುದು.

ಸ್ನೇಹಿತರೇ,

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾದ ನಮ್ಮ ಬಂಜಾರ ಸಮುದಾಯವು ದಶಕಗಳಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ. ಈಗ ಪ್ರತಿಯೊಬ್ಬರೂ ಹೆಮ್ಮೆ ಮತ್ತು ಘನತೆಯಿಂದ ಬದುಕುವ ಸಮಯ. ನಾನು ಈಗ ಬಂಜಾರ ಕುಟುಂಬವನ್ನು ಭೇಟಿಯಾದಾಗ, ಒಬ್ಬ ತಾಯಿ ನನ್ನನ್ನು ಆಶೀರ್ವದಿಸುತ್ತಿದ್ದ ರೀತಿ, ಅವಳು ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ರೀತಿ, ಆ ಆಶೀರ್ವಾದಗಳು ಸಮಾಜಕ್ಕಾಗಿ ಬದುಕಲು ಮತ್ತು ಸಾಯಲು ಅಪಾರ ಶಕ್ತಿಯನ್ನು ನೀಡುತ್ತವೆ. ಮುಂಬರುವ ವರ್ಷಗಳಲ್ಲಿ ಈ ಸಮುದಾಯಗಳ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ನೂರಾರು ಕೋಟಿ ರೂಪಾಯಿಗಳ ವಿಶೇಷ ಪ್ರಸ್ತಾವನೆಯನ್ನು ಸಹ ಮಾಡಲಾಗಿದೆ. ಬಂಜಾರ ಸಮುದಾಯದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅಂತಹ ಸಮುದಾಯಗಳಿಗೆ ಜೀವನೋಪಾಯದ ಹೊಸ ಸಾಧನಗಳನ್ನು ಸಹ ಸೃಷ್ಟಿಸಲಾಗುತ್ತಿದೆ. . ಕೊಳೆಗೇರಿಗಳ ಬದಲು ಪಕ್ಕಾ ಮನೆಗಳನ್ನು ಪಡೆಯಲು ಈ ಸ್ನೇಹಿತರಿಗೆ ಸಹಾಯವನ್ನು ಸಹ ನೀಡಲಾಗುತ್ತಿದೆ. ಬಂಜಾರ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಶಾಶ್ವತ ವಿಳಾಸ ಮತ್ತು ಶಾಶ್ವತ ವಸತಿಯ ಕೊರತೆಯಿಂದಾಗಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ಇಂದಿನ ಘಟನೆಯು ಈ ಪರಿಹಾರದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದನ್ನು 1993 ರಲ್ಲಿ ಅಂದರೆ ಮೂರು ದಶಕಗಳ ಹಿಂದೆ ಶಿಫಾರಸು ಮಾಡಲಾಯಿತು. ಆದರೆ ಗರಿಷ್ಠ ಅವಧಿಗೆ ಇಲ್ಲಿ ಆಡಳಿತ ನಡೆಸಿದ ಪಕ್ಷವು ಮತ ಬ್ಯಾಂಕುಗಳನ್ನು ರಚಿಸುವತ್ತ ಮಾತ್ರ ಗಮನ ಹರಿಸಿತು. ಈ ನಿರ್ಲಕ್ಷಿತ ಕುಟುಂಬಗಳ ಜೀವನವನ್ನು ಸುಲಭಗೊಳಿಸುವ ಬಗ್ಗೆ ಅದು ಎಂದಿಗೂ ಯೋಚಿಸಲಿಲ್ಲ. ತಾಂಡಾದಲ್ಲಿ ವಾಸಿಸುವ ಜನರು ತಮ್ಮ ಹಕ್ಕುಗಳಿಗಾಗಿ ದೀರ್ಘಕಾಲದಿಂದ ಹೋರಾಡಿದ್ದಾರೆ ಮತ್ತು ಅನೇಕ ತೊಂದರೆಗಳನ್ನು ಎದುರಿಸಿದ್ದಾರೆ. ನೀವೆಲ್ಲರೂ ಬಹಳ ಸಮಯ ಕಾಯಬೇಕಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಆ ಹಳೆಯ ಉದಾಸೀನದ ವಾತಾವರಣವನ್ನು ಬದಲಾಯಿಸಿದೆ. ಇಂದು ನಾನು ಈ ಬಂಜಾರಾ ತಾಯಂದಿರಿಗೆ ನಿಮ್ಮ ಒಬ್ಬ ಮಗ ದೆಹಲಿಯಲ್ಲಿ ಕುಳಿತಿರುವುದರಿಂದ ಆರಾಮದಿಂದಿರಿ ಎಂಬ  ಭರವಸೆ ನೀಡಲು ಬಯಸುತ್ತೇನೆ.

