Quote"ಕ್ರಿಯೆಯ ಸಮಯ ಇಲ್ಲೇ ಇದೆ ಮತ್ತು ಈಗ ಆರಂಭವಾಗಿದೆ"
Quote"ಹಸಿರು ಇಂಧನಕ್ಕೆ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸಿದ ಮೊದಲ ಜಿ-20 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ"
Quote"ಜಾಗತಿ ಇಂಧನ ಭೂದೃಶ್ಯಕ್ಕೆ ಭರವಸೆಯ ಸೇರ್ಪಡೆಯಾಗಿ ಹಸಿರು ಹೈಡ್ರೋಜನ್ ಹೊರಹೊಮ್ಮುತ್ತಿದೆ"
Quote"ನಾವೀನ್ಯತೆ, ಮೂಲಸೌಕರ್ಯ, ಉದ್ಯಮ ಮತ್ತು ಹೂಡಿಕೆಗೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಉತ್ತೇಜನ ನೀಡುತ್ತಿದೆ"
Quote"ನವದೆಹಲಿ ಜಿ-20 ನಾಯಕರ ಘೋಷಣೆಯು ಹೈಡ್ರೋಜನ್ ಮೇಲೆ ಉನ್ನತ ಮಟ್ಟದ ಸ್ವಯಂಪ್ರೇರಿತ ಪಂಚತತ್ವಗಳನ್ನು ಅಳವಡಿಸಿಕೊಂಡಿದೆ, ಅದು ಏಕೀಕೃತ ಮಾರ್ಗಸೂಚಿ ರೂಪಿಸಲು ಸಹಾಯ ಮಾಡುತ್ತದೆ"
Quote"ಅಂತಹ ನಿರ್ಣಾಯಕ ವಲಯದಲ್ಲಿ ಕ್ಷೇತ್ರ ಪರಿಣಿತರು ಸ್ಪಷ್ಟ ದಾರಿ ತೋರುವುದು ಮತ್ತು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ"
Quote"ಹಸಿರು ಹೈಡ್ರೋಜನ್ ಅಭಿವೃದ್ಧಿ ಮತ್ತು ನಿಯೋಜನೆ ವೇಗಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡೋಣ"

ಗೌರವಾನ್ವಿತ ಗಣ್ಯರೆ,

ವಿಜ್ಞಾನಿಗಳೆ ಮತ್ತು ಸಂಶೋಧಕರು ಮತ್ತು ಅನುಶೋಧಕರೆ,  ಉದ್ಯಮ ನಾಯಕರೆ ಮತ್ತು ನನ್ನ ಆತ್ಮೀಯ ಸ್ನೇಹಿತರೆ, ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ನಿಮ್ಮನ್ನು ಸ್ವಾಗತಿಸಲು ನನಗೆ ಸಂತೋಷವಾಗಿದೆ.

ಸ್ನೇಹಿತರೆ, ಇಡೀ ಜಗತ್ತೇ ನಿರ್ಣಾಯಕ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ಹವಾಮಾನ ಬದಲಾವಣೆಯು ಭವಿಷ್ಯದ ವಿಷಯವಲ್ಲ ಎಂಬ ಅರಿವು ನಮ್ಮೆಲ್ಲರಲ್ಲೂ ಬೆಳೆಯುತ್ತಿದೆ. ಹವಾಮಾನ ಬದಲಾವಣೆಯ ಪರಿಣಾಮವು ನೇರವಾಗಿ ಇಲ್ಲಿ ಮತ್ತು ಈಗ ಅನುಭವವಾಗುತ್ತಿದೆ. ಹಾಗಾಗಿ, ಇದರ ಪರಿಣಾಮಗಳನ್ನು ತಡೆಯುವ ಕ್ರಿಯೆಯ ಸಮಯವೂ ಇಲ್ಲಿದೆ ಮತ್ತು ನಮ್ಮ ಮುಂದೆಯೇ ಬಂದಿದೆ. ಇಂಧನ ಪರಿವರ್ತನೆ ಮತ್ತು ಸುಸ್ಥಿರತೆಯು ಜಾಗತಿಕ ನೀತಿ ರೂಪಿಸುವ ಸಂವಾದಕ್ಕೆ ಕೇಂದ್ರಬಿಂದುವಾಗಿದೆ.

