Inaugurates Maharashtra Samriddhi Mahamarg
“Today a constellation of eleven new stars is rising for the development of Maharashtra”
“Infrastructure cannot just cover lifeless roads and flyovers, its expansion is much bigger”
“Those who were deprived earlier have now become priority for the government”
“Politics of short-cuts is a malady”
“Political parties that adopt short-cuts are the biggest enemy of the country's taxpayers”
“No country can run with short-cuts, a permanent solution with a long-term vision is very important for the progress of the country”
“The election results in Gujarat are the result of the economic policy of permanent development and permanent solution”

ವೇದಿಕೆಯಲ್ಲಿರುವ ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್, ಜನಪ್ರಿಯ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಮಣ್ಣಿನ ಮಕ್ಕಳು ಮತ್ತು ಮಹಾರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವವರು, ಶ್ರೀ ದೇವೇಂದ್ರಜಿ, ನಿತೀನ್‌ಜಿ, ರಾವ್ ಸಾಹೇಬ್ ದಾನ್ವೆ, ಡಾ. ಭಾರತಿ ತಾಯಿ. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುಚ ನಾಗ್ಪುರದ ನನ್ನ ಪ್ರೀತಿಯ ಸಹೋದರ,ಸಹೋದರಿಯರೇ...

ಇಂದು ಸಂಕಷ್ಟ ಚತುರ್ಥಿ.  ಯಾವುದೇ ಶುಭ ಕಾರ್ಯ ಮಾಡುವಾಗ ಮೊದಲು ಗಣೇಶನನ್ನು ಪೂಜಿಸುತ್ತೇವೆ.  ಇಂದು ನಾಗ್ಪುರದಲ್ಲಿದ್ದೇನೆ, ಬೆಟ್ಟದ ಗಣಪತಿಯಪ್ಪ ದೇವರಿಗೆ ನನ್ನ ನಮಸ್ಕಾರಗಳು.  ಡಿಸೆಂಬರ್ 11 ಸಂಕಷ್ಟಿ ಚತುರ್ಥಿಯ ಪವಿತ್ರ ದಿನ.  ಇಂದು ಮಹಾರಾಷ್ಟ್ರದ ಅಭಿವೃದ್ಧಿಗಾಗಿ 11 ನಕ್ಷತ್ರಗಳ ಮಹಾನಕ್ಷತ್ರ ಹೊರಹೊಮ್ಮುತ್ತಿದೆ.

ಮೊದಲ ನಕ್ಷತ್ರ- 'ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಹೆದ್ದಾರಿ' ಈಗ ನಾಗ್ಪುರ ಮತ್ತು ಶಿರಡಿಗೆ ಸಿದ್ಧವಾಗಿದೆ.  ಎರಡನೇ ನಕ್ಷತ್ರ ನಾಗ್ಪುರ ಏಮ್ಸ್, ಇದು ವಿದರ್ಭದ ದೊಡ್ಡ ಪ್ರದೇಶದ ಜನರಿಗೆ ಪ್ರಯೋಜನವನ್ನು ನೀಡುತ್ತದೆ.  ಮೂರನೇ ನಕ್ಷತ್ರ- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ ಅನ್ನು ನಾಗ್ಪುರದಲ್ಲಿ ಸ್ಥಾಪಿಸಲಾಗಿದೆ.  ನಾಲ್ಕನೇ ನಕ್ಷತ್ರ- ಚಂದ್ರಾಪುರದಲ್ಲಿ ರಕ್ತ ಸಂಬಂಧಿತ ರೋಗಗಳ ತಡೆಗಟ್ಟುವಿಕೆಗಾಗಿ ICMR (ಐಸಿಎಂಆರ್)ಸಂಶೋಧನಾ ಕೇಂದ್ರ.  ಐದನೇ ನಕ್ಷತ್ರ- ಪೆಟ್ರೋಕೆಮಿಕಲ್ ವಲಯಕ್ಕೆ ಬಹಳ ಮುಖ್ಯವಾದ ಸೀಪೇಟ್ ಚಂದ್ರಾಪುರದ ಸ್ಥಾಪನೆ ಆರನೇ ನಕ್ಷತ್ರ- ನಾಗ್ಪುರದಲ್ಲಿ ನಾಗ್ ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಯೋಜನೆಯು ಪ್ರಾರಂಭವಾಯಿತು.  ಏಳನೇ ಸ್ಟಾರ್-ನಾಗ್ಪುರ ಮೆಟ್ರೋ ಹಂತ ಒಂದು ಉದ್ಘಾಟನೆಯಾಗಿದೆ ಮತ್ತು ಎರಡನೇ ಹಂತವನ್ನು ಯೋಜಿಸಲಾಗಿದೆ.  ಎಂಟನೇ ನಕ್ಷತ್ರ- ವಂದೇ ಭಾರತ್ ಎಕ್ಸ್‌ಪ್ರೆಸ್ ಇಂದು ನಾಗ್ಪುರ ಮತ್ತು ಬಿಲಾಸ್‌ಪುರ ನಡುವೆ ಪ್ರಾರಂಭವಾಯಿತು.  ಒಂಭತ್ತನೇ ನಕ್ಷತ್ರ 'ನಾಗ್ಪುರ' ಮತ್ತು 'ಅಜ್ನಿ' ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಯಾಗಿದೆ.  ಹತ್ತನೇ ನಕ್ಷತ್ರ-ಅಜ್ನಿಯಲ್ಲಿ 12,000 ಅಶ್ವಶಕ್ತಿ ರೈಲು ಲೊಕೊಮೊಟಿವ್ ನಿರ್ವಹಣಾ ಡಿಪೋ ಉದ್ಘಾಟನೆ.  ಹನ್ನೊಂದನೇ ನಕ್ಷತ್ರ- ನಾಗ್ಪುರ-ಇಟಾರ್ಸಿ ಮಾರ್ಗದ ಕೊಹ್ಲಿ-ನಾರ್ಖೇಡ್ ಮಾರ್ಗವನ್ನು ಪ್ರಾರಂಭಿಸಲಾಗಿದೆ.  ಹನ್ನೊಂದು ನಕ್ಷತ್ರಗಳ ಈ ಮಹಾನಕ್ಷತ್ರವು ಮಹಾರಾಷ್ಟ್ರದ ಅಭಿವೃದ್ಧಿಗೆ ಹೊಸ ದಿಕ್ಕು ಮತ್ತು ಹೊಸ ಶಕ್ತಿಯನ್ನು ನೀಡುತ್ತದೆ.  ಸ್ವಾತಂತ್ರ್ಯದ 75 ವರ್ಷಗಳ ಅಮೃತ ಮಹೋತ್ಸವದಲ್ಲಿ 75 ಸಾವಿರ ಕೋಟಿ ರೂಪಾಯಿಗಳ ಈ ಅಭಿವೃದ್ಧಿ ಕಾರ್ಯಗಳಿಗಾಗಿ ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರದ ಜನತೆಗೆ ತುಂಬಾ ತುಂಬಾ ಅಭಿನಂದನೆಗಳು.

