ಸ್ಮರಣಾರ್ಥ ಲಾಂಛನ ಬಿಡುಗಡೆ
"ಮಹರ್ಷಿ ದಯಾನಂದ ಸರಸ್ವತಿ ಅವರು ತೋರಿದ ಮಾರ್ಗವು ಕೋಟ್ಯಂತರ ಜನರಲ್ಲಿ ಭರವಸೆ ಮೂಡಿಸುತ್ತದೆ"
"ಧರ್ಮಕ್ಕೆ ತಪ್ಪಾಗಿ ಆರೋಪಿಸಲಾದ ಅನಿಷ್ಠಗಳನ್ನು ಧರ್ಮದ ಬೆಳಕಿನಿಂದಲೇ ತೊಡೆದುಹಾಕಿದ ಸ್ವಾಮೀಜಿ "
"ಸ್ವಾಮಿಜಿ ವೇದಗಳ ಬೆಳಕನ್ನು ಸಮಾಜದಲ್ಲಿ ಪುನರುಜ್ಜೀವಗೊಳಿಸಿದರು"
"ಅಮೃತ ಕಾಲದಲ್ಲಿ, ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜಯಂತಿ ಆಚರಣೆ ಪವಿತ್ರ ಸ್ಫೂರ್ತಿಯಾಗಿ ಬಂದಿದೆ"
"ಇಂದು ದೇಶವು ನಮ್ಮ ಪರಂಪರೆಯ ಬಗ್ಗೆ ವಿಶ್ವಾಸದಿಂದ ಕರೆ ನೀಡುತ್ತಿದೆ"
"ನಮ್ಮಲ್ಲಿ ಧರ್ಮದ ಮೊದಲ ವ್ಯಾಖ್ಯಾನವು ಕರ್ತವ್ಯ ಕುರಿತದ್ದಾಗಿದೆ"
“ಬಡವರು, ಹಿಂದುಳಿದವರು ಮತ್ತು ದೀನದಲಿತರ ಸೇವೆಯೇ ಇಂದು ದೇಶಕ್ಕೆ ಮೊದಲ ಯಾಗವಾಗಿದೆ’’

ಕಾರ್ಯಕ್ರಮದಲ್ಲಿರುವ ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜೀ, ಸರ್ವದೇಶಿಕ್ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷರಾದ ಶ್ರೀ ಸುರೇಶ್ ಚಂದ್ರ ಆರ್ಯ ಜೀ, ದೆಹಲಿ ಆರ್ಯ ಪ್ರತಿನಿಧಿ ಸಭಾದ ಅಧ್ಯಕ್ಷರಾದ ಶ್ರೀ ಧರಂಪಾಲ್ ಆರ್ಯ ಜೀ, ಶ್ರೀ ವಿನಯ್ ಆರ್ಯ ಜೀ ಮತ್ತು ಉಪಸ್ಥಿತರಿರುವ ನನ್ನ ಸಂಪುಟ ಸಹೋದ್ಯೋಗಿಗಳಾದ ಕಿಶನ್ ರೆಡ್ಡಿ ಜೀ, ಮೀನಾಕ್ಷಿ ಲೇಖಿ ಜೀ ಮತ್ತು ಅರ್ಜುನ್ ರಾಮ್ ಮೇಘವಾಲ್ ಜೀ, ಎಲ್ಲಾ ಪ್ರತಿನಿಧಿಗಳು ಹಾಗೂ ಸಹೋದರ ಸಹೋದರಿಯರೇ!

ಮಹರ್ಷಿ ದಯಾನಂದ ಜೀ ಅವರ 200 ನೇ ಜನ್ಮ ದಿನಾಚರಣೆಯ ಈ ಸಂದರ್ಭವು ಐತಿಹಾಸಿಕವಾಗಿದೆ ಮತ್ತು ಭವಿಷ್ಯಕ್ಕಾಗಿ ಇತಿಹಾಸವನ್ನು ಬರೆಯುವ ಅವಕಾಶವಾಗಿದೆ. ಇದು ಇಡೀ ಜಗತ್ತಿಗೆ ಮಾನವೀಯತೆಯ ಭವಿಷ್ಯಕ್ಕೆ ಸ್ಫೂರ್ತಿಯ ಕ್ಷಣವಾಗಿದೆ. ಸ್ವಾಮಿ ದಯಾನಂದ ಜೀ ಅವರ ಮಾದರಿ - "ಕ್ರಿನ್ವಂಟೋ ವಿಶ್ವಮಾರ್ಯಂ". ಅಂದರೆ, ನಾವು ಇಡೀ ಜಗತ್ತನ್ನು ಉತ್ತಮಗೊಳಿಸಬೇಕು ಮತ್ತು ನಾವು ಇಡೀ ವಿಶ್ವದ ಅತ್ಯುತ್ತಮ ಆಲೋಚನೆಗಳು ಮತ್ತು ಮಾನವೀಯ ಆದರ್ಶಗಳನ್ನು ಸಂವಹನ ಮಾಡಬೇಕು. ಆದ್ದರಿಂದ, 21 ನೇ ಶತಮಾನದಲ್ಲಿ ಜಗತ್ತು ಅನೇಕ ವಿವಾದಗಳು, ಹಿಂಸಾಚಾರ ಮತ್ತು ಅಸ್ಥಿರತೆಯಲ್ಲಿ ಮುಳುಗಿರುವಾಗ, ಮಹರ್ಷಿ ದಯಾನಂದ ಸರಸ್ವತಿ ಅವರು ತೋರಿಸಿದ ಮಾರ್ಗವು ಕೋಟ್ಯಂತರ ಜನರಲ್ಲಿ ಭರವಸೆಯನ್ನು ಮೂಡಿಸುತ್ತದೆ. ಇಂತಹ ಮಹತ್ವದ ಸಮಯದಲ್ಲಿ, ಆರ್ಯ ಸಮಾಜವು ಮಹರ್ಷಿ ದಯಾನಂದ ಜೀ ಅವರ 200 ನೇ ಜನ್ಮ ದಿನಾಚರಣೆಯನ್ನು ಎರಡು ವರ್ಷಗಳ ಕಾಲ ಆಚರಿಸಲು ಹೊರಟಿದೆ ಮತ್ತು ಭಾರತ ಸರ್ಕಾರವೂ ಈ ಭವ್ಯ ಹಬ್ಬವನ್ನು ಆಚರಿಸಲು ನಿರ್ಧರಿಸಿದೆ ಎಂದು ಎಂಬುದು ನನಗೆ ಸಂತೋಷದ ವಿಚಾರವಾಗಿದೆ. ಮಾನವೀಯತೆಯ ಶಾಶ್ವತ ಕಲ್ಯಾಣಕ್ಕಾಗಿ ಯಜ್ಞದಲ್ಲಿ ಭಾಗವಹಿಸುವ ಅವಕಾಶವೂ ನನಗೆ ಈಗ ಸಿಕ್ಕಿದೆ. ಮಹರ್ಷಿ ದಯಾನಂದ ಸರಸ್ವತಿ ಅವರು ಜನಿಸಿದ ಪವಿತ್ರ ಭೂಮಿಯಲ್ಲಿ ಜನಿಸುವ ಸೌಭಾಗ್ಯ ನನಗೂ ಸಿಕ್ಕಿದ್ದು ನನ್ನ ಭಾಗ್ಯ ಎಂದು ಆಚಾರ್ಯರು ಹೇಳುತ್ತಿದ್ದರು. ಆ ಮಣ್ಣಿನಿಂದ ನಾನು ಪಡೆದ ಮೌಲ್ಯಗಳು ಮತ್ತು ಸ್ಫೂರ್ತಿ ನನ್ನನ್ನು ಮಹರ್ಷಿ ದಯಾನಂದ ಸರಸ್ವತಿ ಅವರ ಆದರ್ಶಗಳ ಕಡೆಗೆ ಸೆಳೆಯುತ್ತಿದೆ. ನಾನು ಸ್ವಾಮಿ ದಯಾನಂದ ಜೀ ಅವರ ಪಾದಗಳಿಗೆ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದಿಂದ ಶುಭ ಕೋರುತ್ತೇನೆ.

