"ಬಜೆಟ್‌ ಮಂಡನೆಯ ನಂತರದ ಕಾಲವು ಬಜೆಟ್‌ನ ಅನುಷ್ಠಾನ ಹಾಗೂ ಕಾಲಮಿತಿಯಲ್ಲಿ ಜಾರಿಯ ದೃಷ್ಟಿಯಿಂದ ಮಹತ್ವದ್ದೆನಿಸಿದೆ. ಇದು ತೆರಿಗೆದಾರರ ಹಣದ ಪ್ರತಿಯೊಂದು ಪೈಸೆಯ ಸದ್ಬಳಕೆ ಖಾತರಿಗೂ ಉಪಯುಕ್ತವಾಗಿದೆʼʼ
"ನಾವು ಉತ್ತಮ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಫಲಾನುಭವಿಗಳ ಕೊನೆಯ ಮೈಲಿ ತಲುಪುವ ಗುರಿ ಸಾಧನೆಗೂ ಸಹಕಾರಿಯಾಗಲಿದೆʼʼ
ʼʼಕೊನೆಯ ಮೈಲಿಯನ್ನು ತಲುಪುವುದು ಹಾಗೂ ನೀತಿಯ ಸಾರ್ಥಕತೆ ಪರಸ್ಪರ ಪೂರಕವಾಗಿರುತ್ತದೆʼʼ
"ಎಲ್ಲರನ್ನೂತಲುಪುವುದು ನಮ್ಮ ಗುರಿಯಾಗಿರುವಾಗ ತಾರತಮ್ಯ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇರುವುದಿಲ್ಲʼʼ
"ಈ ಬಾರಿಯ ಬಜೆಟ್‌ ಕೊನೆಯ ಮೈಲಿ ತಲುಪುವ ಮಂತ್ರವನ್ನು ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯಲು ವಿಶೇಷ ಗಮನ ನೀಡಿದೆʼʼ
"ಇದೇ ಮೊದಲ ಬಾರಿಗೆ ನಮ್ಮ ದೇಶದ ಬುಡಕಟ್ಟು ಸಮುದಾಯಗಳ ದೊಡ್ಡ ಸಾಮರ್ಥ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ"
"ಬುಡಕಟ್ಟು ಸಮುದಾಯದಲ್ಲೇ ಅತ್ಯಂತ ಅಂಚಿನಲ್ಲಿರುವವರಿಗೆ ವಿಶೇಷ ಮಿಷನ್‌ ಅಡಿ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಲು ಇಡೀ ದೇಶದಾದ್ಯಂತ ಪ್ರಯತ್ನ ನಡೆದಿದೆʼʼ
ʼʼಕೊನೆಯ ಮೈಲಿ ತಲುಪುವ ಗುರಿ ಸಾಧನೆಗೆ ʼಆಕಾಂಕ್ಷಿ ಜಿಲ್ಲೆʼ ಕಾರ್ಯಕ್ರಮವು ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆʼʼ

ಬಜೆಟ್ ಮಂಡನೆಯ ನಂತರ ಸಂಸತ್ತಿನಲ್ಲಿ ಆಯವ್ಯಯ ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಯುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆಯಾಗಿದೆ. ಆದರೆ ಇದು ಅವಶ್ಯಕ ಮತ್ತು ಉಪಯುಕ್ತವಾಗಿದೆ.  ನಮ್ಮ ಸರ್ಕಾರವು ಬಜೆಟ್ ಕುರಿತು ಚರ್ಚೆಯನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿದೆ. ಕಳೆದ ಕೆಲವು ವರ್ಷಗಳಿಂದ, ನಮ್ಮ ಸರ್ಕಾರವು ಬಜೆಟ್ ಮಂಡನೆಯ ಮೊದಲು ಮತ್ತು ನಂತರ ಎಲ್ಲಾ ಪಾಲುದಾರರೊಂದಿಗೆ ವಿಸ್ತೃತ ಚರ್ಚೆ ಮತ್ತು ಸಂವಾದ ಹಾಗೂ ಸಲಹೆ ಸೂಚನೆ ಸ್ವೀಕರಿಸುವ ಹೊಸಸಂಪ್ರದಾಯ ಹುಟ್ಟುಹಾಕಿದೆ. ಬಜೆಟ್ ಕಾರ್ಯಕ್ರಮಗಳ ಪ್ರಾಮಾಣಿಕ ಅನುಷ್ಠಾನ ಮತ್ತು ಕಾಲಮಿತಿಯಲ್ಲಿ  ಕಾರ್ಯಕ್ರಮಗಳ ಜಾರಿ ದೃಷ್ಟಿಕೋನದಿಂದ ಇದು ಬಹಳ ಮುಖ್ಯವಾಗಿದೆ. ತೆರಿಗೆದಾರರ ಹಣದ ಪ್ರತಿ ಪೈಸೆಯ ಸಮರ್ಪಕ ಬಳಕೆಯನ್ನು ಇದು ಖಾತ್ರಿಗೊಳಿಸುತ್ತಿದೆ. ನಾನು ಕಳೆದ ಕೆಲವು ದಿನಗಳಲ್ಲಿ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಮಾತನಾಡಿದ್ದೇನೆ. ಇಂದು ನಿಮ್ಮ ನೀತಿಗಳು ಮತ್ತು ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ಹಾಗೂ ದೂರದ ಪ್ರದೇಶಗಳಿಗೆ ಎಷ್ಟು ಬೇಗ ತಲುಪುತ್ತವೆ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದ ‘ಕೊನೆಯ ಮೈಲಿ ತಲುಪುವುದು’ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಇಂದು ಈ ವಿಷಯದ ಬಗ್ಗೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ನಾವು ಬಜೆಟ್‌ನ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತ ಗೊಳಿಸಬಹುದು ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಫಲಾನುಭವಿಗಳಿಗೆ ತಲುಪಿಸಬಹುದು.

