Quoteಇಂದು ಪಿಎಂ-ಕಿಸಾನ್ ನ 19ನೇ ಕಂತನ್ನು ಬಿಡುಗಡೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ, ಈ ಯೋಜನೆ ದೇಶಾದ್ಯಂತದ ನಮ್ಮ ಸಣ್ಣ ರೈತರಿಗೆ ಬಹಳ ಉಪಯುಕ್ತವೆಂದು ಸಾಬೀತಾಗಿರುವುದರಿಂದ ಎಂದು ನನಗೆ ತುಂಬಾ ತೃಪ್ತಿ ಇದೆ: ಪ್ರಧಾನಮಂತ್ರಿ
Quoteಮಖಾನಾ ವಿಕಾಸ್ ಮಂಡಳಿಯನ್ನು ರಚಿಸುವ ನಮ್ಮ ಕ್ರಮವು ಅದರ ಕೃಷಿಯಲ್ಲಿ ತೊಡಗಿರುವ ಬಿಹಾರದ ರೈತರಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ, ಇದು ಮಖಾನಾದ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟಕ್ಕೆ ಸಾಕಷ್ಟು ಸಹಾಯ ಮಾಡಲಿದೆ:ಪ್ರಧಾನಮಂತ್ರಿ
Quoteಎನ್ ಡಿ ಎ ಸರ್ಕಾರ ಇಲ್ಲದಿದ್ದರೆ, ಬಿಹಾರ ಸೇರಿದಂತೆ ದೇಶಾದ್ಯಂತದ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಗುತ್ತಿರಲಿಲ್ಲ, ಕಳೆದ 6 ವರ್ಷಗಳಲ್ಲಿ, ಇದರ ಪ್ರತಿ ಪೈಸೆಯೂ ನೇರವಾಗಿ ನಮ್ಮ ಅನ್ನದಾತರ ಖಾತೆಗಳಿಗೆ ತಲುಪಿದೆ: ಪ್ರಧಾನಮಂತ್ರಿ
Quoteಅದು ಸೂಪರ್ ಫುಡ್ ಮಖಾನಾ ಆಗಿರಲಿ ಅಥವಾ ಭಾಗಲ್ಪುರದ ರೇಷ್ಮೆಯಾಗಿರಲಿ, ಬಿಹಾರದ ಇಂತಹ ವಿಶೇಷ ಉತ್ಪನ್ನಗಳನ್ನು ವಿಶ್ವದಾದ್ಯಂತದ ಮಾರುಕಟ್ಟೆಗಳಿಗೆ ಕೊಂಡೊಯ್ಯುವತ್ತ ನಮ್ಮ ಗಮನವಿದೆ: ಪ್ರಧಾನಮಂತ್ರಿ
Quoteಪಿಎಂ ಧನ್-ಧಾನ್ಯಾ ಯೋಜನೆ ಕೃಷಿಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ ನಮ್ಮ ರೈತರನ್ನು ಸಬಲೀಕರಣಗೊಳಿಸುತ್ತದೆ: ಪ್ರಧಾನಮಂತ್ರಿ
Quoteಇಂದು, ಬಿಹಾರದ ಭೂಮಿ 10,000ನೇ ಎಫ್ ಪಿ ಒ ರಚನೆಗೆ ಸಾಕ್ಷಿಯಾಗಿದೆ, ಈ ಸಂದರ್ಭದಲ್ಲಿ, ದೇಶಾದ್ಯಂತದ ರೈತ ಉತ್ಪಾದಕ ಸಂಘದ ಎಲ್ಲಾ ಸದಸ್ಯರಿಗೆ ಅನೇಕ ಅಭಿನಂದನೆಗಳು!: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!

ಅಂಗರಾಜ್ ದನ್ವೀರ್ ಕರ್ಣನ ಈ ತಪೋಭೂಮಿ, ಮಹರ್ಷಿ ಮೇಹಿಯ ತಪಸ್ಸಿನ ಸ್ಥಳ, ಭಗವಾನ್ ವಾಸುಪೂಜ್ಯರ ಪುಣ್ಯಭೂಮಿ, ವಿಶ್ವಪ್ರಸಿದ್ಧ ವಿಕ್ರಮಶಿಲಾ ಮಹಾವಿಹಾರ ಇರುವ ಸ್ಥಳ ಮತ್ತು ಬಾಬಾ ಬುಧನಾಥರ ಪವಿತ್ರ ಭೂಮಿಯ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ಶುಭಾಶಯಗಳು!

ವೇದಿಕೆಯಲ್ಲಿರುವ ನಮ್ಮ ಪ್ರೀತಿಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಿ ಅವರೊಂದಿಗೆ ಗೌರವಾನ್ವಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಜಿ ಇದ್ದಾರೆ, ಅವರು ಬಿಹಾರದ ಅಭಿವೃದ್ಧಿಗೆ ತಮ್ಮ ಸಮರ್ಪಣೆ ಮೂಲಕ ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ. ನನ್ನ ಗೌರವಾನ್ವಿತ ಸಂಪುಟ ಸಹೋದ್ಯೋಗಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಜಿ, ಜಿತನ್ ರಾಮ್ ಮಾಂಝಿ ಜಿ, ಲಲ್ಲನ್ ಸಿಂಗ್ ಜಿ, ಗಿರಿರಾಜ್ ಸಿಂಗ್ ಜಿ, ಚಿರಾಗ್ ಪಾಸ್ವಾನ್ ಜಿ - ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಜಿ, ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಜಿ, ವಿಜಯ್ ಸಿನ್ಹಾ ಜಿ, ರಾಜ್ಯದ ಇತರೆ ಸಚಿವರೆ, ಸಾರ್ವಜನಿಕ ಪ್ರತಿನಿಧಿಗಳೆ, ಗಣ್ಯರೆ ಮತ್ತು ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,