ಸ್ನೇಹಿತರೇ,

ಮಹರ್ಷಿ ದಯಾನಂದರು ಜನಿಸಿದಾಗ, ಶತಮಾನಗಳ ಗುಲಾಮಗಿರಿಯಿಂದ ದುರ್ಬಲಗೊಂಡ ದೇಶವು ತನ್ನ ಹೊಳಪು, ವೈಭವ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿತ್ತು. ನಮ್ಮ ಮೌಲ್ಯಗಳು, ಆದರ್ಶಗಳು ಮತ್ತು ನೀತಿಗಳನ್ನು ನಾಶಪಡಿಸಲು ಪ್ರತಿ ಕ್ಷಣವೂ ಹಲವಾರು ಪ್ರಯತ್ನಗಳು ನಡೆದವು. ಗುಲಾಮಗಿರಿಯ ಕಾರಣದಿಂದಾಗಿ ಸಮಾಜದಲ್ಲಿ ಕೀಳರಿಮೆಯು ಮೇಲುಗೈ ಸಾಧಿಸಿದಾಗ, ಅಧ್ಯಾತ್ಮಿಕತೆ ಮತ್ತು ನಂಬಿಕೆಯನ್ನು ಬದಲಾಯಿಸುವುದು ಸ್ವಾಭಾವಿಕವಾಗುತ್ತದೆ. ಆತ್ಮವಿಶ್ವಾಸದ ಕೊರತೆಯಿರುವ ವ್ಯಕ್ತಿಯು ಸೋಗಿನಲ್ಲಿ ಬದುಕಲು ಪ್ರಯತ್ನಿಸುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಮಹರ್ಷಿ ದಯಾನಂದರು ಮುಂದೆ ಬಂದು ಸಾಮಾಜಿಕ ಜೀವನದಲ್ಲಿ ವೇದಗಳ ತಿಳುವಳಿಕೆಯನ್ನು ಪುನರುಜ್ಜೀವನಗೊಳಿಸಿದರು. ಅವರು ಸಮಾಜಕ್ಕೆ ನಿರ್ದೇಶನ ನೀಡಿದರು, ತಮ್ಮ ವಾದಗಳೊಂದಿಗೆ ಅದನ್ನು ಸಾಬೀತುಪಡಿಸಿದರು ಮತ್ತು ದೋಷವು ಭಾರತದ ಧರ್ಮ ಮತ್ತು ಸಂಪ್ರದಾಯಗಳಲ್ಲಿಲ್ಲ, ಆದರೆ ನಾವು ಅವುಗಳ ನಿಜವಾದ ಸ್ವರೂಪವನ್ನು ಮರೆತಿದ್ದೇವೆ ಮತ್ತು ವಿರೂಪಗಳಿಂದ ತುಂಬಿದ್ದೇವೆ ಎಂದು ಪದೇ ಪದೇ ಒತ್ತಿ ಹೇಳಿದರು. ನೀವು ಊಹಿಸಿಕೊಳ್ಳಿ, ನಮ್ಮ ವೇದಗಳ ವಿದೇಶಿ ನಿರೂಪಣೆಗಳನ್ನು ರಚಿಸುವ ಪ್ರಯತ್ನಗಳು ನಡೆಯುತ್ತಿದ್ದ ಸಮಯದಲ್ಲಿ, ಅನೇಕ ವಿದ್ವಾಂಸರು ನಮ್ಮನ್ನು ಕೀಳಾಗಿ ಕಾಣಲು, ಆ ನಕಲಿ ವ್ಯಾಖ್ಯಾನಗಳ ಆಧಾರದ ಮೇಲೆ ನಮ್ಮ ಇತಿಹಾಸ ಮತ್ತು ಸಂಪ್ರದಾಯವನ್ನು ಭ್ರಷ್ಟಗೊಳಿಸಲು ಪ್ರಯತ್ನಿಸಿದರು, ಮಹರ್ಷಿ ದಯಾನಂದ್ ಜಿ ಅವರ ಈ ಪ್ರಯತ್ನಗಳು ಸಾರ್ವತ್ರಿಕ ಚಿಕಿತ್ಸೆಯಾಗಿ ಮಾರ್ಪಟ್ಟವು ಮತ್ತು ಸಮಾಜದಲ್ಲಿ ಹೊಸ ಜೀವನವನ್ನು ತುಂಬಿದವು.