ಈಗ ತಾಂಡಾ ಜನವಸತಿಗಳನ್ನು ಗ್ರಾಮಗಳಾಗಿ ಪರಿಗಣಿಸಲಾಗುತ್ತಿದೆ, ಇದು ಈ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ತ್ವರಿತ ಅಭಿವೃದ್ಧಿಗೆ ಕಾರಣವಾಗುತ್ತದೆ. ಈಗ ಕುಟುಂಬಗಳು ಶಾಂತಿಯುತವಾಗಿ ಬದುಕಲು ಸಾಧ್ಯವಾಗುತ್ತದೆ ಮತ್ತು ಅವರ ಮನೆಯ ಕಾನೂನು ಬದ್ಧ  ದಾಖಲೆಗಳನ್ನು ಪಡೆದ ನಂತರ ಬ್ಯಾಂಕುಗಳಿಂದ ಸಾಲ ಪಡೆಯುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ಮನೆಗಳಿಗೆ ಆಸ್ತಿ ಕಾರ್ಡ್ ಗಳನ್ನು ವಿತರಿಸುತ್ತಿದೆ. ಈಗ ಕರ್ನಾಟಕದ ಬಂಜಾರ ಸಮುದಾಯವೂ ಈ ಸೌಲಭ್ಯವನ್ನು ಪಡೆಯಲು ಪ್ರಾರಂಭಿಸುತ್ತದೆ. ಈಗ ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತದೆ ಮತ್ತು ಡಬಲ್ ಎಂಜಿನ್ ಸರ್ಕಾರದ ಪ್ರತಿಯೊಂದು ಕಲ್ಯಾಣ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈಗ ಕೊಳೆಗೇರಿಗಳಲ್ಲಿ ವಾಸಿಸುವ ಅನಿವಾರ್ಯವೂ  ನಿಮಗೆ ಗತಕಾಲದ ವಿಷಯದಂತಾಗಿ ಹೋಗಲಿದೆ. ಪಿಎಂ ಆವಾಸ್ ಯೋಜನೆ ಅಡಿಯಲ್ಲಿ, ಪಕ್ಕಾ ಮನೆ, ಮನೆಯಲ್ಲಿ ಶೌಚಾಲಯ, ವಿದ್ಯುತ್ ಸಂಪರ್ಕ, ನಲ್ಲಿ ನೀರು, ನೀರಿನ ಸಂಪರ್ಕದಿಂದ ಹಿಡಿದು ಗ್ಯಾಸ್ ಸ್ಟೌವ್ ವರೆಗೆ ಎಲ್ಲವೂ ನಿಮಗೆ ಲಭ್ಯವಿರುತ್ತದೆ.

