Launches various new initiatives under e-court project
Pays tributes to the victims of 26/11 terrorist attack
“India is moving ahead with force and taking full pride in its diversity”
“‘We the people’ in the Preamble is a call, an oath and a trust”
“In the modern time, the Constitution has embraced all the cultural and moral emotions of the nation”
“Identity of India as the mother of democracy needs to be further strengthened”
“Azadi ka Amrit Kaal is ‘Kartavya Kaal’ for the nation”
“Be it people or institutions, our responsibilities are our first priority”
“Promote the prestige and reputation of India in the world as a team during G20 Presidency”
“Spirit of our constitution is youth-centric”
“We should talk more about the contribution of the women members of the Constituent Assembly”

ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಡಿವೈ ಚಂದ್ರಚೂಡ್, ಕೇಂದ್ರ ಕಾನೂನು ಸಚಿವ ಶ್ರೀ ಕಿರಣ್, ನ್ಯಾಯಮೂರ್ತಿ ಶ್ರೀ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಶ್ರೀ ಎಸ್ ಅಬ್ದುಲ್ ನಜೀರ್, ಕಾನೂನು ರಾಜ್ಯ ಸಚಿವ ಶ್ರೀ ಎಸ್ ಪಿ ಸಿಂಗ್ ಬಾಘೇಲ್, ಅಟಾರ್ನಿ ಜನರಲ್ ಆರ್.  ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವೆಂಕಟರಮಣಿ, ಶ್ರೀ ವಿಕಾಸ್ ಸಿಂಗ್, ಉಪಸ್ಥಿತರಿರುವ ಎಲ್ಲಾ ನ್ಯಾಯಾಧೀಶರು, ಗಣ್ಯ ಅತಿಥಿಗಳು, ಮಹಿಳೆಯರು ಮತ್ತು ಸಜ್ಜನರೆಲ್ಲರಿಗೂ, ಶುಭ ಮಧ್ಯಾಹ್ನ...

ಸಂವಿಧಾನ ದಿನದಂದು ನಿಮಗೆ ಮತ್ತು ಎಲ್ಲ ದೇಶವಾಸಿಗಳಿಗೆ ಶುಭಾಶಯಗಳು...
 1949 ರಲ್ಲಿ ಇದೇ ದಿನ, ಸ್ವತಂತ್ರ ಭಾರತವು ತನ್ನ ಹೊಸ ಭವಿಷ್ಯದ ಅಡಿಪಾಯವನ್ನು ಹಾಕಿತು.  ಈ ಬಾರಿಯ ಸಂವಿಧಾನ ದಿನವೂ ವಿಶೇಷವಾಗಿದೆ ಏಕೆಂದರೆ ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ್ದು,ನಾವೆಲ್ಲರೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ.

ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಗೆ, ಆಧುನಿಕ ಭಾರತದ ಕನಸು ಕಂಡ ಎಲ್ಲ ಸಂವಿಧಾನ ರಚನಾಕಾರರನ್ನು ಹೃತ್ಪೂರ್ವಕ ಸ್ಮರಿಸುತ್ತಾ ಅವರೆಲ್ಲರಿಗೂ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ.  ಕಳೆದ ಏಳು ದಶಕಗಳಲ್ಲಿ ಸಂವಿಧಾನದ ಅಭಿವೃದ್ಧಿ ಮತ್ತು ವಿಸ್ತರಣೆಯ ಪಯಣದಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಅಸಂಖ್ಯಾತ ಜನರು ಕೊಡುಗೆ ನೀಡಿದ್ದಾರೆ.  ಅವರೆಲ್ಲರಿಗೂ ದೇಶದ ಪರವಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ.

ಸ್ನೇಹಿತರೇ....