ಇಂದು ದೇಶಾದ್ಯಂತದ ಹಲವಾರು ಮುಖ್ಯಮಂತ್ರಿಗಳು, ಸಚಿವರು ಮತ್ತು ಕೋಟ್ಯಂತರ ರೈತರು ಈ ಕಾರ್ಯಕ್ರಮಕ್ಕಾಗಿ ನಮ್ಮೊಂದಿಗೆ ಸೇರಿದ್ದಾರೆ. ಅವರೆಲ್ಲರಿಗೂ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಮಹಾಕುಂಭ ಮೇಳದಲ್ಲಿ ಈ ಪವಿತ್ರ ಭೂಮಿ ಮಂದ್ರಾಂಚಲಕ್ಕೆ ಭೇಟಿ ನೀಡುವುದು ಬಹುದೊಡ್ಡ ಸೌಭಾಗ್ಯ. ಈ ಭೂಮಿ ನಂಬಿಕೆ, ಪರಂಪರೆ ಮತ್ತು ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ)ದ ಭರವಸೆಯ ಸಂಗಮವಾಗಿದೆ. ಇದು ವೀರ ಹುತಾತ್ಮ ತಿಲಕ ಮಾಂಝಿ ಅವರ ಪುಣ್ಯಭೂಮಿ, ಇದನ್ನು ರೇಷ್ಮೆ ನಗರ ಎಂದೂ ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಬಾಬಾ ಅಜ್ಗೈಬಿನಾಥ್ ಅವರ ಈ ಪವಿತ್ರ ಭೂಮಿಯಲ್ಲಿ ಮಹಾಶಿವರಾತ್ರಿಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇಂತಹ ಶುಭ ಸಮಯದಲ್ಲಿ ದೇಶಾದ್ಯಂತದ ಕೋಟ್ಯಂತರ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮತ್ತೊಂದು ಕಂತು ವರ್ಗಾಯಿಸುವ ಗೌರವ ನನ್ನದಾಗಿದೆ. ಬರೀ ಒಂದೇ ಕ್ಲಿಕ್‌ನಲ್ಲಿ, ಸುಮಾರು 22,000 ಕೋಟಿ ರೂ.ಗಳನ್ನು ದೇಶಾದ್ಯಂತ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ನಾನು ಗುಂಡಿ ಒತ್ತಿದಾಗ, ವಿವಿಧ ರಾಜ್ಯಗಳ ಜನರ ನೇರ ದೃಶ್ಯಗಳನ್ನು ನಾನು ನೋಡಬಲ್ಲೆ. ಇಲ್ಲಿಯೂ ಸಹ, ಹಣ ವರ್ಗಾವಣೆ ದೃಢೀಕರಿಸಲು ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಕುತೂಹಲದಿಂದ ಪರಿಶೀಲಿಸುತ್ತಿರುವುದನ್ನು ನನ್ನ ಕಣ್ಣುಗಳು ಆಲಿಸಿದವು. ಅವರ ಕಣ್ಣುಗಳಲ್ಲಿ ಕಂಡ ಆ ಹೊಳಪು ಅವರ ಸಮಾಧಾನ ಮತ್ತು ಸಂತೋಷವನ್ನು ಸಾರಿತು.

 

|

ಸ್ನೇಹಿತರೆ,

ಇಂದಿನ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಬಿಹಾರದ 75 ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳನ್ನು ಸೇರಿಸಲಾಗಿದೆ. ಇಂದು ಬಿಹಾರದ ರೈತರ ಖಾತೆಗಳಿಗೆ ಸುಮಾರು 1,600 ಕೋಟಿ ರೂ. ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ. ಬಿಹಾರದ ಎಲ್ಲಾ ರೈತ ಕುಟುಂಬಗಳಿಗೆ ಮತ್ತು ಇಡೀ ರಾಷ್ಟ್ರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ನಾನು ಕೆಂಪು ಕೋಟೆಯಿಂದ ಹೇಳಿದ್ದೇನೆಂದರೆ, ವಿಕಸಿತ ಭಾರತವು 4 ಬಲವಾದ ಆಧಾರಸ್ತಂಭಗಳ ಮೇಲೆ ನಿಂತಿದೆ - ಬಡವರು, ನಮ್ಮ ರೈತರು, ನಮ್ಮ ಯುವಕರು ಮತ್ತು ನಮ್ಮ ದೇಶದ ಮಹಿಳೆಯರು. ಅದು ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರವಾಗಲಿ ಅಥವಾ ಬಿಹಾರದಲ್ಲಿರುವ ನಿತೀಶ್ ಜಿ ನೇತೃತ್ವದ ಸರ್ಕಾರವಾಗಲಿ, ರೈತರ ಕಲ್ಯಾಣವು ನಮ್ಮ ಅತ್ಯಂತ ಆದ್ಯತೆಯಾಗಿ ಉಳಿದಿದೆ. ಕಳೆದ ದಶಕದಲ್ಲಿ, ನಮ್ಮ ರೈತರು ಎದುರಿಸುತ್ತಿರುವ ಪ್ರತಿಯೊಂದು ಸವಾಲು ಪರಿಹರಿಸಲು ನಾವು ಅವಿರತವಾಗಿ ಕೆಲಸ ಮಾಡಿದ್ದೇವೆ. ಅವರಿಗೆ ಗುಣಮಟ್ಟದ ಬಿತ್ತನೆ ಬೀಜಗಳು, ಕೈಗೆಟುಕುವ ಬೆಲೆಗೆ ಸಾಕಷ್ಟು ರಸಗೊಬ್ಬರಗಳು, ಸರಿಯಾದ ನೀರಾವರಿ ಸೌಲಭ್ಯಗಳು, ರೋಗಗಳಿಂದ ಅವರ ಜಾನುವಾರುಗಳಿಗೆ ರಕ್ಷಣೆ ಮತ್ತು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ನಷ್ಟಗಳ ವಿರುದ್ಧ ರಕ್ಷಣೆಗಳು ಬೇಕಾಗುತ್ತವೆ. ಹಿಂದೆ, ರೈತರು ಈ ಎಲ್ಲಾ ಕ್ಷೇತ್ರಗಳಲ್ಲಿ ಇಂತಹ ಬಿಕ್ಕಟ್ಟುಗಳಿಂದ ಸುತ್ತುವರೆದಿದ್ದರು. ಪ್ರಾಣಿಗಳಿಗೆ ಮೀಸಲಾದ ಮೇವನ್ನೇ ಸೇವಿಸುವವರು ಎಂದಿಗೂ ಬದಲಾವಣೆಯನ್ನು ತರಲು ಸಾಧ್ಯವಿಲ್ಲ. ಆದಾಗ್ಯೂ, ಎನ್‌ಡಿಎ ಸರ್ಕಾರವು ಈ ಪರಿಸ್ಥಿತಿಯನ್ನು ಪರಿವರ್ತಿಸಿದೆ. ಇತ್ತೀಚಿನ ವರ್ಷಗಳಲ್ಲಿ, ನಾವು ರೈತರಿಗೆ ನೂರಾರು ಆಧುನಿಕ ಬೀಜ ಪ್ರಭೇದಗಳನ್ನು ಪರಿಚಯಿಸಿದ್ದೇವೆ. ಯೂರಿಯಾ ಕೊರತೆಯಿಂದಾಗಿ ರೈತರು ಲಾಠಿಚಾರ್ಜ್ ಎದುರಿಸಬೇಕಾದ ಸಮಯವಿತ್ತು, ಯೂರಿಯಾದ ಕಾಳಸಂತೆ ಮಾರುಕಟ್ಟೆಯು ಅತಿರೇಕವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ - ರೈತರಿಗೆ ಸಾಕಷ್ಟು ರಸಗೊಬ್ಬರಗಳು ಲಭ್ಯವಿದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿಯೂ ಸಹ, ನಮ್ಮ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ನಾವು ಖಚಿತಪಡಿಸಿಕೊಂಡಿದ್ದೇವೆ. ಎನ್ ಡಿಎ ಸರ್ಕಾರ ಇಲ್ಲದಿದ್ದರೆ ಪರಿಸ್ಥಿತಿಯನ್ನು ನೀವೇ ಊಹಿಸಿ.