ಸಹೋದರರೇ ಮತ್ತು  ಸಹೋದರಿಯರೇ,
ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದ ಬಂಜಾರ ಮಿತ್ರರಿಗೆ ಜೀವನೋಪಾಯದ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಈಗ ನೀವು ಅರಣ್ಯ ಉತ್ಪನ್ನಗಳು, ಒಣ ಮರ, ಜೇನುತುಪ್ಪ, ಹಣ್ಣುಗಳು ಇತ್ಯಾದಿಗಳಿಂದ ಸಂಪಾದಿಸುವ ಮಾರ್ಗಗಳನ್ನು ಸಹ ಪಡೆಯುತ್ತೀರಿ. ಹಿಂದಿನ ಸರ್ಕಾರಗಳು ಕೆಲವು ಅರಣ್ಯ ಉತ್ಪನ್ನಗಳಿಗೆ ಮಾತ್ರ ಎಂಎಸ್ ಪಿ ನೀಡುತ್ತಿದ್ದರೆ, ನಮ್ಮ ಸರ್ಕಾರ 90 ಕ್ಕೂ ಹೆಚ್ಚು ಅರಣ್ಯ ಉತ್ಪನ್ನಗಳಿಗೆ ಎಂಎಸ್ ಪಿ ನೀಡುತ್ತಿದೆ. ಈಗ ಕರ್ನಾಟಕ ಸರ್ಕಾರದ ನಿರ್ಧಾರದ ಬಳಿಕ  ತಾಂಡಾದಲ್ಲಿ ವಾಸಿಸುವ ನನ್ನ ಎಲ್ಲಾ ಕುಟುಂಬಗಳು ಕೂಡಾ ಅದರ ಪ್ರಯೋಜನವನ್ನು ಪಡೆಯುತ್ತವೆ.

ಸ್ನೇಹಿತರೇ,

ಸ್ವಾತಂತ್ರ್ಯದ ಹಲವಾರು ದಶಕಗಳ ಬಳಿಕವೂ ದೇಶದಲ್ಲಿ  ಅಭಿವೃದ್ಧಿಯಿಂದ ವಂಚಿತವಾದ ಮತ್ತು ಸರ್ಕಾರದ ಸಹಾಯದ ವ್ಯಾಪ್ತಿಯಿಂದ ಹೊರಗುಳಿದ ಬೃಹತ್ ಜನಸಮುದಾಯ ಇತ್ತು. ದೇಶವನ್ನು ದೀರ್ಘಕಾಲ ಆಳಿದವರು ಅಂತಹ ಸ್ನೇಹಿತರ ಮತಗಳನ್ನು ಕೇವಲ ಘೋಷಣೆಗಳನ್ನು ನೀಡುವ ಮೂಲಕ ಪಡೆದರು, ಆದರೆ ಅವರಿಗಾಗಿ ಅರ್ಥಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ದಲಿತರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು, ದಿವ್ಯಾಂಗರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ಅಂತಹ ಎಲ್ಲಾ ವಂಚಿತ ವರ್ಗಗಳು ಈಗ ಮೊದಲ ಬಾರಿಗೆ ತಮ್ಮ ಸಂಪೂರ್ಣ ಹಕ್ಕುಗಳನ್ನು ಪಡೆಯುತ್ತಿವೆ. ಸಬಲೀಕರಣಕ್ಕಾಗಿ ನಾವು ಸ್ಪಷ್ಟ ಕಾರ್ಯತಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ, ನಾವು 'ಅವಶ್ಯಕತ (ಅಗತ್ಯಗಳು), 'ಆಕಾಂಕ್ಷ' (ಆಕಾಂಕ್ಷೆ), 'ಅವಕಾಶ' (ಹೊಸ ಅವಕಾಶಗಳು) ಮತ್ತು ' ಗೌರವ' (ಹೆಮ್ಮೆ) ಮುಂತಾದ ಅಂಶಗಳತ್ತ ಗಮನ ಹರಿಸುತ್ತಿದ್ದೇವೆ. ಬಡವರು, ದಲಿತರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರು, ಅಂಗವಿಕಲರು ಮತ್ತು ಮಹಿಳೆಯರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಮತ್ತು ಶೌಚಾಲಯ, ವಿದ್ಯುತ್, ಅನಿಲ, ನೀರಿನ ಸಂಪರ್ಕವಿಲ್ಲದೆ ಕೊಳೆಗೇರಿಗಳಲ್ಲಿ ವಾಸಿಸುವ ಹೆಚ್ಚಿನ ಜನರು ಈ ಅವಕಾಶ ವಂಚಿತ ಸಮಾಜದಿಂದ ಬಂದವರು. ನಮ್ಮ ಸರ್ಕಾರ ಈಗ ಅವರಿಗೆ ಈ ಮೂಲಭೂತ ಸೌಲಭ್ಯಗಳನ್ನು ತ್ವರಿತವಾಗಿ  ನೀಡುತ್ತಿದೆ. ದುಬಾರಿ ಚಿಕಿತ್ಸೆಯಿಂದಾಗಿ ಈ ವರ್ಗವು ಆರೋಗ್ಯ ಸೌಲಭ್ಯಗಳಿಂದಲೂ  ವಂಚಿತವಾಗಿತ್ತು. ನಮ್ಮ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಖಾತರಿಪಡಿಸಿತು. ಈ ಮೊದಲು ಸರ್ಕಾರಿ ಪಡಿತರವು ದಲಿತರು, ಅವಕಾಶ ವಂಚಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಇಂದು ಈ ಕುಟುಂಬಗಳಿಗೆ ಉಚಿತ ಪಡಿತರವನ್ನು ಖಾತ್ರಿಪಡಿಸಲಾಗಿದೆ ಮತ್ತು ಪಡಿತರದ ಸರಬರಾಜು ಪಾರದರ್ಶಕವಾಗಿದೆ. ಮೂಲಭೂತ ಸೌಕರ್ಯಗಳು ಈಡೇರಿದಾಗ, ಹೆಮ್ಮೆಯ ಭಾವನೆ ಉಂಟಾಗುತ್ತದೆ ಮತ್ತು ಅದರ ಪರಿಣಾಮವಾಗಿ ಹೊಸ ಆಕಾಂಕ್ಷೆಗಳು ಹುಟ್ಟುತ್ತವೆ.

