Quoteಸುಮಾರು 28,980 ಕೋಟಿ ರೂ. ಮೌಲ್ಯದ ಬಹು ವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
Quoteಸುಮಾರು 2,110 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ಹೆದ್ದಾರಿಗಳ 3 ರಸ್ತೆ ವಲಯ ಯೋಜನೆಗಳ ಉದ್ಘಾಟನೆ
Quoteಸುಮಾರು 2,146 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
Quoteಸಂಬಲ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ
Quoteಪುರಿ-ಸೋನೆಪುರ್-ಪುರಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ಹಸಿರುನಿಶಾನೆ
Quoteಸಂಬಲ್‌ಪುರದ ಐಐಎಂ ಕಾಯಂ ಕ್ಯಾಂಪಸ್ ಉದ್ಘಾಟನೆ
Quote"ದೇಶವು ಇಂದು ತನ್ನ ಮಹಾನ್ ಪುತ್ರರಲ್ಲಿ ಒಬ್ಬರಾದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲು ನಿರ್ಧರಿಸಿದೆ"
Quoteಒಡಿಶಾವನ್ನು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಿದೆ
Quote"ಎಲ್ಲಾ ರಾಜ್ಯಗಳು ಅಭಿವೃದ್ಧಿಗೊಂಡರೆ ಮಾತ್ರ ವಿಕ್ಷಿತ್ ಭಾರತ್ ಗುರಿ ಸಾಧಿಸಲು ಸಾಧ್ಯ"
Quote"ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ನೀತಿಗಳಿಂದ ಒಡಿಶಾ ಹೆಚ್ಚು ಪ್ರಯೋಜನ ಪಡೆದಿದೆ"

ಒಡಿಶಾ ರಾಜ್ಯಪಾಲರಾದ ರಘುವರ್‌ ದಾಸ್‌ ಜೀ, ಮುಖ್ಯಮಂತ್ರಿ ಮತ್ತು ನನ್ನ ಸ್ನೇಹಿತರವಾದ ಶ್ರೀ ನವೀನ್‌ ಪಟ್ನಾಯಕ್ ಜೀ. ನನ್ನ ಸಂಪುಟ ಸಹೋದ್ಯೋಗಿಗಳಾದ ಧರ್ಮೇಂದ್ರ ಪ್ರಧಾನ್‌ ಜೀ, ಅಶ್ವಿನಿ ವೈಷ್ಣವ್‌ ಜೀ, ಬಿಶ್ವೇಶ್ವರ್‌ ತಡು ಜೀ, ನನ್ನ ಸಂಸದೀಯ ಕ್ಷೇತ್ರದ ಪ್ರತಿನಿಧಿ ನಿತೇಶ್‌ ಗಂಗಾ ದೇವ್‌ ಜೀ, ಸಂಬಲ್ಪುರ್‌ ದ ಐಐಎಂ ನಿರ್ದೇಶಕರಾದ ಮಹದೇವ್‌ ಜೈಸ್ವಾಲ್‌ ಹಾಗೂ ಇತರೆ ಗಣ್ಯರೇ, ಮಹಿಳೆಯರೇ, ಮಹನೀಯರೇ. 

ಒಡಿಶಾದ ಅಭಿವೃದ್ಧಿ ಯಾನದಲ್ಲಿ ಇಂದು ನಿರ್ಣಾಯಕ ದಿನ. ಸುಮಾರು 70 ಸಾವಿರ ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಪಡೆಯುತ್ತಿರುವ ಒಡಿಶಾ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಯೋಜನೆಗಳು ಶಿಕ್ಷಣ, ರೈಲು, ರಸ್ತೆ, ವಿದ್ಯುತ್‌ ಮತ್ತು ಪೆಟ್ರೋಲಿಯಂ ವಲಯಗಳಿಗೆ ಸೇರಿದ್ದಾಗಿವೆ. ಈ ಉಪಕ್ರಮಗಳ ಅನುಷ್ಠಾನದಿಂದ ಬಡವರು, ಕಾರ್ಮಿಕರು, ಉದ್ಯೋಗಿಗಳು, ಮಳಿಗೆ ಕೆಲಸಗಾರರು, ರೈತರು, ವ್ಯಾಪಾರಿಗಳು, ಒಡಿಶಾದ ಎಲ್ಲಾ ಸಮಾಜ ಬಾಂಧವರಿಗೆ ಇದರಿಂದ ಅನುಕೂಲವಾಗಲಿದೆ. ಇದರ ಜೊತೆಗೆ ಒಡಿಶಾಗೆ ಸೌಲಭ್ಯಗಳಲ್ಲಿ ಸುಧಾರಣೆಯಾಗಲಿದ್ದು, ಈ ಯೋಜನೆಗಳಿಂದ ಯುವ ಸಮೂಹಕ್ಕೆ ಸಹಸ್ರಾರು ಉದ್ಯೋಗಗಳನ್ನು ಸೃಜನೆಯಾಗಲಿವೆ.  