 

|

ಸ್ನೇಹಿತರೆ, ಭಾರತವು ಸ್ವಚ್ಛ ಮತ್ತು ಹಸಿರು ಪೃಥ್ವಿಯನ್ನು ನಿರ್ಮಿಸಲು ಸದಾ ಬದ್ಧವಾಗಿದೆ. ಹಸಿರು ಇಂಧನ ಉತ್ಪಾದನೆ ಕುರಿತಾದ ನಮ್ಮ ಪ್ಯಾರಿಸ್ ಒಪ್ಪಂದದ ಬದ್ಧತೆಗಳನ್ನು ಪೂರೈಸಿದ ಜಿ-20 ರಾಷ್ಟ್ರಗಳಲ್ಲಿ ನಾವು ಮೊದಲಿಗರಾಗಿದ್ದೇವೆ. ಈ ಬದ್ಧತೆಗಳನ್ನು 2030ರ ವೇಳೆಗೆ ಈಡೇರಿಸುವ ಗುರಿಗಿಂತ 9 ವರ್ಷ ಮುಂಚಿತವಾಗಿ ನಾವು ಪೂರೈಸಿದ್ದೇವೆ. ಕಳೆದ 10 ವರ್ಷಗಳಲ್ಲಿ ಭಾರತದ ಸ್ಥಾಪಿತ ಉರವಲುಯೇತರ(ನಾನ್-ಫಾಸಿಲ್) ಇಂಧನ ಉತ್ಪಾದನೆ ಸಾಮರ್ಥ್ಯ ಸುಮಾರು 300% ಹೆಚ್ಚಾಗಿದೆ. ಅದೇ ಅವಧಿಯಲ್ಲಿ, ನಮ್ಮ ಸೌರ ಶಕ್ತಿ ಅಥವಾ ಇಂಧನ ಉತ್ಪಾದನೆ ಸಾಮರ್ಥ್ಯವು 3,000%ಗಿಂತ ಹೆಚ್ಚಾಗಿದೆ. ಆದರೆ ನಾವು ಈ ಸಾಧನೆಗಳ ಮೇಲೆ ವಿರಮಿಸುತ್ತಿಲ್ಲ. ಅಸ್ತಿತ್ವದಲ್ಲಿರುವ ಪರಿಹಾರಗಳನ್ನು ಮತ್ತಷ್ಟು ಬಲಪಡಿಸಲು ನಾವು ಗಮನ ಹರಿಸಿದ್ದೇವೆ. ನಾವು ಹೊಸ ಮತ್ತು ನವೀನ ಕ್ಷೇತ್ರಗಳನ್ನು ಸಹ ನೋಡುತ್ತಿದ್ದೇವೆ. ಇಲ್ಲಿ ಹಸಿರು ಹೈಡ್ರೋಜನ್ ಚಿತ್ರಣ ನಮ್ಮ ಮುಂದೆ ಬರುತ್ತದೆ.

