Quote​​​​​​​"ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಮತ್ತು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ನಾರಿ ಶಕ್ತಿಗೆ ಪೂರಕವಾಗಿದೆ"
Quote"ರಚನಾತ್ಮಕ ಟೀಕೆಗಳು ಸ್ವಾಗತಾರ್ಹವಾದರೂ, ವಿಚ್ಛಿದ್ರಕಾರಕ ನಡವಳಿಕೆಯು ಮರೆಯಾಗುತ್ತದೆ"
Quote"ಎಂದಿಗೂ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸೋಣ, ನಮ್ಮ ಆಲೋಚನೆಗಳಿಂದ ಕಲಾಪಗಳನ್ನು ಉತ್ತೇಜಿಸೋಣ, ಶ್ರೀಮಂತಗೊಳಿಸೋಣ ಮತ್ತು ರಾಷ್ಟ್ರವನ್ನು ಉತ್ಸಾಹ ಮತ್ತು ಆಶಾವಾದದಿಂದ ತುಂಬಿಸೋಣ"
Quote"ಸಾಮಾನ್ಯವಾಗಿ, ಚುನಾವಣಾ ಸಮಯ ಬಂದಾಗ, ಪೂರ್ಣ ಬಜೆಟ್ ಅನ್ನು ಮಂಡಿಸುವುದಿಲ್ಲ, ನಾವು ಸಹ ಅದೇ ಸಂಪ್ರದಾಯವನ್ನು ಅನುಸರಿಸುತ್ತೇವೆ ಮತ್ತು ಹೊಸ ಸರ್ಕಾರ ರಚನೆಯ ನಂತರ ಪೂರ್ಣ ಬಜೆಟ್ ಅನ್ನು ನಿಮ್ಮ ಮುಂದೆ ತರುತ್ತೇವೆ"

ಸ್ನೇಹಿತರೇ,

ಈ ಹೊಸ ಸಂಸತ್ತಿನ ಕಟ್ಟಡದಲ್ಲಿ ಉದ್ಘಾಟನಾ ಅಧಿವೇಶನದ ಮುಕ್ತಾಯದ ಅವಧಿಯಲ್ಲಿ – ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂಬ ಅತ್ಯಂತ ಗೌರವಾನ್ವಿತ ಹಾಗೂ ಮಹತ್ವಪೂರ್ಣ ನಿರ್ಧಾರಗಳನ್ನು ಮಾಡಲಾಯಿತು. ತರುವಾಯ, ಜನವರಿ 26 ರಂದು, 'ಕರ್ತವ್ಯ ಪಥ'ದಲ್ಲಿ ಮಹಿಳೆಯರ ಶಕ್ತಿ, ಧೈರ್ಯ ಮತ್ತು ದೃಢತೆಯನ್ನು ಸಂಪೂರ್ಣ ರಾಷ್ಟ್ರವೇ ಕಂಡಿತು. ಇಂದು, ಈ ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರು ನೀಡಲಿರುವ ಮಾರ್ಗದರ್ಶನ ಮತ್ತು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಾಳೆ ಮಂಡಿಸಲಿರುವ ಮಧ್ಯಂತರ ಬಜೆಟ್ ಮಹಿಳಾ ಶಕ್ತಿಯನ್ನು ಉದಾಹರಿಸುತ್ತದೆ. ಮೂಲಭೂತವಾಗಿ ಹೇಳುವುದಾದರೆ, ಇದು ಮಹಿಳೆಯರ ಶಕ್ತಿಯನ್ನು ಪ್ರದರ್ಶಿಸುವ ಆಚರಣೆಯಾಗಿದೆ.

 

