Quote“ಕ್ರೀಡೆಯಲ್ಲಿ ಸೋಲು ಎಂಬುದಿಲ್ಲ; ನೀವು ಗೆಲ್ಲುತ್ತೀರಿ ಅಥವಾ ಕಲಿಯುತ್ತೀರಿ"
Quote" ಮೈದಾನದಲ್ಲಿರುವ ಆಟಗಾರರ ಉತ್ಸಾಹದೊಂದಿಗೆ ಕ್ರೀಡೆಗಾಗಿರುವ ಕೇಂದ್ರ ಸರ್ಕಾರದ ಉತ್ಸಾಹವು ಪ್ರತಿಧ್ವನಿಸುತ್ತದೆ"
Quote"ರಾಜಸ್ಥಾನದ ಕೆಚ್ಚೆದೆಯ ಯುವಕರು ನಿರಂತರವಾಗಿ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ"
Quote"ಉತ್ಕೃಷ್ಟತೆಗೆ ಯಾವುದೇ ಮಿತಿಯಿಲ್ಲ ಎಂದು ಕ್ರೀಡೆಗಳು ನಮಗೆ ಕಲಿಸುತ್ತವೆ ಮತ್ತು ನಾವು ನಮ್ಮ ಎಲ್ಲಾ ಶಕ್ತಿಯಿಂದ ಶ್ರಮಿಸಬೇಕು"
Quote"ರಾಜಸ್ಥಾನದ ಜನರಿಗೆ ಸಬಲೀಕರಣ ಮತ್ತು ಜೀವನವನ್ನು ಸುಲಭಗೊಳಿಸುವುದು ಡಬಲ್ ಇಂಜಿನ್ ಸರ್ಕಾರದ ಗುರಿಯಾಗಿದೆ"

ನನ್ನ ಪ್ರೀತಿಯ ಯುವ ಸ್ನೇಹಿತರೇ,

ಪಾಲಿನಲ್ಲಿ ಜರುಗಿದ ಈ ಪಾಲಿ ಸಂಸತ್ ಖೇಲ್ ಮಹಾಕುಂಭದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿದ ಎಲ್ಲಾ ಆಟಗಾರರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕ್ರೀಡೆಯಲ್ಲಿ ಎಂದಿಗೂ ನಷ್ಟವಿಲ್ಲ. ಕ್ರೀಡೆಯಲ್ಲಿ, ನೀವು ಗೆಲ್ಲುತ್ತೀರಿ ಅಥವಾ ಕಲಿಯುತ್ತೀರಿ. ಆದ್ದರಿಂದ, ನಾನು ಎಲ್ಲಾ ಆಟಗಾರರಿಗೆ ಮತ್ತು ಅವರ ತರಬೇತುದಾರರಿಗೆ ಮತ್ತು ಅಲ್ಲಿರುವ ಕುಟುಂಬ ಸದಸ್ಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ,