ಸ್ನೇಹಿತರೆ, ಹಸಿರು ಹೈಡ್ರೋಜನ್ ಜಾಗತಿಕ ಇಂಧನ ಭೂದೃಶ್ಯ ಮತ್ತು ವಲಯಕ್ಕೆ ಒಂದು ಭರವಸೆಯ ಸೇರ್ಪಡೆಯಾಗಿ ಹೊರಹೊಮ್ಮುತ್ತಿದೆ. ವಿದ್ಯುದೀಕರಿಸಲು ಕಷ್ಟಕರವಾದ ಕೈಗಾರಿಕೆಗಳನ್ನು ಇಂಗಾಲ-ಮುಕ್ತಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಸ್ಕರಣಾಗಾರಗಳು, ರಸಗೊಬ್ಬರಗಳು, ಉಕ್ಕು, ಬೃಹತ್ ಸಾರಿಗೆಯಂತಹ ಅನೇಕ ವಲಯಗಳು ಇದರ ಪ್ರಯೋಜನ ಪಡೆಯುತ್ತವೆ. ಹಸಿರು ಹೈಡ್ರೋಜನ್ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಶೇಖರಣಾ ಪರಿಹಾರವಾಗಿ ಕಾರ್ಯ ನಿರ್ವಹಿಸುತ್ತದೆ. ಭಾರತವು ಈಗಾಗಲೇ 2023ರಲ್ಲೇ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಸ್ಥಾಪಿಸಿದೆ.

ಹಸಿರು ಹೈಡ್ರೋಜನ್ ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಭಾರತವನ್ನು ಜಾಗತಿಕ ಗಮ್ಯತಾಣವಾಗಿ ಪರಿವರ್ತಿಸಲು ನಾವು ಬಯಸುತ್ತೇವೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನಾವೀನ್ಯತೆ, ಮೂಲಸೌಕರ್ಯ, ಉದ್ಯಮ ಮತ್ತು ಹೂಡಿಕೆಗೆ ಉತ್ತೇಜನ ನೀಡುತ್ತಿದೆ. ನಾವು ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಪಾಲುದಾರಿಕೆಗಳು ರೂಪುಗೊಳ್ಳುತ್ತಿವೆ. ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳು(ನವೋದ್ಯಮಗಳು) ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಸಿರು ಉದ್ಯೋಗಗಳ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತಮ ಸಾಮರ್ಥ್ಯವೂ ಇದೆ. ಇದನ್ನು ಸಕ್ರಿಯಗೊಳಿಸಲು, ನಾವು ಈ ವಲಯದಲ್ಲಿ ನಮ್ಮ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ.

 

|

ಸ್ನೇಹಿತರೆ, ಹವಾಮಾನ ಬದಲಾವಣೆ ಮತ್ತು ಇಂಧನ ಪರಿವರ್ತನೆಯು ಜಾಗತಿಕ ಕಾಳಜಿಯ ವಿಷಯವಾಗಿದೆ. ನಮ್ಮ ಉತ್ತರಗಳು ಜಾಗತಿಕ ಸ್ವರೂಪದಲ್ಲಿರಬೇಕು. ಇಂಗಾಲ-ಮುಕ್ತಗೊಳಿಸುವ ಉದ್ದೇಶಕ್ಕೆ ಹಸಿರು ಹೈಡ್ರೋಜನ್ ಪ್ರಭಾವ ಉತ್ತೇಜಿಸಲು ಅಂತಾರಾಷ್ಟ್ರೀಯ ಪಾಲುದಾರಿಕೆ ನಿರ್ಣಾಯಕವಾಗಿದೆ. ಇಂಧನ ಉತ್ಪಾದನೆ ಹೆಚ್ಚಿಸಲು, ವೆಚ್ಚ ಕಡಿಮೆ ಮಾಡಲು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಲು ಸಹಕಾರದ ಮೂಲಕ ವೇಗ ಹೆಚ್ಚಿಸಬಹುದು. ತಂತ್ರಜ್ಞಾನವನ್ನು ಮತ್ತಷ್ಟು ಹೆಚ್ಚಾಗಿ ಬಳಸಿಕೊಳ್ಳಲು  ನಾವು ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಜಂಟಿಯಾಗಿ ಹೂಡಿಕೆ ಮಾಡಬೇಕಾಗಿದೆ. 2023 ಸೆಪ್ಟೆಂಬರ್ ನಲ್ಲಿ ಜಿ-20 ಶೃಂಗಸಭೆ ಭಾರತದಲ್ಲಿ ನಡೆಯಿತು. ಈ ಶೃಂಗಸಭೆಯಲ್ಲಿ ಹಸಿರು ಹೈಡ್ರೋಜನ್ ಉತ್ಪಾದನೆ ಮೇಲೆ ವಿಶೇಷ ಗಮನ ನೀಡಲಾಯಿತು. ಜಿ-20 ನಾಯಕರ ನವದೆಹಲಿ ಘೋಷಣೆಯು ಹೈಡ್ರೋಜನ್ ಮೇಲೆ ಉನ್ನತ ಮಟ್ಟದ ಸ್ವಯಂಪ್ರೇರಿತ ಪಂಚತತ್ವಗಳನ್ನು ಅಳವಡಿಸಿಕೊಂಡಿದೆ. ಏಕೀಕೃತ ಮಾರ್ಗಸೂಚಿ ರೂಪಿಸಲು ಈ ತತ್ವಗಳು ನಮಗೆ ಸಹಾಯ ಮಾಡುತ್ತಿವೆ. ನಾವೆಲ್ಲರೂ ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ, ಈಗ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಮುಂದಿನ ಪೀಳಿಗೆಯ ಜೀವನವನ್ನು ನಿರ್ಧರಿಸುತ್ತವೆ.