ಸ್ನೇಹಿತರೆ,

ಎನ್ ಡಿ ಎ ಸರ್ಕಾರ ಇಲ್ಲದಿದ್ದರೆ, ನಮ್ಮ ರೈತರು ರಸಗೊಬ್ಬರಗಳಿಗೆ ಪೊಲೀಸರ ಲಾಠಿ ಚಾರ್ಜ್‌ಗೆ ಒಳಗಾಗುತ್ತಿದ್ದರು. ಬರೌನಿ ರಸಗೊಬ್ಬರ ಕಾರ್ಖಾನೆ ಇನ್ನೂ ಕಾರ್ಯ ರ್ವಹಿಸುವುದಿಲ್ಲ. ಅನೇಕ ದೇಶಗಳಲ್ಲಿ, ಒಂದು ಚೀಲ ರಸಗೊಬ್ಬರಕ್ಕೆ 3,000 ರೂ. ವೆಚ್ಚವಾಗುತ್ತದೆ, ಆದರೆ ನಾವು ಅದನ್ನು ನಮ್ಮ ರೈತರಿಗೆ 300 ರೂ. ಗಿಂತ ಕಡಿಮೆ ಬೆಲೆಗೆ ನೀಡುತ್ತೇವೆ. ಎನ್ ಡಿಎ ಸರ್ಕಾರ ಇಲ್ಲದಿದ್ದರೆ, ರೈತರು ಪ್ರತಿ ಚೀಲ ಯೂರಿಯಾಕ್ಕೆ 3,000 ರೂ. ಪಾವತಿಸಬೇಕಿತ್ತು. ನಮ್ಮ ಸರ್ಕಾರ ರೈತರಿಗೆ ಆದ್ಯತೆ ನೀಡುತ್ತಿದೆ, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ, ಅದಕ್ಕಾಗಿಯೇ ಯೂರಿಯಾ ಮತ್ತು ಡಿಎಪಿಯ ಆರ್ಥಿಕ ಹೊರೆಯನ್ನು ಕೇಂದ್ರ ಸರ್ಕಾರವು ಹೊರುತ್ತಿದೆ. ಕಳೆದ ದಶಕದಲ್ಲಿ, ಸುಮಾರು 12 ಲಕ್ಷ ಕೋಟಿ ರೂ.ಗಳನ್ನು ಭರಿಸಿದೆ. ಇಲ್ಲದಿದ್ದರೆ ರೈತರ ಜೇಬಿನಿಂದ ರಸಗೊಬ್ಬರಗಳಿಗೆ ಖರ್ಚು ಮಾಡಲಾಗುತ್ತಿದ್ದ ಮೊತ್ತವನ್ನು ಕೇಂದ್ರ ಬಜೆಟ್ ಮೂಲಕ ಒದಗಿಸಲಾಗಿದೆ. ಇದರರ್ಥ ದೇಶಾದ್ಯಂತ ಕೋಟ್ಯಂತರ ರೈತರ ಕೈಯಲ್ಲಿ 12 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಉಳಿಸಲಾಗಿದೆ.

 

|

ಸ್ನೇಹಿತರೆ,

ಎನ್‌ ಡಿ ಎ ಸರ್ಕಾರ ಇಲ್ಲದಿದ್ದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಈ ಯೋಜನೆ ಸುಮಾರು 6 ವರ್ಷಗಳಿಂದ ಜಾರಿಯಲ್ಲಿದೆ. ಇಲ್ಲಿಯವರೆಗೆ, ಸುಮಾರು 3.7 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲ, ಯಾವುದೇ ಕಮಿಷನ್ ಕಡಿತವಿಲ್ಲ - ದೆಹಲಿಯಿಂದ ಕಳುಹಿಸಲಾದ ಪ್ರತಿ ರೂಪಾಯಿಯೂ ರೈತರನ್ನು ಸಂಪೂರ್ಣವಾಗಿ ತಲುಪುತ್ತದೆ. ಮಧ್ಯವರ್ತಿಗಳು ತಮ್ಮ ಪಾಲನ್ನು ಕಸಿದುಕೊಳ್ಳುವುದರಿಂದ ಹಿಂದೆ ಸರ್ಕಾರಿ ಯೋಜನೆಗಳ ಪ್ರಯೋಜನಗಳಿಂದ ವಂಚಿತರಾಗಿದ್ದ ಸಣ್ಣ ರೈತರು, ಈಗ ತಮ್ಮ ಬಾಕಿ ಹಣವನ್ನು ನೇರವಾಗಿ ಪಡೆಯುತ್ತಿದ್ದಾರೆ. ಆದರೆ ಇದು ಮೋದಿ ಸರ್ಕಾರ, ಇದು ನಿತೀಶ್ ಜಿ ಅವರ ಸರ್ಕಾರ - ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಮತ್ತು ಜಂಗಲ್ ರಾಜ್ ಆಡಳಿತವು ಅಧಿಕಾರದಲ್ಲಿದ್ದಾಗ, ನಾವು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಿದ್ದರಲ್ಲಿ ಒಂದು ಭಾಗವನ್ನು ಮಾತ್ರ ಹಂಚಿಕೆ ಮಾಡಿದರು. ಭ್ರಷ್ಟ ಸರ್ಕಾರವು ಇದನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ. ರೈತರ ಕಲ್ಯಾಣಕ್ಕೆ ನಿಜವಾಗಿಯೂ ಸಮರ್ಪಿತವಾದ ಸರ್ಕಾರ ಮಾತ್ರ ಅಂತಹ ಸಾಧನೆಯನ್ನು ಮಾಡಬಹುದು.

ಅದು ಕಾಂಗ್ರೆಸ್ ಆಗಿರಲಿ ಅಥವಾ ಜಂಗಲ್ ರಾಜ್ ಆಡಳಿತವಾಗಲಿ, ರೈತರ ಕಷ್ಟಗಳು ಅವರಿಗೆ ಎಂದಿಗೂ ಕಾಳಜಿಯಾಗಿರಲಿಲ್ಲ. ಹಿಂದೆ, ಪ್ರವಾಹ, ಬರ ಅಥವಾ ಆಲಿಕಲ್ಲು ಮಳೆ ಬಂದಾಗಲೆಲ್ಲಾ, ಅವರು ರೈತರನ್ನು ತಮ್ಮ ಹಣೆಬರಹಕ್ಕೆ ಬಿಟ್ಟುಕೊಟ್ಟರು. ಆದರೆ 2014ರಲ್ಲಿ ನೀವು ಎನ್ ಡಿಎ ಮೇಲೆ ನಂಬಿಕೆ ಇಟ್ಟಾಗ, ನಾನು ಸ್ಪಷ್ಟಪಡಿಸಿದ್ದೆ - ಈ ನಿರ್ಲಕ್ಷ್ಯ ಮುಂದುವರಿಯುವುದಿಲ್ಲ. ಎನ್ ಡಿಎ ಸರ್ಕಾರವು ಪಿಎಂ ಫಸಲ್ ಭಿಮಾ ಯೋಜನೆ ಪರಿಚಯಿಸಿತು, ಇದರ ಅಡಿ, ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳಿಗೆ ಪರಿಹಾರವಾಗಿ ರೈತರಿಗೆ ಸುಮಾರು 2 ಲಕ್ಷ ಕೋಟಿ ರೂ.ಗಳನ್ನು ಪಾವತಿಸಲಾಗಿದೆ.

ಸ್ನೇಹಿತರೆ,

ಭೂರಹಿತರು ಮತ್ತು ಸಣ್ಣ ರೈತರ ಆದಾಯ ಹೆಚ್ಚಿಸಲು ಎನ್‌ಡಿಎ ಸರ್ಕಾರ ಪಶುಸಂಗೋಪನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹಳ್ಳಿಗಳಲ್ಲಿರುವ ನಮ್ಮ ಸಹೋದರಿಯರನ್ನು 'ಲಖ್‌ಪತಿ ದೀದಿ'ಗಳನ್ನಾಗಿ ಪರಿವರ್ತಿಸುವಲ್ಲಿ ಈ ವಲಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಲ್ಲಿಯವರೆಗೆ, ದೇಶಾದ್ಯಂತ ಸುಮಾರು 1.25 ಕೋಟಿ ಮಹಿಳೆಯರು ಈ ಮೈಲಿಗಲ್ಲು ಸಾಧಿಸಿದ್ದಾರೆ, ಇದರಲ್ಲಿ ಬಿಹಾರದ ಸಾವಿರಾರು ಜೀವಿಕಾ ದೀದಿಗಳು ಸೇರಿದ್ದಾರೆ. ಕಳೆದ ದಶಕದಲ್ಲಿ, ಭಾರತದ ಹಾಲು ಉತ್ಪಾದನೆಯು ಗಮನಾರ್ಹ ಏರಿಕೆ ಕಂಡಿದೆ - 14 ಕೋಟಿ ಟನ್‌ಗಳಿಂದ 24 ಕೋಟಿ ಟನ್‌ಗಳಿಗೆ. ಕೇವಲ 10 ವರ್ಷಗಳಲ್ಲಿ, ಹಾಲಿನ ಉತ್ಪಾದನೆಯು ಹೆಚ್ಚಾಗಿದೆ, ಇದು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಭಾರತದ ಸ್ಥಾನ ಬಲಪಡಿಸಿದೆ. ಈ ಸಾಧನೆಗೆ ಬಿಹಾರವು ಮಹತ್ವದ ಕೊಡುಗೆ ನೀಡಿದೆ. ಇಂದು, ಬಿಹಾರದ ಸಹಕಾರಿ ಹಾಲು ಒಕ್ಕೂಟಗಳು ಪ್ರತಿದಿನ 30 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿವೆ. ಇದರ ಪರಿಣಾಮವಾಗಿ, ಪ್ರತಿ ವರ್ಷ 3,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಬಿಹಾರದ ಹೈನುಗಾರರ ಖಾತೆಗಳಿಗೆ, ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

 

|

ಸ್ನೇಹಿತರೆ,

ರಾಜೀವ್ ರಂಜನ್ ಜಿ (ಲಲ್ಲನ್ ಸಿಂಗ್ ಜಿ) ಡೇರಿ ವಲಯವನ್ನು ಬಲಪಡಿಸುವ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಅವರ ಸಮರ್ಪಣೆಯಿಂದಾಗಿ, ಬಿಹಾರದಲ್ಲಿ 2 ಪ್ರಮುಖ ಯೋಜನೆಗಳು ಶೀಘ್ರವಾಗಿ ಪೂರ್ಣಗೊಳ್ಳುವ ಹಂತದಲ್ಲಿವೆ. ಮೊದಲನೆಯದು ಮೋತಿಹಾರಿಯಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್, ಇದು ಅತ್ಯುತ್ತಮ ಸ್ಥಳೀಯ ಹಸು ತಳಿಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ. ಎರಡನೆಯದು ಬರೌನಿಯಲ್ಲಿರುವ ಹಾಲು ಸಂಸ್ಕರಣಾ ಘಟಕ, ಇದು ಈ ಪ್ರದೇಶದ 3 ಲಕ್ಷ ರೈತರಿಗೆ ಪ್ರಯೋಜನ ನೀಡುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಸ್ನೇಹಿತರೆ,

ನಮ್ಮ ದೋಣಿಗಾರರು ಮತ್ತು ಮೀನುಗಾರರನ್ನು ಹಿಂದಿನ ಸರ್ಕಾರಗಳು ಬಹಳ ಹಿಂದೆಯೇ ನಿರ್ಲಕ್ಷಿಸಿದ್ದವು, ಯಾವುದೇ ಬೆಂಬಲ ಅಥವಾ ಪ್ರಯೋಜನಗಳನ್ನು ಒದಗಿಸಲಿಲ್ಲ. ಮೊದಲ ಬಾರಿಗೆ, ನಾವು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಮೀನುಗಾರರಿಗೆ ವಿಸ್ತರಿಸಿದ್ದೇವೆ. ಅಂತಹ ಉಪಕ್ರಮಗಳ ಪರಿಣಾಮವಾಗಿ, ಬಿಹಾರ ಮೀನು ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಮುಖ್ಯಮಂತ್ರಿ ಸರಿಯಾಗಿ ಗಮನಿಸಿದಂತೆ, ಬಿಹಾರವು ಒಂದು ಕಾಲದಲ್ಲಿ ಮೀನು ಆಮದನ್ನು ಅವಲಂಬಿಸಿತ್ತು, ಆದರೆ ಇಂದು ಅದು ಸ್ವಾವಲಂಬಿಯಾಗಿದೆ. 2013ರ ಚುನಾವಣಾ ಪ್ರಚಾರ ಸಮಯದಲ್ಲಿ ನಾನು ಆಶ್ಚರ್ಯ ವ್ಯಕ್ತಪಡಿಸಿದಾಗ ನನ್ನ ಭೇಟಿಯನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ - ಇಷ್ಟೊಂದು ಹೇರಳವಾದ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯವು ಮೀನು ಆಮದಿನ ಮೇಲೆ ಹೇಗೆ ಅವಲಂಬಿತವಾಗಿದೆ? ಇಂದು, ಬಿಹಾರದ ಮೀನು ಬೇಡಿಕೆಯನ್ನು ರಾಜ್ಯದೊಳಗಿಂದಲೇ ಪೂರೈಸಲಾಗುತ್ತಿದೆ ಎಂದು ನೋಡಿ ನನಗೆ ಹೆಮ್ಮೆಯಾಗುತ್ತದೆ. ಒಂದು ದಶಕದ ಹಿಂದೆ, ಬಿಹಾರವು ಭಾರತದ ಟಾಪ್ 10 ಮೀನು ಉತ್ಪಾದಿಸುವ ರಾಜ್ಯಗಳಲ್ಲಿ ಸ್ಥಾನ ಪಡೆದಿತ್ತು. ಇಂದು, ಅದು ಅಗ್ರ 5 ಸ್ಥಾನಗಳಲ್ಲಿ ಸ್ಥಾನ ಪಡೆದಿದೆ. ಮೀನುಗಾರಿಕೆ ವಲಯಕ್ಕೆ ನಮ್ಮ ಕೇಂದ್ರೀಕೃತ ಕಾರ್ಯವಿಧಾನವು ಸಣ್ಣ ರೈತರು ಮತ್ತು ಮೀನುಗಾರರಿಗೆ ಗಮನಾರ್ಹವಾಗಿ ಪ್ರಯೋಜನ ನೀಡಿದೆ. ಗಂಗಾ ನದಿಯ ಡಾಲ್ಫಿನ್‌ಗಳಿಗೆ ಹೆಸರುವಾಸಿಯಾದ ಭಾಗಲ್ಪುರವು ನಮಾಮಿ ಗಂಗೆ ಉಪಕ್ರಮದ ಅಡಿ, ಉತ್ತಮ ಯಶಸ್ಸು ಕಂಡಿದೆ.