ಜನರು ತಮ್ಮ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ತಮ್ಮ ಕುಟುಂಬಗಳ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಾರೆ. ಈ ಆಕಾಂಕ್ಷೆಗಳನ್ನು ಈಡೇರಿಸಲು ನಾವು ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಮಾರ್ಗಗಳನ್ನು ಮಾಡಿದ್ದೇವೆ. ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳು ಎಂದಿಗೂ ಬ್ಯಾಂಕಿಗೆ ಭೇಟಿ ನೀಡದ ದೊಡ್ಡ ವಿಭಾಗವಾಗಿತ್ತು. ಜನ್ ಧನ್ ಬ್ಯಾಂಕ್ ಖಾತೆಗಳು ಕೋಟ್ಯಂತರ ದೀನದಲಿತರನ್ನು, ಅವಕಾಶ ವಂಚಿತರನ್ನು  ಬ್ಯಾಂಕ್ ಗಳೊಂದಿಗೆ ಜೋಡಿಸಿವೆ. ಎಸ್ಸಿ, ಎಸ್ಟಿ, ಒಬಿಸಿ ಮತ್ತು ಮಹಿಳೆಯರ ದೊಡ್ಡ ಜನಸಂಖ್ಯೆ ಇತ್ತು, ಅವರಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಕನಸಾಗಿತ್ತು. ಯಾರಾದರೂ ತಮ್ಮ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದಾಗ, ಬ್ಯಾಂಕುಗಳು ಬ್ಯಾಂಕ್ ಗ್ಯಾರಂಟಿಯನ್ನು ಕೇಳುತ್ತಿದ್ದವು? ಆದರೆ ಯಾರಾದರೂ ಒಬ್ಬರ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲದಿದ್ದರೆ, ಅವರು ಗ್ಯಾರಂಟಿ ನೀಡಲು ಹೇಗೆ ಸಾಧ್ಯ? ಆದ್ದರಿಂದ, ನಾವು ಮುದ್ರಾ ಯೋಜನೆಯ ರೂಪದಲ್ಲಿ ಖಾತರಿಯಿಲ್ಲದೆ ಸಾಲದ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇಂದು, ಮುದ್ರಾ ಯೋಜನೆ ಅಡಿಯಲ್ಲಿ ಎಸ್ಸಿ / ಎಸ್ಟಿ / ಒಬಿಸಿಗಳಿಗೆ ಸುಮಾರು 20 ಕೋಟಿ ಸಾಲಗಳನ್ನು ನೀಡಲಾಗಿದೆ ಮತ್ತು ಇದರ ಪರಿಣಾಮವಾಗಿ ಈ ವರ್ಗದಿಂದ ಹೊಸ ಉದ್ಯಮಿಗಳು ಹುಟ್ಟುತ್ತಿದ್ದಾರೆ. ಮುದ್ರಾ ಯೋಜನೆಯ ಸುಮಾರು 70 ಪ್ರತಿಶತದಷ್ಟು ಫಲಾನುಭವಿಗಳು ನಮ್ಮ ತಾಯಂದಿರು, ಸಹೋದರಿಯರು ಮತ್ತು ಮಹಿಳೆಯರು. ಅದೇ ರೀತಿ  ಹಿಂದಿನ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಂತೆ ಸಣ್ಣ ವ್ಯಾಪಾರ ಮಾಡುವವರ ಬಗ್ಗೆ ಕಾಳಜಿ ವಹಿಸಲಿಲ್ಲ. ಇಂದು, ಈ ಸ್ನೇಹಿತರು ಮೊದಲ ಬಾರಿಗೆ ಸ್ವನಿಧಿ ಯೋಜನೆಯ ಮೂಲಕ ಬ್ಯಾಂಕುಗಳಿಂದ ಕೈಗೆಟುಕುವ ದರದಲ್ಲಿ  ಮತ್ತು ಸುಲಭದಲ್ಲಿ  ಸಾಲವನ್ನು ಪಡೆಯುತ್ತಿದ್ದಾರೆ. ಈ ಎಲ್ಲಾ ಕ್ರಮಗಳು ದೀನದಲಿತರ ಆಕಾಂಕ್ಷೆಗಳನ್ನು ಈಡೇರಿಸುವ ಸಾಧನವಾಗುತ್ತಿವೆ. ಆದರೆ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 'ಅವಕಾಶ'ವನ್ನು ಅಂದರೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ ಮತ್ತು ಶೋಷಿತ ಸಮಾಜದ ಯುವಜನತೆಗೆ  ಹೊಸ ಆತ್ಮವಿಶ್ವಾಸವನ್ನು ನೀಡುತ್ತಿದ್ದೇವೆ.