 

|

ಸ್ನೇಹಿತರೇ

ಇಂದು ದೇಶದ ಮಗ, ಮಾಜಿ ಉಪಪ್ರಧಾನಮಂತ್ರಿ ಲಾಲ್ ಕೃಷ್ಣ ಅಡ್ವಾಣಿ ಅವರನ್ನು  ಭಾರತ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಉಪ ಪ್ರಧಾನಮಂತ್ರಿಯಾಗಿ, ಗೃಹ ಸಚಿವ, ವಾರ್ತಾ ಮತ್ತು ಪ್ರಸಾರ ಸಚಿವರಾಗಿ, ನಿಷ್ಠಾವಂತ, ಜಾಗೃತ ಸಂಸದೀಯ ಪಟುವಾಗಿ, ಸರಿಸಾಟಿಯಿಲ್ಲದ ಬದ್ಧತೆಯಿಂದ ದೇಶಕ್ಕೆ ದಶಕಗಳ ಕಾಲ ಅವರು ಸೇವೆ ಸಲ್ಲಿಸಿದ್ದರು. ಅಡ್ವಾಣಿ ಜೀ ಅವರಿಗೆ ನೀಡಿದ ಈ ಮನ್ನಣೆಯು ತನ್ನ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರ ಬಗ್ಗೆ ದೇಶದ ನಿರಂತರ ಕೃತಜ್ಞತೆಯನ್ನು ಇದು ಸಂಕೇತಿಸುತ್ತದೆ. ಲಾಲ್‌ ಕೃಷ್ಣ ಅಡ್ವಾಣಿ ಜೀ ಅವರಿಂದ ನಿರಂತರ ಪ್ರೀತಿ ಮತ್ತು ಮಾರ್ಗದರ್ಶನ ಪಡೆಯುವ ಭಾಗ್ಯ ನನಗೆ ಸಿಕ್ಕಿತು. ನಾನು ಅವರ ಯೋಗ ಕ್ಷೇಮಕ್ಕಾಗಿ ಹಾರೈಸುತ್ತೇನೆ ಮತ್ತು ಒಡಿಶಾ ರಾಜ್ಯದ ಜನತೆ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ.  

 

