‘‘ಜನರಿಗೆ ಸಮವಸ್ತ್ರದ ಮೇಲೆ ಹೆಚ್ಚಿನ ನಂಬಿಕೆ ಇದೆ. ಸಂಕಷ್ಟದಲ್ಲಿರುವ ಜನರು ನಿಮ್ಮನ್ನು ನೋಡಿದಾಗಲೆಲ್ಲಾ ಅವರು, ತಮ್ಮ ಜೀವನವು ಸುರಕ್ಷಿತವಾಗಿದೆ ಎಂದು ಅವರು ನಂಬುತ್ತಾರೆ, ಅವರಲ್ಲಿಹೊಸ ಭರವಸೆ ಮೂಡುತ್ತದೆ’’
ಸಂಕಲ್ಪ ಮತ್ತು ತಾಳ್ಮೆಯಿಂದ ಸವಾಲುಗಳನ್ನು ಎದುರಿಸಿದಾಗ ಯಶಸ್ಸು ಖಚಿತ.
‘‘ಈ ಸಂಪೂರ್ಣ ಕಾರ್ಯಾಚರಣೆಯು ಸೂಕ್ಷ ್ಮತೆ, ಸಂಪನ್ಮೂಲ ಮತ್ತು ಧೈರ್ಯದ ಪ್ರತಿಬಿಂಬವಾಗಿದೆ’’
ಈ ಕಾರ್ಯಾಚರಣೆಯಲ್ಲಿ‘ಸಬ್ಕಾಪ್ರಯಾಸ್‌’ ಪ್ರಮುಖ ಪಾತ್ರ ವಹಿಸಿದೆ

ಗೃಹ ಸಚಿವ ಶ್ರೀ ಅಮಿತ್ ಶಾ ಜಿ, ಸಂಸದ ಶ್ರೀ ನಿಶಿಕಾಂತ್ ದುಬೆ ಜಿ, ಗೃಹ ಕಾರ್ಯದರ್ಶಿ, ಸೇನಾ ಮುಖ್ಯಸ್ಥರೇ, ವಾಯುಪಡೆ ಮುಖ್ಯಸ್ಥರೇ, ಜಾರ್ಖಂಡ್ ಡಿಜಿಪಿ, ಎನ್‌ಡಿಆರ್‌ಎಫ್ ಮಹಾನಿರ್ದೇಶಕರೇ, ಐಟಿಬಿಪಿ ಡಿಜಿ, ಸ್ಥಳೀಯ ಆಡಳಿತ ಸಿಬ್ಬಂದಿ, ನಮ್ಮೊಂದಿರುವ ಎಲ್ಲಾ ವೀರ ಸೈನಿಕರು, ಕಮಾಂಡೋಗಳೇ, ಪೊಲೀಸ್ ಸಿಬ್ಬಂದಿ ಮತ್ತು ನನ್ನ ಎಲ್ಲಾ ಇತರ ಸಹಚರರೇ..! 
ನಮಸ್ಕಾರ!
ಸತತ ಮೂರು ದಿನಗಳ ಕಾಲ ನೀವು ಹಗಲಿರುಳು ಕೆಲಸ ಮಾಡಿದ್ದೀರಿ ಮತ್ತು ಕಷ್ಟಕರವಾದ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ, ಅದು ಹಲವು ದೇಶವಾಸಿಗಳ ಜೀವ ಉಳಿಸಿದೆ. ಇಡೀ ದೇಶವೇ ನಿಮ್ಮ ಶೌರ್ಯವನ್ನು ಮೆಚ್ಚಿದೆ. ಇದು ಬಾಬಾ ಬೈದ್ಯನಾಥ ಜೀ ಅವರ ಕೃಪೆ ಎಂದೂ ನಾನು ಭಾವಿಸುತ್ತೇನೆ. ಆದರೆ, ಕೆಲವರ ಜೀವ ಉಳಿಸಲು ಸಾಧ್ಯವಾಗದ ಕಾರಣ ನಾವು ತೀವ್ರ ದುಃಖಿತರಾಗಿದ್ದೇವೆ. ಹಲವು ಸಹಚರರು ಗಾಯಗೊಂಡಿದ್ದಾರೆ. ಸಂತ್ರಸ್ತರ ಕುಟುಂಬದ ಬಗ್ಗೆ ನಾವೆಲ್ಲರೂ ನಮ್ಮ ತೀವ್ರ ಸಂತಾಪವನ್ನು ಹೊಂದಿದ್ದೇವೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ. 

