"ಮದಡಾ ಧಾಮವು ಚರಣ್ ಸಮುದಾಯಕ್ಕೆ ಶ್ರದ್ಧೆ, ಶಕ್ತಿ, ಆಚರಣೆ ಮತ್ತು ಸಂಪ್ರದಾಯಗಳ ಕೇಂದ್ರವಾಗಿದೆ"
"ಶ್ರೀ ಸೋನಲ್ ಮಾತಾ ಅವರ ಆಧ್ಯಾತ್ಮಿಕ ಶಕ್ತಿ, ಮಾನವೀಯ ಬೋಧನೆಗಳು ಮತ್ತು ತಪಸ್ಸು ಅವರ ವ್ಯಕ್ತಿತ್ವದಲ್ಲಿ ಅದ್ಭುತವಾದ ದೈವಿಕತೆಯನ್ನು ಸೃಷ್ಟಿಸಿದೆ, ಅದನ್ನು ಇಂದಿಗೂ ಅನುಭವಿಸಬಹುದು"
"ಸೋನಲ್ ಮಾತಾ ಅವರ ಇಡೀ ಜೀವನವು ಸಾರ್ವಜನಿಕ ಕಲ್ಯಾಣ, ದೇಶ ಮತ್ತು ಧರ್ಮದ ಸೇವೆಗೆ ಮುಡಿಪಾಗಿತ್ತು"
"ದೇಶಭಕ್ತಿ ಗೀತೆಗಳಾಗಲಿ ಅಥವಾ ಆಧ್ಯಾತ್ಮಿಕ ಉಪದೇಶಗಳಾಗಲಿ ಚರಣ್ ಸಾಹಿತ್ಯವು ಶತಮಾನಗಳಿಂದ ಪ್ರಮುಖ ಪಾತ್ರವನ್ನು ವಹಿಸಿದೆ"
"ಸೋನಲ್ ಮಾತಾ ಅವರಿಂದ ರಾಮಾಯಣದ ಕಥೆಯನ್ನು ಕೇಳಿದವರು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ"

ಪ್ರಸ್ತುತ ಆಧ್ಯಾತ್ಮಿಕ ನಾಯಕ (ಗಾದಿಪತಿ) ಪೂಜ್ಯ ಕಾಂಚನ್ ಮಾ, ಮತ್ತು ಆಡಳಿತಾಧಿಕಾರಿ ಪೂಜ್ಯ ಗಿರೀಶ್ ಆಪಾ! ಇಂದು ಈ  ಶುಭ ಮಾಸದಲ್ಲಿ, ನಾವೆಲ್ಲರೂ ಆಯಿ ಶ್ರೀ ಸೋನಾಲ್ ಮಾ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ. ತಾಯಿ ಸೋನಾಲ್ ಅವರ ಆಶೀರ್ವಾದದ ಕೃಪೆಯಲ್ಲಿ ಈ ಪವಿತ್ರ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಲು ಅವಕಾಶ ಸಿಕ್ಕಿರುವುದು ನಿಜಕ್ಕೂ ನನ್ನ ಪಾಲಿಗೆ ಒಂದು ವಿಶೇಷ ಕ್ಷಣವಾಗಿದೆ. ಇಡೀ ಚರಣ್ ಸಮುದಾಯಕ್ಕೆ, ನಿರ್ವಾಹಕರಿಗೆ ಮತ್ತು ಸೋನಲ್ ಮಾ ಅವರ ಭಕ್ತರಿಗೆ ಅಭಿನಂದನೆಗಳು. ಚರಣ್ ಸಮುದಾಯಕ್ಕೆ ಪೂಜ್ಯ, ಶಕ್ತಿ ಮತ್ತು ಸಂಪ್ರದಾಯಗಳ ಕೇಂದ್ರವಾಗಿ ಮಾಢಡಾ ಧಾಮ್ ವಿಶೇಷ ಸ್ಥಾನವನ್ನು ಹೊಂದಿದೆ. ನಾನು ವಿನಯಪೂರ್ವಕವಾಗಿ ಶ್ರೀ ಆಯಿಯ ಪಾದಗಳಿಗೆ ನನ್ನನ್ನು ಅರ್ಪಿಸುತ್ತೇನೆ ಮತ್ತು ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಕುಟುಂಬದ ಸದಸ್ಯರೇ,     

