Lays foundation stone and launches several sanitation and cleanliness projects worth about Rs 10,000 crore
“As we mark Ten Years of Swachh Bharat, I salute the unwavering spirit of 140 crore Indians for making cleanliness a 'Jan Andolan'”
“Clean India is the world's biggest and most successful mass movement in this century”
“Impact that the Swachh Bharat Mission has had on the lives of common people of the country is priceless”
“Number of infectious diseases among women has reduced significantly due to Swachh Bharat Mission”
“Huge psychological change in the country due to the growing prestige of cleanliness”
“Now cleanliness is becoming a new path to prosperity”
“Swachh Bharat Mission has given new impetus to the circular economy”
“Mission of cleanliness is not a one day ritual but a lifelong ritual”
“Hatred towards filth can make us more forceful and stronger towards cleanliness”
“Let us take an oath that wherever we live, be it our home, our neighbourhood or our workplace, we will maintain cleanliness”

ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಮನೋಹರ್ ಲಾಜ್ ಜೀ, ಶ್ರೀ ಸಿ.ಆರ್. ಪಾಟೀಲ್ ಜೀ, ಶ್ರೀ ತೊಖಾನ್ ಸಾಹುಜೀ, ಶ್ರೀ ರಾಜ್ ಭೂಷಣ್ ಜೀ, ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ಇಂದು ಪೂಜ್ಯ ಬಾಪೂ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಜನ್ಮ ದಿನ. ಬಾಪು ಭಾರತೀಯ ಶ್ರೇಷ್ಠ ಪುತ್ರರಾಗಿದ್ದು, ಅವರಿಗಾಗಿ ಶಿರಬಾಗಿ ನಮಿಸುತ್ತೇನೆ. ಗಾಂಧೀಜಿ ಅವರ ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡಲು ಇದು ಸ್ಫೂರ್ತಿಯ ದಿನ. ದೇಶದ ಈ ಮಹಾನ್ ವ್ಯಕ್ತಿಗಳು ಭಾರತದ ಭವಿಷ್ಯವನ್ನು ಆಗಲೇ ಕಲ್ಪನೆ ಮಾಡಿಕೊಂಡಿದ್ದರು.

ಸ್ನೇಹಿತರೇ,

ಅಕ್ಟೋಬರ್ 2 ರಂದು ಕರ್ತವ್ಯ ಪ್ರಜ್ಞೆಯಿಂದ ತುಂಬಿಕೊಂಡಿದ್ದೇನೆ ಮತ್ತು ಆಳವಾದ ಭಾವನಾತ್ಮಕತೆಯಿಂದ ಕೂಡಿದ್ದೇನೆ. ಸ್ವಚ್ಛ ಭಾರತ ಅಭಿಯಾನದ ಈ ಸಂಕೇತ ಕೋಟ್ಯಂತರ ಭಾರತೀಯರ ಬದ್ಧತೆಯ ಯಾನವಾಗಿದೆ. ಕಳೆದ 10 ವರ್ಷಗಳಲ್ಲಿ ಅಸಂಖ್ಯಾತ ಭಾರತೀಯರು ಇದು ತಮ್ಮದೇ ಆಂದೋಲನ ಎಂದು ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಇದನ್ನು ದೈನಂದಿನ ಜೀವನದ ಭಾಗ ಮಾಡಿಕೊಂಡಿದ್ದಾರೆ. ಈ 10 ವರ್ಷಗಳ ಮೈಲಿಗಲ್ಲಿನಲ್ಲಿ ಪ್ರತಿಯೊಬ್ಬ ನಾಗರಿಕರಿಗೆ, ನಮ್ಮ ನೈರ್ಮಲ್ಯ ಕಾರ್ಯಕರ್ತರು, ನಮ್ಮ ಧಾರ್ಮಿಕ ಮುಖಂಡರು, ನಮ್ಮ ಕ್ರೀಡಾಪಟುಗಳು, ನಮ್ಮ ಗಣ್ಯರು, ಸ್ವಯಂ ಸೇವಾ ಸಂಘಗಳು ಮತ್ತು ಮಾಧ್ಯಮ ಮಿತ್ರರಿಗೆ ನಾನು ನನ್ನ ಹೃತ್ಪೂರ್ವಕ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತೇನೆ. ನೀವೆಲ್ಲರೂ ಸೇರಿ ಸ್ವಚ್ಛ ಭಾರತ ಅಭಿಯಾನವನ್ನು ಸಾರ್ವಜನಿಕ ಜನಾಂದೋಲನವನ್ನಾಗಿ ರೂಪಿಸಿದ್ದೀರಿ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಮಾಜಿ ರಾಷ್ಟ್ರಪತಿಗಳು, ಮಾಜಿ ಉಪರಾಷ್ಟ್ರಪತಿಗಳು ಸ್ವಚ್ಛತಾ ಅಭಿಯಾನದ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ದೇಶಕ್ಕೆ ಅಪಾರ ಸ್ಫೂರ್ತಿ ತುಂಬಿದ್ದಾರೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ಇಂದು ದೇಶಾದ್ಯಂತ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನತೆ ತಮ್ಮ ಹಳ್ಳಿಗಳು, ನಗರಗಳು, ನೆರೆ ಹೊರೆ ಪ್ರದೇಶಗಳು, ತಮ್ಮ ಚಾವಡಿ, ವಸತಿ ಸಂಕಿರಣ ಅಥವಾ ಸಂಸ್ಥೆಗಳನ್ನು ಉತ್ಸಾಹ ಭರಿತರಾಗಿ ಶುದ್ಧಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಮತ್ತು ಇತರೆ ಸಾರ್ವಜನಿಕ ಪ್ರತಿನಿಧಿಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಕಳೆದ ಪಾಕ್ಷಿಕದಲ್ಲಿ ದೇಶದ ಕೋಟ್ಯಂತರ ಜನ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಈಗಾಗಲೇ ತಾವು ತಮಗೆ ತಿಳಿಸಿರುವಂತೆ “ಸೇವಾ ಪಕ್ವಾಡ” [ಸೇವಾ ಪಾಕ್ಷಿಕ] ನಡೆಸಿದ್ದು, ದೇಶವ್ಯಾಪಿ 27 ಲಕ್ಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 28 ಕೋಟಿಗೂ ಅಧಿಕ ಮಂದಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಿರಂತರ ಪ್ರಯತ್ನದಿಂದ ನಾವು ಭಾರತವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬ ಭಾರತೀಯರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೇ,

ಇಂತಹ ಪ್ರಮುಖ ಸಂದರ್ಭದಲ್ಲಿಂದು 10,000 ಕೋಟಿ ರೂಪಾಯಿ ಮೊತ್ತದ ಹೊಸ ಸ್ವಚ್ಛತೆಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದೇವೆ. ಅಮೃತ ಅಭಿಯಾನದಡಿ ದೇಶವ್ಯಾಪಿ ಹಲವಾರು ನಗರಗಳಲ್ಲಿ ನೀರು ಮತ್ತು ಚರಂಡಿ ನೀರು ಶುದ್ದೀಕರಣ ಘಟಕಗಳನ್ನು ನಿರ್ಮಿಸಲಾಗುವುದು. ಅದು "ನಮಾಮಿ ಗಂಗೆ"ಗೆ ಸಂಬಂಧಿಸಿದ ಕೆಲಸವಾಗಿರಲಿ ಅಥವಾ "ಗೋಬರ್ಧನ್" ಸ್ಥಾವರಗಳ ಮೂಲಕ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆಯಾಗಿರಲಿ, ಈ ಉಪಕ್ರಮಗಳು ಸ್ವಚ್ಛ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ಏರಿಸುತ್ತವೆ. ಸ್ವಚ್ಛ ಭಾರತ ಅಭಿಯಾನ  ಎಷ್ಟು ಯಶಸ್ವಿಯಾಯಿತೋ ಅಷ್ಟು ನಮ್ಮ ದೇಶ ಪ್ರಕಾಶಮಾನವಾಗಿ ಬೆಳಗುತ್ತದೆ.