 ಇಂದು ಅಂದರೆ ನವೆಂಬರ್ 26, ಇದು ಮುಂಬೈ ಉಗ್ರರ ದಾಳಿಯ ದಿನವೂ ಆಗಿದೆ.  14 ವರ್ಷಗಳ ಹಿಂದೆ ಮಾನವೀಯತೆಯ ಶತೃಗಳು ಈ ದಿನದಂದು ಇಡೀ ದೇಶವೇ   ತನ್ನ ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನು ಆಚರಿಸುತ್ತಿರುವಾಗ, ಭಾರತದ ಮೇಲೆ ಅತಿದೊಡ್ಡ ಭಯೋತ್ಪಾದಕ ದಾಳಿಯನ್ನು  ನಡೆಸಿದ್ದರು. ಈ ಕರಾಳ ಘಟನೆಯನ್ನು ಖಂಡಿಸುತ್ತಾ, ಅಂದು ನಡೆದ   ಮುಂಬೈ ಉಗ್ರರ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

ಸ್ನೇಹಿತರೇ......

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವದ ಕಣ್ಣು ಭಾರತದತ್ತ ನೆಟ್ಟಿದೆ.  ಭಾರತದ ಕ್ಷಿಪ್ರ ಅಭಿವೃದ್ಧಿ,  ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ದೇಶದ ಆರ್ಥಿಕತೆ ಮತ್ತು ಭಾರತದ ಬೆಳೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರಣದ ನಡುವೆ, ಜಗತ್ತು ನಮ್ಮನ್ನು ದೊಡ್ಡ ನಿರೀಕ್ಷೆಗಳಿಂದ ನೋಡುತ್ತಿದೆ.  ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಭಯಭೀತರಾಗಿದ್ದ ದೇಶವು ವಿಘಟನೆಯಾಗುತ್ತದೆ ಎಂದು ಹೇಳಲಾಗುತ್ತದೆ.ಆದರೆ ಭಾರತವು ತನ್ನ ಎಲ್ಲ ವೈವಿಧ್ಯದ ಬಗೆಗಿನ ಹೆಮ್ಮೆಯಿಂದಾಗಿ ಪೂರ್ಣ ಶಕ್ತಿಯಿಂದ ಮುನ್ನಡೆಯುತ್ತಿದೆ.  ಈ ಎಲ್ಲದರ ಹಿಂದಿನ ನಮ್ಮ ದೊಡ್ಡ ಶಕ್ತಿಯೆಂದರೆ, ಅದು ನಮ್ಮ ಸಂವಿಧಾನವಾಗಿದೆ.

ನಮ್ಮ ಸಂವಿಧಾನದ ಪೀಠಿಕೆಯ ಆರಂಭದಲ್ಲಿ ಬರೆದಿರುವ 'ನಾವು ಪ್ರಜೆಗಳು' ಎಂಬ ಪದಗಳು ಕೇವಲ ಪದಗಳಲ್ಲ.  'ನಾವು ಪ್ರಜೆಗಳು' ಎಂಬುದು ಒಂದು ಕರೆ, ಪ್ರತಿಜ್ಞೆ‌ ಮತ್ತು ನಂಬಿಕೆ ಎನ್ನುವುದಾಗಿದೆ. ಸಂವಿಧಾನದಲ್ಲಿ ಬರೆದಿರುವ ಈ ಭಾವನೆಗಳೇ  ಜಗತ್ತಿನಲ್ಲಿ ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತದ ಮೂಲ ಭಾವನೆಯಾಗಿದೆ.  ಗಣರಾಜ್ಯ ವ್ಯವಸ್ಥೆಯಲ್ಲಿ ಮತ್ತು ವೇದಗಳ ಸ್ತೋತ್ರಗಳಲ್ಲಿಯೂ ಕೂಡ ಇದೇ ಚೈತನ್ಯವನ್ನು ನಾವು ನೋಡುತ್ತೇವೆ.

ಮಹಾಭಾರತದಲ್ಲಿಯೂ ಹೀಗೆ ಹೇಳಲಾಗಿದೆ:

ಜನರ ಮನರಂಜನೆ ಮತ್ತು ಸತ್ಯದ ರಕ್ಷಣೆ, ಮತ್ತು ವ್ಯವಹಾರಗಳ ನೇರತೆ ರಾಜರ ಶಾಶ್ವತ ಕರ್ತವ್ಯ.