ಸ್ನೇಹಿತರೆ,

ನಮ್ಮ ದೇಶದಲ್ಲಿ ಜನರ ಕಲ್ಯಾಣ ಮತ್ತು ದೇಶದ ಅಭಿವೃದ್ಧಿ ಹಣದ ಮೂಲಕ ಮಾತ್ರ ಸಾಧ್ಯ ಎಂಬ ಸಾಮಾನ್ಯ ಗ್ರಹಿಕೆ ಇದೆ. ಅದು ಹಾಗಲ್ಲ. ದೇಶ ಮತ್ತು ದೇಶವಾಸಿಗಳ ಅಭಿವೃದ್ಧಿಗೆ ಹಣ ಅವಶ್ಯಕ, ಆದರೆ ಹಣದ ಜತೆಗೆ, ಉತ್ತಮ ಮನೋಭಾವವೂ ಅಗತ್ಯವಾಗಿರುತ್ತದೆ. ಸರ್ಕಾರಿ ಯೋಜನೆಗಳ ಯಶಸ್ಸಿಗೆ ಅತ್ಯಂತ ಅಗತ್ಯವಾದ ಷರತ್ತುಬದ್ಧ ಉತ್ತಮ ಆಡಳಿತ, ಸೂಕ್ಷ್ಮ ಆಡಳಿತ ಮತ್ತು ಸಾಮಾನ್ಯ ಜನರಿಗೆ ಮೀಸಲಾಗಿರುವ ಆಡಳಿತ ಹೊಂದಬೇಕು. ಸರ್ಕಾರದ ಕಾರ್ಯಗಳನ್ನು ಮಾಪನ ಮಾಡಬಹುದಾದಾಗ ಮತ್ತು ನಿರಂತರ ಮೇಲ್ವಿಚಾರಣೆ ನಡೆಸಿದಾಗ, ಕಾಲಮಿತಿಯೊಳಗೆ ನೀವು ಗುರಿಗಳನ್ನು ಸಾಧಿಸುವುದು ಮತ್ತು ಅಪೇಕ್ಷಿತ ಫಲಿತಾಂಶವನ್ನು ಪಡೆಯುವುದು ಸಹಜ. ಆದ್ದರಿಂದ, ನಾವು ಉತ್ತಮ ಆಡಳಿತಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ‘ಕೊನೆಯ ಮೈಲಿಗೆ ತಲುಪುವ’ ನಮ್ಮ ಗುರಿಯನ್ನು ಸುಲಭವಾಗಿ ಸಾಧಿಸಲಾಗುತ್ತಿದೆ. ಲಸಿಕೆಗಳು ನಮ್ಮ ದೇಶದ ದೂರದ ಪ್ರದೇಶಗಳನ್ನು ತಲುಪಲು ಹಲವಾರು ದಶಕಗಳನ್ನು ತೆಗೆದುಕೊಳ್ಳುತ್ತಿದ್ದವು ಎಂದು ನೀವು ಈ ಮೊದಲು ನೆನಪಿಸಿಕೊಳ್ಳುತ್ತಿದ್ದಿರಿ. ಲಸಿಕಾ ವ್ಯಾಪ್ತಿಯ ವಿಷಯದಲ್ಲಿ ದೇಶವು ತುಂಬಾ ಹಿಂದುಳಿದಿತ್ತು. ದೇಶದ ಮಕ್ಕಳ ಕೋಷ್ಟಕ, ವಿಶೇಷವಾಗಿ ಹಳ್ಳಿಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವವರು ಲಸಿಕೆಗಳಿಗಾಗಿ ವರ್ಷಗಳ ಕಾಲ ಕಾಯಬೇಕಾಗಿತ್ತು. ನಾವು ಹಳೆಯ ವಿಧಾನವನ್ನು ಅನುಸರಿಸಿದ್ದರೆ, ಭಾರತದಲ್ಲಿ 100% ವ್ಯಾಕ್ಸಿನೇಷನ್ ವ್ಯಾಪ್ತಿ ಸಾಧಿಸಲು ಇನ್ನೂ ಹಲವಾರು ದಶಕಗಳನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ನಾವು ಹೊಸ ವಿಧಾನ ಪ್ರಾರಂಭಿಸಿದ್ದೇವೆ, ‘ಮಿಷನ್ ಇಂದ್ರಧನಷ್’ ಅನ್ನು ಪ್ರಾರಂಭಿಸಿದ್ದೇವೆ ಮತ್ತು ದೇಶಾದ್ಯಂತ ಲಸಿಕಾ ವಿತರಣೆ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ಜಾಗತಿಕ ಕೊರೊನಾ ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ಲಸಿಕೆಗಳನ್ನು ದೂರದವರೆಗೆ ತಲುಪಿಸುವಲ್ಲಿ ಈ ಹೊಸ ವ್ಯವಸ್ಥೆಯ ಪ್ರಯೋಜನಗಳನ್ನು ನಾವು ಪಡೆದುಕೊಂಡಿದ್ದೇವೆ. ಲಸಿಕೆಗಳ ಕೊನೆಯ ಮೈಲಿ ವಿತರಣೆಯನ್ನು ಸಾಧ್ಯವಾಗಿಸುವಲ್ಲಿ ಉತ್ತಮ ಆಡಳಿತವು ಪ್ರಮುಖ ಪಾತ್ರ ಹೊಂದಿದೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೆ,