ಸ್ನೇಹಿತರೇ,

ಈಗಿನಿಂದ ಮುಂದೆ ಒಂದು ಸಾವಿರ ವರ್ಷದವರೆಗೆ 21ನೇ ಶತಮಾನದ ಸ್ವಚ್ಛ ಭಾರತ ಅಭಿಯಾನವನ್ನು ಜನತೆ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ. ಸ್ವಚ್ಛ ಭಾರತ ಜಗತ್ತಿನ ಅತಿದೊಡ್ಡ ಮತ್ತು ಜನರಿಂದ ನಡೆದ ಅತಿ ಬೃಹತ್ತಾದ ಜನಕೇಂದ್ರಿತ ಯಶಸ್ವಿ ಜನಾಂದೋಲನವಾಗಿದೆ.

ಈ ಅಭಿಯಾನ ದೇಶದ ಜನರ ಶಕ್ತಿಯನ್ನು ಅನಾವರಣಗೊಳಿಸಿದ್ದು, ಇದನ್ನು ತಾವು ದೈವಿಕವಾದದ್ದು ಎಂದು ಪರಿಗಣಿಸುತ್ತೇನೆ. ಸ್ವಚ್ಛತೆಯನ್ನು ಜನ ಸಂಭ್ರಮಿಸುತ್ತಿರುವಂತೆ ತಮಗೆ ಇದು ಭಾಸವಾಗುತ್ತಿದೆ. ಬಹಳಷ್ಟು ಬಾರಿ ಇದನ್ನು ನೆನಪಿಸಿದ್ದು, ಈ ಅಭಿಯಾನ ಆರಂಭವಾದಾಗ ಲಕ್ಷಾಂತರ ಜನ ಸ್ವಚ್ಛತೆಯಲ್ಲಿ ತೊಡಗಿಕೊಂಡರು. ಮದುವೆಯಿಂದ ಸಾರ್ವಜನಿಕ ಸಮಾರಂಭ, ಪ್ರತಿಯೊಂದು ಕಡೆಗಳಲ್ಲಿ ಸ್ವಚ್ಛತೆ ಕುರಿತು ಸಂದೇಶಗಳನ್ನು ಹರಡಲಾಯಿತು. ಹಿರಿಯ ತಾಯಿಯೊಬ್ಬರು ತಮ್ಮ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿಕೊಂಡಿದ್ದು, ಕೆಲವರು ತಮ್ಮ ಮಂಗಳಸೂತ್ರವನ್ನೇ ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರು ತಮ್ಮ ಭೂಮಿಯನ್ನು ಶೌಚಾಲಯ ನಿರ್ಮಿಸಲು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಕೆಲವು ನಿವೃತ್ತ ಶಿಕ್ಷಕರು ತಮ್ಮ ಪಿಂಚಣಿ ಮತ್ತು ತಮ್ಮ ನಿವೃತ್ತಿ ಹಣವನ್ನು  ಶೌಚಾಲಯ ನಿರ್ಮಿಸಲು ಕೊಡುಗೆ ನೀಡಿದ್ದಾರೆ. ಇಂತಹ ದೇಣಿಗೆಯನ್ನು ದೇವಸ್ಥಾನ ನಿರ್ಮಿಸಲು ಮತ್ತು ಇತರೆ ಕಾರ್ಯಕ್ರಮಗಳಿಗೆ ನೀಡುತ್ತಿದ್ದರು. ಆದರೆ ಈ ಸದುದ್ದೇಶಕ್ಕೆ ನೀಡಿದ ಹಣ ವೃತ್ತ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಯಿತು ಮತ್ತು ವಾರಗಟ್ಟಲೆ ಚರ್ಚೆಗಳು ಸಹ ನಡೆದಿವೆ. ಆದರೆ ಟಿವಿಯಲ್ಲಿ ಎಂದಿಗೂ ಮುಖ ಕಾಣಿಸದ, ಅವರ ಹೆಸರು ಯಾವುದೇ ಸಂದರ್ಭದಲ್ಲಿ ಮುಖ್ಯಾಂಶಗಳಲ್ಲಿ ಕಾಣದ, ಸಮಯ ಅಥವಾ ಸಂಪತ್ತಾಗಿರಲಿ, ಈ ಚಳವಳಿಗೆ ಹೊಸ ಶಕ್ತಿ ಮತ್ತು ಹುರುಪನ್ನು ನೀಡುತ್ತಿರುವ ಕೊಡುಗೆಗಳನ್ನು ರಾಷ್ಟ್ರವು ತಿಳಿದಿರಬೇಕು. ಇದು ನಮ್ಮ ರಾಷ್ಟ್ರದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ನಾನು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ತ್ಯಜಿಸುವ ಬಗ್ಗೆ ಮಾತನಾಡಿದಾಗ, ಕೋಟಿಗಟ್ಟಲೆ ಜನರು ಸೆಣಬು ಮತ್ತು ಬಟ್ಟೆಯ ಚೀಲಗಳನ್ನು ಶಾಪಿಂಗ್ ಗಾಗಿ ಕೊಂಡೊಯ್ಯಲು ಪ್ರಾರಂಭಿಸಿದರು. ಅವರಿಗೆ ನಾನು ಆಭಾರಿಯಾಗಿದ್ದೇನೆ. ಇಲ್ಲವಾದರೆ, ನಾನು ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಬಗ್ಗೆ ಮಾತನಾಡಿದ್ದರೆ, ಪ್ಲಾಸ್ಟಿಕ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಪ್ರತಿಭಟಿಸಬಹುದಿತ್ತು, ಉಪವಾಸ ಸತ್ಯಾಗ್ರಹ ಮಾಡಬಹುದಿತ್ತು ... ಆದರೆ ಅವರು ಮಾಡಲಿಲ್ಲ. ಆರ್ಥಿಕ ನಷ್ಟದಲ್ಲಿಯೂ ಸಹಕರಿಸಿದರು. ಮೋದಿ ಅವರು ನಿರುದ್ಯೋಗವನ್ನು ಉಂಟುಮಾಡಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದಾರೆ ಎಂದು ಪ್ರತಿಭಟಿಸಿದ ರಾಜಕೀಯ ಪಕ್ಷಗಳಿಗೆ ನಾನು ಧನ್ಯವಾದ ಹೇಳುತ್ತೇನೆ, ಆದರೆ ಜನ ಅವರನ್ನು ಅನುಸರಿಸಲಿಲ್ಲ. ಅವರ ಗಮನವು ಅಲ್ಲಿಗೆ ಹೋಗಲಿಲ್ಲ, ಆದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.

