Quote"ಕೌಶಲ ಘಟಿಕೋತ್ಸವವರು ಇಂದಿನ ಭಾರತದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ"
Quote"ಬಲಿಷ್ಠ ಯುವ ಶಕ್ತಿಯೊಂದಿಗೆ ದೇಶವು ಹೆಚ್ಚು ಅಭಿವೃದ್ಧಿ ಹೊಂದುತ್ತದೆ, ಆ ಮೂಲಕ ರಾಷ್ಟ್ರದ ಸಂಪನ್ಮೂಲಗಳಿಗೆ ನ್ಯಾಯ ಒದಗಿಸುತ್ತದೆ"
Quote"ಇಂದು, ಈ ಶತಮಾನವು ಭಾರತದ ಶತಮಾನವಾಗಲಿದೆ ಎಂದು ಇಡೀ ಜಗತ್ತು ನಂಬಿದೆ"
Quote"ನಮ್ಮ ಸರ್ಕಾರವು ಕೌಶಲ್ಯದ ಮಹತ್ವವನ್ನು ಅರ್ಥಮಾಡಿಕೊಂಡಿದೆ ಮತ್ತು ಅದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿಚದೆ, ಪ್ರತ್ಯೇಕ ಅನುದಾನವನ್ನು ನಿಗದಿಪಡಿಸಿದೆ"
Quote" ಪ್ರಸ್ತುತ ಸಮಯಕ್ಕೆ ಅನುಗುಣವಾಗಿರಲು ಕೈಗಾರಿಕೆ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಮುಖ್ಯ"
Quote"ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಯ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ. ನಾವು ಕೇವಲ ಮೆಕ್ಯಾನಿಕ್‌ಗಳು, ಎಂಜಿನಿಯರ್‌ಗಳು, ತಂತ್ರಜ್ಞಾನ ಅಥವಾ ಇತರ ಯಾವುದೇ ಸೇವೆಗೆ ಸೀಮಿತವಾಗಿಲ್ಲ"
Quote"ಭಾರತದಲ್ಲಿ ನಿರುದ್ಯೋಗ ದರವು 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿದೆ"
Quoteಮುಂದಿನ 3-4 ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಾಗಲಿದೆ ಎಂದು ಐಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ.