|

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ, ಸಂಸತ್ತಿನ ಪ್ರತಿಯೊಬ್ಬ ಸದಸ್ಯರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಆದರೂ, ವಿಶೇಷವಾಗಿ ಅಡೆತಡೆಗಳನ್ನು ಸೃಷ್ಟಿಸಲು ಮತ್ತು ವಾಡಿಕೆಯಂತೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳುಮಾಡಲು ಒಗ್ಗಿಕೊಂಡಿರುವ ಕೆಲವೊಂದು ಸಂಸದರಿಗೆ ಇದು ಅವರನ್ನು ಪ್ರತಿಬಿಂಬಿಸಲು ಯೋಗ್ಯ ಅವಕಾಶವಾಗಿತ್ತು. ಅವರು ಇಂದು ಅಂತಿಮ ಅಧಿವೇಶನಕ್ಕೆ ಸೇರುತ್ತಿರುವಾಗ, ಅವರು ಕಳೆದ ದಶಕದಲ್ಲಿ ಏನು ಸಾಧಿಸಿದ್ದಾರೆ ಎಂದು ಒಮ್ಮೆ ಯೋಚಿಸಬೇಕು. ನಿಮ್ಮ ಸಂಸದೀಯ ಕ್ಷೇತ್ರದ 100 ಜನರನ್ನು ನೀವು ಕೇಳಿದರೆ, ನಿರಂತರವಾಗಿ ಗದ್ದಲವನ್ನು ಸೃಷ್ಟಿಸಿದವರ ಹೆಸರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ ಅಥವಾ ತಿಳಿದಿರುವುದಿಲ್ಲ. ಪ್ರತಿಪಕ್ಷಗಳ ಧ್ವನಿಯ ತೀಕ್ಷ್ಣತೆ ಮತ್ತು ಟೀಕೆಗಳ ತೀವ್ರತೆಯ ಹೊರತಾಗಿಯೂ, ರಚನಾತ್ಮಕ ಆಲೋಚನೆಗಳಿಂದ ಸದನವನ್ನು ಶ್ರೀಮಂತಗೊಳಿಸಿದವರನ್ನು ಸಾರ್ವಜನಿಕರಲ್ಲಿ ಗಮನಾರ್ಹ ಭಾಗದಷ್ಟು ಮಂದಿ  ಇನ್ನೂ ನೆನಪಿಸಿಕೊಳ್ಳುತ್ತಿದ್ದಾರೆ.

 

|

ಮುಂಬರುವ ದಿನಗಳಲ್ಲಿಯೂ ಸದನದಲ್ಲಿ ನಡೆಯುವ ಚರ್ಚೆಗಳಿಗೆ ಜನ ಸಾಕ್ಷಿಯಾದಾಗ ಸದಸ್ಯರು ಹೇಳಿದ ಪ್ರತಿಯೊಂದು ಪ್ರಶ್ನೆ, ಮಾತು ಇತಿಹಾಸದ ಚರಿತ್ರೆಯಲ್ಲಿ ದಾಖಲಾಗುತ್ತದೆ. ಆದ್ದರಿಂದ, ವಿರೋಧ, ಬೌದ್ಧಿಕ ಪರಾಕ್ರಮದ ಪ್ರದರ್ಶನಗಳು, ಸಾಮಾನ್ಯ ಜನರ ಹಿತಾಸಕ್ತಿಗಳ ಬಗ್ಗೆ ಕಾಳಜಿ ಅಥವಾ ನಮ್ಮ ವಿರುದ್ಧ ತೀಕ್ಷ್ಣವಾದ ಪ್ರತಿಕ್ರಿಯೆಗಳ ಹೊರತಾಗಿಯೂ, ಪ್ರಜಾಪ್ರಭುತ್ವ ಉತ್ಸಾಹಿಗಳು ಮತ್ತು ಸಮಾಜವನ್ನು ಒಳಗೊಂಡಿರುವ ದೇಶದ ಜನತೆಯಲ್ಲಿ ಗಣನೀಯ ಭಾಗವು ಅಂತಹ ನಡವಳಿಕೆಯನ್ನು ಮೆಚ್ಚುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದಕ್ಕೆ ವಿರುದ್ಧವಾಗಿ, ನಕಾರಾತ್ಮಕತೆ, ಗೂಂಡಾಗಿರಿ ಮತ್ತು ಕಿಡಿಗೇಡಿತನವನ್ನು ಹೊರತುಪಡಿಸಿ ಬೇರೆ ಏನನ್ನೂ ಸಕಾರಾತ್ಮಕವಾಗಿ ಕೊಡುಗೆ ನೀಡದ ವ್ಯಕ್ತಿಗಳನ್ನು ದೇಶದ ಜನತೆ ಬಲು ವಿರಳವಾಗಿ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಬಜೆಟ್ ಅಧಿವೇಶನವು ಇಂತಹವರಿಗೆ ವಿಮೋಚನೆಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಧನಾತ್ಮಕ ಪರಿಣಾಮವನ್ನು ನೀಡಲು ಅವಕಾಶ ಕೊಡುತ್ತದೆ. ಎಲ್ಲಾ ಗೌರವಾನ್ವಿತ ಸಂಸದರು ಈ ಅವಕಾಶವನ್ನು ಕಳೆದುಕೊಳ್ಳಲು ಬಿಡಬೇಡಿ, ದೇಶದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಲು, ಸದನಕ್ಕೆ ತಮ್ಮ ಅತ್ಯಮೂಲ್ಯ ಆಲೋಚನೆಗಳನ್ನು ಕೊಡುಗೆಯಾಗಿ ನೀಡಿ ಮತ್ತು ರಾಷ್ಟ್ರವನ್ನು ಉತ್ಸಾಹ, ಉತ್ಸುಕತೆ ಮತ್ತು ಸಡಗರದಿಂದ ತುಂಬಲು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ. ನಿಮಗೆ ತಿಳಿದಿರುವಂತೆ, ಸಾಂಪ್ರದಾಯಿಕವಾಗಿ, ಚುನಾವಣೆಗಳು ಸನ್ನಿಹಿತವಾದಾಗ, ಸಂಪೂರ್ಣ ಬಜೆಟ್ ಅನ್ನು ಮಂಡಿಸುವುದಿಲ್ಲ. ಈ ಸಂಪ್ರದಾಯಕ್ಕೆ ಬದ್ಧರಾಗಿ ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತೇವೆ. ಈ ಬಾರಿ, ದೇಶದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಜಿ ಅವರು ಕೆಲವು ಮಾರ್ಗದರ್ಶಿ ಅಂಶಗಳೊಂದಿಗೆ ನಾಳೆ ತಮ್ಮ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.