ಸ್ನೇಹಿತರೇ

ನಮ್ಮ ಸಿನೆಮಾ ಉದ್ಯಮ ಸಹ ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದೆ. ವಾಣಿಜ್ಯ ಹಿತಾಸಕ್ತಿಯ ಬದಲಿಗೆ ಚಿತ್ರೋದ್ಯಮ ಸ್ವಚ್ಛತೆ ಕುರಿತು ಚಲನ ಚಿತ್ರ ನಿರ್ಮಿಸಿತು. ಈ 10 ವರ್ಷಗಳಲ್ಲಿ ಇದು ಒಂದು ಬಾರಿಯ ವಿಷಯವಲ್ಲ, ಪ್ರತಿದಿನ ಮತ್ತು ಪ್ರತಿಯೊಂದು ಹಂತದಲ್ಲಿ ನಿರಂತರವಾಗಿ ಇದು ಮುಂದುವರೆಯಿತು. ಈ ನಂಬಿಕೆಯ ಮೇಲೆ ನಾವೆಲ್ಲಾ ಬದುಕಿದ್ದು, ಇದನ್ನು ಒತ್ತಿ ಹೇಳುತ್ತೇನೆ. “ಮನ್ ಕಿ ಬಾತ್“ ನಲ್ಲಿ ಸ್ವಚ್ಛತೆ ಕುರಿತು 800 ಬಾರಿ ವಿಷಯ ಪ್ರಸ್ತಾಪಿಸಿದ್ದೇನೆ. ಸ್ವಚ್ಛತೆ ಕುರಿತು ಜನತೆ ತಮ್ಮ ಪ್ರಯತ್ನ ಮತ್ತು ಸಮರ್ಪಣಾ ಭಾವದ ಕುರಿತು ಲಕ್ಷಾಂತರ ಪತ್ರಗಳನ್ನು ಬರೆದಿದ್ದಾರೆ.

 

ಸ್ನೇಹಿತರೇ,

ಇಂದು ದೇಶ ತನ್ನ ಜನತೆ ಮತ್ತು ಸಾಧನೆಗಳಿಗೆ ಸಾಕ್ಷಿಯಾಗಿದ್ದು, ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ. ಯಾಕೆ ಇದು ಹಿಂದೆ ನಡೆಯಲಿಲ್ಲ?. ಮಹಾತ್ಮಾಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ನಮಗೆ ಸ್ವಚ್ಛತೆ ಕುರಿತ ಹಾದಿಯನ್ನು ತೋರಿಸಿದರು. ಅವರು ನಮಗೆ ಹಾದಿಯನ್ನಷ್ಟೇ ತೋರಿಸಲಿಲ್ಲ. ಸ್ವತಃ ಅದನ್ನು ಮಾಡಿ ತೋರಿಸಿದರು. ಇಷ್ಟಾದರೂ ಸ್ವಚ್ಛತೆ ಕುರಿತು ಗಮನಕೊಡಲು ಯಾಕೆ ಸಾಧ್ಯವಾಗಲಿಲ್ಲ?. ಗಾಂಧೀಜಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಮತ್ತು ಅವರ ಹೆಸರಿನಲ್ಲಿ ಮತಗಳನ್ನು ಪಡೆದುಕೊಂಡವರು ಅವರ ಆಪ್ತವಾದ ಸ್ವಚ್ಛತೆ ಕುರಿತ ವಿಷಯವನ್ನೇ ಮರೆತಿದ್ದರು. ಅವರು ದೇಶದಲ್ಲಿ ಶೌಚಾಲಯಗಳ ಕೊರತೆಯಂತಹ ಸಮಸ್ಯೆಗಳನ್ನು ನೋಡಲಿಲ್ಲ. ಅವರು ಕೊಳಕನ್ನು ಜೀವನ ವಿಧಾನವನ್ನಾಗಿ ಸ್ವೀಕರಿಸಿದ್ದರು. ಇದರ ಪರಿಣಾಮ ಜನತೆ ಕೊಳಕಿನೊಂದಿಗೆ ಬದುಕುವಂತೆ ಬಲವಂತ ಮಾಡಿದಂತಾಗಿತ್ತು. ಕೊಳಕು ಜೀವನ ವಿಧಾನದ ಭಾಗವಾಗಿತ್ತು. ಶುಚಿತ್ವದ ಬಗ್ಗೆ ಚರ್ಚೆ ನಿಲ್ಲಿಸಲಾಯಿತು. ಹಾಗಾಗಿ, ನಾನು ಕೆಂಪು ಕೋಟೆಯಿಂದ ಸಮಸ್ಯೆಯನ್ನು ಎತ್ತಿದಾಗ, ಅದು ಬಿರುಗಾಳಿಯನ್ನೇ ಉಂಟುಮಾಡಿತು. ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಮಾತನಾಡುವುದು ಭಾರತದ ಪ್ರಧಾನಿಯ ಕೆಲಸವಲ್ಲ ಎಂದು ಕೆಲವರು ನನ್ನನ್ನು ಲೇವಡಿ ಮಾಡಿದರು. ಅವರು ನನ್ನನ್ನು ಅಪಹಾಸ್ಯ ಮಾಡುವುದನ್ನು ಮುಂದುವರಿಸಿದರು.

ಆದರೆ ಸ್ನೇಹಿತರೇ,

ಪ್ರಧಾನಮಂತ್ರಿಯವರ ಮೊದಲ ಕೆಲಸವೆಂದರೆ ದೇಶದ ಜನಸಾಮಾನ್ಯರ ಜೀವನವನ್ನು ಸುಗಮಗೊಳಿಸುವುದಾಗಿದೆ. ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಸುವ ಜೊತೆಗೆ ನಾನು ಶೌಚಾಲಯಗಳ ಬಗ್ಗೆ ಮಾತನಾಡಿದೆ. ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆಯೂ ಮಾತನಾಡಿದೆ. ಮತ್ತು ಇಂದು, ಇದರ ಫಲಿತಾಂಶವನ್ನು ನೋಡುತ್ತಿದ್ದೇವೆ.

ಸ್ನೇಹಿತರೇ  

10 ವರ್ಷಗಳಲ್ಲಿ ಭಾರತದ ಶೇ 60ಕ್ಕೂ ಅಧಿಕ ಜನ ಬಯಲು ಬಹಿರ್ದೆಸೆ ಮುಕ್ತರಾಗಿದ್ದಾರೆ. ಇದು ಮಾನವನ ಘನತೆಗೆ ಧಕ್ಕೆ ತಂದಿತ್ತು. ಇದೊಂದೇ ಅಲ್ಲ, ದೇಶದ ಬಡ, ದಲಿತರು, ಬುಡಕಟ್ಟು, ಹಿಂದುಳಿದ ಸಮುದಾಯ ಜನರಿಗೆ ಇದರಿಂದ ಅಪಮಾನವಾಗಿದ್ದು, ಇದು ಮುಂದಿನ ಪೀಳಿಗೆಗೂ ಮುಂದುವರೆಯಲಿತ್ತು. ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಶೌಚಾಲಯ ಕೊರತೆಯಿಂದ ತೊಂದರೆಗೆ ಸಿಲುಕಿದ್ದರು. ಇದರಿಂದ ನೋವು ಮತ್ತು ಆರಾಮದಾಯಕವಲ್ಲದ ಹಾದಿ ಬಿಟ್ಟು ಬೇರೆ ಮಾರ್ಗವಿರಲಿಲ್ಲ. ಇದು ಅವರ ಸುರಕ್ಷತೆಗೆ ಗಂಭೀರ ಅಪಾಯವನ್ನು ತಂದೊಡ್ಡಿತ್ತು. ಅವರು ಸೂರ್ಯೋದಯಕ್ಕೂ ಮುನ್ನ ತೆರಳಬೇಕಿತ್ತು ಇಲ್ಲವೆ ಅದು ಚಳಿ ಅಥವಾ ಮಳೆಯ ಪರಿಸ್ಥಿತಿಯೂ ಆಗಿರಬಹುದು. ಕೋಟ್ಯಂತರ ತಾಯಂದಿರು ನಮ್ಮ ದೇಶದಲ್ಲಿ ಪ್ರತಿದಿನ ಈ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಬಯಲು ಶೌಚದಿಂದ ಉಂಟಾಗುವ ಕೊಳಕು ನಮ್ಮ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಇದು ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿತ್ತು. ಅನೈರ್ಮಲ್ಯದಿಂದ ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ರೋಗಗಳು ಹರಡುವುದು ಸಾಮಾನ್ಯವಾಗಿತ್ತು.