 

ಮಿತ್ರರೇ,
ಟಿವಿ ಮತ್ತು ಇತರ ವೇದಿಕೆಗಳಲ್ಲಿ ಈ ಕಾರ್ಯಾಚರಣೆಯನ್ನು ನೋಡಿದ ಎಲ್ಲರಿಗೂ ಘಟನೆಯ ಬಗ್ಗೆ ದುಃಖ ಮತ್ತು ಆಕ್ರೋಶವಿದೆ. ನೀವೆಲ್ಲರೂ ಘಟನಾ ಸ್ಥಳದಲ್ಲಿದ್ದಿರಿ. ಆ ಸಂದರ್ಭಗಳು ನಿಮಗೆ ಎಷ್ಟು ಕಷ್ಟಕರವಾಗಿದ್ದವು ಎಂಬುದು ನಮಗೆ ತಿಳಿದಿದೆ. ಆದರೆ ನಮ್ಮ ಸೇನೆ, ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ನ ಯೋಧರು, ಐಟಿಬಿಪಿ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯಂತಹ ನುರಿತ ಪಡೆಯನ್ನು ಹೊಂದಿರುವುದಕ್ಕೆ ದೇಶವು ಹೆಮ್ಮೆಪಡುತ್ತದೆ, ಅವರು ಪ್ರತಿ ಬಿಕ್ಕಟ್ಟಿನಿಂದಲೂ ದೇಶವಾಸಿಗಳನ್ನು ಸುರಕ್ಷಿತವಾಗಿ ಹೊರತರುವ ಸಾಮರ್ಥ್ಯವನ್ನು ಹೊಂದಿದ್ದಾರೆ. 

ಈ ಬಿಕ್ಕಟ್ಟಿನಿಂದ ಮತ್ತು ಈ ರಕ್ಷಣಾ ಕಾರ್ಯಾಚರಣೆಯಿಂದ ನಾವು ಹಲವು ಪಾಠಗಳನ್ನು ಕಲಿತಿದ್ದೇವೆ. ನಿಮ್ಮ ಅನುಭವಗಳು ಭವಿಷ್ಯದಲ್ಲಿ ತುಂಬಾ ಉಪಯುಕ್ತವಾಗುತ್ತವೆ. ನಾನು ನಿಮ್ಮೆಲ್ಲರೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ ಏಕೆಂದರೆ ನಾನು ದೂರದಿಂದ ನಿರಂತರವಾಗಿ ಈ ಕಾರ್ಯಾಚರಣೆಯೊಂದಿಗೆ ಸಂಪರ್ಕದಲ್ಲಿದ್ದೆ ಮತ್ತು ಎಲ್ಲವನ್ನೂ ಪರಿಶೀಲಿಸುತ್ತಿದ್ದೆ. ಆದರೆ ಇಂದು ನಾನು ಈ ಎಲ್ಲಾ ವಿಷಯಗಳನ್ನು ನಿಮ್ಮಿಂದ ನೇರವಾಗಿ ತಿಳಿದುಕೊಳ್ಳುವುದು ಅವಶ್ಯಕ. ನಾವು ಮೊದಲು ಎನ್ ಡಿಆರ್ ಎಫ್ ನ ದಿಟ್ಟ ಯೋಧರತ್ತ ಹೋಗೋಣ, ಆದರೆ ಒಂದು ವಿಷಯವನ್ನು ನಾನು ಇಲ್ಲಿ ಹೇಳಲು ಬಯಸುತ್ತೇನೆ; ಎನ್ ಡಿಆರ್ ಎಫ್  ತನ್ನದೇ ಆದ ಹೆಗ್ಗುರುತು ಮೂಡಿಸಿದೆ ಮತ್ತು ತನ್ನ ಕಠಿಣ ಪರಿಶ್ರಮ, ಪ್ರಯತ್ನ ಮತ್ತು ಶಕ್ತಿಯ ಮೂಲಕ ಅದನ್ನು ಮಾಡಿದೆ. ಮತ್ತು ಭಾರತದೊಳಗೆ ಅದನ್ನು ಎಲ್ಲಿ ನಿಯೋಜಿಸಿದರೂ ಎನ್ ಡಿಆರ್ ಎಫ್ ಅದರ ಕಠಿಣ ಪರಿಶ್ರಮ ಮತ್ತು ಗುರುತಿನಿಂದಾಗಿ ಅಭಿನಂದಿಸಲು ಅರ್ಹವಾಗಿದೆ. 