ಸ್ನೇಹಿತರೇ....

ಮಹಾರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಎಷ್ಟು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇಂದಿನ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ.  ಸಮೃದ್ಧಿ ಹೆದ್ದಾರಿಯು ನಾಗ್ಪುರ ಮತ್ತು ಮುಂಬೈ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ, ಮಹಾರಾಷ್ಟ್ರದ 24 ಜಿಲ್ಲೆಗಳನ್ನು ಆಧುನಿಕ ಸಂಪರ್ಕದೊಂದಿಗೆ ಸಂಪರ್ಕಿಸುತ್ತದೆ.  ಇದರಿಂದ ರೈತರಿಗೆ, ವಿವಿಧ ದೂರದ ಕ್ಷೇತ್ರಗಳಿಗೆ, ಕೈಗಾರಿಕೆಗಳಿಗೆ ಬಂದು ಹೋಗುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಇದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

 ಸ್ನೇಹಿತರೇ...

ಈ ದಿನ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಿದೆ.  ಇಂದು ಆರಂಭಿಸಲಾದ ಯೋಜನೆಗಳು ಮೂಲಸೌಕರ್ಯ ಅಭಿವೃದ್ಧಿಯ ಸಮಗ್ರ ದೃಷ್ಟಿಯನ್ನು ಪ್ರತಿಬಿಂಬಿಸುತ್ತವೆ. (ಏಮ್ಸ್‌ನಲ್ಲಿ) AIIMS ಒಂದು ವಿಭಿನ್ನ ರೀತಿಯ ಮೂಲಸೌಕರ್ಯವಾಗಿದೆ ಅಲ್ಲದೇ ಸಮೃದ್ಧಿ ಹೆದ್ದಾರಿಯು ಮತ್ತೊಂದು ರೀತಿಯ ಮೂಲಸೌಕರ್ಯವಾಗಿದೆ.  ಅದೇ ರೀತಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ನಾಗ್ಪುರ ಮೆಟ್ರೋ, ಎರಡೂ ವಿಭಿನ್ನ ರೀತಿಯ ಅಕ್ಷರ ಬಳಕೆಯ ಮೂಲಸೌಕರ್ಯವಾಗಿತ್ತು, ಆದರೆ ಇವೆಲ್ಲವೂ ಪುಷ್ಪಗುಚ್ಛದಲ್ಲಿ, ಪುಷ್ಪಗುಚ್ಛದಲ್ಲಿ ವಿಭಿನ್ನ ಹೂವುಗಳಾಗಿವೆ. ಇದರಿಂದ ನಿಕಲ್ ಅಭಿವೃದ್ಧಿಯ ಪರಿಮಳವು ಜನಸಾಮಾನ್ಯರನ್ನು ತಲುಪುತ್ತದೆ.

ಅಭಿವೃದ್ಧಿಯ ಈ ಪುಷ್ಪಗುಚ್ಛವು ವಿಶಾಲವಾದ ಉದ್ಯಾನದ ಪ್ರತಿಬಿಂಬವಾಗಿದೆ, ಇದನ್ನು ಕಳೆದ 8 ವರ್ಷಗಳಿಂದ ಶ್ರಮವಹಿಸಿ ಸಿದ್ಧಪಡಿಸಲಾಗಿದೆ.  ಜನಸಾಮಾನ್ಯರ ಆರೋಗ್ಯ ರಕ್ಷಣೆಯಾಗಲಿ, ಸಂಪತ್ತು ಸೃಷ್ಟಿಯಾಗಲಿ, ರೈತರ ಸಬಲೀಕರಣವಾಗಲಿ, ಜಲ ಸಂರಕ್ಷಣೆಯಾಗಲಿ, ಮೂಲಸೌಕರ್ಯಕ್ಕೆ ಮಾನವೀಯತೆ ಮೆರೆದ ಸರಕಾರ ಇಂದು ದೇಶದಲ್ಲಿ ಪ್ರಥಮ ಬಾರಿಗೆ ಇದೆ.