 

ಸ್ನೇಹಿತರೇ,

ಇಂತಹ ಪರಿಸ್ಥಿತಿಯಲ್ಲಿ ಹೇಗೆ ಯಾವುದೇ ದೇಶ ಪ್ರಗತಿಹೊಂದಲು ಸಾಧ್ಯ?. ಆದ್ದರಿಂದಲೇ ದೇಶ ಇದೇ ರೀತಿ ದೀರ್ಘಕಾಲ ಮುಂದುವರೆಯುವುದು ಸರಿಯಲ್ಲ. ಹಾಗಾಗಿ ಇದು ರಾಷ್ಟ್ರೀಯ ಮತ್ತು ಮಾನವೀಯ ಸವಾಲುಗಳು ಹಾಗೂ ಇದನ್ನು ಇತ್ಯರ್ಥಪಡಿಸಲು ಅಭಿಯಾನ ಆರಂಭಿಸಲಾಯಿತು. ಇಲ್ಲಿಯೇ ‘ಸ್ವಚ್ಛ ಭಾರತ ಅಭಿಯಾನದ ಬೀಜವನ್ನು ಬಿತ್ತಲಾಯಿತು. ಸಂಕಟದ ಗರ್ಭದಿಂದ ಈ ಕಾರ್ಯಕ್ರಮ, ಈ ಧ್ಯೇಯ, ಈ ಆಂದೋಲನ, ಈ ಅಭಿಯಾನ, ಜನಜಾಗೃತಿಗಾಗಿ ಈ ಪ್ರಯತ್ನ ಹುಟ್ಟಿಕೊಂಡಿತು ಮತ್ತು ದುಃಖದಿಂದ ಹುಟ್ಟಿದ ಕಾರ್ಯಗಳು ಎಂದಿಗೂ ಸಾಯುವುದಿಲ್ಲ. ಯಾವುದೇ ಸಮಯದಲ್ಲಿ, ಕೋಟಿಗಟ್ಟಲೆ ಭಾರತೀಯರು ಮಹಾನ್ ಸಾಧನೆಗಳನ್ನು ಮಾಡಿದರು. ದೇಶದಲ್ಲಿ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೇ.40ಕ್ಕಿಂತ ಕಡಿಮೆ ಇದ್ದ ಶೌಚಾಲಯ ವ್ಯಾಪ್ತಿ ಈಗ ಶೇ.100ಕ್ಕೆ ತಲುಪಿದೆ.  

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನದ ಪರಿಣಾಮ ದೇಶದ ಸಾಮಾನ್ಯ ನಾಗರಿಕರ ಮೇಲೆ ಉಂಟಾಗಿದ್ದು, ಇದು ಮೌಲ್ಯಯುತವಾದದ್ದು. ಇತ್ತೀಚೆಗೆ ಅಂತಾರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಇದರ ಅಧ್ಯಯನ ವರದಿ ಪ್ರಕಟವಾಗಿದೆ. ಅಮೆರಿಕದ ವಾಷಿಂಗ್ಟನ್ ನ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಒಹಿಯೋ ವಿಶ್ವವಿದ್ಯಾಲಯದಿಂದ ಈ ಅಧ್ಯಯನ ನಡೆಸಲಾಯಿತು. ಸ್ವಚ್ಛ ಭಾರತ ಅಭಿಯಾನದಿಂದ ಪ್ರತಿವರ್ಷ 60,000 ರಿಂದ 70,000 ಮಕ್ಕಳ ಜೀವ ಉಳಿಸಲಾಗುತ್ತಿದೆ. ಯಾರಾದರೂ ರಕ್ತದಾನ ಮಾಡಿದರೆ ಒಂದು ಜೀವ ಉಳಿಸಬಹುದು, ಆದರೆ ಇದೊಂದು ಸ್ಮರಣೀಯ ಕಾರ್ಯಕ್ರಮ. ಆದರೆ ನಾವು ಸ್ವಚ್ಛತೆ ಮೂಲಕ ತ್ಯಾಜ್ಯವನ್ನು ತೆರವುಗೊಳಿಸುತ್ತಿದ್ದೇವೆ ಮತ್ತು ಕೊಳಕನ್ನು ನಿರ್ಮೂಲನೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರತಿ ವರ್ಷ 60,000 ರಿಂದ 70,000 ಮಕ್ಕಳ ಜೀವ ಉಳಿಸಲಾಗುತ್ತಿದೆ. ದಕ್ಕೆ ದೇವರಿಂದ ದೊಡ್ಡ ಆಶೀರ್ವಾದವಿದೆ?. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2014 ಮತ್ತು 2019 ರ ನಡುವೆ, 300,000 ಜೀವಗಳನ್ನು ಉಳಿಸಲಾಗಿದೆ, ಇಲ್ಲದಿದ್ದರೆ ಅತಿಸಾರದಿಂದ ಜೀವ ಕಳೆದುಹೋಗುತ್ತಿತ್ತು. ಇದು ಮಾನವ ಸೇವೆಯ ಕರ್ತವ್ಯವಾಗಿದೆ ನನ್ನ ಗೆಳೆಯರೇ.

ಯುನೆಸೆಫ್ ನ ಈ ವರದಿಯ ಪ್ರಕಾರ ಶೇ 90 ಕ್ಕಿಂತ ಹೆಚ್ಚು ಮಹಿಳೆಯರು ಈಗ ಮನೆಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದರಿಂದ ಸುರಕ್ಷಿತ ಭಾವನೆ ಹೊಂದಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದಾಗಿ ಮಹಿಳೆಯರಲ್ಲಿ ಸೋಂಕಿನಿಂದ ಉಂಟಾಗುವ ಕಾಯಿಲೆಗಳು ಗಮನಾರ್ಹವಾಗಿ ತಗ್ಗಿವೆ ಮತ್ತು ಅದು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿರುವುದರಿಂದ ಸಾವಿರಾರು ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿದೆ. ಯುನೆಸೆಫ್ ನ ಮತ್ತೊಂದು ಅಧ್ಯಯನವು, ಸ್ವಚ್ಛತೆಯ ಕಾರಣದಿಂದಾಗಿ ಸರಾಸರಿ ಗ್ರಾಮೀಣ ಕುಟುಂಬಗಳು ವಾರ್ಷಿಕವಾಗಿ ಸುಮಾರು 50,000 ರೂಪಾಯಿಗಳನ್ನು ಉಳಿಸುತ್ತದೆ. ಹಿಂದೆ, ಈ ಹಣವನ್ನು ಆಗಾಗ್ಗೆ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆಗಳಿಗೆ ಖರ್ಚು ಮಾಡಲಾಗುತ್ತಿತ್ತು ಅಥವಾ ಅನಾರೋಗ್ಯದ ಕಾರಣ ಕೆಲಸ ಮಾಡಲು ಅಸಮರ್ಥತೆಯಿಂದಾಗಿ ಕಳೆದುಹೋಗುತ್ತಿತ್ತು.