ಕೊನೆಯ ಮೈಲಿ ತಲುಪುವ ವಿಧಾನ ಮತ್ತು ಸಂತೃಪ್ತ ನೀತಿಯನ್ನು ತಲುಪುವ ವಿಧಾನ ಪರಸ್ಪರ ಪೂರಕವಾಗಿದೆ. ಬಡವರು ಮೂಲಸೌಲಭ್ಯಗಳಿಗಾಗಿ ಹಲವಾರು ಬಾರಿ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುತ್ತಿದ್ದರು ಅಥವಾ ಕೆಲವು ಮಧ್ಯವರ್ತಿಗಳನ್ನು ಹುಡುಕುತ್ತಿದ್ದರು, ಇದರಿಂದಾಗಿ ಅತಿರೇಕದ ಭ್ರಷ್ಟಾಚಾರ ಮತ್ತು ಜನರ ಹಕ್ಕುಗಳ ಉಲ್ಲಂಘನೆ ಆಗಿದೆ. ಈಗ ಸರ್ಕಾರವು ಬಡವರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ನೀಡುತ್ತಿದೆ.  ಮೂಲ ಸೌಲಭ್ಯವನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿ ನಾಗರಿಕನಿಗೆ ಒದಗಿಸಬೇಕಾಗಿದೆ ಎಂದು ನಾವು ನಿರ್ಧರಿಸಿದ ದಿನ, ಸ್ಥಳೀಯ ಮಟ್ಟದಲ್ಲಿ ಕೆಲಸದ ಸಂಸ್ಕೃತಿಯಲ್ಲಿ ಒಂದು ಪ್ರಮುಖ ಬದಲಾವಣೆಯು ಪ್ರತಿಫಲಿಸುತ್ತದೆ. ಸಂತೃಪ್ತ ನೀತಿಯ ಹಿಂದಿನ ಮನೋಭಾವ ಇದು. ಪ್ರತಿಯೊಬ್ಬ ಪಾಲುದಾರರನ್ನು ತಲುಪುವುದು ನಮ್ಮ ಗುರಿಯಾಗಿದ್ದಾಗ, ತಾರತಮ್ಯ, ಭ್ರಷ್ಟಾಚಾರ ಮತ್ತು ಸ್ವಜ ನಪಕ್ಷಪಾತಕ್ಕೆ ಯಾವುದೇ ಅವಕಾಶವಿಲ್ಲ. ಆಗ ಮಾತ್ರ ನೀವು ಕೊನೆಯ ಮೈಲಿ ತಲುಪುವ ಗುರಿ ಸಾಧಿಸಲು ಸಾಧ್ಯವಾಗುತ್ತದೆ. ನೀವು ನೋಡಿ, ಇಂದು ಬೀದಿ ಬದಿ ವ್ಯಾಪಾರಿಗಳು ದೇಶದಲ್ಲಿ ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆ ಮೂಲಕ ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧ ಹೊಂದಿದ್ದಾರೆ. ಇಂದು ದೇಶದಲ್ಲಿ ಮೊದಲ ಬಾರಿಗೆ, ಅಲೆಮಾರಿ, ಅರೆ-ಅಲೆಮಾರಿ ಜನರಿಗೆ ಕಲ್ಯಾಣ ಮಂಡಳಿ ರಚಿಸಲಾಗಿದೆ. ಹಳ್ಳಿಗಳಲ್ಲಿ ಸ್ಥಾಪಿಸಲಾದ 5 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು ಸರ್ಕಾರದ ಸೇವೆಗಳನ್ನು ಗ್ರಾಮಗಳಿಗೆ ಕೊಂಡೊಯ್ದಿವೆ. ದೇಶದಲ್ಲಿ ಟೆಲಿಮೆಡಿಸಿನ್ 10 ಕೋಟಿ ಪ್ರಕರಣಗಳ ಬಗ್ಗೆ ನಾನು ನಿನ್ನೆ ನನ್ನ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದೇನೆ. ಇದು ಆರೋಗ್ಯಕ್ಕೆ ಸಂಬಂಧಿಸಿದಂತೆ ‘ಕೊನೆಯ ಮೈಲಿ ತಲುಪುವುದು’ ಮನೋಭಾವದ ಪ್ರತಿಬಿಂಬವಾಗಿದೆ.