ಸ್ನೇಹಿತರೆ,

ಇತ್ತೀಚಿನ ವರ್ಷಗಳಲ್ಲಿ, ಸರ್ಕಾರದ ಪ್ರಯತ್ನಗಳು ಭಾರತದ ಕೃಷಿ ರಫ್ತುಗಳಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿವೆ. ಇದು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಖಚಿತಪಡಿಸಿದೆ. ಹಲವಾರು ಕೃಷಿ ಉತ್ಪನ್ನಗಳನ್ನು ಈಗ ಮೊದಲ ಬಾರಿಗೆ ರಫ್ತು ಮಾಡಲಾಗುತ್ತಿದೆ, ಅವುಗಳಲ್ಲಿ ಬಿಹಾರದ ಮಖಾನಾ ಕೂಡ ಒಂದು. ದೇಶಾದ್ಯಂತ ನಗರ ಮನೆಗಳಲ್ಲಿ ಉಪಾಹಾರದ ಅತ್ಯಗತ್ಯ ಭಾಗವಾಗಿದೆ. ವೈಯಕ್ತಿಕವಾಗಿ, ನಾನು ವರ್ಷಕ್ಕೆ ಕನಿಷ್ಠ 300 ದಿನ ಮಖಾನಾ ಸೇವಿಸುತ್ತೇನೆ. ಇದು ಈಗ ಜಾಗತಿಕ ಮಾರುಕಟ್ಟೆಗಳಿಗೆ ಪರಿಚಯಿಸಬೇಕಾದ ಉತ್ಕೃಷ್ಟ ಆಹಾರವಾಗಿದೆ. ಮಖಾನಾ ರೈತರನ್ನು ಬೆಂಬಲಿಸಲು, ಈ ವರ್ಷದ ಬಜೆಟ್‌ನಲ್ಲಿ ಮಖಾನಾ ಮಂಡಳಿಯ ಸ್ಥಾಪನೆ ಸೇರಿದೆ. ಈ ಮಂಡಳಿಯು ಬಿಹಾರದ ರೈತರಿಗೆ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಎಂಬ ಪ್ರತಿಯೊಂದು ಅಂಶದಲ್ಲೂ ಸಹಾಯ ಮಾಡುತ್ತದೆ - ಮಖಾನಾ ವಿಶ್ವ ವೇದಿಕೆಯಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತಲುಪುತ್ತದೆ ಎಂದು ಖಚಿತಪಡಿಸುತ್ತದೆ.

ಸ್ನೇಹಿತರೆ,

ಬಿಹಾರದ ರೈತರು ಮತ್ತು ಯುವಕರಿಗೆ ಬಜೆಟ್ ಮತ್ತೊಂದು ಪ್ರಮುಖ ಘೋಷಣೆಯನ್ನು ತಂದಿದೆ. ಪೂರ್ವ ಭಾರತದ ಆಹಾರ ಸಂಸ್ಕರಣಾ ಉದ್ಯಮಕ್ಕೆ ಬಿಹಾರ ಪ್ರಮುಖ ಕೇಂದ್ರವಾಗಲಿದೆ. ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಹೆಚ್ಚುವರಿಯಾಗಿ, ಬಿಹಾರದಾದ್ಯಂತ 3 ಹೊಸ ಕೃಷಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳಲ್ಲಿ ಒಂದು ಭಾಗಲ್ಪುರದಲ್ಲಿದ್ದು, ಪ್ರಸಿದ್ಧ ಜರ್ದಾಲು ಮಾವಿನ ತಳಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ರೈತರನ್ನು ಬೆಂಬಲಿಸಲು ಇತರೆ 2 ಕೇಂದ್ರಗಳನ್ನು ಮುಂಗರ್ ಮತ್ತು ಬಕ್ಸಾರ್‌ನಲ್ಲಿ ಸ್ಥಾಪಿಸಲಾಗುವುದು. ರೈತರ ಹಿತಾಸಕ್ತಿಗಳನ್ನು ಪೂರೈಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ನಮ್ಮ ಅಚಲ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ.

 

|

ಸ್ನೇಹಿತರೆ,

ಭಾರತವು ಜವಳಿಗಳ ಪ್ರಮುಖ ರಫ್ತುದಾರನಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ರಾಷ್ಟ್ರವ್ಯಾಪಿ ಜವಳಿ ಉದ್ಯಮ ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಭಾಗಲ್ಪುರದಲ್ಲಿ ಒಂದು ಮಾತಿದೆ, ಇಲ್ಲಿನ ಮರಗಳು ಸಹ ಚಿನ್ನವನ್ನು ಉಗುಳುತ್ತವೆ - ಇದು ರೇಷ್ಮೆ ಉತ್ಪಾದನೆಯಲ್ಲಿ ಈ ಪ್ರದೇಶದ ಶ್ರೀಮಂತ ಸಂಪ್ರದಾಯಕ್ಕೆ ಸಾಕ್ಷಿಯಾಗಿದೆ. ಭಾಗಲ್ಪುರಿ ರೇಷ್ಮೆ ಮತ್ತು ಟಸ್ಸರ್ ರೇಷ್ಮೆ ಭಾರತದಾದ್ಯಂತ ಪ್ರಸಿದ್ಧವಾಗಿವೆ, ಜಾಗತಿಕ ಮಾರುಕಟ್ಟೆಗಳಲ್ಲಿ ಅವುಗಳ ಬೇಡಿಕೆ ಸ್ಥಿರವಾಗಿ ಹೆಚ್ಚುತ್ತಿದೆ. ರೇಷ್ಮೆ ಉದ್ಯಮವನ್ನು ಮತ್ತಷ್ಟು ಉತ್ತೇಜಿಸಲು, ಕೇಂದ್ರ ಸರ್ಕಾರವು ಬಟ್ಟೆ ಮತ್ತು ನೂಲು ಬಣ್ಣ ಬಳಿಯುವ ಘಟಕಗಳು, ಬಟ್ಟೆ ಮುದ್ರಣ ಘಟಕಗಳು ಮತ್ತು ಬಟ್ಟೆ ಸಂಸ್ಕರಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದೆ. ಈ ಉಪಕ್ರಮಗಳು ಭಾಗಲ್ಪುರದ ನೇಕಾರರಿಗೆ ಆಧುನಿಕ ಮೂಲಸೌಕರ್ಯವನ್ನು ಒದಗಿಸುತ್ತವೆ, ಅವರ ಉತ್ಪನ್ನಗಳು ಪ್ರಪಂಚದ ಪ್ರತಿಯೊಂದು ಮೂಲೆಯನ್ನು ತಲುಪುವುದನ್ನು ಖಚಿತಪಡಿಸುತ್ತವೆ.