ಸಂಸತ್ ಖೇಲ್ ಮಹಾಕುಂಭದಲ್ಲಿ ಕಂಡುಬರುವ ಉತ್ಸಾಹ, ಆತ್ಮವಿಶ್ವಾಸ, ಹುರುಪು ಮತ್ತು ಉಲ್ಲಾಸವು ಪ್ರತಿಯೊಬ್ಬ ಆಟಗಾರ ಮತ್ತು ಯುವಕರ ಗುರುತಾಗಿದೆ. ಇಂದು ಮೈದಾನದಲ್ಲಿ ಆಟಗಾರರಿಗೆ ಸೇರಿರುವ ಕ್ರೀಡೆಯ ಬಗ್ಗೆಯೂ ಸರ್ಕಾರ ಅದೇ ಸ್ಪೂರ್ತಿ ಹೊಂದಿದೆ. ನಮ್ಮ ಆಟಗಾರರು ಯಾವಾಗಲೂ ತಳಮಟ್ಟದಲ್ಲಿ ಆಡಲು, ತಮ್ಮ ಹಳ್ಳಿಗಳಲ್ಲಿ, ತಮ್ಮ ಶಾಲೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ ಆಡಲು ಮತ್ತು ನಂತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೆಚ್ಚಿನ ಅವಕಾಶಗಳನ್ನು ಬಯಸುತ್ತಾರೆ. ಭಾರತೀಯ ಜನತಾ ಪಕ್ಷದ ಸಂಸದರು ಏರ್ಪಡಿಸಿದ ಈ ಸಂಸತ್ ಖೇಲ್ ಮಹಾಕುಂಭ್ ಸ್ಪರ್ಧಾಕೂಟವು ಆಟಗಾರರ ಉತ್ಸಾಹವನ್ನು ಹೆಚ್ಚಾಗುವಂತೆ ಮಾಡುತ್ತದೆ. ಸಂಸತ್ತಿನ ಸದಸ್ಯರ ಮೂಲಕ ಇಂತಹ ಕ್ರೀಡಾ ಹಬ್ಬಗಳನ್ನು ಆಯೋಜಿಸಿದ್ದಕ್ಕಾಗಿ ನಾನು ವಿಶೇಷವಾಗಿ ಭಾರತೀಯ ಜನತಾ ಪಕ್ಷವನ್ನು ಶ್ಲಾಘಿಸಲು ಬಯಸುತ್ತೇನೆ. ಮತ್ತು ಈ ಉಪಕ್ರಮವು ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಸಂಸತ್ ಖೇಲ್ ಮಹಾಕುಂಭವು ಲಕ್ಷಾಂತರ ಪ್ರತಿಭಾವಂತ ಆಟಗಾರರಿಗೆ ಜಿಲ್ಲೆಗಳು, ರಾಜ್ಯಗಳು ಮತ್ತು ಅದರಾಚೆಯೂ ಆಡುವ ಅವಕಾಶವನ್ನು ಒದಗಿಸಿದೆ. ಈ ಖೇಲ್ ಮಹಾಕುಂಭವು ಹೊಸ ಆಟಗಾರರನ್ನು ಹುಡುಕುವ ಮತ್ತು ಪೋಷಿಸುವ ಮಹತ್ವದ ವೇದಿಕೆಯಾಗುತ್ತಿದ್ದು, ಇದೀಗ ಬಿಜೆಪಿ ಸಂಸದರು ಹೆಣ್ಣುಮಕ್ಕಳಿಗಾಗಿ ವಿಶೇಷ ಖೇಲ್ ಮಹಾಕುಂಭವನ್ನು ಆಯೋಜಿಸಲು ಮುಂದಾಗಿದ್ದಾರೆ. ಈ ಕ್ರೀಡೋತ್ಸವಕ್ಕೆ ನೀಡುವ ಮಹತ್ವದ ಪ್ರಚಾರಕ್ಕಾಗಿ  