ಮಹರ್ಷಿಗಳು ಸಮಾಜದಲ್ಲಿ ಬೇರೂರಿದ್ದ ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆ ಮತ್ತು ಇತರ ವಿಕೃತಿಗಳು ಮತ್ತು ಕೆಡುಕುಗಳ ವಿರುದ್ಧ ತೀವ್ರವಾದ ಅಭಿಯಾನವನ್ನು ಪ್ರಾರಂಭಿಸಿದರು. ನೀವು ಊಹಿಸಿಕೊಳ್ಳಿ, ಇಂದಿಗೂ ನಾನು ಸಮಾಜದಲ್ಲಿನ ಕೆಲವು ಕೆಡುಕುಗಳನ್ನು ಎತ್ತಿ ತೋರಿಸಬೇಕಾದರೆ ಮತ್ತು ಕರ್ತವ್ಯದ ಹಾದಿಯಲ್ಲಿ ನಡೆಯಲು ನಾನು ಜನರನ್ನು ಒತ್ತಾಯಿಸಿದರೆ, ಕೆಲವರು ನನ್ನನ್ನು ಗದರಿಸುತ್ತಾರೆ ಮತ್ತು ನೀವು ಕರ್ತವ್ಯದ ಬಗ್ಗೆ ಮಾತನಾಡುತ್ತೀರಿ ಮತ್ತು ಹಕ್ಕುಗಳ ಬಗ್ಗೆ ಅಲ್ಲ ಎಂದು ಹೇಳುತ್ತಾರೆ. 21 ನೇ ಶತಮಾನದಲ್ಲಿ ನನ್ನ ಪರಿಸ್ಥಿತಿ ಹೀಗಿದ್ದರೆ, 150, 175 ಅಥವಾ 200 ವರ್ಷಗಳ ಹಿಂದೆ ಸಮಾಜಕ್ಕೆ ನಿರ್ದೇಶನ ನೀಡುವಾಗ ಮಹರ್ಷಿಗಳು ಎದುರಿಸಿದ ತೊಂದರೆಗಳನ್ನು ನೀವು ಊಹಿಸಬಹುದು. ಧರ್ಮದ ಮೇಲೆ ಹೊರಿಸಲಾಗಿದ್ದ ಕೆಡುಕುಗಳನ್ನು ಸ್ವಾಮಿಜಿ ಧರ್ಮದ ಬೆಳಕಿನಿಂದಲೇ ತೆಗೆದುಹಾಕಿದರು. ಮತ್ತು ಮಹಾತ್ಮಾ ಗಾಂಧಿಯವರು ಬಹಳ ಮುಖ್ಯವಾದ ಹೇಳಿಕೆಯನ್ನು ನೀಡಿದರು ಮತ್ತು ಅವರು ಅದರ ಬಗ್ಗೆ ಬಹಳ ಹೆಮ್ಮೆಪಟ್ಟರು. ಮಹಾತ್ಮಾ ಗಾಂಧಿ ಅವರು ಹೀಗೆ ಹೇಳಿದ್ದರು - "ನಮ್ಮ ಸಮಾಜವು ಸ್ವಾಮಿ ದಯಾನಂದ ಜೀ ಅವರಿಗೆ ಬಹಳಷ್ಟು ಋಣಿಯಾಗಿದೆ. ಅಸ್ಪೃಶ್ಯತೆಯ ವಿರುದ್ಧದ ಘೋಷಣೆಯು ಅವರ ದೊಡ್ಡ ಕೊಡುಗೆಯಾಗಿದೆ". ಮಹರ್ಷಿ ದಯಾನಂದ ಜೀ ಅವರು ಮಹಿಳೆಯರ ಬಗ್ಗೆ ಸಮಾಜದಲ್ಲಿ ಪ್ರವರ್ಧಮಾನಕ್ಕೆ ಬಂದ ಗ್ರಹಿಕೆಗಳ ವಿರುದ್ಧ ತಾರ್ಕಿಕ ಮತ್ತು ಪರಿಣಾಮಕಾರಿ ಧ್ವನಿಯಾಗಿ ಹೊರಹೊಮ್ಮಿದರು. ಮಹರ್ಷಿಗಳು ಮಹಿಳೆಯರ ವಿರುದ್ಧದ ತಾರತಮ್ಯವನ್ನು ತಿರಸ್ಕರಿಸಿದರು ಮತ್ತು ಮಹಿಳಾ ಶಿಕ್ಷಣಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದರು. ಮತ್ತು ಅದು ಸುಮಾರು 150, 175 ಅಥವಾ 200 ವರ್ಷಗಳ ಹಿಂದೆ. ಇಂದಿಗೂ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಗೌರವವನ್ನು ಕಸಿದುಕೊಳ್ಳುವ ಅನೇಕ ಸಮಾಜಗಳಿವೆ. ಪಾಶ್ಚಿಮಾತ್ಯ ದೇಶಗಳಲ್ಲಿಯೂ ಮಹಿಳೆಯರಿಗೆ ಸಮಾನ ಹಕ್ಕುಗಳು ದೂರದ ವಿಷಯವಾಗಿರುವಾಗ ಸ್ವಾಮಿ ದಯಾನಂದರು ಈ ಮಾತನ್ನು ಹೇಳಿದ್ದರು.

ಸಹೋದರ ಸಹೋದರಿಯರೇ,

ಆ ಅವಧಿಯಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರ ಆಗಮನ, ಆ ಯುಗದ ಸವಾಲುಗಳನ್ನು ಎದುರಿಸುವ ಅವರ ಧೈರ್ಯ ಅಸಾಮಾನ್ಯವಾಗಿತ್ತು. ಯಾವುದೇ ರೀತಿಯಲ್ಲಿ ಇದು ಸಾಮಾನ್ಯವಾಗಿರಲಿಲ್ಲ. ರಾಷ್ಟ್ರದ ಪ್ರಯಾಣದಲ್ಲಿ ಇಂದಿಗೂ ಅವರ ಉಪಸ್ಥಿತಿಯಿಂದಾಗಿಯೇ ಭಾರತದಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಇಷ್ಟು ದೊಡ್ಡ ಸಂಖ್ಯೆಯ ಜನರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಜೀವನಕ್ಕೆ ಇದಕ್ಕಿಂತ ಹೆಚ್ಚಿನ ಮಹತ್ವ ಏನಿದೆ? ಜೀವನದ ಓಟದಲ್ಲಿ, ಸಾವಿನ ಹತ್ತು ವರ್ಷಗಳ ನಂತರವೂ ನೆನಪುಗಳಲ್ಲಿ ಜೀವಂತವಾಗಿ ಉಳಿಯುವುದು ಅಸಾಧ್ಯ. ಆದರೆ ಮಹರ್ಷಿಗಳು 200 ವರ್ಷಗಳ ನಂತರವೂ ನಮ್ಮ ನಡುವೆ ಇದ್ದಾರೆ, ಆದ್ದರಿಂದ, ಭಾರತವು ಸ್ವಾತಂತ್ರ್ಯದ 'ಅಮೃತ ಕಾಲ'ವನ್ನು ಆಚರಿಸುತ್ತಿರುವಾಗ, ಮಹರ್ಷಿ ದಯಾನಂದ ಜೀ ಅವರ 200 ನೇ ಜನ್ಮ ವಾರ್ಷಿಕೋತ್ಸವವು ಒಂದು ಸದ್ಗುಣಪೂರ್ಣ ಸ್ಫೂರ್ತಿಯಾಗಿದೆ. ಆ ಸಮಯದಲ್ಲಿ ಮಹರ್ಷಿಗಳು ನೀಡಿದ ಮಂತ್ರಗಳು ಮತ್ತು ಸಮಾಜಕ್ಕಾಗಿ ಅವರ ಕನಸುಗಳೊಂದಿಗೆ ಇಂದು ದೇಶವು ಧಾರ್ಮಿಕವಾಗಿ ಮುಂದುವರಿಯುತ್ತಿದೆ. ಆಗ ಸ್ವಾಮಿಜಿ 'ವೇದಗಳಿಗೆ ಹಿಂತಿರುಗಿ' ಎಂದು ಮನವಿ ಮಾಡಿದ್ದರು. ಇಂದು ದೇಶವು ತನ್ನ ಪರಂಪರೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದೆ. ಇಂದು ದೇಶವು ಏಕಕಾಲದಲ್ಲಿ ಆಧುನಿಕತೆಯನ್ನು ಅಪ್ಪಿಕೊಂಡು ನಮ್ಮ ಸಂಪ್ರದಾಯಗಳನ್ನು ಶ್ರೀಮಂತಗೊಳಿಸಲು ನಿರ್ಧರಿಸಿದೆ. ಪರಂಪರೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ದೇಶವು ಹೊಸ ಎತ್ತರಕ್ಕೆ ಓಡುತ್ತಿದೆ.