ನೀವೆಲ್ಲರೂ ಕ್ಷಿಪ್ರವಾಗಿ, ಸಂಘಟಿತವಾಗಿ ಮತ್ತು ಯೋಜಿತ ರೀತಿಯಲ್ಲಿ ಕೆಲಸ ಮಾಡಿರುವುದು ಅದ್ಭುತವಾಗಿದೆ ಮತ್ತು ನನಗೆ ಚೆನ್ನಾಗಿ ನೆನಪಿದೆ, ಮೊದಲ ದಿನ ಸಂಜೆ, ಹೆಲಿಕಾಪ್ಟರ್ ಅನ್ನು ತೆಗೆದುಕೊಳ್ಳುವುದು ಕಷ್ಟ ವೆಂದು ನಮಗೆ ತಿಳಿಸಲಾಯಿತು, ಏಕೆಂದರೆ ಹೆಲಿಕಾಪ್ಟರ್ ನ ಕಂಪನ ಮತ್ತು ಅದರಿಂದ ಹೊರಹೊಮ್ಮುವ ಗಾಳಿಯು ತಂತಿಗಳನ್ನು ಚಲಿಸುವಂತೆ ಮಾಡಬಹುದು ಮತ್ತು ಜನರು ಟ್ರಾಲಿಗಳಿಂದ ಕೆಳಗೆ ಬೀಳಲಾರಂಭಿಸಬಹುದು ಎಂದು. ಹಾಗಾಗಿ ಅದು ಕೂಡ ಆತಂಕದ ವಿಷಯವಾಗಿತ್ತು ಮತ್ತು ರಾತ್ರಿಯಿಡೀ ಅದೇ ವಿಷಯದ ಬಗ್ಗೆ ಚರ್ಚೆಯೂ ನಡೆಯುತ್ತಲೇ ಇತ್ತು. ಆದರೆ ಇದೆಲ್ಲದರ ಹೊರತಾಗಿಯೂ, ನೀವೆಲ್ಲರೂ ಸಮನ್ವಯದಿಂದ ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ ಮತ್ತು ಅಂತಹ ಬಿಕ್ಕಟ್ಟುಗಳಲ್ಲಿ ಪ್ರತಿಕ್ರಿಯೆ ಸಮಯವು ಬಹಳ ಮುಖ್ಯವಾದ ಅಂಶವಾಗಿದೆ ಎಂದು ನಾನು ನಂಬಿದ್ದೇನೆ. ನಿಮ್ಮ ಕ್ಷಿಪ್ರತೆಯು ಅಂತಹ ಕಾರ್ಯಾಚರಣೆಗಳ ಯಶಸ್ಸು ಅಥವಾ ವೈಫಲ್ಯವನ್ನು ನಿರ್ಧರಿಸುತ್ತದೆ. ಜನರಿಗೆ ಸಮವಸ್ತ್ರದ ಮೇಲೆ ಅಪಾರ ನಂಬಿಕೆ ಇದೆ. ಕಷ್ಟದಲ್ಲಿರುವ ಜನರು ನಿಮ್ಮನ್ನು ನೋಡಿದಾಗಲೆಲ್ಲ ಅವರಿಗೆ  ನಿರಾಳೆಯ ಭಾವ ಮೂಡಿ ಸಮಾಧಾನವಾಗುತ್ತದೆ. ಎನ್ ಡಿಆರ್ ಎಫ್ ಸಮವಸ್ತ್ರ ಇದೀಗ ಎಲ್ಲರಿಗೂ ಚಿರಪರಿಚಿತವಾಗಿದೆ. ಮತ್ತು ಜನರು ಈಗಾಗಲೇ ನಿಮ್ಮೊಂದಿಗೆ ಪರಿಚಿತರಾಗಿದ್ದರೆ. ಆದ್ದರಿಂದ ತಾವು ಸುರಕ್ಷಿತವಾಗಿದ್ದೇವೆಂದು ಅವರು ಭಾವಿಸುತ್ತಾರೆ; ಅವರ ಜೀವಗಳನ್ನು ಉಳಿಸಲಾಗುವುದು. ಅವರಲ್ಲಿ ಹೊಸ ಭರವಸೆ ಮೂಡುತ್ತದೆ. ನಿಮ್ಮ ಉಪಸ್ಥಿತಿಯು ಅವರಲ್ಲಿ ಭರವಸೆಯ ಬೆಳಕನ್ನು ಹುಟ್ಟುಹಾಕುತ್ತದೆ. ಅಂತಹ ಸಮಯದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ ಮತ್ತು ನಿಮ್ಮ ಯೋಜನೆ ಮತ್ತು ಕಾರ್ಯಾಚರಣೆಯ ಪ್ರಕ್ರಿಯೆಯಲ್ಲಿ ನೀವು ಈ ವಿಷಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೀರಿ ಮತ್ತು ಅದನ್ನು ಉತ್ತಮವಾಗಿ ಮಾಡಿದ್ದೀರಿ ಎಂಬುದು ನನಗೆ ಸಂತೋಷ ತಂದಿದೆ. ನಿಮ್ಮ ತರಬೇತಿಯು ಅತ್ಯಂತ ಶ್ಲಾಘನೀಯವಾಗಿದೆ! ಈ ಕಾರ್ಯಕ್ಷೇತ್ರದಲ್ಲಿ ನಿಮ್ಮ ತರಬೇತಿ ಎಷ್ಟು ಅದ್ಭುತವಾಗಿದೆ ಮತ್ತು ನೀವು ಎಷ್ಟು ಧೈರ್ಯಶಾಲಿ ಎಂದು ನಾವು ನೋಡಿದ್ದೇವೆ! ಮತ್ತು ಈ ಕಾರಣಕ್ಕಾಗಿ ನಿಮ್ಮ ಜೀವನವನ್ನು ತ್ಯಾಗ ಮಾಡಲು ನೀವು ಸಿದ್ಧರಿದ್ದೀರಿ. ಪ್ರತಿಯೊಂದು ಅನುಭವದಿಂದಲೂ ನೀವೇ ವಿಕಸನಗೊಳ್ಳುತ್ತಿರುವುದನ್ನು ನಾವು ನೋಡಬಹುದು.

ಎನ್ ಡಿಆರ್ ಎಫ್ ಸೇರಿದಂತೆ ಎಲ್ಲಾ ರಕ್ಷಣಾ ತಂಡಗಳನ್ನು ಆಧುನಿಕ ವಿಜ್ಞಾನ ಮತ್ತು ಆಧುನಿಕ ಉಪಕರಣಗಳೊಂದಿಗೆ ಸಜ್ಜುಗೊಳಿಸುವುದು ನಮ್ಮ ಬದ್ಧತೆಯಾಗಿದೆ. ಸಂಪೂರ್ಣ ಕಾರ್ಯಾಚರಣೆಯು ಸೂಕ್ಷ್ಮತೆ, ತಿಳಿವಳಿಕೆ ಮತ್ತು ಧೈರ್ಯಕ್ಕೆ ಸಮಾನಾರ್ಥಕವಾಗಿದೆ. ಈ ಬಿಕ್ಕಟ್ಟಿನಿಂದ ಬದುಕುಳಿದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಅಭಿನಂದಿಸುತ್ತೇನೆ, ಏಕೆಂದರೆ ಅವರು ಅಂತಹ ದೊಡ್ಡ ಬಿಕ್ಕಟ್ಟಿನ ನಂತರವೂ ಸಂಯಮದಿಂದ ವರ್ತಿಸಿದರು. ಜನರು ಗಂಟೆಗಟ್ಟಲೆ ಸಮಯ ಟ್ರಾಲಿಯಲ್ಲೇ ನೇತಾಡುತ್ತಿದ್ದರೆಂದು ನಾನು ಕೇಳಿದ್ದೇನೆ; ಅವರು ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಆದರೂ ಅವರು ಈ ಕಾರ್ಯಾಚರಣೆಯ ಉದ್ದಕ್ಕೂ ತಮ್ಮ ತಾಳ್ಮೆ ಮತ್ತು ಧೈರ್ಯವನ್ನು ಕಳೆದುಕೊಳ್ಳಲಿಲ್ಲ ಮತ್ತು ಇದು ನಿಜಕ್ಕೂ ಬಹಳ ದೊಡ್ಡ ಕಾರ್ಯವಾಗಿದೆ! ಸಿಕ್ಕಿಬಿದ್ದ ಜನರೆಲ್ಲ ಧೈರ್ಯವನ್ನು ಬಿಟ್ಟಿದ್ದರೆ, ಎಷ್ಟೊಂದು ಸೈನಿಕರನ್ನು ನಿಯೋಜಿಸಿದ್ದರೂ ನಮಗೆ ಇಂತಹ ಫಲಿತಾಂಶ ಲಭ್ಯವಾಗುತ್ತಿರಲಿಲ್ಲ.