ಇಂದು ಪ್ರತಿಯೊಬ್ಬರ ಜೀವನವನ್ನು ಸ್ಪರ್ಶಿಸುತ್ತಿರುವ ಮೂಲಭೂತ ಸೌಕರ್ಯಗಳ ಒಂದು ಮಾನವ ಸ್ಪರ್ಶವಾಗಿದೆ.  ಆಯುಷ್ಮಾನ್ ಭಾರತ್ ಯೋಜನೆಯು ಪ್ರತಿಯೊಬ್ಬ ಬಡವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ನೀಡುತ್ತದೆ, ಇದು ನಮ್ಮ ಸಾಮಾಜಿಕ ಮೂಲಸೌಕರ್ಯಕ್ಕೆ ಉದಾಹರಣೆಯಾಗಿದೆ.  ಕಾಶಿ, ಕೇದಾರನಾಥ, ಉಜ್ಜಯಿನಿಯಿಂದ ಪಂಢರಾಪುರದವರೆಗೆ ನಮ್ಮ ನಂಬಿಕೆಯ ಸ್ಥಳಗಳ ಅಭಿವೃದ್ಧಿ ನಮ್ಮ ಸಾಂಸ್ಕೃತಿಕ ಮೂಲಸೌಕರ್ಯಕ್ಕೆ ಉದಾಹರಣೆಯಾಗಿದೆ.

45 ಕೋಟಿಗೂ ಹೆಚ್ಚು ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಜನ್ ಧನ್ ಯೋಜನೆ ನಮ್ಮ ಆರ್ಥಿಕ ಮೂಲಸೌಕರ್ಯಕ್ಕೆ ಉದಾಹರಣೆಯಾಗಿದೆ.  ನಾಗ್ಪುರ ಏಮ್ಸ್‌ನಂತಹ ಆಧುನಿಕ ಆಸ್ಪತ್ರೆಗಳನ್ನು ತೆರೆಯುವ ಅಭಿಯಾನ, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಅಭಿಯಾನವು ನಮ್ಮ ವೈದ್ಯಕೀಯ ಮೂಲಸೌಕರ್ಯಕ್ಕೆ ಉದಾಹರಣೆಯಾಗಿದೆ ಮತ್ತು ಈ 
ಎಲ್ಲದರಲ್ಲಿಯೂ ಸಾಮಾನ್ಯವಾಗಿರುವ ಸಂಗತಿಯೆಂದರೆ, ಅದು ಮಾನವ ಸ್ಪರ್ಶ ಮತ್ತು ಸೂಕ್ಷ್ಮ ಸಂವೇದನಾಶೀಲತೆ.
ನಾವು ಮೂಲಸೌಕರ್ಯವನ್ನು ನಿರ್ಜೀವ ರಸ್ತೆಗಳು ಮತ್ತು ಮೇಲ್ಸೇತುವೆಗಳಿಗೆ ಮಾತ್ರ ಸೀಮಿತಗೊಳಿಸದೇ ಅದರ ವ್ಯಾಪ್ತಿಯನ್ನು ವಿಶಾಲಗೊಳಿಸಿದ್ದೇವೆ.


ಮತ್ತೆ ಸ್ನೇಹಿತರೇ....

 ಮೂಲಸೌಕರ್ಯದ ಕೆಲಸದಲ್ಲಿ ಅರ್ಥವಿಲ್ಲದೇ ಹೋದಾಗ ಅದರಲ್ಲಿ ಮಾನವ ಸ್ಪರ್ಶ ಸಂವೇದನಶೀಲತೆ ಕಾಣಿಸದೇ, ಬರೀ ಇಟ್ಟಿಗೆ, ಕಲ್ಲು, ಸಿಮೆಂಟ್, ಸುಣ್ಣ, ಕಬ್ಬಿಣ ಇವುಗಳೇ ಕಾಣಿಸುತ್ತವೆ. ಆಗ ನಾಡಿನ ಜನತೆ ಜನ ಸಾಮಾನ್ಯರು ನಷ್ಟವನ್ನು ಭರಿಸಬೇಕಾಗುತ್ತದೆ.ನಾನು ನಿಮಗೆ ಗೋಸಿಖುರ್ದ್ ಅಣೆಕಟ್ಟಿನ ಉದಾಹರಣೆಯನ್ನು ನೀಡಲು ಬಯಸುತ್ತೇನೆ.  ಈ ಅಣೆಕಟ್ಟಿನ ಅಡಿಪಾಯವನ್ನು ಮೂವತ್ತು-  ಮೂವತ್ತೈದು ವರ್ಷಗಳ ಹಿಂದೆ ಹಾಕಲಾಯಿತು ಮತ್ತು ಆ ಸಮಯದಲ್ಲಿ ಅದರ ಅಂದಾಜು ವೆಚ್ಚ ಸುಮಾರು 400 ಕೋಟಿ ರೂಪಾಯಿಗಳು.  ಆದರೆ ಸಂವೇದನಾರಹಿತ ಕಾರ್ಯಶೈಲಿಯಿಂದ ಹಲವು ವರ್ಷಗಳಿಂದ ಅಣೆಕಟ್ಟು ಪೂರ್ಣಗೊಂಡೇಯಿಲ್ಲ.  ಈಗ ಅಣೆಕಟ್ಟೆಯ ಅಂದಾಜು ವೆಚ್ಚ 400 ಕೋಟಿಯಿಂದ 18 ಸಾವಿರ ಕೋಟಿಗೆ ಏರಿಕೆಯಾಗಿದೆ.  2017 ರಲ್ಲಿ, ಡಬಲ್ ಇಂಜಿನ್ ಸರ್ಕಾರ ರಚನೆಯಾದ ನಂತರ, ಈ ಅಣೆಕಟ್ಟಿನ ಕಾಮಗಾರಿಯನ್ನು ವೇಗಗೊಳಿಸಲಾಗಿದೆ, ಪ್ರತಿಯೊಂದು ಸಮಸ್ಯೆಯೂ ಬಗೆಹರಿದಿದೆ.  ಈ ವರ್ಷ ಅಣೆಕಟ್ಟು ಸಂಪೂರ್ಣ ಪೂರ್ಣಗೊಂಡಿರುವುದು ನನಗೆ ತೃಪ್ತಿ ತಂದಿದೆ.  ನೀವು ಊಹಿಸುವಂತೆ, ಇದು ಹಳ್ಳಿಗೆ, ರೈತನಿಗೆ ಪ್ರಯೋಜನವಾಗಲು ಮೂರು ದಶಕಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