|

 ಸ್ನೇಹಿತರೇ

ಒಡಿಶಾ ರಾಜ್ಯವನ್ನು ಪ್ರಮುಖ ಶಿಕ್ಷಣ ತಾಣವನ್ನಾಗಿ ಮಾಡಲು ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ ಆಧುನಿಕ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಡಿಶಾ ಪಡೆದಿದ್ದು,  ಯುವ ಸಮೂಹದ ಆಕಾಂಕ್ಷೆಯಲ್ಲಿ ಪರಿವರ್ತನೆಯಾಗಿದೆ, ಅದು ಐಐಎಸ್‌ ಇಆರ್‌ ಬೆಹ್ರಾಂಪುರವಾಗಿರಲಿ ಅಥವಾ ಭುವನೇಶ್ವರದಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್‌ ಕೆಮಿಕಲ್‌ ಟೆಕ್ನಾಲಜಿ ಆಗಿರಲಿ, ಇಂತಹ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಇತ್ತೀಚೆಗೆ ಸಂಬಲ್ಪುರ್‌ ನ ಐಐಎಂ ಒಡಿಶಾದ ಸಮಕಾಲೀನ ಆಡಳಿತ ಸಂಸ್ಥೆಗಳ ವಲಯಕ್ಕೆ ಸೇರ್ಪಡೆಯಾಗಿದೆ.  ಸಾಂಕ್ರಾಮಿಕ ರೋಗದ ಸವಾಲಿನ ಸಮಯದಲ್ಲಿ 3 ವರ್ಷಗಳ ಹಿಂದೆ ಈ ಐಐಎಂ ಕ್ಯಾಂಪಸ್‌ ಗೆ ಅಡಿಪಾಯ ಹಾಕಿದ್ದನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ಹಲವಾರು ಅಡೆತಡೆಗಳ ನಡುವೆಯೂ ಭವ್ಯವಾದ ಕ್ಯಾಂಪಸ್‌ ಇದೀಗ ಪೂರ್ಣಗೊಂಡಿದೆ. ನಿಮ್ಮಲ್ಲಿರುವ ಉತ್ಸಾಹ ನಿಮಗೆ ಕ್ಯಾಂಪಸ್‌ ಎಷ್ಟು ಸುಂದರವಾಗಿದೆ ಎಂಬುದು ಅರಿವಾಗುತ್ತದೆ. ಈ ಅಭಿವೃದ್ಧಿಯಲ್ಲಿ ಎಲ್ಲವೂ ಅಡಕವಾಗಿರುವ ಕುರಿತು ನಾನು ಅಭಿನಂದಿಸುತ್ತೇನೆ. 

 

|

ಸ್ನೇಹಿತರೇ

ಪ್ರತಿಯೊಂದು ರಾಜ್ಯವೂ ಅಭಿವೃದ್ಧಿ ಹೊಂದಿದಾಗ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆ ಸಾಧ್ಯವಾಗಲಿದೆ. ವರ್ಷಗಳಿಂದಲೂ ಒಡಿಶಾ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದೆ. ಕೇಂದ್ರ ಸರ್ಕಾರದ ಪ್ರಯತ್ನಗಳಿಂದಾಗಿ ಒಡಿಶಾ ಇದೀಗ ಪೆಟ್ರೋಲಿಯಂ ಮತ್ತು ಪೆಟ್ರೋಮಿಕಲ್ ವಲಯದಲ್ಲಿ ಔನ್ನತ್ಯಕ್ಕೆ ಏರಿದೆ. ಒಡಿಶಾಗೆ ಕಳೆದ ಒಂದು ದಶಕದಲ್ಲಿ 1.25 ಲಕ್ಷ ಕೋಟಿ ರೂಪಾಯಿ ಪೆಟ್ರೋ ಕೆಮಿಕಲ್ ವಲಯಕ್ಕೆ ಹೂಡಿಕೆಯಾಗಿದೆ. ರೈಲ್ವೆಗೆ ಹಿಂದಿನ ಅವಧಿಗೆ ಹೋಲಿಸಿದರೆ 12 ಪಟ್ಟು ಅಯವ್ಯಯ ಅನುದಾನ ದೊರೆತಿದೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯಡಿ ಒಂದು ದಶಕದಲ್ಲಿ 50 ಸಾವಿರ ಕಿಲೋಮೀಟರ್ ರಸ್ತೆಯನ್ನು ಒಡಿಶಾದ ಹಳ್ಳಿಗಳಲ್ಲಿ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ 4೦೦೦ ಕಿಲೋಮೀಟರ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಮಾಡಲಾಗಿದೆ. ಇಂದು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಾಗಿದ್ದು, ಇದರಿಂದ ಜಾರ್ಖಂಡ್‌ ಮತ್ತು ಒಡಿಶಾ ನಡುವೆ ಸಂಪರ್ಕ ವಿಸ್ತರಣೆಯಾಗಿದೆ. ಪ್ರಯಾಣದ ಅವಧಿಯೂ ಕಡಿಮೆಯಾಗಲಿದೆ. ಈ ಪ್ರದೇಶದಲ್ಲಿ ಗಣಿ, ವಿದ್ಯುತ್‌ ಮತ್ತು ಉಕ್ಕು ಕೈಗಾರಿಕೆಗಳ ಬೆಳವಣಿಗೆಗೆ ಸೂಕ್ತ ಸಾಮರ್ಥ್ಯವಿದ್ದು, ಉತ್ತಮ ಅವಕಾಶಗಳನ್ನು ಕಲ್ಪಿಸಲಾಗಿದೆ. ಸಂಪರ್ಕ ಸುಧಾರಣೆಯಿಂದಾಗಿ ಈ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಲಿದ್ದು, ಈ ವಲಯದಲ್ಲಿ ಸಹಸ್ರಾರು ಉದ್ಯೋಗಾವಕಾಶಗಳು ಸೃಜನೆಯಾಗಲಿದೆ. ಸಂಬಲ್ಪುರ್‌ - ತಲ್‌ ಚೇರ್‌ ನಡುವಿನ ದ್ವಿಪಥ ರೈಲ್ವೆ ಮಾರ್ಗ ಮತ್ತು ಜಾರ್ತಾರಭಾ ಸೋನೆಪುರ್‌ ವಲಯದ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಾಗಿದೆ.  ಪುರಿ – ಸೊನೇಪುರ್‌ ಎಕ್ಸ್‌ ಪ್ರೆಸ್‌ ಸಬರ್ಣಾಪುರ ಅಥವಾ ಸೋನೆಪುರ್‌ ಜಿಲ್ಲೆಯನ್ನು ಈ ರೈಲು ಮಾರ್ಗ ಸಂಪರ್ಕಿಸಲಿದೆ. ಇದು ಭಗವಾನ್‌ ಜಗನ್ನಾಥನ ದರ್ಶನವನ್ನು ಸುಲಭಗೊಳಿಸುತ್ತದೆ. ನಿರಂತರ ಪ್ರಯತ್ನದ ಫಲವಾಗಿ ಒಡಿಶಾನದ ಪ್ರತಿಯೊಂದು ಕುಟುಂಬಕ್ಕೆ ಸೂಕ್ತ ಮತ್ತು ಕೈಗೆಟುವ ವಿದ್ಯುತ್‌ ಸೌಲಭ್ಯ ದೊರಕಿಸಿಕೊಡಲಾಗಿದೆ. ಇಂದು ಸೂಪರ್‌ ಕ್ರಿಟಿಕಲ್‌ ಮತ್ತು ಅಲ್ಟ್ರಾ ಸೂಪರ್ ಕ್ರಿಟಿಕಲ್‌ ಉಷ್ಣ ವಿದ್ಯುತ್‌ ಘಟಕಗಳನ್ನು ಉದ್ಘಾಟಿಸಿದ್ದು, ಇವೆಲ್ಲವೂ ಇದೇ ಉದ್ದೇಶವನ್ನು ಹೊಂದಿವೆ. 