ಸ್ನೇಹಿತರೆ,

ಎನ್‌ಡಿಎ ಸರ್ಕಾರವು ಬಿಹಾರದ ದೀರ್ಘಕಾಲದ ಸವಾಲುಗಳಲ್ಲಿ ಒಂದಾದ - ಅದರ ಅನೇಕ ನದಿಗಳಿಗೆ ಸೇತುವೆಗಳ ಕೊರತೆಯನ್ನು ಸಹ ಪರಿಹರಿಸುತ್ತಿದೆ. ಸಾಕಷ್ಟು ಸೇತುವೆಗಳ ಕೊರತೆಯು ಸಾರಿಗೆ ಮತ್ತು ಸಂಪರ್ಕಕ್ಕೆ ಬಹಳ ಹಿಂದಿನಿಂದಲೂ ತೊಂದರೆಗಳನ್ನು ಸೃಷ್ಟಿಸಿದೆ. ಇದನ್ನು ಪರಿಹರಿಸಲು, ನಾವು ಬಿಹಾರದಾದ್ಯಂತ ಬಹು ಸೇತುವೆಗಳನ್ನು ವೇಗವಾಗಿ ನಿರ್ಮಿಸುತ್ತಿದ್ದೇವೆ. ಅಂತಹ ಒಂದು ಪ್ರಮುಖ ಯೋಜನೆ ಎಂದರೆ ಗಂಗಾ ನದಿಯ ಮೇಲೆ 4 ಪಥಗಳ ಸೇತುವೆಯ ನಿರ್ಮಾಣ, ಇದು 1,100 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ವೇಗದ ಗತಿಯಲ್ಲಿ ಪ್ರಗತಿಯಲ್ಲಿದೆ.

ಸ್ನೇಹಿತರೆ,

ಬಿಹಾರದಲ್ಲಿ ಪ್ರವಾಹಗಳು ಯಾವಾಗಲೂ ತೀವ್ರ ಸವಾಲು ಒಡ್ಡಿವೆ, ವರ್ಷದಿಂದ ವರ್ಷಕ್ಕೆ ವ್ಯಾಪಕ ಹಾನಿ ಉಂಟುಮಾಡುತ್ತಿವೆ. ಇದನ್ನು ತಗ್ಗಿಸಲು, ನಮ್ಮ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಅನುಮೋದಿಸಿದೆ. ಈ ವರ್ಷದ ಬಜೆಟ್‌ನಲ್ಲಿ ಪಶ್ಚಿಮ ಕೋಸಿ ಕಾಲುವೆ ಇಆರ್‌ಎಂ ಯೋಜನೆಗೆ ವಿಶೇಷ ನೆರವು ಸೇರಿದೆ. ಒಮ್ಮೆ ಪೂರ್ಣಗೊಂಡ ನಂತರ, ಈ ಯೋಜನೆಯು ಮಿಥಿಲಾ ಪ್ರದೇಶದ 50,000 ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ತರುತ್ತದೆ, ಇದು ಲಕ್ಷಾಂತರ ರೈತ ಕುಟುಂಬಗಳಿಗೆ ಪ್ರಯೋಜನ ನೀಡುತ್ತದೆ, ಕೃಷಿ ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಸ್ನೇಹಿತರೆ,

ರೈತರ ಆದಾಯ ಹೆಚ್ಚಿಸಲು ಎನ್‌ಡಿಎ ಸರ್ಕಾರವು ಬಹುಮುಖಿಗಳಲ್ಲಿ ಕೆಲಸ ಮಾಡುತ್ತಿದೆ. ಕೃಷಿ ಉತ್ಪಾದನೆ ಹೆಚ್ಚಿಸಲು, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳಲ್ಲಿ ಸ್ವಾವಲಂಬನೆ ಸಾಧಿಸಲು, ಆಹಾರ ಸಂಸ್ಕರಣಾ ಕೈಗಾರಿಕೆಗಳನ್ನು ವಿಸ್ತರಿಸಲು ಮತ್ತು ಭಾರತೀಯ ರೈತರ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುವಂತೆ ನೋಡಿಕೊಳ್ಳಲು ಇದು ಸತತ ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಪ್ರಪಂಚದ ಪ್ರತಿಯೊಂದು ಅಡುಗೆ ಮನೆಯಲ್ಲಿಯೂ ಭಾರತೀಯ ರೈತರು ಬೆಳೆಸುವ ಕನಿಷ್ಠ ಒಂದು ಉತ್ಪನ್ನವಿರಬೇಕು ಎಂಬುದು ನನ್ನ ದೃಷ್ಟಿಕೋನ. ಈ ವರ್ಷದ ಬಜೆಟ್ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಧನ್ ಧಾನ್ಯ ಯೋಜನೆಯ ಘೋಷಣೆಯೊಂದಿಗೆ ಈ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಈ ಯೋಜನೆಯಡಿ, ದೇಶಾದ್ಯಂತ ಕಡಿಮೆ ಬೆಳೆ ಉತ್ಪಾದನೆ ಹೊಂದಿರುವ 100 ಜಿಲ್ಲೆಗಳನ್ನು ಗುರುತಿಸಲಾಗುತ್ತದೆ, ಈ ಪ್ರದೇಶಗಳಲ್ಲಿ ಕೃಷಿ ಉತ್ತೇಜಿಸಲು ವಿಶೇಷ ಅಭಿಯಾನ ಪ್ರಾರಂಭಿಸಲಾಗುತ್ತದೆ. ಹೆಚ್ಚುವರಿಯಾಗಿ, ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಲು ಉದ್ದೇಶಿತ ಪ್ರಯತ್ನಗಳನ್ನು ಮಾಡಲಾಗುವುದು, ದ್ವಿದಳ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಹೆಚ್ಚಿಸಿ, ರೈತರು ಹೆಚ್ಚು ಬೆಳೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