ಅರ್ಥಾತ್, ಜನರನ್ನು ಅಂದರೆ ಪ್ರಜೆಗಳನ್ನು ಸಂತೋಷವಾಗಿಡುವುದು, ಸತ್ಯ ಮತ್ತು ಸರಳ ನಡವಳಿಕೆಯೊಂದಿಗೆ ನಿಲ್ಲುವುದು  ರಾಜ್ಯದ ನಡವಳಿಕೆಯಾಗಬೇಕು.  ಆಧುನಿಕ ಸಂದರ್ಭದಲ್ಲಿ ಸಹ ಭಾರತದ ಸಂವಿಧಾನದಿಂದಾಗಿ ದೇಶದ ಈ ಎಲ್ಲ ಸಾಂಸ್ಕೃತಿಕ ಮತ್ತು ನೈತಿಕ ಭಾವನೆಗಳನ್ನು ಅಳವಡಿಸಿಕೊಂಡಿದೆ.

ನನಗೆ ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತ ದೇಶವು ಈ ಪ್ರಾಚೀನ ಆದರ್ಶಗಳು ಮತ್ತು ಸಂವಿಧಾನದ ಸ್ಫೂರ್ತಿಯನ್ನು ನಿರಂತರವಾಗಿ ಬಲಪಡಿಸುತ್ತಿದೆ ಎನ್ನುವ ತೃಪ್ತಿಯಿದೆ. ಜನಪರ ನೀತಿಗಳ ಬಲದಿಂದ ದೇಶದ ಬಡವರು, ದೇಶದ ತಾಯಂದಿರು, ಸಹೋದರಿಯರು ಸಬಲರಾಗುತ್ತಿದ್ದಾರೆ.  ಇಂದು ಸಾಮಾನ್ಯ ಜನರಿಗಾಗಿ ಕಾನೂನುಗಳನ್ನು ಸರಳಗೊಳಿಸಲಾಗುತ್ತಿದೆ.  ನಮ್ಮ ನ್ಯಾಯಾಂಗವೂ ಸಕಾಲಿಕ ನ್ಯಾಯಕ್ಕಾಗಿ ಅನೇಕ ಅರ್ಥಪೂರ್ಣ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳುತ್ತಿದೆ.  ಇಂದಿಗೂ, ಸುಪ್ರೀಂ ಕೋರ್ಟ್ ಆರಂಭಿಸಿರುವ ಈ ಉಪಕ್ರಮಗಳನ್ನು ಪ್ರಾರಂಭಿಸಲು ನನಗೆ ಅವಕಾಶ ಸಿಕ್ಕಿದೆ.  ಈ ಆರಂಭಕ್ಕಾಗಿ ಮತ್ತು 'ಸುಲಭ ನ್ಯಾಯ'ದ ಪ್ರಯತ್ನಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ....

ಕರ್ತವ್ಯದ ವಿಷಯಗಳ ಉದ್ದೇಶಕ್ಕಾಗಿ ಈ ಬಾರಿ ಆಗಸ್ಟ್ 15ರಂದು ಕೆಂಪುಕೋಟೆಯಿಂದ  ಒತ್ತು ನೀಡಿದ್ದೆ.  ಇದು ನಮ್ಮ ಸಂವಿಧಾನದ ಆಶಯದ ದ್ಯೋತಕವಾಗಿದೆ.  ಮಹಾತ್ಮ ಗಾಂಧೀಜಿ ಹೇಳಿರುವಂತೆ - 'ನಮ್ಮ ಹಕ್ಕುಗಳು ನಮ್ಮ ಕರ್ತವ್ಯಗಳಾಗಿವೆ, ಅದನ್ನು ನಾವು ನಿಜವಾದ ಸಮಗ್ರತೆ ಮತ್ತು ಸಮರ್ಪಣೆಯೊಂದಿಗೆ ಪೂರೈಸುತ್ತೇವೆ'.  ಇಂದು ಅಮೃತಕಾಲ್‌ನಲ್ಲಿ ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಪೂರೈಸಿ ಮುಂದಿನ 25 ವರ್ಷಗಳೆಡೆಗೆ ಪ್ರಾರಂಭಿಸುತ್ತಿರುವ ಈ ಪಯಣಕ್ಕೆ ಸಂವಿಧಾನದ ಈ ಮಂತ್ರ ದೇಶಕ್ಕೆ ಸಂಕಲ್ಪವಾಗುತ್ತಿದೆ.