 

ಸ್ನೇಹಿತರೇ

ಸ್ವಚ್ಛತೆಯಿಂದ ಮಕ್ಕಳ ಜೀವ ಉಳಿಸಬಹುದು ಎಂದು ಒತ್ತಿ ಹೇಳಿದ ಅವರು, ಇದಕ್ಕಾಗಿ ಮತ್ತೊಂದು ಉದಾಹರಣೆ ನೀಡುತ್ತೇನೆ. ಕೆಲವು ವರ್ಷಗಳ ಹಿಂದೆ ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಮಕ್ಕಳು ಮೆದುಳಿನ ಉರಿಯೂತದಿಂದ ಸಾಯುತ್ತಿರುವ ಬಗ್ಗೆ ನಿರಂತರ ಬ್ರೇಕಿಂಗ್ ನ್ಯೂಸ್ ವರದಿಗಳು ಬರುತ್ತಿದ್ದವು. ಆದರೆ ಈಗ ಕೊಳಕು ದೂರವಾಗಿ ಸ್ವಚ್ಛತೆ ಬಂದ ಮೇಲೆ ಆ ವರದಿಗಳು ಮಾಯವಾಗಿವೆ. ಕೊಳಕಿನಿಂದ ಏನು ಹೋಗುತ್ತದೆ ಎಂಬುದನ್ನು ನೋಡಿ! ಇದಕ್ಕೆ ಪ್ರಮುಖ ಕಾರಣವೆಂದರೆ ಸ್ವಚ್ಛ ಭಾರತ ಅಭಿಯಾನ ಸ್ವಚ್ಛತೆ ತಂದಿದೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಿದೆ.

ಸ್ನೇಹಿತರೇ

ಸ್ವಚ್ಛತೆ ವಿಚಾರದಲ್ಲಿ ಗೌರವ ಹೆಚ್ಚಾಗಿದ್ದು, ಇದರಿಂದ ದೇಶದಲ್ಲಿ ಮಾನಸಿಕವಾಗಿ ಬದಲಾವಣೆಗಳಾಗಿವೆ. ಇದನ್ನು ಇಂದು ಪ್ರಸ್ತಾಪಿಸುತ್ತಿರುವುದು ಅತ್ಯಂತ ಅಗತ್ಯವಾಗಿದೆ. ಹಿಂದೆ, ಶುಚಿಗೊಳಿಸುವ ಕೆಲಸಕ್ಕೆ ಸಂಬಂಧಿಸಿದ ಜನರನ್ನು ನಿರ್ದಿಷ್ಟ ಬೆಳಕಿನಲ್ಲಿ ನೋಡಲಾಗುತ್ತಿತ್ತು ಮತ್ತು ಅವರನ್ನು ಹೇಗೆ ನೋಡಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸಮಾಜದ ಒಂದು ದೊಡ್ಡ ವರ್ಗವು ಅವ್ಯವಸ್ಥೆಯನ್ನು ತಮ್ಮ ಹಕ್ಕನ್ನಾಗಿ ಪರಿಗಣಿಸಿದೆ ಮತ್ತು ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯು ಬೇರೊಬ್ಬರ ಮೇಲಿದೆ ಎಂದು ನಂಬಿದ್ದರು, ಸ್ವಚ್ಛಗೊಳಿಸುವವರನ್ನು ಕೀಳಾಗಿ ನೋಡುತ್ತಾ ದುರಹಂಕಾರದ ಭಾವನೆಯೊಂದಿಗೆ ಬದುಕುತ್ತಿದ್ದರು. ಆದರೆ ನಾವೆಲ್ಲರೂ ಶುಚಿತ್ವದ ಪ್ರಯತ್ನಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗ, ಸ್ವಚ್ಛತೆಯಲ್ಲಿ ತೊಡಗಿರುವವರೂ ಸಹ ತಾವು ಮಾಡುತ್ತಿರುವ ಕೆಲಸವು ಮುಖ್ಯವೆಂದು ಭಾವಿಸಿದರು, ಮತ್ತು ಇತರರು ಸಹ ತಮ್ಮ ಪ್ರಯತ್ನದ ಭಾಗವಾಗುತ್ತಿದ್ದಾರೆ. ಇದು ಪ್ರಮುಖ ಮನೋಧೋರಣೆಯಲ್ಲಿನ ಬದಲಾವಣೆಯಾಗಿದೆ. ಸ್ವಚ್ಛ ಭಾರತ ಅಭಿಯಾನ ಅಪಾರ ಗೌರವವನ್ನು ದೊರಕಿಸಿಕೊಟ್ಟಿದೆ ಮತ್ತು ಕುಟುಂಬಗಳು ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಘನತೆ ತಂದುಕೊಟ್ಟಿದೆ. ತಮ್ಮ ಕೊಡುಗೆಗೆ ಅವರು ಹೆಮ್ಮೆಪಡುವಂತೆ ಮಾಡಿದೆ. ಇದು ಅವರನ್ನು ಗೌರವ ಭಾವನೆಯಿಂದ ನೋಡುವಂತಾಗಿದೆ. ತಾವು ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡದೇ, ರಾಷ್ಟ್ರವನ್ನು ಬೆಳಗಲು ಕೊಡುಗೆ ನೀಡುತ್ತಿದ್ದೇವೆ ಎಂದು ಈಗ ಹೆಮ್ಮೆ ಪಡುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಲಕ್ಷಾಂತರ ನೈರ್ಮಲ್ಯ ಕಾರ್ಮಿಕರಿಗೆ ಹೆಮ್ಮೆ ಮತ್ತು ಘನತೆಯ ಭಾವನೆಯನ್ನು ನೀಡಿದೆ. ನೈರ್ಮಲ್ಯ ಕಾರ್ಮಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಅವರಿಗೆ ಗೌರವಯುತ ಜೀವನವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಬರಿಗೈಗಳಲ್ಲಿ ಕೆಲಸ ಮಾಡುವುದರಿಂದ ಉಂಟಾಗುವ ಅಪಾಯಗಳನ್ನು ತೊಡೆದುಹಾಕಲು ನಾವು ಕೆಲಸ ಮಾಡುತ್ತಿದ್ದೇವೆ. ಸರ್ಕಾರ, ಖಾಸಗಿ ವಲಯ ಮತ್ತು ಸಾರ್ವಜನಿಕರು ಒಟ್ಟಾಗಿ ಕಾರ್ಯೋನ್ಮುಖರಾಗಿದ್ದಾರೆ ಮತ್ತು ಹೊಸ ತಂತ್ರಜ್ಞಾನಗಳನ್ನು ತರುತ್ತಿರುವ ಅನೇಕ ಹೊಸ ನವೋದ್ಯಮಗಳು ಹೊರಹೊಮ್ಮುತ್ತಿವೆ.