 ಸಹೋದರ ಸಹೋದರಿಯರೇ,

 ಸ್ವಾತಂತ್ರ್ಯದ ಅಮೃತಕಾಲದಲ್ಲಿ ದೇಶವು ಅಭಿವೃದ್ಧಿ ಹೊಂದಿದ ಭಾರತದ ಭವ್ಯ ದೃಷ್ಟಿಯಲ್ಲಿ ಮುನ್ನಡೆಯುತ್ತಿದೆ.  ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದ ಹಾದಿಯು ಭಾರತದ ಸಾಮೂಹಿಕ ಶಕ್ತಿಯಾಗಿದೆ.  ರಾಷ್ಟ್ರದ ಅಭಿವೃದ್ಧಿಗಾಗಿ ರಾಜ್ಯದ ಅಭಿವೃದ್ಧಿಯೇ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಮಂತ್ರ.  ನಾವು ಅಭಿವೃದ್ಧಿಯನ್ನು ಮಿತಿಗೊಳಿಸಿದಾಗ, ಅವಕಾಶವೂ ಸೀಮಿತವಾಗುತ್ತದೆ ಎಂಬುದು ಕಳೆದ ದಶಕಗಳಲ್ಲಿ ನಮ್ಮ ಅನುಭವವಾಗಿದೆ.  ಶಿಕ್ಷಕರು ಕೆಲವೇ ಜನರಿಗೆ, ಕೆಲವು ವರ್ಗಗಳಿಗೆ ಮಾತ್ರ ಸೀಮಿತವಾದಾಗ ರಾಷ್ಟ್ರದ ಪ್ರತಿಭೆಗಳು ಸಂಪೂರ್ಣವಾಗಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.  

ಕೆಲವೇ ಮಂದಿಗೆ ಮಾತ್ರ ಬ್ಯಾಂಕ್‌ಗಳಿಗೆ ಪ್ರವೇಶ ಸೀಮಿತವಾಗಿದ್ದಾಗ, ವ್ಯಾಪಾರ-ವ್ಯವಹಾರವೂ ಸೀಮಿತವಾಗಿತ್ತು. ಉತ್ತಮ ಸಂಪರ್ಕವು ಕೆಲವೇ ನಗರಗಳಿಗೆ ಸೀಮಿತವಾಗಿದ್ದಾಗ, ಬೆಳವಣಿಗೆಯೂ ಅದೇ ಪ್ರಮಾಣದಲ್ಲಿ ಸೀಮಿತವಾಗಿತ್ತು.  ಅಂದರೆ, ಅಭಿವೃದ್ಧಿಯ ಸಂಪೂರ್ಣ ಲಾಭವನ್ನು ದೇಶದ ಹೆಚ್ಚಿನ ಜನಸಂಖ್ಯೆಯು ಹಂಚಿಕೊಳ್ಳಲಾಗಲಿಲ್ಲ ಮತ್ತು ಭಾರತದ ನಿಜವಾದ ಶಕ್ತಿ ಹೊರಹೊಮ್ಮಲಿಲ್ಲ.  ಕಳೆದ 8 ವರ್ಷಗಳಲ್ಲಿ, ನಮ್ಮ ಆಲೋಚನೆ ಮತ್ತು ವಿಧಾನ ಎರಡೂ ಬದಲಾಗಿದೆ.  ನಾವು (ಸಬ್ಕಾ ಸಾಥ್-ಸಬ್ಕಾ ವಿಶ್ವಾಸ್-ಸಬ್ಕಾ ವಿಕಾಸ್ ಔರ್ ಸಬ್ಕಾ ತ್ರಯಸ್)ಎಲ್ಲರ ಬೆಂಬಲ, ಎಲ್ಲರ ನಂಬಿಕೆ, ಪ್ರತಿಯೊಬ್ಬರ ಅಭಿವೃದ್ಧಿ ಮತ್ತು ಎಲ್ಲರ ಪ್ರಯತ್ನಗಳ ಮೇಲೆ ನಾವು ಒತ್ತು ನೀಡುತ್ತಿದ್ದೇವೆ. ನಾನು ಪ್ರತಿಯೊಬ್ಬರ ಪ್ರತಿಯೊಂದರ ಪ್ರಯತ್ನವನ್ನು ಹೇಳಿದಾಗ, ಅದು ಪ್ರತಿಯೊಬ್ಬ ದೇಶವಾಸಿ ಮತ್ತು ದೇಶದ ಪ್ರತಿಯೊಂದು ರಾಜ್ಯವನ್ನು ಒಳಗೊಂಡಿರುತ್ತದೆ.  ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರ ಶಕ್ತಿ ಹೆಚ್ಚುತ್ತದೆ, ಆಗ ಭಾರತ ಅಭಿವೃದ್ಧಿಯಾಗುತ್ತದೆ.  ಅದಕ್ಕಾಗಿಯೇ ನಾವು ಹಿಂದುಳಿದವರು, ವಂಚಿತರು, ಸಣ್ಣವರು ಎಂದು ಪರಿಗಣಿಸುವವರನ್ನು ಪ್ರೋತ್ಸಾಹಿಸುತ್ತಿದ್ದೇವೆ.  ಅದೇನೆಂದರೆ, 'ಮೊದಲು ವಂಚಿತರಾಗಿದ್ದವರು ಈಗ ಅಭಿವೃದ್ಧಿಗಾಗಿ ನಮ್ಮ ಸರ್ಕಾರದ ಪರವಾಗಿದ್ದಾರೆ'.