 

|

ಸ್ನೇಹಿತರೆ,

ಇಂದು ಮತ್ತೊಂದು ಕಾರಣಕ್ಕಾಗಿ ಮಹತ್ವದ ದಿನ. ದೇಶಾದ್ಯಂತ 10,000 ರೈತ ಉತ್ಪಾದಕ ಸಂಸ್ಥೆ(ಎಫ್ ಪಿಒ)ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ನಮ್ಮ ಸರ್ಕಾರ ಹೊಂದಿತ್ತು. ನಾವು ಈ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಖಗಾರಿಯಾ ಜಿಲ್ಲೆಯಲ್ಲಿ ನೋಂದಾಯಿಸಲಾದ 10,000ನೇ ಎಫ್ ಪಿಒ ಅನ್ನು ಆಯೋಜಿಸುವ ಗೌರವ ಬಿಹಾರಕ್ಕೆ ಇದೆ, ಇದು ಮೆಕ್ಕೆಜೋಳ, ಬಾಳೆಹಣ್ಣು ಮತ್ತು ಭತ್ತ ಕೃಷಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಎಫ್ ಪಿಒ ಕೇವಲ ಒಂದು ಸಂಸ್ಥೆಯಲ್ಲ; ಇದು ರೈತರಿಗೆ ದೊಡ್ಡ ಮಾರುಕಟ್ಟೆಗಳಿಗೆ ನೇರ ಪ್ರವೇಶ ನೀಡುವ ಮೂಲಕ ಅವರ ಆದಾಯ ಹೆಚ್ಚಿಸುವ ಪರಿವರ್ತಕ ಶಕ್ತಿಯಾಗಿದೆ. ಎಫ್ ಪಿಒಗಳ ಮೂಲಕ, ನಮ್ಮ ರೈತ ಸಹೋದರ ಸಹೋದರಿಯರು ಈಗ ಹಿಂದಿನ ಅವರ ವ್ಯಾಪ್ತಿಗೆ ಮೀರಿದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಪ್ರಸ್ತುತ, ದೇಶದಲ್ಲಿ ಸುಮಾರು 30 ಲಕ್ಷ ರೈತರು ಎಫ್ ಪಿಒಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಅವರಲ್ಲಿ 40% ಮಹಿಳೆಯರು. ಈ ಸಂಸ್ಥೆಗಳು ಈಗ ಸಾವಿರಾರು ಕೋಟಿ ರೂಪಾಯಿಗಳ ಕೃಷಿ ವ್ಯವಹಾರ ನಡೆಸುತ್ತಿವೆ. 10,000 ಎಫ್ ಪಿಒಗಳ ಎಲ್ಲಾ ಸದಸ್ಯರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಎನ್‌ಡಿಎ ಸರ್ಕಾರವು ಬಿಹಾರದ ಕೈಗಾರಿಕಾ ಅಭಿವೃದ್ಧಿಗೆ ಸಮಾನವಾಗಿ ಬದ್ಧವಾಗಿದೆ. ಬಿಹಾರ ಸರ್ಕಾರವು ಭಾಗಲ್ಪುರದಲ್ಲಿ ಬೃಹತ್ ವಿದ್ಯುತ್ ಸ್ಥಾವರ ಸ್ಥಾಪಿಸುತ್ತಿದೆ, ಅದು ನಿರಂತರ ಕಲ್ಲಿದ್ದಲು ಪೂರೈಕೆಯನ್ನು ಪಡೆಯುತ್ತದೆ. ಇದನ್ನು ಸುಗಮಗೊಳಿಸಲು, ಕೇಂದ್ರ ಸರ್ಕಾರವು ಕಲ್ಲಿದ್ದಲು ಸಂಪರ್ಕವನ್ನು ಅನುಮೋದಿಸಿದೆ. ಇಲ್ಲಿ ಉತ್ಪಾದಿಸುವ ವಿದ್ಯುತ್ ಬಿಹಾರದ ಬೆಳವಣಿಗೆಗೆ ಚಾಲನೆ ನೀಡುತ್ತದೆ, ಇಲ್ಲಿನ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಪೂರ್ವೋದಯದ ಮೂಲಕ ಅಭಿವೃದ್ಧಿ ಹೊಂದಿದ ಭಾರತ ಹೊರಹೊಮ್ಮಲಿದೆ, ಬಿಹಾರ ಪೂರ್ವ ಭಾರತದ ಅತ್ಯಂತ ಮಹತ್ವದ ಆಧಾರಸ್ತಂಭವಾಗಿ ನಿಲ್ಲುತ್ತದೆ. ಬಿಹಾರ ಕೇವಲ 1 ರಾಜ್ಯವಲ್ಲ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಆದಾಗ್ಯೂ, ಕಾಂಗ್ರೆಸ್-ಆರ್‌ಜೆಡಿಯ ದೀರ್ಘಕಾಲದ ದುರಾಡಳಿತವು ಬಿಹಾರವನ್ನು ಹಾಳುಗೆಡವಿತು, ಅದರ ಖ್ಯಾತಿಯನ್ನು ಕಳಂಕಗೊಳಿಸಿತು. ಆದರೆ ಈಗ, ಬಿಹಾರವು ಅಭಿವೃದ್ಧಿ ಹೊಂದಿದ ಭಾರತದಲ್ಲಿ ತನ್ನ ಸರಿಯಾದ ಸ್ಥಾನವನ್ನು ಮರಳಿ ಪಡೆಯುತ್ತಿದೆ, ಪ್ರಾಚೀನ ಸಮೃದ್ಧ ಭಾರತದಲ್ಲಿ ಪಾಟಲಿಪುತ್ರವು ಪ್ರಾಮುಖ್ಯತೆ ಪಡೆದಂತೆಯೇ. ಈ ದೃಷ್ಟಿಕೋನವನ್ನು ಸಾಧಿಸಲು ನಾವೆಲ್ಲರೂ ಒಟ್ಟಾಗಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೇವೆ.

ಎನ್‌ಡಿಎ ಸರ್ಕಾರವು ಬಿಹಾರದಲ್ಲಿ ಸಂಪರ್ಕ ಆಧುನೀಕರಿಸಲು, ರಸ್ತೆ ಜಾಲವನ್ನು ವಿಸ್ತರಿಸಲು ಮತ್ತು ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಸಂಪೂರ್ಣ ಬದ್ಧವಾಗಿದೆ. ಮುಂಗೇರ್‌ನಿಂದ ಮಿರ್ಜಾ ಚೌಕಿಗೆ ಭಾಗಲ್ಪುರದ ಮೂಲಕ ಹೊಸ ಹೆದ್ದಾರಿಯನ್ನು 5,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹೆಚ್ಚುವರಿಯಾಗಿ, ಭಾಗಲ್ಪುರದಿಂದ ಅಂಶದಿಹಾವರೆಗಿನ ಚತುಷ್ಪಥ ರಸ್ತೆ ವಿಸ್ತರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ವಿಕ್ರಮಶಿಲಾದಿಂದ ಕಟಾರಿಯಾಕ್ಕೆ ಹೊಸ ರೈಲು ಮಾರ್ಗ ಮತ್ತು ರೈಲು ಸೇತುವೆಯ ನಿರ್ಮಾಣಕ್ಕೂ ಭಾರತ ಸರ್ಕಾರ ಅನುಮೋದನೆ ನೀಡಿದೆ.