ನಮಸ್ಕಾರ!
ಕೌಶಲ್ಯ ಅಭಿವೃದ್ಧಿಯ ಈ ಸಂಭ್ರಮಾಚರಣೆಯು ನಿಜವಾಗಿಯೂ ವಿಶಿಷ್ಟವಾಗಿದೆ. ದೇಶಾದ್ಯಂತದ ಸಂಸ್ಥೆಗಳ ಸಾಮೂಹಿಕ ಕೌಶಲ್ಯ ಪ್ರದರ್ಶನ, ಕೌಶಲ್ ದೀಕ್ಷಾಂತ್ ಸಮಾರೋಹ್, ಶ್ಲಾಘನೀಯ ಉಪಕ್ರಮವಾಗಿದೆ. ಇದು ಸಮಕಾಲೀನ ಭಾರತದ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ. ಇಂದು ಸಾವಿರಾರು ಯುವಕರು ತಂತ್ರಜ್ಞಾನದ ಮೂಲಕ ಈ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ್ದಾರೆ. ಎಲ್ಲಾ ಯುವಕರಿಗೆ ಉತ್ತಮ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನನ್ನ ಯುವ ಸ್ನೇಹಿತರೇ,
ಪ್ರತಿಯೊಂದು ರಾಷ್ಟ್ರವು ನೈಸರ್ಗಿಕ ಸಂಪನ್ಮೂಲಗಳು, ಖನಿಜ ಸಂಪತ್ತು ಅಥವಾ ವ್ಯಾಪಕವಾದ ಕರಾವಳಿಯಂತಹ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿದೆ. ಆದರೆ, ಈ ಸಾಂಪಕ್ತಿಕ ಶಕ್ತಿಗಳನ್ನು ನಿಜವಾಗಿಯೂ ಬಳಸಿಕೊಳ್ಳಲು ಅಗತ್ಯವಾದ ನಿರ್ಣಾಯಕ ಶಕ್ತಿ ಯುವ ಶಕ್ತಿಯಾಗಿದೆ. ಇತ್ತೀಚೆಗೆ ಯುವಕರು ಹೆಚ್ಚು ಸಬಲರಾಗಲು ಬಯಸುತ್ತಿದ್ದಾರೆ, ಇದರಿಂದಾಗಿ ದೇಶವು ಹೆಚ್ಚು ಅಭಿವೃದ್ಧಿ ಹೊಂದುತ್ತದೆ, ರಾಷ್ಟ್ರದ ಸಂಪನ್ಮೂಲಗಳೊಂದಿಗೆ ನ್ಯಾಯಯುತತೆಯನ್ನು ಖಾತ್ರಿಪಡಿಸುತ್ತದೆ. ಇಂದು, ಭಾರತವು ತನ್ನ ಯುವಕರನ್ನು ಈ ಮನಸ್ಥಿತಿಯೊಂದಿಗೆ ಸಶಕ್ತಗೊಳಿಸುತ್ತಿದೆ, ಇಡೀ ಪರಿಸರ ವ್ಯವಸ್ಥೆಯಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಮಾಡುತ್ತಿದೆ. ಮತ್ತು ಈ ವಿಷಯದಲ್ಲಿ ದೇಶವು ದ್ವಿಮುಖ ತಂತ್ರವನ್ನು ಹೊಂದಿದೆ. ಕೌಶಲ್ಯ ಮತ್ತು ಶಿಕ್ಷಣದ ಮೂಲಕ ಹೊಸ ಅವಕಾಶಗಳ ಲಾಭ ಪಡೆಯಲು ನಾವು ನಮ್ಮ ಯುವಕರನ್ನು ಸಿದ್ಧಪಡಿಸುತ್ತಿದ್ದೇವೆ. ಸುಮಾರು ನಾಲ್ಕು ದಶಕಗಳ ನಂತರ ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಿದ್ದೇವೆ. ನಾವು ವೈದ್ಯಕೀಯ ಕಾಲೇಜುಗಳು, ಐ.ಐ.ಟಿ.ಗಳು, ಐ.ಐ.ಎಂ.ಗಳು ಅಥವಾ ಐ.ಟಿ.ಐ.ಗಳಂತಹ ಹಲವಾರು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆದಿದ್ದೇವೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ) ಅಡಿಯಲ್ಲಿ ಲಕ್ಷಾಂತರ ಯುವಕರು ತರಬೇತಿ ಪಡೆದಿದ್ದಾರೆ. ಮತ್ತೊಂದೆಡೆ, ನಾವು ಉದ್ಯೋಗವನ್ನು ಒದಗಿಸುವ ಸಾಂಪ್ರದಾಯಿಕ ಕ್ಷೇತ್ರಗಳನ್ನು ಬಲಪಡಿಸುತ್ತಿದ್ದೇವೆ ಮತ್ತು ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಹೊಸ ಕ್ಷೇತ್ರಗಳನ್ನು ಉತ್ತೇಜಿಸುತ್ತಿದ್ದೇವೆ. ಇಂದು ಭಾರತವು ಸರಕು ರಫ್ತು, ಮೊಬೈಲ್ ಫೋನ್ ರಫ್ತು, ಎಲೆಕ್ಟ್ರಾನಿಕ್ ರಫ್ತು, ಸೇವೆಗಳ ರಫ್ತು, ರಕ್ಷಣಾ ರಫ್ತು ಮತ್ತು ಉತ್ಪಾದನೆಯಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದೆ. ಏಕಕಾಲದಲ್ಲಿ, ದೇಶವು ನಿಮ್ಮಂತಹ ಯುವ ವ್ಯಕ್ತಿಗಳಿಗೆ ಬಾಹ್ಯಾಕಾಶ, ಸ್ಟಾರ್ಟ್ಅಪ್ಗಳು, ಡ್ರೋನ್ಗಳು, ಅನಿಮೇಷನ್, ಎಲೆಕ್ಟ್ರಿಕ್ ವಾಹನಗಳು, ಸೆಮಿಕಂಡಕ್ಟರ್ಗಳು ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತಿದೆ. 