 

ಸ್ನೇಹಿತರೇ,

ಸಾಮಾನ್ಯವಾಗಿ, ಜಗತ್ತಿನಲ್ಲಿ ಧರ್ಮದ ವಿಚಾರಕ್ಕೆ ವಿಷಯಕ್ಕೆ ಬಂದಾಗ, ಅದರ ವ್ಯಾಪ್ತಿ ಅನ್ನುವುದು ಪೂಜೆ, ನಂಬಿಕೆ, ಆಚರಣೆಗಳು ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಭಾರತದ ಸಂದರ್ಭದಲ್ಲಿ, ಧರ್ಮದ ಅರ್ಥ ಮತ್ತು ಪರಿಣಾಮಗಳು ಸಂಪೂರ್ಣವಾಗಿ ಭಿನ್ನವಾಗಿವೆ. ವೇದಗಳು ಧರ್ಮವನ್ನು ಒಂದು ಸಂಪೂರ್ಣ ಜೀವನ ವಿಧಾನವೆಂದು ವ್ಯಾಖ್ಯಾನಿಸಿವೆ.

ನಮಗೆ, ಧರ್ಮವನ್ನು ಕರ್ತವ್ಯವೆಂದು ವ್ಯಾಖ್ಯಾನಿಸಲಾಗಿದೆ. ತಂದೆಯ ಕರ್ತವ್ಯ, ತಾಯಿಯ ಕರ್ತವ್ಯ, ಮಗನ ಕರ್ತವ್ಯ, ರಾಷ್ಟ್ರದ ಬಗೆಗಿನ ಕರ್ತವ್ಯ, ಧರ್ಮ, ಅವಧಿ ಇತ್ಯಾದಿಗಳು ನಮ್ಮ ಭಾವನೆಗಳಾಗಿವೆ. ಆದ್ದರಿಂದ, ನಮ್ಮ ಸಂತರು ಮತ್ತು ಋಷಿಮುನಿಗಳ ಪಾತ್ರವೂ ಪೂಜೆಗೆ ಮಾತ್ರ ಸೀಮಿತವಾಗಿರಲಿಲ್ಲ. ಸಮಗ್ರ, ಅಂತರ್ಗತ ಮತ್ತು ಸಂಯೋಜಿತ ವಿಧಾನದೊಂದಿಗೆ ರಾಷ್ಟ್ರ ಮತ್ತು ಸಮಾಜದ ಪ್ರತಿಯೊಂದು ಅಂಶದ ಜವಾಬ್ದಾರಿಯನ್ನು ಅವರು ವಹಿಸಿಕೊಂಡರು. ಪಾಣಿನಿಯಂತಹ ಋಷಿಮುನಿಗಳು ನಮ್ಮ ದೇಶದಲ್ಲಿ ಭಾಷೆ ಮತ್ತು ವ್ಯಾಕರಣ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಪತಂಜಲಿಯಂತಹ ಮಹರ್ಷಿಗಳು ಯೋಗ ಕ್ಷೇತ್ರವನ್ನು ವಿಸ್ತರಿಸಿದರು. ಕಪಿಲ್ ಅವರಂತಹ ಆಚಾರ್ಯರು ತತ್ವಶಾಸ್ತ್ರದಲ್ಲಿ ಬೌದ್ಧಿಕತೆಗೆ ಹೊಸ ಪ್ರಚೋದನೆ ನೀಡಿದರು. ಮಹಾತ್ಮ ವಿದುರರಿಂದ ಹಿಡಿದು ಭರತರಿ ಮತ್ತು ಆಚಾರ್ಯ ಚಾಣಕ್ಯರವರೆಗೆ ಅನೇಕ ಸಾಧುಗಳು ಭಾರತದ ವಿಚಾರಗಳನ್ನು ನೀತಿ ಮತ್ತು ರಾಜಕೀಯದಲ್ಲಿ ವ್ಯಾಖ್ಯಾನಿಸಿದ್ದಾರೆ. ನಾವು ಗಣಿತದ ಬಗ್ಗೆ ಮಾತನಾಡಿದರೂ, ಭಾರತವನ್ನು ಆರ್ಯಭಟ, ಬ್ರಹ್ಮಗುಪ್ತ ಮತ್ತು ಭಾಸ್ಕರನಂತಹ ಶ್ರೇಷ್ಠ ಗಣಿತಜ್ಞರು ಮುನ್ನಡೆಸಿದರು. ಅವರ ಖ್ಯಾತಿಗೆ ಯಾರೂ ಸರಿಸಾಟಿಯಾಗಲು ಸಾಧ್ಯವಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ, ಕಾನಾಡ್ ಮತ್ತು ವರಾಹಮಿಹಿರ ವರಾಹ್ಮಿಹಿರ್ ನಿಂದ ಚರಕ ಮತ್ತು ಸುಶ್ರುತ ವರೆಗೆ ಅಸಂಖ್ಯಾತ ಹೆಸರುಗಳಿವೆ. ನಾವು ಸ್ವಾಮಿ ದಯಾನಂದ ಜೀ ಅವರನ್ನು ನೋಡಿದಾಗ, ಆ ಪ್ರಾಚೀನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುವಲ್ಲಿ ಅವರು ಎಷ್ಟು ದೊಡ್ಡ ಪಾತ್ರವನ್ನು ವಹಿಸಿದ್ದರು ಮತ್ತು ಅವರಲ್ಲಿ ಆತ್ಮ ವಿಶ್ವಾಸವು ಎಷ್ಟು ಅದ್ಭುತವಾಗಿರಬೇಕು ಎಂಬುದನ್ನು ನಾವು ನೋಡುತ್ತೇವೆ.

