Quote“ಭಾರತದ ಕರೆಯ ಮೇರೆಗೆ ಹಿಂದೆಂದೂ ಕಂಡರಿಯದಂತೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ”
Quote“ನಮ್ಮನ್ನು ಯೋಗ ಒಂದುಗೂಡಿಸಲಿದೆ”
Quote“ಯೋಗ ಆರೋಗ್ಯಪೂರ್ಣ ಮತ್ತು ಶಕ್ತಿಯುತ ಸಮಾಜ ನಿರ್ಮಿಸಲಿದ್ದು, ಅಲ್ಲಿ ಸಾಮೂಹಿಕ ಶಕ್ತಿ ಹೆಚ್ಚಾಗಿರುತ್ತದೆ”
Quote“ಭಾರತೀಯ ಸಂಸ್ಕೃತಿ ಮತ್ತು ಸಾಮಾಜಿಕ ರಚನೆ, ಅದರ ಆಧ್ಯಾತ್ಮಿಕತೆ ಹಾಗೂ ಆದರ್ಶಗಳು, ಅದರ ತತ್ವಶಾಸ್ತ್ರ ಮತ್ತು ದೃಷ್ಟಿಕೋನ ಒಗ್ಗೂಡಿಸುವ, ಅಪ್ಪಿಕೊಳ್ಳುವ, ಅಳವಡಿಸಿಕೊಳ್ಳುವುದನ್ನು ಒಳಗೊಂಡಿದೆʼ
Quote“ಯೋಗ ಜೀವಿಗಳ ಏಕತೆಯನ್ನು ಅನುಭವಿಸುವಂತೆ ಮಾಡುತ್ತದೆಯಲ್ಲದೇ ಇದೇ ಪ್ರಜ್ಞೆಯೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ”
Quote“ಯೋಗದ ಮೂಲಕ ನಿಸ್ವಾರ್ಥ ಕಾರ್ಯ ಸಾಧಿಸಲು, ತನ್ಮೂಲಕ ಕರ್ಮದಿಂದ ಕರ್ಮಯೋಗದತ್ತ ಪಯಣಿಸಲು ಸಾಧ್ಯ”
Quote“ನಮ್ಮ ಭೌತಿಕ ಶಕ್ತಿ, ನಮ್ಮ ಮಾನಸಿಕ ವಿಸ್ತರಣೆಯಿಂದ ಭಾರತದ ಮೂಲ ನೆಲೆ ವಿಸ್ತರಣೆಯಾಗಲಿದೆ”

ನಮಸ್ಕಾರ!

ಅಂತಾರಾಷ್ಟ್ರೀಯ ಯೋಗ ದಿನದಂದು ದೇಶದ ಎಲ್ಲ ನಾಗರಿಕರಿಗೆ ಶುಭಾಶಯಗಳು! ಪ್ರತಿ ವರ್ಷ, ಯೋಗ ದಿನಾಚರಣೆಯ ಸಂದರ್ಭದಲ್ಲಿ ನಿಮ್ಮೆಲ್ಲರ ನಡುವೆ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ನಿಮ್ಮೆಲ್ಲರೊಂದಿಗೆ ಯೋಗದಲ್ಲಿ ತೊಡಗುವುದು ವಿಶೇಷವಾಗಿ ಸಂತೋಷಕರವಾಗಿದೆ, ಮತ್ತು ಆ ಕ್ಷಣಗಳು ನಿಜವಾಗಿಯೂ ಸ್ಮರಣೀಯವಾಗಿವೆ. ಆದಾಗ್ಯೂ, ಈ ಬಾರಿ, ವಿವಿಧ ಜವಾಬ್ದಾರಿಗಳಿಂದಾಗಿ ನಾನು ಪ್ರಸ್ತುತ  ಅಮೆರಿಕದಲ್ಲಿದ್ದೇನೆ. ಆದ್ದರಿಂದ, ನಾನು ಈ ವೀಡಿಯೊ ಸಂದೇಶದ ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕಿಸುತ್ತಿದ್ದೇನೆ.