ಹಾಗಾಗಿ ಆ ಸಿಕ್ಕಿಬಿದ್ದ ನಾಗರಿಕರ ಧೈರ್ಯವೂ ಬಹಳ ಮಹತ್ವದ್ದಾಗಿದೆ. ನೀವು ನಿಮ್ಮ ಬಗ್ಗೆ ಕಾಳಜಿ ವಹಿಸಿದ್ದೀರಿ, ಜನರಲ್ಲಿ ಧೈರ್ಯ ತುಂಬಿದ್ದೀರಿ ಮತ್ತು ಉಳಿದದ್ದನ್ನು ನಮ್ಮ ರಕ್ಷಣಾ ಸಿಬ್ಬಂದಿ ಮಾಡಿದರು ಮತ್ತು ಆ ಪ್ರದೇಶದ ನಾಗರಿಕರು ತಮ್ಮಲ್ಲಿರುವ ಯಾವುದೇ ಸಂಪನ್ಮೂಲಗಳು ಮತ್ತು ಜ್ಞಾನದೊಂದಿಗೆ ಹಗಲಿರುಳು, ದಿನವಿಡೀ ಕೆಲಸ ಮಾಡುವ ಮೂಲಕ ನಿಮ್ಮೆಲ್ಲರಿಗೂ ಸಾಧ್ಯವಿರುವ ಎಲ್ಲ ಸಹಾಯ ಒದಗಿಸಿದ್ದಾರೆಂದು ತಿಳಿದು ನನಗೆ ಸಂತೋಷವಾಗಿದೆ. 
ಈ ಸ್ಥಳೀಯ ಜನರ ಬದ್ಧತೆ ಅವಿಸ್ಮರಣೀಯ! ನಾನು ಕೂಡ ಆ ಎಲ್ಲ ಜನರನ್ನು ಅಭಿನಂದಿಸಲು ಬಯಸುತ್ತೇನೆ. ದೇಶದಲ್ಲಿ ಯಾವುದೇ ಬಿಕ್ಕಟ್ಟು ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುತ್ತೇವೆ ಮತ್ತು ಆ ಬಿಕ್ಕಟ್ಟಿನಿಂದ ನಮ್ಮನ್ನು ಹೊರತರುತ್ತೇವೆ ಎಂಬುದನ್ನು ಈ ಬಿಕ್ಕಟ್ಟು ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಬಿಕ್ಕಟ್ಟಿನಲ್ಲೂ ಎಲ್ಲರ ಪ್ರಯತ್ನಗಳು ದೊಡ್ಡ ಪಾತ್ರ ವಹಿಸಿವೆ. ಬಾಬಾ ಧಾಮ್‌ನ ಸ್ಥಳೀಯ ಜನರು ಎಲ್ಲಾ ಸಹಾಯವನ್ನು ನೀಡಿದ್ದರಿಂದ ನಾನು ಅವರನ್ನು ಪ್ರಶಂಸಿಸುತ್ತೇನೆ. ಮತ್ತೊಮ್ಮೆ ನಾನು ಸಂತ್ರಸ್ತ ಕುಟುಂಬಗಳಿಗೆ ನನ್ನ ಹೃದಯ ಪೂರ್ವಕ ಸಾಂತ್ವನ ಹೇಳುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. 
ಮತ್ತು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ನಿಮ್ಮಲ್ಲಿ ನಾನು ವಿನಂತಿಸುತ್ತೇನೆ. ಪ್ರವಾಹ ಅಥವಾ ಮಳೆಯ ಘಟನೆಗಳಲ್ಲಿ ಕಾರ್ಯಾಚರಣೆಗಳು ಬಹುತೇಕ ಆಗಾಗ್ಗೆ ನಡೆಯುತ್ತವೆ ಆದರೆ ಈ ರೀತಿಯ ಘಟನೆಗಳು ಬಹಳ ಅಪರೂಪ. ಆದ್ದರಿಂದ, ಈ ಕಾರ್ಯಾಚರಣೆಯ ಸಮಯದಲ್ಲಿ ನೀವು ಗಳಿಸಿದ ಪ್ರತಿಯೊಂದು ಅನುಭವವನ್ನು ದಯವಿಟ್ಟು ದಾಖಲಿಸಿ. 