 

|

ಸ್ನೇಹಿತರೆ,

ಭಾಗಲ್ಪುರವು ಅಪಾರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದೆ. ವಿಕ್ರಮಶಿಲಾ ವಿಶ್ವವಿದ್ಯಾಲಯದ ಯುಗದಲ್ಲಿ, ಇದು ಜಾಗತಿಕ ಕಲಿಕೆಯ ಕೇಂದ್ರವಾಗಿತ್ತು. ನಳಂದ ವಿಶ್ವವಿದ್ಯಾಲಯದ ಪ್ರಾಚೀನ ವೈಭವವನ್ನು ಪುನರುಜ್ಜೀವನಗೊಳಿಸುವ ಮತ್ತು ಅದನ್ನು ಆಧುನಿಕ ಭಾರತದೊಂದಿಗೆ ಜೋಡಿಸುವ ಕಾರ್ಯವನ್ನು ನಾವು ಈಗಾಗಲೇ ಪ್ರಾರಂಭಿಸಿದ್ದೇವೆ. ಈಗ, ನಳಂದದ ಹೆಜ್ಜೆಗಳನ್ನು ಅನುಸರಿಸಿ, ವಿಕ್ರಮಶಿಲಾದಲ್ಲಿ ಕೇಂದ್ರ ವಿಶ್ವವಿದ್ಯಾಲಯವನ್ನು ಸಹ ಸ್ಥಾಪಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ಈ ಮಹತ್ವಾಕಾಂಕ್ಷೆಯ ಯೋಜನೆಯ ಕೆಲಸವನ್ನು ಪ್ರಾರಂಭಿಸಲಿದೆ. ಈ ದೃಷ್ಟಿಕೋನವನ್ನು ಈಡೇರಿಸುವಲ್ಲಿ ಸಮರ್ಪಿತ ಪ್ರಯತ್ನಗಳಿಗಾಗಿ ನಿತೀಶ್ ಜಿ, ವಿಜಯ್ ಜಿ, ಸಾಮ್ರಾಟ್ ಜಿ ಮತ್ತು ಇಡೀ ಬಿಹಾರ ಸರ್ಕಾರದ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಎನ್‌ಡಿಎ ಸರ್ಕಾರವು ಉಜ್ವಲ ಭವಿಷ್ಯ ನಿರ್ಮಿಸುವುದರ ಜತೆಗೆ ಭಾರತದ ಅದ್ಭುತ ಪರಂಪರೆಯನ್ನು ಸಂರಕ್ಷಿಸಲು ಬದ್ಧವಾಗಿದೆ. ಆದಾಗ್ಯೂ, ಜಂಗಲ್ ರಾಜ್ ಬಣವು ನಮ್ಮ ಪರಂಪರೆ ಮತ್ತು ನಂಬಿಕೆಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದೆ. ಈ ಕ್ಷಣದಲ್ಲಿಯೇ, ಭಾರತದ ನಂಬಿಕೆ, ಏಕತೆ ಮತ್ತು ಸಾಮರಸ್ಯದ ಅತಿದೊಡ್ಡ ಆಚರಣೆಯಾದ ಪ್ರಯಾಗ್‌ರಾಜ್‌ನಲ್ಲಿ ಏಕತಾ ಕಾ ಮಹಾಕುಂಭ ನಡೆಯುತ್ತಿದೆ. ಯುರೋಪಿನ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಜನರು ಈಗಾಗಲೇ ಪವಿತ್ರ ಸ್ನಾನ ಮಾಡುವ ಮೂಲಕ ಈ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಿಹಾರದ ಪ್ರತಿಯೊಂದು ಹಳ್ಳಿಯ ಭಕ್ತರು ಸಹ ಈ ಪವಿತ್ರ ಸಂದರ್ಭಕ್ಕೆ ಪ್ರಯಾಣಿಸುತ್ತಿದ್ದಾರೆ.

ಆದರೂ, ಜಂಗಲ್ ರಾಜ್ ನಾಯಕರು ಮಹಾಕುಂಭವನ್ನು ನಾಚಿಕೆಯಿಲ್ಲದಂತೆ ಅಗೌರವಿಸುತ್ತಿದ್ದಾರೆ, ಈ ಪೂಜ್ಯ ಉತ್ಸವದ ಮೇಲೆ ಅವಮಾನಗಳನ್ನು ಎಸೆದಿದ್ದಾರೆ. ರಾಮಮಂದಿರ ನಿರ್ಮಾಣದಿಂದ ಕೋಪಗೊಂಡ ಇದೇ ಜನರು, ಮತ್ತು ಈಗ ಮಹಾ ಕುಂಭವನ್ನು ದೂಷಿಸಲು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಆದರೆ ಈ ಪವಿತ್ರ ಸಂಪ್ರದಾಯವನ್ನು ಅಗೌರವಿಸುವವರನ್ನು ಬಿಹಾರ ಎಂದಿಗೂ ಕ್ಷಮಿಸುವುದಿಲ್ಲ ಎಂಬುದು ನನಗೆ ಖಚಿತವಾಗಿದೆ.

ಸ್ನೇಹಿತರೆ,

ಬಿಹಾರವನ್ನು ಸಮೃದ್ಧಿಯ ಹೊಸ ಯುಗದತ್ತ ಕೊಂಡೊಯ್ಯುವ ನಮ್ಮ ಬದ್ಧತೆಯಲ್ಲಿ ನಾವು ಸದೃಢವಾಗಿರುತ್ತೇವೆ. ಮತ್ತೊಮ್ಮೆ, ರಾಷ್ಟ್ರದ ರೈತರು ಮತ್ತು ಬಿಹಾರದ ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಈಗ, ನನ್ನೊಂದಿಗೆ ಹೇಳಿ—

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ತುಂಬು ಧನ್ಯವಾದಗಳು!

 

  • Jayakumar Sengundar April 10, 2025

    🚩🌹 The Jal Jeevan Mission aims to provide clean tap water connections to rural households. @narendramodi @AmitShah @JPNadda #PuducherryJayakumar 🚩🕉
  • Ratnesh Pandey April 10, 2025

    🇮🇳जय हिन्द 🇮🇳
  • Ankit Awasthi April 05, 2025

    ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram ram sir ram
  • प्रभात दीक्षित April 04, 2025

    वन्देमातरम वन्देमातरम वन्देमातरम
  • प्रभात दीक्षित April 04, 2025

    वन्देमातरम वन्देमातरम
  • प्रभात दीक्षित April 04, 2025

    वन्देमातरम
  • Jayanta Kumar Bhadra March 30, 2025

    Jai hind sir 🕉
  • AK10 March 24, 2025

    PM NAMO IS THE BEST EVER FOR INDIA!
  • देवेन्द्र कुमार March 24, 2025

    Jay ho Mahadev, hari om,, Jay maa bharti
  • Jitendra Kumar March 20, 2025

    🙏🇮🇳
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Apple India produces $22 billion of iPhones in a shift from China

Media Coverage

Apple India produces $22 billion of iPhones in a shift from China
NM on the go

Nm on the go

Always be the first to hear from the PM. Get the App Now!
...
PM pays homage to the martyrs of Jallianwala Bagh
April 13, 2025

The Prime Minister Shri Narendra Modi today paid homage to the martyrs of Jallianwala Bagh. He remarked that the coming generations will always remember their indomitable spirit.

He wrote in a post on X:

“We pay homage to the martyrs of Jallianwala Bagh. The coming generations will always remember their indomitable spirit. It was indeed a dark chapter in our nation’s history. Their sacrifice became a major turning point in India’s freedom struggle.”