ನಾನು ಬಿಜೆಪಿ ಮತ್ತು ಅದರ ಸಂಸದರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಪಾಲಿಯಲ್ಲಿ 1100 ಕ್ಕೂ ಹೆಚ್ಚು ಶಾಲಾ ಮಕ್ಕಳು ಸಂಸತ್ ಖೇಲ್ ಮಹಾಕುಂಭದಲ್ಲಿ ಭಾಗವಹಿಸಿದ್ದಾರೆ, ಎರಡು ಲಕ್ಷಕ್ಕೂ ಅಧಿಕ ಆಟಗಾರರು ಆಡಲು ಮುಂದೆ ಬಂದಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಈ ಮಹಾಕುಂಭದ ಮೂಲಕ ಈ ಎರಡು ಲಕ್ಷ ಆಟಗಾರರು ಪಡೆದ ಮಾನ್ಯತೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಅಭೂತಪೂರ್ವವಾಗಿದೆ. ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಪಿ.ಪಿ. ಚೌಧರಿಯವರನ್ನು ಅಭಿನಂದಿಸುತ್ತೇನೆ. ರಾಜಸ್ಥಾನ  ಭೂಮಿಯ ಕೆಚ್ಚೆದೆಯ ಯುವಕರು ಮಿಲಿಟರಿಯಿಂದ ಕ್ರೀಡೆಯವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಯಾವಾಗಲೂ ರಾಷ್ಟ್ರದ ಹೆಮ್ಮೆಯನ್ನು ಎತ್ತಿ ಹಿಡಿದಿದ್ದಾರೆ. ನೀವೆಲ್ಲರೂ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತೀರಿ ಎಂದು ನಾನು ನಂಬುತ್ತೇನೆ. ನಿಮಗೆ ಗೊತ್ತಾ, ಕ್ರೀಡೆಯ ಉತ್ತಮ ವಿಷಯವೆಂದರೆ ಕ್ರೀಡಾಳುಗಳು ಗೆಲ್ಲುವ ಅಭ್ಯಾಸವನ್ನು ಹುಟ್ಟುಹಾಕುವುದು ಮಾತ್ರವಲ್ಲದೆ ನಿರಂತರವಾಗಿ ನಿಮಗೆ ಉತ್ತಮವಾಗಲು ಕಲಿಸುತ್ತಾರೆ. ಶ್ರೇಷ್ಠತೆಗೆ ಅಂತಿಮ ಮಿತಿಯಿಲ್ಲ ಎಂದು ಕ್ರೀಡೆಗಳು ನಮಗೆ ಕಲಿಸುತ್ತವೆ; ನಾವು ನಮ್ಮ ಎಲ್ಲಾ ಶಕ್ತಿಯಿಂದ ಶ್ರಮಿಸಬೇಕು. ಆದ್ದರಿಂದ, ಈ ಖೇಲ್ ಮಹಾಕುಂಭವು ಒಂದು ರೀತಿಯಲ್ಲಿ, ನಿಮ್ಮ ಜೀವನವನ್ನು ಪರಿವರ್ತಿಸುವ ಒಂದು ದೊಡ್ಡ 'ಯಜ್ಞ' ವಾಗಿದೆ.