ಸಹೋದರ ಸಹೋದರಿಯರೇ,

ಸ್ವಾಮಿ ದಯಾನಂದ ಸರಸ್ವತಿ ಜೀ ಅವರು ತಮ್ಮ ಜೀವನದಲ್ಲಿ ಒಂದು ಮಾರ್ಗವನ್ನು ಕಂಡುಕೊಂಡರು, ಆದರೆ ಅವರು ಅನೇಕ ಸಂಸ್ಥೆಗಳು, ಸಾಂಸ್ಥಿಕ ವ್ಯವಸ್ಥೆಗಳನ್ನು ರಚಿಸಿದರು ಮತ್ತು ಸ್ವಾಮಿಜಿ ತಮ್ಮ ಜೀವಿತಾವಧಿಯಲ್ಲಿ ಕ್ರಾಂತಿಕಾರಿ ಆಲೋಚನೆಗಳನ್ನು ಅಭ್ಯಾಸ ಮಾಡಿದರು ಮತ್ತು ಅದನ್ನು ಅಭ್ಯಾಸ ಮಾಡಲು ಜನರನ್ನು ಪ್ರೇರೇಪಿಸಿದರು ಎಂದು ನಾನು ಹೇಳುತ್ತೇನೆ. ಆದರೆ ಅವರು ಪ್ರತಿಯೊಂದು ಕಲ್ಪನೆಯನ್ನು ವ್ಯವಸ್ಥಿತಗೊಳಿಸಿದರು, ಅದನ್ನು ಸಾಂಸ್ಥಿಕಗೊಳಿಸಿದರು ಮತ್ತು ಸಂಸ್ಥೆಗಳಿಗೆ ಜನ್ಮ ನೀಡಿದರು. ಈ ಸಂಸ್ಥೆಗಳು ದಶಕಗಳಿಂದ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಕಾರಾತ್ಮಕ ಕೆಲಸಗಳನ್ನು ಮಾಡುತ್ತಿವೆ. ಮಹರ್ಷಿಗಳೇ ಪರೋಪಕಾರಿಣಿ ಸಭಾವನ್ನು ಸ್ಥಾಪಿಸಿದ್ದರು. ಇಂದಿಗೂ, ಈ ಸಂಸ್ಥೆಯು ಪ್ರಕಟಣೆಗಳು ಮತ್ತು ಗುರುಕುಲಗಳ ಮೂಲಕ ವೈದಿಕ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಕುರುಕ್ಷೇತ್ರ ಗುರುಕುಲ, ಸ್ವಾಮಿ ಶ್ರದ್ಧಾನಂದ ಟ್ರಸ್ಟ್ ಅಥವಾ ಮಹರ್ಷಿ ದಯಾನಂದ ಸರಸ್ವತಿ ಟ್ರಸ್ಟ್ ನಂತಹ ಸಂಸ್ಥೆಗಳು ರಾಷ್ಟ್ರಕ್ಕೆ ಸಮರ್ಪಿತವಾದ ಅನೇಕ ಯುವಕರನ್ನು ಸೃಷ್ಟಿಸಿವೆ. ಅಂತೆಯೇ, ಸ್ವಾಮಿ ದಯಾನಂದ ಜೀ ಅವರಿಂದ ಸ್ಫೂರ್ತಿ ಪಡೆದ ವಿವಿಧ ಸಂಸ್ಥೆಗಳು ಬಡ ಮಕ್ಕಳ ಸೇವೆಗಾಗಿ, ಅವರ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿವೆ ಮತ್ತು ಇದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವಾಗಿದೆ. ಟರ್ಕಿಯ ಭೂಕಂಪದ ತುಣುಕನ್ನು ಟಿವಿಯಲ್ಲಿ ನೋಡಿದಾಗ  ನಾವು ಪ್ರಕ್ಷುಬ್ಧರಾಗಿ ನೋವು ಅನುಭವಿಸುತ್ತೇವೆ. ನನಗೆ ನೆನಪಿದೆ 2001 ರಲ್ಲಿ ಗುಜರಾತ್ ನಲ್ಲಿ ಭೂಕಂಪ ಸಂಭವಿಸಿದಾಗ, ಅದು ಕಳೆದ ಶತಮಾನದ ಅತ್ಯಂತ ಕೆಟ್ಟ ಭೂಕಂಪವಾಗಿತ್ತು, ಆ ಸಮಯದಲ್ಲಿ ನಾನು ಜೀವನ್ ಪ್ರಭಾತ್ ಟ್ರಸ್ಟ್ ನ ಸಾಮಾಜಿಕ ಕೆಲಸ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಅದರ ಪಾತ್ರವನ್ನು ನೋಡಿದೆ. ಪ್ರತಿಯೊಬ್ಬರೂ ಮಹರ್ಷಿ ಜಿ ಅವರ ಸ್ಫೂರ್ತಿಯೊಂದಿಗೆ ಕೆಲಸ ಮಾಡಿದರು. ಸ್ವಾಮಿಜಿ ಬಿತ್ತಿದ ಬೀಜ ಇಂದು ಬೃಹತ್ ಆಲದ ಮರದ ರೂಪದಲ್ಲಿ ಇಡೀ ಮನುಕುಲಕ್ಕೆ ನೆರಳು ನೀಡುತ್ತಿದೆ.