ಸ್ನೇಹಿತರೆ, ಇಂತಹ ನಿರ್ಣಾಯಕ ವಲಯದಲ್ಲಿ ಕ್ಷೇತ್ರ ತಜ್ಞರು ಸರಿಯಾದ ದಾರಿ ತೋರುವುದು ಮತ್ತು ಒಟ್ಟಾಗಿ ಕೆಲಸ ಮಾಡುವುದು ಮುಖ್ಯ. ನಿರ್ದಿಷ್ಟವಾಗಿ, ವಿವಿಧ ಅಂಶಗಳನ್ನು ಅನ್ವೇಷಿಸಲು ಒಗ್ಗೂಡುವಂತೆ ನಾನು ಜಾಗತಿಕ ವೈಜ್ಞಾನಿಕ ಸಮುದಾಯವನ್ನು ಒತ್ತಾಯಿಸುತ್ತೇನೆ. ಹಸಿರು ಹೈಡ್ರೋಜನ್ ವಲಯಕ್ಕೆ ಸಹಾಯ ಮಾಡಲು ವಿಜ್ಞಾನಿಗಳು, ಸಂಶೋಧಕರು ಮತ್ತು ಅನುಶೋಧಕರು ಸಾರ್ವಜನಿಕ ನೀತಿಯಲ್ಲಿ ಬದಲಾವಣೆಗಳನ್ನು ಸೂಚಿಸಬಹುದು. ವೈಜ್ಞಾನಿಕ ಸಮುದಾಯವು ನೋಡಬಹುದಾದ ಹಲವು ಪ್ರಶ್ನೆಗಳಿವೆ. ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಎಲೆಕ್ಟ್ರೋಲೈಸರ್‌ಗಳು ಮತ್ತು ಇತರ ಘಟಕಗಳ ದಕ್ಷತೆಯನ್ನು ನಾವು ಸುಧಾರಿಸಬಹುದೇ? ಸಾಗರ ನೀರು ಮತ್ತು ಪುರಸಭೆಯ ತ್ಯಾಜ್ಯ ನೀರನ್ನು ಉತ್ಪಾದನೆಗೆ ಬಳಸುವುದನ್ನು ನಾವು ಅನ್ವೇಷಿಸಬಹುದೇ? ಸಾರ್ವಜನಿಕ ಸಾರಿಗೆ, ಹಡಗು ಮತ್ತು ಒಳನಾಡಿನ ಜಲಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ಬಳಕೆಯನ್ನು ನಾವು ಹೇಗೆ ಸಕ್ರಿಯಗೊಳಿಸಬಹುದು? ಇಂತಹ ವಿಷಯಗಳನ್ನು ಒಟ್ಟಿಗೆ ಅನ್ವೇಷಿಸುವುದು ಜಾಗತಿಕ ಹಸಿರು ಇಂಧನ ಪರಿವರ್ತನೆಗೆ ಹೆಚ್ಚು ಸಹಾಯ ಮಾಡುತ್ತದೆ. ಇಂತಹ ವಿಚಾರಗಳ ಕುರಿತು ಹಲವು ವಿಚಾರಗಳ ವಿನಿಮಯಕ್ಕೆ ಈ ಸಮ್ಮೇಳನ ಸಹಕಾರಿಯಾಗಲಿದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ, ಮಾನವತೆ ಅಥವಾ ಮನುಕುಲವು ಈ ಹಿಂದೆಯೂ ಅನೇಕ ಸವಾಲುಗಳನ್ನು ಎದುರಿಸಿದೆ. ಪ್ರತಿ ಬಾರಿಯೂ, ಸಾಮೂಹಿಕ ಮತ್ತು ನವೀನ ಪರಿಹಾರಗಳ ಮೂಲಕ ನಾವು ಪ್ರತಿಕೂಲಗಳನ್ನು ನಿಭಾಯಿಸಿದ್ದೇವೆ. ಸಾಮೂಹಿಕ ಮತ್ತು ನವೀನ ಕ್ರಿಯೆಯ ಅದೇ ಮನೋಭಾವವು ಸುಸ್ಥಿರ ಭವಿಷ್ಯದ ಕಡೆಗೆ ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ಜತೆಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಹಸಿರು ಹೈಡ್ರೋಜನ್ ಅಭಿವೃದ್ಧಿ ಮತ್ತು ನಿಯೋಜನೆ ವೇಗಗೊಳಿಸಲು ನಾವೆಲ್ಲಾ ಒಟ್ಟಾಗಿ ಸೇರಿ ಕೆಲಸ ಮಾಡೋಣ.