|

ಸ್ನೇಹಿತರೇ,
ಇಂದು ಇಡೀ ವಿಶ್ವವೇ ಈ ಶತಮಾನ ಭಾರತಕ್ಕೆ ಸೇರಿದ್ದು ಎಂದು ಒಪ್ಪಿಕೊಂಡಿದೆ ಮತ್ತು ಇದರ ಹಿಂದೆ ದೇಶದ ನಮ್ಮ ಯುವಜನತೆ ಪ್ರಮುಖ ಕಾರಣವಾಗಿದ್ದಾರೆ ಎಂಬುದು ವಾಸ್ತವ ಸಂಗತಿಯಾಗಿದೆ. ಪ್ರಪಂಚದಾದ್ಯಂತದ ಅನೇಕ ದೇಶಗಳು ವಯಸ್ಸಾದವರ ಜನಸಂಖ್ಯೆಯಲ್ಲಿ ಅತೀವ ಹೆಚ್ಚಳವನ್ನು ಅನುಭವಿಸುತ್ತಿರುವಾಗ, ಭಾರತವು ಪ್ರತಿದಿನ ಕಿರಿಯವಾಗುತ್ತಿದೆ. ಇದು ನಮ್ಮ ದೇಶಕ್ಕೆ ಗಮನಾರ್ಹ ಪ್ರಯೋಜನವಾಗಿದೆ. ನುರಿತ ಯುವಕರಿಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ. ಇತ್ತೀಚೆಗೆ, ಜಾಗತಿಕ ಕೌಶಲ್ಯ ಮ್ಯಾಪಿಂಗ್ ಕುರಿತು ಭಾರತದ ಪ್ರಸ್ತಾಪವನ್ನು ಜಿ20 ಶೃಂಗಸಭೆಯಲ್ಲಿ ಅಂಗೀಕರಿಸಲಾಯಿತು. ಇದು ಮುಂದಿನ ದಿನಗಳಲ್ಲಿ ನಿಮ್ಮಂತಹ ಯುವ ವ್ಯಕ್ತಿಗಳಿಗೆ ಇನ್ನಷ್ಟು ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶ ಮತ್ತು ಜಗತ್ತಿನಲ್ಲಿ ಉದ್ಭವಿಸುವ ಯಾವುದೇ ಅವಕಾಶವನ್ನು ನಾವು ಕಳೆದುಕೊಳ್ಳಲು ಸಾಧ್ಯವಿಲ್ಲ. ಭಾರತ ಸರ್ಕಾರವು ನಿಮ್ಮೊಂದಿಗಿದೆ, ಎಲ್ಲಾ ಅಗತ್ಯತೆಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ. ಕೌಶಲಾಭಿವೃದ್ಧಿಗೆ ಹಿಂದಿನ ಯಾವದೇ ಸರಕಾರಗಳು ನಾವು ಇಂದು ನೀಡಿದಷ್ಟು ಈ ಹಿಂದೆ ಗಮನಹರಿಸಿರಲಿಲ್ಲ. ನಮ್ಮ ಸರ್ಕಾರವು ಕೌಶಲ್ಯದ ಮಹತ್ವವನ್ನು ಗುರುತಿಸುತ್ತಿದೆ ಮತ್ತು ಅದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದೆ ಮತ್ತು ಬಜೆಟ್ ಅನ್ನು ಪ್ರಾರಂಭಿಸಿದೆ. ಭಾರತವು  ತನ್ನ ಯುವಕರ ಕೌಶಲ್ಯ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹೂಡಿಕೆ ಮಾಡುತ್ತಿದೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯು ಯುವ ವ್ಯಕ್ತಿಗಳನ್ನು ತಳಮಟ್ಟದಲ್ಲಿ ಸಬಲೀಕರಣಗೊಳಿಸಿದೆ. ಈ ಯೋಜನೆಯಡಿ ಇದುವರೆಗೆ ಸುಮಾರು 1.5 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ. ಕೈಗಾರಿಕಾ ಕ್ಲಸ್ಟರ್ಗಳ ಸುತ್ತಲೂ ಹೊಸ ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ, ಕೈಗಾರಿಕೆಗಳು ತಮ್ಮ ಅಗತ್ಯಗಳನ್ನು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ಯುವ ವ್ಯಕ್ತಿಗಳಲ್ಲಿ ಅಗತ್ಯ ಕೌಶಲ್ಯ ಸೆಟ್ಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಅವರನ್ನು ಮನಬಂದಂತೆ ಕಾರ್ಯಪಡೆಯಲ್ಲಿ ಸಂಯೋಜಿಸಲಾಗುತ್ತದೆ