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನ ಕೇವಲ ಒಂದು ಸ್ವಚ್ಛತೆಯ ಕಾರ್ಯಕ್ರಮವಲ್ಲ: ಇದರ ವ್ಯಾಪ್ತಿ ವಿಸ್ತಾರವಾಗಿದೆ. ಇದೀಗ ಸ್ವಚ್ಛತೆಯಿಂದ ಸಮೃದ್ಧತೆಯೆಡೆಗೆ ಸಾಗುವಂತೆ ಮಾಡಿದೆ. ಸ್ವಚ್ಛ ಭಾರತ ಅಭಿಯಾನ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಜನೆಗೆ ಕಾರಣವಾಗಿದೆ. ಕೆಲವು ವರ್ಷಗಳಿಂದ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಜನರಿಗೆ ಉದ್ಯೋಗ ದೊರಕಿಸಿಕೊಟ್ಟಂತಾಗಿದೆ. ಹಳ್ಳಿಗಳಲ್ಲಿ ಮೇಸ್ತ್ರಿಗಳು, ಪ್ಲಂಬರ್ ಗಳು, ಕಾರ್ಮಿಕರು ಮತ್ತು ಇತರೆ ಹಲವಾರು ಜನರಿಗೆ ಹೊಸ ಅವಕಾಶಗಳು ದೊರೆತಿವೆ. ಯುನೆಸೆಫ್ ನ ಅಂದಾಜು ಪ್ರಕಾರ 1.25 ಕೋಟಿ ಜನತೆ ಈ ಅಭಿಯಾನದಿಂದ ಆರ್ಥಿಕ ಲಾಭ ಇಲ್ಲವೆ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಅಭಿಯಾನದಿಂದ ಮಹಿಳಾ ಮೇಸ್ತ್ರಿಗಳ ಹೊಸ ಯುಗ ಕೂಡ ಆರಂಭವಾಗಿದೆ. ಇದಕ್ಕೂ ಮುನ್ನ ನಾವು ಮಹಿಳಾ ಮೇಸ್ತ್ರಿಗಳನ್ನು ಕಾಣಲು ಸಾಧ್ಯವಿರಲಿಲ್ಲ. ಇದೀಗ ಮಹಿಳೆಯರೂ ಸಹ ಮೇಸ್ತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ಸ್ವಚ್ಛ ತಂತ್ರಜ್ಞಾನದ ಮೂಲಕ ಯುವ ಸಮೂಹದಲ್ಲಿ ಉತ್ತಮ ಉದ್ಯೊಗ ಮತ್ತು ಅವಕಾಶಗಳು ಹೆಚ್ಚಾಗುತ್ತಿದೆ. ಸ್ವಚ್ಛತೆಯ ತಂತ್ರಜ್ಞಾನದಡಿ ಸುಮಾರು 5,000 ಕ್ಕೂ ಅಧಿಕ ನವೋದ್ಯಮಗಳು ನೋಂದಣಿಯಾಗಿವೆ. ನೀರು ಮತ್ತು ನೈರ್ಮಲ್ಯ ವಲಯದಲ್ಲಿ ತ್ಯಾಜ್ಯದಿಂದ ಸಂಪತ್ತು, ತ್ಯಾಜ್ಯ ಸಂಗ್ರಹದಿಂದ ಸಾಗಾಣೆ, ನೀರಿನ ಮರುಬಳಕೆ ಮತ್ತು ಸಂಸ್ಕರಣೆ ಒಳಗೊಂಡಂತೆ ಹಲವಾರು ಅವಕಾಶಗಳು ದೊರೆಯುತ್ತಿವೆ. ಈ ದಶಕದ ಅಂತ್ಯದ ವೇಳೆಗೆ ಈ ವಲಯದಲ್ಲಿ 65 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದ್ದು, ಸ್ವಚ್ಛ ಭಾರತ ಅಭಿಯಾನ ನಿಸ್ಸಂದೇಹವಾಗಿ ಇದರಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಸ್ನೇಹಿತರೇ,

ಸ್ವಚ್ಛ ಭಾರತ ಅಭಿಯಾನ ಆರ್ಥಿಕತೆಯ ಪ್ರಸರಣದಲ್ಲಿ ಹೊಸ ಪುಷ್ಟಿ ನೀಡಿದೆ. ನಾವೀಗ ಗೊಬ್ಬರ ಉತ್ಪಾದಿಸುತ್ತಿದ್ದು, ಜೈವಿಕ ಅನಿಲ, ವಿದ್ಯುತ್ ಮತ್ತು ರಸ್ತೆ ನಿರ್ಮಾಣಕ್ಕಾಗಿ ಚಾರ್ ಕೋಲ್ ಗಳನ್ನು ಸಹ ಉತ್ಪಾದಿಸುತ್ತಿದ್ದೇವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗೋಬರ್ಧನ್ ಯೋಜನೆ ಪ್ರಮುಖ ಬದಲಾವಣೆ ತರುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಈ ಯೋಜನೆಯಡಿ ಹಳ್ಳಿಗಳಲ್ಲಿ ನೂರಾರು ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲಾಗಿದೆ. ರೈತರು ಪಶುಸಂಗೋಪನಾ ವಲಯದಲ್ಲಿ ತೊಡಗಿಸಿಕೊಂಡಿದ್ದು, ವಯಸ್ಸಾದ ಜಾನುವಾರುಗಳನ್ನು ನಿರ್ವಹಿಸುವುದು ಸಹ ಆರ್ಥಿಕವಾಗಿ ಹೊಡೆತವಲ್ಲ. ಈಗ, ಗೋಬರ್ಧನ್ ಯೋಜನೆಗೆ ಧನ್ಯವಾದಗಳು, ಇನ್ನು ಮುಂದೆ ಹಾಲು ಉತ್ಪಾದಿಸದ ಅಥವಾ ಹೊಲಗಳಲ್ಲಿ ಕೆಲಸ ಮಾಡುವ ಜಾನುವಾರುಗಳು ಸಹ ಆದಾಯದ ಮೂಲವಾಗಬಹುದು. ಇದಲ್ಲದೇ ಈಗಾಗಲೇ ದೇಶಾದ್ಯಂತ ನೂರಾರು ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇಂದು, ಹಲವಾರು ಹೊಸ ಘಟಕಗಳನ್ನು ಉದ್ಘಾಟಿಸಲಾಗಿದೆ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.

ಸ್ನೇಹಿತರೇ,

ವೇಗವಾಗಿ ಬದಲಾಗುತ್ತಿರುವ ಈ ಸಮಯದಲ್ಲಿ, ಸ್ವಚ್ಛತೆಗೆ ಸಂಬಂಧಿಸಿದ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯವಾಗಿದೆ. ನಮ್ಮ ಆರ್ಥಿಕತೆ ಬೆಳೆದಂತೆ ಮತ್ತು ನಗರೀಕರಣ ಹೆಚ್ಚಾದಂತೆ, ತ್ಯಾಜ್ಯದ ಉತ್ಪಾದನೆಯೂ ಹೆಚ್ಚಾಗುತ್ತದೆ, ಇದು ಹೆಚ್ಚು ಕಸ ಸಂಗ್ರಹಣೆಗೆ ಕಾರಣವಾಗುತ್ತದೆ. ಆರ್ಥಿಕತೆಯ ಪ್ರಸ್ತುತ "ಬಳಕೆ ಮತ್ತು ಎಸೆಯುವಿಕೆ" ಮಾದರಿಯು ಸಹ ಈ ಸಮಸ್ಯೆಗೆ ಕೊಡುಗೆ ನೀಡುತ್ತದೆ. ನಾವೀಗ ವಿದ್ಯುನ್ಮಾನ ತ್ಯಾಜ್ಯ ಒಳಗೊಂಡಂತೆ ಎಲ್ಲಾ ರೀತಿಯ ತ್ಯಾಜ್ಯಗಳ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾವು ನಮ್ಮ ಭವಿಷ್ಯದ ಕಾರ್ಯತಂತ್ರವನ್ನು ಸುಧಾರಣೆ ಮಾಡಬೇಕಾಗಿದೆ. ನಾವು ನಿರ್ಮಾಣ ವಲಯದಲ್ಲಿ ಹೊಸ ತಂತ್ರಜ್ಞಾನವನ್ನು ಅನ್ವೇಷಣೆ ಮಾಡಬೇಕಾಗಿದ್ದು, ಇದರಿಂದ ಮರುಬಳಕೆಯ ಸಾಕಷ್ಟು ವಸ್ತುಗಳು ದೊರೆಯಲಿವೆ. ನಮ್ಮ ಬಡಾವಣೆಗಳು, ವಸತಿ ಸಂಕಿರಣಗಳ ನಿರ್ಮಾಣದಲ್ಲಿ ಶೂನ್ಯ ತ್ಯಾಜ್ಯ ಉತ್ಪಾದನೆಗೆ ಒತ್ತು ನೀಡುವ ತಂತ್ರಜ್ಞಾನದ ವಿನ್ಯಾಸವನ್ನು ಅಭಿವೃದ್ಧಿಪಡಿಸಬೇಕಾಗಿದೆ. ನಾವು ತ್ಯಾಜ್ಯವನ್ನು ಶೂನ್ಯಕ್ಕೆ ಇಳಿಸಿದರೆ ನಿಜಕ್ಕೂ ಅದು ಉತ್ತಮವಾದದ್ದು.