 

|

ಸಹೋದರರೇ ಮತ್ತು ಸಹೋದರಿಯರೇ     

ಕಳೆದ ಒಂದು ದಶಕದಿಂದ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಒಡಿಶಾಗೆ ನಿರ್ಣಾಯಕವಾಗಿ ಲಾಭವಾಗಿದೆ. ಗಣಿ ವಲಯದಲ್ಲಿನ ಸುಧಾರಣೆಗಳಿಂದ ರಾಜ್ಯ ಹೆಚ್ಚಿನ ಲಾಭ ಪಡೆದಿದೆ. ಗಣಿ ನೀತಿಯಲ್ಲಿ ಬದಲಾವಣೆಯ ನಂತರ ಒಡಿಶಾದ ಆದಾಯ ಹತ್ತು ಪಟ್ಟು ಏರಿಕೆಯಾಗಿದೆ. ಹಿಂದೆ ಗಣಿಗಾರಿಕೆ ಚಟುವಟಿಕೆಗಳ ಸಂಭವನೀಯ ಪ್ರದೇಶಗಳು ಮತ್ತು ರಾಜ್ಯಗಳು ಖನಿಜ ಉತ್ಪಾದನೆಯ ಪ್ರಯೋಜನಗಳನ್ನು ಪಡೆದಿರಲಿಲ್ಲ. ಹೊಸ ನೀತಿಯನ್ನು ಪರಿಚಯಿಸುವ ಮೂಲಕ ಇದನ್ನು ನಾವು ಪರಿಹರಿಸಿದ್ದೇವೆ. ಬಿಜೆಪಿ ಆಡಳಿತದಲ್ಲಿ ಕೇಂದ್ರ ಸರ್ಕಾರ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಇಲ್ಲಿ ದೊರೆಯುವ ಲಾಭಾಂಶದ ಒಂದು ಭಾಗವನ್ನು ಇದೇ ವ್ಯಾಪ್ತಿಯ ಭಾಗದಲ್ಲಿ ಅಭಿವೃದ್ದಿಗಾಗಿ ವಿನಿಯೋಗಿಸಲಾಗುತ್ತಿದೆ. ಒಡಿಶಾ 25 ಸಾವಿರ ಕೋಟಿ ರೂಪಾಯಿ ಆದಾಯವನ್ನು ಈ ಪ್ರತಿಷ್ಠಾನದಿಂದ ಪಡೆದುಕೊಂಡಿದೆ. ಈ ಹಣ ಗಣಿ ಪ್ರದೇಶದ ಜನರ ‍ಶ್ರೇಯೋಭಿವೃದ್ಧಿಗಾಗಿ ವೆಚ್ಚ ಮಾಡಲಾಗುತ್ತಿದೆ. ಒಡಿಶಾದ ಅಭಿವೃದ್ಧಿಗೆ ಇದೇ ಸ್ಪೂರ್ತಿಯಿಂದ ಕೇಂದ್ರ ಸರ್ಕಾರ ತನ್ನ ಕೆಲಸವನ್ನು ಮುಂದುವರೆಸಲಿದೆ ಎಂದು ನಾನು ಭರವಸೆ ನೀಡುತ್ತೇನೆ. 

 

|

ಸ್ನೇಹಿತರೇ  

ತೆರೆದ ಪ್ರದೇಶದಲ್ಲಿ ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಮತ್ತು ಇಲ್ಲಿನ ವಾತಾವರಣ ವಿಶಿಷ್ಟವಾಗಿದೆ. ಆದ್ದರಿಂದ ಇಲ್ಲಿ ನನ್ನ ಸಮಯವನ್ನು ವಿಸ್ತರಿಸುವುದಿಲ್ಲ, ಆದಾಗ್ಯೂ ಈ ಸಮಾರಂಭದಲ್ಲಿ ನಾನು ಹೆಚ್ಚು ವಿಸ್ತೃತ ಚರ್ಚೆಗಳಲ್ಲಿ ತೊಡಗಿಕೊಳ್ಳಲು ಇಚ್ಚಿಸುತ್ತೇನೆ ಮತ್ತು ಸುಮಾರ 15 ನಿಮಿಷಗಳಲ್ಲಿ ಮತ್ತೆ ಕಾರ್ಯಕ್ರಮವನ್ನು ಸೇರಿಕೊಳ್ಳಲಿದ್ದೇನೆ. ಮತ್ತೊಮ್ಮೆ ನಾನು ನಿಮಗೆಲ್ಲರಿಗೂ ಅಭಿವೃದ್ಧಿ ಪ್ರಯತ್ನಗಳಿಗಾಗಿ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ, ನನ್ನ ಯುವ ಸ್ನೇಹಿತರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. 

ತುಂಬಾ ಧನ್ಯವಾದಗಳು 

 

  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
  • krishangopal sharma Bjp July 19, 2024

    नमो नमो 🙏 जय भाजपा 🙏
  • krishangopal sharma Bjp July 19, 2024

    नमो नमो 🙏 जय भाजपा 🙏
  • krishangopal sharma Bjp July 19, 2024

    नमो नमो 🙏 जय भाजपा 🙏
  • JBL SRIVASTAVA May 27, 2024

    मोदी जी 400 पार
  • Raju Saha April 08, 2024

    joy Shree ram
  • ROYALINSTAGREEN April 05, 2024

    i request you can all bjp supporter following my Instagram I'd _Royalinstagreen 🙏🙏
  • Pradhuman Singh Tomar April 04, 2024

    BJP
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Job opportunities for women surge by 48% in 2025: Report

Media Coverage

Job opportunities for women surge by 48% in 2025: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಮಾರ್ಚ್ 2025
March 05, 2025

Citizens Appreciate PM Modi's Goal of Aatmanirbhar Bharat - Building a Self-Reliant India