ಅದಕ್ಕಾಗಿಯೇ ಇಂದು ಸಣ್ಣ ರೈತರಿಗೆ ಆದ್ಯತೆಯ ಮೇಲೆ ಕೆಲಸ ಮಾಡಲಾಗುತ್ತಿದೆ.  ವಿದರ್ಭದ ರೈತರು ಇಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ದೊಡ್ಡ ಲಾಭವನ್ನು ಪಡೆದಿದ್ದಾರೆ.  ದನ ಕಾಯುವವರಿಗೆ ಆದ್ಯತೆ ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಕಲ್ಪಿಸಿದ್ದು ನಮ್ಮ ಸರ್ಕಾರ.  ನಮ್ಮ ಬೀದಿಬದಿಯ ಅಣ್ಣ-ತಮ್ಮಂದಿರು, ಬೀದಿಬದಿ ವ್ಯಾಪಾರಿಗಳು, ಆ ಅಣ್ಣ-ತಂಗಿಯರನ್ನೂ ಮೊದಲೇ ಕೇಳಲಿಲ್ಲ, ಅವರೂ ವಂಚಿತರಾಗಿದ್ದರು.  ಇಂದು ಇಂತಹ ಲಕ್ಷಗಟ್ಟಲೆ ಸ್ನೇಹಿತರಿಗೆ ಆದ್ಯತೆ ನೀಡಿ ಬ್ಯಾಂಕ್‌ನಿಂದ ಸುಲಭವಾಗಿ ಸಾಲ ಪಡೆಯುತ್ತಿದ್ದಾರೆ.

 ಸ್ನೇಹಿತರೇ...,

' ಹಿಂದುಳಿದವರಿಗೆ ಆದ್ಯತೆ’ ಎಂಬುದಕ್ಕೆ ಇನ್ನೊಂದು ಉದಾಹರಣೆಯೂ ನಮ್ಮ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿದೆ.  ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಶಕಗಳಾದರೂ ಅಭಿವೃದ್ಧಿಯ ಹಲವು ಮಾನದಂಡಗಳಲ್ಲಿ ತೀರಾ ಹಿಂದುಳಿದಿದ್ದ 100ಕ್ಕೂ ಹೆಚ್ಚು ಜಿಲ್ಲೆಗಳು ದೇಶದಲ್ಲಿವೆ.  ಇವುಗಳಲ್ಲಿ ಹೆಚ್ಚಿನವು ಬುಡಕಟ್ಟು ಪ್ರದೇಶಗಳು, ಹಿಂಸಾಚಾರದಿಂದ ಪ್ರಭಾವಿತವಾದ ಪ್ರದೇಶಗಳಾಗಿವೆ.  ಮರಾಠವಾಡ ಮತ್ತು ವಿದರ್ಭದ ಹಲವು ಜಿಲ್ಲೆಗಳೂ ಇವುಗಳಲ್ಲಿ ಸೇರಿವೆ.  ಕಳೆದ 8 ವರ್ಷಗಳಿಂದ, ನಾವು ದೇಶದ ಇಂತಹ ವಂಚಿತ ಪ್ರದೇಶಗಳನ್ನು ತ್ವರಿತ ಅಭಿವೃದ್ಧಿಗೆ ಶಕ್ತಿಯ ಹೊಸ ಕೇಂದ್ರವನ್ನಾಗಿ ಮಾಡಲು ಒತ್ತು ನೀಡುತ್ತಿದ್ದೇವೆ.  ಇಂದು ಉದ್ಘಾಟನೆಗೊಂಡಿರುವ ಮತ್ತು ಶಂಕುಸ್ಥಾಪನೆಯಾಗಿರುವ ಯೋಜನೆಗಳು ಕೂಡ ಈ ಚಿಂತನೆ ಮತ್ತು ಧೋರಣೆಯ ದ್ಯೋತಕವಾಗಿದೆ.

 ಸ್ನೇಹಿಯರೇ...,

 ಇಂದು ನಿಮ್ಮೊಂದಿಗೆ ಮಾತನಾಡುವಾಗ, ಭಾರತದ ರಾಜಕೀಯದಲ್ಲಿ ಬರುತ್ತಿರುವ ವಿರೂಪತೆಯ ಬಗ್ಗೆ ನಾನು ಮಹಾರಾಷ್ಟ್ರದ ಜನರಿಗೆ ಮತ್ತು ದೇಶದ ಜನರಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ.  ಇದು ಶಾರ್ಟ್ ಕಟ್ (ಕಳ್ಳದಾರಿ) ರಾಜಕಾರಣದ ವಿಕೃತಿ.  ಇದು ರಾಜಕೀಯ ಹಿತಾಸಕ್ತಿಗಾಗಿ ದೇಶದ ಹಣವನ್ನು ಲೂಟಿ ಮಾಡುವ ವಿಕೃತಿ.  ತೆರಿಗೆದಾರರ ದುಡಿಮೆಯ ಹಣವನ್ನು ಲೂಟಿ ಮಾಡುವುದು ಕೂಡ ವಿಕೃತಿ.