ಒಂದು ವಾರದ ನಂತರ ಭಾರತ ದೇಶವು ಜಿ-20 ಅಧ್ಯಕ್ಷ ಸ್ಥಾನವನ್ನು ಪಡೆಯಲಿದೆ.  ಇದೊಂದು ದೊಡ್ಡ ಅವಕಾಶ.  ಟೀಂ ಇಂಡಿಯಾ ಆಗಿ ವಿಶ್ವದಲ್ಲಿ ಭಾರತದ ಘನತೆಯನ್ನು ಹೆಚ್ಚಿಸೋಣ, ಭಾರತದ ಕೊಡುಗೆಯನ್ನು ಜಗತ್ತಿಗೆ ಕೊಂಡೊಯ್ಯೋಣ, ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯೂ ಆಗಿದೆ.  ಪ್ರಜಾಪ್ರಭುತ್ವದ ತಾಯಿ ಎಂಬ ಭಾರತದ ಗುರುತನ್ನು ನಾವು ಬಲಪಡಿಸಬೇಕಾಗಿದೆ.


ಸ್ನೇಹಿತರೇ....

ನಮ್ಮ ಸಂವಿಧಾನದ ಇನ್ನೂ ಒಂದು ವೈಶಿಷ್ಟ್ಯವಿದೆ, ಇದು ಇಂದಿನ ಯುವ ಭಾರತದಲ್ಲಿ ಹೆಚ್ಚು ಪ್ರಸ್ತುತವಾಗಿದೆ.  ನಮ್ಮ ಸಂವಿಧಾನ ರಚನಾಕಾರರು ಮುಕ್ತ, ಭವಿಷ್ಯದ ಮತ್ತು ಅದರ ಆಧುನಿಕ ದೃಷ್ಟಿಕೋನಕ್ಕೆ ಹೆಸರುವಾಸಿಯಾದ ಸಂವಿಧಾನವನ್ನು ನಮಗೆ ನೀಡಿದ್ದಾರೆ.  ಆದ್ದರಿಂದ, ಸ್ವಾಭಾವಿಕವಾಗಿ, ನಮ್ಮ ಸಂವಿಧಾನದ ಆತ್ಮವು ಯುವ ಕೇಂದ್ರಿತವಾಗಿದೆ.

ಕ್ರೀಡೆಯಾಗಿರಬಹುದು ಅಥವಾ ಸ್ಟಾರ್ಟ್‌ಅಪ್‌ಗಳು, ಮಾಹಿತಿ ತಂತ್ರಜ್ಞಾನ ಅಥವಾ ಡಿಜಿಟಲ್ ಪಾವತಿಗಳು, ಯುವ ಶಕ್ತಿಯು ಭಾರತದ ಅಭಿವೃದ್ಧಿಯ ಪ್ರತಿಯೊಂದು ಅಂಶದಲ್ಲೂ ತನ್ನ ಛಾಪು ಮೂಡಿಸುತ್ತಿದೆ.  ನಮ್ಮ ಸಂವಿಧಾನ ಮತ್ತು ಸಂಸ್ಥೆಗಳ ಭವಿಷ್ಯದ ಜವಾಬ್ದಾರಿಯೂ ಈ ಯುವಕರ ಹೆಗಲ ಮೇಲಿದೆ.