ದೇವಿಯ ಅವತಾರವಾದ ಸೋನಾಲ್ ಮಾ, ಭರತ ಭೂಮಿ ಎಂದಿಗೂ ಅವತಾರ ಆತ್ಮಗಳಿಂದ ಮುಕ್ತವಾಗಿಲ್ಲ, ಈ ಮೂರು ದಿನಗಳ ಜನ್ಮ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ, ಶ್ರೀ ಸೋನಾಲ್ ಮಾ ಅವರ ನೆನಪುಗಳು ನಮ್ಮನ್ನು ಸದಾ ಸುತ್ತುವರೆದಿರುತ್ತವೆ.  ಸೌರಾಷ್ಟ್ರ, ಗುಜರಾತ್, ನಿರ್ದಿಷ್ಟವಾಗಿ, ಇಡೀ ಮಾನವಕುಲಕ್ಕೆ ತಮ್ಮ ಬೆಳಕನ್ನು ಪ್ರಸರಣ ಮಾಡಿದ ಮಹಾನ್ ಋಷಿಗಳು ಮತ್ತು ವ್ಯಕ್ತಿಗಳ ಜನ್ಮಸ್ಥಳವಾಗಿದೆ. ಪವಿತ್ರ ಗಿರ್ನಾರ್ ಭಗವಾನ್ ದತ್ತಾತ್ರೇಯ ಮತ್ತು ಹಲವಾರು ಇತರ ಋಷಿಗಳ ಉಪಸ್ಥಿತಿಗೆ ಈ ನಾಡು ಸಾಕ್ಷಿಯಾಗಿದೆ. ಸೌರಾಷ್ಟ್ರದ 'ಸನಾತನ ಸಂತ' ಸಂಪ್ರದಾಯದಲ್ಲಿ, ಶ್ರೀ ಸೋನಾಲ್ ಮಾ ಆಧುನಿಕ ಯುಗಕ್ಕೆ ಬೆಳಕಿನ ದೀಪವಾಗಿದ್ದಾರೆ. ಅವರ ಆಧ್ಯಾತ್ಮಿಕ ಶಕ್ತಿ, ಮಾನವೀಯ ಬೋಧನೆಗಳು ಮತ್ತು ತಪಸ್ಸು ಅವರ ವ್ಯಕ್ತಿತ್ವದಲ್ಲಿ ದೈವಿಕ ಮೋಡಿಯನ್ನು ಸೃಷ್ಟಿಸಿದೆ, ಅದು ಜುನಾಗಢ್ ಮತ್ತು ಮುಂದ್ರಾದ ಸೋನಾಲ್ ಧಾಮ್ ನಲ್ಲಿ ಇಂದಿಗೂ ಸದಾ ಪ್ರತಿಧ್ವನಿಸುತ್ತಲೇ ಇದೆ.

 