ಸ್ನೇಹಿತರೆ,

ಭಾರತದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ‘ಕೊನೆಯ ಮೈಲಿ ತಲುಪುವ’ ಮಂತ್ರವನ್ನು ಕೊಂಡೊಯ್ಯುವ ಅವಶ್ಯಕತೆಯಿದೆ. ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ವಿಶೇಷ ಗಮನ ನೀಡಲಾಗಿದೆ. ‘ಕೊನೆಯ ಮೈಲಿ ತಲುಪುವ’ ಗುರಿ ಸಾಧಿಸಲು ಜಲ್ ಜೀವನ್ ಮಿಷನ್‌ಗಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. 2019ರ ವರೆಗೆ ನಮ್ಮ ದೇಶದ ಗ್ರಾಮೀಣ ಪ್ರದೇಶದಲ್ಲಿ ಕೇವಲ 3 ಕೋಟಿ ಮನೆಗಳು ನಲ್ಲಿ ನೀರಿನ ಸೌಲಭ್ಯ ಪಡೆಯುತ್ತಿದ್ದವು. ಈಗ ಅವರ ಸಂಖ್ಯೆ 11 ಕೋಟಿಗಿಂತಲೂ ಹೆಚ್ಚಾಗಿದೆ, ಅದ ಸಹ ಕಡಿಮೆ ಅವಧಿಯಲ್ಲಿ. ಕೇವಲ ಒಂದು ವರ್ಷದೊಳಗೆ ದೇಶದ ಸುಮಾರು 60,000 ಅಮೃತ ಸರೋವರ ಯೋಜನೆಯ ಕೆಲಸ ಪ್ರಾರಂಭವಾಗಿದೆ. 30,000ಕ್ಕೂ ಹೆಚ್ಚಿನ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ ಎಂಬ ವಿಷಯ ನನ್ನ ಗಮನಕ್ಕೆ ಬಂದಿದೆ. ಈ ಅಭಿಯಾನಗಳು ದಶಕಗಳಿಂದ ಅಂತಹ ವ್ಯವಸ್ಥೆಗಳಿಗಾಗಿ ಕಾಯುತ್ತಿದ್ದ ದೂರದ ಭಾರತೀಯರ ಜೀವನ ಮಟ್ಟ ಸುಧಾರಿಸುತ್ತಿವೆ.

ಆದರೆ ಸ್ನೇಹಿತರೆ,

ನಾವು ಈಗಿನಿಂದಲೇ ವಿರಮಿಸಲು ಸಾಧ್ಯವಿಲ್ಲ. ಹೊಸ ನೀರಿನ ಸಂಪರ್ಕಗಳಲ್ಲಿ ನೀರಿನ ಬಳಕೆ ಮಾದರಿಯ ಮೇಲ್ವಿಚಾರಣೆ ಮಾಡಲು ನಾವು ಯಾಂತ್ರಿಕ ವ್ಯವಸ್ಥೆ ರಚಿಸಬೇಕಾಗಿದೆ. ‘ಪಾನಿ ಸಮಿತಿ’ (ನೀರು ಸಮಿತಿಗಳು)ಯನ್ನು ಮತ್ತಷ್ಟು ಬಲಪಡಿಸಲು ಏನು ಮಾಡಬಹುದು ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ. ಬೇಸಿಗೆ ಈಗಾಗಲೇ ಆರಂಭವಾಗಿದೆ. ಇಂದಿನಿಂದ ನಾವು ನೀರಿನ ಸಂರಕ್ಷಣೆಗಾಗಿ ನೀರಿನ ಸಮಿತಿಗಳನ್ನು ಹೇಗೆ ಬಳಸಬಹುದು ಎಂಬುದರ ಕುರಿತು ನಾವು ಯೋಚಿಸಬೇಕಾಗಿದೆ. ಮಳೆ ಬಂದ ಕೂಡಲೇ ‘ಮಳೆ ನೀರು ಸಂಗ್ರಹಿಸಿ’ ಆಂದೋಲನಕ್ಕಾಗಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು, ಇದರಿಂದಾಗಿ ಮಳೆ ಬಂದ ಕೂಡಲೇ ಕೆಲಸ ಪ್ರಾರಂಭಿಸಬಹುದು.