ಸ್ನೇಹಿತರೇ,
ಕಾಲ ಬದಲಾಗಿದೆ ಎಂಬುದು ನಿಮಗೂ ಗೊತ್ತು. ಕೌಶಲ್ಯವನ್ನು ಕಲಿಯಲು ಮತ್ತು ಅದು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಉಳಿಸಿಕೊಳ್ಳಲು ನಿರೀಕ್ಷಿಸಲು ಇನ್ನು ಮುಂದೆ ಸಾಕಾಗುವುದಿಲ್ಲ. ಈಗ, ನಾವೆಲ್ಲರೂ ಅನುಸರಿಸಬೇಕಾದ ಕೌಶಲ್ಯ, ವಿಶೇಷ ಕೌಶಲ್ಯ ಮತ್ತು ಮರುಕೌಶಲ್ಯದ ಮಾದರಿಯಿದೆ. ಬೇಡಿಕೆಯು ವೇಗವಾಗಿ ವಿಕಸನಗೊಳ್ಳುತ್ತಿದೆ ಮತ್ತು ಉದ್ಯೋಗಗಳ ಸ್ವರೂಪವು ಬದಲಾಗುತ್ತಿದೆ. ಅದರಂತೆ, ನಾವು ನಮ್ಮ ಕೌಶಲ್ಯಗಳನ್ನು ನವೀಕರಿಸುತ್ತಲೇ ಇರಬೇಕು. ಆದ್ದರಿಂದ, ಉದ್ಯಮ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಸಮಯಕ್ಕೆ ಹೊಂದಿಕೊಳ್ಳಲು ಇದು ನಿರ್ಣಾಯಕವಾಗಿದೆ. ಹಿಂದೆ, ಕೌಶಲ್ಯಗಳ ಅನನ್ಯತೆಯನ್ನು ಗುರುತಿಸಲು ಮತ್ತು ಅವುಗಳ ಅಗತ್ಯವನ್ನು ನಿರ್ಣಯಿಸಲು ಅವಕಾಶ ಕಡಿಮೆ ಇತ್ತು,  ಕೌಶಲ್ಯಗಳ ಕಡೆಗೆ ಗಮನ ಬಹಳ ಕಡಿಮೆಯಿತ್ತು. ಈ ಪರಿಸ್ಥಿತಿ ಈಗ ಬದಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು 5,000 ಹೊಸ ಐ.ಟಿ.ಐ.ಗಳನ್ನು ಸ್ಥಾಪಿಸಲಾಗಿದೆ. ಇದು ರಾಷ್ಟ್ರದಾದ್ಯಂತ ಐ.ಟಿ.ಐ.ಗಳಲ್ಲಿ 400,000 ಹೊಸ ಸೀಟುಗಳನ್ನು ಸೇರಿಸಿದೆ. ಸಂಸ್ಥೆಗಳನ್ನು ಮಾದರಿ ಐ.ಟಿ.ಐ.ಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದ್ದು, ಉತ್ತಮ ಅಭ್ಯಾಸಗಳನ್ನು ಅಳವಡಿಸುವುದರೊಂದಿಗೆ ದಕ್ಷ ಮತ್ತು ಉತ್ತಮ ಗುಣಮಟ್ಟದ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ.  