ಸಹೋದರ ಸಹೋದರಿಯರೇ,

ಸೋನಾಲ್ ಮಾ ತನ್ನ ಇಡೀ ಜೀವನವನ್ನು ಸಾರ್ವಜನಿಕ ಕಲ್ಯಾಣ, ದೇಶ ಸೇವೆ ಮತ್ತು ಧರ್ಮಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಭಗತ್ ಬಾಪು, ವಿನೋಬಾ ಭಾವೆ, ರವಿಶಂಕರ್ ಮಹಾರಾಜ್, ಕನುಭಾಯಿ ಲಹೇರಿ ಮತ್ತು ಕಲ್ಯಾಣ್ ಶೇಠ್ ಅವರಂತಹ ಗಣ್ಯ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದರು. ಚರಣ್ ಸಮುದಾಯದ ವಿದ್ವಾಂಸರಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಅನೇಕ ಯುವಕರಿಗೆ ದಿಕ್ಕು ತೋರಿಸುವ ಮೂಲಕ ಅವರ ಜೀವನವನ್ನು ಬದಲಾಯಿಸಿದರು. ಶಿಕ್ಷಣ, ವ್ಯಸನದ ನಿರ್ಮೂಲನೆ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಅವರ ಕೊಡುಗೆ ಗಮನಾರ್ಹವಾಗಿದೆ. ಸಮಾಜವನ್ನು ಅನಿಷ್ಟ ಪದ್ಧತಿಗಳಿಂದ ಪಾರು ಮಾಡುವ ಕೆಲಸವನ್ನು ಸೋನಲ್ ಮಾ ಮುಂದುವರೆಸಿದರು. ಅವರು ಕಛ್  ನ ವೋವರ್ ಗ್ರಾಮದಿಂದ ಬೃಹತ್ ಪ್ರತಿಜ್ಞೆ ಅಭಿಯಾನವನ್ನು ಆರಂಭಿಸಿದ್ದರು. ಕಷ್ಟಪಟ್ಟು ದುಡಿಯಲು ಮತ್ತು ಸ್ವಾವಲಂಬಿಯಾಗಲು ಎಲ್ಲರಿಗೂ ಕಲಿಸಿದರು. ಜಾನುವಾರುಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಿದ್ದರು. ಅವರು ಜಾನುವಾರುಗಳ ರಕ್ಷಣೆಗಾಗಿ ಯಾವಾಗಲೂ  ಪ್ರತಿಪಾದಿಸುತ್ತಿದ್ದರು.

ಸ್ನೇಹಿತರೇ,

ತನ್ನ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ, ಸೋನಾಲ್ ಮಾ ದೇಶದ ಏಕತೆ ಮತ್ತು ಸಮಗ್ರತೆಯ ದೃಢವಾದ ಕಾವಲುಗಾರರಾಗಿದ್ದರು. ಭಾರತದ ವಿಭಜನೆಯ ಸಮಯದಲ್ಲಿ, ಜುನಾಗಢವನ್ನು ವಶಪಡಿಸಿಕೊಳ್ಳಲು ಪಿತೂರಿಗಳು ಗುರಿಯಿಟ್ಟುಕೊಂಡಾಗ, ಸೋನಾಲ್ ಮಾ ಚಂಡಿ ದೇವಿಯಂತೆಯೇ ದೃಢವಾಗಿ ನಿಂತರು.

 