ಸ್ನೇಹಿತರೆ,

ಈ ವರ್ಷದ ಬಜೆಟ್‌ನಲ್ಲಿ ನಾವು ಬಡವರ ಮನೆಗಳಿಗೆ ಸುಮಾರು 80,000 ಕೋಟಿ ರೂಪಾಯಿ ಒದಗಿಸಿದ್ದೇವೆ. ನಾವು ‘ಎಲ್ಲರಿಗೂ ಸೂರು’ ಅಭಿಯಾನವನ್ನು ವೇಗಗೊಳಿಸಬೇಕು. ಗ್ರಾಮಗಳು ಮತ್ತು ನಗರಗಳಲ್ಲು ಸಹ ತಂತ್ರಜ್ಞಾನದೊಂದಿಗೆ ವಸತಿ ಹೇಗೆ ಸಂಪರ್ಕಿಸುವುದು, ಕಡಿಮೆ ಖರ್ಚಿನೊಂದಿಗೆ ಹೆಚ್ಚು ಬಾಳಿಕೆ ಬರುವ ಮತ್ತು ಸದೃಢ ಮನೆಗಳನ್ನು ಹೇಗೆ ನಿರ್ಮಿಸುವುದು, ಹಸಿರು ಇಂಧನದ ಲಾಭವನ್ನು ಹೇಗೆ ಪಡೆಯುವುದು, ಸೌರಶಕ್ತಿಯಂತಹ ಮತ್ತು ಗುಂಪು ವಸತಿಗಳ ಹೊಸ ಮಾದರಿ ಯಾವುದು? ಎಂಬುದರ ಕುರಿತು ವ್ಯಾಪಕ ಚರ್ಚೆಯ ಅಗತ್ಯವಿದೆ. ನಿಮ್ಮ ಅನುಭವದ ಸಾರವು ಈ ಚರ್ಚೆಗಳಿಂದ ಹೊರಹೊಮ್ಮಬೇಕು.

ಸ್ನೇಹಿತರೆ,

ಬುಡಕಟ್ಟು ಸಮುದಾಯದ ಬೃಹತ್ ಸಾಮರ್ಥ್ಯವನ್ನು ಮೊದಲ ಬಾರಿಗೆ ಸ್ಪರ್ಶಿಸಲು ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಬುಡಕಟ್ಟು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿ ನೇಮಕಾತಿಗಾಗಿ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಏಕಲವ್ಯ ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರತಿಕ್ರಿಯೆ ಏನು ಎಂಬುದನ್ನು ನಾವು ನೋಡಬೇಕಾಗಿದೆ? ಈ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳು ದೇಶದ ದೊಡ್ಡ ನಗರಗಳಲ್ಲಿ ಹೇಗೆ ಮಾನ್ಯತೆ ಪಡೆಯುತ್ತಾರೆ ಮತ್ತು ಗರಿಷ್ಠ ಸಂಖ್ಯೆಯ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಹೇಗೆ ಸ್ಥಾಪಿಸುವುದು ಎಂಬುದರ ಕುರಿತು ನಾವು ಈ ದಿಕ್ಕಿನಲ್ಲಿ ಯೋಚಿಸಬೇಕಾಗಿದೆ. ಈ ಶಾಲೆಗಳಲ್ಲಿ ನಾವು ಸ್ಟಾರ್ಟಪ್‌ಗಳು ಮತ್ತು ಡಿಜಿಟಲ್ ಮಾರ್ಕೆಟಿಂಗ್‌ಗಾಗಿ ಕಾರ್ಯಾಗಾರಗಳನ್ನು ಪ್ರಾರಂಭಿಸಿದರೆ, ನಮ್ಮ ಬುಡಕಟ್ಟು ಸಮಾಜವು ಅದರಿಂದ ಎಷ್ಟು ಪ್ರಯೋಜನ ಪಡೆಯುತ್ತದೆ ಎಂದು ನೀವು ಊಹಿಸಬಹುದು. ಈ ಮಕ್ಕಳು ಏಕಲವ್ಯ ಮಾದರಿ ಶಾಲೆಗಳಿಂದ ಹೊರಬಂದಾಗ, ತಮ್ಮ ಪ್ರದೇಶದ ಬುಡಕಟ್ಟು ಉತ್ಪನ್ನಗಳನ್ನು ಹೇಗೆ ಉತ್ತೇಜಿಸಬೇಕು ಮತ್ತು ಅವರ ಬ್ರ್ಯಾಂಡಿಂಗ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಮಾಡಬೇಕೆಂಬುದನ್ನಮಾಡಬೇಕೆಂಬುದರ  ಬಗ್ಗೆ ಅವರು ಈಗಾಗಲೇ ಜ್ಞಾನ  ಹೊಂದಿರುತ್ತಾರೆ.