ಸ್ನೇಹಿತರೇ,

ಸ್ವಾತಂತ್ರ್ಯದ 'ಅಮೃತ ಕಾಲ'ದ ಸಮಯದಲ್ಲಿ, ಸ್ವಾಮಿ ದಯಾನಂದ ಜೀ ಅವರ ಆದ್ಯತೆಗಳಾಗಿದ್ದ ಸುಧಾರಣೆಗಳಿಗೆ ದೇಶವು ಸಾಕ್ಷಿಯಾಗಿದೆ. ಇಂದು ನಾವು ಯಾವುದೇ ತಾರತಮ್ಯವಿಲ್ಲದೆ ದೇಶದ ನೀತಿಗಳು ಮತ್ತು ಪ್ರಯತ್ನಗಳನ್ನು ನೋಡುತ್ತಿದ್ದೇವೆ. ಬಡವರು, ಹಿಂದುಳಿದವರು ಮತ್ತು ದೀನದಲಿತರ ಸೇವೆ ಇಂದು ದೇಶಕ್ಕೆ ಮೊದಲ ಯಜ್ಞವಾಗಿದೆ. ದೀನದಲಿತರಿಗೆ ಆದ್ಯತೆ, ಪ್ರತಿ ಬಡವರಿಗೆ ಮನೆ, ಅವರಿಗೆ ಗೌರವ, ಪ್ರತಿಯೊಬ್ಬ ವ್ಯಕ್ತಿಗೆ ವೈದ್ಯಕೀಯ ಆರೈಕೆ, ಉತ್ತಮ ಸೌಲಭ್ಯಗಳು, ಎಲ್ಲರಿಗೂ ಪೌಷ್ಠಿಕಾಂಶ, ಎಲ್ಲರಿಗೂ ಅವಕಾಶಗಳು, 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಎಂಬ ಈ ಮಂತ್ರವು ದೇಶದ ಸಂಕಲ್ಪವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ದೇಶವು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಇಂದು ದೇಶದ ಹೆಣ್ಣುಮಕ್ಕಳು ಯಾವುದೇ ತಾರತಮ್ಯವಿಲ್ಲದೆ ರಕ್ಷಣೆ ಮತ್ತು ಭದ್ರತೆಯಿಂದ ನವೋದ್ಯಮಗಳವರೆಗೆ ಪ್ರತಿಯೊಂದು ಪಾತ್ರದಲ್ಲೂ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಹೆಣ್ಣುಮಕ್ಕಳನ್ನು ಸಿಯಾಚಿನ್ ನಲ್ಲಿ ನಿಯೋಜಿಸಲಾಗುತ್ತಿದೆ ಮತ್ತು ಅವರು ರಫೇಲ್ ಯುದ್ಧ ವಿಮಾನಗಳನ್ನು ಸಹ ಹಾರಿಸುತ್ತಿದ್ದಾರೆ. ಮಿಲಿಟರಿ ಶಾಲೆಗಳಲ್ಲಿ ಬಾಲಕಿಯರ ಪ್ರವೇಶದ ಮೇಲಿನ ನಿಷೇಧವನ್ನು ನಮ್ಮ ಸರ್ಕಾರ ತೆಗೆದುಹಾಕಿದೆ. ಆಧುನಿಕ ಶಿಕ್ಷಣದ ಜೊತೆಗೆ, ಸ್ವಾಮಿ ದಯಾನಂದ ಜೀ ಅವರು ಗುರುಕುಲಗಳ ಮೂಲಕ ಭಾರತೀಯ ಪರಿಸರದಲ್ಲಿ ರೂಪುಗೊಂಡ ಶಿಕ್ಷಣ ವ್ಯವಸ್ಥೆಯನ್ನು ಸಹ ಪ್ರತಿಪಾದಿಸಿದ್ದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶವು ಈಗ ತನ್ನ ಅಡಿಪಾಯವನ್ನು ಬಲಪಡಿಸಿದೆ.

ಸ್ನೇಹಿತರೇ,

ಸ್ವಾಮಿ ದಯಾನಂದರು ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ನಮಗೆ ಮತ್ತೊಂದು ಮಂತ್ರವನ್ನು ನೀಡಿದ್ದರು. ಅಷ್ಟಕ್ಕೂ ಯಾರು ಪ್ರಬುದ್ಧರು ಎಂಬುದನ್ನು ಸ್ವಾಮಿಜಿ ಸರಳವಾಗಿ ವ್ಯಾಖ್ಯಾನಿಸಿದ್ದರು. ನೀವು ಯಾರನ್ನು ಪ್ರಬುದ್ಧರು ಎಂದು ಕರೆಯುತ್ತೀರಿ? "ಯಾರು ಕಡಿಮೆ ಪಡೆಯುತ್ತಾರೋ ಮತ್ತು ಹೆಚ್ಚು ಕೊಡುಗೆ ನೀಡುತ್ತಾರೋ ಅವರು ಪ್ರಬುದ್ಧರಾಗುತ್ತಾರೆ" ಎಂದು ಸ್ವಾಮಿಜಿ ಬಹಳ ಮಾರ್ಮಿಕವಾಗಿ ಹೇಳಿದರು. ಅಂತಹ ಗಂಭೀರ ವಿಷಯವನ್ನು ಅವರು ಹೇಗೆ ಸರಳವಾಗಿ ವ್ಯಾಖ್ಯಾನಿಸಿದರು ಎಂಬುದನ್ನು ನೀವು ಊಹಿಸಬಹುದು. ಅವರ ಜೀವನ ಮಂತ್ರವು ಇಂದು ಅನೇಕ ಸವಾಲುಗಳಿಗೆ ಪರಿಹಾರಗಳನ್ನು ನೀಡುತ್ತದೆ. ಇದನ್ನು ಪರಿಸರದ ಸಂದರ್ಭದಲ್ಲಿಯೂ ನೋಡಬಹುದು. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯನ್ನು ಯಾರೂ ಊಹಿಸಲು ಸಾಧ್ಯವಾಗದ ಆ ಶತಮಾನದಲ್ಲಿ ಮಹರ್ಷಿಜೀ ಇದನ್ನು ಹೇಗೆ ಯೋಚಿಸಿದರು? ಇದು ನಮ್ಮ ವೇದಗಳ ಧಾರ್ಮಿಕ ಗ್ರಂಥಗಳಲ್ಲಿದೆ. ಅತ್ಯಂತ ಪ್ರಾಚೀನವೆಂದು ಪರಿಗಣಿಸಲಾದ ವೇದಗಳಲ್ಲಿನ ಅನೇಕ ಧರ್ಮಗ್ರಂಥಗಳು ಪ್ರಕೃತಿ ಮತ್ತು ಪರಿಸರಕ್ಕೆ ಸಮರ್ಪಿತವಾಗಿವೆ. ಸ್ವಾಮಿಜಿ ವೇದಗಳ ಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಂಡರು ಮತ್ತು ಅವರ ಅವಧಿಯಲ್ಲಿ ಅವುಗಳ ಸಾರ್ವತ್ರಿಕ ಸಂದೇಶಗಳನ್ನು ವಿಸ್ತರಿಸಿದರು. ಮಹರ್ಷಿಗಳು ವೇದಗಳ ಶಿಷ್ಯರಾಗಿದ್ದರು ಮತ್ತು ಜ್ಞಾನಮಾರ್ಗದ ಸಂತರಾಗಿದ್ದರು. ಆದ್ದರಿಂದ, ಅವನ ಸಾಕ್ಷಾತ್ಕಾರವು ಅವನ ಸಮಯಕ್ಕಿಂತ ಬಹಳ ಮುಂದಿತ್ತು.