ಸ್ನೇಹಿತರೇ,

ನಾನು ನಿಮ್ಮೊಂದಿಗೆ ಇದ್ದು ಯೋಗಾಭ್ಯಾಸ ಮಾಡಲು ಸಾಧ್ಯವಾಗದಿದ್ದರೂ, ನಾನು ಯೋಗ ಕಾರ್ಯಕ್ರಮಗಳಿಂದ ದೂರ ಉಳಿದಿಲ್ಲ ಎಂದು ನಿಮಗೆ ತಿಳಿಸಬಯಸುವೆ. ಇಂದು ನಾನು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತೀಯ ಕಾಲಮಾನ ಸಂಜೆ 5:30ರ ಸುಮಾರಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಭಾರತದ ಕರೆಗೆ ಪ್ರತಿಕ್ರಿಯೆಯಾಗಿ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. 2014ರಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ʻಅಂತಾರಾಷ್ಟ್ರೀಯ ಯೋಗ ದಿನʼದ ಪ್ರಸ್ತಾಪವನ್ನು ಮಂಡಿಸಿದಾಗ ದಾಖಲೆ ಸಂಖ್ಯೆಯ ದೇಶಗಳು ಅದನ್ನು ಬೆಂಬಲಿಸಿದ್ದು ನಿಮಗೆ ನೆನಪಿರಬಹುದು. ಅಂದಿನಿಂದ, ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ, ಯೋಗವು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದೆ, ಜಾಗತಿಕ ಸ್ಫೂರ್ತಿಯ ಸಂಕೇತವಾಗಿದೆ.

ಸ್ನೇಹಿತರೇ,

ಈ ವರ್ಷ ಯೋಗ ದಿನದ ಕಾರ್ಯಕ್ರಮಗಳನ್ನು 'ಓಷನ್ ರಿಂಗ್ ಆಫ್ ಯೋಗ' ಉಪಕ್ರಮದಿಂದ ಇನ್ನಷ್ಟು ವಿಶೇಷಗೊಳಿಸಲಾಗಿದೆ. 'ಓಷನ್ ರಿಂಗ್ ಆಫ್ ಯೋಗ'ದ ಹಿಂದಿನ ಕಲ್ಪನೆಯು ಯೋಗದ ತತ್ವಶಾಸ್ತ್ರ ಮತ್ತು ಸಾಗರಗಳ ವಿಶಾಲತೆಯ ನಡುವಿನ ಪರಸ್ಪರ ಸಂಬಂಧವನ್ನು ಆಧರಿಸಿದೆ. ನಮ್ಮ ಸೈನಿಕರು ನಮ್ಮ ಜಲಮೂಲಗಳೊಂದಿಗೆ 'ಯೋಗ ಭಾರತ್ ಮಾಲಾ' ಮತ್ತು 'ಯೋಗ ಸಾಗರಮಾಲಾ' ಅನ್ನು ಸಹ ರಚಿಸಿದ್ದಾರೆ. ಅಂತೆಯೇ, ಆರ್ಕ್ಟಿಕ್‌ನಿಂದ ಅಂಟಾರ್ಕ್ಟಿಕಾದವರೆಗಿನ ಭಾರತದ ಎರಡು ಸಂಶೋಧನಾ ನೆಲೆಗಳು ಸಹ ಈ ಬಾರಿ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿವೆ. ಯೋಗದ ಈ ವಿಶಿಷ್ಟ ಆಚರಣೆಯಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಭಾಗವಹಿಸುತ್ತಿರುವುದು, ಯೋಗ ಸಾರವು ಪಡೆದಿರುವ ಪ್ರಚಾರ ಮತ್ತು ಮನ್ನಣೆಯನ್ನು ಎತ್ತಿ ತೋರಿಸುತ್ತದೆ.