ಕುಟುಂಬದ ಸದಸ್ಯರೇ,

ಆಯಿ ಶ್ರೀ ಸೋನಾಲ್ ಮಾ ಅವರು ದೇಶಕ್ಕೆ, ಚರಣ್ ಸಮಾಜಕ್ಕೆ ಮತ್ತು ಸರಸ್ವತಿ ದೇವಿಯ ಎಲ್ಲಾ ಆರಾಧಕರಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿ ಚರಣ್ ಸಮುದಾಯಕ್ಕೆ ವಿಶೇಷ ಸ್ಥಾನ ಮತ್ತು ಗೌರವವಿದೆ. ಭಗವತ್ ಪುರಾಣದ ಪಠ್ಯಗಳ ಪ್ರಕಾರ, ಚರಣ್ ಸಮುದಾಯವು ಶ್ರೀ ಹರಿಯ ನೇರ ವಂಶಸ್ಥರು ಎಂದು ನಂಬಲಾಗಿದೆ. ಈ ಸಮುದಾಯಕ್ಕೆ ಸರಸ್ವತಿ ದೇವಿಯ ಆಶೀರ್ವಾದವಿದೆ. ಆದ್ದರಿಂದಲೇ, ಪೂಜ್ಯ ತರಣ್ ಬಾಪು, ಪೂಜ್ಯ ಇಸಾರ್ ದಾಸ್ ಜಿ, ಪಿಂಗಲ್ಶಿ ಬಾಪು, ಪೂಜ್ಯ ಕಾಗ್ ಬಾಪು, ಮೇರುಭಾ ಬಾಪು, ಶಂಕರದನ್ ಬಾಪು, ಶಂಭುದನ್ ಜಿ, ಭಜನಿಕ್ ನಾರಾಯಣ ಸ್ವಾಮಿ, ಹೇಮುಭಾಯ್ ಗಧ್ವಿ, ಪದ್ಮಶ್ರೀ ಕವಿ ದಾದ್, ಮತ್ತು ಪದ್ಮಶ್ರೀ ಭಿಖುದನ್ ಗಡ್ಡವನ್ನು ಸಮಾಜ ಹೊಂದಿದೆ. ಇವರು ಚರಣ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅಗಾಧವಾದ ಚರಣ ಸಾಹಿತ್ಯವು ಇಂದಿಗೂ ಈ ಶ್ರೇಷ್ಠ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ. ದೇಶಭಕ್ತಿ ಗೀತೆಗಳು ಅಥವಾ ಆಧ್ಯಾತ್ಮಿಕ ಬೋಧನೆಗಳು, ಚರಣ್ ಸಾಹಿತ್ಯವು ಶತಮಾನಗಳಿಂದ ಪ್ರಮುಖ ಪಾತ್ರವನ್ನು ವಹಿಸಿದೆ. ಶ್ರೀ ಸೋನಾಲ್ ಮಾ ಅವರ ಶಕ್ತಿಯುತ ಭಾಷಣವು ಅದಕ್ಕೆ ಉತ್ತಮ ಉದಾಹರಣೆಯಾಗಿದೆ. ಅವರು ಎಂದಿಗೂ ಸಾಂಪ್ರದಾಯಿಕ ವಿಧಾನಗಳ ಮೂಲಕ ಶಿಕ್ಷಣವನ್ನು ಪಡೆಯಲಿಲ್ಲ. ಆದರೆ ಸಂಸ್ಕೃತ ಭಾಷೆ ಮತ್ತು ಧರ್ಮಗ್ರಂಥಗಳ ಜ್ಞಾನದ ಮೇಲೆ ಸೋನಾಲ್ ಮಾ ಅವರ ಆಳವಾದ ಪಾಂಡಿತ್ಯ ಅಸಾಧಾರಣವಾಗಿತ್ತು. ಅವರ ಶಕ್ತಿಯುತ ಭಾಷಣಗಳು ಮತ್ತು ಅವರು ಹಂಚಿಕೊಂಡ ರಾಮಾಯಣದ ಕಥೆಯು ಅನುಕರಣೀಯವಾಗಿದೆ. ಅವರಿಂದ ರಾಮಾಯಣದ ಕಥೆಯನ್ನು ಕೇಳಿದವನು ಅದನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಶ್ರೀ ಸೋನಾಲ್ ಮಾ ಅವರ ಆತ್ಮವು ಎಷ್ಟು ಸಂತೋಷವಾಗುತ್ತದೆ ಎಂದು ನಾವೆಲ್ಲರೂ ಊಹಿಸಬಹುದು. ಇಂದು, ಈ ಸಂದರ್ಭದಲ್ಲಿ, ನಾನು ನಿಮ್ಮೆಲ್ಲರಿಗೂ, ಪ್ರತಿ ಮನೆಯವರಿಗೂ ಜನವರಿ 22 ರಂದು ದೀಪವನ್ನು (ಶ್ರೀರಾಮ ಜ್ಯೋತಿ) ಬೆಳಗಿಸಲು ಒತ್ತಾಯಿಸುತ್ತೇನೆ. ನಿನ್ನೆಯಿಂದ ನಮ್ಮ ದೇವಸ್ಥಾನಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನವನ್ನೂ ಆರಂಭಿಸಿದ್ದೇವೆ. ಈ ದಿಸೆಯಲ್ಲಿಯೂ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಅಂತಹ ಪ್ರಯತ್ನಗಳಿಂದ ಶ್ರೀ ಸೋನಾಲ್ ಮಾ ಅವರ ಸಂತೋಷವು ಹಲವಾರು ಪಟ್ಟು ಹೆಚ್ಚಾಗುತ್ತದೆ ಎಂದು ನನಗೆ ಖಾತ್ರಿಯಿದೆ. ಇಂತಹ ಪ್ರಯತ್ನಗಳ ಮೂಲಕ ನಾವು ಶ್ರೀ ಸೋನಲ್ ಮಾ ಅವರ ಸಂತೋಷವನ್ನು ಹೆಚ್ಚಿಸಬಹುದು.