ಸಹೋದರ ಸಹೋದರಿಯರೇ,

ಇಂದು, ಜಗತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಚರ್ಚಿಸುತ್ತಿರುವಾಗ, ಸ್ವಾಮೀಜಿಯವರು ತೋರಿಸಿದ ಮಾರ್ಗವು ಭಾರತದ ಜೀವನದ ಪ್ರಾಚೀನ ತತ್ವವನ್ನು ವಿಶ್ವದ ಮುಂದೆ ಇಡುತ್ತದೆ ಮತ್ತು ಅದನ್ನು ಪರಿಹಾರವಾಗಿ ನೀಡುತ್ತದೆ. ಭಾರತವು ಇಂದು ವಿಶ್ವಕ್ಕೆ ಪರಿಸರ ಕ್ಷೇತ್ರದಲ್ಲಿ ದಾರಿದೀಪದ ಪಾತ್ರವನ್ನು ವಹಿಸುತ್ತಿದೆ. ಪ್ರಕೃತಿಯೊಂದಿಗಿನ ಸಾಮರಸ್ಯದ ಈ ದೃಷ್ಟಿಕೋನದ ಆಧಾರದ ಮೇಲೆ, ನಾವು 'ಗ್ಲೋಬಲ್ ಮಿಷನ್ ಲಿಫ್' ಅನ್ನು ಸ್ಥಾಪಿಸಿದ್ದೇವೆ ಮತ್ತು ಇದರರ್ಥ ಪರಿಸರಕ್ಕಾಗಿ ಜೀವನಶೈಲಿ. ಪರಿಸರಕ್ಕಾಗಿ ಈ ಜೀವನಶೈಲಿಯು ಜೀವನ ಮಿಷನ್ ನ ಆರಂಭವೂ ಆಗಿದೆ. ಈ ಮಹತ್ವದ ಅವಧಿಯಲ್ಲಿ ವಿಶ್ವದ ದೇಶಗಳು ಜಿ -20 ಅಧ್ಯಕ್ಷತೆಯ ಜವಾಬ್ದಾರಿಯನ್ನು ಭಾರತಕ್ಕೆ ವಹಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಜಿ -20 ಗಾಗಿ ನಾವು ಪರಿಸರವನ್ನು ವಿಶೇಷ ಕಾರ್ಯಸೂಚಿಯಾಗಿ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ.

ದೇಶದ ಈ ಪ್ರಮುಖ ಅಭಿಯಾನಗಳಲ್ಲಿ ಆರ್ಯ ಸಮಾಜವು ಪ್ರಮುಖ ಪಾತ್ರ ವಹಿಸಬಹುದು. ನಮ್ಮ ಪ್ರಾಚೀನ ತತ್ತ್ವಶಾಸ್ತ್ರದ ಜೊತೆಗೆ ಆಧುನಿಕ ದೃಷ್ಟಿಕೋನಗಳು ಮತ್ತು ಕರ್ತವ್ಯಗಳೊಂದಿಗೆ ಜನರನ್ನು ಸಂಪರ್ಕಿಸುವ ಜವಾಬ್ದಾರಿಯನ್ನು ನೀವು ಸುಲಭವಾಗಿ ತೆಗೆದುಕೊಳ್ಳಬಹುದು. ಆಚಾರ್ಯಜಿಯವರು ವಿವರಿಸಿದಂತೆ, ನಾವು ನೈಸರ್ಗಿಕ ಕೃಷಿಗೆ ಸಂಬಂಧಿಸಿದ ಸಮಗ್ರ ಅಭಿಯಾನವನ್ನು ಪ್ರತಿ ಹಳ್ಳಿಗೂ ಕೊಂಡೊಯ್ಯಬೇಕು. ಆಚಾರ್ಯಜಿ ಅವರು ಈ ವಿಷಯದ ಬಗ್ಗೆ ಬಹಳ ಸಮರ್ಪಿತರಾಗಿದ್ದಾರೆ. ನಾವು ನೈಸರ್ಗಿಕ ಕೃಷಿ, ಹಸು ಆಧಾರಿತ ಕೃಷಿಯನ್ನು ಮತ್ತೆ ಹಳ್ಳಿಗಳಿಗೆ ಕೊಂಡೊಯ್ಯಬೇಕು. ಆರ್ಯ ಸಮಾಜದ ಯಜ್ಞದಲ್ಲಿ ಈ ನಿರ್ಣಯಕ್ಕಾಗಿ ತ್ಯಾಗ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಅಂತಹ ಮತ್ತೊಂದು ಜಾಗತಿಕ ಆಕರ್ಷಣೆಯನ್ನು ಭಾರತ ಮಾಡಿದೆ ಮತ್ತು ಅದು ಸಿರಿಧಾನ್ಯಗಳು, ಒರಟು ಧಾನ್ಯಗಳು, ಸಜ್ಜೆ, ಜೋಳ ಇತ್ಯಾದಿಗಳು ನಮಗೆ ಪರಿಚಿತವಾಗಿವೆ. ಸಿರಿಧಾನ್ಯಗಳನ್ನು ಜಾಗತಿಕ ಗುರುತಾಗಿ ಮಾಡಲು ನಾವು 'ಶ್ರೀ ಅನ್ನ' ಅನ್ನು ರಚಿಸಿದ್ದೇವೆ. ಈ ವರ್ಷ, ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನು ಆಚರಿಸುತ್ತಿದೆ. ನಾವು ಯಜ್ಞ ಸಂಸ್ಕೃತಿಯನ್ನು ನಂಬುವುದರಿಂದ, ಯಜ್ಞದಲ್ಲಿ ನಾವು ಯಜ್ಞದಲ್ಲಿ ಅತ್ಯುತ್ತಮವಾದದ್ದನ್ನು ಅರ್ಪಿಸುತ್ತೇವೆ. ಬಾರ್ಲಿ ಅಥವಾ ಶ್ರೀ ಅನ್ನದಂತಹ ಒರಟು ಧಾನ್ಯಗಳು ನಮ್ಮ ಯಜ್ಞಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮಗೆ ಉತ್ತಮವಾದದ್ದನ್ನು ನಾವು ಯಜ್ಞದಲ್ಲಿ ಬಳಸುತ್ತೇವೆ. ಆದ್ದರಿಂದ, ಯಜ್ಞದ ಜೊತೆಗೆ, ನಾವು ಹೊಸ ಪೀಳಿಗೆಗೆ ಎಲ್ಲಾ ಒರಟು ಧಾನ್ಯಗಳನ್ನು - 'ಶ್ರೀ ಅನ್ನ' ಅನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಸೇರಿಸಲು ಅರಿವು ಮೂಡಿಸಬೇಕು. ನೀವು ಇದನ್ನು ಸುಲಭವಾಗಿ ಮಾಡಬಹುದು.