ಆದ್ದರಿಂದ, ಇಂದು ಸಂವಿಧಾನದ ದಿನದಂದು, ನಾನು ದೇಶದ ಸರ್ಕಾರ ಮತ್ತು ನ್ಯಾಯಾಂಗದ ವ್ಯವಸ್ಥೆಗಳಿಗೆ ಇಂದಿನ ಯುವಜನರಲ್ಲಿ ಸಂವಿಧಾನದ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸಲು ಸಾಂವಿಧಾನಿಕ ವಿಷಯಗಳ ಬಗ್ಗೆ   ಚರ್ಚೆ ಮತ್ತು ಚರ್ಚೆಗಳ ಭಾಗವಾಗುವುದು ಅವಶ್ಯಕ ಎಂದು ನಾನು ವಿನಂತಿಸುತ್ತೇನೆ.
ನಮ್ಮ ಸಂವಿಧಾನ ರಚನೆಯಾದಾಗ, ದೇಶದ ಮುಂದಿರುವ ಸನ್ನಿವೇಶಗಳೇನು?  ಅಂದಿನ ಸಂವಿಧಾನ ಸಭೆಯ ಚರ್ಚೆಗಳಲ್ಲಿ ಏನಾಯಿತು ಈ ಎಲ್ಲ ವಿಷಯಗಳ ಬಗ್ಗೆ ನಮ್ಮ ಯುವಜನರು ಜಾಗೃತರಾಗಿರಬೇಕು.  ಇದು ಸಂವಿಧಾನದ ಬಗ್ಗೆ ಅವರ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.  ಇದು ಯುವಜನರಲ್ಲಿ ಸಮಾನತೆ ಮತ್ತು ಸಬಲೀಕರಣದಂತಹ ವಿಷಯಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನು ಬೆಳೆಸುತ್ತದೆ.

 ಉದಾಹರಣೆಗೆ, ನಮ್ಮ ಸಂವಿಧಾನ ಸಭೆಯಲ್ಲಿ ನಾವು 15 ಮಹಿಳಾ ಸದಸ್ಯರನ್ನು ಹೊಂದಿದ್ದು,  ಮತ್ತು ಅವರಲ್ಲಿ ಒಬ್ಬರು 'ದಾಕ್ಷಾಯಿಣಿ ವೇಲಾಯುಧನ್'. ಇವರು ಒಂದು ರೀತಿಯಲ್ಲಿ ವಂಚಿತ ಸಮಾಜದಿಂದ ಹೊರಬಂದು ಅಲ್ಲಿಗೆ ತಲುಪಿದ ದಲಿತ ಮಹಿಳೆಯಾಗಿದ್ದಾರೆ.ಕಾರ್ಮಿಕರಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಪ್ರಮುಖ ಮಧ್ಯಸ್ಥಿಕೆಗಳನ್ನು ಮಾಡಿದ್ದಾರೆ.ದುರ್ಗಾಬಾಯಿ ದೇಶಮುಖ್, ಹಂಸಾ ಮೆಹ್ತಾ, ರಾಜಕುಮಾರಿ ಅಮೃತ್ ಕೌರ್ ಮತ್ತು ಇತರ ಅನೇಕ ಮಹಿಳಾ ಸದಸ್ಯರು ಸಹ  ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.ಆದರೆ ಅವರ ಕೊಡುಗೆಯನ್ನು ವಿರಳವಾಗಿ ಚರ್ಚಿಸಲಾಗಿದೆ.

 ಇವುಗಳನ್ನು ನಮ್ಮ ಯುವಕರು ತಿಳಿದಾಗ ಅವರ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ.  ಇದರಿಂದ ಸಂವಿಧಾನದ ಬಗ್ಗೆ ಉಂಟಾಗುವ ನಿಷ್ಠೆಯು ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು ದೇಶದ ಭವಿಷ್ಯವನ್ನು ಇನ್ನಷ್ಟು ಬಲಪಡಿಸುತ್ತದೆ.  ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ಇದು ದೇಶದ ಪ್ರಮುಖ ಅಗತ್ಯವೂ ಆಗಿದೆ.  ಸಂವಿಧಾನದ ದಿನವು ಈ ದಿಸೆಯಲ್ಲಿ ನಮ್ಮ ನಿರ್ಣಯಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

 ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಅನೇಕ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.