|

ಸ್ನೇಹಿತರೇ,
ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಯ ವ್ಯಾಪ್ತಿ ನಿರಂತರವಾಗಿ ವಿಸ್ತರಿಸುತ್ತಿದೆ. ನಾವು ಕೇವಲ ಮೆಕ್ಯಾನಿಕ್ಸ್, ಎಂಜಿನಿಯರ್ಗಳು, ತಂತ್ರಜ್ಞಾನ ಅಥವಾ ಯಾವುದೇ ಇತರ ನಿರ್ದಿಷ್ಟ ಸೇವೆಗೆ ಸೀಮಿತವಾಗಿಲ್ಲ. ಈಗ ಮಹಿಳೆಯರನ್ನು ಒಳಗೊಂಡ ಸ್ವಸಹಾಯ ಗುಂಪುಗಳಿವೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ತಂತ್ರಜ್ಞಾನದ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ನಮ್ಮ ವಿಶ್ವಕರ್ಮ ಸಂಗಡಿಗರೂ ಇದ್ದಾರೆ. ಅವರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಅವರಿಲ್ಲದೆ ಯಾವುದೇ ಕೆಲಸವು ಸುಗಮವಾಗಿ ಸಾಗುವುದಿಲ್ಲ. ಸಾಂಪ್ರದಾಯಿಕವಾಗಿ, ಅವರು ತಮ್ಮ ಕೌಶಲ್ಯಗಳನ್ನು ತಮ್ಮ ಹಿರಿಯರಿಂದ ಕಲಿಯುತ್ತಾರೆ ಮತ್ತು ಅವುಗಳನ್ನು ಮುಂದಿನ ತಲೆಮಾರಿಗೆ ರವಾನಿಸಿ ಹಸ್ತಾಂತರಿಸುತ್ತಾರೆ. ಈಗ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯೊಂದಿಗೆ, ಅವರ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳೊಂದಿಗೆ ಸಂಯೋಜಿಸಲಾಗುತ್ತಿದೆ.

ನನ್ನ ಯುವ ಗೆಳೆಯರೇ,
ಭಾರತದ ಆರ್ಥಿಕತೆಯು ವಿಸ್ತಾರಗೊಳ್ಳುತ್ತಿದ್ದಂತೆ, ನಿಮ್ಮಂತಹ ಯುವ ವ್ಯಕ್ತಿಗಳಿಗೆ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಉದ್ಯೋಗ ಸೃಷ್ಟಿಯು ಹೊಸ ಎತ್ತರವನ್ನು ತಲುಪಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಪ್ರಸ್ತುತ, ಭಾರತದಲ್ಲಿ ನಿರುದ್ಯೋಗ ದರವು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ನಾನು ಇಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗವು ವೇಗವಾಗಿ ಕಡಿಮೆಯಾಗುತ್ತಿದೆ. ಅಂದರೆ ಅಭಿವೃದ್ಧಿಯ ಲಾಭವು ಹಳ್ಳಿ ಮತ್ತು ನಗರಗಳೆರಡನ್ನೂ ಸಮಾನವಾಗಿ ತಲುಪುತ್ತಿದೆ. ಹೊಸ ಅವಕಾಶಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾಗಿ ಬೆಳೆಯುತ್ತಿರುವುದನ್ನು ಇದು ಸೂಚಿಸುತ್ತದೆ. ಈ ಸಮೀಕ್ಷೆಯ ಮತ್ತೊಂದು ಮಹತ್ವದ ಸಂಶೋಧನೆಯೆಂದರೆ ದೇಶದ ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳು ಮತ್ತು ಅಭಿಯಾನಗಳು ಸಕಾರಾತ್ಮಕ ಪರಿಣಾಮವನ್ನು ಬೀರುತ್ತಿವೆ.