ಸಹೋದರ ಸಹೋದರಿಯರೇ,

ಸ್ವಾಮಿ ದಯಾನಂದ ಜಿ ಅವರ ವ್ಯಕ್ತಿತ್ವದಿಂದ ನಾವು ಬಹಳಷ್ಟು ಕಲಿಯುತ್ತೇವೆ. ಅವರು ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದರು. ಒಬ್ಬ ಇಂಗ್ಲಿಷ್ ಅಧಿಕಾರಿ ಅವರನ್ನು ಭೇಟಿಯಾಗಲು ಬಂದು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಶಾಶ್ವತತೆಗಾಗಿ ಪ್ರಾರ್ಥಿಸುವಂತೆ ಕೇಳಿದನು ಎಂದು ಹೇಳಲಾಗುತ್ತದೆ. ಸ್ವಾಮಿಜಿ ಅವರ ನಿರ್ಭೀತ ಉತ್ತರ ಹೀಗಿತ್ತು: "ಸ್ವಾತಂತ್ರ್ಯವು ನನ್ನ ಆತ್ಮ ಮತ್ತು ಭಾರತದ ಧ್ವನಿ, ಇದನ್ನು ನಾನು ಪ್ರೀತಿಸುತ್ತೇನೆ. ನಾನು ಎಂದಿಗೂ ವಿದೇಶಿ ಸಾಮ್ರಾಜ್ಯಕ್ಕಾಗಿ ಪ್ರಾರ್ಥಿಸಲಾರೆ". ಲೋಕಮಾನ್ಯ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್, ಲಾಲಾ ಲಜಪತ್ ರಾಯ್, ಲಾಲಾ ಹರ್ದಯಾಲ್, ಶ್ಯಾಮ್ಜಿ ಕೃಷ್ಣ ವರ್ಮಾ, ಚಂದ್ರಶೇಖರ್ ಆಜಾದ್, ರಾಮ್ ಪ್ರಸಾದ್ ಬಿಸ್ಮಿಲ್ ಅವರಂತಹ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳು ಮಹರ್ಷಿ ಜಿ ಅವರಿಂದ ಪ್ರೇರಿತರಾಗಿದ್ದರು. ದಯಾನಂದ ಆಂಗ್ಲೋ-ವೇದಿಕ್ ಶಾಲೆಯನ್ನು ಪ್ರಾರಂಭಿಸಿದ ಮಹಾತ್ಮ ಹಂಸರಾಜ್ ಜೀ, ಗುರುಕುಲ ಕಾಂಗ್ರಿ ಸ್ಥಾಪಿಸಿದ ಸ್ವಾಮಿ ಶ್ರದ್ಧಾನಂದ ಜೀ, ಭಾಯ್ ಪರಮಾನಂದ್ ಜೀ, ಸ್ವಾಮಿ ಸಹಜಾನಂದ ಸರಸ್ವತಿ ಸೇರಿದಂತೆ ಅನೇಕ ವ್ಯಕ್ತಿಗಳು ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಸ್ಫೂರ್ತಿ ಪಡೆದರು. ಆರ್ಯ ಸಮಾಜವು ಮಹರ್ಷಿ ದಯಾನಂದ ಜೀ ಅವರ ಎಲ್ಲಾ ಸ್ಫೂರ್ತಿಗಳ ಪರಂಪರೆಯನ್ನು ಹೊಂದಿದೆ. ನೀವು ಆ ಪರಂಪರೆಯನ್ನು ಆನುವಂಶಿಕವಾಗಿ ಪಡೆದಿದ್ದೀರಿ. ಆದ್ದರಿಂದ, ದೇಶವು ನಿಮ್ಮೆಲ್ಲರಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದೆ. ಆರ್ಯ ಸಮಾಜದ ಪ್ರತಿಯೊಬ್ಬ ಆರ್ಯವೀರ್ ನಿಂದಲೂ ನಿರೀಕ್ಷೆ ಇದೆ. ಆರ್ಯ ಸಮಾಜವು ರಾಷ್ಟ್ರ ಮತ್ತು ಸಮಾಜಕ್ಕಾಗಿ ಈ ಯಜ್ಞಗಳನ್ನು ಆಯೋಜಿಸುವುದನ್ನು ಮುಂದುವರಿಸುತ್ತದೆ ಮತ್ತು ಮಾನವೀಯತೆಗಾಗಿ ಯಜ್ಞದ ಬೆಳಕನ್ನು ಹರಡುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಇದು ಮುಂದಿನ ವರ್ಷ ಆರ್ಯ ಸಮಾಜದ ಸ್ಥಾಪನೆಯ 150 ನೇ ವರ್ಷವಾಗಿದೆ. ಈ ಎರಡೂ ಸಂದರ್ಭಗಳು ಪ್ರಮುಖ ಸಂದರ್ಭಗಳಾಗಿವೆ. ಮತ್ತು ಆಚಾರ್ಯ ಜೀ ಅವರು ಸ್ವಾಮಿ ಶ್ರದ್ಧಾನಂದ ಜೀ ಅವರ 100 ನೇ ಪುಣ್ಯತಿಥಿಯನ್ನೂ ಉಲ್ಲೇಖಿಸಿದರು. ಒಂದು ರೀತಿಯಲ್ಲಿ, ಇದು ಮೂರು ನದಿಗಳ ಸಂಗಮವಾಗಿದೆ. ಮಹರ್ಷಿ ದಯಾನಂದರು ಸ್ವತಃ ಜ್ಞಾನದ ಬೆಳಕಾಗಿದ್ದರು. ನಾವೆಲ್ಲರೂ ಈ ಜ್ಞಾನದ ಬೆಳಕಾಗೋಣ! ಅವರು ಬದುಕಿದ ಮತ್ತು ತಮ್ಮ ಜೀವನವನ್ನು ಕಳೆದ ಆದರ್ಶಗಳು ಮತ್ತು ಮೌಲ್ಯಗಳು ನಮ್ಮ ಜೀವನದ ಒಂದು ಭಾಗವಾಗಿ ಮುಂದುವರಿಯಲಿ ಮತ್ತು ಭವಿಷ್ಯದಲ್ಲಿ ಭಾರತ ಮಾತೆಯ ಮತ್ತು ಕೋಟ್ಯಂತರ ದೇಶವಾಸಿಗಳ ಕಲ್ಯಾಣಕ್ಕಾಗಿ ನಮಗೆ ಸ್ಫೂರ್ತಿ ನೀಡಲಿ! ಇಂದು ನಾನು ಆರ್ಯ ಪ್ರತಿನಿಧಿ ಸಭಾದ ಎಲ್ಲ ಮಹಾನ್ ವ್ಯಕ್ತಿಗಳನ್ನು ಅಭಿನಂದಿಸುತ್ತೇನೆ. ಸುಮಾರು 10-15 ನಿಮಿಷಗಳ ಕಾಲ ಈ ಕಾರ್ಯಕ್ರಮದ ವ್ಯವಸ್ಥೆಗಳನ್ನು ನೋಡುವ ಸುಯೋಗ ನನಗೆ ಸಿಕ್ಕಿತು. ಈ ಕಾರ್ಯಕ್ರಮದ ಯೋಜನೆ ಮತ್ತು ನಿರ್ವಹಣೆಗಾಗಿ ನೀವು ಮೆಚ್ಚುಗೆಗೆ ಅರ್ಹರು.

ನಿಮ್ಮೆಲ್ಲರಿಗೂ ಅನೇಕ ಶುಭ ಹಾರೈಕೆಗಳು!

ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi visits the Indian Arrival Monument
November 21, 2024

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.