ಒಂದು ರೀತಿಯಲ್ಲಿ, ನಮ್ಮ ಎಲ್ಲಾ ಪಡೆಗಳು ಅದರಲ್ಲಿ ಕೆಲಸ ಮಾಡಿರುವುದರಿಂದ ನೀವು ಕೈಪಿಡಿ ಸಿದ್ಧಪಡಿಸಬಹುದು. ಪ್ರತಿಯೊಂದಕ್ಕೂ ದಾಖಲಾತಿ ಇರಬೇಕು ಇದರಿಂದ ನಾವು ಭವಿಷ್ಯದಲ್ಲಿ ಅದನ್ನು ತರಬೇತಿಯ ಭಾಗವಾಗಿ ಬಳಸಬಹುದು ಮತ್ತು ಅಂತಹ ಸಮಯದಲ್ಲಿ ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಈ ಸವಾಲುಗಳನ್ನು ನಿಭಾಯಿಸಲು ನಿಖರವಾಗಿ ಏನು ಮಾಡಬೇಕೆಂಬುದನ್ನು ತಿಳಿಯಬಹುದು. ಏಕೆಂದರೆ ಅವರು ಮೊದಲ ದಿನ ಸಂಜೆ ನನ್ನ ಬಳಿಗೆ ಬಂದಾಗ - 'ಸರ್ ಹೆಲಿಕಾಪ್ಟರ್ ತೆಗೆದುಕೊಂಡು ಹೋಗುವುದು ಕಷ್ಟ, ಏಕೆಂದರೆ ಆ ತಂತಿಗಳು ತುಂಬಾ ಕಂಪನವನ್ನು ತಡೆದುಕೊಳ್ಳುವುದಿಲ್ಲ' ಎಂದು ಹೇಳಿದರು. ಹಾಗಾಗಿ ಆ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳುವುದು ಎಂಬ ಚಿಂತೆ ನನಗೂ ಇತ್ತು.ಅಂದರೆ ನೀವು ಪ್ರತಿಯೊಂದು ಹಂತಗಳ ಬಗ್ಗೆ ತಿಳಿದಿರುತ್ತೀರಿ; ನೀವು ಅದನ್ನು ಅನುಭವಿಸಿದ್ದೀರಿ. ನೀವು ಎಷ್ಟು ಶೀಘ್ರ ಅದನ್ನು ಸರಿಯಾಗಿ ದಾಖಲಿಸುತ್ತೇವೆಯೋ ಅಷ್ಟು ಉತ್ತಮವಾಗಿ ನಮ್ಮ ಎಲ್ಲಾ ವ್ಯವಸ್ಥೆಗಳನ್ನು ಮುಂದಿನ ತರಬೇತಿಯ ಭಾಗವಾಗಿ ಮಾಡಬಹುದಾಗಿದೆ ಹಾಗೂ ನಾವು ಇದನ್ನು ಪ್ರತಿ ಬಾರಿಯೂ ಕೇಸ್ ಸ್ಟಡಿಯಾಗಿ ಬಳಸಬಹುದು, ಏಕೆಂದರೆ ನಾವು ನಿರಂತರವಾಗಿ ನಮ್ಮನ್ನು ಅಪ್ ಡೇಟ್ ಮಾಡಿಕೊಳ್ಳಬೇಕು. ಅಲ್ಲದೆ, ಘಟನೆಯ ತನಿಖೆಗೆ ಸಮಿತಿಯೊಂದನ್ನು ರಚಿಸಲಾಗಿದ್ದು, ರೋಪ್ ವೇ ಅಪಘಾತದ ಬಗ್ಗೆ ರಾಜ್ಯ ಸರ್ಕಾರ ವಿಚಾರಣೆ ನಡೆಸಲಿದೆ. ಆದರೆ ನಾವು ಒಂದು ಸಂಸ್ಥೆಯಾಗಿ ದೇಶಾದ್ಯಂತ ಇತಂಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ನಿಮ್ಮ ಶೌರ್ಯ, ಪ್ರಯತ್ನ ಮತ್ತು ಜನರಿಗಾಗಿ ನೀವು ಕೆಲಸ ಮಾಡಿದ ಅನುಕಂಪಕ್ಕೆ ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಎಲ್ಲರಿಗೂ ತಂಬಾ ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"