ಸಹೋದರ ಸಹೋದರಿಯರೇ,

ನಮ್ಮ ಋಷಿಮುನಿಗಳು ಯೋಗವನ್ನು 'युज्यते एतद् इति योगः' ಎಂದು ವ್ಯಾಖ್ಯಾನಿಸಿದ್ದಾರೆ, ಇದರರ್ಥ 'ಒಂದಾಗುವುದೇ ಯೋಗ'. ಆದ್ದರಿಂದ, ಯೋಗದ ವಿಸ್ತರಣೆಯು ಇಡೀ ಜಗತ್ತನ್ನು ಒಂದು ಕುಟುಂಬವಾಗಿ ಒಳಗೊಳ್ಳುವ ಕಲ್ಪನೆಯ ವಿಸ್ತರಣೆಯಾಗಿದೆ. ಯೋಗದ ವಿಸ್ತರಣೆಯು 'ವಸುದೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಪರಿಕಲ್ಪನೆಯ ವಿಸ್ತರಣೆಯನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಈ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ -20 ಶೃಂಗಸಭೆಯು 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ವಿಷಯಾಧಾರಿತವಾಗಿದೆ. ಇಂದು, ವಿಶ್ವದಾದ್ಯಂತ ಲಕ್ಷಾಂತರ ಜನರು 'ವಸುದೈವ ಕುಟುಂಬಕಂಗಾಗಿ ಯೋಗ' ಎಂಬ ವಿಷಯಾಧಾರಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

ಸ್ನೇಹಿತರೇ,

ಯೋಗ ಮತ್ತು ಅದರ ಪ್ರಯೋಜನಗಳ ಬಗ್ಗೆ ಧರ್ಮಗ್ರಂಥಗಳಲ್ಲಿ: व्यायामात् लभते स्वास्थ्यम्, दीर्घ आयुष्यम् बलम् सुखम्! ಎಂದು ಉಲ್ಲೇಖಿಸಲಾಗಿದೆ. ಇದರ್ಥ:  'ಯೋಗದ ಮೂಲಕ ವ್ಯಕ್ತಿಗಳು ಆರೋಗ್ಯ, ದೀರ್ಘಾಯುಷ್ಯ ಮತ್ತು ಶಕ್ತಿಯನ್ನು ಪಡೆಯುತ್ತಾರೆ' ಎಂದು. ಇತ್ತೀಚಿನ ವರ್ಷಗಳಲ್ಲಿ ನಿಯಮಿತವಾಗಿ ಯೋಗದಲ್ಲಿ ತೊಡಗಿರುವ ನಮ್ಮಲ್ಲಿ ಅನೇಕರು ಯೋಗದ ಶಕ್ತಿಯ ಅನುಭವವನ್ನು ಪಡೆದುಕೊಂಡಿದ್ದಾರೆ. ವೈಯಕ್ತಿಕ ಮಟ್ಟದಲ್ಲಿ ಉತ್ತಮ ಆರೋಗ್ಯದ ಮಹತ್ವವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ನಾವು ಆರೋಗ್ಯ ಬಿಕ್ಕಟ್ಟಿನಿಂದ ರಕ್ಷಣೆ ಪಡೆದಾಗ, ನಮ್ಮ ಕುಟುಂಬಗಳು ಅನೇಕ ತೊಂದರೆಗಳಿಂದ ರಕ್ಷಣೆ ಪಡೆಯುತ್ತವೆ ಎಂಬುದಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಯೋಗವು ಆರೋಗ್ಯಕರ ಮತ್ತು ಸಮರ್ಥ ಸಮಾಜವನ್ನು ಸೃಷ್ಟಿಸುತ್ತದೆ, ಅದರ ಸಾಮೂಹಿಕ ಶಕ್ತಿಯು ಅನೇಕ ಪಟ್ಟು ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ʻಸ್ವಚ್ಛ ಭಾರತʼದಂತಹ ಅಭಿಯಾನಗಳಿಂದ ಹಿಡಿದು ʻಸ್ಟಾರ್ಟ್ ಅಪ್ ಇಂಡಿಯಾʼದಂತಹ ಅಭಿಯಾನಗಳವರೆಗೆ, 'ಆತ್ಮನಿರ್ಭರ ಭಾರತ'(ಸ್ವಾವಲಂಬಿ ಭಾರತ) ನಿರ್ಮಾಣದಿಂದ ʻಸಾಂಸ್ಕೃತಿಕ ಭಾರತʼದ ಪುನರ್ನಿರ್ಮಾಣದವರೆಗೆ, ದೇಶ ಮತ್ತು ಅದರ ಯುವಕರಲ್ಲಿ ಕಂಡುಬರುತ್ತಿರುವ  ಅಸಾಧಾರಣ ವೇಗಕ್ಕೆ ಈ ಶಕ್ತಿಯ ಕೊಡುಗೆ ಅಪಾರವಾದುದು. ಇಂದು, ದೇಶದ ಮನಸ್ಥಿತಿ ಬದಲಾಗಿದೆ, ಮತ್ತು ಅದರ ಪರಿಣಾಮವಾಗಿ, ಜನರು ಮತ್ತು ಜನಜೀವನವು ರೂಪಾಂತರಗೊಂಡಿದೆ.