 

|

ಮತ್ತೊಮ್ಮೆ, ಹಸಿರು ಹೈಡ್ರೋಜನ್ ಕುರಿತ 2ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವ ಎಲ್ಲರಿಗೂ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು!

 

  • Vikramjeet Singh July 12, 2025

    Modi 🙏🙏🙏
  • Jagmal Singh June 28, 2025

    Namo
  • Virudthan May 09, 2025

    🌺🌺🌹India is rapidly emerging as a global hub for film production, digital content, gaming, fashion, and music.The live entertainment industry, particularly live concerts, also holds immense potential for growth in the country.Currently, the global animation market is valued at over $430 billion and is projected to double within the next decade.This presents a significant opportunity for India's animation and graphic design industry to thrive and establish itself on a global scale - PM Modiji
  • Ratnesh Pandey April 16, 2025

    भारतीय जनता पार्टी ज़िंदाबाद ।। जय हिन्द ।।
  • Ratnesh Pandey April 10, 2025

    🇮🇳जय हिन्द 🇮🇳
  • Jitendra Kumar April 02, 2025

    🙏🇮🇳❤️
  • Dr srushti March 29, 2025

    namo
  • ram Sagar pandey November 07, 2024

    🌹🙏🏻🌹जय श्रीराम🙏💐🌹जय माता दी 🚩🙏🙏🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹🌹🌹🙏🙏🌹🌹
  • Madhusmita Baliarsingh November 06, 2024

    🙏🙏
  • Chandrabhushan Mishra Sonbhadra November 03, 2024

    jay shree Ram
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
EPFO reports record payroll addition of 2 million members in May 2025

Media Coverage

EPFO reports record payroll addition of 2 million members in May 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜುಲೈ 2025
July 21, 2025

Green, Connected and Proud PM Modi’s Multifaceted Revolution for a New India