 

|

ಸ್ನೇಹಿತರೇ,

ಕ್ರೀಡೆಯ ಮತ್ತೊಂದು ದೊಡ್ಡ ಶಕ್ತಿ ಎಂದರೆ ಯುವಕರನ್ನು ಅನೇಕ ದುಶ್ಚಟಗಳಿಂದ ರಕ್ಷಿಸುತ್ತದೆ. ಕ್ರೀಡೆಯು ಇಚ್ಛಾಶಕ್ತಿಯನ್ನು ಬಲಪಡಿಸುತ್ತದೆ, ಗಮನವನ್ನು , ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಗಮನವನ್ನು ಸ್ಪಷ್ಟವಾಗಿರಿಸುತ್ತದೆ. ಅಮಲು ವಸ್ತುಗಳ(ಡ್ರಗ್ಸ್) ಬಲೆಯಾಗಲಿ, ಬೇರೆ ಪದಾರ್ಥಗಳ ಚಟವಾಗಲಿ - ಇವೆಲ್ಲದರಿಂದ ಆಟಗಾರರು ದೂರ ಉಳಿಯುತ್ತಾರೆ. ಆದ್ದರಿಂದ ವ್ಯಕ್ತಿತ್ವ ವಿಕಸನದಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ.

ನನ್ನ ಆತ್ಮೀಯ ಸ್ನೇಹಿತರೇ,

ರಾಜ್ಯ ಅಥವಾ ಕೇಂದ್ರದ ಬಿಜೆಪಿ ಸರ್ಕಾರ ಯುವಜನರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವ ಮೂಲಕ... ಆಟಗಾರರ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಮೂಲಕ... ಪ್ರತಿಯೊಂದು ಸಂಪನ್ಮೂಲ ಲಭ್ಯವಾಗುವಂತೆ ಮಾಡುವ ಮೂಲಕ... ಭಾರತೀಯ ಆಟಗಾರರಿಗೆ ಸಾಕಷ್ಟು ನೆರವು ಸಿಕ್ಕಿದೆ. ಹಿಂದಿನ ಬಜೆಟ್ಗೆ ಹೋಲಿಸಿದರೆ, ಕಳೆದ 10 ವರ್ಷಗಳಲ್ಲಿ, ನಾವು ಕ್ರೀಡೆಗೆ ಮೂರು ಪಟ್ಟು ಹೆಚ್ಚಿಸಿದ್ದೇವೆ. ಟಾಪ್ಸ್ ( ಟಿ.ಒ.ಪಿ.ಎಸ್ ) ಯೋಜನೆಯಡಿಯಲ್ಲಿ ನೂರಾರು ಕ್ರೀಡಾಪಟುಗಳು ಪ್ರಸ್ತುತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ, ಖೇಲೋ ಇಂಡಿಯಾ ಗೇಮ್ಸ್ ಅಡಿಯಲ್ಲಿ 3,000 ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಸುಮಾರು ಸಾವಿರ ಖೇಲೋ ಇಂಡಿಯಾ ಕೇಂದ್ರಗಳ ಮೂಲಕ ತಳಮಟ್ಟದಲ್ಲಿ ಲಕ್ಷಾಂತರ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಮತ್ತು ಇವುಗಳೆಲ್ಲದರ ಫಲಿತಾಂಶಗಳು ನಮ್ಮ ಮುಂದಿವೆ... ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ನಮ್ಮ ಆಟಗಾರರು 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಹೆಚ್ಚಿನ ಸಂಖ್ಯೆಯ ಪದಕ ವಿಜೇತ ಆಟಗಾರರು ಖೇಲೋ ಇಂಡಿಯಾ ಗೇಮ್ಸ್ನಿಂದಲೂ ಹೊರಹೊಮ್ಮಿದ್ದಾರೆ.