 

|

ಸ್ನೇಹಿತರೇ,

ದೇಶವು ನಿರಂತರವಾಗಿ ಪ್ರಗತಿ ಹೊಂದುತ್ತಿದೆ, ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪುತ್ತಿದೆ ಮತ್ತು ಸಮಗ್ರ ಹಾಗೂ ಎಲ್ಲವನ್ನು ಒಳಗೊಳ್ಳುವ ಬೆಳವಣಿಗೆಗೆ ಒಳಗಾಗುತ್ತಿದೆ ಎಂದು ನನಗೆ ವಿಶ್ವಾಸವಿದೆ. ದೇಶವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಪಯಣದಲ್ಲಿ ಸಾಗುತ್ತಿದೆ. ಸಾರ್ವಜನಿಕರ ಆಶೀರ್ವಾದದಿಂದ ಈ ಪಥ ಮುಂದುವರಿಯಲಿ ಎಂದು ಆಶಿಸುತ್ತೇನೆ. ಈ ನಂಬಿಕೆಯೊಂದಿಗೆ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ. ನಿಮ್ಮೆಲ್ಲರಿಗೂ ರಾಮ್-ರಾಮ್.

 

  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷🌷
  • krishangopal sharma Bjp January 17, 2025

    नमो नमो 🙏 जय भाजपा 🙏🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌷🌹🌹🌷🌹🌷
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम
  • कृष्ण सिंह राजपुरोहित भाजपा विधान सभा गुड़ामा लानी November 21, 2024

    बीजेपी
  • कृष्ण सिंह राजपुरोहित भाजपा विधान सभा गुड़ामा लानी November 21, 2024

    जय श्री राम 🚩 वन्दे मातरम् जय भाजपा विजय भाजपा
  • Devendra Kunwar October 08, 2024

    BJP
  • दिग्विजय सिंह राना September 20, 2024

    हर हर महादेव
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails India adding 58th tiger reserve to its tally

Media Coverage

PM Modi hails India adding 58th tiger reserve to its tally
NM on the go

Nm on the go

Always be the first to hear from the PM. Get the App Now!
...
Prime Minister congratulates Indian cricket team on winning ICC Champions Trophy
March 09, 2025

The Prime Minister, Shri Narendra Modi today congratulated Indian cricket team for victory in the ICC Champions Trophy.

Prime Minister posted on X :

"An exceptional game and an exceptional result!

Proud of our cricket team for bringing home the ICC Champions Trophy. They’ve played wonderfully through the tournament. Congratulations to our team for the splendid all around display."