ಸ್ನೇಹಿತರೇ,

ಮಹಿಳೆಯರ ಕಲ್ಯಾಣದ ಬಗ್ಗೆ ಸಂವೇದನಾಶೀಲವಾಗಿರುವ ನಮ್ಮ ಸರ್ಕಾರ ಇಂದು ಹೊಸ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬುಡಕಟ್ಟು ಕಲ್ಯಾಣದ ಬಗ್ಗೆ ಸಂವೇದನಾಶೀಲವಾಗಿರುವ ನಮ್ಮ ಸರ್ಕಾರವು ಬುಡಕಟ್ಟು ಸಮುದಾಯಗಳ ಕೊಡುಗೆ ಮತ್ತು ಅವರ ಹೆಮ್ಮೆಗೆ ರಾಷ್ಟ್ರೀಯ ಮನ್ನಣೆ ನೀಡಲು ಕೆಲಸ ಮಾಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ದಿವ್ಯಾಂಗರ ಹಕ್ಕುಗಳು ಮತ್ತು ಅವರ ಸೌಲಭ್ಯಗಳಿಗೆ ಸಂಬಂಧಿಸಿದ ಅನೇಕ ಅವಕಾಶಗಳನ್ನು, ಪ್ರಸ್ತಾವನೆಗಳನ್ನು ಸಹ ಮಾಡಲಾಗಿದೆ. ಇಂದು, ಸಮಾಜದ ಅಂಚಿನಲ್ಲಿರುವ ವರ್ಗಗಳ ಜನರು ಮೊದಲ ಬಾರಿಗೆ ದೇಶದ ಅನೇಕ ಸಾಂವಿಧಾನಿಕ ಸಂಸ್ಥೆಗಳ ಚುಕ್ಕಾಣಿ ಹಿಡಿದಿದ್ದಾರೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ನಮ್ಮ ಸರ್ಕಾರ. ಅಖಿಲ ಭಾರತ ವೈದ್ಯಕೀಯ ಕೋಟಾದಲ್ಲಿ ಒಬಿಸಿ ವರ್ಗಕ್ಕೆ ಮೀಸಲಾತಿಯ ಪ್ರಯೋಜನವನ್ನು ನೀಡಿದ್ದು ನಮ್ಮ ಸರ್ಕಾರ. ಕೇಂದ್ರ ಸರ್ಕಾರದ ಗ್ರೂಪ್-ಸಿ, ಗ್ರೂಪ್-ಡಿ ನೇಮಕಾತಿಗಳಲ್ಲಿ ಸಂದರ್ಶನ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದು ನಮ್ಮ ಸರ್ಕಾರ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿಷಯಗಳನ್ನು ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಕಲಿಸಲು ನಮ್ಮ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕ್ರಮಗಳ ಅತಿದೊಡ್ಡ ಫಲಾನುಭವಿಗಳು ಎಂದರೆ ನಮ್ಮ ಹಳ್ಳಿಗಳ ಯುವಜನರು ಮತ್ತು ಬಡ ಕುಟುಂಬಗಳು, ಎಸ್ಸಿ / ಎಸ್ಟಿ / ಒಬಿಸಿ ಯುವಜನರು.