ಸ್ನೇಹಿತರೆ,

ಮೊದಲ ಬಾರಿಗೆ ನಾವು ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚು ಸೌಲಭ್ಯವಂಚಿತರಿಗೆ ವಿಶೇಷ ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದೇವೆ. ದೇಶದ ಸುಮಾರು 200 ಜಿಲ್ಲೆಗಳಲ್ಲಿ 22,000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಮ್ಮ ಬುಡಕಟ್ಟು ಸ್ನೇಹಿತರಿಗೆ ನಾವು ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಒದಗಿಸಬೇಕಾಗಿದೆ. ಅಂತೆಯೇ, ಪ್ರಯೋಜನಗಳು ನಮ್ಮ ಅಲ್ಪಸಂಖ್ಯಾತ ಸಮಾಜವನ್ನು, ವಿಶೇಷವಾಗಿ ನಮ್ಮ ಮುಸ್ಲಿಂ ಸಮಾಜವನ್ನು ಹೇಗೆ ತಲುಪಬಹುದು, ಈ ಸಮುದಾಯಗಳು ಸ್ವಾತಂತ್ರ್ಯದ ನಂತರವೂ ಇಷ್ಟು ವರ್ಷಗಳ ಕಾಲ ಬಹಳ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ‘ಇಡೀ ರಾಷ್ಟ್ರ’ದ ಅಭಿವೃದ್ಧಿ ವಿಧಾನದ ಅಗತ್ಯವಿದೆ. ಆದ್ದರಿಂದ, ಆರೋಗ್ಯ ಕ್ಷೇತ್ರದ ಪ್ರತಿಯೊಬ್ಬ ಪಾಲುದಾರರು ವೇಗವಾಗಿ ಕೆಲಸ ಮಾಡಬೇಕಾಗುತ್ತದೆ.