ಸ್ನೇಹಿತರೇ,

ಅದು ಭಾರತದ ಸಂಸ್ಕೃತಿ ಅಥವಾ ಸಾಮಾಜಿಕ ರಚನೆ, ಭಾರತದ ಆಧ್ಯಾತ್ಮಿಕತೆ ಅಥವಾ ಆದರ್ಶಗಳು, ಭಾರತದ ತತ್ವಶಾಸ್ತ್ರ ಅಥವಾ ದೃಷ್ಟಿಕೋನ ಏನೇ ಇರಲಿ, ನಾವು ಸದಾ ಏಕತೆ, ಸಮೀಕರಣ ಮತ್ತು ಸ್ವೀಕಾರದ ಸಂಪ್ರದಾಯಗಳನ್ನು ಪೋಷಿಸಿದ್ದೇವೆ. ನಾವು ಹೊಸ ಆಲೋಚನೆಗಳನ್ನು ಸ್ವಾಗತಿಸಿದ್ದೇವೆ ಮತ್ತು ಅವುಗಳನ್ನು ರಕ್ಷಿಸಿದ್ದೇವೆ. ನಾವು ವೈವಿಧ್ಯತೆಯನ್ನು ಶ್ರೀಮಂತಗೊಳಿಸಿದ್ದೇವೆ ಮತ್ತು ಅದನ್ನು ಆಚರಿಸಿದ್ದೇವೆ. ಯೋಗವು ಅಂತಹ ಪ್ರತಿಯೊಂದು ಭಾವನೆಯನ್ನು ಬಹಳ ತೀವ್ರತೆಯಿಂದ ಬಲಪಡಿಸುತ್ತದೆ. ಯೋಗವು ನಮ್ಮ ಆಂತರಿಕ ದೃಷ್ಟಿಯನ್ನು ವಿಸ್ತರಿಸುತ್ತದೆ. ಯೋಗವು ಎಲ್ಲಾ ಜೀವಿಗಳ ಏಕತೆಯನ್ನು ಅರಿತುಕೊಳ್ಳುವಂತೆ ಮಾಡುವ ಪ್ರಜ್ಞೆಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತದೆ ಆ ಮೂಲಕ ಇದು ಕೇವಲ ಅಸ್ತಿತ್ವಕ್ಕೆ ಸೀಮಿತಗೊಳ್ಳದ ವಿಶ್ವ ಪ್ರೇಮಕ್ಕೆ ಅಡಿಪಾಯವನ್ನು ಒದಗಿಸುತ್ತದೆ. ಆದ್ದರಿಂದ, ನಾವು ಯೋಗದ ಮೂಲಕ ನಮ್ಮ ಆಂತರಿಕ ಸಂಘರ್ಷಗಳನ್ನು ತೊಡೆದುಹಾಕಬೇಕು. ಯೋಗದ ಮೂಲಕ, ನಾವು ನಮ್ಮ ಅಡೆತಡೆಗಳು ಮತ್ತು ಪ್ರತಿರೋಧಗಳನ್ನು ಜಯಿಸಬೇಕು. ನಾವು 'ಏಕ್ ಭಾರತ್, ಶ್ರೇಷ್ಠ ಭಾರತ್' ಸ್ಫೂರ್ತಿಯನ್ನು ವಿಶ್ವದ ಮುಂದೆ ಉದಾಹರಣೆಯಾಗಿ ಪ್ರಸ್ತುತಪಡಿಸಬೇಕು.