ಈ ರಾಜಕೀಯ ಪಕ್ಷಗಳು ಶಾರ್ಟ್‌ಕಟ್‌ (ಕಳ್ಳದಾರಿ)ಗಳನ್ನು ಅಳವಡಿಸಿಕೊಂಡಿವೆ.ಈ ರಾಜಕೀಯ ನಾಯಕರು ದೇಶದ ಪ್ರತಿಯೊಬ್ಬ ತೆರಿಗೆದಾರನ ದೊಡ್ಡ ಶತೃಗಳು.  ಅಧಿಕಾರಕ್ಕೆ ಬರುವುದಷ್ಟೇ ಗುರಿಯಾಗಿರಿಸಿಕೊಳ್ಳುವವರು, ಸುಳ್ಳು ಭರವಸೆಗಳನ್ನು ನೀಡಿ ಸರ್ಕಾರವನ್ನು ಕಸಿದುಕೊಳ್ಳುವುದೇ ಗುರಿಯಾಗಿಸಿಕೊಳ್ಳುವವರಿಂದ ದೇಶ ಕಟ್ಟಲು ಸಾಧ್ಯವೇ ಇಲ್ಲ.  ಇಂದು, ಭಾರತವು ಮುಂದಿನ 25 ವರ್ಷಗಳ ಗುರಿಗಳ ಮೇಲೆ ಕೆಲಸ ಮಾಡುತ್ತಿರುವ ಸಮಯದಲ್ಲಿ, ಕೆಲವು ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಭಾರತದ ಆರ್ಥಿಕತೆಯನ್ನು ನಾಶಮಾಡಲು ಬಯಸುತ್ತಿವೆ.

 ನಾವೆಲ್ಲರೂ  ಮೊದಲ ಕೈಗಾರಿಕಾ ಕ್ರಾಂತಿ ಬಂದಾಗ, ಭಾರತವು ಅದರ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ, ನಾವು ಎರಡನೇ-ಮೂರನೇ ಕೈಗಾರಿಕಾ ಕ್ರಾಂತಿಯಲ್ಲೂ ಹಿಂದುಳಿದಿದ್ದೇವೆ, ಆದರೆ ಇಂದು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಮಯ, ಭಾರತವು ಅದನ್ನು ಕಳೆದುಕೊಳ್ಳುವುದಿಲ್ಲ ಎಂದು ನೆನಪಿಟ್ಟುಕೊಳ್ಳಬೇಕು.  ನಾನು ಮತ್ತೆ ಹೇಳುತ್ತೇನೆ, ಅಂತಹ ಅವಕಾಶ ಮತ್ತೆ ಮತ್ತೆ ಯಾವುದೇ ದೇಶಕ್ಕೆ ಬರುವುದಿಲ್ಲ.  ಯಾವುದೇ ದೇಶವು ಶಾರ್ಟ್‌ಕಟ್‌ಗಳೊಂದಿಗೆ ಓಡಲು ಸಾಧ್ಯವಿಲ್ಲ. ದೇಶದ ಪ್ರಗತಿ, ಶಾಶ್ವತ ಅಭಿವೃದ್ಧಿ, ಶಾಶ್ವತ ಪರಿಹಾರಗಳಿಗಾಗಿ ಕೆಲಸ ಮಾಡುವುದು, ದೀರ್ಘಾವಧಿಯ ದೂರದೃಷ್ಟಿ ಬಹಳ ಮುಖ್ಯ. ಮೂಲಸೌಕರ್ಯವು ಸುಸ್ಥಿರ ಅಭಿವೃದ್ಧಿಯ ಕೇಂದ್ರವಾಗಿದೆ.

 ಒಂದು ಕಾಲದಲ್ಲಿ ದಕ್ಷಿಣ ಕೊರಿಯಾ ಕೂಡ ಬಡ ದೇಶವಾಗಿತ್ತು. ಆದರೆ ಮೂಲಸೌಕರ್ಯಗಳ ಮೂಲಕ ಆ ದೇಶ ತನ್ನ ಅದೃಷ್ಟವನ್ನು ಬದಲಾಯಿಸಿಕೊಂಡಿದೆ.  ಇಂದು, ಗಲ್ಫ್ ರಾಷ್ಟ್ರಗಳು ತುಂಬಾ ಮುಂದಿವೆ ಮತ್ತು ಲಕ್ಷಾಂತರ ಭಾರತೀಯರು ಅಲ್ಲಿ ಉದ್ಯೋಗವನ್ನು ಪಡೆಯುತ್ತಾರೆ. ಏಕೆಂದರೆ ಅವರು ಕಳೆದ ಮೂರ್ನಾಲ್ಕು ದಶಕಗಳಲ್ಲಿ ತಮ್ಮ ಮೂಲಸೌಕರ್ಯಗಳನ್ನು ಬಲಪಡಿಸಿದ್ದಾರೆ, ಆಧುನೀಕರಣಗೊಳಿಸಿದ್ದಾರೆ ಮತ್ತು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

 ಈ ರಾಜಕೀಯ ಪಕ್ಷಗಳು ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಂಡಿವೆ, ಈ ರಾಜಕೀಯ ನಾಯಕರು ದೇಶದ ಪ್ರತಿಯೊಬ್ಬ ತೆರಿಗೆದಾರನ ದೊಡ್ಡ ಶತ್ರುಗಳು.  ಅಧಿಕಾರಕ್ಕೆ ಬರುವುದಷ್ಟೇ ಗುರಿಯಾಗಿರುವವರು, ಸುಳ್ಳು ಭರವಸೆಗಳನ್ನು ನೀಡಿ ಸರ್ಕಾರವನ್ನು ಕಸಿದುಕೊಳ್ಳುವುದೇ ಗುರಿಯಾಗಿರುವವರು ದೇಶ ಕಟ್ಟಲು ಸಾಧ್ಯವೇ ಇಲ್ಲ.  ಇಂದು, ಭಾರತವು ಮುಂದಿನ 25 ವರ್ಷಗಳ ಗುರಿಗಳ ಮೇಲೆ ಕೆಲಸ ಮಾಡುತ್ತಿರುವ ಸಮಯದಲ್ಲಿ, ಕೆಲವು ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಭಾರತದ ಆರ್ಥಿಕತೆಯನ್ನು ನಾಶಮಾಡಲು ಬಯಸುತ್ತವೆ.