ಸ್ನೇಹಿತರೆ,

ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವು ‘ಕೊನೆಯ ಮೈಲಿ ತಲುಪುವ’ ವಿಷಯದಲ್ಲಿ ಯಶಸ್ವಿ ಮಾದರಿಯಾಗಿ ಹೊರಹೊಮ್ಮಿದೆ. ಈಗ ದೇಶದ 500 ಸ್ಥಳ(ಬ್ಲಾಕ್‌)ಗಳಲ್ಲಿ ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ಮಹತ್ವಾಕಾಂಕ್ಷೆಯ ಬ್ಲಾಕ್ ಕಾರ್ಯಕ್ರಮಕ್ಕಾಗಿ ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗಾಗಿ ಮಾಡಿದ ರೀತಿಯಲ್ಲಿಯೇ ತುಲನಾತ್ಮಕ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕಾಗಿದೆ. ನಾವು ಪ್ರತಿ ಬ್ಲಾಕ್‌ನಲ್ಲಿ ಸ್ಪರ್ಧೆಯ ವಾತಾವರಣ ರೂಪಿಸಬೇಕಾಗಿದೆ. ಕೊನೆಯ ಮೈಲಿ ವಿತರಣೆಗೆ ಸಂಬಂಧಿಸಿದ ಹೊಸ ಆಲೋಚನೆಗಳು ಮತ್ತು ಸಲಹೆಗಳು ಈ ಅರ್ಥಪೂರ್ಣ ವೆಬಿನಾರ್ ನಿಂದ ಹೊರಹೊಮ್ಮುತ್ತವೆ ಎಂಬುದು ನನಗೆ ಖಾತ್ರಿಯಿದೆ. ಇದು ದೂರದ ಪ್ರದೇಶಗಳಲ್ಲಿನ ನಮ್ಮ ಸಹೋದರ ಸಹೋದರಿಯರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಈ ನಿಟ್ಟಿನಲ್ಲಿ ನಾವು ಮುಂದಿನ ದಾರಿಯ ಬಗ್ಗೆ ಯೋಚಿಸಿ,  ನಾವು ಅನುಷ್ಠಾನಕ್ಕೆ ಒತ್ತು ನೀಡಬೇಕಾಗಿದೆ. ತಂತ್ರಜ್ಞಾನವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಮೂಲಕ ನಾವು ಪಾರದರ್ಶಕತೆ ಖಚಿತಪಡಿಸಿಕೊಳ್ಳಬೇಕು. ಉತ್ತಮ ಫಲಾನುಭವಿ ಇರಬೇಕು, ಪ್ರಯೋಜನಗಳು ಅವನಿಗೆ ಉಪಯುಕ್ತವಾಗಬೇಕು ಮತ್ತು ಕಾಲಮಿತಿಯೊಳಗೆ ಅವನಿಗೆ ಸೌಲಭ್ಯಗಳು ಲಭ್ಯವಾಗಬೇಕು. ಹೀಗೆ ಮಾಡಿದರೆ ಮಾತ್ರ ಅವನು ತನ್ನ ಬಡತನದ ಎದುರು ಹೊಸ ಆತ್ಮವಿಶ್ವಾಸದಿಂದ ಹೋರಾಡುವಷ್ಟು ಸಮರ್ಥನಾಗುತ್ತಾನೆ. ಬಡವರೇ ಹೆಚ್ಚಿರುವ ನಮ್ಮ ಸೈನ್ಯವು ಬಡತನವನ್ನು ಸೋಲಿಸುವಷ್ಟು ಬಲಿಷ್ಠವಾಗಬೇಕು. ಬಡವರ ಸಾಮರ್ಥ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕಾಗಿರುವುದರಿಂದ ಅವನು ಸ್ವತಃ ಬಡತನವನ್ನು ಸೋಲಿಸಬೇಕು.  ಪ್ರತಿಯೊಬ್ಬ ಬಡವರು, ಅವರ ಕುಟುಂಬವು ಬಡವರಾಗಿ ಉಳಿಯುವುದಿಲ್ಲ ಮತ್ತು ಸರ್ಕಾರದ ಪ್ರಯತ್ನಗಳೊಂದಿಗೆ ಪ್ರಗತಿ ಸಾಧಿಸುತ್ತಾರೆ ಎಂಬ ಸಂಕಲ್ಪ ತೊಡಬೇಕು.  ನಾವು ಈ ಪರಿಸರವನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಾಲುದಾರರ ಸಕ್ರಿಯ ಸಹಕಾರವನ್ನು ನಾನು ನಿರೀಕ್ಷಿಸುತ್ತೇನೆ. ಇಂದಿನ ವೆಬಿನಾರ್ ‘ಸರ್ವಜನ ದನಯ ಸೇರ್ವಾಜನ ಸುಖಯಾ’ (ಎಲ್ಲರ ಸಂತೋಷ ಮತ್ತು ಕಲ್ಯಾಣಕ್ಕಾಗಿ) ನಿರ್ಣಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ನನಗೆ ಖಾತ್ರಿಯಿದೆ. ನಾನು ನಿಮಗೆ ಶುಭ ಹಾರೈಸುತ್ತೇನೆ!

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.