ಸಹೋದರ ಸಹೋದರಿಯರೇ,

ಯೋಗದ ಬಗ್ಗೆ 'योगः कर्मसु कौशलम्' ಎಂದು ಹೇಳಲಾಗುತ್ತದೆ. ಅಂದರೆ ಕ್ರಿಯೆಯಲ್ಲಿ ಪ್ರಾವೀಣ್ಯತೆಯೇ ಯೋಗವಾಗಿದೆ. ಸ್ವಾತಂತ್ರ್ಯದ 'ಅಮೃತ ಕಾಲ'ದ ಸಮಯದಲ್ಲಿ ಈ ಮಂತ್ರವು ನಮ್ಮೆಲ್ಲರಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ನಾವು ನಮ್ಮ ಕರ್ತವ್ಯಗಳಿಗೆ ಸಮರ್ಪಿಸಿಕೊಂಡಾಗ, ನಾವು ಯೋಗದ ಸಾಧನೆಯನ್ನು ಸಾಧಿಸುತ್ತೇವೆ. ಯೋಗದ ಮೂಲಕ, ನಾವು ನಿಸ್ವಾರ್ಥ ಕ್ರಿಯೆಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಾವು ಕರ್ತವ್ಯದ ಮೂಲಕ ಕರ್ಮ ಯೋಗದ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ನಾವು ನಮ್ಮ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ ಯೋಗದ ಮೂಲಕ ನಮ್ಮೊಳಗಿನ ಈ ಸಂಕಲ್ಪಗಳನ್ನು ವ್ಯಕ್ತಪಡಿಸುತ್ತೇವೆ ಎಂದು ನಾನು ನಂಬುತ್ತೇನೆ. ನಮ್ಮ ಶಾರೀರಿಕ ಶಕ್ತಿ, ಮಾನಸಿಕ ವಿಕಸನ, ಪ್ರಜ್ಞೆ ಮತ್ತು ಸಾಮೂಹಿಕ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಲಿದೆ. ಈ ಸಂಕಲ್ಪದೊಂದಿಗೆ, ನಾನು ಮತ್ತೊಮ್ಮೆ ಅಂತಾರಾಷ್ಟ್ರೀಯ ಯೋಗ ದಿನದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ!

ಧನ್ಯವಾದಗಳು!

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • JBL SRIVASTAVA May 27, 2024

    मोदी जी 400 पार
  • Vaishali Tangsale February 12, 2024

    🙏🏻🙏🏻🙏🏻✌️
  • ज्योती चंद्रकांत मारकडे February 11, 2024

    जय हो
  • ज्योती चंद्रकांत मारकडे February 11, 2024

    जय हो
  • parikshit bhatt July 02, 2023

    🙏
  • વીભાભાઈ ડવ June 28, 2023

    Jay hind jay Bharat
  • Amit Jha June 26, 2023

    🙏🏼#NarendraModithearchitectofNewIndia
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
‘Bharat looks bhavya': Gaganyatri Shubhanshu Shukla’s space mission inspires a nation

Media Coverage

‘Bharat looks bhavya': Gaganyatri Shubhanshu Shukla’s space mission inspires a nation
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಜುಲೈ 2025
July 07, 2025

Appreciation by Citizens for PM Modi’s Diplomacy at BRICS 2025, Strengthening Global Ties