ಇಂದು ಭಾರತದ ಜನರು ಸಿಂಗಾಪುರಕ್ಕೆ ಹೋಗಲು ಬಯಸುತ್ತಾರೆ ಎನ್ನುವುದು ನಿಮಗೆ ತಿಳಿದೇಯಿದೆ. ಆದರೆ  ಕೆಲವು ದಶಕಗಳ ಹಿಂದೆ, ಸಿಂಗಾಪುರ ಸಹ ಒಂದು ಸಾಮಾನ್ಯ ದ್ವೀಪ ರಾಷ್ಟ್ರವಾಗಿತ್ತು.ಅಲ್ಲಿ ಮೀನುಗಾರಿಕೆಯಿಂದ ಜೀವನೋಪಾಯವನ್ನು ಗಳಿಸುತ್ತಿದ್ದರು.  ಆದರೆ ಸಿಂಗಾಪುರವು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಿತು,ಸರಿಯಾದ ಆರ್ಥಿಕ ನೀತಿಗಳನ್ನು ಅನುಸರಿಸಿತು.ಇದರ ಪರಿಣಾಮ ಸಿಂಗಾಪುರ ದೇಶವಿಂದು ವಿಶ್ವದ ಆರ್ಥಿಕತೆಯ ದೊಡ್ಡ ಕೇಂದ್ರವಾಗಿದೆ.  ಈ ದೇಶಗಳಲ್ಲಿಯೂ ಶಾರ್ಟ್ ಕಟ್ (ಅಡ್ಡದಾರಿ) ರಾಜಕಾರಣ ನಡೆದಿದ್ದರೆ, ತೆರಿಗೆದಾರರ ಹಣವನ್ನು ಲೂಟಿ ಮಾಡಿದ್ದರೆ, ಈ ದೇಶಗಳು ಇಂದಿನ ಎತ್ತರಕ್ಕೆ ಎಂದಿಗೂ ತಲುಪುತ್ತಿರಲಿಲ್ಲ.  ಇತ್ತೀಚೆಗೆ ಈ ಅವಕಾಶ ಭಾರತಕ್ಕೆ ಬಂದಿದೆ.  ಹಿಂದಿನ ಸರಕಾರಗಳ ಅವಧಿಯಲ್ಲಿ ನಮ್ಮ ದೇಶದ ಪ್ರಾಮಾಣಿಕ ತೆರಿಗೆದಾರರು ನೀಡಿದ ಹಣ ಒಂದೋ ಭ್ರಷ್ಟಾಚಾರದಿಂದ ಕಳೆದುಹೋಯಿತು ಅಥವಾ ಮತ ಬ್ಯಾಂಕ್ ಬಲವರ್ಧನೆಗೆ ವಿನಿಯೋಗಿಸಲಾಯಿತು.  ದೇಶದ ರಾಜಧಾನಿಯಿಂದ ಸರ್ಕಾರದ ಬೊಕ್ಕಸದ ಪ್ರತಿ ಪೈಸೆಯನ್ನೂ ಯುವ ಪೀಳಿಗೆಗೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ವಿನಿಯೋಗಿಸುವುದು ಇಂದಿನ ಅಗತ್ಯವಾಗಿದೆ.

ಇಂದು ನಾನು ಭಾರತದ ಪ್ರತಿಯೊಬ್ಬ ಯುವಕರನ್ನು ಒತ್ತಾಯಿಸುತ್ತೇನೆ. ಅಂತಹ ಸ್ವಾರ್ಥಿ ರಾಜಕೀಯ ಪಕ್ಷಗಳನ್ನು, ಅಂತಹ ಸ್ವಾರ್ಥಿ ರಾಜಕೀಯ ನಾಯಕರನ್ನು ಬಹಿರಂಗಪಡಿಸಬೇಕೆಂದು ನಾನು ಪ್ರತಿಯೊಬ್ಬ ತೆರಿಗೆದಾರರನ್ನು ಒತ್ತಾಯಿಸುತ್ತೇನೆ.  "ಆದಾಯ ಎಂಟಾಣೆ, ರ ಖರ್ಚು ರೂಪಾಯಿ" ಎಂಬ ನೀತಿಯನ್ನು ಅನುಸರಿಸುವ ರಾಜಕೀಯ ಪಕ್ಷಗಳು ಈ ದೇಶವನ್ನು ಒಳಗಿನಿಂದ ಪೊಳ್ಳಾಗಿಸುತ್ತವೆ.  ಪ್ರಪಂಚದ ಅನೇಕ ದೇಶಗಳಲ್ಲಿ, "ಆದಾಯ ಎಂಟಾಣೆ, ಖರ್ಚು ರೂಪಾಯಿ" ಎಂಬ ನೀತಿಯಿಂದ ಇಡೀ ಆರ್ಥಿಕತೆಯು ನಾಶವಾಗುವುದನ್ನು ನಾವು ನೋಡಿದ್ದೇವೆ.  ನಾವೆಲ್ಲರೂ ಸೇರಿ ಇಂತಹ ದುಷ್ಕೃತ್ಯದಿಂದ ಭಾರತವನ್ನು ರಕ್ಷಿಸಬೇಕಾಗಿದೆ.  ನಾವು ನೆನಪಿಟ್ಟುಕೊಳ್ಳಬೇಕು, ಇನ್ನೊಂದು “ಆದಾಯ ಎಂಟಾಣೆ, ಖರ್ಚು ರೂಪಾಯಿ”  ಇದು ದಿಕ್ಕಿಲ್ಲದ ತಂತ್ರ ಮತ್ತು ಕೇವಲ ಸ್ವಾರ್ಥ.  ಮತ್ತೊಂದೆಡೆ, ಸಮರ್ಪಣಾ ಭಾವನೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಇದೆ, ಶಾಶ್ವತ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನವಿದೆ.  ಇಂದು ಭಾರತದ ಯುವಕರಿಗೆ ಬಂದಿರುವ ಅವಕಾಶ.ಈ ಸದಾವಕಾಶವನ್ನು ನಾನು ಹೀಗೆ ಸುಮ್ಮನೆ ಹೋಗಲು ಬಿಡುವುದಿಲ್ಲ.