ಸಹೋದರರೇ ಮತ್ತು  ಸಹೋದರಿಯರೇ,

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯವಾದ ಬಂಜಾರ ಸಮುದಾಯಕ್ಕಾಗಿ ವಿಶೇಷ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು ರಚಿಸಿದ್ದು ನಮ್ಮ ಸರ್ಕಾರ. ಅದು ಗುಲಾಮಗಿರಿಯ ಅವಧಿಯಲ್ಲಾಗಿರಲಿ ಅಥವಾ ಸ್ವಾತಂತ್ರ್ಯದ ನಂತರದ ದೀರ್ಘ ಅವಧಿಯಾಗಿರಲಿ, ದೇಶಾದ್ಯಂತ ಹರಡಿರುವ ಅಲೆಮಾರಿ ಸಮುದಾಯವಾದ ಬಂಜಾರ ಸಮುದಾಯವನ್ನು ಎಲ್ಲಾ ರೀತಿಯಿಂದಲೂ ನಿರ್ಲಕ್ಷಿಸಲಾಯಿತು. ಈ ಸಮುದಾಯಗಳನ್ನು ಹಲವು ದಶಕಗಳಿಂದ ಸರಿಯಾಗಿ ನೋಡಿಕೊಳ್ಳಲಾಗಿಲ್ಲ. ಈಗ ಕೇಂದ್ರ ಸರ್ಕಾರವು ಕಲ್ಯಾಣ ಮಂಡಳಿಯನ್ನು ರಚಿಸುವ ಮೂಲಕ ಅಂತಹ ಎಲ್ಲಾ ಕುಟುಂಬಗಳ ಸಬಲೀಕರಣಕ್ಕಾಗಿ ಒಂದು ದೊಡ್ಡ ಹೆಜ್ಜೆ ಇಟ್ಟಿದೆ. ನಮ್ಮ ಸರ್ಕಾರವು ಈ ಕುಟುಂಬಗಳನ್ನು ಪ್ರತಿಯೊಂದು ಕಲ್ಯಾಣ ಯೋಜನೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸುತ್ತಿದೆ.