ನನ್ನ ಪ್ರೀತಿಯ ಆಟಗಾರರೇ,

ಆಟಗಾರನು ತಂಡಕ್ಕಾಗಿ ಆಡಿದಾಗ, ಅವನು ವೈಯಕ್ತಿಕ ಗುರಿಗಳಿಗಿಂತ ತನ್ನ ತಂಡದ ಗುರಿಗಳಿಗೆ ಹೆಚ್ಚನ ಆದ್ಯತೆ ನೀಡುತ್ತಾನೆ. ಅವನು ತನ್ನ ತಂಡ, ಅವನ ರಾಜ್ಯ ಮತ್ತು ಅವನ ದೇಶದ ಗುರಿಗಳೊಂದಿಗೆ ಭುಜದಿಂದ ಭುಜಕ್ಕೆ ಕೊಟ್ಟು ಸಾಗುತ್ತಾನೆ. ಇಂದು ರಾಷ್ಟ್ರವೂ ‘ಅಮೃತ ಕಾಲ’ದಲ್ಲಿ ಸಂಚರಿಸುತ್ತಿದೆ, ಯುವ ಸ್ಪೂರ್ತಿಯೊಂದಿಗೆ ಮುನ್ನಡೆಯುತ್ತಿದೆ. ಇದೇ, ಫೆ.1ರಂದು ಘೋಷಣೆಯಾಗಿರುವ ಬಜೆಟ್ ಕೂಡ ಒಂದು ರೀತಿಯಲ್ಲಿ ದೇಶದ ಯುವಜನತೆಗೆ ಮೀಸಲಾಗಿದೆ. ಕೇಂದ್ರ  ಸರಕಾರ 2017-18ನೇ ಸಾಲಿನಲ್ಲಿ ರೈಲುಮಾರ್ಗಗಳು ಮತ್ತು ಆಧುನಿಕ ಮೂಲಸೌಕರ್ಯಗಳಿಗಾಗಿ ರೂ. 11 ಲಕ್ಷ ಕೋಟಿ ವೆಚ್ಚ ಮಾಡಲು ಹೊರಟಿದೆ, ಇದರ ದೊಡ್ಡ ಫಲಾನುಭವಿಗಳೆಂದರೆ ಅದು ಯುವ ಜನತೆ. ಉತ್ತಮ ರಸ್ತೆಗಳನ್ನು ಯಾರು ಹೆಚ್ಚು ಬಯಸುತ್ತಾರೆ? ಇದು ನಮ್ಮ ಯುವಕರು. ಹೊಸ ವಂದೇ ಭಾರತ್ ರೈಲುಗಳನ್ನು ನೋಡಿ ಯಾರು ಹೆಚ್ಚು ಸಂತೋಷಪಡುತ್ತಾರೆ? ಇದು ನಮ್ಮ ಯುವ ಪೀಳಿಗೆ. ಬಜೆಟ್ನಲ್ಲಿ 40,000 ವಂದೇ ಭಾರತ್ ಉತ್ಪಾದನೆ ಮಾಡುವ ಘೋಷಣೆಯಿಂದ ಯಾರಿಗೆ ಲಾಭವಾಗುತ್ತದೆ? ಇದು ನಮ್ಮ ಯುವಕರಿಗೆ ಪ್ರಯೋಜನಕಾರಿ. ಆಧುನಿಕ ಮೂಲಸೌಕರ್ಯಕ್ಕಾಗಿ ರೂ. 11 ಲಕ್ಷ ಕೋಟಿ ವ್ಯಯಿಸಲಾಗುತ್ತಿದ್ದು, ಇದು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಭಾರತದ ಯುವಕರಿಗಾಗಿ ರೂ. 1 ಲಕ್ಷ ಕೋಟಿಯ ನಿಧಿಯನ್ನು  ರಚಿಸಲಾಗಿದೆ, ಇದರಿಂದಾಗಿ ಅವರು ಕ್ರೀಡೆ ಅಥವಾ ಅವರ ಆಸಕ್ತಿಯ ಇತರ ಕ್ಷೇತ್ರಗಳಲ್ಲಿ ಹೊಸ ಹೊಸ ದಾರಿಗಳನ್ನು ಅನ್ವೇಷಿಸಬಹುದು ಮತ್ತು ತಮ್ಮದೇ ಆದ ದೊಡ್ಡ ಕಂಪನಿಗಳನ್ನು ಸ್ಥಾಪಿಸಬಹುದು. ನವೋದ್ಯಮ (ಸ್ಟಾರ್ಟ್ಅಪ್) ಗಳಿಗೆ ತೆರಿಗೆ ವಿನಾಯಿತಿ ವಿಸ್ತರಣೆಯನ್ನೂ ಸರ್ಕಾರ ಘೋಷಿಸಿದೆ, ಇದು ನಮ್ಮ ಯುವ ಪ್ರತಿಭೆಗಳಿಗೆ ಸಹಾಯಕವಾಗಲಿದೆ.