 

ನೀರು ವ್ಯರ್ಥವಾಗದಂತೆ ಮತ್ತು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ನಮಾಮಿ ಗಂಗೆ ಯೋಜನೆ ನಮಗೆ ಮಾದರಿಯಾಗಿದೆ. ಈ ಉಪಕ್ರಮದ ಪರಿಣಾಮವಾಗಿ, ಗಂಗಾ ನದಿಯು ಈಗ ಹೆಚ್ಚು ಸ್ವಚ್ಛವಾಗಿದೆ. ಅಮೃತ ಅಭಿಯಾನ ಮತ್ತು ಅಮೃತ ಸರೋವರ ಅಭಿಯಾನ ಕೂಡ ಗಮನಾರ್ಹ ಬದಲಾವಣೆಗಳನ್ನು ತರುತ್ತಿದೆ. ಇವು ಸರ್ಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಿಂದ ತಂದ ಬದಲಾವಣೆಯ ಪ್ರಬಲ ಮಾದರಿಗಳಾಗಿವೆ. ಆದಾಗ್ಯೂ, ಇದು ಸಾಕಾಗುವುದಿಲ್ಲ ಎಂದು ನಾನು ನಂಬುತ್ತೇನೆ. ನಾವು ನೀರಿನ ಸಂರಕ್ಷಣೆ, ನೀರಿನ ಸಂಸ್ಕರಣೆ ಮತ್ತು ನಮ್ಮ ನದಿಗಳನ್ನು ಸ್ವಚ್ಛಗೊಳಿಸಲು ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕು. ಪ್ರವಾಸೋದ್ಯಮದೊಂದಿಗೆ ಸ್ವಚ್ಛತೆ ಎಷ್ಟು ನಿಕಟ ಸಂಬಂಧ ಹೊಂದಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ನಾವು ನಮ್ಮ ಪ್ರವಾಸಿ ತಾಣಗಳು, ಪವಿತ್ರ ಸ್ಥಳಗಳು ಮತ್ತು ಪಾರಂಪರಿಕ ತಾಣಗಳನ್ನು ಸಹ ಸ್ವಚ್ಛವಾಗಿಡಬೇಕು.

ಸ್ನೇಹಿತರೇ,

ಕಳೆದ 10 ವರ್ಷಗಳಲ್ಲಿ ಸ್ವಚ್ಛತೆಯಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ. ದೈನಂದಿಂದ ಸ್ವಚ್ಛತೆ ಜೊತೆಗೆ ಸ್ವಚ್ಛತೆಯನ್ನು ನಿರ್ವಹಣೆ ಮಾಡುವುದು ಸಹ ದೈನಂದಿನ ಅಭ್ಯಾಸವಾಗಿದೆ. ಯಾವುದೇ ವ್ಯಕ್ತಿ ಅಥವಾ ಜೀವಿ ಎಂದಿಗೂ ತ್ಯಾಜ್ಯವನ್ನು ಸೃಷ್ಟಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ತ್ಯಾಜ್ಯ ಅನಿವಾರ್ಯವಾದರೆ ಸ್ವಚ್ಛತೆಯೂ ಅನಿವಾರ್ಯ. ನಾವು ಈ ಕೆಲಸವನ್ನು ಒಂದು ದಿನ ಅಥವಾ ಒಂದು ಪೀಳಿಗೆಗೆ ಮಾತ್ರವಲ್ಲ, ಮುಂದಿನ ಪೀಳಿಗೆಗೆ ಮುಂದುವರಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಸ್ವಚ್ಛತೆಯನ್ನು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಅರ್ಥಮಾಡಿಕೊಂಡಾಗ, ಬದಲಾವಣೆ ಖಚಿತ ಎಂಬ ನಂಬಿಕೆ ಈ ದೇಶದ ಜನರಲ್ಲಿದೆ. ಇದರಿಂದ ದೇಶ ಖಾತರಿಯಾಗಿ ಬೆಳಗಲಿದೆ.

ಸ್ವಚ್ಛತೆಯ ಧ್ಯೇಯವು ಒಂದು ದಿನದ ಕೆಲಸವಲ್ಲ, ಆದರೆ ಜೀವನಪರ್ಯಂತ ಅಭ್ಯಾಸವಾಗಬೇಕಾಗಿದೆ. ನಾವು ಅದನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸಬೇಕು. ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಸಹಜ ಪ್ರವೃತ್ತಿಯಾಗಬೇಕು. ಇದು ನಮ್ಮ ದೈನಂದಿನ ಜೀವನದ ಭಾಗವಾಗಿರಬೇಕು ಮತ್ತು ನಾವು ಕೊಳಕಿಗೆ ಅಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಲಿನ ಕೊಳೆಯನ್ನು ನಾವು ಸಹಿಸಬಾರದು ಅಥವಾ ನೋಡಬಾರದು. ಕೊಳೆಯ ಮೇಲಿನ ದ್ವೇಷವು ಸ್ವಚ್ಛತೆಯ ಅನ್ವೇಷಣೆಯಲ್ಲಿ ನಮ್ಮನ್ನು ಒತ್ತಾಯಿಸುತ್ತದೆ ಮತ್ತು ಬಲಪಡಿಸುತ್ತದೆ.