ಮತ್ತು ಇಂದು ಸಾಮಾನ್ಯ ಜನರು ಸಹ ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸುಸ್ಥಿರ ಪರಿಹಾರಗಳಿಗಾಗಿ ಅಪಾರ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ.  ಕಳೆದ ವಾರ ಗುಜರಾತ್‌ನಲ್ಲಿ ಬಂದಿರುವ ಫಲಿತಾಂಶಗಳು ಆರ್ಥಿಕ ನೀತಿ ಮತ್ತು ಶಾಶ್ವತ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರದ ಅಭಿವೃದ್ಧಿ ತಂತ್ರದ ಫಲಿತಾಂಶವಾಗಿದೆ.

 ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳುವ, ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳದಿರುವ ಅದರ ಮಹತ್ವವನ್ನು ಅರಿತುಕೊಳ್ಳದಿರುವ ಅಂತಹ ರಾಜಕಾರಣಿಗಳಿಗೆ ನಾನು ದೇಶಕ್ಕೆ ಅಭಿವೃದ್ಧಿಯ ಅವಶ್ಯಕತೆ ಎಷ್ಟಿದೆಯೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ವಿನಮ್ರವಾಗಿ ಗೌರವದಿಂದ ಕೇಳಿಕೊಳ್ಳುತ್ತೇನೆ.

ಶಾರ್ಟ್‌ಕಟ್‌ಗಳ ಬದಲು ಶಾಶ್ವತ ಅಭಿವೃದ್ಧಿ ಮಾಡಿ ಚುನಾವಣೆ ಗೆಲ್ಲಬಹುದು, ಮತ್ತೆಮತ್ತೆ ಚುನಾವಣೆ ಗೆಲ್ಲಬಹುದು. ಅಂತಹ ಪಕ್ಷಗಳಿಗೆ  ಭಯಪಡುವ ಅಗತ್ಯವಿಲ್ಲ. ನೀವು ಯಾವಾಗ ದೇಶದ ಹಿತಾಸಕ್ತಿಯನ್ನು ಮುಖ್ಯವಾಗಿರಿಸುತ್ತೀರೋ, ಆಗ ನೀವು ಶಾರ್ಟ್‌ಕಟ್ ರಾಜಕೀಯದ ಹಾದಿಯನ್ನು ತೊರೆಯುತ್ತೀರಿ ಎಂದು ನನಗೆ ಖಾತ್ರಿಯಿದೆ ಎನ್ನುವುದನ್ನು ನಾನು ಹೇಳಲು ಬಯಸುತ್ತೇನೆ. 

ಸಹೋದರ ಮತ್ತು ಸಹೋದರಿಯರೇ....

 ಈ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ಮಹಾರಾಷ್ಟ್ರದ  ಹಾಗೂ  ದೇಶದ ಜನರನ್ನು ಅಭಿನಂದಿಸುತ್ತೇನೆ.  ನಾನು ನನ್ನ ಯುವ ಸ್ನೇಹಿತರಿಗೆ ಹೇಳುತ್ತೇನೆ- ನಾನು ಇಂದು ನಿಮ್ಮ ಮುಂದೆ 11 ನಕ್ಷತ್ರಗಳನ್ನು ಎಣಿಸಿದ್ದೇನೆ.ಈ 11 ನಕ್ಷತ್ರಗಳು ನಿಮ್ಮ ಭವಿಷ್ಯಕ್ಕೆ  ಬುನಾದಿಯಾಗಿವೆ.ನಿಮಗೆ ಅವಕಾಶಗಳನ್ನು ನೀಡುತ್ತವೆ.ಇದೇ ದಾರಿ.ಸರಿಯಾದ ಮಾರ್ಗ.ಈಸಹ ಪಂಥ, ಈಸಹ ಪಂಥ, ಈ ಮಂತ್ರವನ್ನು ಜಪಿಸುತ್ತಾ ದೇಶದ ಅಭಿವೃದ್ಧಿಗಾಗಿ ನಮ್ಮನ್ನು ನಾವು ಪೂರ್ಣ ಸಮರ್ಪಣಾ ಭಾವದಿಂದ ಮುಂದಾಗೋಣ. ಸ್ನೇಹಿತರೇ, 25 ವರ್ಷಗಳ ಈ ಅವಕಾಶವನ್ನು ನಾವು ಬಿಡದೇ ಅಭಿವೃದ್ಧಿಗಾಗಿ ದುಡಿಯೋಣ.

 ತುಂಬಾ ಧನ್ಯವಾದಗಳು !

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.