ಸ್ನೇಹಿತರೇ,

ಸುತ್ತ ಮುತ್ತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಪಾಲಿ ಲೋಕಸಭಾ ಕ್ಷೇತ್ರದ ಹಣೆಬರಹವನ್ನೇ ಬದಲಿಸಿ, ಪಾಲಿಗೆ ಪರಿವರ್ತನೆಯ ನೂತನ  ಚಿತ್ರಣವನ್ನು ನೀಡಿದೆ. ಪಾಲಿ ಲೋಕಸಭಾ ಕ್ಷೇತ್ರವೊಂದರಲ್ಲೇ ಸುಮಾರು 13,000 ಕೋಟಿ ರೂಪಾಯಿ ವೆಚ್ಚದ ರಸ್ತೆಗಳನ್ನು ನಿರ್ಮಿಸಲಾಗಿದೆ. ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ಸೇತುವೆಗಳು, ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ಮತ್ತು ಇಂತಹ ಅನೇಕ ಅಭಿವೃದ್ಧಿ ಯೋಜನೆಗಳು ನಿಮಗೆಲ್ಲರಿಗೂ ಪ್ರಯೋಜನವನ್ನು ನೀಡುತ್ತಿವೆ. ಪಾಲಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಒದಗಿಸುವುದು ಮತ್ತು ಅವರ ಕೌಶಲ್ಯ ಅಭಿವೃದ್ಧಿಯತ್ತಲೂ ಸರ್ಕಾರದ ಗಮನವಿದೆ. ಪಾಲಿಯಲ್ಲಿ ಹಲವಾರು ಹೊಸ ಐಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಎರಡು ಕೇಂದ್ರೀಯ ಶಾಲೆಗಳನ್ನು ಸಹ ತೆರೆಯಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣವಾಗಲಿ ಅಥವಾ ಹೊಸ ಕಂಪ್ಯೂಟರ್ ಲ್ಯಾಬ್ಗಳ ನಿರ್ಮಾಣವಾಗಲಿ ಎಲ್ಲ ದಿಕ್ಕುಗಳಲ್ಲಿಯೂ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಪಾಸ್ ಪೋರ್ಟ್ ಕೇಂದ್ರಗಳ ಸ್ಥಾಪನೆ, ಹಳ್ಳಿಗಳಲ್ಲಿ ಸೌರಶಕ್ತಿ ದೀಪಗಳ ಅಳವಡಿಕೆ - ಇವೆಲ್ಲವೂ ಪಾಲಿ ಲೋಕಸಭಾ ಕ್ಷೇತ್ರದಲ್ಲಿ ಜನಜೀವನವನ್ನು ಸುಗಮಗೊಳಿಸಿದೆ. ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ, ಪಾಲಿ ಸೇರಿದಂತೆ ರಾಜಸ್ಥಾನದ ಪ್ರತಿಯೊಬ್ಬ ನಾಗರಿಕರನ್ನು ಸಬಲೀಕರಣಗೊಳಿಸುವುದು ನಮ್ಮ ಪ್ರಯತ್ನವಾಗಿದೆ, ಇದರಿಂದ ಅವರು ಯಶಸ್ವಿಯಾಗುತ್ತಾರೆ. ಬಿಜೆಪಿ ಸರ್ಕಾರದ ಈ ಪ್ರಯತ್ನಗಳು ಪಾಲಿ ಮತ್ತು ಈ ಇಡೀ ಪ್ರದೇಶದ ಯುವಕರ ಜೀವನವನ್ನು ಸುಲಭಗೊಳಿಸುತ್ತಿವೆ. ಮತ್ತು ಜೀವನವು ಕಡಿಮೆ ಸವಾಲನ್ನು ಹೊಂದಿದಾಗ, ಒಬ್ಬರು ಆಟದಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಗೆಲ್ಲುವ ಸಾಧ್ಯತೆಗಳು ಸಹ ಹೆಚ್ಚಾಗುತ್ತವೆ. ಮತ್ತೊಮ್ಮೆ, ನಾನು ಎಲ್ಲಾ ಆಟಗಾರರನ್ನು ಅಭಿನಂದಿಸುತ್ತೇನೆ. ತುಂಬ ಧನ್ಯವಾದಗಳು.

 

  • Jitendra Kumar April 16, 2025

    🙏🇮🇳❤️
  • कृष्ण सिंह राजपुरोहित भाजपा विधान सभा गुड़ामा लानी November 21, 2024

    बीजेपी
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • krishangopal sharma Bjp July 19, 2024

    नमो नमो 🙏 जय भाजपा 🙏
  • krishangopal sharma Bjp July 19, 2024

    नमो नमो 🙏 जय भाजपा 🙏
  • krishangopal sharma Bjp July 19, 2024

    नमो नमो 🙏 जय भाजपा 🙏
  • JBL SRIVASTAVA May 27, 2024

    मोदी जी 400 पार
  • ROYALINSTAGREEN April 05, 2024

    i request you can all bjp supporter following my Instagram I'd _Royalinstagreen 🙏🙏
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
New trade data shows significant widening of India's exports basket

Media Coverage

New trade data shows significant widening of India's exports basket
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಮೇ 2025
May 17, 2025

India Continues to Surge Ahead with PM Modi’s Vision of an Aatmanirbhar Bharat