ಸ್ವಚ್ಛವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ಮಕ್ಕಳು ಸಹ ಮನೆಗಳಲ್ಲಿ ಹಿರಿಯರಿಗೆ ಸ್ಫೂರ್ತಿಯಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರ ಮೊಮ್ಮಕ್ಕಳು ಅಥವಾ ಮಕ್ಕಳು ಆಗಾಗ್ಗೆ "ಮೋದಿ ಜೀ ಹೇಳಿದ್ದನ್ನು ನೋಡಿ, ಏಕೆ ಕಸ ಹಾಕುತ್ತಿದ್ದೀರಿ?" ಎಂದು ಹಿರಿಯರಿಗೆ ನೆನಪಿಸುತ್ತಾರೆ ಎಂಬುದಾಗಿ ಹಲವರು ನನಗೆ ಹೇಳುತ್ತಿರುತ್ತಾರೆ. ಜನ ಕಾರಿನ ಕಿಟಕಿಯಿಂದ ಬಾಟಲಿಯನ್ನು ಎಸೆಯುವುದನ್ನು ತಡೆಯುತ್ತಾರೆ. ಈ ಆಂದೋಲನ ಅವರಲ್ಲೂ ಒಂದು ಬೀಜವನ್ನು ಬಿತ್ತಿದೆ. ಆದ್ದರಿಂದ, ಇಂದು ನಾನು ಯುವ ಸಮೂಹಕ್ಕೆ ಮತ್ತು ಮುಂದಿನ ಪೀಳಿಗೆಯ ಮಕ್ಕಳಿಗೆ ಹೇಳಲು ಬಯಸುತ್ತೇನೆ: ನಾವು ಬದ್ಧರಾಗಿರೋಣ, ಇತರರನ್ನು ವಿವರಿಸಲು ಮತ್ತು ಪ್ರೋತ್ಸಾಹಿಸುವುದನ್ನು ಮುಂದುವರಿಸೋಣ ಮತ್ತು ನಾವು ಒಂದಾಗೋಣ. ದೇಶ ಸ್ವಚ್ಛವಾಗುವವರೆಗೆ ನಾವು ನಿಲ್ಲಬಾರದು. ಕಳೆದ 10 ವರ್ಷಗಳ ಯಶಸ್ಸಿನಿಂದ ಇದು ಸಾಧ್ಯವಾಗಲಿದ್ದು, ನಾವು ಅದನ್ನು ಸಾಧಿಸಬಹುದು ಮತ್ತು ನಾವು ಭಾರತಮಾತೆಯನ್ನು ಕೊಳಕುಗಳಿಂದ ರಕ್ಷಿಸಬಹುದು ಎಂಬುದನ್ನು ತೋರಿಸುತ್ತದೆ.

 

ಸ್ನೇಹಿತರೇ,

ಇಂದು, ಈ ಅಭಿಯಾನವನ್ನು ಜಿಲ್ಲೆ, ಬ್ಲಾಕ್, ಗ್ರಾಮ, ನೆರೆಹೊರೆ ಮತ್ತು ಬೀದಿ ಮಟ್ಟಗಳಿಗೆ ಕೊಂಡೊಯ್ಯುವಂತೆ ನಾನು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲು ಬಯಸುತ್ತೇನೆ. ವಿವಿಧ ಜಿಲ್ಲೆಗಳು ಮತ್ತು ಬ್ಲಾಕ್‌ಗಳಲ್ಲಿ ಸ್ವಚ್ಛ ಶಾಲೆಗಳು, ಸ್ವಚ್ಛ ಆಸ್ಪತ್ರೆಗಳು, ಸ್ವಚ್ಛ ಕಚೇರಿಗಳು, ಸ್ವಚ್ಛ ನೆರೆಹೊರೆ, ಸ್ವಚ್ಛ ಕೊಳಗಳು ಮತ್ತು ಸ್ವಚ್ಛ ಬಾವಿಗಳಿಗಾಗಿ ನಾವು ಸ್ಪರ್ಧೆಗಳನ್ನು ನಡೆಸಬೇಕು. ಇದು ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಪ್ರತಿಫಲಗಳು ಮತ್ತು ಪ್ರಮಾಣಪತ್ರಗಳನ್ನು ಮಾಸಿಕ ಅಥವಾ ತ್ರೈಮಾಸಿಕ ಆಧಾರದ ಮೇಲೆ ನೀಡಬೇಕು. ಭಾರತ ಸರ್ಕಾರವು ಕೇವಲ 2-4 ನಗರಗಳನ್ನು ಸ್ವಚ್ಛ ಅಥವಾ 2-4 ಜಿಲ್ಲೆಗಳನ್ನು ಸ್ವಚ್ಛ ಎಂದು ಘೋಷಿಸಿದರೆ ಸಾಕಾಗುವುದಿಲ್ಲ. ಇದನ್ನು ಪ್ರತಿಯೊಂದು ಕ್ಷೇತ್ರಕ್ಕೂ ಕೊಂಡೊಯ್ಯಬೇಕು. ನಮ್ಮ ಪುರಸಭೆಗಳು ಸಾರ್ವಜನಿಕ ಶೌಚಾಲಯಗಳನ್ನು ಉತ್ತಮವಾಗಿ ನಿರ್ವಹಿಸುವುದನ್ನು ನಿರಂತರವಾಗಿ ಖಚಿತಪಡಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ನಾವು ಅವರಿಗೆ ಪ್ರತಿಫಲ ನೀಡಬೇಕು. ವ್ಯವಸ್ಥೆಗಳು ಹಳೆಯ ದಾರಿಗೆ ಮರಳುವುದಕ್ಕಿಂತ ಕೆಟ್ಟದ್ದೇನೂ ಇಲ್ಲ. ಎಲ್ಲಾ ಸ್ಥಳೀಯ ಸಂಸ್ಥೆಗಳು ಶುಚಿತ್ವಕ್ಕೆ ಆದ್ಯತೆ ನೀಡಬೇಕು ಮತ್ತು ಅದನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಬೇಕೆಂದು ನಾನು ಒತ್ತಾಯಿಸಲು ಬಯಸುತ್ತೇನೆ.

ನಾವೆಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ. ಬದ್ಧತೆಯಿಂದ ಮುನ್ನಡೆಯುವಂತೆ ನನ್ನ ಸಹ ನಾಗರಿಕರಿಗೆ ನಾನು ವಿನಂತಿಸುತ್ತೇನೆ: ನಾವು ಎಲ್ಲೇ ಇದ್ದರೂ-ಮನೆಯಲ್ಲಾಗಲಿ, ನಮ್ಮ ನೆರೆಹೊರೆಯಲ್ಲಾಗಲಿ ಅಥವಾ ನಮ್ಮ ಕೆಲಸದ ಸ್ಥಳದಲ್ಲಿರಲಿ-ನಾವು ಕೊಳಕು ಸೃಷ್ಟಿಸುವುದಿಲ್ಲ ಅಥವಾ ಅದನ್ನು ಸಹಿಸುವುದಿಲ್ಲ. ಸ್ವಚ್ಛತೆ ನಮ್ಮ ಸಹಜ ಅಭ್ಯಾಸವಾಗಲಿ. ನಾವು ನಮ್ಮ ಆರಾಧನಾ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆಯೇ, ನಮ್ಮ ಸುತ್ತಮುತ್ತಲಿನ ಕಡೆಗೆ ಅದೇ ಭಾವನೆಯನ್ನು ಬೆಳೆಸಿಕೊಳ್ಳಬೇಕು. ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಯಾತ್ರೆಯಲ್ಲಿ ನಾವು ಮಾಡುವ ಪ್ರತಿಯೊಂದು ಪ್ರಯತ್ನವೂ “ಶುಚಿತ್ವವು ಸಮೃದ್ಧಿಗೆ ಕಾರಣವಾಗುತ್ತದೆ” ಎಂಬ ಮಂತ್ರವನ್ನು ಬಲಪಡಿಸುತ್ತದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ, ನಾವು ಮುಂದೆ ಸಾಗೋಣ ಮತ್ತು ತ್ಯಾಜ್ಯವನ್ನು ಸೃಷ್ಟಿಸದಂತೆ ಪ್ರತಿಜ್ಞೆ ಮಾಡುವ ಮೂಲಕ ಪೂಜ್ಯ ಬಾಪು ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಅರ್ಪಿಸೋಣ, ಸ್ವಚ್ಛತೆಗಾಗಿ ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ ಮತ್ತು ನಮ್ಮ ಜವಾಬ್ದಾರಿಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ನಾನು ನಿಮಗೆ ಶುಭ ಹಾರೈಸುತ್ತೇನೆ.

ತುಂಬಾ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”