ಸ್ನೇಹಿತರೇ,
ಅಂತರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್) ನಿಮ್ಮೆಲ್ಲರ ಉತ್ಸಾಹವನ್ನು ಹೆಚ್ಚಿಸುವ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್)  ಪ್ರಕಾರ, ಮುಂಬರುವ ವರ್ಷಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯುತ್ತದೆ. ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳ ಸ್ಥಾನಮಾನಕ್ಕೆ ತರಲು ನಾನು ಖಾತರಿ ನೀಡಿದ್ದೇನೆ. ಮುಂದಿನ 3-4 ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂಬ ಸಂಪೂರ್ಣ ವಿಶ್ವಾಸವನ್ನು ಅಂತರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್)  ಹೊಂದಿದೆ. ಇದರರ್ಥ ನಿಮಗೆ ಹೆಚ್ಚಿನ ಅವಕಾಶಗಳು, ಉದ್ಯೋಗ ಮತ್ತು ಉದ್ಯಮಶೀಲತೆಗೆ ಇನ್ನೂ ಹೆಚ್ಚಿನ ಅವಕಾಶಗಳು.

ಸ್ನೇಹಿತರೇ,
ನಿಮ್ಮ ಮುಂದೆ ಅಂತ್ಯವಿಲ್ಲದ, ಅಸಂಖ್ಯಾತ ಅವಕಾಶಗಳಿವೆ. ನಾವು ಭಾರತವನ್ನು ಕೌಶಲ್ಯಪೂರ್ಣ ಮಾನವಶಕ್ತಿಯ ವಿಶ್ವದ ಅತಿದೊಡ್ಡ ಶಕ್ತಿ ಕೇಂದ್ರವನ್ನಾಗಿ ಮಾಡಬೇಕಾಗಿದೆ. ನಾವು ಜಗತ್ತಿಗೆ ಸ್ಮಾರ್ಟ್ ಮತ್ತು ನುರಿತ ಮಾನವಶಕ್ತಿ ಪರಿಹಾರಗಳನ್ನು ಒದಗಿಸಬೇಕು. ಕಲಿಕೆ, ಬೋಧನೆ ಮತ್ತು ಪ್ರಗತಿಯ ಪ್ರಕ್ರಿಯೆಯು ಮುಂದುವರಿಯಲಿ. 

ಜೀವನದ ಪ್ರತಿ ಹೆಜ್ಜೆಯಲ್ಲೂ ಯಶಸ್ಸಿಗೆ ನನ್ನ ಶುಭಾಶಯಗಳು. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅನೇಕ ಶುಭ ಹಾರೈಕೆಗಳೊಂದಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ನಾನು  ಮತ್ತೊಮ್ಮೆ ವ್ಯಕ್ತಪಡಿಸುತ್ತೇನೆ!

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Girendra Pandey social Yogi March 04, 2024

    जय हो
  • Vaishali Tangsale February 12, 2024

    🙏🏻🙏🏻
  • ज्योती चंद्रकांत मारकडे February 11, 2024

    जय हो
  • Uma tyagi bjp January 27, 2024

    जय श्री राम
  • Pankaj kumar singh January 05, 2024

    जय श्री राम 🙏🙏
  • Babla sengupta December 24, 2023

    Babla sengupta
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
It's a quantum leap in computing with India joining the global race

Media Coverage

It's a quantum leap in computing with India joining the global race
NM on the go

Nm on the go

Always be the first to hear from the PM. Get the App Now!
...
PM to participate in three Post- Budget webinars on 4th March
March 03, 2025
QuoteWebinars on: MSME as an Engine of Growth; Manufacturing, Exports and Nuclear Energy Missions; Regulatory, Investment and Ease of doing business Reforms
QuoteWebinars to act as a collaborative platform to develop action plans for operationalising transformative Budget announcements

Prime Minister Shri Narendra Modi will participate in three Post- Budget webinars at around 12:30 PM via video conferencing. These webinars are being held on MSME as an Engine of Growth; Manufacturing, Exports and Nuclear Energy Missions; Regulatory, Investment and Ease of doing business Reforms. He will also address the gathering on the occasion.

The webinars will provide a collaborative platform for government officials, industry leaders, and trade experts to deliberate on India’s industrial, trade, and energy strategies. The discussions will focus on policy execution, investment facilitation, and technology adoption, ensuring seamless implementation of the Budget’s transformative measures. The webinars will engage private sector experts, industry representatives, and subject matter specialists to align efforts and drive impactful implementation of Budget announcements.