ಸ್ನೇಹಿತರೇ,

ಡಬಲ್ ಇಂಜಿನ್ ಸರ್ಕಾರವು ಭಾರತದಲ್ಲಿ ವಾಸಿಸುವ ಪ್ರತಿಯೊಂದು ಸಮಾಜದ ಸಂಪ್ರದಾಯ, ಸಂಸ್ಕೃತಿ, ಪಾಕಪದ್ಧತಿ ಮತ್ತು ವೇಷಭೂಷಣವನ್ನು ನಮ್ಮ ಶಕ್ತಿ ಎಂದು ಪರಿಗಣಿಸುತ್ತದೆ. ಈ ಶಕ್ತಿಯನ್ನು ಉಳಿಸಲು ಮತ್ತು ಸಂರಕ್ಷಿಸಲು ನಾವು ಅದರ  ಪರವಾಗಿರುತ್ತೇವೆ. ಅದು ಸುಹಾಲಿ, ಲಂಬಾಣಿ, ಲಂಬಾಡಾ, ಲಬಾನಾ ಮತ್ತು ಬಾಜಿಗರ್ ಆಗಿರಲಿ, ನೀವು ಸಾಂಸ್ಕೃತಿಕವಾಗಿ ಶ್ರೀಮಂತರು ಮತ್ತು ರೋಮಾಂಚಕರು ಮತ್ತು ದೇಶದ ಹೆಮ್ಮೆ ಮತ್ತು ಶಕ್ತಿ. ನಿಮಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಕೊಡುಗೆ ಇದೆ. ಒಟ್ಟಾಗಿ ನಾವು ಈ ಪರಂಪರೆಯನ್ನು ಮುಂದೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ನಾವು ಎಲ್ಲರನ್ನೂ ನಂಬಬೇಕು. ನನ್ನ ಬಂಜಾರ ಕುಟುಂಬ ಇಲ್ಲಿರುವುದರಿಂದ, ನಾನು ಖಂಡಿತವಾಗಿಯೂ ಗುಜರಾತ್ ರಾಜ್ಯದಿಂದ ಬಂದಿದ್ದೇನೆ ಎಂದು ಅವರಿಗೆ ಹೇಳಲು ಬಯಸುತ್ತೇನೆ. ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳು ಕಡಿಮೆ ಮಳೆಯನ್ನು ಪಡೆಯುವ ರಾಜ್ಯಗಳು ಮತ್ತು ಶುಷ್ಕವಾಗಿರುತ್ತವೆ. ನೀರಿನ ಅಭಾವವಿದೆ, ಆದರೆ ನೂರಾರು ವರ್ಷಗಳ ಹಿಂದೆ ಅನೇಕ ಹಳ್ಳಿಗಳಲ್ಲಿ ಕೆಲವು ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಮತ್ತು ಇಂದಿಗೂ ಆ ಹಳ್ಳಿಗಳ ಜನರು ಇದನ್ನು ಲಖಾ ಬಂಜಾರ ಅಭಿವೃದ್ಧಿಪಡಿಸಿದರು ಎಂದು ಹೇಳುತ್ತಾರೆ. ಅಂತಹ ನೀರಿನ ನಿರ್ವಹಣೆಯ ವ್ಯವಸ್ಥೆ ಇರುವ ಯಾವುದೇ ಹಳ್ಳಿಗೆ ನೀವು ಹೋದರೆ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಲಖಾ ಬಂಜಾರಾ ಹೆಸರು ಮೊದಲು ಬರುತ್ತದೆ. ಶತಮಾನಗಳ ಹಿಂದೆ ಲಖಾ ಬಂಜಾರ ಸಮಾಜಕ್ಕೆ ಅಂತಹ ದೊಡ್ಡ ಸೇವೆಯನ್ನು ಮಾಡಿದ್ದಾರೆ ಮತ್ತು ಇಂದು ಆ ಬಂಜಾರ ಕುಟುಂಬಗಳಿಗೆ ಸೇವೆ ಸಲ್ಲಿಸಲು ನೀವು ನನಗೆ ಅವಕಾಶ ನೀಡಿರುವುದು ನನ್ನ ಸೌಭಾಗ್ಯ. ನಾನು ನಿಮ್ಮೆಲ್ಲರನ್ನೂ ತುಂಬಾ ಅಭಿನಂದಿಸುತ್ತೇನೆ. ನಾನು ನಿಮಗೆ ಸಂತೋಷ ಮತ್ತು ಸಮೃದ್ಧ ಭವಿಷ್ಯವನ್ನು ಬಯಸುತ್ತೇನೆ. ನೀವು ಬಂದು ನಮ್ಮನ್ನು ಆಶೀರ್ವದಿಸಿದ್ದೀರಿ; ಇದು ನಮ್ಮ ದೊಡ್ಡ ಆಸ್ತಿ, ಶಕ್ತಿ ಮತ್ತು ಸ್ಫೂರ್ತಿ. ನಿಮಗೆ ತುಂಬಾ ಧನ್ಯವಾದಗಳು.

ನಮಸ್ಕಾರ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister Narendra Modi to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.