 

ಸ್ನೇಹಿತರೇ,

ಇಂದಿನ ಯುಗದಲ್ಲಿ, ಭಾರತವು ಅಭಿವೃದ್ಧಿ ಮತ್ತು ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವಾಗ, ಶ್ರೀ ಸೋನಾಲ್ ಮಾ ಅವರ ಸ್ಫೂರ್ತಿಯು ನಮಗೆ ಪುನರ್ಯೌವನಗೊಳಿಸುತ್ತದೆ. ಈ ಗುರಿಗಳನ್ನು ಸಾಧಿಸುವಲ್ಲಿ ಚರಣ್ ಸಮಾಜದ ಪ್ರಮುಖ ಪಾತ್ರವಿದೆ. ಸೋನಾಲ್ ಮಾ ನೀಡಿರುವ 51 ಆದೇಶಗಳು ಚರಣ್ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತವೆ. ಚರಣ ಸಮುದಾಯ ಇವುಗಳನ್ನು ಇವುಗಳನ್ನು ಸದಾ ನೆನಪಲ್ಲಿಟ್ಟುಕೊಂಡು  ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮುಂದುವರೆಸಬೇಕು. ಸಾಮಾಜಿಕ ಸೌಹಾರ್ದತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸದಾವ್ರತದ ನಿರಂತರ ಯಾಗವನ್ನು ಮಾಢಡಾ ಧಾಮದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಪ್ರಯತ್ನವನ್ನು ನಾನು ಸಹ ಪ್ರಶಂಸಿಸುತ್ತೇನೆ. ಮಾಢಡಾ ಧಾಮ ಭವಿಷ್ಯದಲ್ಲಿಯೂ ಇಂತಹ ಅಸಂಖ್ಯಾತ ರಾಷ್ಟ್ರ ನಿರ್ಮಾಣದ ಆಚರಣೆಗಳಿಗೆ ಉತ್ತೇಜನ ನೀಡಲಿದೆ ಎಂಬ ವಿಶ್ವಾಸ ನನಗಿದೆ. ಶ್ರೀ ಸೋನಲ್ ಮಾ ಅವರ ಜನ್ಮಶತಮಾನೋತ್ಸವದಂದು ಎಲ್ಲರಿಗೂ ನನ್ನ ಶುಭಾಶಯಗಳು.

ಇದರೊಂದಿಗೆ, ಎಲ್ಲರಿಗೂ  ತುಂಬಾ  ಧನ್ಯವಾದಗಳು !

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
PM to distribute over 50 lakh property cards to property owners under SVAMITVA Scheme
December 26, 2024
Drone survey already completed in 92% of targeted villages
Around 2.2 crore property cards prepared

Prime Minister Shri Narendra Modi will distribute over 50 lakh property cards under SVAMITVA Scheme to property owners in over 46,000 villages in 200 districts across 10 States and 2 Union territories on 27th December at around 12:30 PM through video conferencing.

SVAMITVA scheme was launched by Prime Minister with a vision to enhance the economic progress of rural India by providing ‘Record of Rights’ to households possessing houses in inhabited areas in villages through the latest surveying drone technology.

The scheme also helps facilitate monetization of properties and enabling institutional credit through bank loans; reducing property-related disputes; facilitating better assessment of properties and property tax in rural areas and enabling comprehensive village-level planning.

Drone survey has been completed in over 3.1 lakh villages, which covers 92% of the targeted villages. So far, around 2.2 crore property cards have been prepared for nearly 1.5 lakh villages.

The scheme has reached full saturation in Tripura, Goa, Uttarakhand and Haryana. Drone survey has been completed in the states of Madhya Pradesh, Uttar Pradesh, and Chhattisgarh and also in several Union Territories.